Author: Prajatv Kannada

ನವದೆಹಲಿ: ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್‌ನ ಆಪ್ತ ಸಹಾಯಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋಮವಾರ ಬಂಧಿಸಲಾಗಿದೆ. ಕಳೆದ ತಿಂಗಳು ಜಲಂಧರ್‌ನಲ್ಲಿ ಪೋಲೀಸರ ಬಲೆಯಿಂದ ಅಮೃತ್‌ಪಾಲ್ ಸಿಂಗ್ ಹಾಗೂ ಪಪ್ಪಲ್ಪ್ರೀತ್ ಸಿಂಗ್ ನಾಟಕೀಯವಾಗಿ ತಪ್ಪಿಸಿಕೊಂಡಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಹಿಡಿದು ಸ್ಥಳ ಬದಲಾವಣೆ ಮಾಡುತ್ತಿದ್ದರು. ಇದೀಗ ಪಂಜಾಬ್ ಪೊಲೀಸರ ಗುಪ್ತಚರ ಘಟಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಬಂಧಿಸಿದೆ. ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತನ್ನ ಗುರುತು ಯಾರಿಗೂ ಸಿಗದಂತೆ ವೇಷಗಳನ್ನು ಬದಲಿಸಿಕೊಂಡು, ಪಂಜಾಬ್ ಮಾತ್ರವಲ್ಲದೇ ದೆಹಲಿಯಲ್ಲಿಯೂ ತಿರುಗಾಡಿರುವುದು ಕೆಲ ದಿನಗಳ ಹಿಂದೆ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿತ್ತು. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು 3 ವಾರ ಆಗಿದ್ದರೂ ಇಲ್ಲಿಯವರೆಗೆ ಅಧಿಕಾರಿಗಳಿಂದ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಇದೀಗ ಅಮೃತ್‌ಪಾಲ್ ಸಿಂಗ್‌ನ ಪತ್ತೆಗಾಗಿ ಪಂಜಾಬ್ ಪೊಲೀಸರಿಗೆ ಏಪ್ರಿಲ್ 14 ರಂದು ಬೈಸಾಖಿ ಆಚರಣೆ ವರೆಗೆ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಇದೀಗ ಪಪ್ಪಲ್ಪ್ರೀತ್ ಸಿಂಗ್‌ನ ಬಂಧನವಾಗಿದ್ದು, ಈಗಲಾದರೂ ಅಮೃತ್‌ಪಾಲ್…

Read More

ಇಟಾನಗರ: ಅರುಣಾಚಲ ಪ್ರದೇಶ ಭೇಟಿಗೆ ಚೀನಾ (China) ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದರು. ಅರುಣಾಚಲ ಪ್ರದೇಶದ (Arunachal Pradesh) ಗಡಿ ಗ್ರಾಮವಾದ ಕಿಬಿತೂದಿಂದ ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಕಬಳಿಸಲು ಸಾಧ್ಯವಿಲ್ಲ. 2014ರ ಮೊದಲು, ಇಡೀ ಈಶಾನ್ಯ ಪ್ರದೇಶವು ಪ್ರಕ್ಷುಬ್ಧ ಪ್ರದೇಶವೆಂದು ಕರೆಯಲ್ಪಟ್ಟಿತು. ಆದರೆ ಕಳೆದ 9 ವರ್ಷಗಳಲ್ಲಿ, ಪ್ರಧಾನಿ ಮೋದಿಯವರ ಯೋಜನೆಯಿಂದಾಗಿ, ಈಶಾನ್ಯವನ್ನು ಈಗ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು. ಐಟಿಬಿಪಿ ಯೋಧರು ಹಾಗೂ ಸೇನೆಯು ನಮ್ಮ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರಣದಿಂದ ಇಂದು ದೇಶದ ಜನರು ಅವರ ಮನೆಗಳಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ ಎಂದು ಇಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದು ಸೇನೆ ಹಾಗೂ ಗಡಿ ಪೊಲೀಸರನ್ನು ಶ್ಲಾಘಿಸಿದರು. ಕಳೆದ ವಾರ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ…

