ಚೆನ್ನೈ: ಎರಡು ದಿನಗಳ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್‌ನ ಮೊದಲ ಹಂತದ ಕಟ್ಟಡವನ್ನು ಉದ್ಘಾಟಿಸಿದರು. ಅತ್ಯಾಕರ್ಷಕವಾಗಿ ನಿರ್ಮಿಸಲಾಗಿರುವ ಈ ಇಂಟಿಗ್ರೇಟೆಡ್ ಟರ್ಮಿನಲ್‌ನ ಮೊದಲ ಹಂತಕ್ಕೆ 1,250 ಕೋಟಿ ರೂ ವೆಚ್ಚವಾಗಿದೆ. “ಇದು ಚೆನ್ನೈನ ಮೂಲಸೌಕರ್ಯಕ್ಕೆ ಮಹತ್ವವಾದ ಸೇರ್ಪಡೆಯಾಗಿದೆ. ಇದು ಸಂಪರ್ಕವನ್ನು ವೃದ್ಧಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಕೂಡ ಅನುಕೂಲ ಮಾಡಿಕೊಡಲಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಟಿ-2 (ಎರಡನೇ ಹಂತ) ಕಟ್ಟಡವು ವಿಮಾನ ನಿಲ್ದಾಣದ ಪ್ರಯಾಣಿಕರ ಸಾಮರ್ಥ್ಯವನ್ನು ವರ್ಷಕ್ಕೆ 23 ಮಿಲಿಯನ್‌ನಿಂದ 30 ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆ ಇದೆ. ಇದರಲ್ಲಿ 100 ಚೆಕ್ ಇನ್ ಕೌಂಟರ್‌ಗಳು, 108 ವಲಸೆ ಕೌಂಟರ್‌ಗಳು, 17 ಎಸ್ಕಲೇಟರ್‌ಗಳು ಮತ್ತು 17 ಎಲಿವೇಟರ್‌ಗಳಿವೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಸುಮಾರು 2.20 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ವಾಯು ಸಂಚಾರ ದಟ್ಟಣೆ ನಿರ್ವಹಿಸಲು…
Author: Prajatv Kannada
ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕಿಂತ ಪೂರ್ವದಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವ, ಸಾಗಾಟ ಮಾಡುವ, ಸಂಗ್ರಹಿಸುವ, ಮಾರಾಟ ಮಾಡುವ ಸಾಧ್ಯತೆಗಳಿರುವುದರಿಂದ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅಧಿಕಾರಿ ಕೆ.ಪ್ರಶಾಂತಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 1 ರಿಂದ ಎಪ್ರಿಲ್ 5 ರವರೆಗೆ ಜಿಲ್ಲೆಯಾದ್ಯಂತ ಕಾರ್ಯಕಾರಿ ಅಧಿಕಾರಿಗಳು ಒಟ್ಟು 32 ಘೋರ ಪ್ರಕರಣಗಳು, 17 ಸನ್ನದು ಷರತ್ತು ಉಲ್ಲಂಘನೆ ಪ್ರಕರಣಗಳು ಹಾಗೂ ಕಲಂ.15ಎ ಅಡಿಯಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಮಾಂಸಾಹಾರಿ ಖಾನಾವಳಿ, ಗೂಡು ಅಂಗಡಿ, ಇತ್ಯಾದಿಗಳ ಮೇಲೆ 65 ಪ್ರಕರಣಗಳು ಸೇರಿ 114 ಪ್ರಕರಣಗಳು ದಾಖಲಿಸಿದ್ದು ಒಟ್ಟು 589.710 ಲೀಟರ್ ಮದ್ಯ, 11.600 ಲೀಟರ್ ಗೋವಾ ಮದ್ಯ, 53 ಲೀಟರ್ ಬೀಯರ್, 12 ದ್ವಿಚಕ್ರ ವಾಹನ ಹಾಗೂ 2 ಮಾರುತಿ ಓಮಿನಿ …
ಧಾರವಾಡ: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯೊಬ್ಬಳು ಇಂದು ಅಸುನೀಗಿದ್ದು, ಸಾವಿನಲ್ಲೂ ಯುವತಿ ಸಾರ್ಥಕತೆ ಮೆರೆದಿದ್ದಾಳೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಕ್ಷತಾ ಅಶೋಕ ದೊಡವಾಡ (21) ಎಂಬ ಯುವತಿಗೆ ನಿನ್ನೆ ಅಪಘಾತವಾಗಿತ್ತು. ಗೋಶಾಲೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಉಪ್ಪಿನ ಬೆಟಗೇರಿಯ ಬೈಲಹೊಂಗಲ ರಸ್ತೆಯಲ್ಲಿ ಬೈಕ್‌ಗಳ ಮಧ್ಯೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಅಕ್ಷತಾಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅಕ್ಷತಾ ಇಂದು ಅಸುನೀಗಿದ್ದಾಳೆ. ಅಕ್ಷತಾ ಸಾವಿನ ದುಃಖದ ಮಧ್ಯೆಯೂ ಆಕೆಯ ಕುಟುಂಬಸ್ಥರು ಅಕ್ಷತಾಳ ಕಣ್ಣು, ಕಿಡ್ನಿ ಸೇರಿದಂತೆ ಇತ್ಯಾದಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಬಂಡೀಪುರದಲ್ಲಿ ಸಫಾರಿ ಡ್ರೆಸ್ನಲ್ಲಿ ಹೆಲಿಕಾಪ್ಟರ್ ಇಳಿದ PM ಮೋದಿ ಸ್ಟೈಲ್ ನೋಡಿ ಬಂಡೀಪುರದಲ್ಲಿ ನರೇಂದ್ರ ಮೋದಿ ಸಫಾರಿ ಹುಲಿ ಯೋಜನೆ (Project Tiger) ಘೋಷಣೆಯಾಗಿ ಇಂದಿಗೆ 50 ವರ್ಷ
ದಾವಣಗೆರೆ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಾಖಲೆಗಳಿಲ್ಲದೇ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ, ನಾನಾ ವಸ್ತುಗಳು ಹಾಗೂ ನಗದು ಸೇರಿ ಒಟ್ಟು 93.42 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿಏಪ್ರಿಲ್ 8 ರಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2.53 ಲಕ್ಷ ರೂ. ಮೌಲ್ಯದ 627 ಲೀಟರ್ ಮದ್ಯ, 42.20 ಲಕ್ಷ ರೂ. ನಗದು, 9 ಲಕ್ಷ ರೂ. ಮೌಲ್ಯದ ಹಾಲಿನ ಕ್ಯಾನ್, 39 ಲಕ್ಷ ಮೌಲ್ಯದ 64 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಕ್ರಮ ತಡೆಗೆ ಇರುವ ಸಿ-ವಿಜಿಲ್ ಆ್ಯಪ್ ಮೂಲಕ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಈವರೆಗೆ 15 ದೂರುಗಳು ದಾಖಲಾಗಿದೆ ಎಂದರು. ಜಿಲ್ಲೆಯಲ್ಲಿಈವರೆಗೆ 14,32,960 ಜನರು ಮತದಾರರಿದ್ದು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಅವಧಿಯ ಕೊನೆಯ ದಿನದವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ. ಆದರೆ, ಏಪ್ರಿಲ್ 11ವರೆಗೆ ಸಲ್ಲಿಸಿದ್ದ ಅರ್ಜಿಗಳನ್ನು…
ಕೊಪ್ಪಳ: ಹನುಮನ ಜನ್ಮಸ್ಥಳ ಅಂಜನಾದ್ರಿ ಒಳಗೊಂಡಿರುವ ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಿರುವುದು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇಷ್ಟು ದಿನ ಎರಡು ಅಭ್ಯರ್ಥಿಗಳ ನಡುವೆ ಮಾತ್ರ ಪೈಪೋಟಿ ಕಾಣುತ್ತಿದ್ದ ಗಂಗಾವತಿಯಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮತಗಳು ಹರಿದು ಹಂಚಿ ಹೋಗುವ ಸಾಧ್ಯತೆ ಇದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಕಳೆದ ಕೆಲ ತಿಂಗಳಿಂದ ಬಿರುಸಿನ ಪ್ರಚಾರ ನಡೆಸಿದ್ದು ರೆಡ್ಡಿಯವರ ನಡೆಯಿಂದಾಗಿ ಕ್ಷೇತ್ರವು ರಾಜ್ಯದಲ್ಲಿಯೇ ಹೆಸರು ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿ ನಿರ್ಮಾಣವಾಗಿದೆ. ರಡ್ಡಿ ಕಟ್ಟಿ ಹಾಕಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಾ ಅವರಿಗೆ ಸಮವಾಗಿ ನಿಲ್ಲುವ ಅಭ್ಯರ್ಥಿಗೆ ಹುಡುಕಾಟ ನಡೆಸಿದೆ. ರಂಗೇರಲಿದೆ ಕಣ: ಪ್ರಸ್ತುತ ಕಾಂಗ್ರೆಸ್ ಇಕ್ಬಾಲ್ ಅನ್ಸಾರಿಯವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ, ಬಿಜೆಪಿ ಅಭ್ಯರ್ಥಿ ಘೋಷಿಸಿದರೆ ಚುನಾವಣ ಕಣ ರಂಗೇರಲಿದೆ. ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಕೆಆರ್‌ಪಿಪಿ ಪಕ್ಷದ ಅಧ್ಯಕ್ಷ ಗಾಲಿ…
ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಆದ್ರೆ ಅಮುಲ್ ಭಾರತದ ಬ್ರ್ಯಾಂಡ್, ಭಾರತದಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಿಡಿ ಕಾರಿದ್ದಾರೆ. ನಂದಿನಿ-ಅಮುಲ್ (Nandini-Amul) ಜಟಾಪಟಿ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಅಮುಲ್ ಭಾರತದ ಬ್ರ್ಯಾಂಡ್, ಇಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ. ಇದೆಂಥ ಸೋತವರ ಗುಂಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ವೀಟ್ ಮೂಲಕವೂ ಆಕ್ಷೇಪ ವ್ಯಕ್ತಪಡಿಸಿರುವ ಸಿ.ಟಿ ರವಿ, ಕಾಂಗ್ರೆಸ್ ನಮ್ಮ ತಾಯಂದಿರು ಹಾಗೂ ಅಕ್ಕಂದಿರನ್ನು ಕೇವಲ ಸಗಣಿ ಬಾಚಲು ಬಿಟ್ಟಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳ ಬದುಕನ್ನು ಸಮೃದ್ಧಿಗೊಳಿಸಿತು. ನಂದಿನಿ ಈಗಾಗಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದು, ಇನ್ನೂ ಹೆಚ್ಚು ರಾಜ್ಯಗಳಲ್ಲಿ…
ಶಿಡ್ಲಘಟ್ಟ; ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿದ್ದು, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಸ್ಥಳೀಯರಿಗೆ ಅವಕಾಶ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ರಾಘವೇಂದ್ರ ತನ್ನ ಬೆಂಬಲಿಗರೊಂದಿಗೆ ಪಕ್ಷದಿಂದ ಹೊರ ಬಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಅಭ್ಯರ್ಥಿ ಆಯ್ಕೆಯ ವಿಚಾರವಾಗಿ ಪಕ್ಷದಲ್ಲಿ ಆಂತರಿಕ ಚರ್ಚೆ ನಡೆದಿದ್ದು, ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕುತ್ತಿದ್ದಾರೆ. ಕಾರ್ಯಕರ್ತರ ಕಲಹಗಳಿಗೆ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಉದ್ಯಮಿ ರಾಮಚಂದ್ರಗೌಡ ಕಾರಣ ಎನ್ನಲಾಗುತ್ತಿದ್ದು, ತನ್ನ ವಿದೇಯರನ್ನಷ್ಟೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಪಕ್ಷ ಕಟ್ಟಿದ ಹಳಬರನ್ನು ದೂರ ತಳ್ಳಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡು ಸೀದಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ರಾಮಚಂದ್ರಗೌಡ ಕಾರ್ಪೊರೇಟ್ ಮಾದರಿಯಲ್ಲಿ ರಾಜಕಾರಣ ಹಾಗು ಅಭಿವೃದ್ದಿ ಮಾಡುವ ಮಾತುಗಳನ್ನಾಡಿದ್ದರು. ಬಡವರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸುವುದಾಗಿ ಹೇಳಿದ್ದ ಸ್ಥಳದಲ್ಲಿ ಬಿಜೆಪಿ ಕಚೇರಿ ನಿರ್ಮಿಸಿ ಜನರ ವಿಶ್ವಾಸಕ್ಕೆ ಪೆಟ್ಟು ಕೊಟ್ಟಿದ್ದಾರೆ. ಚುನಾವಣೆ…
