ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತವರು ಕ್ಷೇತ್ರವಾದ ಕನಕಪುರದಲ್ಲಿ (Kanakapura) ಕಾಂಗ್ರೆಸ್‌ನದ್ದೆ (Congress) ಸರ್ವಾಧಿಕಾರ. ಎದುರಾಳಿಗಳೇ ಇಲ್ಲದೇ ನಿರಾಯಾಸವಾಗಿ ಚುನಾವಣೆ ನಡೆಸುತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಠಕ್ಕರ್ ಕೊಡಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ. ಎರಡು ದಶಕಗಳ ಹಿಂದೆ ಜೆಡಿಎಸ್ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿ.ಕೆ.ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಕಾಂಗ್ರೆಸ್‌ನ ಅಬೇಧ್ಯ ಕೋಟೆಯನ್ನ ಬೇಧಿಸಲು ಬಿಜೆಪಿಯಿಂದ ಸಾಧ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ. ಅಶೋಕ್‌ಗೆ ಸಹೋದರರ ಸವಾಲ್ ಕನಕಪುರದಲ್ಲಿ ಬಿಜೆಪಿಯಿಂದ (BJP) ಸಚಿವ ಆರ್. ಅಶೋಕ್ (R.Ashok) ಸ್ಪರ್ಧೆ ಕನಕಪುರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರಕ್ಕೆ ಲಗ್ಗೆ ಇಟ್ಟು ಗೆಲುವು ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆ ಕೂಡಾ ಉದ್ಭವ ಆಗಿದೆ. ಸತತ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಶಿವಕುಮಾರ್ ಒಮ್ಮೆಯೂ ಸೋತಿಲ್ಲ. ಇಲ್ಲಿ ಡಿಕೆಶಿಯಷ್ಟೇ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ (D.K.Suresh) ಸಹ ಪ್ರಭಾವಿ. ಹೀಗಾಗಿ ಅಶೋಕ್ ಇಲ್ಲಿ ಸಹೋದರರ ಸವಾಲ್ ಎದುರಿಸಬೇಕಿದೆ. ಕೆಪಿಸಿಸಿ ಅಧ್ಯಕ್ಷರನ್ನು ತವರು…
Author: Prajatv Kannada
ಮಡಿಕೇರಿ: ಚುನಾವಣೆ (Election) ಮುಗಿಯುವವರೆಗೂ ಕೊಡಗಿನ (Kodagu) ಸಮಾರಂಭಗಳಲ್ಲಿ ಮದ್ಯ (Alcohol) ಬಳಕೆ ಮಾಡಬಾರದು ಎಂದು ಚುನಾವಣಾ ಆಯೋಗವು (Election Commission) ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಕೊಡಗಿನ ಜನರು ಮದ್ಯ ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಸಿ ಖಾಸಗಿ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲು ಅವಕಾಶ ನೀಡುವಂತೆ ರಾಜ್ಯದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ಕೊಟ್ಟಿದ್ದಾರೆ. ಕೊಡಗಿನಲ್ಲಿ ಮದುವೆ, ನಾಮಕರಣ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನಿರ್ಬಂಧ ಹೇರಿದ್ದ ಬಗ್ಗೆ ಚುನಾವಣಾಧಿಕಾರಿಗಳಿಗೆ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಂದ ದೂರು ಸಲ್ಲಿಸಲಾಗಿತ್ತು. ಅಲ್ಲದೇ ಬಿಜೆಪಿಯಿಂದ (BJP) ಕಿಲನ್ ಗಣಪತಿ ಎಲ್ಲಾ ಸಂಸ್ಥೆಗಳ ಪರವಾಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ನಿರ್ಬಂಧ ಸಡಿಲಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಎಐಎನ್(AIN) ವೆಬ್ ಸೈಟ್ ವರದಿ ಮಾಡಿತ್ತು. ಆದರೆ ರಾಜಕೀಯ ಪಕ್ಷಗಳಿಂದ…
