ಚುನಾವಣೆ ಗೆಲ್ಲೋಕೆ ಮೂರೂ ಪಕ್ಷಗಳಲ್ಲಿ ಏನೇನೋ ಸ್ಟ್ರಾಟಜಿ ನಡೀತಾ ಇದೆ. ಕಾಂಗ್ರೆಸ್ ನಲ್ಲಿ ಎರಡನೇ ಪಟ್ಟಿ ಬಿಡುಗಡೆ ಆದ್ಮೇಲಂತೂ ಬಂಡಾಯ ಭುಗಿಲೆದ್ದಿದೆ. ಕೆಲವರು ಬೇರೆ ಪಾರ್ಟಿಗಳತ್ತ ಮುಖ ಮಾಡ್ತಿದ್ರೆ, ಇನ್ನೂ ಕೆಲವರು ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.. ತಮ್ಮ ತಮ್ಮ ಸಮುದಾಯ ನಾಯಕರಿಗೆ ಟಿಕೆಟ್ ಕೊಡಿಸಲು, ಸ್ವಾಮೀಜಿಗಳೂ ಕೂಡ ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ.. ಯೆಸ್… ಎರಡನೇ ಪಟ್ಟಿ ಬಿಡುಗಡೆ ಆಗ್ತಿದ್ದಂತೆ ಕೈ ಪಡೆಯಲ್ಲಿ ಅಸಮಧಾನ ಸ್ಫೋಟ ಆಗಿದೆ.. ಟಿಕೆಟ್ ಬಯಸಿದ್ದ ಆಕಾಂಕ್ಷಿಗಳೆಲ್ಲಾ ಬಂಡಾಯವೆದ್ದು, ಪಕ್ಷೇತರರಾಗಿ ನಿಲ್ಲೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಕೆಲವು ಆಕಾಂಕ್ಷಿಗಳು ಜೆಡಿಎಸ್, ಬಿಜೆಪಿ ನಾಯಕರ ಮನೆ ಬಾಗಿಲು ತಟ್ಟಿದ್ದಾರೆ.. ಕಲಘಟಗಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಸೇರಲು ನಾಗರಾಜ್ ಛಬ್ಬಿ ತೀರ್ಮಾನಿಸಿದ್ದಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಜೆಡಿಎಸ್ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.. ಹಾನಗಲ್ ನಲ್ಲಿಮನೋಹರ್ ತಹಶೀಲ್ದಾರ್ ಕೂಡ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಚಿತ್ರದುರ್ಗ, ತುಮಕೂರು, ಉಡುಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದಾರೆ. ಮಂಡ್ಯಾದಲ್ಲಿ ಕೆ. ಕೆ ರಾಧಾಕೃಷ್ಣ ಬಂಡಾಯವೆದ್ದಿದ್ರೆ,…
Author: Prajatv Kannada
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಚುನಾವಣೆಯಲ್ಲಿ ಅಧಿಕಾರಿಗಳು ಸ್ಪರ್ಧಿಸುವುದು ಹೊಸದೇನಲ್ಲ. ಅದರಂತೆ ಈ ಬಾರಿ ಕೂಡ ಅನೇಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಚುನಾವಣೆಯಲ್ಲಿ ತಮ್ಮ ಭವಿಷ್ಯವನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ನಾಲ್ವರು ಮಾಜಿ ಐಎಎಸ್ ಅಧಿಕಾರಿಗಳು ಹಾಗೂ ಮೂವರು ಪೊಲೀಸ್ ಅಧಿಕಾರಿಗಳು ಚುನಾವಣೆಗೆ ಸ್ಪರ್ಧೆ ಬಯಸಿ ರಾಜಕೀಯ ಪಕ್ಷಗಳ ಮೊರೆ ಹೋಗಿದ್ದಾರೆ. ಮಾಜಿ ಐಎಎಸ್ ಅಧಿಕಾರಿಗಳಾ ಬಿಎಚ್ ಅನಿಲ್ ಕುಮಾರ್, ಎಂ ಲಕ್ಷ್ಮೀ ನಾರಾಯಣ್, ಕೆ ಶಿವರಾಮ್ ಹಾಗೂ ಶಂಭು