ಬೆಂಗಳೂರು: ಹಾಸನ ಟಿಕೆಟ್ (Hassan Ticket) ಕಗ್ಗಂಟು ಮತ್ತೊಂದು ಹಂತದಲ್ಲಿ ಕುತೂಹಲ ಕೆರಳಿಸಿದೆ. ಯಲಹಂಕದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕಾರ್ಯಕರ್ತನೋರ್ವ, ಪಕ್ಷದ ಪರವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಹಾಸನದಲ್ಲಿ ಸ್ವರೂಪ್‌ಗೆ (Swaroop) ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ. ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತರಿಗೆ ಟಿಕೆಟ್ ಅಂತಾ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಅಂತ ಪರೋಕ್ಷವಾಗಿ ಸ್ವರೂಪ್‌ಗೇ ಟಿಕೆಟ್ ಅಂತ ಹೇಳಿದ್ದಾರೆ. ಈ ಮಧ್ಯೆ, ಹಾಸನದಲ್ಲಿ ಭವಾನಿಗೆ (Bhavani Revanna) ಟಿಕೆಟ್ ತಪ್ಪಿದರೆ, ಹೊಳೇನರಸೀಪುರದಲ್ಲಿ ನಾನೂ ಕೂಡ ಸ್ಪರ್ಧೆ ಮಾಡಲ್ಲ ಅಂತಾ ಶುಕ್ರವಾರ ಸಭೆಯಲ್ಲಿ ರೇವಣ್ಣ (HD Revanna) ಹೇಳಿದ್ದಾರೆ ಅನ್ನೋದು ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನನ್ನ ಹತ್ತಿರ ಬ್ಲ್ಯಾಕ್ ಮೇಲ್ ನಡೆಯಲ್ಲ ಅಂತಲೂ ಪರೋಕ್ಷವಾಗಿ ರೇವಣ್ಣ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಂದಿನಿ (Nandini Milk) ಬ್ರ್ಯಾಂಡ್ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತು ಕೆಎಂಎಫ್ ಸ್ಪಷ್ಟನೆ ಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ಕೆಎಂಎಫ್ (KMF) ತಿಳಿಸಿದೆ. ನಂದಿನಿ ಬ್ರ್ಯಾಂಡ್ ಹಾಲು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಅನ್ನೋ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲವೆಂದು ತಿಳಿಸಲು ಬಯಸುತ್ತೇವೆ. ಯಾವುದೇ ಸಹಕಾರ ಸಂಸ್ಥೆ ಅಥವಾ ಉತ್ಪಾದನಾ ಮಹಾಮಂಡಳಗಳೊಂದಿಗೆ ನಾವು ಒಡಂಬಡಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತಿವೆ. ನಂದಿನಿ ಹಾಲು ಇತರೆ ಹಾಲಿನ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಗ್ರಾಹಕರು ಎಂದಿನಂತೆ “ನಂದಿನಿ” ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸಲು ನಾವು ಮನವಿ ಮಾಡುತ್ತೇವೆ ಎಂದು ಹೇಳಿದೆ. ಇಂತಹ ಸಂಸ್ಥೆಯ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿಗಳು ಸುಳ್ಳಾಗಿದ್ದು, ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು…