ಬೆಂಗಳೂರು: ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಾಗೂ ಸ್ಪರ್ಶಿಸಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು ಎಂದು ಮಹಿಳೆ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಮರು ದಿನವೇ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತು ಮಾಡಿರುವ ಪೊಲೀಸ್ ಇಲಾಖೆ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದೆ. ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಾಗೂ ಸ್ಪರ್ಶಿಸಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು ಎಂದು ಮಹಿಳೆ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಮರು ದಿನವೇ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತು ಮಾಡಿರುವ ಪೊಲೀಸ್ ಇಲಾಖೆ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದೆ. ಏಪ್ರಿಲ್ 8 ರಂದು ನಡೆದಿದೆ…
Author: Prajatv Kannada
ಮೊಹಾಲಿ : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ಯ ಆರೆಂಜ್ ಕ್ಯಾಪ್ ಒಡೆಯನಾಗಿರುವ ಗಬ್ಬರ್ ಶಿಖರ್ ಧವನ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ ಅಜೇಯ 99 ರನ್ ಗಳ ಕಾಣಿಕೆ ನೀಡಿದರೂ, ತಂಡ 8 ವಿಕೆಟ್ ಗಳಿಂದ ಸೋಲುಂಡಿತ್ತು. ಪಂಜಾಬ್ ಪಡೆ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಈಗ ಗುರುವಾರ ಡಿಫೆಂಡಿಂಗ್ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಮತ್ತೆ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿ ಶುಭಾರಂಭ ಕಂಡಿದ್ದ ಗುಜರಾತ್ ಟೈಟನ್ಸ್, ನಂತರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ ನಿಂದ ಮಣಿಸಿತ್ತು. ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಜಿ.ಟಿ ಗೆಲುವಿನ ಹೊಸ್ತಿಲಲ್ಲಿ ನಿಂತಿತ್ತಾದರೂ ಅಂತಿಮ ಓವರ್ ನಲ್ಲಿ ಕೆಕೆಆರ್ ನ ಸ್ಫೋಟಕ ಆಟಗಾರ ರಿಂಕು ಸಿಂಗ್…
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಕಾಣಿಸಿಕೊಳ್ಳುವ ಮೂಲಕ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಕುತೂಹಲ ಮೂಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಿಷಬ್ ಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು, ಅದಕ್ಕೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ ಇದೀಗ ಸಿಎಂ ಜೊತೆ ಕಾಣಿಸಿಕೊಳ್ಳುವ ಮೂಲಕ ರಿಷಬ್ ಶೆಟ್ಟಿ ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅದೇ ದೇವಸ್ಥಾನದಲ್ಲೇ ನಟ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮತ್ತೊಬ್ಬ ಸ್ಟಾರ್ ಪ್ರಚಾರಕ ಬಿಜೆಪಿಗೆ ಬರಲಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಈಗಾಗಲೇ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಮೆಚ್ಚಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ. ಇದೀಗ ರಿಷಬ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಿಜೆಪಿ ಪರವಾಗಿ ರಿಷಬ್ ಅನೇಕ…
ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು ಮಾರ್ಚ್ ತಿಂಗಳಲ್ಲಿ 219 ವಿವಿಧ ಪೋಸ್ಟ್‌ಗಳ ಅರ್ಜಿಗೆ ಅಧಿಸೂಚಿಸಿತ್ತು. ಸದರಿ ಹುದ್ದೆಗಳ ಅರ್ಜಿಗೆ ಏಪ್ರಿಲ್ 17 ಕೊನೆ ದಿನವಾಗಿದ್ದು, ಆಸಕ್ತರು ಕೊನೆ ಕ್ಷಣದ ವರೆಗೆ ಕಾಯದೇ ಬೇಗ ಬೇಗ ಅರ್ಜಿ ಹಾಕಿರಿ. ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘವು ವಿವಿಧ 219 ಪೋಸ್ಟ್‌ಗಳ ಭರ್ತಿಗೆ ಕಳೆದ ತಿಂಗಳು ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೆರಳೆಣಿಗೆ ದಿನಗಳಷ್ಟೇ ಬಾಕಿ ಇದ್ದು, ಆಸಕ್ತರು ಏಪ್ರಿಲ್ 17 ರ ರಾತ್ರಿ 11.45 ಗಂಟೆವರೆಗೆ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಬಹುದು. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಪೋಸ್ಟ್‌ಗಳ ಹೆಸರು, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಹಾಕಿರಿ. ಹುದ್ದೆಗಳ ವಿವರ ಸಹಾಯಕ ವ್ಯವಸ್ಥಾಪಕರು (ಇಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್) : 01 ಸಹಾಯಕ ವ್ಯವಸ್ಥಾಪಕರು (ಮೆಕ್ಯಾನಿಕಲ್ ಇಂಜಿನಿಯರ್) : 01 ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್ ) :…
ನವದೆಹಲಿ: ಮಾನವೀಯ ನೆರವು ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (Volodymyr Zelensky) ಮನವಿ ಮಾಡಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ವಿದೇಶಾಂಗ ಸಚಿವ ಎಮಿನೆ ಝಫರೋವಾ ಮುಖಾಂತರ ಮೋದಿ ಅವರಿಗೆ ಪತ್ರ ರವಾನಿಸಿದ್ದಾರೆ. ಉಕ್ರೇನ್ ವಿದೇಶಾಂಗ ಸಚಿವೆ ಎಮಿನೆ ಅವರು ಭಾರತ ಪ್ರವಾಸದಲ್ಲಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ವಿನಂತಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಹೆಚ್ಚುವರಿ ಮಾನವೀಯ ನೆರವಿಗಾಗಿ ಉಕ್ರೇನ್ ವಿನಂತಿಸಿದೆ. ಉಕ್ರೇನ್‌ಗೆ ವರ್ಧಿತ ಮಾನವೀಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ಲೇಖಿ ಟ್ವೀಟ್ ಮಾತಿ ತಿಳಿಸಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು ನಿಲ್ಲಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಉಕ್ರೇನ್ ಸಚಿವರು ಒತ್ತಾಯಿಸಿದ್ದರು. ಮೋದಿ ಮತ್ತು ಇತರೆ ಉನ್ನತ ಅಧಿಕಾರಿಗಳು ಉಕ್ರೇನ್‌ಗೆ ಭೇಟಿ ನೀಡುವಂತೆ ಕೋರಿದ್ದರು. ಆದರೇ ಭಾರತದ ಪ್ರೆಸಿಡೆನ್ಸಿ ಅಡಿಯಲ್ಲಿ ಸೆಪ್ಟೆಂಬರ್ G20 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ…
ಬೆಳಗಾವಿ: ಜಿಲ್ಲೆಯಲ್ಲಿ ಟಿಕೆಟ್ ವಂಚಿತ ಬಿಜೆಪಿ ಆಕಾಂಕ್ಷಿಗಳ ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧೆಯ ಪೈಪೋಟಿ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ.ಅಥಣಿ ಕ್ಷೇತ್ರದಲ್ಲಿ ಬಂಡಾಯದ ಸ್ಪಷ್ಟ ಸಂದೇಶ ರವಾನಿಸಿರುವ ಲಕ್ಷ್ಮಣ ಸವದಿ ಮನವೊಲೈಸಲು ಬಿಜೆಪಿ ನಾಯಕರು ಸವದಿ ಮನೆಗೆ ಪರೇಡ್ ಆರಂಭಿಸಿದ್ದಾರೆ. ಗುರುವಾರ ಬೆಳಗ್ಗೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿ ಚರ್ಚಿಸಿದ ಅವರು ಪಕ್ಷ ಬಿಡದಂತೆ ಸಲಹೆ ನೀಡುವ ಪ್ರಯತ್ನ ನಡೆಸಿದ್ದಾರೆ. ನಾಯಕರ ಮಾತುಗಳನ್ನು ನಿಧಾನವಾಗಿ ಆಲಿಸಿ ಸವದಿ, ಪಕ್ಷದ ನಾಯಕರ ನಡವಿಳಿಕೆ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಅದಕ್ಕೆ ಕೆಲವಾರು ಸಮಜಾಯಿಷಿಗಳು ಹಾಗೂ ಭವಿಷ್ಯದಲ್ಲಿ ಈ ತಪ್ಪನ್ನು ಸರಿಪಡಿಸುವುದಾಗಿ ಹಲವಾರು ನಾಯಕರು ಸವದಿಯವರಿಗೆ ಭರವಸೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಲಕ್ಷ್ಮಣ ಸವದಿಯವರು ತಮ್ಮ ಅಭಿಮಾನಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ನಾಯಕರಿಗೆ ಮನದಟ್ಟು ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಗಾಗಿ, ಲಕ್ಷ್ಮಣ ಸವದಿ ಅವರು ಏ. 13ರಂದು ತಮ್ಮ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಡೆಸಿ ಜನಾದೇಶ ಪಡೆದು ಸ್ಪರ್ಧೆ…
ದೊಡ್ಡಬಳ್ಳಾಪುರ: ಪ್ರತಿ ರಾಜ್ಯಗಳ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವೇಳೆ ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ, ಸಾಮಾಜಿಕ ನ್ಯಾಯದೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪಕ್ಷ ಬಿಜೆಪಿಯಾಗಿದೆ. ಈ ಬಾರಿ ದೇಶಕ್ಕೆ ಕರ್ನಾಟಕ ಮಾಡೆಲ್ ರೀತಿಯಲ್ಲಿ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ ಎಂದು ಕ್ಷೇತ್ರದ ಅಭ್ಯರ್ಥಿ ಧೀರಜ್ ಮುನಿರಾಜು ತಿಳಿಸಿದರು. ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷದ ವರಿಷ್ಠರು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಪಕ್ಷದ ಸಂಸದೀಯ ಮಂಡಳಿಗೆ ಧನ್ಯವಾದ. ಕಾರ್ಯಕರ್ತರೆ ಸೃಷ್ಟಿ ಮಾಡಿದ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗಿದ್ದೇನೆ. ಶೀಘ್ರವಾಗಿ ಚುನಾವಣಾ ಕಚೇರಿಯನ್ನ ತೆರೆದು ಪ್ರಚಾರ ಆರಂಭ ಮಾಡಲಿದ್ದೇವೆ. ಈಗಾಗಲೇ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮೂಲಕ ಪಕ್ಷಕ್ಕೆ ಶಕ್ತಿ ಬಂದಿದೆ. ಒಂದೊಂದು ಬೂತ್ ಗೆ 36 ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು. ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸಹಿತರಾಷ್ಟ್ರೀಯ…
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮುನ್ನೆಲೆಗೆ ಬಂದಿದೆ. ಚಂದ್ರಶೇಖರ ಗೋಕಾಕಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಚಂದ್ರಶೇಖರ ಗೋಕಾಕ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಹೈ ಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದ್ರಶೇಖರ ಗೋಕಾಕ ಅಭಿಮಾನಿಗಳು, ರಸ್ತೆ ಬಂದ್ ಮಾಡಿ ಪ್ರೋಟೆಸ್ಟ್ ಮಾಡಿದ್ದಾರೆ. ರಸ್ತೆಯಲ್ಲಿಯೇ ಕುಳಿತು, ಗೋಕಾಕ ಭಾವಚಿತ್ರ ಹಿಡಿದು ಟಿಕೆಟ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದು, ಚಂದ್ರಶೇಖರ್ ಗೋಕಾಕ ಸಂಘ ಪರಿವಾರದಿಂದ ಬಂದವರು. ಟಿಕೆಟ್ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಅವರು ಪರಾಭವಗೊಂಡರು, ಇದೊಂದು ಬಾರಿಗೆ ಚಂದ್ರಶೇಖರ ಗೋಕಾಕ ಅವರಿಗೆ ನೀಡಬೇಕು. ಬಿಜೆಪಿ ಹೈಕಮಾಂಡ ಹಣ ಇದ್ದ ಡಾ.ಕ್ರಾಂತಿ ಕಿರಣ ಅವರಿಗೆ ಟಿಕೆಟ್ ನೀಡಿದೆ. ಅದನ್ನು ಬದಲಾವಣೆ ಮಾಡಿ ಚಂದ್ರಶೇಖರ ಗೋಕಾಕ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಡ ಹಾಕಿದ್ದಾರೆ.
