ನವದೆಹಲಿ: ಭಾರತ 2047ರ ವೇಳೆಗೆ 25 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ಹೊಂದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ನವದೆಹಲಿಯಲ್ಲಿ ಜರುಗಿದ ಮಿಂಟ್ ಸಸ್ಟೈನ್ಬಿಲಿಟಿ ಶೃಂಗಸಭೆಯ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2030ರ ವೇಳೆಗೆ ವಾರ್ಷಿಕ ಕನಿಷ್ಠ 5 MMT ಹಸಿರು ಜಲಜನಕ ಉತ್ಪಾದನಾ ಗುರಿಯನ್ನು ಗ್ರೀನ್ ಹೈಡ್ರೋಜನ್ ಮಿಷನ್ ಹೊಂದಿದೆ ಎಂದ ಸಚಿವರು, 1800 GW ಸ್ಥಾಪಿತ ಪಳೆಯುಳಿಕೆ ರಹಿತ ಸಾಮರ್ಥ್ಯವನ್ನು ಸ್ಥಾಪಿಸುವ ದೀರ್ಘಾವಧಿ ಯೋಜನೆ ಇದಾಗಿದೆ ಎಂದು ಹೇಳಿದರು. 125 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯದಿಂದ 60-100 GW ಸಾಮರ್ಥ್ಯದ ಎಲೆಕ್ಟ್ರೋಲೈಜರ್ ಸಹ ಸ್ಥಾಪನೆಗೊಳ್ಳಲಿದ್ದು, ಇದರಿಂದಾಗಿ ವಾರ್ಷಿಕ 50 MMT ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಪ್ಪುತ್ತದೆ ” ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.ಸೌರ ಘಟಕ ಉತ್ತೇಜಿಸಲು 24,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. 13,000 MW ನವೀಕರಿಸಬಹುದಾದ ಇಂಧನ, 9,000 MW ಸೌರಶಕ್ತಿ, 4,…
Author: Prajatv Kannada
ನವದೆಹಲಿ:- ಕೋಲ್ಕತ್ತಾ ವೈದ್ಯೆ ಪ್ರಕರಣದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯ ಬಗ್ಗೆ, ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಮುರ್ಮು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ದೇಶದ ನಾಗರಿಕರ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ, ಕೊಲೆ ಘಟನೆಯ ಕುರಿತು ಮುರ್ಮು ಹೇಳಿಕೆಯನ್ನು ಬಿಡುಗಡೆ ಮಾಡಿದರು. ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಘಟನೆಯು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಅದನ್ನು ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ಬೇಸರದ ಸಂಗತಿ ಅಂದರೆ ಇದೊಂದೇ ಘಟನೆ ಅಲ್ಲ. ಇದು ಮಹಿಳೆಯರ ವಿರುದ್ಧದ ಅಪರಾಧಗಳ ಸರಣಿಯ ಭಾಗವಾಗಿದೆ. ವಿದ್ಯಾರ್ಥಿಗಳು, ವೈದ್ಯರು ಮತ್ತು ನಾಗರಿಕರು ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅಪರಾಧಿಗಳು ಬೇರೆಡೆ ಅಲೆದಾಡುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಕಾಮುಕರಿಗೆ ಶಿಶುವಿಹಾರದ ಹೆಣ್ಣು ಮಕ್ಕಳೂ ಬಲಿಪಶುವಾಗುತ್ತಿದ್ದಾರೆ. ದೇಶದ ಹೆಣ್ಣುಮಕ್ಕಳು ಮತ್ತು ಸಹೋದರಿಯರು ಇಂತಹ ದೌರ್ಜನ್ಯಕ್ಕೆ ಒಳಗಾಗುವುದನ್ನು ಯಾವುದೇ ಸುಸಂಸ್ಕೃತ ಸಮಾಜವು ಸಹಿಸುವುದಿಲ್ಲ. ರಾಷ್ಟ್ರವು ಆಕ್ರೋಶಕ್ಕೆ ಒಳಗಾಗಿದೆ, ಅವರಲ್ಲಿ ನಾನು ಕೂಡ…
