ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲಿಯೇ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯ (ಬಿಎಸ್ ಸತ್ಯನಾರಾಯಣ) ಅವರು ನಿರ್ಧರಿಸಿದ್ದು, ಬಿಜೆಪಿ ನಾಯಕರಿಗೆ ಮತ್ತೊಂದು ತಲೆಬಿಸಿ ಶುರುವಾಗಿದೆ. ಬಿಜೆಪಿಯ ಟಿಕೆಟ್ ಘೋಷಣೆಯ ಬೆನ್ನಲ್ಲಿಯೇ ಹಲವು ಕ್ಷೇತ್ರಗಳಂತೆ ಬಸವನಗುಡಿ ಬಿಜೆಪಿಯಲ್ಲಿಯೂ ಅಸಮಾಧಾನ ಭುಗಿಲೆದ್ದಿದೆ. ಬಸವನಗುಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇಲ್ಲಿ ಕಟ್ಟೆ ಸತ್ಯ ಅವರು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮತ್ತೊಂದು ಬಾರಿ ಬಿಜೆಪಿ ಹೈಕಮಾಂಡ್ ರವಿ ಸುಬ್ರಹ್ಮಣ್ಯ ಅವರಿಗೆ ಮಣೆ ಹಾಕಿದೆ. ಇದರಿಂದ ಬೇಸತ್ತಿರುವ ಕಟ್ಟೆ ಸತ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಸರ್ವಾಧಿಕಾರ ಧೋರಣೆ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ವಂಶ ಆಡಳಿತದ ವಿರುದ್ಧ, ಸ್ವಾರ್ಥದ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಕಟ್ಟೆ ಸತ್ಯನಾರಾಯಣ ಅವರು 1990ರಲ್ಲಿ ಮೊದಲು…
Author: Prajatv Kannada
ತೆಲುಗು ಸಿನಿಮಾ ರಂಗ ಸ್ಟಾರ್ ನಿರ್ಮಾಪಕ ದಿಲ್ ರಾಜು ಮೊನ್ನೆಯಷ್ಟೇ ಟ್ವೀಟ್ ಮೂಲಕ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬೆನ್ನಲ್ಲೆ ಮತ್ತೊಂದು ಸಿಹಿ ಸುದ್ದಿಯನ್ನು ದಿಲ್ ರಾಜು ನೀಡಿದ್ದಾರೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದಾಗಿ ದಿಲ್ ರಾಜು ಘೋಷಿಸಿದ್ದಾರೆ. ಆದರೆ ಈ ಸಿನಿಮಾ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಮುಗಿದ ಬಳಿಕ ಆರಂಭವಾಗಲಿದೆ ಎಂದಿದ್ದಾರೆ. ಯಶ್ ಅವರ 20ನೇ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾದ ನಿರ್ದೇಶಕರು, ಕಥೆ ಬಗ್ಗೆ ಏನೂ ಹೇಳದ ರಾಜು ಕೇವಲ ನಿರ್ಮಾಣದ ಹೊಣೆ ಹೊತ್ತಿರುವ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದರು. ಇನ್ನೂ ಯಶ್ 19ನೇ ಸಿನಿಮಾವನ್ನು ಮಾಡಬೇಕಾಗಿರುವುದರಿಂದ ಹೆಚ್ಚಿನ ಮಾಹಿತಿಯನ್ನು ರಾಜು ಬಿಟ್ಟುಕೊಡಲಿಲ್ಲ. ಆದರೆ, ಪ್ರಶಾಂತ್ ಸಿನಿಮಾ ಬಗ್ಗೆ ಹಲವು ಅಚ್ಚರಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾ ಮಾಡಲಿದ್ದಾರೆ. ಈ…
ಮಂಬೈ: ನಾಯಕ ರೋಹಿತ್ ಶರ್ಮಾ (Rohit Sharma) ಭರ್ಜರಿ ಅರ್ಧ ಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 2023 ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಆದರೆ ಡೆಲ್ಲಿ ಸತತ 4ನೇ ಸೋಲಿನೊಂದಿಗೆ ಸೋಲಿನೊಂದಿಗೆ ಮುಖಭಂಗ ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.4 ಓವರ್‌ಗಳಲ್ಲಿ 172 ರನ್ ಗಳಿಸಿ ಸರ್ವಪತನ ಕಂಡಿತು. 173 ರನ್ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 45 ಎಸೆತಗಳಲ್ಲಿ 65 ರನ್ (6 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ 31 ರನ್ ಹಾಗೂ ತಿಲಕ್ ವರ್ಮಾ 29 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ…