ಚಿಕ್ಕಮಗಳೂರು: ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನಿಲ್ಲ ಸ್ಥಾನ ನೀಡಬಹುದು ಅದನ್ನೆಲ್ಲ ಕೊಟ್ಟಿದೆ. ಜಗದೀಶ್ ಶೆಟ್ಟರ್ ಪಕ್ಷ ತೊರೆದು ಯಾವ ಮೆಸೇಜ್ ನೀಡಿದರು. ಸೈದ್ಧಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರಲಿಲ್ಲವಾ ? ವೈಯಕ್ತಿಕ ಲಾಭ ನಷ್ಟವನ್ನು ಹಾಕಿ ನನಗೆ ಲಾಭ ಆದರೆ ಮಾತ್ರ ಬಿಜೆಪಿ. ಇನ್ನೊಬ್ಬರಿಗೆ ಅಂದ್ರೆ ಬಿಜೆಪಿ ಅಲ್ಲ ಎಂಬ ಮನಸ್ಥಿತಿ ಆಶ್ಚರ್ಯ ತರಿಸಿದೆ. ಜಗದೀಶ್ ಶೆಟ್ಟರ್ ಅವರಿಂದ ಇಂತಹದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿಢೀರ್ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ತಾಂತ್ರಿಕ ಸಮಸ್ಯೆಯಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಲ್ಲಿ ಸುಮಾರು ನಿಮಿಷಗಳ ಕಾಲ ಮೆಟ್ರೋ ನಿಂತಿದ್ದು, ಕೂಡಲೇ ಎಚ್ಚೆತ್ತು ತಾಂತ್ರಿಕ ಸಮಸ್ಯೆಯನ್ನು ಮೆಟ್ರೋ ಸಿಬ್ಬಂದಿ ನಿವಾರಣೆ ಮಾಡಿದ್ದಾರೆ. ಇನ್ನೂ ಇಂದು ಬೆಳಗ್ಗೆ ದಿಢೀರ್ ಮೆಟ್ರೋ ಸ್ಥಗಿತದಿಂದ ಪ್ರಯಾಣಿಕರು ಪರದಾಡಿದ್ದು, ತಾಂತ್ರಿಕ ಸಮಸ್ಯೆ ನಿವಾರಣೆ ಬೆನ್ನಲ್ಲೇ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಓಡಾಟ ಶುರುವಾಗಿದೆ. ಇನ್ನೂ ದಿಡೀರ್ ಮೆಟ್ರೋ ಸೇವೆ ಸ್ಥಗಿತ ಉಂಟಾಗಿದ್ದರಿಂದ ಪ್ರಯಾಣಿಕರು ಪರದಾಡಿದ ದೃಶ್ಯ ಕಂಡು ಬಂತು. ಬಳಿಕ ಎಚ್ಚೆತ್ತ ಸಿಬ್ಬಂದಿ ಕೂಡಲೇ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಯಾಗಿರುವುದು ದುರದೃಷ್ಟಕರ. ಇದೊಂದು ಪೊಲಿಟಿಕಲ್ ಸೂಸೈಡ್ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ (Chikkaballapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರದತಲ್ಲಿ ಜಗದೀಶ್ ಶೆಟ್ಟರ್ ಜನಸಂಘದಿಂದ ಮೊದಲು ಚುನಾಯಿತರಾದವರು. ಅಂತಹ ನಾಯಕರು ಕಾಂಗ್ರೆಸ್ ಸೇರುತ್ತಿರುವುದು ದುರಾದೃಷ್ಟಕರ ವಿಷಯವಾಗಿದೆ. ಶೆಟ್ಟರ್ ವಿರೋಧ ಪಕ್ಷದ ನಾಯಕರಾದವರು. ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆದವರು. ಈಗ ಕೇವಲ ಶಾಸಕ ಸ್ಥಾನಕ್ಕಾಗಿ ಈ ರೀತಿ ಪಕ್ಷ ತೊರೆದು ಹೋಗಿದ್ದು ಸರಿಯಲ್ಲ. ರಾಜಕೀಯವಾಗಿ ಜಗದೀಶ್ ಶೆಟ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಶೆಟ್ಟರ್‌ಗೆ ಸ್ಪರ್ಧೆ ಬೇಡ ಎಂದು ಹಿರಿಯ ನಾಯಕರು ಹೇಳಿದ್ದರು. ಅಷ್ಟಕ್ಕೆ ಪಕ್ಷ ಬಿಡುತ್ತಿರುವುದು ಸರಿಯಾದ ನಿರ್ಧಾರವಲ್ಲ. ಶೆಟ್ಟರ್ ಅವರದ್ದು ಸರಳ ಸಜ್ಜನ ವ್ಯಕ್ತಿತ್ವ ಅಂತವರು ಕಾಂಗ್ರೆಸ್ ಸೇರುವುದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ಶೆಟ್ಟರ್ ಅವರ ರಕ್ತದ ಕಣ ಕಣದಲ್ಲೂ ಇದೆ ಎಂದು ನಾನು ಭಾವಿಸಿದ್ದೆ. ಆದರೆ ಶಾಸಕ…