ಬೆಂಗಳೂರು: ಸೈಲೆಂಟ್ ಸುನೀಲ್ಗೆ (Silent Sunil) ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಗಲಾಟೆ ಮಾಡಲಾಗಿದೆ. ಭಾಸ್ಕರ್ ರಾವ್ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಚಾಮರಾಜಪೇಟೆ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಅಂತ ಗಲಾಟೆ ಮಾಡಲಾಗಿದೆ. ಒಂದು ಕಾಲದಲ್ಲಿ ರೌಡಿಸಂ ಜಗತ್ತಲ್ಲಿ ಸದ್ದು ಮಾಡಿದ್ದವರು ಇದೀಗ ಏಕಾಏಕಿ ಸಮಾಜ ಸೇವೆ ಮಂತ್ರ ಜಪಿಸಿ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಅದರಲ್ಲೂ ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನೀಲ ಸೈಲೆಂಟ್ ಆಗಿಯೇ ಪಾಲಿಟಿಕ್ಸ್ಗೆ ಪ್ರವೇಶಿಸಲು ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಯ ತಯಾರಿ ನಡೆಸಿದ್ದರು. ಸೈಲೆಂಟ್ ಸುನೀಲ್ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಸುತ್ತಲು ರೌಡಿಗಳನ್ನು ಹಾಕಿಕೊಂಡು ತಿರುಗುತಿದ್ದವರು ಎಂಎಲ್ಎ, ಎಂಪಿಗಳೊಂದಿಗೆ ತಿರುಗುತ್ತಿದ್ದರು. ತಾನೊಬ್ಬ ರೌಡಿ ಎನ್ನುವ ಪಟ್ಟ ಹೊಂದಿದ್ದರೆ ಸಮಾಜದಲ್ಲಿ ಕೊನೆಯತನಕವೂ ರೌಡಿಯಾಗಿಯೇ ಇರಬೇಕಾಗುತ್ತದೆ. ಅದರೆ ಅದೇ ರೌಡಿ ಎನ್ನುವ ಹಣೆಪಟ್ಟಿಯ ಬದಲು ರಾಜಕೀಯ ನಾಯಕ ಎಂದು ಬದಲಾದರೆ ಯಾವುದೇ ಆತಂಕ ಇರುವುದಿಲ್ಲ ಎನ್ನುವ ನಿಲುವಿಗೆ ಬಂದಿರುವಂತಿತ್ತು. ಆದರೆ ಯಾವಾಗ ಸುನೀಲ್…
ಬೆಂಗಳೂರು: ಇಂಡಿಯಾ ಮನಿ ಕಂಪನಿಯ ಸಿಇಓ ಆಗಿದ್ದಂತ ಸುಧೀರ್ ಹಾಗೂ ಅವರೊಂದಿಗೆ ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಇಂಡಿಯಾ ಮನಿ ಸಿಇಒ ಬಂಧನವಾಗಿದೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಇಂಡಿಯಾ ಮನಿ ಆಪ್ ಸಿಇಓ ಸುಧೀರ್ ಸೇರಿದಂತೆ ಹಲವರ ವಿರುದ್ಧ 24 ಮಂದಿಯಿಂದ ವಂಚನೆ ದೂರು ದಾಖಲಾಗಿತ್ತು. ದೂರಿನಲ್ಲಿ ಇಂಡಿಯಾ ಮನಿ ಕಂಪನಿಗೆ ಸೇರಿದ್ದಂತ ಫ್ರೀಡಂ ಆಪ್ ಇನ್ಸ್ಟಾಲ್ ಮಾಡಿಕೊಂಡ್ರೇ, ಮಾಡಿಸಿದ್ರೇ ಹಣ ಗಳಿಸುವಂತೆ ಉದ್ಯೋಗಿಳಿಗೆ ಆಮಿಷ ಒಡ್ಡಿ, ಲಕ್ಷಾಂತರ ಮಂದಿಯಲ್ಲಿ ಆಪ್ ಇನ್ ಸ್ಟಾಲ್ ಮಾಡಿಸಲಾಗಿತ್ತು. ಆದ್ರೇ ಹೀಗೆ ಆಪ್ ಗಳನ್ನು ಉದ್ಯೋಗಿಗಳು ವಿವಿಧ ಜನರಿಗೆ, ತಮ್ಮ ಸಂಬಂಧಿಕರಿಗೆ ಇನ್ ಸ್ಟಾಲ್ ಮಾಡಿಕೊಳ್ಳೋದಕ್ಕೆ ಸೂಚಿಸಿ, ಮಾಡಿಸಿದ್ದರೂ ನಿಗದಿ ಪಡಿಸಿದ್ದಂತ ಹಣವನ್ನು ನೀಡದೇ ಇಡಿಯಾ ಮನಿ ಸಿಇಓ ಸುಧೀರ್ ವಂಚಿಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಮೊದಲ ಪ್ರಕರಣದಲ್ಲಿ ಸುಧೀರ್ ಜಾಮೀನು ಪಡೆದಿದ್ದರು. ಆದ್ರೇ ಬೆಂಗಳೂರು ದಕ್ಷಿಣ ವಿಭಾಗದ…