ನವದೆಹಲಿ: ಆನ್‍ಲೈನ್ ವಂಚಕನೊಬ್ಬ ಸಿಜೆಐ ಚಂದ್ರಚೂಡ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಂದೇಶ ಕಳಿಸಿ ಹಣ ಕೇಳಿದ ಪ್ರಸಂಗ ನಡೆದಿದೆ. ಕೈಲಾಶ್ ಮೇಘವಾಲ್ ಎಂಬವರಿಗೆ ವಂಚಕ ಸಂದೇಶ ಕಳಿಸಿ ದೆಹಲಿಯ ಕನ್ನಾಟ್ ಬಳಿ ಸಿಲುಕಿ ಕೊಂಡಿದ್ದು, ಕ್ಯಾಬ್‍ಗೆ 500 ರೂ. ಕಳಿಸಿ. ನ್ಯಾಯಾಲಯಕ್ಕೆ ಹೋದ ಬಳಿಕ ಮರಳಿ ಹಾಕುವುದಾಗಿ ಹೇಳಿದ್ದಾನೆ. ಸಂದೇಶ ಸ್ವೀಕರಿಸಿರುವ ಕೈಲಾಶ್ ಮೇಘವಾಲ್ ಅವರು ಇದನ್ನು ಎಕ್ಸ್ ಖಾತೆಯಲ್ಲಿ ಸ್ಕ್ರೀನ್‍ಶಾಟ್ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ನಂತರ, ಪೋಸ್ಟ್‌ನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 2,500 ಕ್ಕೂ ಹೆಚ್ಚು ಲೈಕ್ ಮಾಡಿದ್ದಾರೆ. ಅಲ್ಲದೇ ಲೈಕ್ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಜನರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು, ಅವನು ತೋರಿದ ಅತಿಯಾದ ಆತ್ಮವಿಶ್ವಾಸಕ್ಕಾಗಿ 1,000 ರೂ. ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್‍ನಲ್ಲಿ, ಅಪರಿಚಿತರೊಂದಿಗಿನ ಆನ್‍ಲೈನ್ ವ್ಯವಹಾರ ಅಪಾಯಕ್ಕೆ ಒಳಪಡಿಸುತ್ತದೆ. ಆರ್ಥಿಕ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಮತ್ತೊಬ್ಬರು, ಮನವಿಯನ್ನು ಮೂರು ವಾರಗಳ ನಂತರ ಮುಂದೂಡಿ…
ಮೂಗಿನ ಒಳಭಾಗದಲ್ಲಿ ಕಂಡುಬರುವ ಕೂದಲನ್ನು ಸಂಪೂರ್ಣವಾಗಿ ತೆಗೆದುಬಿಡಬೇಕು ಇದರಿಂದ ಮೂಗಿನ ಸ್ವಚ್ಛತೆಗೆ ಅನುಕೂಲವಾಗುತ್ತದೆ ಎಂಬುದು ಕೆಲವರ ತಪ್ಪು ಅಭಿಪ್ರಾಯ. ಏಕೆಂದರೆ ಮೂಗು ಜೊತೆಗೆ ನಮ್ಮ ಆರೋಗ್ಯ ಇಂದು ಸ್ವಚ್ಛತೆಯಿಂದ ಕೂಡಿರುವುದು ಮೂಗಿನ ಒಳಭಾಗದಲ್ಲಿ ಕಂಡುಬರುವ ಕೂದಲು ಇರುವುದರಿಂದ ಮಾತ್ರ. ಹಾಗಾಗಿ ಯಾವುದೇ ಕಾರಣಕ್ಕೂ ಇದನ್ನು ಸಂಪೂರ್ಣವಾಗಿ ತೆಗೆದು ಬಿಡುವ ಬಗ್ಗೆ ಆಲೋಚನೆ ಮಾಡಲು ಹೋಗಬಾರದು. ಒಂದು ವೇಳೆ ಹಾಗೂ ಕೂಡ ನೀವು ಈ ಒಂದು ಕೆಟ್ಟ ನಿರ್ಧಾರಕ್ಕೆ ಬಂದರೆ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಈ ನಿಮ್ಮ ಪ್ರಯತ್ನ, ಮೂಗಿನ ಸೋಂಕಿಗೆ ಕಾರಣವಾಗಬಹುದು ನಿಮ್ಮ ಮೂಗಿನ ಹೊಳ್ಳೆಯಲ್ಲಿ ಅತ್ಯಂತ ವಿರಳವಾಗಿ ಸಣ್ಣ ಸಣ್ಣ ಕೂದಲು ಕಂಡು ಬರುತ್ತದೆ. ನಿರ್ಲಕ್ಷ್ಯ ವಹಿಸಿ ನೀವು ಇದನ್ನು ಒಂದು ವೇಳೆ ತೆಗೆದು ಬಿಡಬೇಕು ಎನ್ನುವ ನಿರ್ಧಾರ ಮಾಡಿ ಚಿಮಟದ ಸಹಾಯದಿಂದ ಅಥವಾ ಬೇರೆ ಯಾವುದೇ ರೂಪದಲ್ಲಿ ಈ ಕೂದಲನ್ನು ತೆಗೆಯುವ ಪ್ರಯತ್ನ ಒಮ್ಮೆಲೆ ಮಾಡಿದ್ದೆ ಆದರೆ ಅದರಿಂದ…
