Author: Prajatv Kannada

ಬೀದರ್: ಇಂದು ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಕಲ್ಯಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿದ್ದು, ಚುನಾವಣಾ ಚಾಣಕ್ಯನಿಗೆ ನೀಡಲು ವಿಶೇಷವಾದ ಬೆಳ್ಳಿಯ ಗದೆ ಹಾಗೂ ಕಿರೀಟ ಸಿದ್ಧವಾಗಿದೆ. ಇಂದು ಬೀದರ್‌ಗೆ (Bidar) ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರಿಗೆ 5 ಕೆಜಿಯ ಆಕರ್ಷಕ ಬೆಳ್ಳಿಯ ಗದೆ‌ ಮತ್ತ ಬೆಳ್ಳಿಯ ಕಿರೀಟಾವನ್ನು ಶಾಗೆ ನೀಡಲು ಬಸವ ಕಲ್ಯಾಣ ಶಾಸಕ ಶರಣು ಸಲಗರ್‌ ಸಿದ್ಧ ಮಾಡಿಸಿದ್ದಾರೆ. ಇಂದು ವಿಜಯ ಸಂಕಲ್ಪ ‌ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯಾದ ಬೆಳ್ಳಿ ಕಿರೀಟ ತೊಡಿಸಿ ಬೆಳ್ಳಿ ಗದೆ ನೀಡಲಿದ್ದಾರೆ ಇಂದಿನಿಂದ ಬಸವ ಕಲ್ಯಾಣದಿಂದ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ ಕಲ್ಯಾಣದಿಂದ ಲಿಂಗಾಯತ ಜಪ ಮಾಡಲಿದ್ದಾರೆ.

Read More

ಬೆಂಗಳೂರು: ರಾಜಧಾನಿ ವಾಹನ ದಟ್ಟಣೆಯಲ್ಲಿ ನರಳುತ್ತಿರುವ ವೈಟ್‌ಫೀಲ್ಡ್‌ ಭಾಗದ ಐಟಿ ಉದ್ಯೋಗಿಗಳಿಗೆಗೊಂದು ಸಂತೋಷದ ಸುದ್ದಿ. ಮಾರ್ಚ್‌ ಎರಡನೇ ವಾರದಲ್ಲಿ ಕೆ.ಆರ್‌.ಪುರಂ – ವೈಟ್‌ಫೀಲ್ಡ್‌ ಮೆಟ್ರೋ ರೈಲು ಮಾರ್ಗ ಆರಂಭವಾಗಲಿದೆ. ಈಗಾಗಲೇ ಈ ನೂತನ ಮಾರ್ಗದ ಕಾಮಗಾರಿ ಶೇ.99 ರಷ್ಟು ಪೂರ್ಣಗೊಂಡಿದೆ. ಮಾ.11 ರಂದು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಕೆ.ಆರ್‌ ಪುರಂ ವೈಟ್‌ಫೀಲ್ಡ್‌ ಭಾಗದಲ್ಲಿ ಟ್ರಾಫಿಕ್‌ ಸಮಸ್ಯೆ ಮತ್ತಷ್ಟು ತಗ್ಗವು ಸಾಧ್ಯತೆಗಳಿವೆ. ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಬಹುನಿರೀಕ್ಷಿತ ಕೆ.ಆರ್‌.ಪುರ– ವೈಟ್‌ಫೀಲ್ಡ್ ಮೆಟ್ರೋ ರೈಲು ಮಾರ್ಗಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ (ಸಿಆರ್‌ಎಸ್‌) ಅನುಮತಿ ದೊರೆತಿದೆ. ಕಳೆದ ವಾರ ಸಿಆರ್‌ಎಸ್‌ ತಂಡ ಮಾರ್ಗದಲ್ಲಿ ಸಂಚಾರ ನಡೆಸಿ ಸುರಕ್ಷತೆ ಪರಿಶೀಲನೆ ನಡೆಸಿತ್ತು. ಬಳಿಕ ಮಾರ್ಗವು ಮೆಟ್ರೋ ಓಡಾಟಕ್ಕೆ ಸುರಕ್ಷಿತವಾಗಿದೆ ಫೆ.28ರಂದು ಪ್ರಮಾಣ ಪತ್ರ ನೀಡಿದೆ. ಲೋಕಾರ್ಪಣೆಗೆ ಸಿದ್ಧತೆ ವಾಣಿಜ್ಯ ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ಬಗ್ಗೆ ಹಸಿರು ನಿಶಾನೆ ದೊರೆತ…

