Author: Prajatv Kannada

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಕೆಜಿಎಫ್‌ ಬಾಬು ಉರುಫ್‌ ಯೂಸುಫ್‌ ಷರೀಫ್‌ ತಮ್ಮ ಪತ್ನಿ ಶಾಝಿಯಾ ತರನ್ನುಮ್‌ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಶಾಝಿಯಾ ತರುನ್ನುಮ್‌ ಅವರು ಗುರುವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈ ವೇಳೆ ಅವರು ತಮ್ಮ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ, ಷೇರು ಹೂಡಿಕೆ, ಆಭರಣ ಸೇರಿದಂತೆ 40.59 ಲಕ್ಷ ರೂ.ಗಳ ಚರಾಸ್ತಿ ಇದೆ. ಪತಿ ಕೆಜಿಎಫ್‌ ಬಾಬು ಉರುಫ್‌ ಯೂಸುಫ್‌ ಷರೀಫ್‌ ಹೆಸರಿನಲ್ಲಿ ಸುಮಾರು 83.56 ಕೋಟಿ ರೂ.ಗಳ ಚರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ತಮ್ಮ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ ಎಂದಿರುವ ಅವರು ಪತಿ ಕೆಜಿಎಫ್‌ ಬಾಬು ಹೆಸರಿನಲ್ಲಿ 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದು ಹೇಳಿದ್ದಾರೆ. ಒಟ್ಟಾರೆ ತಮ್ಮ ಬಳಿ 40.59 ಲಕ್ಷ ರೂ. ಆಸ್ತಿ ಹಾಗೂ ಪತಿ ಬಳಿ ಬರೋಬ್ಬರಿ 1,621 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಐದು ಐಷಾರಾಮಿ ಕಾರ್‌ ಬುಕ್‌ ಮಾಡಿದ್ದಾರೆ ಪತಿ! ಕೆಜಿಎಫ್‌ ಬಾಬು ಅವರ ಆಸ್ತಿಯಲ್ಲಿ 16 ಬ್ಯಾಂಕ್‌ ಖಾತೆಗಳಲ್ಲಿರುವ ಕೋಟ್ಯಂತರ…

Read More

ಬೆಂಗಳೂರು: ಬೆಳಗಾವಿಯ ದೊಡ್ಡ ಮೀನಿಗೆ ಗಾಳ ಹಾಕಿ, ಡಿ.ಕೆ ಶಿವಕುಮಾರ್ ಹಿಡಿದಿದ್ದಾರೆ.. ರಮೇಶ್ ಜಾರಕಿಹೊಳಿಯನ್ನ ಅಣಿಯಲು ಲಕ್ಷ್ಮಣ ಸವದಿಯನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದಾರೆ. ಅಥಣಿ ಟಿಕೆಟ್ ಕೈ ತಪ್ಪಿದ್ದಕ್ಕೆ, ಬಿಜೆಪಿ ಹೈಕಮಾಂಡ್ ವಿರುದ್ಧವೇ ಸವದಿ ಸಮರ ಸಾರಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.. ಈಗ ಬೆಳಗಾವಿಯ ರಾಜಕೀಯ ಚಿತ್ರಣವೇ ಬದಲಾಗಿಬಿಟ್ಟಿದೆ.. ಯೆಸ್.. ಚುನಾವಣೆ ಹತ್ತಿರ ಬರ್ತಿದ್ದಂತೆ ಜಂಪಿಂಗ್ ಪಾಲಿಟಿಕ್ಸ್ ಜೋರಾಗಿದೆ. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ನೆಗೆಯೋರ ಸಂಖ್ಯೆ ಜಾಸ್ತಿ ಆಗಿದೆ. ಬೆಳಗಾವಿಯ ಬಿಜೆಪಿ ಪ್ರಭಾವಿ ನಾಯಕ, ಮಾಜಿ ಡಿಸಿಎಂ ಕಾಂಗ್ರೆಸ್ ತೆಕ್ಕೆಗೆ ಬಿದ್ದು ಬಿಟ್ಟಿದ್ದಾರೆ. ಅಥಣಿ ಟಿಕೆಟ್ ಕೈ ತಪ್ಪಿದ್ದರಿಂದ, ಕಮಲ ಬ್ರಿಗೇಡ್ ವಿರುದ್ಧ ಸಮರ ಸಾರಿ, ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಮೊದಲಿನಿಂದಲೂ ಅಥಣಿಯ ಬಿಜೆಪಿ ಟಿಕೆಟ್ ಗಾಗಿ ಸಿಕ್ಕಾಪಟ್ಟೆ ಲಾಬಿ ನಡೆಸ್ತಾ ಇದ್ರು. ಆದ್ರೆ ರಮೇಶ್ ಜಾರಕಿಹೊಳಿ ಪ್ರಭಾವ ಬೀರಿ, ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಿಸಿದ್ರು. ಇದನ್ನ ಲಕ್ಷ್ಮಣ ಸವದಿ ಸಹಿಸಲಿಲ್ಲ.. ವಲಸಿಗರಿಗೆ…