ಕಳ್ಳೋಲಿಕರ್ (ತಮಿಳುನಾಡು ಕೇಡರ್) ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ. ಮಾಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡ ಇತ್ತೀಚೆಗೆ ಎಎಪಿ ಬಿಟ್ಟು ಬಿಜೆಪಿ ಸೇರಿದ್ದು, ಟಿಕೆಟ್ ನಿರೀಕ್ಷೆಯಲಿದ್ದಾರೆ. ಇವರನ್ನು ಬಿಟ್ಟು ಚಿತ್ರದುರ್ಗ ಮೂಲದ ಡಿಎಸ್‌ಪಿ ಮಲ್ಲೇಶಪ್ಪ ಹಾಗೂ ಇಬ್ಬರು ಸಿಪಿಐಗಳಾದ ಮಹೇಂದ್ರ ಕುಮಾರ್ ನಾಯಕ್ ಹಾಗೂ ಬಸವರಾಜ ಬೀಸನಕೊಪ್ಪ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡು ಚುನಾವಣಾ ಕಣಕ್ಕೆ ಧುಮುಕುತ್ತಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಿಎಚ್ ಅನಿಲ್…
ಸೂರ್ಯೋದಯ: 06.11 AM, ಸೂರ್ಯಾಸ್ತ : 06.32 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಉತ್ತರಾಯಣ, ತಿಥಿ: ಇವತ್ತು ತದಿಗೆ 09:35 AM ತನಕ ನಂತರ ಚೌತಿ ನಕ್ಷತ್ರ: ಇವತ್ತು ವಿಶಾಖ 02:00 PM ತನಕ ನಂತರ ಅನುರಾಧ ಯೋಗ: ಇವತ್ತು ಸಿದ್ಧಿ 10:14 PM ತನಕ ನಂತರ ವ್ಯತೀಪಾತ ಕರಣ: ಇವತ್ತು ವಿಷ್ಟಿ 09:35 AM ತನಕ ನಂತರ ಬವ 09:09 PM ತನಕ ನಂತರ ಬಾಲವ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 05.12 AM to 06.48 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:42 ವರೆಗೂ ಮೇಷ ರಾಶಿ: ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಕೆಲವೊಮ್ಮೆ ಅಪಾಯಕಾರಿ ಪರಿಸ್ಥಿತಿ ಎದುರಿಸುವಿರಿ. ಇವರ ಹಠಾತ್ ನಿರ್ಧಾರಗಳಿಂದಾಗಿ ಎಡವಟ್ಟೇ ಹೆಚ್ಚು.…
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣಿಕನೊಬ್ಬ ಕಂಠಪೂರ್ತಿ ಕುಡಿದು ನಶೆಯಲ್ಲಿ ಹುಚ್ಚಾಟ ಮೆರೆದಿದ್ದಾನೆ. ವಿಮಾನ ಹಾರಾಟದ ವೇಳೆಯೇ ತುರ್ತು ನಿರ್ಗಮನ ದ್ವಾರವನ್ನು (Emergency Exit) ತೆರೆಯಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ವರದಿಗಳ ಪ್ರಕಾರ ಘಟನೆ ಶುಕ್ರವಾರ ಬೆಳಗ್ಗೆ 7:56ರ ವೇಳೆಗೆ ವಿಮಾನ ಸಂಖ್ಯೆ 6E 308 ರಲ್ಲಿ ನಡೆದಿದೆ. ಆರೋಪಿಯನ್ನು ಪ್ರತೀಕ್ (40) ಎಂದು ಗುರುತಿಸಲಾಗಿದೆ. ಆತ ಕಂಠಪೂರ್ತಿ ಮದ್ಯಪಾನ ಮಾಡಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ ಪ್ರಯಾಣಿಕನ ನಡತೆ ಕಂಡು