ಸೂರ್ಯೋದಯ: 06:05, ಸೂರ್ಯಾಸ್ತ : 06:28 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ಎಕಾದಶಿ ನಕ್ಷತ್ರ :ಅರಿದ್ರ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಬೆ.6:20 ನಿಂದ ಬೆ.7:59 ತನಕ ಅಭಿಜಿತ್ ಮುಹುರ್ತ: ಬೆ.11:52 ನಿಂದ ಮ.12:41 ತನಕ ಮೇಷ: ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಹೋಟೆಲ್ ಮಾಲಕರಿಗೆ ಸಿಹಿ ಸುದ್ದಿ, ಸಾರಿಗೆ ಮಾಲಕರಿಗೆ ನಷ್ಟ, ಪತ್ರಿಕೋದ್ಯಮಿಗಳಿಗೆ ಶುಭಕಾಲ, ಮಹಿಳೆಯರ ಬಟ್ಟೆ ಮತ್ತು ಸೌಂದರ್ಯವರ್ಧಕ ಸಾಧನಗಳ ವ್ಯಾಪಾರದಲ್ಲಿ ಧನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಕಿರುಕುಳ ಸ್ವಯಂ ನಿವೃತ್ತಿಯ ಬಗ್ಗೆ ಚಿಂತನೆ, ಜೂಜಾಟದಲ್ಲಿ ಹಣ ಹೂಡುವ ಮುನ್ನ ಒಮ್ಮೆ ಯೋಚಿಸಿ, ಮರುವಿವಾಹ ಆಕಾಂಕ್ಷೆಗಳಿಗೆ ವಿವಾಹಯೋಗವಿದೆ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮುನ್ನ…
ಗಾಂಧಿನಗರ:- ಗುಜರಾತ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದ್ದು, ಮಗುವಿನ ಅಪ್ಪನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ. ಕಾಮುಕ ಆರೋಪಿ ಎಸ್ಕೇಪ್ ಆಗಿದ್ದಾನೆ. ಇನ್ನೂ ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಉಮರ್ಗಾಮ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನ ಬಂಧಿಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಾದ ನಂತರ ಪೊಲೀಸರು ಮಧ್ಯಾಹ್ನದ ಒಳಗೆ ಆರೋಪಿಯನ್ನು ಹಿಡಿದು ತರುವುದಾಗಿ ಊರಿನ ಜನರಿಗೆ ಭರವಸೆ ನೀಡಿದ್ದರು. ಆದಾಗ್ಯೂ ಜಗ್ಗದ ಜನ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಹಾಗೂ ಕಾಮುಕನಿಗೆ ಮರಣದಂಡನೆ ವಿಧಿಸುವಂತೆ ಪಟ್ಟು ಹಿಡಿದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಉಮರ್ಗಾಮ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು ಸದ್ಯ ತನಿಖೆ ಮುಂದುವರಿಸುತ್ತಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಆಂಧ್ರ:- ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್ ನ್ಯೂಸ್ ಸಿಕ್ಕಿದ್ದು, ಲಡ್ಡು ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪ ದೊರೆಯುತ್ತದೆ. ಲಡ್ಡುವನ್ನು ರುಚಿಯಾಗಿ ಮಾಡಲು, ಲಡ್ಡು ತಯಾರಿಸಲು ಹಿಂದೆ ಬಳಸುತ್ತಿದ್ದ ತುಪ್ಪವನ್ನು ಮತ್ತೆ ಬಳಸಲು ನಿರ್ಧರಿಸಿದೆ. https://youtu.be/SqWydaMxlpI?si=L0NG-8AqXhFbJorz ಟಿಟಿಡಿ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕ ಹಾಲು ಒಕ್ಕೂಟ ಜೊತೆ ಸಮಾಲೋಚನೆ ನಡೆಸಿದ್ದರು. 2024-25ಕ್ಕೆ ಪ್ರತಿ ಕೆಜಿಗೆ ರೂ.470ರಂತೆ ಟಿಟಿಡಿಗೆ 350 ಟನ್ ತುಪ್ಪ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಈ ಮಟ್ಟಿಗೆ ಎರಡು ಟ್ಯಾಂಕರ್‌ಗಳಲ್ಲಿ ಮೂರು ದಿನಗಳ ಹಿಂದೆ 20 ಸಾವಿರ ಕೆಜಿ ತುಪ್ಪ ತಿರುಮಲ ತಲುಪಿದೆ. ತುಪ್ಪದ ಮಾದರಿಗಳನ್ನು ಪರೀಕ್ಷೆಗಾಗಿ ಟಿಟಿಡಿ ಲ್ಯಾಬ್‌ಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಶ್ಯಾಮಲಾ ರಾವ್ ಅವರನ್ನು ಟಿಟಿಡಿ ಇಒ ಆಗಿ ಸಿಎಂ ಚಂದ್ರಬಾಬು ನೇಮಿಸಿದ್ದರು. ಲಡ್ಡು ಪ್ರಸಾದ ಗುಣಮಟ್ಟ ಹೆಚ್ಚಿಸಲು ಇವೊ ಗಮನಹರಿಸಿದ್ದಾರೆ. ಲಡ್ಡೂಗಳ ಗುಣಮಟ್ಟ ಮತ್ತು ಪರಿಮಳದ ಕೊರತೆಗೆ ತುಪ್ಪದಲ್ಲಿ ಗುಣಮಟ್ಟದ ಕೊರತೆಯೇ ಪ್ರಮುಖ ಕಾರಣ ಎಂದು ಕಂಡುಬಂದಿದೆ. ಇದರೊಂದಿಗೆ ನಂದಿನಿ ಕಂಪನಿಯ ತುಪ್ಪ ಪೂರೈಕೆ ಕುರಿತು…
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪದ ಮೇಲೆ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿತ್ತು. ಆದರೆ ಜೈಲು ಸೇರಿರೋ ದರ್ಶನ್ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್ಗೆ ಸಂಬಂಧಪಟ್ಟಂತೆ ದರ್ಶನ್ ಅವರನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. https://youtu.be/M_vpBe4OEp4?si=mm3wDpr4-fAZcplB ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿ ಕರೆ ತರಲಾಗಿದೆ. ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ತರಲಾಯಿತು.ಬೆಳಗ್ಗೆ 4 ಗಂಟೆಯ ವೇಳೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಟೀ ಶರ್ಟ್, ಜೀನ್ಸ್, ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಜೈಲು ಪ್ರವೇಶಿಸಿದ್ದಾರೆ. ದರ್ಶನ್ ಬರುತ್ತಿರವ ವಿಚಾರ ಮೊದಲೇ ತಿಳಿದಿದ್ದರಿಂದ ಜೈಲಿನ ರಸ್ತೆಯಲ್ಲಿ ಜನರು ನಿಂತಿದ್ದರು. ವರದಿಗಾರರು ರಂಗನಾಥ್………..
