Author: Prajatv Kannada

ಹುಬ್ಬಳ್ಳಿ: ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ. ರಾಜಕೀಯ ಸನ್ಯಾಸಕ್ಕೂ ಸಿದ್ಧನಿದ್ದೆ. ಆದರೆ ನನಗೆ ಸಕಾರಾತ್ಮ ಜನರ ವಿಶ್ವಾಸ ಇರೋವರೆಗೂ ರಾಜಕೀಯದಲ್ಲಿ ಇರುತ್ತೇನೆ. ಕಾಂಗ್ರೆಸ್ ಗೆ ಸೇರ್ಪಡೆಯಾದ ಕೂಡಲೇ ಬಿಜೆಪಿಯನ್ನು ಬೈಯಬೇಕೆಂದಿಲ್ಲ. ಬಿಜೆಪಿಯನ್ನು ಬೈಯಲ್ಲ ಆದರೆ ಕೆಲ ವ್ಯಕ್ತಿಗಳು ಇದ್ದಾರಲ್ಲಾ, ಅವರ ಬಗ್ಗೆ ಬೇಸರವಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ಬೆಂಗಳೂರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇನೆ‌. ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದೇನೆ‌. ಬಿಜೆಪಿ ಕಟ್ಟಿ ಬೆಳೆಸಿದ ನನಗೆ ಉಸಿರುಗಟ್ಟುವಂತಾಯಿತು ಹೀಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಅವರು ಹೇಳಿದರು. ನನ್ನ ಬೆಂಬಲಿಗರನ್ನು ಎಷ್ಟು ದಿನ ಬೆದರಿಸಿ ಇಟ್ಟುಕೊಳ್ಳಲು ಸಾಧ್ಯ.? ಅವರು ದೈಹಿಕವಾಗಿ ಅಲ್ಲಿರಬಹುದು. ಮಾನಸಿಕವಾಗಿ ನಮ್ಮ ಜೊತೆಗೇ ಇದ್ದಾರೆ. ಬಲವಂತವಾಗಿ ಹಿಡಿದಿಟ್ಟಿಕೊಳ್ಳಲು ಸಾಧ್ಯವಿಲ್ಲ ಒಂದಲ್ಲ ಒಂದು ದಿನ‌ ಹೊರಗೆ ಬರುತ್ತಾರೆ ಎಂದು ಅವರು ಅಭಿಮಾನಿಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

Read More

ಹುಬ್ಬಳ್ಳಿ : ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅತ್ಯಂತ ಹೆಚ್ಚು ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್‌ ಕಾಂಗ್ರೆಸ್ ಸೇರ್ಪಡೆ ಆಗುತ್ತಲೇ ಬಿಜೆಪಿ ಅಲರ್ಟ್ ಆಗಿದೆ. ಬಿಜೆಪಿಯ ಮೇಲೆ ಲಿಂಗಾಯತ ಸಮುದಾಯ ತೀವ್ರ ಮುನಿಸಿಕೊಂಡಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ  ರಾಜಕೀಯ ಬೆಳವಣಿಗಳು ನಡೆಯುತ್ತಿದ್ದು,  ಇದನ್ನೆಲ್ಲ ಶಮನ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ತೀವ್ರ ಹಿನ್ನೆಡೆಯ ಆತಂಕ ಎದುರಾಗಿದೆ.  ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದರ ಎಫೆಕ್ಟ್ ಉತ್ತರ ಕರ್ನಾಟಕ ವ್ಯಾಪ್ತಿಸದಂತೆ ಬಿಜೆಪಿ ತೆರೆಮರೆಯಲ್ಲಿ ಯೋಜನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಏ.18 ರಂದು ಸಾಯಂಕಾಲ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಬರಲು ವೇಳೆ ನಿಗದಿ ಪಡಿಸಲಾಗಿದೆ . ಎರಡು ದಿನಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹುಬ್ಬಳ್ಳಿಯಲ್ಲಿಯೇ ಬೀಡು ಬಿಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡೂ…