Read More

ಲಕ್ನೋ: ಟಿವಿ ಧಾರವಾಹಿ ರಾಮಾಯಣದ (Ramayana) ಡಬ್ಬಿಂಗ್ ವೀಡಿಯೋವನ್ನು ಬಾರ್‌ನ (Bar) ದೊಡ್ಡ ಪರದೆಯಲ್ಲಿ ಪ್ಲೇ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದ (Noida) ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿರುವ ಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್‍ನಲ್ಲಿ ಈ ಘಟನೆ ನಡೆದಿದೆ. ಶ್ರೀರಾಮ ಹಾಗೂ ರಾವಣನ ಪಾತ್ರಗಳಿಗೆ ಆಧುನಿಕ ಸಂಗೀತವನ್ನು ನೀಡುವ ಮೂಲಕ ಪ್ಲೇ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸ್ (Police) ಅಧಿಕಾರಿಯೊಬ್ಬರು ಮಾತನಾಡಿ, ವಿಷಯ ತಿಳಿದ ತಕ್ಷಣ ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ರೆಸ್ಟೋರೆಂಟ್‍ನ ಮ್ಯಾನೇಜರ್ ಎಂದು ಗುರುತಿಸಲಾಗಿದೆ.

Read More

ಮುಂಬೈ: ಮೊಬೈಲ್ (Mobile) ಬಳಸಲು ಅನುಮತಿ ನೀಡದ್ದಕ್ಕೆ ಬೇಸರಗೊಂಡ ಬಾಲಕಿಯೊಬ್ಬಳು (Girl) 7 ಅಂತಸ್ತಿನ ಕಟ್ಟಡದಿಂದ (Building) ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ನಡೆದಿದೆ. ಪಶ್ಚಿಮ ಉಪನಗರದ ಮಾಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಬಾಲಕಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಾಲಕಿಯ ಕುಟುಂಬಸ್ಥರು ಆಕೆಯ ಮೊಬೈಲ್ ಅನ್ನು ಕಿತ್ತುಕೊಂಡಿದ್ದರಿಂದ ಬೇಸರಗೊಂಡಿದ್ದಳು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Read More

ಹುಬ್ಬಳ್ಳಿ : ಭವಾನಿ ರೇವಣ್ಣ ಅವರನ್ನು ಕೆಣಕಯತ್ತಿರೋದು ನಾನಲ್ಲಅವರು ಹಾಸನದಲ್ಲಿ ನಿಂತ್ರೂ ಗೆಲ್ಲಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಟಾಂಗ್ ಕೊಟ್ಟ ಎಚ್.ಡಿಕೆ. ದೇವೇಗೌಡರ ಕುಟುಂಬ ಒಡೆಯಲು ಕೆಲ ಶಕುನಿಗಳು ಯತ್ನಿಸ್ತಿದಾರೆ ಅದಕ್ಕೆ ರೇವಣ್ಣ ಬಲಿಯಾಗ್ತಿದಾರೆ ಹಾಸನದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಅವರ ನಿರ್ಧಾರ ಅಂತಿಮ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಭವಾನಿಯವರು ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಗೆಲ್ಲಲ್ಲಾ ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ ಎರಡು ಕ್ಷೇತ್ರಗಳಲ್ಲಿ ರೇವಣ್ಣ ಟಿಕೇಟ್ ಕೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಶಕುನಿಗಳು ನಮ್ಮ ಕುಟುಂಬ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾಭಾರತ ಕಾಲದಿಂದ ನಡೆದು ಬಂದಿದ್ದೆ ಈಗಲೂ ನಡೆಯುತ್ತಿದೆ ಈಗಲೂ ಅದೇ ರೀತಿಯ ಕುರುಕ್ಷೇತ್ರ ನಡೀತಿದೆ ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಕ್ಲೂ ನೀಡಿದ್ದೆ ಕುಟುಂಬಕ್ಕೆ ಹಾಸನ ಟಿಕೆಟ್…

Read More

ಹಾಸನ: ಗುಜರಾತ್ ಮೂಲದ ಅಮುಲ್ (Amul) ಹಾಲು ಉತ್ಪನ್ನಗಳನ್ನು ವಿರೋಧಿಸಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೋಮವಾರ ನಂದಿನಿ (Nandini) ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿ ಅದನ್ನು ಹಂಚಿದ್ದರು. ಇದೀಗ ಹಾಲು ಖರೀದಿ ಮಾಡಿ ಹಂಚಿರುವ ಡಿಕೆಶಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಬಿಸಿ ತಟ್ಟಿದೆ. ಸೋಮವಾರ ಡಿಕೆ ಶಿವಕುಮಾರ್ ಅವರು ಹಾಸನದ (Hassan) ಮಹಾರಾಜ ಪಾರ್ಕ್ ಬಳಿಯ ನಂದಿನಿ ಡೈರಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿದ್ದರು. ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ಹಾಲಿನ ಉತ್ಪನ್ನಗಳನ್ನು ಡಿಕೆಶಿ ಖರೀದಿ ಮಾಡಿದ್ದರು. ಇದೀಗ ಸಾರ್ವಜನಿಕ ದೂರು ವಿಭಾಗದ ರಾಜ್ಯ ನೋಡಲ್ ಅಧಿಕಾರಿಯಿಂದ ಹಾಸನ ಜಿಲ್ಲಾ ಎಂಸಿಎಂಸಿ ತಂಡಕ್ಕೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಡಿಕೆಶಿ ನಂದಿನಿ ಹಾಲನ್ನು ಹಂಚುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ವೀಡಿಯೋವನ್ನಾಧರಿಸಿ ಪರಿಶೀಲನೆ ಮಾಡಿ ವರದಿ ನೀಡಲು ನಿರ್ದೇಶಿಸಲಾಗಿದೆ. ಹಾಲು ಖರೀದಿ ಮಾಡಿ…

Read More

ಚಾಮರಾಜನಗರ: ಬಂಡೀಪುರ ಸಫಾರಿ ಬಳಿಕ ಪ್ರಧಾನಿ ಮೋದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಖ್ಯಾತಿಯ ಬೊಮ್ಮನ್- ಬೆಳ್ಳಿ (Bomman- Belly) ದಂಪತಿ ಹಾಗೂ ಕೆಲ ಮಾವುತರ ಕಷ್ಟ ಸುಖ ಆಲಿಸಿದ್ದರು. ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ (Congress), ಮೋದಿ (Narendra Modi) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ. ಮಾವುತರಿಗೆ ಮೋದಿ ಒಂದು ಲಕ್ಷ ರೂ ಹಣ ಕೊಟ್ಟಿದ್ದಾರೆಂದು ದೂರಿದೆ. ಆದರೆ ಈ ಆರೋಪವನ್ನು ಅಲ್ಲಗಳೆಯುವ ಮೂಲಕ ಬೊಮ್ಮನ್ ವಿವಾದಕ್ಕೆ ತೆರೆ ಎಳೆದಿದ್ದಾರೆ. ಬೊಮ್ಮನ್ ಹೇಳಿದ್ದೇನು..?: ಕಾಂಗ್ರೆಸ್ ಆರೋಪದ ಕುರಿತು ತಮಿಳುನಾಡಿನ ಮುದುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೊಮ್ಮನ್, ಪ್ರಧಾನಿ ಮೋದಿ ನಮಗೆ ಭರವಸೆ ಕೊಟ್ಟಿಲ್ಲ, ಪ್ರೀತಿ ಕೊಟ್ಟಿದ್ದಾರೆ. ದೆಹಲಿಗೆ ಬರಲೂ ಹೇಳಿದ್ದಾರೆ. ನಮಗೆ ಹಣ ಕೊಟ್ಟಿದ್ದು ಮೊದಿಯಲ್ಲ, ತಮಿಳುನಾಡು ಸಿಎಂ ಸ್ಟಾಲಿನ್. ಮೋದಿ ಬಂದಿದ್ದು ತುಂಬಾ ಖುಷಿಯಿದೆ. ಡಾಕ್ಯುಮೆಂಟ್ ನಲ್ಲಿರೋ ಆನೆಗೆ ಕಬ್ಬು ಕೊಟ್ಟರು. ಬೇರೆ ಆನೆಗಳಿಗೂ ಕಬ್ಬು ಕೊಟ್ಟಿದ್ದಾರೆ.…

