ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election) ಸಮಯದಲ್ಲಿ ಧಾರವಾಡಕ್ಕೆ ತೆರಳಲು ಅನುಮತಿ ಕೋರಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗಿದೆ. ಧಾರವಾಡ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ (Yogesh Gowda Murder Case) ಸಂಬಂಧ ಧಾರವಾಡ ಪ್ರವೇಶಕ್ಕೆ (Dharwad Entry) ಅನುಮತಿ ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 15 ರಂದು ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್ ಏಪ್ರಿಲ್ 18ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸಿಬಿಐ ವಾದ ಏನಿತ್ತು? ಯೋಗೇಶ್ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾದ ವಾದ ಮಂಡಿಸಿದ್ದರು.…
Author: Prajatv Kannada
ಬೆಂಗಳೂರು: ಬಿಜೆಪಿ ಹಾಳಾಗಲು ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಈ ಮೊದಲು ಬಿಜೆಪಿಯಲ್ಲಿ ತಮಗೆ ನೀಡಿದ್ದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. 10 ತಿಂಗಳು ಮುಖ್ಯಮಂತ್ರಿಯಾಗಿದ್ದೆ. ರೈತರ 25 ಸಾವಿರ ರೂ.ಸಾಲ ಮನ್ನಾ ಮಾಡಿದ್ದೆ, 25 ಸಾವಿರ ಮಂದಿ ದಿನಗೂಲಿ ನೌಕರರನ್ನು ಖಾಯಂ ಮಾಡಿದ್ದೇನೆ. ಅವಕಾಶ ಸಿಕ್ಕಾಗ ಈ ರೀತಿ ಹಲವಾರು ಜನಪರ ಕೆಲಸ ಮಾಡಿದ್ದೇನೆ. ನನ್ನ ಪ್ರಾಮಾಣಿಕತೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶ್ಲಾಘಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನನಗೆ ಟಿಕೆಟ್ ಕೈ ತಪ್ಪಲು ಕಾರಣ. ಈಗ ನನ್ನನ್ನು ಅವಕಾಶವಾದಿ ಎಂದು ಟೀಕೆ ಮಾಡಲಾಗುತ್ತಿದೆ. ಅಧಿಕಾರದ ಲಾಲಸೆ ಇದ್ದಿದ್ದರೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಾರನೆಯ ದಿನವೇ ಸಚಿವನಾಗುವುದಿಲ್ಲ ಎಂದು ಘೋಷಣೆ ಮಾಡುತ್ತಿದ್ದೇನೆ? ಅಧಿಕಾರದ ಆಸೆ ಇದ್ದರೆ ನಾನು ಸಚಿವನಾಗಬಹುದಿತ್ತು, ಪ್ರಭಾವಿ ಖಾತೆ ನಿಭಾಯಿಸಬಹುದಿತ್ತು ಎಂದರು. ನನಗೆ ಟಿಕೆಟ್…
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಹೀಗಾಗಲೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅದರ ಭಾಗವಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕೆವಿ ಅರಮನೆ ಶಂಕರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗಿರಿನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯ ಜಾಥಾದೊಂದಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿರುವ ಬಿಬಿಎಂಪಿ ಆಫೀಸ್ ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕರ್ನಾಟಕ ವಿಧಾನ ಪರಿಷತ್ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಟಿ. ಎ. ಶರವಣ ಅವರು ಭಾಗಿಯಾಗಿದ್ದರು. ಇನ್ನೂ ಕರ್ನಾಟಕ 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ.
