ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಖುಷ್ಬೂ ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದಿ ಸಿನಿಮಾದ ಮೂಲಕ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಖುಷ್ಬೂ ಆ ಬಳಿಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ತಮಿಳು, ಮಲಯಾಳಂ, ಹಿಂದಿ, ತೆಲುಗು, ಕನ್ನಡ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಖುಷ್ಭೂ ರಾಜಕೀಯಕ್ಕೆ ಎಂಟ್ರಿಕೊಟ್ಟು ಅಲ್ಲೂ ಖ್ಯಾತಿ ಘಳಿಸಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಟಿ ಖುಷ್ಬೂ ಇತ್ತೀಚಿನ ದಿನಗಳಲ್ಲಿ ಜ್ವರ ಮತ್ತು ಬಾಡಿ ವೀಕ್‌ನೆಸ್‌ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾ ಮೂಲಕ ನಟಿ ತಿಳಿಸಿದ್ದಾರೆ. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನನ್ನು ಕೊಲ್ಲುತ್ತಿದೆ. ನಾನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ನಟಿ ಬರೆದುಕೊಂಡಿದ್ದಾರೆ. ನಟಿ ಖುಷ್ಬೂ ಅನಾರೋಗ್ಯದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು…
Author: Prajatv Kannada
ಇಂದು ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಗೆ ಬರ್ತಡೇ ಸಂಭ್ರಮ. ಅಲ್ಲು ಅರ್ಜುನ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು, ಕುಟುಂಬಸ್ಥರು, ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸುತ್ತಿದ್ದಾರೆ. ಅಲ್ಲು ಅರ್ಜುನ್ ಬರ್ತ್ಡೇ ಪ್ರಯುಕ್ತ ಅಭಿಮಾನಿಗಳಿಗೆ ಎರಡೆರಡು ಗಿಫ್ಟ್ ಸಿಕ್ಕಿದೆ. ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಅಲ್ಲು ಅರ್ಜುನ್ ಬರ್ತ್ಡೇನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ಅಲ್ಲು ಅರ್ಜುನ್ ಹೆಸರಿನಲ್ಲಿ ರಕ್ತದಾನ, ನೇತೃದಾನ, ಅನ್ನದಾನ ಸೇರಿದಂತೆ ಸಾಕಷ್ಟು ಸಾಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೂ ಅಲ್ಲು ಬರ್ತಡೇಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದಕ್ಕಾಗಿ ಅಲ್ಲು ಅರ್ಜುನ್ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಗ್ಲಿಂಪ್ಸ್ ಅಲ್ಲು ಅರ್ಜುನ್ ಬರ್ತಡೇಗೆ ಒಂದು ದಿನ ಮುನ್ನ ಅಂದರೆ ಮಾರ್ಚ್ 7ರಂದು ರಿಲೀಸ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.…