Read More

ಕೋಲಾರ: 2023ರ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ಆನಂದ್ ರೆಡ್ಡಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಳಬಾಗಿಲು ತಾಲ್ಲೂಕಿನ  ಶಿನಿಗಾನಹಳ್ಳಿಯ ಆನಂದ್ ರೆಡ್ಡಿ ನಿವಾಸದ ಬಳಿ ಹಮ್ಮಿಕೊಂಡಿದ್ದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಆನಂದ ರೆಡ್ಡಿ ಅಧಿಕೃತವಾಗಿ  ಸೇರ್ಪಡೆಗೊಂಡರು, ಕಳೆದ 30 ವರ್ಷಗಳ ಕಾಂಗ್ರೆಸ್ ಪಕ್ಷದ ಪಯಣವನ್ನು ಅಂತ್ಯಗೊಳಿಸಿ ತೆನೆ ಹೊತ್ತ ಮಹಿಳೆಗೆ ಜೈ ಎಂದರು. ಇನ್ನು ಈ ಹಿಂದೆ ಆನಂದ್ ರೆಡ್ಡಿ ಪತ್ನಿ ಗೀತಮ್ಮ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದರು. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ರ ಬಲಗೈ ಬಂಟ ಹಾಗೂ ಪ್ರಭಾವಿ ಮುಖಂಡರಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಮುಳಬಾಗಿಲಿನಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರ ಗುಂಪುಗಾರಿಕೆಯಿಂದ ಬೇಸತ್ತು, ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ರವರ ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ಪಂಚರತ್ನ…

Read More

ರಾಮನಗರ: ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ (Harohalli) ಮಾರಸಂದ್ರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ…

Read More

ಮಂಡ್ಯ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯೊಂದೇ ಬಾಕಿ ಇದ್ದರೂ ಸಹ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯಲ್ಲಿ ಬಂಡಾಯ ಹಾಗೂ ಗುಂಪುಗಾರಿಕೆ ಬೆಂಕಿ ಮಾತ್ರ ಹೊಗೆಯಾಡುತ್ತಿದೆ. ಕ್ಷೇತ್ರದಲ್ಲಿ ಮೂಲ ಹಾಗೂ ವಲಸಿಗರ ಗುಂಪುಗಳ ನಡುವೆ ಬಂಡಾಯದ ಚಟುವಟಿಕೆ ತೀವ್ರಗೊಂಡಿದೆ. ಇಲ್ಲಿಯವರೆಗೂ ಕಾಂಗ್ರೇಸ್​ ಮತ್ತು ಜೆಡಿಎಸ್ ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿ ಈಗ ಬಿಜೆಪಿಯನ್ನು ಆವರಿಸಿದೆ. ಮದ್ದೂರು ಕ್ಷೇತ್ರದಲ್ಲಿ ಮೂಲ ಬಿಜೆಪಿಯ ಗುಂಪಿನಲ್ಲಿ ಮನ್ ಮುಲ್ ನಿರ್ದೇಶಕಿ ರೂಪ ಟಿಕೆಟ್​ ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಮದ್ದೂರು ಕ್ಷೇತ್ರದಲ್ಲಿ ಸಮಾಜ ಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಜೆಡಿಎಸ್​ ತೊರೆದು ಸಚಿವ ಕೆ.ಸಿ.ನಾರಾಯಣಗೌಡ ನಾಯಕತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಮ್ಮ ಪುತ್ರ ದಿ.ಶ್ರೀನಿಧಿಗೌಡ ಪ್ರತಿಷ್ಠಾನ ಹೆಸರಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ, ಉದ್ಯೋಗ…

Read More