Read More

ಬೆಂಗಳೂರು: ಬಿಜೆಪಿ ಶಾಸಕ ವಿರೂಪಾಕ್ಷಪ್ಪ (Madal Virupakshappa) ಅವರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ (Lokayukta Raid) ಮಾಡಿದ್ದು, ಇದುವರೆಗೆ ಪ್ರಶಾಂತ್ ಮಡಾಳ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ಸೀಜ್ (Money Seieze) ಮಾಡಲಾಗಿದೆ. ಗುರುವಾರ ರಾತ್ರಿಯಿಂದಲೇ ಪ್ರಶಾಂತ್ (V Prashant Madal) ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಬರೋಬ್ಬರಿ 6 ಕೋಟಿ ಬೇಟೆಯಾಡಿದ್ದು, ಪ್ರಶಾಂತ್ ಮಾಡಾಳ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದ್ದು, ಇವರ ಬಳಿ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪ್ರಶಾಂತ್ ಮಾಡಾಳ್ ಈ ಬಗ್ಗೆ ಏನನ್ನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ. ಇನ್ನು ಕ್ರೆಸೆಂಟ್ ರಸ್ತೆಯ ಕಚೇರಿ ಹಾಗೂ ಸಂಜಯನಗರದ ಮನೆಯಲ್ಲಿಯೂ ಹಣ ಪತ್ತೆಯಾಗಿದೆ. ಕೆಎಸ್ಡಿಎಲ್ ಎಂಡಿ ಮನೆಯ ಮೇಲೆ ಕೂಡ ದಾಳಿ ಮಾಡಿರುವ ಲೋಕಾ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಸದ್ಯ…

Read More

ಬೆಂಗಳೂರು: ಕಂಡಕ್ಟರ್ 1 ರೂ. ಚಿಲ್ಲರೆ ನೀಡಿಲ್ಲ ಅಂತ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ 2000 ರೂ. ಪರಿಹಾರ ಘೋಷಿಸಿ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಕಂಡಕ್ಟರ್ ಚಿಲ್ಲರೆ ನೀಡದ್ದರಿಂದ ರಮೇಶ್ ನಾಯಕ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ 15,000 ರೂ. ಪರಿಹಾರ ಕೋರಿದ್ದರು. ಇದೀಗ ನ್ಯಾಯಾಲಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ದೂರುದಾರರ ಕಾನೂನು ಶುಲ್ಕಕ್ಕೆ 1,000 ರೂ. ಪಾವತಿಸುವಂತೆ ನ್ಯಾಯಾಲಯವು ಸೂಚಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಬಸ್ಸಿನ ಕಂಡಕ್ಟರ್ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಚಿಲ್ಲರೆ ನೀಡದೇ ಇರುವುದನ್ನು ಬಿಎಂಟಿಸಿಯ ಕಚೇರಿಗೆ ತಿಳಿಸಿದಾಗಲೂ ಬಾಕಿ ಮೊತ್ತವನ್ನು ನೀಡಲ್ಲ. ಇದು ಗ್ರಾಹಕರ ಹಕ್ಕಿನ ವಿಷಯವಾಗಿ ಮೆಚ್ಚುಗೆ ಹಾಗೂ ಮಾನ್ಯತೆಯನ್ನು ಪಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ದೂರುದಾರರು ಪರಿಹಾರದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ ಅದೇಶದಲ್ಲಿ ಉಲ್ಲೇಖಿಸಿದೆ.

