Author: Prajatv Kannada

ಬೀದರ್: ವಿಶ್ವಗುರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ (Basavakalyan) ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಬಿಜೆಪಿಯಿಂದ (BJP)ಮತ್ತೊಮ್ಮೆ ಶರಣು ಸಲಗರ್ (Sharanu Salagar) ಅಗ್ನಿ ಪರೀಕ್ಷೆಗೆ ಇಳಿದರೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಎನ್ ಧರಂ ಸಿಂಗ್ (Dharam Singh) ಪುತ್ರ ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ (JDS) ಈಗಾಗಲೇ ಸೈಯದ್ ಯಾಸ್ರಬ್ ಅಲಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಹುಲಸೂರು ಮತ ಕ್ಷೇತ್ರದ ಕೆಲವು ಗ್ರಾಮಗಳ ವಿಲೀನಗೊಂಡಿದೆ. ಹೀಗಾಗಿ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಒಟ್ಟಾರೆ ಬಸವಕಲ್ಯಾಣ ಕ್ಷೇತ್ರ ಜಿಲ್ಲೆಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ. 1957ರಿಂದ ಬಸವಕಲ್ಯಾಣ ಕ್ಷೇತ್ರ ಒಟ್ಟು 15 ಚುನಾವಣೆಗಳನ್ನು ಕಂಡಿದ್ದು 16ನೇ ಚುನಾವಣೆಗೆ ಕ್ಷೇತ್ರದಲ್ಲಿ 2.41 ಲಕ್ಷ ಮತದಾರರಿದ್ದಾರೆ. ಮತದಾರ 5 ಬಾರಿ ಕಾಂಗ್ರೆಸ್‍ನ ಕೈ ಹಿಡಿದರೆ, 7 ಬಾರಿ ಜನತಾ ಪರಿವಾರಕ್ಕೆ ಮಣೆ ಹಾಕಿದ್ದಾನೆ. ಒಂದು ಬಾರಿ ಪಕ್ಷೇತರ, ಎರಡು ಸಲ ಕಮಲ ಅರಳಿದೆ. ಜಿಲ್ಲೆಯಲ್ಲೇ…

Read More

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನೇ ದಿನೇ ಏರಿಕೆಯಾಗುತ್ತಿದ್ದು, ಹೈಕಮಾಂಡ್‌ನಿಂದ ಬಿ.ಫಾರಂ ಗಿಟ್ಟಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಕೆಗೆ ಮುಂದಾಗಿದ್ದಾರೆ. ಅದರ ಭಾಗವಾಗಿ ಸೋಮವಾರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್‌.ಅಶೋಕ್‌ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ದೇವೇಗೌಡ ಪೆಟ್ರೋಲ್‌ ಬಂಕ್‌ನಿಂದ ಕಿಮ್ಸ್‌ ಕಾಲೇಜಿನವರೆಗೂ ಮೆರವಣಿಗೆ ನಡೆಸಿ ಬನಶಂಕರಿ ಎರಡನೇ ಹಂತದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಆರ್‌.ಅಶೋಕ್‌ಗೆ ಸಂಸದ ತೇಜಸ್ವಿ ಸೂರ್ಯ, ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್‌ ನೀಡಿದರು. ಇನ್ನೂ ಶಾಸಕ ಎಂ.ಕೃಷ್ಣಪ್ಪ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಬೆಂಬಲಿಗರು ಹಾಗೂ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಬೃಹತ್‌ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಎ.ಮುರಳಿ ಅವರು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ…

Read More

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು (Candidates) ಈಗಾಗಲೇ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದೆ. ರಾಜಕೀಯ ಕುಬೇರರು: ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ: * ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ. * ಚರಾಸ್ತಿ ಮೌಲ್ಯ 372 ಕೋಟಿ ರೂ. * ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ. * ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ * ಸಾಲ 71 ಕೋಟಿ ರೂ. * ಕಾರುಗಳ ಮೌಲ್ಯ 1.72 ಕೋಟಿ ರೂ. ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ: * ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ. * 750 ಗ್ರಾಂ ಚಿನ್ನ, ಸಾಲ 17 ಕೋಟಿ * ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ * ಕುಮಾರಸ್ವಾಮಿ ವಿರುದ್ಧ…