Read More

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಬಂಡಾಯದ್ದೇ ಸುದ್ದಿ..! ಅದರಲ್ಲೂ ಬಿಜೆಪಿ ಅಭ್ಯರ್ಥಿಗಳ 2 ಪಟ್ಟಿಗಳು ಪ್ರಕಟವಾದ ಬಳಿಕ ರಾಜ್ಯದ ಹಲವು ಕ್ಷೇತ್ರಗಳ ಕೇಸರಿ ಪಾಳಯದಲ್ಲಿ ಬಂಡಾಯದ ಕಹಳೆ ಮೊಳಗಿದೆ. ಕೆಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿ ಎದುರಿಸುತ್ತಿದ್ದ ಬಿಜೆಪಿಗೆ ಇದೀಗ ಪಕ್ಷದೊಳಗೇ ಒಳೇಟಿನ ಭಯವೂ ಎದುರಾಗಿದೆ. ಬಿಜೆಪಿ ಟಿಕೆಟ್ ಘೋಷಣೆ ಆಗಿರುವ ಒಟ್ಟು 212 ಕ್ಷೇತ್ರಗಳ ಪೈಕಿ 20 ರಿಂದ 30 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. ಆದ್ರೆ, ಬಂಡಾಯದ ಬಿಸಿ ಪಕ್ಷಕ್ಕೆ ಅಷ್ಟಾಗಿ ತಟ್ಟೋದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಂದು ವೇಳೆ ಬಂಡಾಯದ ಬಿಸಿ ತಟ್ಟಿದರೂ ಅದು ಕೇವಲ 7 ರಿಂದ 8 ಕ್ಷೇತ್ರಗಳಿಗೆ ಮಾತ್ರ ಸೀಮಿತ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಬಂಡಾಯದ ಪರಿಣಾಮ ಬೀರಿದರೆ ಪಕ್ಷವು ರಾಜ್ಯದಲ್ಲಿ ಸರಳ ಬಹುಮತ ಸಾಧಿಸಲು ತೊಡಕಾಗಲಿದೆ. ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರಿಗೇ ಟಿಕೆಟ್ ಇಲ್ಲ! ಬಿಜೆಪಿಯು ಈವರೆಗೆ 18 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.…

Read More

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸುತ್ತಿರುವುದು ನಾನಲ್ಲ. ಶೆಟ್ಟರ್ ಬೆಂಬಲಿಗರು ನೂರಾರು ಆರೋಪ ಮಾಡುತ್ತಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹು‌ಬ್ಬಳ್ಳಿಯ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸುಳ್ಳು ವದಂತಿಗಳು. ಈವರೆಗೂ ನಾವು ಪಕ್ಷದ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು. ಚುನಾವಣಾ ರಾಜಕಾರಣಕ್ಕೆ ಬರುವ ಮುಂಚಿತವಾಗಿಯೇ ಸ್ನೇಹಿತರು. ಯಾವುದೇ ಕಾರಣಕ್ಕೂ ಟಿಕೆಟ್‌ ತಪ್ಪಿಸುವ ಕೆಲಸ ಮಾಡಲ್ಲ ಎಂದು ಹೇಳಿದರು. ಜಗದೀಶ್‌ ಶೆಟ್ಟರ್ ಟಿಕೆಟ್ ಗಾಗಿ ಬಹಳ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಶುಕ್ರವಾರ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಶೆಟ್ಟರ್ ಅವರದ್ದು ಜನಸಂಘ ಕಾಲದ ಮನೆತನ. ಬಿಜೆಪಿಗೆ ಜಗದೀಶ್‌ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಜೆಪಿ ನಡ್ಡಾ ಅವರಿಗೂ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ.…

Read More

ಸೂರ್ಯೋದಯ: 06.07 AM, ಸೂರ್ಯಾಸ್ತ : 06.32 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ಕೃಷ್ಣ ಪಕ್ಷ, ವಸಂತ ಋತು, ಉತ್ತರಾಯಣ ತಿಥಿ: ಇವತ್ತು ದಶಮಿ 08:45 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಶ್ರವಣ  07:36 AM ತನಕ ನಂತರ ಧನಿಷ್ಠ ಯೋಗ: ಇವತ್ತು ಸಾಧ್ಯ 06:33 AM ತನಕ ನಂತರ ಶುಭ ಕರಣ: ಇವತ್ತು ವಣಿಜ 09:59 AM ತನಕ ನಂತರ ವಿಷ್ಟಿ 08:45 PM ತನಕ ನಂತರ ಬವರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 08.13 PM to 09.42 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:51 ನಿಂದ ಮ.12:41 ವರೆಗೂ ಮೇಷ ರಾಶಿ: ಹಳೆ ವಹನ ಬದಲಾಯಿಸಿ ಹೊಸ ವಾಹನ ಖರೀದಿ,ರಾಶಿಯ ಕೌಟುಂಬಿಕ ಜೀವನ ತುಂಬಾ ಮಧುರ, ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ.…