Read More

ರಾಮನಗರ: ರಾಮನಗರ (Ramanagara) ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಹೋಗುವ ವೇಳೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ನಿವಾಸದಲ್ಲಿ ಭಾವುಕ ವಾತಾವರಣ ಸೃಷ್ಟಿಯಾಗಿತ್ತು. ಸೋಮವಾರ ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮಾಜಿ ಪ್ರಧಾನಿ ದೇವೆಗೌಡರಿಂದ (HD Devegowda) ಬಿ. ಫಾರಂ ಪಡೆದು ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದರು. ಈ ವೇಳೆ ಹೆಚ್.ಡಿ ದೇವೇಗೌಡರು ಬಿ. ಫಾರಂ ನೀಡುತ್ತಿದ್ದಂತೆ ನಿಖಿಲ್ ಭಾವುಕರಾಗಿ ಕಣ್ಣೀರು ಹಾಕಿದರು ಅದಾದ ಬಳಿಕ ಹೆಚ್‍ಡಿಡಿ ಅವರಿಂದ ಬಿ. ಫಾರಂ ಪಡೆದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಚೆನ್ನಮ್ಮರ ಆಶೀರ್ವಾದ ಪಡೆದರು. ನಿಖಿಲ್ ಕುಮಾರಸ್ವಾಮಿ ಬಿ ಫಾರಂ ಪಡೆಯುವ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಹಾಗೂ ಪತ್ನಿ ರೇವತಿ ಭಾಗಿಯಾಗಿದ್ದರು.

Read More

ಹಾವೇರಿ: ಜಗದೀಶ್ ಶೆಟ್ಟರ್ (Jagadish Shettar) ದೇಶದ ಪ್ರಧಾನಿಯಾಗಲು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ವ್ಯಂಗ್ಯವಾಡಿದರು. ಹಿರೇಕೆರೂರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ (BJP) ಜಗದೀಶ್‌ ಶೆಟ್ಟರ್ ರಾಜ್ಯದ ಉನ್ನತ ಸ್ಥಾನಗಳನ್ನು ಅನುಭವಿಸಿ ಇಂದು ಕಾಂಗ್ರೆಸ್ (Congress) ಸೇರ್ಪಡೆ ಆಗುತ್ತಿರುವುದು ನಿಜಕ್ಕೂ ಖಂಡನೀಯ. ಬಿಜೆಪಿ ಇಷ್ಟೆಲ್ಲ ಅನುಭವಿಸಿದ ನಂತರವೂ ಹೀನಾಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ ಅಂದರೆ ಬಹುಶಃ ಅವರಿಗೆ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ ಮಾಡುವ ಮಾತನ್ನು ಕಾಂಗ್ರೆಸ್‌ನವರು ಕೊಟ್ಟಿರಬಹುದು. ಅದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಬಂದಿದೆ. ಯಾರು ಬರ್ತಿರಾ ಬನ್ನಿ ಬನ್ನಿ ಅಂತಾ ಟಿಕೆಟ್ ಹಿಡ್ಕೊಂಡ್ ನಿಂತಿದ್ದಾರೆ. ಬಸ್ ಸ್ಟ್ಯಾಂಡ್‌ನಲ್ಲಿ ಟಿಕೆಟ್ ಎನ್ನುವ ಹಾಗೇ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುವುದಕ್ಕೆ ನಿಂತಿದ್ದಾರೆ. ಸವದಿ, ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಖಂಡನೀಯ. ಸೋತಿದ್ರು ಸಹಿತ ಅವರನ್ನು ಡಿಸಿಎಂ ಮಾಡಿ ಎಂಎಲ್‌ಸಿ…

