ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. https://youtu.be/SqWydaMxlpI?si=RQXROalk1nzMheZo 196 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆದರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಈ ಎಲ್ಲ ಮಾಹಿತಿ ಇಲ್ಲಿದೆ ಓದಿ. ಹುದ್ದೆ ಬಗ್ಗೆ ಮಾಹಿತಿ: ಮುಂಡರಗಿ- 29 ನರಗುಂದ- 17 ಗದಗ- 45 ರೋಣ- 35 ಶಿರಹಟ್ಟಿ- 70 ಖಾಲಿ ಇರುವ ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆ- 46 ಅಂಗನವಾಡಿ ಸಹಾಯಕಿ- 150 ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ- 10ನೇ ತರಗತಿ, ಪಿಯುಸಿ, ಡಿಪ್ಲೊಮಾ ಮಾಡಿರಬೇಕು ಅಂಗನವಾಡಿ ಸಹಾಯಕಿ- ಪಿಯುಸಿ ಉತ್ತೀರ್ಣರಾಗಿರಬೇಕು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: PWD ಅಭ್ಯರ್ಥಿಗಳು…
Author: Prajatv Kannada
ಭಾರತ ಜಗತ್ತಿಗೆ ಪರಿಚಯಿಸಿದ ಅಸಾಮಾನ್ಯ ಕ್ರೀಡಾಪಟುಗಳಲ್ಲಿ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮಾಂತ್ರಿಕ ಹಾಕಿಪಟು ಧ್ಯಾನ್ ಚಂದ್ ಅವರ ಜನ್ಮದಿನವನ್ನು ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ. https://youtu.be/7nQ9lKUYRBk?si=FhU_3p0qky0schR5 ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಒಲಿಂಪಿಕ್ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ. ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್ ಚಂದ್ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ 1928ರಿಂದ ಒಲಿಂಪಿಕ್ಸ್‍ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು. ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ ಹಾಗೂ ಮಹತ್ವ ದೇಶದಲ್ಲಿ ಕ್ರೀಡೆಗೆ ವಿಶೇಷ ಮಹತ್ವ ನೀಡುವ ಸಲುವಾಗಿ 2012ರಲ್ಲಿ ದೇಶ ಕಂಡ ಅಪ್ರತಿಮ ಹಾಕಿಪಟು ಮೇಜರ್ ಧ್ಯಾನ್ ಚಂದ್ ಅವರ…
ಇರಾನ್ ಸರ್ಕಾರದ ವಕ್ತಾರರಾಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಸೂದ್ ಪೆಜೆಷ್ಕಿಯಾನ್ ಸರಕಾರದ ವಕ್ತಾರರಾಗಿ ಫತೇಮೆಹ್ ಮೊಹಜೆರಾನಿ ಅವರನ್ನು ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಅಧ್ಯಕ್ಷ ಪೆಜೆಶ್ಕಿಯಾನ್ ಈ ಅವರು ಮಸೂದ್ ಪೆಜೆಷ್ಕಿಯಾನ್ ಅವರನ್ನುನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 54 ವರ್ಷದ ಮೊಹಜೆರಾನಿ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಧರೆಯಾಗಿದ್ದು, ಈ ಹಿಂದಿನ 11ನೇ ಸರ್ಕಾರದಲ್ಲಿ ಶರಿಯಾತಿಯ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ವಿಶ್ವವಿದ್ಯಾಲಯದ (ಮಹಿಳೆಯರಿಗಾಗಿ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2017 ರಲ್ಲಿ ಆಗಿನ ಶಿಕ್ಷಣ ಸಚಿವ ಸಯ್ಯದ್ ಮೊಹಮ್ಮದ್ ಬಟ್ ಹೈ ಅವರು ಮೊಹಜೆರಾನಿ ಅವರನ್ನು ಸೆಂಟರ್ ಫಾರ್ ಬ್ರಿಲಿಯಂಟ್ ಟ್ಯಾಲೆಂಟ್ಸ್ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಮೊಹಜೆರಾನಿ ಶಿಕ್ಷಣ ಸಚಿವಾಲಯದಲ್ಲಿ ಇನ್ನೂ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೊಹಜೆರಾನಿ ಮಾತ್ರವಲ್ಲದೆ ದೇಶದ ಕೆಲ ಪ್ರಮುಖ ಹುದ್ದೆಗಳಿಗೆ ಕೂಡ ಮಹಿಳೆಯರನ್ನು ನೇಮಿಸಲಾಗಿದೆ. ಅಧ್ಯಕ್ಷ ಪೆಜೆಷ್ಕಿಯಾನ್ ಕಳೆದ ವಾರ ಶಿನಾ ಅನ್ಸಾರಿ ಅವರನ್ನು ಇರಾನ್ನ…
ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ನಲ್ಲಿ ಅಪರಾಧ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟೆಲಿಗ್ರಾಮ್ನ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಅಲ್ಲದೆ ದೇಶ ತೊರೆಯದಂತೆ ನಿರ್ಬಂಧ ವಿಧಿಸಿದೆ. ನಾಲ್ಕು ದಿನಗಳ ಹಿಂದೆ ಪಾವೆಲ್ ಡುರೊವ್ ಅವರನ್ನು ಫ್ರ್ಯಾನ್ಸ್ ಪೊಲೀಸರು ಬಂಧಿಸಿದ್ದರು. ಬುಧವಾರ ಪ್ಯಾರಿಸ್ನಲ್ಲಿ ಔಪಚಾರಿಕ ತನಿಖೆಗೊಳಪಡಿಸಿದ ಫ್ರೆಂಚ್ ನ್ಯಾಯಾಧೀಶರು ಡುರೊವ್ ಮೇಲೆ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಾಥಮಿಕ ಆರೋಪ ಹೊರಿಸಿಸಲಾಗಿದೆ. ಶನಿವಾರ ತಡರಾತ್ರಿ ಪ್ಯಾರಿಸ್ನ ಹೊರಗಿನ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ರಷ್ಯಾ ಮೂಲದ ಪಾವೆಲ್ ಡುರೊವ್ ಅವರನ್ನು ಬಂಧಿಸಲಾಗಿತ್ತು. ಇದೀಗ ನಾಲ್ಕು ದಿನಗಳ ವಿಚಾರಣೆ ಬಳಿಕ ಫ್ರಾನ್ಸ್ ನ್ಯಾಯಾಲಯ 5 ಮಿಲಿಯನ್ ಯೂರೋಗಳ ಜಾಮೀನು ಹಣ ಪಾವತಿಸಲು ಹಾಗೂ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಆದೇಶಿಸಿ, ಬಿಡುಗಡೆಗೊಳಿಸಿದೆ. ಮ್ಯಾಜಿಸ್ಟ್ರೇಟ್ ವಿಚಾರಣೆ ವೇಳೆ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಕಾನೂನು ಬಾಹಿರ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ಇಂದು ಬೆಳ್ಳಂ ಬೆಳಗ್ಗೆಯೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು ದರ್ಶನ್ ರನ್ನು ನೋಡಲು ರಸ್ತೆಗಳಲ್ಲಿ ಜನ ಸಾಲು ಗಟ್ಟಿ ನಿಂತಿದ್ದರು. ಬಳ್ಳಾರಿ ಜೈಲಿಗೆ ಆಗಮಿಸಿರುವ ದರ್ಶನ್ ರನ್ನು ಮೊದಲು ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ ಮಾಡಲಾಗುವುದು. ವೈದ್ಯರಿಂದ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಯಲಿದೆ. ಬಳಿಕ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್ಗೆ ಕರೆದೊಯ್ಯಲಾಗುವುದು. ಹೈ ಸೆಕ್ಯೂರಿಟಿ ಸೆಲ್ನಲ್ಲಿ ದರ್ಶನ್ ರನ್ನು ಇಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಯಾರೊಬ್ಬರೂ ಎಂಟ್ರಿಯಾಗದಂತೆ ಹೈಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿದೆ. ಮೂರು ದಶಕಗಳ ಹಿಂದೆ ಹೈ ಸೆಕ್ಯೂರಿಟಿ ಸೆಲ್ಗಳನ್ನು ನಿರ್ಮಾಣ ಮಾಡಲಾಗಿದೆ. ಎರಡು ಬದಿಯಲ್ಲಿ ಕನಿಷ್ಟ 30 ಸೆಲ್ಗಳಿವೆ. ಒಂದು ಕಡೆ 15 ಸೆಲ್ಗಳಿದ್ದು ಅಲ್ಲಿ ದರ್ಶನ್ ಅವರನ್ನು ಇರಿಸಲಾಗುತ್ತದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ದಪಡಿಸಿದ್ದ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಳ್ಳಂಬೆಳಗ್ಗೆಯೇ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬಳ್ಳಾರಿ ಜೈಲಿಗೆ ಕರೆ ತರಲಾಗಿದೆ. ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿ ಕರೆ ತರಲಾಗಿದೆ. ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ಕರೆ ತರಲಾಯಿತು. ಬೆಳಗ್ಗೆ 4 ಗಂಟೆಯ ವೇಳೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಟೀ ಶರ್ಟ್, ಜೀನ್ಸ್, ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಜೈಲು ಪ್ರವೇಶಿಸಿದ್ದಾರೆ. ದರ್ಶನ್ ಬರುತ್ತಿರವ ವಿಚಾರ ಮೊದಲೇ ತಿಳಿದಿದ್ದರಿಂದ ಜೈಲಿನ ರಸ್ತೆಯಲ್ಲಿ ಜನ ಸಾಲು ಗಟ್ಟಿ ನಿಂತಿದ್ದು ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಡೆಸಿಕೊಡುವ ಚಾಪ್ಟರ್ 2 ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಭಾಗಿಯಾಗಿ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ತನ್ನ ಮನದಾಳದ ದುಃಖಗಳನ್ನು ಹೊರ ಹಾಕಿ ಕಣ್ಣೀರಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಮೀರ್ ಖಾನ್ ಕೊಡಬೇಕಾದ ಸಮಯದಲ್ಲಿ ತಮ್ಮ ಮೂವರು ಮಕ್ಕಳಿಗೆ ಸಾಕಷ್ಟು ಸಮಯ ಮತ್ತು ಗಮನವನ್ನು ಕೊಡದಿದ್ದುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. “ಆ ಸಮಯದಲ್ಲಿ ಇರಾ ಡಿಪ್ರೆಶನ್ ಜೊತೆಗೆ ಹೋರಾಡುತ್ತಿದ್ದಳು. ಈಗ ಗುಣಮುಖಳಾಗಿದ್ದಾಳೆ. ಆದರೆ ಆಗ ಅವಳಿಗೆ ನನ್ನ ಅಗತ್ಯವಿತ್ತು. ಈಗ ಜುನೈದ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದಾನೆ. ಅವನು ಇದುವರೆಗೆ ನಾನಿಲ್ಲದೆ ತನ್ನ ಜೀವನವನ್ನು ನಡೆಸಿದ್ದಾನೆ. ಈಗ ತನ್ನ ಜೀವನದ ಬಹುಮುಖ್ಯ ಹೆಜ್ಜೆಯನ್ನು ತನ್ನ ವೃತ್ತಿಜೀವನದ ಕಡೆಗೆ ತೆಗೆದುಕೊಳ್ಳುತ್ತಿದ್ದಾನೆ. ಈ ಸಮಯದಲ್ಲಿ ನಾನು ಅವನೊಂದಿಗೆ ಇಲ್ಲದಿದ್ದರೆ, ಆಮೇಲೆ ಏನು ಪ್ರಯೋಜನ? ಆಜಾದ್‌ಗೆ ಈಗ 9 ವರ್ಷ. ಇನ್ನು 3 ವರ್ಷಗಳಲ್ಲಿ ಆತ ಹದಿಹರೆಯದವನಾಗುತ್ತಾನೆ. ಅವನ ಬಾಲ್ಯ ಮರಳಿ ಬರುವುದಿಲ್ಲ.” ಎಂದಿದ್ದಾನೆ ಆಮೀರ್.…
ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರು 73 ಲಕ್ಷ ರೂ ಮೌಲ್ಯದ ಬಿಎಂಡಬ್ಲು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಚಿನ್ ತೆಂಡೂಲ್ಕರ್ ಅವರ ಪ್ರಯತ್ನದಿಂದ ಈ ಕಾರನ್ನು ನೀಡಲಾಗಿದೆ. ಆಂಧ್ರಪ್ರದೇಶದ ತೆಲಂಗಾಣದಲ್ಲಿ ಹುಟ್ಟಿ ಬೆಳೆದ ಪಿವಿ ಸಿಂಧು. 2011 ರಿಂದ ದೇಶಕ್ಕಾಗಿ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇದುವರೆಗೆ 457 ಗೆಲುವು ಮತ್ತು 201 ಸೋಲುಗಳನ್ನು ಕಂಡಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಒಲಿಂಪಿಕ್ ಪದಕ ಮಾತ್ರವಲ್ಲದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಬೀಗಿದ್ದಾರೆ. ಪಿವಿ ಸಿಂಧು ಅವರ ಒಟ್ಟು ಆಸ್ತಿ ಮೌಲ್ಯ ರೂ.59 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ತೆಲುಗು ನಟ ನಾಗಾರ್ಜುನ ಉಡುಗೊರೆಯಾಗಿ ನೀಡಿದ ರೂ.73 ಲಕ್ಷ ಮೌಲ್ಯದ BMW ಕಾರು ಕೂಡ ಸೇರಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ…