30 ಪ್ರಾಜೆಕ್ಟ್ ಎಸ್‌ಆರ್‌ಎಫ್(SRF), ಫೀಲ್ಡ್ ವರ್ಕರ್(Field Worker), ಎಂಟಿಎಸ್ (MTS) ಖಾಲಿ ಹುದ್ದೆಗಳಿಗೆ ವಾಕ್-ಇನ್-ಸಂದರ್ಶನ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN)ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಪ್ರಾಜೆಕ್ಟ್ ಎಸ್‌ಆರ್‌ಎಫ್, ಫೀಲ್ಡ್ ವರ್ಕರ್, ಎಂಟಿಎಸ್ ಪೋಸ್ಟ್‌ಗಳನ್ನು ಎನ್‌ಐಎನ್ ಏಪ್ರಿಲ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 20-Apr-2023 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. NIN ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಹುದ್ದೆಗಳ ಸಂಖ್ಯೆ: 30 ಉದ್ಯೋಗ ಸ್ಥಳ: ಕರ್ನಾಟಕ ಪೋಸ್ಟ್ ಹೆಸರು: ಪ್ರಾಜೆಕ್ಟ್ SRF, ಫೀಲ್ಡ್ ವರ್ಕರ್, MTS ವೇತನ: ರೂ.15800-60000/- ಪ್ರತಿ ತಿಂಗಳು NIN ಹುದ್ದೆಯ ವಿವರಗಳು ಪ್ರಾಜೆಕ್ಟ್ ಜೂನಿಯರ್ ಮೆಡಿಕಲ್ ಆಫೀಸರ್- 2 ಯೋಜನೆ SRF (ಆಹಾರ ಮತ್ತು ಪೋಷಣೆ)- 5 ಪ್ರಾಜೆಕ್ಟ್ SRF (ಮಾನವಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕೆಲಸ)- 3 ಪ್ರಾಜೆಕ್ಟ್ ಹಿರಿಯ ತಾಂತ್ರಿಕ ಸಹಾಯಕ-…
ನೀವು ಎರಡು ಅತ್ಯಂತ ಆರೋಗ್ಯಕರ ಆಹಾರ (Healthy Foods) ಪದಾರ್ಥಗಳನ್ನು ಒಂದು ಭಕ್ಷ್ಯಕ್ಕೆ ಬೆರೆಸಿದಾಗ ನೀವು ಏನು ಪಡೆಯುತ್ತೀರಿ? ಮೊಸರನ್ನ (Curd Rice) ಕೇವಲ ಆರೋಗ್ಯಕರ ಊಟದ ಆಯ್ಕೆಯಾಗಿದೆ, ಇದು ಎರಡು ಆರೋಗ್ಯಕರ ಪದಾರ್ಥಗಳ ಸಂಯೋಜನೆಯಾಗಿದೆ. ಎಲ್ಲರಿಗು ತಿಳಿದಿರುವ ಹಾಗೆ ಪ್ರಾಥಮಿಕವಾಗಿ ಮೊಸರು ಮತ್ತು ಅನ್ನವನ್ನು ಬಳಸಿ ತಯಾರಿಸಲಾಗುತ್ತದೆ. ಮೊಸರನ್ನ ಭಾರತದ ಅನೇಕ ರಾಜ್ಯದ ಜನರು ಸೇವಿಸುತ್ತಾರೆ, ಆದರೆ ಅದು ಹುಟ್ಟಿಕೊಂಡ ದಕ್ಷಿಣದ ರಾಜ್ಯಗಳಲ್ಲಿ (Southern States) ಹೆಚ್ಚು. ಬೇಸಿಗೆಯಲ್ಲಿ (Summer) ನಮ್ಮ ದೇಹವನ್ನು ತಂಪಾಗಿಸುವಲ್ಲಿ ಮೊಸರನ್ನ ಸೇವಿಸಿ. ಇದರಿಂದ ಬಹಳಷ್ಟು ಪ್ರಯೋಜನಗಳು ನಿಮ್ಮಗಾಗಲಿದೆ! ತಯಾರಿಸಲು ತುಂಬಾ ಸುಲಭವಾದ ಪಾಕವಿಧಾನವಾಗಿ, ಮೊಸರನ್ನ ವರ್ಷಗಳಿಂದ ಸಾಮಾನ್ಯ ಮನೆಯ ಭಕ್ಷ್ಯವಾಗಿದೆ. ಮೊಸರನ್ನ ಕೆಲವೊಮ್ಮೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಉತ್ತಮ ಪರಿಹಾರವಾಗಿದೆ. ಮೊಸರು ಅನ್ನದ ಟಾಪ್ 5 ಪ್ರಯೋಜನಗಳು: ತೂಕ ನಷ್ಟವನ್ನು ಉತ್ತೇಜಿಸುತ್ತದೆ: ಫೈಬರ್ ಭರಿತ ಮೊಸರನ್ನ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಮೊಸರನ್ನವನ್ನು ಸಾಮಾನ್ಯವಾಗಿ ಇತರ ಭಕ್ಷ್ಯಗಳ…
ಸಿಂಗಾಪುರ: ಆರ್ಚರ್ಡ್ ರಸ್ತೆಯಲ್ಲಿರುವ ಕಾಂಕಾರ್ಡ್ ಶಾಪಿಂಗ್ ಮಾಲ್‍ನಿಂದ ಹೊರಕ್ಕೆ ತಳ್ಳಿದ ಪರಿಣಾಮ ಮೆಟ್ಟಿಲಿಗಳ ಮೇಲೆ ಉರುಳಿ ಬಿದ್ದು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ತೇವಂದ್ರನ್ ಷಣ್ಮುಗಂ (34) ಮೃತ ವ್ಯಕ್ತಿ. ಶಾಪಿಂಗ್ ಮಾಲ್ ನಿಂದ ಹೊರಗೆ ತಳ್ಳಿದ ಪರಿಣಾಮ ತೇವಂದ್ರನ್ ತಲೆಬುರುಡೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಮಂಡೈ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಷಣ್ಮುಗಂ ಅವರನ್ನು ತಳ್ಳಿದ ಮುಹಮ್ಮದ್ ಅಜರಿ ಅಬ್ದುಲ್ ಕಹಾ(27) ಘಟನೆ ನಡೆದ ನಂತರ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಹ್ಯೂಸ್ಟನ್: ಟೆಕ್ಸಾಸ್‍ನಿಂದ ನಾಪತ್ತೆಯಾಗಿದ್ದ 6 ವರ್ಷದ ಬಾಲಕನೋರ್ವ ಮೃತಪಟ್ಟಿದ್ದು ಆತನ ಹೆತ್ತವರು ಅಮೆರಿಕದಿಂದ ಭಾರತಕ್ಕೆ ಪಲಾಯನ ಗೈದಿದ್ದಾರೆ. ಸದ್ಯ ಅವರ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಣೆಯಾದ ಹುಡುಗನ ಹುಡುಕಾಟದ ವೇಳೆ ಆತನ ಮೃತ ದೇಹ ಪತ್ತೆಯಾಗಿದೆ ಎಂದು ಎವರ್ಮನ್ ಪೊಲೀಸ್ ಮುಖ್ಯಸ್ಥ ಕ್ರೇಗ್ ಸ್ಪೆನ್ಸರ್ ತಿಳಿಸಿದ್ದಾರೆ. ಮಗುವನ್ನು ತೊರೆದು ಅಪಾಯಕ್ಕೆ ಸಿಲುಕಿದ್ದಕ್ಕಾಗಿ ತಾಯಿ ಸಿಂಡಿ ರೋಡ್ರಿಗಸ್ ಸಿಂಗ್ ಮತ್ತು ಅಶ್ರ್ದೀಪ್ ಸಿಂಗ್ ಅವರನ್ನು ಬಂಧಿಸಲು ನಾವು ಸಕ್ರಿಯರಾಗಿದ್ದೇವೆ ಎಂದು ತಿಳಿಸಿದ್ದಾರೆ. ಪರಾರಿಯಾದವರನ್ನು ಬಂಧಿಸಿ ಹಸ್ತಾಂತರಿಸಬೇಕೆಂದು ನಾವು ಭಾರತದ ಸರ್ಕಾರವನ್ನು ಕೋರಿದ್ದೇವೆ ಎಂದು ಹೇಳಿದ್ದಾರೆ. ಸಿಂಡಿಗೆ ಹತ್ತು ಮಕ್ಕಳಲ್ಲಿ ಆವಳಿ ಸೋದರಿಯರು ಮತ್ತು ಬಬ್ಬ ಪುತ್ರ ಸಾವನ್ನಪ್ಪಿದ್ದಾನೆ. ಮೂವರು ಅಜ್ಜಿಯರೊಂದಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ, ಆದರೆ ನೋಯೆಲ್ ಮತ್ತು ಇತರರು ತಮ್ಮ ತಾಯಿಯೊಂದಿಗೆ ಫೋರ್ಟ್ ವತರ್ನ ಉಪನಗರವಾದ ಎವರ್ಮನ್‍ನಲ್ಲಿನಲ್ಲಿ ವಾಸಿಸುತ್ತಿದ್ದರು. ಕಳೆದ ಮಾರ್ಚ್ 20 ರಂದು ಟೆಕ್ಸಾಸ್ ಕುಟುಂಬ ಸೇವೆಗಳ ಇಲಾಖೆಯು ಎವಮ್ರ್ಯಾನ್‍ನಲ್ಲಿರುವ ಪೊಲೀಸರಿಗೆ ಮಾಹಿತಿ…
ಲಖನೌ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಕೊಲೆ ಮಾಡುವುದಾಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ಬೆದರಿಕೆ ಇ-ಮೇಲ್ ಕಳುಹಿಸಿದ ಅಪ್ರಾಪ್ತ ಬಾಲಕನನ್ನು ನೋಯ್ಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಹಾರ ಮೂಲದ 16 ವರ್ಷದ ಬಾಲಕ ಈ ಕೃತ್ಯ ಎಸಗಿದ್ದಾನೆ. ಸದ್ಯ ಬಾಲಕನನ್ನು ಲಖನೌನಲ್ಲಿ ಬಂಧಿಸಿ ನೋಯ್ಡಾಗೆ ಕರೆತರಲಾಗಿದೆ. ಪ್ರಕರಣ ಸಂಬಂಧ ಏ. 5 ರಂದು ನೋಯ್ಡಾ 20ನೇ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಲಖನೌನಿಂದ ಇ-ಮೇಲ್ ಬಂದಿರುವುದು ಗೊತ್ತಾಗಿತ್ತು. ಲಖನೌನ ಚಿನ್ನತ್ ಪ್ರದೇಶದಿಂದ ಬಾಲಕನನ್ನು ಬಂಧಿಸಲಾಗಿದೆ. 12 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಯ್ಡಾದ ಬಾಲಪರಾಧಿ ನ್ಯಾಯಾಲಯಕ್ಕೆ ಬಾಲಕನನ್ನು ಹಾಜರಿಪಡಿಸಲಾಗಿದ್ದು, ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸುಧಾಮೂರ್ತಿ ಅವರಿಗೆ ನೀಡಿ ಗೌರವಿಸಲಾಗಿದೆ. ಏ.5ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ಬ್ರಿಟನ್ ಪ್ರಧಾನಿ ಹಾಗೂ ಸುಧಾ ಮೂರ್ತಿ ಮಗಳ ಗಂಡ ರಿಷಿ ಸುನಕ್ ತಮ್ಮ ಅತ್ತೆಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಇದು ಹೆಮ್ಮೆಯ ದಿನವೆಂದು ರಿಷಿ ಸುನಕ್ ಹೇಳಿದ್ದು, ಇದನ್ನು ಅಕ್ಷತಾ ಮೂರ್ತಿ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. 