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ನಾಮಪತ್ರಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿ ಕೋರಮಂಗಲದ ಬಿಜೆಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಈ ಭಾರಿಯೂ ನಾವೇ ಅಧಿಕಾರಕ್ಕೆ ಬರ್ತೇವೆ. ನಾನು ೯ ನೇ ಬಾರಿ ಸ್ಪರ್ಧೆ ಮಾಡಿದವನು. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು. ಇನ್ನೂ 145 ರಿಂದ 150 ಸೀಟು ಗಳನ್ನು ಈ ಭಾರಿ ಗೆಲ್ತೇವೆ ಎಂದು ಬಿಜೆಪಿಯವರು ಸುಮ್ಮನೆ ಹೇಳಿಕೊಂಡು ತಿರುಗ್ತಾರೆ. ಆದರೆ ರಾಜ್ಯದ ಜನರ ಒಲವು ನಮ್ಮ ಕಡೆಗಿದೆ. ಬೆಲೆ ಏರಿಕೆಯಿಂದ ಜನ ರೋಸಿಹೋಗಿದ್ದಾರೆ. ಹಾಗಾಗಿ ನಾವೇ ಅಧಿಕಾರಕ್ಕೆ ಬರ್ತೇವೆ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿ ದೊಡ್ಡವರು ಇದ್ದಾರೆ. ನಮಗೆ ಸರ್ಕಾರ ಬರಬೇಕು ಅಷ್ಟೇ. ನನಗೆ ಯಾವುದೇ ಸಿಎಂ ಆಸೆ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನೂ ಇದೇ ವೇಳೆ ಪಕ್ಷದಲ್ಲಿ…
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ನಂದಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ನಂದಿನಿಯೇ ಬೆಸ್ಟ್ ಎಂದು ರಾಹುಲ್ ಗಾಂಧಿ ಭಾವಿಸಿರುವುದು ಸಂತಸ ತಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಕೇರಳದಲ್ಲಿ ನಂದಿನಿಯ ಸುಗಮ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಮಧ್ಯಪ್ರವೇಶಿಸಲು ನಾನು ಅವರನ್ನು ವಿನಂತಿಸುತ್ತೇನೆ. ಇಲ್ಲದಿದ್ದರೆ, ಇದು ಮತ್ತೊಂದು ಗಿಮಿಕ್ ಆಗುತ್ತದೆ. ನಂದಿನಿಗೆ ಕೇರಳದಲ್ಲಿ ಮುಕ್ತ ಪ್ರವೇಶಕ್ಕಾಗಿ ರಾಹುಲ್ ಗಾಂಧಿ ಸಾರ್ವಜನಿಕ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.’ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ನಂದಿನಿ ಕೇರಳದ ಮಾರುಕಟ್ಟೆಯಲ್ಲಿ ವಿಸ್ತರಣೆ ಮಾಡುವುದಕ್ಕೆ ಆಕ್ಷೇಪಗಳ ಎದ್ದ ಬೆನ್ನಲ್ಲಿ ತೆಜಸ್ವಿ ಸೂರ್ಯ ಈ ಟ್ವೀಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯ ಟ್ವೀಟ್‌ಗೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನೀವು ಅಮುಲ್ ಗೆ ಮಾಡಿದ ಲಾಭಿಯಂತೆ ನಂದಿನಿಗೆ ರಾಹುಲ್ ಲಾಭಿ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಹಾಗೆ ಮಾಡಲು ಅವರು ನಿಮ್ಮಂತಹ ಮಾನಗೆಟ್ಟವರು ಅಲ್ಲ ಎಂದು ನೆಟ್ಟಿಗರೊಬ್ಬರು…