73ನೇ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಯುವ ನಟರು ನಾಚುವಂತೆ ನಟಿಸುತ್ತಿದ್ದಾರೆ. ಆಕ್ಷಯ್ ಸಿನಿಮಾಗಳಲ್ಲಿ ರಜನಿ ಎತ್ತಿದ ಕೈ. ಈ ಮೂಲಕ ರಜನಿಕಾಂತ್ ಅನೇಕ ಕಲಾವಿಧರಿಗೆ ಮಾದರಿ ಆಗಿದ್ದಾರೆ. ಆದರೆ ಇದನ್ನು ಕೆಲವರು ನೆಗೆಟಿವ್ ಆಗಿ ತೆಗೆದುಕೊಂಡಿದ್ದಾರೆ. ಈ ವಯಸ್ಸಿನಲ್ಲಿ ರಜನಿಕಾಂತ್ ನಟಿಸುತ್ತಿರವುದಕ್ಕೆ ಉಳಿದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ರಜನಿಕಾಂತ್ ಬಗ್ಗೆ ಟೀಕಿಸಿರುವ ಡಿಎಂಕೆ ನಾಯಕ ದೊರೈ ಮುರುಗನ್ ಅವರು, ‘ರಜನಿಕಾಂತ್ ಅವರು ಹಲ್ಲು-ಕೂದಲು ಕಳೆದುಕೊಂಡ ಬಳಿಕವೂ ನಟನೆ ಮಾಡುತ್ತಿದ್ದಾರೆ. ರಜನಿಕಾಂತ್ ಅಂಥ ವಯಸ್ಸಾದ ನಟರು ಈಗಲೂ ನಟಿಸುತ್ತಿರುವುದಕ್ಕೆ ಯುವ ಕಲಾವಿದರಿಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಗುತ್ತಿಲ್ಲ’ ಎಂದಿದ್ದಾರೆ. ಅಂದ ಹಾಗೆ ರಜನಿಕಾಂತ್ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಎಂಕೆ ಹಿರಿಯ ನಾಯಕರ ಬಗ್ಗೆ ಮಾತನಾಡಿದ್ದರು. ಈ ವೇಳೆ ರಜನಿಕಾಂತ್ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಹೊಗಳಿದ್ದರು. ಪಕ್ಷದ ಹಳೆಯ ತಲೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ ಎಂದು ಸ್ಟಾಲಿನ್ ಗೆ ಹೇಳಿದ್ದರು. ಹಳೆಯ ನಾಯಕರನ್ನು ಹಳೆಯ ವಿದ್ಯಾರ್ಥಿಗಳಿಗೆ…
‘ಬಿಗ್ ಬಾಸ್ ಕನ್ನಡ ಸೀಸನ್ 10′ ಮುಗಿದು 7 ತಿಂಗಳು ಕಳೆದಿದೆ. ಇನ್ನೆನ್ನೂ ಸದ್ಯದಲ್ಲೇ ಹೊಸ ಸೀಸನ್ ಶುರುವಾಗಲಿದೆ. ಈ ಮಧ್ಯೆ ಬಿಗ್ ಬಾಸ್ ಸೀಸನ್ 10ರ ವಿಜೇತ ಮಹೇಶ್ ಕಾರ್ತಿಕ್ ಮನೆಗೆ ಬಿಗ್ ಬಾಸ್ ನಲ್ಲಿ ಗೆದ್ದ ಕಾರು ಬಂದು ಸೇರಿದೆ. ಈ ಬಗ್ಗೆ ಕಾರ್ತಿಕ್ ಮಹೇಶ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್‌ನಲ್ಲಿ ಗೆದ್ದ ಸ್ಪರ್ಧಿಗೆ 50 ಲಕ್ಷ ರೂ. ನಗದು, ವಿನ್ನರ್ ಟ್ರೋಫಿಯನ್ನು ನೀಡಿದ್ದರು. ಇದರ ಜೊತೆಗೆ ಮಾರುತಿ ಸುಜುಕಿ ಬ್ರೇಝಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ನರ್‌ಗೆ ನೀಡೋದಾಗಿ ಘೋಷಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಬಿಗ್ ಬಾಸ್ ತಂಡವು ಕಾರ್ತಿಕ್‌ಗೆ ಮಾರುತಿ ಸುಜುಕಿ ಬ್ರೇಝಾ ಕಾರನ್ನು ಹಸ್ತಾಂತರಿಸಿದ್ದಾರೆ. ಮಾರುತಿ ಸುಜುಕಿ ಬ್ರೇಝಾ ಕಾರಿನ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಅಂತು ಇಂತು ಬಂತು ಬಿಗ್ ಬಾಸ್ ಕಾರು’ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ. ಕಾರು ಬಂದಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.