Read More

ಹೆತ್ತ ತಾಯಿ ಮಲಗಿದ್ದಲ್ಲೆ ಉಸಿರು ನಿಲ್ಲಿಸಿದ್ಲು. ಆ ಮಗನಿಗೆ ಅಮ್ಮನನ್ನ ಬಿಟ್ಟು ಬರೊ ಮನಸ್ಸಿರಲಿಲ್ಲ.ಅಕ್ಕಪಕ್ಕದವ್ರಿಗೂ ವಿಚಾರ ಹೇಳಿಲ್ಲ.ಹೀಗೆ ಅಮ್ಮನ ಮೃತದೇಹದ ಜೊತೆಗೆ ಎರಡು ದಿನ‌ ಕಳೆದಿದ್ದ.ಇಂತಹದೊಂದು ಹೃದಯ ವಿದ್ರಾವಕ ಘಟನೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಈ ಫೋಟೊದಲ್ಲೊ ಕಾಣ್ತಿರೊ  ಈಕೆಯ ಹೆಸರು ಅಣ್ಣಮ್ಮ. ಈಕೆ ಪತಿ ಇಳಂಗೋವನ್  . ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರೊ ಗಂಗಾನಗರ ಐದನೇ ಕ್ರಾಸ್ ನಲ್ಲಿ ವಾಸವಿದ್ರು.ಸಣ್ಣದೊಂದು ಸ್ವಂತ ಸೀಟಿನ ಮನೆ.ದಂಪತಿಗೆ 14 ವರ್ಷದ ಒಂದು ಗಂಡು ಮಗು.ಸುಖ ಸಂಸಾರಕ್ಕೆ ಇದಕ್ಕಿಂತ ಹೆಚ್ಚೇನು ಬೇಕಾಗಿರಲಿಲ್ಲ ಬಿಡಿ.ಆದರೆ ಅನಾರೋಗ್ಯ ಅನ್ನೋದು ಇಡೀ ಕುಟುಂಬವನ್ನೇ ಕಾಡಿತು.ಅಷ್ಟೇ ಅಲ್ಲ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗಿದೆ. ಎಂತಹವರೂ ನೋಡಿ ಅಸೂಹೆ ಪಡುವಂತಿದ್ದ ಈ ಸಂಸಾರಕ್ಕೆ ಅನಾರೋಗ್ಯ ಅನ್ನೋದು ಶಾಪವಾಗಿ ಕಾಡಿದೆ..ಹೌದು ಎಂಟು ತಿಂಗಳ ಹಿಂದಷ್ಟೇ ಪತಿ ಎಳಂಗೋವನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದ.ಅಂದಿನಿಂದ ತಾಯಿ ಮತ್ತು 14 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ರು.ತಾಯಿಗೆ ಸ್ಟ್ರೋಕ್ ಆಗಿ ಮಾತು ಕೂಡ ಬಂದ್ ಆಗಿತ್ತು.ತಂದೆಯ ಸ್ನೇಹಿತರ…