ತಕ್ಷಣವೇ ಎಚ್ಚೆತ್ತ ವಿಮಾನದ ಸಿಬ್ಬಂದಿ ಈ ಬಗ್ಗೆ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದಾರೆ. ಆತನನ್ನು ತಡೆದು, ವಿಮಾನ ಬೆಂಗಳೂರಿಗೆ ಬಂದಿಳಿದ ಬಳಿಕ ಸಿಐಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಯಾಣಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಗಿದೆ. ಇಂತಹ ಘಟನೆ ವರದಿಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆ…
ಮನೆಯಲ್ಲಿ ಸಾಕು ಪ್ರಾಣಿಗಳು ಮಾಡುವ ಚೇಷ್ಟೆ ಒಂದೆರಡಲ್ಲ, ಅದು ನಮಗೆ ಒಂದು ಬಾರಿ ನಗು ತರಿಸುತ್ತದೆ. ಮಕ್ಕಳಂತೆ ಅವುಗಳು ಮುಗ್ದ ಜೀವಿಗಳು. ಮನೆಯಲ್ಲಿ ಮಕ್ಕಳಿಗೂ ಅವುಗಳ ಈ ಆಟವೇ ಇಷ್ಟ. ಇದೆ ರೀತಿಯ ವೀಡಿಯೊವೊಂದು ವೈರಲ್ ಆಗಿದೆ. ಬೆಕ್ಕೊಂದು ಗೊಂದಲಕ್ಕೆ ಒಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕು ಬಬಲ್ ಒಡೆದು ಮಾಯವಾಗುತ್ತಿದಂತೆ ಬೆಕ್ಕಿಗೆ ಗೊಂದಲ ಶುರುವಾಗಿದೆ. ಈ ವೀಡಿಯೊ ಅನೇಕರಿಗೆ ಮನರಂಜನೆಯನ್ನು ನೀಡಿದೆ. ತೇಲುವ ಗುಳ್ಳೆಗಳು ಸಿಡಿಯುತ್ತಲೇ ಇರುವಾಗ ಬೆಕ್ಕು ಒಂದು ಬಾರಿ ಬಬಲ್ ಎಲ್ಲಿಗೆ ಹೋಯಿತು ಎಂದು ಹುಡುಕಾಡಿದೆ. ಈ ವೈರಲ್ ವೀಡಿಯೊ ಅನೇಕರನ್ನು ನಗೆಯಲ್ಲಿ ತೇಲಿಸಿದ, ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಆ ವೀಡಿಯೊ ಇಲ್ಲಿದೆ ನೋಡಿ. ಈ ವಿಡಿಯೊದಲ್ಲಿ ಗುಳ್ಳೆಗಳ ಚಲನೆಯನ್ನು ನೋಡಿ ಬೆಕ್ಕುಗಳಿಗೆ ಗೊಂದಲ ಉಂಟಾಗಿದೆ. ಈ ವೀಡಿಯೊದ ಜೊತೆಗೆ ಒಂದು ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಎರಡು ಬೆಕ್ಕುಗಳು ಗುಳ್ಳೆಯನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ. ಈ ಎರಡು ಬೆಕ್ಕುಗಳಲ್ಲಿ ಒಂದು ಬೆಕ್ಕು ಈ ಗುಳ್ಳೆಯನ್ನು ಗಮನಿಸುವುದಿಲ್ಲ. ಆದರೆ ಇನ್ನೊಂದು ಬೆಕ್ಕು ವಸ್ತುವಿನಂತೆ ತೇಲುವ ಹೊಳೆಯುವ ಗುಳ್ಳೆಯನ್ನು ನೋಡುತ್ತದೆ. ಗುಳ್ಳೆ ಹರುವುದನ್ನು ಕಂಡು ತಕ್ಷಣವೇ ಕುತೂಹಲದಿಂದ ಅದರ ಜತೆಗೆ ಆಟವಾಡಲು ಮುಂದಾಗುತ್ತದೆ. ಗುಳ್ಳೆ ನೆಲಕ್ಕೆ ಬಿದ್ದ ತಕ್ಷಣ ಸಿಡಿಯುತ್ತಿದ್ದಂತೆ, ಬೆಕ್ಕು ಮುಖದಲ್ಲಿ ಗೊಂದಲದ ನೋಟ ಮೂಡುತ್ತದೆ ಮತ್ತು ಬೆಕ್ಕು ಅದನ್ನು ಹುಡುಕುತ್ತಲೇ ಇರುತ್ತದೆ. ಗುಳ್ಳೆಯು ತನ್ನ ದಾರಿಯಲ್ಲಿ ಬಂದಾಗಲೆಲ್ಲಾ ಅದು ಸಿಡಿಯುತ್ತದೆ.