ಬೆಂಗಳೂರು : ಲಖನೌ ಸೂಪರ್ ಜಯಂಟ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 212 ರನ್‌ಗಳ ಬೃಹತ್ ಮೊತ್ತ ದಾಖಲಿಸಿಯೂ 1 ವಿಕೆಟ್ ಅಂತರದಲ್ಲಿ ಸೋಲುಂಡಿತು. ಆರ್‌ಸಿಬಿ ತಂಡಕ್ಕೆ ಈ ಸೋಲು ನುಂಗಲಾರದ ತುತ್ತಾಗಿರುವ ಸಂದರ್ಭದಲ್ಲಿ ಮಾತಿಗಿಳಿದಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸೈಮನ್ ಡುಲ್, ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸೋಲನುಭವಿಸುವುದಕ್ಕೆ ವಿರಾಟ್ ಕೊಹ್ಲಿ ಪರೋಕ್ಷವಾಗಿ ಕಾರಣವಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ವೈಯಕ್ತ ದಾಖಲೆಗಳ ಕಡೆಗೆ ಗಮನ ಕೊಟ್ಟ ವಿರಾಟ್ ಕೊಹ್ಲಿ ಅವರ ಆಟವನ್ನು ಕಟುವಾಗಿ ಟೀಕೆ ಮಾಡಿದ್ದಾರೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 61 ರನ್‌ಗಳ ಕೊಡುಗೆ ಕೊಟ್ಟರು. ಅಷ್ಟೇ ಅಲ್ಲದೆ ಓಪನರ್ ಫಾಫ್ ಡು’ಪ್ಲೆಸಿಸ್ ಜೊತೆಗೂಡಿ ಮೊದಲ ವಿಕೆಟ್‌ಗೆ 96 ರನ್‌ಗಳ ಜೊತೆಯಾಟವನ್ನೂ ಆಡಿದರು. ಎಚ್ಚರಿಕೆಯ ಆರಂಭದ ಬಳಿಕ ಆರ್‌ಸಿಬಿ ತಂಡದ ರನ್ ಗಳಿಕೆಯ ವೇಗಕ್ಕೆ ಕಿಚ್ಚು…
ಇಂದು ವರನಟ ಡಾ.ರಾಜ್ ಕುಮಾರ್ ಅವರ 17ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸಮಾಧಿಗೆ ಜನ ಸಾಗರವೇ ಹರಿದು ಬರುತ್ತಿದೆ. ಪುಣ್ಯತಿಥಿ ಹಿನ್ನೆಲೆಯಲ್ಲಿ ನಟರಾದ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಯುವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ಅನೇಕ ಸದಸ್ಯರು ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ರಾಜ್ ಕುಮಾರ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಜೊತೆಗೆ ಪುನೀತ್ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸ್ಮಾರಕದ ಮುಂದೆ ಅಭಿಮಾನಿಗಳು ರಕ್ತದಾನ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ, ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು.
ಇತ್ತೀಚೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿರುವ ಕಬ್ಜ ಸಿನಿಮಾ ಒಟಿಟಿಗೆ ಎಂಟ್ರಿಕೊಡ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ತೆರೆಕಂಡ ಕಬ್ಜ ಸಿನಿಮಾವನ್ನು ನೋಡಲು ಮಿಸ್ ಮಾಡಿಕೊಂಡವರು ಇದೀಗ ಚಿತ್ರವನ್ನು ಒಟಿಟಿಯಲ್ಲಿ ಮನೆಯಲ್ಲೇ ಕೂತು ನೋಡಬಹುದಾಗಿದೆ ಏಪ್ರಿಲ್ 14ರಂದು ಒಟಿಟಿಗೆ ‘ಕಬ್ಜ’ ಸಿನಿಮಾ ಎಂಟ್ರಿ ನೀಡಲಿದೆ. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಈ ಚಿತ್ರ ಸ್ಟ್ರೀಮ್ ಆಗಲಿದ್ದು, ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಶ್ರೀಯಾ ಶರಣ್, ಮುರಳಿ ಶರ್ಮಾ, ಸುನೀಲ್ ಪುರಾಣಿಕ್ ಮುಂತಾದವರು ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಮಾರ್ಚ್ 17ರಂದು ‘ಕಬ್ಜ’ ಬಿಡುಗಡೆ ಆಗಿದ್ದ ಕಬ್ಜ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡವರು ಇದೀಗ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಅವರು ಅಂಡರ್ವರ್ಲ್ಡ್…
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಗನ್ ಮ್ಯಾನ್ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ಮಾಪಕ ಹಾಗೂ ಸುದೀಪ್ ಆಪ್ತ ಜಾಕ್ ಮಂಜು ಮನವಿ ಸಲ್ಲಿಸಲು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಪೊಲೀಸ್ ಅಧಿಕಾರಿಗಳು ಮೀಟಿಂಗ್ ನಲ್ಲಿ ಇದ್ದ ಕಾರಣದಿಂದಾಗಿ ಜಾಕ್ ಮಂಜು ವಾಪಸ್ಸಾಗಿದ್ದಾರೆ. ಜೊತೆಗೆ ಖಾಸಗಿ ವಿಡಿಯೋ ಬೆದರಿಕೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟಿಗೆ ಮಂಜು ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಅಂದೇ ಸುದೀಪ್ ಅವರಿಗೆ ಖಾಸಗಿ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದು, ಈ ಸಂಬಂಧ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಪತ್ರಗಳ ಕುರಿತಂತೆ ದೂರು ದಾಖಲಾದ…
ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಸದ್ಯ ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿದ್ದಾರೆ. ಹೊಸ ಬಗೆಯ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಮದುವೆ ಕುರಿತು ಮಾತನಾಡಿದ್ದಾರೆ. ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನಟಿ ತಿಳಿಸಿದ್ದಾರೆ. 2007ರಲ್ಲಿ ತೆರೆಕಂಡ ‘ಸಜನಿ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಶರ್ಮಿಳಾ ಮಾಂಡ್ರೆ ಬಳಿಕ ನವಗ್ರಹ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನ ಹೊತ್ತಿದ್ದು, ಇದೀಗ ಮದುವೆ ಮಾತನಾಡಿದ್ದಾರೆ. ನನಗೆ ಯಾವುದೇ ಮದುವೆಗೆ ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ…
ಬಾಲಿವುಡ್ ಹ್ಯಾಂಡ್ ಸಮ್ ಹೀರೋ ನಟ ಅರ್ಜುನ್ ಕಪೂರ್ ಸಿನಿಮಾಗಳಿಗಿಂತ ಹೆಚ್ಚಾಗಿ ಮಲೈಕಾ ಅರೋರಾ ಜೊತೆಗಿನ ರಿಲೇಷನ್‌ಶಿಪ್ ವಿಷ್ಯ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ಸಿನಿಮಾ ಕುಟುಂಬದಲ್ಲಿ ಜನಿಸಿದ್ರು ಅರ್ಜುನ್ ಕಪೂರ್ ಗೆ ಹೇಳಿಕೊಳ್ಳುವಂತ ಯಶಸ್ಸು ಸಿಗಲಿಲ್ಲ. ಆದರೆ ಈ ಮಧ್ಯೆ ಅರ್ಜುನ್ ಕಪೂರ್ ಬಡ ಹುಡುಗಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್ ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ. ಸದ್ಯ ಅನಿಶಾಗೆ 11 ವರ್ಷ ವಯಸ್ಸಾಗಿದ್ದು, ಆಕೆಗೆ 18ರ ವರ್ಷ ಆಗುವ ತನಕ ಕ್ರಿಕೆಟ್ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್ ಕಪೂರ್ ಪೂರೈಸುವುದಾಗಿ ತಿಳಿಸಿದ್ದಾರೆ. ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ…
ಕಾಲಿವುಡ್‌ನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚಿಗೆ ಸೂಪರ್ ಸ್ಟಾರ್ ಅಜಿತ್ ಸಿನಿಮಾಗೆ ನಿರ್ದೇಶನ ಮಾಡೋದಾಗಿ ಅನೌನ್ಸ್ ಮಾಡಿದ್ದರು. ಆದರೆ ಶೂಟಿಂಗ್ ಆರಂಭಕ್ಕೂ ಮುನ್ನವೇ ವಿಘ್ನೇಶ್ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಮಾಡಿ ಅಂದಿದ್ದಕ್ಕೆ ಚಿತ್ರದಿಂದ ಹೊರನಡೆದಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕ ವಿಘ್ನೇಶ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ನಿರ್ಮಾಪಕರಿಗೆ ಕಥೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತಂತೆ, ಸಣ್ಣ ಪುಟ್ಟ ಬದಲಾವಣೆ ಮಾಡಬಹುದು. ಆದರೆ ಸೆಕೆಂಡ್ ಹಾಫ್ ಫುಲ್ ಬದಲಾಯಿಸುವುದಕ್ಕೆ ಆಗಲ್ಲ ಎಂದು ವಿಘ್ನೇಶ್ ಪ್ರಾಜೆಕ್ಟ್ ಕೈ ಬಿಡುವ ಮನಸ್ಸು ಮಾಡಿದ್ದಾರೆ. ಸಹಿ ಮಾಡಿದ ಮೇಲೆ ನಮ್ಮ ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಬೇಕು ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಅಂದರೆ ಯೋಚನೆ ಮಾಡಬಹುದಿತ್ತು. ಆದರೆ ಸೆಕೆಂಡ್ ಹಾಫ್ ಸಂಪೂರ್ಣ ಬದಲಾಯಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಸೆಕೆಂಡ್ ಹಾಫ್‌ನಲ್ಲಿ ಬರುವುದೇ ಮುಖ್ಯವಾದ ಕಥೆ ಅದೇ ಬೇಡ ಅಂದರೆ ಹೇಗೆ? ನನ್ನ ಕಥೆಗೆ ಬೆಲೆ ಎಲ್ಲಿದೆ ಎಂದು ವಿಘ್ನೇಶ್ ಪ್ರಶ್ನಿಸಿದ್ದಾರೆ.…