Read More

ಮಹದೇವಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು ಕೇಂದ್ರ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅರವಿಂದ ಲಿಂಬಾವಳಿ ಗೆ ಟಿಕೆಟ್ ಕೈ ತಪ್ಪಿದ್ದು,ಇಲ್ಲಿ ಅರವಿಂದ ಲಿಂಬಾವಳಿ ಬದಲಿಗೆ, ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿ  ಕುತೂಹಲ ಮೂಡಿಸಿದೆ. ಬಿಜೆಪಿಯ ಮೊದಲ ಹಾಗೂ 2ನೇ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಯವರ ಹೆಸರನ್ನು ಕೈಬಿಡಲಾಗಿತ್ತು. ಮೂರನೇ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡದೇ ಪತ್ನಿ ಮಂಜುಳಾ ಲಿಂಬಾವಳಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. Video Player 00:00 00:59 ಇಂದು ಮಧ್ಯಾಹ್ನ ಮಂಜುಳ ಅರವಿಂದ ಲಿಂಬಾವಳಿಯವರು ನಾಮಪತ್ರ ಸಲ್ಲಿಸಲಿದ್ದಾರೆ. ನಿನ್ನೆ ಮೂರನೇ ಪಟ್ಟಿಯಲ್ಲಿ ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ  ಪತಿ ಅರವಿಂದ ಲಿಂಬಾವಳಿ ಹಾಗೂ ಮಗ ಸೇರಿದಂತೆ ಜ್ಯೋತಿಪುರದ ಜ್ಯೋತಿರ್ಲಿಂಗೆಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶಿರ್ವಾದ ಪಡೆದರು. ಮಹದೇವಪುರ ಟಿಕೆಟ್ ವಿಚಾರದಲ್ಲಿ…

Read More

ಬೆಂಗಳೂರು: ಐಪಿಎಲ್‌ ಇತಿಹಾಸದ ಬದ್ದ ಎದುರಾಳಿಗಳೆಂದೇ ಬಿಂಬಿತವಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಕಾದಾಟಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಚೆನ್ನೈ-ಬೆಂಗಳೂರು ಪಂದ್ಯದ ಭವಿಷ್ಯ ನುಡಿದಿದ್ದಾರೆ. ಇವತ್ತು ನನ್ನ ಬೆಂಬಲ RCB ಗೆ. ನನ್ನ ಪ್ರಕಾರ, ಇವತ್ತಿನ ಪಂದ್ಯದಲ್ಲಿ ವೆಯ್ನ ಪಾರ್ನೆಲ್ ಮೇಲೆ ತುಂಬಾ ಭರವಸೆ ಇಟ್ಟಿದ್ದಿನಿ. ಮ್ಯಾಕ್ಸವೇಲ್ ಸಹ ಇಂದಿನ ಪಂದ್ಯದಲ್ಲಿ ತುಂಬಾ ಒಳ್ಳೆಯ ಆಟ ಆಡಬಹುದು. ಇಂದಿನ ಪಂದ್ಯ ಬಹಳ ಕುತೂಹಲ ಪಂದ್ಯ, ಕೊನೆಯ ಓವರ್‌ವರೆಗೂ ಪಂದ್ಯ ಕುತೂಹಲವಾಗಿರಲಿದೆ” ಎಂದು ಆರ್ಯವರ್ಧನ ಗುರೂಜಿ ಭವಿಷ್ಯ ನುಡಿದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಒಟ್ಟಾರೆ 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆರ್‌ಸಿಬಿ ಎದುರು ಸ್ಪಷ್ಟ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ ಧೋನಿ…

Read More

ಕಲಬುರಗಿ: ಬಿಜೆಪಿಯಿಂದ ಎಲ್ಲಾ ಅಧಿಕಾರ ಅನುಭವಿಸಿ ಪಕ್ಷ ತೊರೆದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Laxman Savadi) ಇಬ್ಬರೂ ಮುಂದೆ ಅನುಭವಿಸುತ್ತಾರೆ ಎಂದು ಬಿಜೆಪಿ (BJP) ನಾಯಕ ಅರುಣ್ ಸಿಂಗ್ (Arun Singh) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಹಾಗೂ ಶೆಟ್ಟರ್ ಇಬ್ಬರೂ ಬಿಜೆಪಿಯಿಂದ ಅಧಿಕಾರ ಅನುಭವಿಸಿದ್ದಾರೆ. ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು, ಸವದಿ ಸೋತರೂ ಡಿಸಿಎಂ ಸ್ಥಾನ ನೀಡಲಾಗಿತ್ತು. ಆದರೂ ಈಗ ಶಾಸಕ ಸ್ಥಾನಕ್ಕಾಗಿ ಪಕ್ಷ ತೊರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಯಕತ್ವದಲ್ಲಿ ಕೆಲಸ ಮಾಡುವುದು ಗೌರವದ ವಿಚಾರವಾಗಿದೆ. ಆಂತಹ ಅವಕಾಶ ಇದ್ದರೂ ಅದರಿಂದ ದೂರ ಹೋದವರು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ (Congress) ಮುಳುಗುತ್ತಿರುವ ಪಕ್ಷವಾಗಿದೆ. ಇಂತಹ ಪಕ್ಷಕ್ಕೆ ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ. ಅವರು ಮುಳುಗುವ ಹಡಗಿನಲ್ಲಿ ಅಪಾಯದ ಪ್ರಯಾಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾ

Read More

ಮಂಡ್ಯ :  ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಮದ್ದೂರು ತಾಲ್ಲೂಕು ಕಛೇರಿಗೆ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಮುನ್ನ ಸಂಸದೆ ಸುಮಲತಾ ಅಂಬರೀಶ್ ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್.ಪಿ.ಸ್ವಾಮಿ ಪರ ಪ್ರಚಾರ ನಡೆಸಿ ಚುನಾವಣೆಯಲ್ಲಿ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಅಭ್ಯರ್ಥಿ ಎಸ್.ಪಿ.ಸ್ವಾಮಿ ಪತ್ನಿ ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನ ತಮ್ಮ ಕುಟುಂಬದವರೊಂದಿಗೆ ಮನೆ ದೇವರು ಮಾಲಗಾರನಹಳ್ಳಿಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಾಮಪತ್ರವನ್ನು ದೇವರ ಪಾದ ಬಳಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ, ಮದ್ದೂರಮ್ಮ, ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣೆಯಲ್ಲಿ ಜಯಲಭಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿ ಶಾಲು ಹಾಗೂ…

Read More

ಶಿವಮೊಗ್ಗ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ (Congress) ಪಕ್ಷವನ್ನು ಯಾವ ರೀತಿ ಒಪ್ಪಿಕೊಂಡಿದ್ದೀರಿ ಎಂದು ಬಿಜೆಪಿ (BJP) ಹಿರಿಯ ನಾಯಕ ಈಶ್ವರಪ್ಪ (Eshwarappa) ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಪ್ರಶ್ನಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷವನ್ನು ಸೇರಿದ ಶೆಟ್ಟರ್‌ (Jagadish Shettar) ಅವರಿಗೆ ಈಶ್ವರಪ್ಪ ಪತ್ರವನ್ನು ಬರೆದು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಏನಿದೆ? ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ನನ್ನ ಅತ್ಮೀಯ ನಮಸ್ಕಾರಗಳು. ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್‌ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ (RSS)  ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ…

Read More

ಬೀದರ್: ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ಪ್ರಜಾಪ್ರಭುತ್ವದ (Democracy) ಮೇಲೆ ದಾಳಿ ನಡೆಸುತ್ತಿದ್ದು, ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ. ಸೋಮವಾರ ಬೀದರ್‌ನ (Bidar) ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೀದರ್ ಬಸವಣ್ಣನವರ (Basavanna) ಕರ್ಮಭೂಮಿ. ಮೊದಲು ಪ್ರಜಾಪ್ರಭುತ್ವದ ಹಾದಿ ತೋರಿಸಿದ್ದೇ ಬಸವಣ್ಣನವರು. ಇಂದು ದೇಶದಾದ್ಯಂತ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಪ್ರಜಾಪ್ರಭುತ್ವದ ಮೇಲೆ ದಾಳಿ (Attack) ನಡೆಸುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಪ್ರಜಾಪ್ರಭುತ್ವನ್ನು ಕಾಪಾಡಿಕೊಳ್ಳಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹಿಂದೂಸ್ಥಾನದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ. ಅಲ್ಲದೇ ಬಡ ಮತ್ತು ದುರ್ಬಲ ವರ್ಗದ ಜನರ ಹಣವನ್ನು ಕಿತ್ತುಕೊಂಡು ಶ್ರೀಮಂತರಿಗೆ ನೀಡುತ್ತಿದೆ. ಪ್ರತೀ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣವನ್ನು ಠೇವಣಿ ಇಡುವುದು, ಕಪ್ಪು ಹಣದ ವಿರುದ್ಧ ಸಮರ ಸಾರುವುದು ಎಲ್ಲಾ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭರವಸೆಗಳು…

Read More

ಧಾರವಾಡ: 2023ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಈ ಬಾರಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ನವಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಈ ಬಾರಿ ಸರಳ ಬಹುಮತಕ್ಕಿಂತ 15 ಸೀಟುಗಳು ಹೆಚ್ಚಿಗೆ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಗಳು ಆರಂಭವಾಗಲಿವೆ. ಅಮಿತ್ ಶಾ ಸಹ ಭಾಗಿಯಾಗಲಿದ್ದಾರೆ. ಏ.21ಕ್ಕೆ ರ್‍ಯಾಲಿಗಳು ಎಲ್ಲೆಲ್ಲಿ ನಡೆಯಲಿವೆ ಎಂಬುದು ಫೈನಲ್ ಆಗಲಿವೆ. ಏ.19ಕ್ಕೆ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಿಎಂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅದೇ ವೇಳೆ ಹುಬ್ಬಳ್ಳಿಯಲ್ಲಿ ಎರಡು ಕಾರ್ಯಕ್ರಮ ನಡೆಯಲಿವೆ. ಉಳಿದ 12 ಅಭ್ಯರ್ಥಿಗಳ ಘೋಷಣೆ ಸಹ ಆಗಲಿದೆ ಎಂದರು. ಜಗದೀಶ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಬಾರದಿತ್ತು. ಆದರೆ, ಹೋಗಿದ್ದಾರೆ. ಪಕ್ಷ ಬಲಪಡಿಸಲು ನಾವೆಲ್ಲರೂ…

Read More