Read More

ವಿಜಯಪುರ: ವಿಧಾನಸಭಾ ಚುನಾವಣೆ ಟಿಕೆಟ್ ದೊರೆತಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಅಯೋಧ್ಯೆ, ಹಿಂದುತ್ವದ ಬಗ್ಗೆಯೆಲ್ಲಾ ಮಾತನಾಡುತ್ತಿದ್ದಿರಿ. ಬಿಜೆಪಿ ನಿಮ್ಮನ್ನು ಸಿಎಂ, ಡಿಸಿಎಂ ಅನ್ನಾಗಿ ಮಾಡಿತ್ತು. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್ ಗೆ ಹೋಗ್ತಿದ್ದಾರಲ್ಲ? ನಿಮ್ಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಅನ್ನುವುದು ಇದ್ಯಾ ಎಂದು ಪ್ರಶ್ನಿಸಿದರು. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರಕಾರ ಬರುತ್ತದೆ. ಇವರು ಯಾರು ಹೋದ್ರೂ ಇಲ್ಲಿ ಯಾರ ಡೆಪಾಸಿಟ್ ಗೂ ತೊಂದರೆ ಆಗುವುದಿಲ್ಲ. ಪ್ರಾಮಾಣಿಕರಿಗೆ ಹೊಸ ಅವಕಾಶ ನೀಡಬೇಕೆಂಬ ಕಾರಣಕ್ಕೆ ಪಕ್ಷ ಈ ಬಾರಿ ನಿರ್ಣಯ ತೆಗೆದುಕೊಂಡಿದೆ. ಎಲ್ಲ ಕಸವನ್ನು, ವೇಸ್ಟ್ ಬಾಡಿಗಳನ್ನು ತೆಗೆದು ಸ್ವಚ್ಛವಾದ ಕರ್ನಾಟಕ ಕೊಡಲು ಬಿಜೆಪಿ ಗಟ್ಟಿ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ನಿಮ್ಮ ಅಧ್ಯಾಯ ಕೊನೆಯಾಗುತ್ತದೆ. ಏನೋ ದುಡುಕಿನಿಂದ ಈ ನಿರ್ಣಯ ಮಾಡಿದ್ದೀರಿ.…

Read More

ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಿಗೆ ನೀರಾವರಿ ಇಲಾಖೆ ವ್ಯಾಪ್ತಿಯ ಭದ್ರಾ ನಾಲೆ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಯೊಂದಿಗೆ ಬೆಸ್ಕಾಂ, ಕಂದಾಯ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗಳ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಅಳವಡಿಸಲಾಗಿದ್ದ 600ಕ್ಕೂ ಹೆಚ್ಚು ಪಂಪ್‌ಸೆಟ್‌ಗಳ ತೆರವುಗೊಳಿಸಿದರು. ತ್ಯಾವಣಿಗೆ ನೀರಾವರಿ ಇಲಾಖೆ ಎಇಇ ಜಿ.ಎಂ. ಗುಡ್ಡಪ್ಪ ಮಾತನಾಡಿ, ತ್ಯಾವಣಿಗೆ ಶಾಖಾ ಭದ್ರಾ ನಾಲೆಗಳಲ್ಲಿಅನಧೀಕೃತವಾಗಿ ಪಂಪ್‌ಸೆಟ್‌, ಡಿಸೇಲ್‌ ಜನರೇಟರ್‌ ಮತ್ತು ಇತರ ಉಪಕರಣ ಅಳವಡಿಸಿ ನೀರು ಎತ್ತಲಾಗುತ್ತಿತ್ತು. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಕೊನೆ ಗ್ರಾಮಗಳಿಗೆ ನೀರು ತಲುಪದೆ ರೈತರು ಕಷ್ಟ ಎದುರಿಸುತ್ತಿದ್ದಾರೆ. ಹರಿಹರ ತಾಲೂಕಿನ ಮಲೆಬೆನ್ನೂರು ರೈತರು 2015ರಲ್ಲಿ ಹೈಕೋರ್ಟ್‌ನಲ್ಲಿ ಭದ್ರಾ ನಾಲೆಗಳಲ್ಲಿಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್‌ ತೆರವುಗೊಳಿಸುವಂತೆ ದೂರು ಸಲ್ಲಿಸಿದ್ದರು. ಹೈಕೋರ್ಟ್‌ ತೆರವಿಗೆ ಆದೇಶ ನೀಡಿತ್ತು. ಅದರಂತೆ ಈಗ ಕೊನೆ ಭಾಗದ ರೈತರು ನೀರಿಲ್ಲದೆ ಸಂಕಷ್ಟಲ್ಲಿದ್ದಾರೆ. ಹಾಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತೆರವು ಯಶಸ್ವಿ ದಾವಣಗೆರೆ ಶಾಖಾ ಕಾಲುವೆಯಿಂದ 30 ಕಿಲೋ ಮೀಟರ್ ಸಿದ್ದನಮಠವರೆಗೆ, ಸೂಳೆಕೆರೆ, ಕೆರೆಬಿಳಚಿ, ಸೋಮ್ಲಾಪುರ, ಚನ್ನಾಪುರ, ಬೆಳ್ಳಿಗನೂಡು, ಗೆದ್ಲಹಟ್ಟಿ,…