ಮಂಡ್ಯ:- ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹುಚ್ಚಾಟ ಮೆರೆದ ಖಾಸಗಿ ಬಸ್ ಚಾಲಕನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿ VRL ಬಸ್ ಚಾಲಕ ಹುಚ್ಚಾಟ ಮೆರೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಬಸ್ ಚಾಲಕನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಸದ್ಯ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಸ್ ಜಪ್ತಿ ಮಾಡಲಾಗಿದೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಚಾಲಕ ನಿಯಮ ಉಲ್ಲಂಘಿಸಿ ಅತಿ ಸ್ಪೀಡ್ ಆಗಿ ರ್‍ಯಾಶ್ ಡ್ರೈವಿಂಗ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೈರಲ್ ವಿಡಿಯೋಗೆ ಚಾಲಕನ ವಿರುದ್ದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನೆಟ್ಟಿಗರ X ಖಾತೆ ಮೂಲಕ ಪೊಲೀಸ್ ಇಲಾಖೆಗೆ ವೈರಲ್ ವಿಡಿಯೋ ತಲುಪಿದ್ದು ವೈರಲ್ ವಿಡಿಯೋ ಆಧರಿಸಿ ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸರು ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿ ವಿರುದ್ದ ದಿಕ್ಕಿನಲ್ಲಿ ಬಸ್ ಓಡಿಸಿದ ಚಾಲಕ ಸೇರಿ ಬಸ್…
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಅಲ್ಲಿಂದ ಓಡಿ ಹೋಗಿದ್ದ ಅವಾಮಿ ಲೀಗ್‌ನ ನಾಯಕ ಶವವಾಗಿ ಪತ್ತೆಯಾಗಿದ್ದಾರೆ.ಬಾಂಗ್ಲಾದೇಶದ ಗಡಿಯಲ್ಲಿರುವ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಅವಾಮಿ ಲೀಗ್ ನಾಯಕನ ಕೊಳೆತ ಶವ ಪತ್ತೆಯಾಗಿದೆ. ಮೇಘಾಲಯ ಪೊಲೀಸರು ಅವಾಮಿ ಲೀಗ್ ನಾಯಕ ಇಶಾಕ್ ಅಲಿ ಖಾನ್ ಪನ್ನಾ ಅವರ ಅರೆ ಕೊಳೆತ ದೇಹವನ್ನು ಜೈನ್ತಿಯಾ ಹಿಲ್ಸ್ ಜಿಲ್ಲೆಯ ತೋಟದಿಂದ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 26 ರಂದು ಸಂಜೆ ಭಾರತ-ಬಾಂಗ್ಲಾದೇಶ ಗಡಿಯಿಂದ 1.5 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು ಪನ್ನಾ ಅವರ ಪಾಸ್‌ಪೋರ್ಟ್ ಮೂಲಕ ಗುರುತಿಸಲಾಗಿದೆ ಎಂದು ಎಸ್‌ಪಿ ಗಿರಿ ಪ್ರಸಾದ್ ತಿಳಿಸಿದ್ದಾರೆ. ಬಾಂಗ್ಲಾದೇಶ ಛತ್ರ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಪಿರೋಜ್‌ಪುರ ಜಿಲ್ಲೆಯ ಅವಾಮಿ ಲೀಗ್‌ನ ಪ್ರಮುಖ ಸದಸ್ಯರಾಗಿರುವ ಪನ್ನಾ ಅವರು ಆಗಸ್ಟ್ 5 ರಂದು ಶೇಖ್ ಹಸೀನಾ ಸರ್ಕಾರ ಪತನದ ನಂತರ ಪರಾರಿಯಾಗಿದ್ದರು. ಬಾಂಗ್ಲಾ ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ಪನ್ನಾ ಹೃದಯ ಸ್ತಂಭನಕ್ಕೆ ಒಳಗಾಗಿರಬಹುದು ಎಂದು…