Read More

ಸುಂದರ ಸಂಸಾರಕ್ಕೆ ಪತಿಮಹಾಶಯ ಕೊಳ್ಳಿ ಇಟ್ಟು ತಾನು ಸಾಯುವ ನಾಟಕವಾಡಿ ಯಮನಾಗಿದ್ದಾನೆ.ಹತ್ತಾರು ವರ್ಷ ಸಂಸಾರ ಮಾಡಿದ್ದ ಕುಟುಂಬಕ್ಕೆ ಪತಿ ಕೊಳ್ಳಿ ಇಟ್ಟಿದ್ಯಾಕೆ ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ.. ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ಸಾಯಿಸಿರುವ ಹೃದಯ ವಿದ್ರಾಯಕ  ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡರಪಾಳ್ಯ ಗ್ರಾಮದಲ್ಲಿ ನಡೆದಿದೆ..ಕುಟುಂಬ ಸರ್ವನಾಶಕ್ಕೆ ಕ್ಯಾನ್ಸರ್ ರೋಗಿ ಪತಿಗಿದ್ದ ದುಶ್ಚಟಗಳೇ ಕಾರಣವಾಗಿದೆ  ಎಂದು  ಮೃತ ವಿಜಯ ಕುಟುಂಬಸ್ತರು ನಾಗೇಂದ್ರ ಕಡೆ ಬೆರಳು ಮಾಡುತ್ತಿದ್ದಾರೆ. ಕೈಲಾಗದವನು ಮೈಪರಿಚಿಕೊಂಡ ಅನ್ನೋ ಹಾಗೇ ಸಂಸಾರ ಸಾಕೋದಕ್ಕೆ ಆಗದೇ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ವಿಷಹಾಕಿ ಪತಿ ನಾಗೇಂದ್ರ ಕೊಲೆ ಮಾಡಿ ತಾನು ಕೈ ಕೋಯ್ದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ.ಘಟನೆಯಲ್ಲಿ  ನಾಗೇಂದ್ರ ಪತ್ನಿ ವಿಜಯ ಹಾಗೂ ಇಬ್ಬರು ಹೆಣ್ಣು ಮಕ್ಕಳು ೭ ವರ್ಷದ ನಿಷಾ ೫ ವರ್ಷದ ದೀಕ್ಷಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ನಾಗೇಂದ್ರ ,ವಿಜಯ ದಂಪತಿ ೨೦೧೪ರಲ್ಲಿ ಮದುವೆ ಆಗಿದ್ದಾರೆ. ದಂಪತಿಗೆ ಇಬ್ಬರು…

Read More

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆಯೇ ಸುಶ್ಮಿತಾಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಸ್ವತಃ ಸುಶ್ಮಿತಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸುಶ್ಮೀತಾ ಸೇನ್ ‘ನಿಮ್ಮ ಹೃದಯವನ್ನ ಸದಾ ಸಂತೋಷದಿಂದ ಹಾಗೂ ದೈರ್ಯದಿಂದ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ  ಇದು ನನ್ನ ತಂದೆಯ ಬುದ್ಧಿವಂತ ಮಾತುಗಳು. ಒಂದೆರಡು ದಿನಗಳ ಹಿಂದೆಯಷ್ಟೇ ನನಗೆ ಹೃದಯಾಘಾತ ಸಂಭವಿಸಿತು. ನನಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಲಾಗಿದೆ. ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞ ‘’ನನಗೆ ದೊಡ್ಡ ಹೃದಯವಿದೆ’’ ಎಂದು ದೃಢಪಡಿಸಿದ್ದಾರೆ. ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಮತ್ತೆ ಜೀವನ ಸಾಗಿಸಲು ನಾನು ಸಿದ್ಧಳಾಗಿದ್ದೇನೆ. ನನ್ನ ಪ್ರೀತಿ ಪಾತ್ರರಿಗೆ ಈ ಗುಡ್ ನ್ಯೂಸ್‌ ತಿಳಿಸುವ ಸಲುವಾಗಿ ಈ ಪೋಸ್ಟ್…