Read More

ಬೆಂಗಳೂರು: ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ 40% ಸರ್ಕಾರ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಸಾಂಗ್ ಹಂಚಿಕೊಂಡಿದ್ದು, ಹಾಡಿನ ಮೂಲಕ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದೆ. ತುಂಬಾ ಹಾಸ್ಯದಿಂದ ಕೂಡಿರುವ ಈ ಹಾಡಿನಲ್ಲಿ ಬಿಜೆಪಿ ಸರ್ಕಾರದ ಹಲವು ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ೪೦% ಕಮಿಷನ್‌ ಸರ್ಕಾರ, ಪಿಎಸ್‌ಐ ಹಗರಣ, ಮೊಟ್ಟೆ ಹಗರಣ, ಬಿಡಿಎ ಹಗರಣ, ಕೋವಿಡ್‌ ಹಗರಣ ಮತ್ತು ಇತರ ಹಗರಣಗಳ ಬಗ್ಗೆ ಹಾಡಿನಲ್ಲಿ ಪ್ರಸ್ತಾಪಿಸಲಾಗಿದೆ. ಹ್ಯಾಶ್‍ಟ್ಯಾಗ್ ಬಳಸಿ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಗರಣ, ಕಮಿಷನ್ ದಂಧೆ, ಕೋಮುವಾದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ 40% ಬಿಜೆಪಿ ಸರ್ಕಾರದ ಬದಲಾವಣೆಯ ಸಮಯ ಬಂದಿದೆ. ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಿರಿ. ಜನಪರ ಸರ್ಕಾರಕ್ಕೆ ಅಧಿಕಾರ ನೀಡಿ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’ ಎಂದು ಹೇಳಿದೆ. ಗುತ್ತಿಗೆಗಳಲ್ಲಿ ಕಮಿಷನ್, ಬಿಬಿಎಂಪಿ ಟೆಂಡರ್‍ಗಳಲ್ಲಿ ಕಮಿಷನ್, ಮೊಟ್ಟೆ ಹಗರಣ, 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ…

Read More

ದೇವನಹಳ್ಳಿ: ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಹೊಸಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರ್‍ಯಾಲಿ ನಡೆಸಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅತ್ಯಂತ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಈ ಬಾರಿ 1510 ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದಾರೆ. ಕಳೆದ ಬಾರಿಯ ಚುನಾವಣೆಯ ವೇಳೆ 1015 ಕೋಟಿ ಘೋಷಣೆ ಮಾಡಿದ್ದರು. ಎಂಟಿಬಿ ನಾಗರಾಜ್ ಕಳೆದ ನಾಲ್ಕು ವರ್ಷದಲ್ಲಿ 495 ಕೋಟಿ ರೂಪಾಯಿ ಆಸ್ತಿ ಹೆಚ್ಚಳ ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಬದಲುನ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಕೋರಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಎಂಟಿಬಿ ನಾಗರಾಜ್​ಗೆ ಮಣೆ ಹಾಕಿದೆ. 2004ರಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ಬಂದು ತಾಲೂಕಿನ ಜನರ ಸೇವೆಯನ್ನು 19 ವರ್ಷ ಮಾಡಿದ್ದೇನೆ. ಈಗ ರಾಜಕೀಯ ನಿವೃತ್ತಿ ಪಡೆದು, ಮಗ ಜನಸೇವೆಗೆ ಮುಂದಾಗಲಿ ಎಂದು ಬಯಸಿ ಟಿಕೆಟ್‌ ಬೇಡ ಎಂದು ಪತ್ರ ಬರೆದಿದ್ದೆ ಎಂದು ಎಂಟಿಬಿ ನಾಗರಾಜ್ ಹೇಳಿಕೊಂಡಿದ್ದರು.…

Read More

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ರಂಗು ಹೆಚ್ಚುತ್ತಿದೆ. ರಾಜ್ಯದ 3 ಪ್ರಮುಖ ಪಕ್ಷಗಳಾದ ಬಿಜೆಪಿ (BJP), ಜೆಡಿಎಸ್ (JDS), ಕಾಂಗ್ರೆಸ್‍ನ (Congress) ಅನೇಕ ಘಟಾನುಗಟಿ ನಾಯಕರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸಿ, ಬೃಹತ್ ರ‍್ಯಾಲಿಗಳನ್ನು ನಡೆಸುವ ಮೂಲಕ ಶಕ್ತಿಪ್ರದರ್ಶಿಸಿದ್ದಾರೆ. ಯಾರ‍್ಯಾರು ಎಲ್ಲೆಲ್ಲಿ ನಾಮಪತ್ರ ಸಲ್ಲಿಕೆ?: ಆರ್. ಅಶೋಕ್: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ (R Ashok) ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅದಾದ ಬಳಿಕ ದೇವೇಗೌಡ ಪೆಟ್ರೋಲ್ ಬಂಕ್‍ನಿಂದ ಕಿಮ್ಸ್ ಕಾಲೇಜಿನವರೆಗೂ ಮೆರವಣಿಗೆ ಮೂಲಕ ಹೊರಟು ಬನಶಂಕರಿ ಎರಡನೇ ಹಂತದಲ್ಲಿ ಇರುವ ಆರ್‍ಓ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಅಶ್ವಥ್ ನಾರಾಯಣ್: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ್‌ ಅವರು ಇಂದು…

Read More

ಬೆಂಗಳೂರು: ಪಕ್ಷೇತರರಾಗಿ ಸ್ಪರ್ದೆ ಮಾಡಬೇಕು ಅಂತ ಯೋಚಿಸಿದ್ದೇನೆ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಹೇಳಿದ್ದಾರೆ. ಈ ಸಂಬಂಧ ಪುಲಿಕೇಶಿ ನಗರದಲ್ಲಿ ಮಾತನಾಡಿದ ಅವರು, ನಮ್ಮ ಮುಖಂಡರು, ಜನತೆಯ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಅತ್ಯಂತ ಹೆಚ್ಚು ಲೀಡ್​ನಿಂದ ಗೆದ್ದ ಶಾಸಕ ನಾನು. ಆದರೆ ನನಗೆ ಪಕ್ಷದ ನಡೆಯಿಂದ ನೋವುಂಟಾಗಿದೆ. ಮೂರನೇ ಲಿಸ್ಟ್​ನಲ್ಲೂ ನನಗೆ ಟಿಕೇಟ್ ನೀಡಲಿಲ್ಲ. ಇದರ ಹಿಂದೆ ಪಕ್ಷದ ಹಿರಿಯ ನಾಯಕರಿದ್ದಾರೆ. ಹಿರಿಯ ನಾಯಕರು ಯಾರು ಎಂದು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ಕ್ಷೇತ್ರದಲ್ಲಿ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಲ್ಲಾ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನನ್ನ ಬಗ್ಗೆ ಮನೆ ಮನೆಗೆ ಹೋಗಿ ಕೇಳಲಿ ಬೇಕಾದರೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

Read More