ಬೆಂಗಳೂರು: ‘ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ತಮ್ಮನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಬೇಸತ್ತು ತಮ್ಮ ಸ್ವಾಭಿಮಾನ ರಕ್ಷಣೆಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು, ‘ಈ ದಿನ ರಾಜ್ಯಕ್ಕೆ ವಿಶೇಷವಾದ ದಿನ. ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ, ಅಭಿವೃದ್ಧಿ, ಪ್ರಗತಿ, ಒಗ್ಗಟ್ಟು ತರುವ ದಿನ. ಸರಳ, ಸಜ್ಜನಿಕೆಯ ನಾಯಕ, 6 ಬಾರಿ ಶಾಸಕರಾಗಿ ಸೋಲಿಲ್ಲದ ಸರದಾರ, ಸ್ವಾಭಿಮಾನಿ, ಸುದೀರ್ಘ ರಾಜಕಾರಣದ ಪಯಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದ ನಾಯಕ ಜಗದೀಶ್ ಶೆಟ್ಟರ್. ಅವರು ಇಂದು ಇಡೀ ರಾಷ್ಟ್ರಕ್ಕೆ ದೊಡ್ಡ ಸಂದೇಶ ನೀಡಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್ ಆಗಿ…
ಬೆಂಗಳೂರು: ಲಿಂಗಾಯತ (Lingayats) ಸಮಾಜದ ಪ್ರಮುಖ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಬಿಜೆಪಿ (BJP) ನಡೆಸಿಕೊಂಡ ರೀತಿ ಯಾವ ಪಕ್ಷದ ಯಾವ ನಾಯಕರಿಗೂ ಆಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿ ಕಣ್ಣೀರು ಹಾಕುವಂತೆ ಬಿಜೆಪಿ ಮಾಡಿತ್ತು. ಈಗ ಜಗದೀಶ್ ಶೆಟ್ಟರ್ ಅವರಿಗೂ ಅವಮಾನ ಮಾಡಿ ಪಕ್ಷ ತೊರೆಯುವಂತೆ ಮಾಡಿದೆ. ಇಂತಹ ಪರಿಸ್ಥಿತಿ ಯಾವ ಪಕ್ಷದ ಯಾವ ನಾಯಕನಿಗೂ ಎದುರಾಗಬಾರದು ಎಂದಿದ್ದಾರೆ. ಜಗದೀಶ್ ಶೆಟ್ಟರ್ ಅವರ ಮೇಲೆ ಯಾವುದೇ ಆರೋಪ ಇಲ್ಲದೆ ಟಿಕೆಟ್ ತಪ್ಪಿಸಿದ್ದಾರೆ. ಇದು ದುರುದ್ದೇಶದಿಂದ ಕೂಡಿದ ನಿರ್ಧಾರ. ಶೆಟ್ಟರ್ ಒಬ್ಬ ಸ್ವಾಭಿಮಾನಿ ರಾಜಕಾರಣಿ, ಅಂತಹ ನಾಯಕನ ಸ್ವಾಭಿಮಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಬಿಜೆಪಿ ನಡೆದುಕೊಂಡಿದೆ. ಈ ರೀತಿಯ ಅನ್ಯಾಯ ಶೆಟ್ಟರ್‍ಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಗದೀಶ್ ಶೆಟ್ಟರ್…
ಬೆಂಗಳೂರು: ಮಂಡ್ಯದ ಚುನಾವಣೆ ಫಲಿತಾಂಶ ಈ ಬಾರಿ ಎಲ್ಲರಿಗೂ ಸರ್ಪ್ರೈಸ್ ಆಗಿರಲಿದೆ ಎಂದು ಸಂಸದೆ ಸುಮಲತಾ (sumalatha)ತಿಳಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, (monday)ಸೋಮವಾರದಿಂದ ನಮ್ಮ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡ್ತಾರೆ. ಅದರ ವಿಚಾರವಾಗಿ ನಾವು ಯಾರು ಏನು ಮಾಡಬೇಕು ಅಂತಾ ಚರ್ಚೆ ಮಾಡಿದ್ವಿ. ಪ್ರಚಾರ ಯಾವ ರೀತಿ ಮಾಡಬೇಕು ಅಂತಾ ಚರ್ಚೆ ಆಗಿದೆ. ತುಂಬಾ ಸಂಕ್ಷಿಪ್ತವಾಗಿ ಎಲ್ಲ ವಿಚಾರಗಳೂ ಚರ್ಚೆಯಾಗಿವೆ ಎಂದರು. ಮಂಡ್ಯ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ(kumaraswamy) ಬರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಮಂಡ್ಯದಲ್ಲಿ ನಮಗೆ ಸಂಪೂರ್ಣ ವಿಶ್ವಾಸ ಇದೆ. ಕುಮಾರಸ್ವಾಮಿ ಮಾತ್ರವಲ್ಲ, ಯಾರೇ ಬಂದರೂ ಹೇಗೆ ಸೋಲಿಸಬೇಕು ಅಂತಾ ನಾವು ರೆಡಿ ಇದ್ದೇವೆ. ಯಾರು ಬಂದರೂ ಅಲ್ಲಿ ನಮ್ಮ ಅಭ್ಯರ್ಥಿ ಸ್ಟ್ರಾಂಗ್ ಇದ್ದಾರೆ, ಗೆದ್ದೇ ಗೆಲ್ಲುತ್ತಾರೆ. ಅದಕ್ಕೆ ಬೇಕಾದ ಚುನಾವಣಾ ತಂತ್ರಗಾರಿಕೆ ನಮ್ಮ ಬಳಿಯೂ ಸಿದ್ದವಿದೆ ಎಂದು ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ ಊಹಿಸದ ರೀತಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಹುತೇಕ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ, ನಾನು…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅತ್ಯಂತ ಸುಲಭವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಐದು ವರ್ಷ ಜನರ ನೆಮ್ಮದಿ ಹಾಗೂ ಬದುಕನ್ನು ಕಿತ್ತುಕೊಂಡಿದೆ. ಜನ ಇವರಿಗೆ ಸರಿಯಾದ ಪಾಠ ಕಲಿಸಬೇಕು. ನಾವು ಒಂದು ಉತ್ತಮ ಆಶಯದೊಂದಿಗೆ ಜನರಿಗೆ ಅನುಕೂಲವಾಗುವ ವಿಚಾರಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದೇವೆ. ಒಂದು ವಿಷನ್ ಇಟ್ಟುಕೊಂಡು ನಾವು ರಾಜ್ಯ ಚುನಾವಣೆಗೆ ಹೊರಟಿದ್ದೇವೆ. ಪಾರದರ್ಶಕ ಹಾಗೂ ಜನರ ಅಭಿಪ್ರಾಯವನ್ನು ಕೇಳಿಕೊಂಡು ಮುನ್ನಡೆಯುವ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅತ್ಯಂತ ದೊಡ್ಡ ಮಟ್ಟದ ಯಶಸ್ಸಿನೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ರಾಹುಲ್ ಗಾಂಧಿ ಮುಖಂಡರಿಗೆ ಕರೆ ಕೊಟ್ಟಿದ್ದಾರೆ.
ಬೆಂಗಳೂರು: ಕಳೆದ 34 ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೀರಪ್ಪನ್ ಸಹಚರನಾದ ಮೀಸೆ ಮಾದಯ್ಯ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಈತನನ್ನು ದಾಖಲು ಮಾಡಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಸೆ ಮಾದಯ್ಯನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ವೀರಪ್ಪನ್‌ನ ಇನ್ನುಳಿದ ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು. ಮೀಸೆ ಮಾದಯ್ಯ ಕೂಡ ಹೀಗೇ ಮೃತಪಟ್ಟಿದ್ದಾನೆ. ಸದ್ಯ ವಿಕ್ಟೋರಿಯಾ ಶವಾಗಾರದಲ್ಲಿ ಮೀಸೆ ಮಾದಯ್ಯನ ಶವ ಇದೆ. ಜೈಲು ಅಧಿಕಾರಿಗಳು ಶವ ವಿಲೇವಾರಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಮತ್ತೊಬ್ಬ ವೀರಪ್ಪನ್ ಸಹಚರ ಆರೋಪಿಸಿದ್ದಾನೆ.