Read More

ಚಿತ್ರದುರ್ಗ, ಮಾ.02- ಮಾ. 04 ರಂದು ಫಲಾನುಭವಿಗಳ ಸಮಾವೇಶದ ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ಶಾಸಕ ಜಿ ಹೆಚ್. ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಡಿ ಸುಮಾರು 2 ಸಾವಿರ ಕೋಟಿ ರೂ. ಗಳ ಅಭಿವೃದ್ಧಿ ಯೋಜನೆಗಳಿಗೆ ಅಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಈ ಕುರಿತಂತೆ ಆಯಾ ಇಲಾಖಾವಾರು ಕಾಮಗಾರಿಗಳು ಹಾಗೂ ಅನುದಾನದ ವಿವರವನ್ನು ಪಡೆದುಕೊಳ್ಳಬೇಕು. 500 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು, 47 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನ, 593 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಲೋಕೋಪಯೋಗಿ ಇಲಾಖೆಯಡಿ ಸುಮಾರು 200 ಕೋಟಿ ರೂ. ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆಗಳು, 40 ಕೋಟಿ ರೂ. ವೆಚ್ಚದಲ್ಲಿ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ  ನಾಳೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಿರ್ಭಯಾ ನಿಯಿಂದ ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ದೇಶದಾದ್ಯಂತ ಆಯ್ಕೆಯಾದ ಎಂಟು ನಗರಗಳಲ್ಲಿ ಬೆಂಗಳೂರು ಕೂಡ ಒಂದು, ಇದು ಕೂಡ. ಗೃಹ ವ್ಯವಹಾರಗಳ ಸಚಿವಾಲಯದ ಯೋಜನೆಯಾಗಿದೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ನಿರ್ಣಾಯಕವಾಗಿರುವ ರಾಜ್ಯ ರಾಜಧಾನಿಯ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದತ್ತ ಗಮನ ಹರಿಸಿದ್ದಾರೆ.  ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ ನಗರದ ಟೌನ್ ಹಾಲ್‍ನಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದರು. ಇದೀಗ ನಾಳೆ ಮತ್ತೆ ನಗರಕ್ಕೆ ಭೇಟಿ ನೀಡಲಿದ್ದು, ವಾಹನ ಸವಾರರಿಗೆ ಕೊಂಚ ಟ್ರಾಫಿಕ್ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ.

Read More

ನವದೆಹಲಿ: ಭಾರತವನ್ನು ಜಾಗತಿಕ ಆಟೋಮೊಬೈಲ್ ತಯಾರಿಕಾ ಹಬ್ ಮಾಡಲು ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ ಎಂದು ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಲಾಗಿರುವ ಟಾಟಾ ಮೋಟರ್ಸ್‌ನ ವಾಹನಗಳ ಗುಜರಿ ಘಟಕಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿದ ಅವರು, ‘ಸದ್ಯ ಭಾರತದ ಜಿಡಿ‍ಪಿಗೆ ಆಟೋಮೊಬೈಲ್ ಉದ್ಯಮದಿಂದ ಶೇ 7.1 ರಷ್ಟು ಕೊಡುಗೆ ನೀಡಲಾಗುತ್ತಿದೆ. ಈ ಕ್ಷೇತ್ರದ ಗಾತ್ರ 7.8 ಲಕ್ಷ ಕೋಟಿ ರೂನಷ್ಟಿದ್ದು, ಅದನ್ನು ಮುಂಬರುವ ವರ್ಷಗಳಲ್ಲಿ 15 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು. ಪ್ರಸ್ತುತ ಆಟೋಮೊಬೈಲ್ ಕ್ಷೇತ್ರವು ಸುಮಾರು 7.8 ಲಕ್ಷ ಕೋಟಿ ಮೌಲ್ಯದ್ದಾಗಿದೆ ಮತ್ತು GDP ಗೆ 7.1 ರಷ್ಟು ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಕ್ಷೇತ್ರದಿಂದ ದೇಶದಾದ್ಯಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 4 ಕೋಟಿ ಉದ್ಯೋಗಗಳು ಸಿಕ್ಕಿವೆ. ಇದನ್ನು 2025ರ ವೇಳೆಗೆ 5 ಕೋಟಿಗೆ ಹೆಚ್ಚಿಸುವ ಸಂಕಲ್ಪ ಕೈಗೊಳ್ಳಲಾಗಿದೆ. ಈ ಮೂಲಕ ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವನ್ನು ನಂಬರ್ 1…

Read More