72 ವರ್ಷದ ಸುಧಾ ಮೂರ್ತಿ ಅವರು ಸಮಾಜ ಸೇವೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ ಜನಪ್ರಿಯ ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ, ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನನ್ನ ಅಮ್ಮ ಈ ಸಮಾಜಕ್ಕೆ ಮಾಡಿದ ಕೆಲಸಕ್ಕೆ ಇದು ದೊಡ್ಡ ಗೌರವ, ಅವರು ಮಾಡಿದ ಕೆಲಸದ ಬಗ್ಗೆ ಅವರಿಗೆ ಇಂದು…
ಅಮರಾವತಿ: ಆಂಧ್ರಪ್ರದೇಶದಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ 11 ಆದಿವಾಸಿ ಮಹಿಳೆಯರನ್ನು ಬಂದೂಕು ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಕ್ಸಲ್ ನಿಗ್ರಹ ವಿಶೇಷ ಪೊಲೀಸ್ ಪಡೆಯ ತಂಡದ 13 ಆರೋಪಿ ಪೊಲೀಸರನ್ನು ವಿಶೇಷ ನ್ಯಾಯಾಲಯವೊಂದು ಗುರುವಾರ ಖುಲಾಸೆಗೊಳಿಸಿದೆ. 15 ವರ್ಷಗಳ ಬಳಿಕ ಈ ಪೊಲೀಸರು ಆರೋಪ ಮುಕ್ತರಾಗಿದ್ದಾರೆ. ತಮ್ಮ ಕರ್ತವ್ಯವನ್ನು ಕಳಪೆಯಾಗಿ ನಿರ್ವಹಿಸಿದ್ದಾರೆ ಎಂದು ತನಿಖಾಧಿಕಾರಿ ವಿರುದ್ಧ ಕಿಡಿಕಾರಿದ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗಾಗಿ ಇರುವ ವಿಶೇಷ ನ್ಯಾಯಾಲಯ ಹಾಗೂ XI ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಅವರನ್ನು ರಾಜ್ಯ ಸರ್ಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು. ಈ ಪ್ರಕರಣದಲ್ಲಿ 15 ವರ್ಷ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಯರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸಮರ್ಪಕ ಪರಿಹಾರ ಪಾವತಿಸುವಂತೆ ವಿಶೇಷ ನ್ಯಾಯಾಧೀಶ ಎಲ್ ಶ್ರೀಧರ್ ಆದೇಶಿಸಿದ್ದಾರೆ. ಅವಿಭಜಿತ ವಿಶಾಖಪಟ್ಟಣ ಜಿಲ್ಲೆಯ ಅಡಿಯಲ್ಲಿನ ಹಳ್ಳಿಯೊಂದರಲ್ಲಿ ವಿಶೇಷ ದಳದ ಪೊಲೀಸರ 30 ಸದಸ್ಯರ ತಂಡವು 2007ರ ಆಗಸ್ಟ್ 30ರಂದು ನಸುಕಿನಲ್ಲಿ…
ದಿಸ್ಪುರ್: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಅಸ್ಸಾಂ (Assam) ಘಟಕದ ಇಬ್ಬರು ಉನ್ನತ ನಾಯಕರನ್ನು ಬಾರ್ಪೇಟಾದಲ್ಲಿ (Barpeta) ಬಂಧಿಸಲಾಗಿದೆ. ಪಿಎಫ್‍ಐನ ರಾಜ್ಯ ಅಧ್ಯಕ್ಷ ಅಬು ಸಮಾ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆಯ ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ. ನಾಲ್ಕು ಮೊಬೈಲ್ ಫೋನ್‍ಗಳು ಮತ್ತು ಕೆಲವು ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಿಎಫ್‍ಐನ್ನು ನಿಷೇಧಿಸಿತ್ತು. ಮತ್ತು ಅದರ ಅಂಗಸಂಸ್ಥೆಗಳು ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸಗಳಲ್ಲಿ ತೊಡಗಿವೆ ಎಂದು ಗೃಹ ಸಚಿವಾಲಯ (Home Ministry) ಹೇಳಿತ್ತು. ಅಲ್ಲದೇ ಜನರಲ್ಲಿ ಭಯ ಹುಟ್ಟಿಸಲು…