ಬೆಂಗಳೂರು: ಇಂದು ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದ್ದು, 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಯಾಗಬಹದು. ಉಳಿದ ಕ್ಷೇತ್ರಗಳಿಗೆ ಮೌಖಿಕವಾಗಿ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡುತ್ತಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಪ್ರಬಲ ಲಿಂಗಾಯತ ಸಮುದಾಯದ ಜಪ ಮಾಡುತ್ತಿವೆ. ವಿಧಾನಸಭೆ ಚುನಾವಣೆ ಸಂಬಂಧ ಬಿಜೆಪಿ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹಾಲಿ ಶಾಸಕ ರಾಮದಾಸ್ ಮತ್ತು ರಘುಪತಿ ಭಟ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಬಂಡಾಯವೆದ್ದು, ಕಾಂಗ್ರೆಸ್ ಸೇರಿದ್ದಾರೆ. ಲಿಂಗಾಯತ ಸಮುದಾಯದ ಪ್ರಬಲ ಮುಖಂಡರು ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ಪ್ಲಸ್ ಆದ್ರೆ ಬಿಜೆಪಿಗೆ ಮೈನಸ್ ಆಗಿದೆ. ಇನ್ನು ಪುಲಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ ಬಂಡಾಯವೆದ್ದ ಅಖಂಡ ಶ್ರೀನಿವಾಸ ಮೂರ್ತಿ ಶಾಸಕ ಸ್ಥಾನಕ್ಕೆ ರಾಜಿನಾಮೆ…
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅರೆಬರೆ ಕಾಮಗಾರಿಗೆ ಬಾಲಕನೊಬ್ಬ ಬಲಿಯಾದ ಘಟನೆ ಬೆಂಗಳೂರಿನ (Bengaluru) ಮಾಗಡಿ (Magadi) ರಸ್ತೆಯ ಗೊಲ್ಲರಹಟ್ಟಿ ಪೈಪ್‌ಲೈನ್‌ನಲ್ಲಿ ನಡೆದಿದೆ. ಎರಡೂವರೆ ವರ್ಷದ ಕಾರ್ತಿಕ್ ಮೃತ ಬಾಲಕ. ಕಾರ್ತಿಕ್ ಉತ್ತರ ಪ್ರದೇಶ (Uttar Pradesh) ಮೂಲದ ಹನುಮಾನ್ ದಂಪತಿಯ ಪುತ್ರನಾಗಿದ್ದು, ಕೂಲಿ ಕೆಲಸಕ್ಕಾಗಿ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದರು. ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿಗಾಗಿ ಹೊಂಡ ತೆಗೆದಿದ್ದರು. ಕಾರ್ತಿಕ್ ಆಟವಾಡುತ್ತಾ ಅಚಾನಕ್ ಆಗಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಬಿಡಬ್ಲುಎಸ್‌ಎಸ್‌ಬಿ ಎಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಬೆಂಗಳೂರು: ಎಲೆಕ್ಷನ್ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನಗಳು ಸೃಷ್ಟಿಯಾಗ್ತಿವೆ. ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಪಕ್ಷಾಂತರದ ಹೊಡೆತ ಜೋರಾಗೇ ತಟ್ಟಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ, ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಬಿಜೆಪಿ ಸೇರಿದ್ದಾರೆ. ಇವರಿಬ್ಬರೂ ಲಿಂಗಾಯತ ನಾಯಕರು ಅನ್ನೋದು ಇಲ್ಲಿ ಗಮನಾರ್ಹ! ಹಾಗಾದ್ರೆ, ಈ ಹಂತದಲ್ಲಿ ಕಾಂಗ್ರೆಸ್ ಆಗುವ ಲಾಭವೇನು? ಬಿಜೆಪಿಗೆ ಆಗಬಹುದಾದ ನಷ್ಟ ಏನು? ಪಕ್ಷಾಂತರ ಮಾಡಿದ ಶೆಟ್ಟರ್ ಗೆಲ್ತಾರಾ? ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಗೆಲುವು ದಾಖಲಿಸಿದ ಹೆಗ್ಗಳಿಕೆ ಜಗದೀಶ್ ಶೆಟ್ಟರ್ ಅವರಿಗೆ ಇದೆ. ಬಿಜೆಪಿಯಲ್ಲಿ ಸಚಿವರಾಗಿ, ಒಮ್ಮೆ ಸಿಎಂ ಕೂಡಾ ಆಗಿದ್ದ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ, ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮದೇ ಲಿಂಗಾಯತ ಸಮುದಾಯದ ಬಲ ಇದೆ. ಯಾಕಂದ್ರೆ ಈ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಒಟ್ಟು ಎರಡೂವರೆ ಲಕ್ಷ ಮತದಾರರ ಪೈಕಿ ಲಿಂಗಾಯತರೇ ಸುಮಾರು 75 ಸಾವಿರದಷ್ಟು ಇದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳೂ ಲಿಂಗಾಯತರಿಗೇ ಟಿಕೆಟ್ ನೀಡುತ್ತವೆ. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿರುವ ಶೆಟ್ಟರ್ ಅವರಿಗೆ ಬಿಜೆಪಿಯ ಎದುರಾಳಿ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದ್ರೆ, ಸತತ ಗೆಲುವಿನ ಸರದಾರ ಎಂದೇ ಹೆಸರಾಗಿರುವ ಜಗದೀಶ್ ಶೆಟ್ಟರ್, ಈ ಬಾರಿ…
ಬೆಂಗಳೂರು: ರಾಜ್ಯದ ಶ್ರೀಮಂತರ ರಾಜಕಾರಣಿಗಳಲ್ಲಿ ಒಬ್ಬರಾದ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,510 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅವರು ತಮ್ಮ ಒಟ್ಟು ಆಸ್ತಿಯ ವಿವರ ಘೋಷಣೆ ಮಾಡಿದ್ದಾರೆ. 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಂಟಿಬಿ ನಾಗರಾಜ್ ಸಚಿವ ಸ್ಥಾನ ಪಡೆದ ನಂತರ ಮೂರು ವರ್ಷದಲ್ಲಿ ಅವರ ಆಸ್ತಿ ಶೇಕಡ 23ರಷ್ಟು ಹೆಚ್ಚಳವಾಗಿದೆ. ಎಂಟಿಬಿ ನಾಗರಾಜ್ ಹೆಸರಲ್ಲಿ 792 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 372 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಎಂಟಿಬಿ ನಾಗರಾಜ್ ಅವರ ಪತ್ನಿ ಶಾಂತಮ್ಮ ನಾಗರಾಜ್ ಅವರ ಬಳಿ 274 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, 163 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಎಂಟಿಬಿ ನಾಗರಾಜ್ 71 ಕೋಟಿ ರೂ., ಅವರ ಪತ್ನಿಯ ಹೆಸರಲ್ಲಿ 27 ಕೋಟಿ ಸಾಲ ಇದೆ. ಎಂಟಿಬಿ ಬಳಿ 1.72 ಕೋಟಿ ರೂ ಮೌಲ್ಯದ ಕಾರ್ ಗಳು, ಪತ್ನಿಯ ಬಳಿ 1.33 ಕೋಟಿ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಸ್ತಿ ಮೌಲ್ಯ 1,214.93 ಕೋಟಿ ರೂಪಾಯಿ. ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,415.95 ಕೋಟಿ ರೂ. ಆಗಿದೆ. ಐದು ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಆಸ್ತಿ 595 ಕೋಟಿ ರೂ. ಏರಿಕೆಯಾಗಿದೆ. 2018ರಲ್ಲಿ 619.75 ಕೋಟಿ ರೂ. ಆಸ್ತಿ ಇರುವುದಾಗಿ ಡಿಕೆಶಿ ಘೋಷಣೆ ಮಾಡಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 595.18 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಡಿಕೆಶಿ ಬಳಿ 9 ಲಕ್ಷ ರೂ. ರೋಲೆಕ್ಸ್ ವಾಚ್ ಮತ್ತು 23.90 ಲಕ್ಷ ರೂ. ಹ್ಯೂಬ್ಲೆಟ್ ವಾಚ್ ಇದೆ. ಚಿನ್ನಾಭರಣ, ಬೆಳ್ಳಿ, ವಜ್ರ, ಮಾಣಿಕ್ಯ, ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳನ್ನು ಡಿಕೆಶಿ ಹೊಂದಿದ್ದಾರೆ. ಇದರೊಂದಿಗೆ 226.41 ಕೋಟಿ ರೂ. ಸಾಲ ಇರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಬಳಿ 133.68 ಕೋಟಿ ರೂ., ಪುತ್ರ ಮತ್ತು ಪುತ್ರಿಯ ಹೆಸರಲ್ಲಿ 68…