Read More

ಹಾಸನ: ಟಿಕೆಟ್ ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ( H. D. Deve Gowda) ಧನ್ಯವಾದ ಅರ್ಪಿಸುತ್ತೇನೆ ಎಂದು ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಪಿ ಸ್ವರೂಪ್ (H.P Swaroop) ಹೇಳಿದ್ದಾರೆ. ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಹೈಕಮಾಂಡ್ ನನಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ. ರೇವಣ್ಣ (H. D. Revanna) ಕುಟುಂಬ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ. ಶೀಘ್ರದಲ್ಲೇ ರೇವಣ್ಣ ಅವರನ್ನು ಭೇಟಿಯಾಗುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ. ಈ ಚುನಾವಣೆ ಶಾಸಕ ಪ್ರೀತಂಗೌಡ ಹಾಗೂ ಸ್ವಾಭಿಮಾನದ ನಡುವೆ ನಡೆಯುವ ಚುನಾವಣೆಯಾಗಿದೆ. ಇಲ್ಲಿ ನಮ್ಮ ತಂದೆಯ ಕೆಲಸಗಳು ನನ್ನ ಕೈಹಿಡಿಯಲಿವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದಿದ್ದಾರೆ. ಪಕ್ಷದ ಟಿಕೆಟ್ ಸಿಗಲು ಕಾರಣರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Read More

ಬೆಂಗಳೂರು: ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ. ಪ್ರಧಾನಿ ಪತ್ರ ಬರೆದಿರುವ ಬಗ್ಗೆ ಟ್ವೀಟ್‌ ಮಾಡಿರುವ ದೇವೇಗೌಡರು, ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್‌ನಲ್ಲಿ ಮತ್ತೆ ಮಂಡಿಸಲು ಪರಿಗಣಿಸುವಂತೆ ನಾನು ಇತ್ತೀಚೆಗೆ ಪ್ರಧಾನಿಗೆ ಪತ್ರ ಬರೆದಿದ್ದೆ. ನಾನು 1996 ರಲ್ಲಿ ಇದನ್ನು ಮೊದಲು ಕೈಗೆತ್ತಿಕೊಂಡಿದ್ದೆ. ನಾವು ಶೀಘ್ರದಲ್ಲೇ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದಾಗ ಇದು ಮೊದಲ ಉತ್ತಮ ಕೆಲಸವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲೇನಿದೆ? ಈಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕೆ ಹತ್ತಿರದಲ್ಲಿದೆ. ದೇಶದ ಇತರ ರಾಜ್ಯಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಪುರುಷರಿಗೆ ಸಮಾನವಾಗಿಯೇ ಇದೆ. ಈ ಬೆಳವಣಿಗೆಯು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದನ್ನು ಮತ್ತೆ ಪ್ರತಿಪಾದಿಸುವಂತೆ ಮಾಡಿದೆ. ಲೋಕಸಭೆ…

Read More

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎರಡು ದಿನಗಳ ಪ್ರವಾಸಕ್ಕೆ ರಾಜ್ಯಕ್ಕೆ ಭಾನುವಾರ ಆಗಮಿಸಲಿದ್ದು, ಮೊದಲ ದಿನ ಕೋಲಾರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ ನೇಮ್ ಕುರಿತಾಗಿ ಮಾಡಿದ್ದ ಭಾಷಣ ಅವರ ಸಂಸತ್ ಸದಸ್ಯತ್ವ ಅನರ್ಹಕ್ಕೆ ಕಾರಣವಾಗಿತ್ತು. ಇದೀಗ ಕೋಲಾರದಲ್ಲೇ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಭಾಗಿಯಾಗಲಿದ್ದು, ಈ ಮೂಲಕ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ಮ 12. 05 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಹುಲ್ ಆಗಮಿಸಲಿದ್ದಾರೆ. 12. 25 ಕ್ಕೆ ಕೋಲಾರಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಸ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ಬಳಿಕ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಕಚೇರಿ ಇಂದಿರಾ ಭವನವನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ…

Read More

ಬೆಂಗಳೂರು: ಬೆಳಗಾವಿ ಭಾಗದ ಪ್ರಭಾವಿ ಲಿಂಗಾಯಿತ ನಾಯಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆಯುವುದು ಖಚಿತವಾಗುತ್ತಲೇ ಅಖಾಡಕ್ಕಿಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಶುಕ್ರವಾರ ದಿನವಿಡೀ ನಡೆಸಿದ ‘ಆಪರೇಷನ್‌’ ಕುತೂಹಲಕರವಾಗಿತ್ತು. ಎರಡು ದಿನಗಳ ಹಿಂದೆ ಬಿಜೆಪಿ ಪ್ರಕಟಿಸಿದ ಪಟ್ಟಿಯಲ್ಲಿ ಅಥಣಿ ಕ್ಷೇತ್ರದಿಂದ ತಮಗೆ ಕೊಕ್‌ ನೀಡಿದ್ದರಿಂದ ಆಕ್ರೋಶಗೊಂಡು ಬಿಜೆಪಿ ತೊರೆಯುವ ಮಾತನಾಡಿದ್ದ ಲಕ್ಷ್ಮಣ ಸವದಿ ಜತೆ ಕಾಂಗ್ರೆಸ್‌ ನಾಯಕರು ನಿರಂತರ ಸಂಪರ್ಕ ಕಾಯ್ದುಕೊಂಡಿದ್ದರು. ವಿಧಾನ ಪರಿಷತ್‌ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಹೊರಡಲು ತಯಾರಾಗಿದ್ದ ಸವದಿ ಅವರಿಗಾಗಿ ಡಿಕೆ ಶಿವಕುಮಾರ್‌ ಬೆಳಗಾವಿಗೆ ವಿಶೇಷ ವಿಮಾನ ಕಳಿಸಿದ್ದರು. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಉತ್ಸಾಹದಿಂದ ಕೈಗೆತ್ತಿಕೊಂಡ ಡಿಕೆ ಶಿವಕುಮಾರ್‌, ಪ್ರಭಾವಿ ಲಿಂಗಾಯತ ಬಿಜೆಪಿ ನಾಯಕನನ್ನು ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳುವ ಜತೆಗೆ, ಪರಮಶತ್ರು ರಮೇಶ್‌ ಜಾರಕಿಹೊಳಿಗೂ ಟಕ್ಕರ್‌ ನೀಡಲು ಮುಂದಾದರು. ಅದಕ್ಕಾಗಿ ಸವದಿ ಅವರನ್ನು ಬೆಂಗಳೂರಿಗೆ ಕರೆತರಲು ಲಕ್ಷ್ಮೀ ಹೆಬ್ಬಾಳ್ಕರ್‌…

Read More

ಮುಂಬೈ: ಶ್ರೀಲಂಕಾ ತಂಡದ ಸ್ಪಿನ್‌ ಮಾಂತ್ರಿಕ ವಾನಿಂದು ಹಸರಂಗ (Wanindu Hasaranga) ಆರ್‌ಸಿಬಿಗೆ (RCB) ತಂಡಕ್ಕೆ ಮರಳಿದ್ದು, 2023ರ ಐಪಿಎಲ್‌ನಲ್ಲಿ (IPL 2023) ಮೊದಲ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ ಜೊತೆಗಿನ ದ್ವಿಪಕ್ಷಿಯ ಸರಣಿ ಹಿನ್ನೆಲೆಯಲ್ಲಿ ಹಸರಂಗ ಶ್ರೀಲಂಕಾ (SriLanka) ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದರು. ಹಾಗಾಗಿ ಆರ್‌ಸಿಬಿ ತಂಡದಿಂದ ಹೊರಗುಳಿದಿದ್ದರು. ಆದರೀಗ ಆರ್‌ಸಿಬಿ ತಂಡವನ್ನ ಕೂಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಬ್ಬರಿಸಲು ನಾವ್‌ ರೆಡಿ ಎಂಬ ಖಡಕ್‌ ಸಂದೇಶವನ್ನ ಎದುರಾಳಿಗಳಿಗೆ ರವಾನಿಸಿದ್ದಾರೆ. ವಾನಿಂದು ಹಸರಂಗ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ ಅವರು 26 ವಿಕೆಟ್‌ ಉರುಳಿಸಿ, 7.54ರ ಸರಾಸರಿಯಲ್ಲಿ ಬೌಲಿಂಗ್ ನಡೆಸಿದ್ದರು ಈ ಮೂಲಕ 2022ರ ಐಪಿಎಲ್‌ನಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಯನ್ನೂ ಹಸರಂಗ ಮಾಡಿದ್ದರು. ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಸೇರಿಕೊಂಡ ಹಸರಂಗ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವಾನಿಂದು…

Read More