ಸೂರ್ಯೋದಯ: 06.12 AM, ಸೂರ್ಯಾಸ್ತ : 06.32 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ವಸಂತ ಋತು,ಕೃಷ್ಣ ಪಕ್ಷ, ಉತ್ತರಾಯಣ ತಿಥಿ: ಇವತ್ತು ಬಿದಿಗೆ 10:10 AM ತನಕ ನಂತರ ತದಿಗೆ ನಕ್ಷತ್ರ: ಇವತ್ತು ಸ್ವಾತಿ 01:59 PM ತನಕ ನಂತರ ವಿಶಾಖ ಯೋಗ: ಇವತ್ತು ಹರ್ಷಣ 01:26 AM ವಜ್ರ ತನಕ ನಂತರ 11:59 PM ತನಕ ನಂತರ ಸಿದ್ಧಿ ಕರಣ: ಇವತ್ತು ಗರಜ 10:10 AM ತನಕ ನಂತರ ವಣಿಜ 09:56 PM ತನಕ ನಂತರ ವಿಷ್ಟಿ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 05.01 AM to 06.39 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:42 ವರೆಗೂ ಮೇಷ ರಾಶಿ: ರಸಗೊಬ್ಬರ ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ, ವೈದ್ಯಕೀಯ ಕ್ಷೇತ್ರದ ನೌಕರರಿಗೆ ಬಿಡುವಿಲ್ಲದ ಕೆಲಸದ…
ಬಾಲಿವುಡ್ ಬ್ಯೂಟಿ, ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ನಿಕ್ ಜೋನಸ್ ಅವರನ್ನು ಮದುವೆಯಾದ ನಟಿ ಪ್ರಿಯಾಂಕ ಇದೀಗ ಬಾಡಿಗೆ ತಾಯಿಯ ಮೂಲಕ ಮುದ್ದಾದ ಹೆಣ್ಣು ಮಗುವನ್ನು ಪಡೆದಿದ್ದು ಸದ್ಯ ಸಿನಿಮಾಗಳ ಜೊತೆ ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದು, ಕೆಲ ದಿನಗಳ ಕಾಲ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಸದ್ಯ ಪಿಗ್ಗಿ ಪತಿ ಹಾಗೂ ಮಗಳೊಂದಿಗೆ ಮುಂಬೈನಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಿಯಾಂಕಾಗೆ ಮುಂಬೈ ನಗರದ ಬಗ್ಗೆ ವಿಶೇಷ ಪ್ರೀತಿ ಇದ್ದು, ಮುಂಬೈನಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಗಳ ಜೊತೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿಯನ್ನು ಕರೆದುಕೊಂಡು ಬಂದಿದ್ದು, ದೇವಸ್ಥಾನದಲ್ಲಿ ಮಾಲ್ತಿಗೆ ದೇವರ ದರ್ಶನ ಮಾಡಿಸಿದ್ದಾರೆ. ಪ್ರಿಯಾಂಕಾ ಅವರು ಮದುವೆ ಆಗಿ ವಿದೇಶಕ್ಕೆ ತೆರಳಿದರು. ಆದರೆ, ಅವರು ಭಾರತೀಯ ಸಂಪ್ರದಾಯ ಮರೆತಿಲ್ಲ. ವಿದೇಶದಲ್ಲೂ ಭಾರತೀಯ ಹಬ್ಬಗಳನ್ನು…
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ 4 ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಸಂಜೆ 7:30 ಕ್ಕೆ ನಡೆಯುವ ಟೂರ್ನಿಯ 12ನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಶನಿವಾರ ಡಬ್ಬಲ್ ಹೆಡರ್ ಪಂದ್ಯಗಳು ಜರುಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಎದುರು ಗೆದ್ದು ಟೂರ್ನಿಯಲ್ಲಿ ಗೆಲುವಿನ ಶುಭರಾಂಭ ಮಾಡಲು ಮುಂಬೈ ಇಂಡಿಯನ್ಸ್ ಎದುರು ನೋಡುತ್ತಿದೆ. ಆರ್‌ಸಿಬಿ ವಿರುದ್ಧ 8 ವಿಕೆಟ್ ಸೋಲು ಕಂಡಿರುವ ರೋಹಿತ್ ಶರ್ಮಾ ಪಡೆ, ಸಿಎಸ್‌ಕೆ ವಿರುದ್ಧ ಪ್ರಾಬಲ್ಯ ಮೆರೆಯಲು ಹೊರಟಿದೆ. ಗುಜರಾತ್ ಟೈಟನ್ಸ್ ವಿರುದ್ಧ ಸೋತು ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 12 ರನ್‌ಗಳ ಗೆಲುವು ಸಾಧಿಸಿರುವ ಧೋನಿ ಬಳಗ, ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವು ಸಾಧಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಆರ್‌ಸಿಬಿ ಪಂದ್ಯದಲ್ಲಿ ತಿಲಕ್ ವರ್ಮಾ (84*) ಬ್ಯಾಟ್ ಸದ್ದು ಮಾಡಿತ್ತಾದರೂ, ಉಳಿದ ಸ್ಟಾರ್ ಬ್ಯಾಟರ್‌ಗಳು ವೈಫಲ್ಯ…
ನಟ ಕಿಚ್ಚ ಸುದೀಪ್ ಗೆ ಖಾಸಗಿ ವಿಡಿಯೋ ಬೆದರಿಕೆ ಪತ್ರ ಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಆಪ್ತ, ನಿರ್ಮಾಪಕ ಜಾಕ್ ಮಂಜು ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ವಿವರಣೆಗೆ ಕರೆದ ಹಿನ್ನೆಲೆಯಲ್ಲಿ ಮಂಜು ಭೇಟಿ ನೀಡಿದ್ದು, ಸುದೀಪ್ ಅವರಿಗೆ ಬಂದಿದ್ದ ಎರಡು ಪತ್ರಗಳು ಕುರಿತಾಗಿ ವಿವರಣೆ ನೀಡಿದ್ದಾರೆ. ಅಲ್ಲದೇ ಜಾಕ್ ಮಂಜು ಕೆಲವರ ಬಗ್ಗೆ ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಸುದೀಪ್ ಮೇಲೆ ನಡೆದ ಕುತಂತ್ರಗಳ ಬಗ್ಗೆಯೂ ಮಂಜು ಅಧಿಕಾರಿಗಳಿಗೆ ವಿವರಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ರಂಗದವರೇ ಬೆದರಿಕೆ ಪತ್ರದ ಪ್ರಕರಣದ ಹಿಂದಿದ್ದಾರೆ ಎಂದು ಸುದೀಪ್ ಹೇಳಿದ್ದು, ಅವರಿಗೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು…
ಟಾಲಿವುಡ್ ನಟ ನಾಗಚೈತನ್ಯ ನಟಿ ಸಮಂತಾರಿಂದ ದೂರವಾದ ಬಳಿಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟಿ ಶೋಬಿತಾ ಜೊತೆ ನಾಗ ಚೈತನ್ಯ ಹೆಸರು ಕೇಳಿ ಬರ್ತಿದ್ದು ಇದೀಗ ನಾಗಚೈತನ್ಯ ಕುರಿತು ನಟಿಯೊಬ್ಬರು ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ನಾಗ ಚೈತನ್ಯ ಹೇಗಿರುತ್ತಾರೆ ಮತ್ತು ಮಹಿಳೆಯರನ್ನು ಅವರು ಹೇಗೆ ಗೌರವಿಸುತ್ತಾರೆ ಎನ್ನುವ ಕುರಿತು ನಟಿ ದಕ್ಷಾ ನಗರ್ಕರ್ ಮಾತನಾಡಿದ್ದಾರೆ. ನಾಗಚೈತನ್ಯ ರಂತಹ ಒಳ್ಳೆಯ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ, ಚಿತ್ರೀಕರಣ ನಡೆಯುವ ಸ್ಥಳದಲ್ಲಿನ ಅವರ ನಡೆತೆಯನ್ನೂ ದಕ್ಷಾ ಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ದಕ್ಷಾ ‘ಬಂಗರ್ ರಾಜು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ದಕ್ಷಾ ಮತ್ತು ನಾಗ ಚೈತನ್ಯ ಹೆಜ್ಜೆ ಹಾಕಿದ್ದು, ಈ ಸಂದರ್ಭದಲ್ಲಿ ಕಿಸ್ ಕೊಡುವ ಹಾಗೂ ತಬ್ಬಿಕೊಳ್ಳುವ ದೃಶ್ಯಗಳು ಬಂದಾಗ ಚಿತ್ರೀಕರಣ ಮುಗಿಸಿ ದಕ್ಷಾಗೆ ಕ್ಷಮೆ ಕೇಳಿದ್ದರಂತೆ ನಾಗ್. ಅಷ್ಟೊಂದು ಗೌರವವನ್ನು ಅವರು ನಟಿಯರಿಗೆ ಕೊಡುತ್ತಾರೆ ಎಂದು ದಕ್ಷಾ ಹೇಳಿದ್ದಾರೆ.…