ನವದೆಹಲಿ: ತನ್ನ ಸೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾದ ಕೆಲವೇ ದಿನಗಳಲ್ಲಿ, ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಈ ಹಿಂದೆ ರಕ್ಷಣೆ ಹಣವನ್ನು ಪಡೆದಿದ್ದ ಇಬ್ಬರು ಜೈಲು ಅಧಿಕಾರಿಗಳಿಂದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ. ಸುಕೇಶ್ ಅವರು ತಮ್ಮ ಪತ್ರದಲ್ಲಿ, ‘4 ದಿನಗಳ ಹಿಂದೆ ನನ್ನ ಸೆಲ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಭದ್ರತಾ ಲೋಪವಾಗಿದೆ. ಸಹಾಯಕ ಅಧೀಕ್ಷಕ ದೀಪಕ್ ಶರ್ಮಾ ಮತ್ತು ಉಪ ಅಧೀಕ್ಷಕ ಜಯ್ ಸಿಂಗ್ ಅವರಿಂದ ಸೋರಿಕೆಯಾಗಿದೆ ಎಂದು ನಿಮ್ಮ ತುರ್ತು ಗಮನಕ್ಕೆ ತರುತ್ತಿದ್ದೇನೆ’ ಎಂದಿದ್ದಾರೆ.’ಅವರಿಬ್ಬರೂ ಈ ಹಿಂದೆ ಜೈಲು ರಕ್ಷಣೆಯ ಹಣವಾಗಿ ಒಟ್ಟು 5.5 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಮತ್ತು ಆ ವಿಚಾರವನ್ನು ನಿಮ್ಮ ಗೌರವಾನ್ವಿತ ಕಚೇರಿಗೆ ದೂರಾಗಿ ಕಳುಹಿಸಲಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಜೈಲು ಅಧಿಕಾರಿಗಳು ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಸೆಲ್ ಮೇಲೆ ದಾಳಿ ನಡೆಸಿ ಅವರ ಕೆಲವು ಅತ್ಯಮೂಲ್ಯ…
Author: Prajatv Kannada
ಕೊಪ್ಪಳ: ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಮಂಗಳವಾರ ಎಣಿಕೆ ಮಾಡಲಾಯಿತು. ತಹಸೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ಜ.2 ರಿಂದ ಫೆ.28ರ ವರೆಗೆ ₹ 11,79,154 ಸಂಗ್ರಹವಾಗಿದೆ. ಇದರಲ್ಲಿ ನೇಪಾಳ, ಕುವೈತ್ ಸೇರಿ ವಿವಿಧ ದೇಶಗಳ 6 ನಾಣ್ಯಗಳು, 3 ನೋಟು ಸಂಗ್ರಹ ಆಗಿವೆ. ಎಣಿಕೆ ಕಾರ್ಯು ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು. Video Player 00:00 00:25 ಕಳೆದ ಜ.31ರಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ ₹ 26.22 ಲಕ್ಷ ಸಂಗ್ರಹವಾಗಿತ್ತು. ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟಿ, ಶಿರಸ್ತೇದಾರ ಮೈಬೂಬಅಲಿ, ರವಿಕುಮಾರ ನಾಯಕವಾಡಿ, ಅನಂತ ಜೋಶಿ, ಕೃಷ್ಣವೇಣಿ, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಗುರುರಾಜ, ಶ್ರೀಕಂಠ, ಇಂದಿರಾ, ನಾಗರತ್ನ, ಕವಿತಾ, ಸೌಭಾಗ್ಯ, ಎಸ್.ಕವಿತಾ, ಅನ್ನಪೂರ್ಣ, ಶಿವಕುಮಾರ, ಪವನಕುಮಾರ, ಗಾಯತ್ರಿ, ಶ್ರೀರಾಮ, ಗ್ರಾಮ ಲೆಕ್ಕಾಧಿಕಾರಿಗಳಾದ ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ, ಮಹಾಲಕ್ಷ್ಮಿ,…
ಬೆಳಗಾವಿ: ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆದುಕೊಳ್ಳಲು ಪ್ರತಿಯೊಂದು ಪಕ್ಷಗಳು ಬೃಹತ್ ಸಮಾವೇಶಗಳನ್ನು ನಡೆಸುತ್ತಿವೆ. ಇದರ ಬೆನ್ನಲ್ಲೇ ಪ್ರಜಾಧ್ವನಿ ಯಾತ್ರೆ ಬಸ್ಸಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಡಿದ ಮಾತಿನ ವೀಡಿಯೋ ವೈರಲ್ ಆಗಿದೆ. ಹೌದು ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬರಬೇಕು ಅಂತಾ ಪ್ರಜಾಧ್ವನಿ ಯಾತ್ರೆ ಬಸ್ಸಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರೋ ವಿಡಿಯೋ ವೈರಲ್ ಆಗಿದೆ. ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ.#CorruptCongress pic.twitter.com/aHp6ISBADG ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Prajadwani Yatra) ಯ ಸಮಾವೇಶ ಮುಗಿಸಿ ಬಸ್ಸಿನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarakiholi), ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar), ಎಂಎಲ್‍ಸಿ…
ಬೆಳಗಾವಿ: ರಾಜಹಂಸಗಡ ಕೋಟೆ ಅಭಿವೃದ್ಧಿ, ಶಿವಾಜಿ ಮೂರ್ತಿಯನ್ನು ಅಧಿಕೃತವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಲೋಕಾರ್ಪಣೆ ಮಾಡಿದರು. ತಾಲೂಕಿನ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಹಂಸಗಡ ಕೋಟೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಂದ ಅಧಿಕೃತ ಲೋಕಾರ್ಪಣೆ ಮಾಡಿದರು. ಕೋಟೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಗೋವಿಂದ ಕಾರಜೋಳ (Govind Karjol), ಸಂಸದೆ ಮಂಗಲಾ ಅಂಗಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೋಳಿ (Ramesh Jarkiholi) ಭಾಗಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಭಾಗಿಯಾಗದೇ ಗೈರಾಗಿದ್ದಾರೆ. ತಮ್ಮದೇ ಕ್ಷೇತ್ರದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನ ಸೆಳೆದರು. ಇತ್ತ ಇಬ್ಬರೂ ಬದ್ಧ ವೈರಿಗಳಾದ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ವೇದಿಕೆ ಕಾಣಿಸಿಕೊಳ್ಳವ ಲೆಕ್ಕಾಚಾರ ಇತ್ತು. ಆದ್ರೆ, ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಭಾಗಿಯಾಗಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಲವು ನಾಟಕೀಯ ಏಳುಬೀಳುಗಳನ್ನು ಕಂಡ 15ನೇ ವಿಧಾನಸಭೆ ಅವಧಿ ಕೊನೆ ಹಂತಕ್ಕೆ ಬಂದಿದೆ. 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳಲ್ಲಿ ಮುಹೂರ್ತ ನಿಗದಿಯಾಗಲಿದ್ದು, ಕಾದಾಟಕ್ಕೆ ಅಖಾಡ ಸಜ್ಜಾಗಿದೆ. ಇನ್ನೇನು ಚುನಾವಣೆಗೆ ದಿನಾಂಕ ಪ್ರಕಟವಾಗಬೇಕಿದ್ದು, ಈಗಾಗಲೇ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇತ್ತ ಮೂರು ಪಕ್ಷಗಳು (Congress, BJP, JDS) ಹೇಗಾದರೂ ಮಾಡಿ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲೇಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿವೆ. ಅತ್ತ ಈ ಸಲ ನನಗೇ ಟಿಕೆಟ್ ಗ್ಯಾರಂಟಿ ಎಂದುಕೊಂಡಿರುವ ಆಕಾಂಕ್ಷಿಗಳು ಅಖಾಡದಲ್ಲಿ ಕಲಿಗಳಂತೆ ಕಾದಾಡಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಅದೇನೇ ಇರಲಿ, ಈ ಬಾರಿಯ ಚುನಾವಣಾ ಬೆಳವಣಿಗೆಯನ್ನು ತಿಳಿಯುವ ಮುನ್ನ , ಹಿಂದಿನ ರಾಜಕೀಯ ಚಿತ್ರಣವನ್ನು ನಾವು ತಿಳಿದುಕೊಳ್ಳುವುದು ಅತ್ಯಗತ್ಯ. “ ಇತಿಹಾಸ ಬಲ್ಲದವನು ಇತಿಹಾಸ ಸೃಷ್ಟಿಸಲಾರ” ಎಂಬ ಮಾತಿನಂತೆ ನಾವು ಕಳೆದ ಅಂದರೆ, 2018ರ ವಿಧಾನಸಭಾ ಚುನಾವಣೆ (2018 Karnataka Assembly Election), ಜನರ ತೀರ್ಪು, ನಂತರ ಅಧಿಕಾರದ ಗದ್ದುಗೆ…
ಬೆಂಗಳೂರು : ಬೆಂಗಳೂರಿನ ಟೌನ್ಹಾಲ್ನಲ್ಲಿ ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಇಂದು ಮಂಡನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಿರೀಕ್ಷೆಯಂತೆ ಸರಕಾರದ ಆಣತಿಯಂತೆ ಜನಪರ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುವ ಸಾಧ್ಯತೆಗಳು ಹೆಚ್ಚಿವೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಇಂದು ಬೆಳಿಗ್ಗೆ 11:30ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಸುಮಾರು 10 ಸಾವಿರ ಕೋಟಿ ಆಯವ್ಯಯ ಮಂಡನೆ ಸಾಧ್ಯತೆ ಇದೆ. ವೃದ್ಧರಿಗೆ ಆಶ್ರಯ ನೀಡುವ ಶ್ರವಣ ವಸತಿ ಯೋಜನೆ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಕಲ್ಪಿಸಲು ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಯೋಜನೆ ಜಾರಿ ಸಾಧ್ಯತೆ. ಇಂದಿರಾ ಕ್ಯಾಂಟೀನ್ ಗೆ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಹಾಗೂ ನೂತನ ಫ್ಲೈಓವರ್, ಒಂಟಿ ಮನೆ ಯೋಜನೆ, ಬಿಬಿಎಂಪಿ ಶಾಲಾ ಕಾಲೇಜು ಅಭಿವೃದ್ಧಿ, ನೂತನ ರಸ್ತೆಗೆ ಹಣ ಮೀಸಲು ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು: ಬಿಜೆಪಿಯ ಹಾಲಿ ಹಾಗೂ ಮಾಜಿ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನು ಭ್ರಮೆಯಲ್ಲಿಇದ್ದಾರೆ. 2023 ಕ್ಕೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಯಾರ್ಯಾರು ಬಿಜೆಪಿಗರು ಕಾಂಗ್ರೆಸ್ಗೆ ಹೊಗ್ತಾರೆ ಅಂತ ಪಟ್ಟಿ ಕೊಡಲಿ. ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು ಅನ್ನೊದು ನಮ್ಮ ಗುರಿ ಎಂದರು. ಇನ್ನೂ 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯಾರು ಸಿಎಂ ಆಗ್ತಾರೆ ಎನ್ನೊ ವಿಚಾರವಾಗಿ ಮಾತನಾಡಿ, ಇದು ಹೈ ಕಮಾಂಡಗೆ ಬಿಟ್ಟ ವಿಚಾರ. ಹೈ ಕಮಾಂಡ್ ಯಾರನ್ನಾ ಮುಖ್ಯಮಂತ್ರಿ ಮಾಡ್ತಾರೋ ಅವರೇ ಸಿಎಂ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ ಇಲ್ಲಿಯತನಕ 3 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಮಾತನಾಡಿದ ಅವರು, ಮೂರು ವರ್ಷದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ-ಕರ್ನಾಟಕ ಯೋಜನೆಯಡಿ 1.78 ಕೋಟಿ ಮಂದಿ ನೋಂದಣಿಯಾಗಿದ್ದಾರೆ. 39,48,923 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ 2188 ಕೋಟಿ, ಕೇಂದ್ರ ಸರ್ಕಾರ 908 ಕೋಟಿ ರೂ. ಸೇರಿ ಒಟ್ಟು 3,097.19 ಕೋಟಿ ಖರ್ಚು ಮಾಡಲಾಗಿದೆ ಎಂದರು. ಇದರಲ್ಲಿ. ಶೇ.80ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಹಣ ಪಾವತಿಯಾಗಿದೆ. ಎರಡನೇ, ಮೂರನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಮಂದಿ ಚಿಕಿತ್ಸೆ ಪಡೆದಿದ್ದು, ಅವರಿಗೆ 2022ರವರೆಗೂ ಎಲ್ಲಾ ರೀತಿಯ ಬಾಕಿ ಬಿಲ್‍ಗಳನ್ನು ಪಾವತಿಸಲಾಗಿದೆ. ಸರ್ಕಾರದ ಆರೋಗ್ಯ ವಿಮಾ ಯೋಜನೆಯಡಿ ಖರ್ಚು ಮಾಡುತ್ತಿರುವ ಅನುದಾನ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಶೇ.50: 50ರ ಅನುಪಾತದಲ್ಲಿ ಹಂಚಿಕೆಯಾಗಿದೆ. ಸರ್ಕಾರದ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಕ್ಕೂ ಇದು ನೆರವು ನೀಡಿದೆ ಎಂದು ಹೇಳಿದ್ದಾರೆ.
ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಇತ್ತ ತನ್ನ ಸ್ಪಿನ್ ದಾಳಿಯ ಮೂಲಕ ಭಾರತದ ಬ್ಯಾಟಿಂಗ್ ವಿಭಾಗವನ್ನು ಪೆವಿಲಿಯನ್ಗಟ್ಟಿದ ಸ್ಪಿನ್ನರ್ ನಾಥನ್ ಲಿಯಾನ್, 3ನೇ ಟೆಸ್ಟ್ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ. 3ನೇ ಟೆಸ್ಟ್ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಉರುಳಿಸಿದ ನಾಥನ್ ಲಿಯಾನ್, ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್ ಎನಿಸಿಕೊಂಡರು. ಅಲ್ಲದೆ ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶೇನ್ ವಾರ್ನ್ ಅವರ ದಾಖಲೆಯನ್ನು ನಾಥನ್ ಲಿಯಾನ್ ಮುರಿದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 127 ವಿಕೆಟ್ಗಳೊಂದಿಗೆ ವಾರ್ನ್ ಹೆಸರಿನಲ್ಲಿತ್ತು. ಇದಕ್ಕೂ ಮೊದಲು ನಾಥನ್ ಲಿಯಾನ್ ಅವರು ಪೂಜಾರ ಅವರ ವಿಕೆಟ್ ಕಬಳಿಸುವ ಮೂಲಕ, ಅತಿ ಹೆಚ್ಚು ಬಾರಿ ಪೂಜಾರ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ ಅವರನ್ನು ಸರಿಗಟ್ಟಿದ್ದಾರೆ. ಈ ಇಬ್ಬರೂ ಬೌಲರ್ಗಳು ಇದುವರೆಗೆ ಪೂಜಾರ ಅವರನ್ನು ತಲಾ 12…
ಟಾಲಿವುಡ್ ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ 3 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಸ್ವೀಟಿ ಅನುಷ್ಕಾ ರೆಡಿಯಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಜೊತೆ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. 2020ರಲ್ಲಿ ತೆರೆಕಂಡ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಯಾವ ಸಿನಿಮಾದಲ್ಲೂ ಅನುಷ್ಕಾ ನಟಿಸಿರಲಿಲ್ಲ ಇದೀಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗಿರುವ ನಟಿ ಕನ್ನಡಿಗರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅನುಷ್ಕಾ ಶೆಟ್ಟಿ ಮೂಲತಃ ಕರ್ನಾಟಕದವರು ಹಾಗಾಗಿ ನಮ್ಮ ಕನ್ನಡದ ಹುಡುಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಪಾರ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಆ ಆಸೆ ಈಡೇರಿದೆ. ನವೀನ್ ಪೋಲಿಶೆಟ್ಟಿ ಜೊತೆಗಿನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನುಷ್ಕಾ ಶೆಟ್ಟಿ ಪಾದಾರ್ಪಣೆ ಮಾಡ್ತಿದ್ದಾರೆ. ಹ್ಯಾಪಿ ಸಿಂಗಲ್ ಎನ್ನುತ್ತ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಬರುತ್ತಿದ್ದಾರೆ. ಅನ್ವಿತಾ ರಾವಾಲಿ ಶೆಟ್ಟಿಯಾಗಿ ಸ್ವೀಟಿ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯುವಿ ಕ್ರಿಯೇಷನ್ ನಿರ್ಮಾಣದಲ್ಲಿ…