ಐಪಿಎಲ್ ಆರಂಭದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದೆ. ಒಂದೆಡೆ ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಒಳಗಾಗಿದ್ದರೆ, ಮತ್ತೊಂದೆಡೆ ಯುವ ಆಟಗಾರನ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲಾಗಿದೆ. ಸೋಷಿಯಲ್ ಮೀಡಿಯಾದ ಸೆಲೆಬ್ರಿಟಿ ಸಪ್ನಾ ಗಿಲ್ ಅವರು ಪೃಥ್ವಿ ಶಾ ವಿರುದ್ಧ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪೃಥ್ವಿ ಶಾ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ಜಗಳವಾಗಿತ್ತು. ಮುಂಬೈನ ಕ್ಲಬ್ನಲ್ಲಿ ಪೃಥ್ವಿ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ ಹೊರಗೆ ಇಬ್ಬರ ಸ್ನೇಹಿತರ ನಡುವೆ ಜಗಳವಾಗಿತ್ತು. ಈ ವೇಳೆ ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ. ಸೆಲ್ಫಿ ತೆಗೆಯುವ ಸಲುವಾಗಿ ಶುರುವಾದ ಈ ವಾಗ್ವಾದವು ಆ ಬಳಿಕ ಜಗಳವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಪೃಥ್ವಿ ಶಾ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಇದೇ…
Author: Prajatv Kannada
ಇನ್ನೆನ್ನೂ ಸದ್ಯದಲ್ಲೇ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳು ಈಗಿನಿಂದಲೇ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಆದರೆ ಚುನಾವಣೆಗೂ ಮುನ್ನವೇ ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ ಗೆಲುವಿನ ಭವಿಷ್ಯ ನುಡಿದಿದ್ದಾರೆ ನಟಿ ಪ್ರೇಮಾ. ಹಿರೇಕೆರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ನಟಿ ಪ್ರೇಮಾ, ಬಿ.ಸಿ. ಪಾಟೀಲ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪಾಟೀಲರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 1998ರಲ್ಲಿ ತೆರೆಕಂಡ ಹಿಟ್ ಸಿನಿಮಾ ‘ಕೌರವ’ ಸಿನಿಮಾದಲ್ಲಿ ಬಿ.ಸಿ ಪಾಟೀಲ್ ಮತ್ತು ಪ್ರೇಮಾ ಒಟ್ಟಾಗಿ ನಟಿಸುವ ಮೂಲಕ ಈ ಜೋಡಿ ಖ್ಯಾತಿ ಘಳಿಸಿತ್ತು. ಕೌರವ ಜೋಡಿ ಎಂದು ಈಗಲೂ ಗುರುತಿಸುವಷ್ಟು ಆ ಸಿನಿಮಾ ನೋಡುಗನ ಮೇಲೆ ಪ್ರಭಾವ ಬೀರಿತ್ತು. ಈ ಬಾಂಧವ್ಯದ ಕಾರಣಕ್ಕಾಗಿ ಪ್ರೇಮಾ ಹಿರೇಕೆರೂರಿಗೆ ಆಗಮಿಸಿ, ಪಾಟೀಲ್ ಪರವಾಗಿ ಮಾತನಾಡಿದ್ದಾರೆ. ‘ಬಿ.ಸಿ.ಪಾಟೀಲರು ಫೋನ್ ಮಾಡಿದ್ದರು. ನಮ್ಮ ತಂದೆ ನಿಧನರಾಗಿದ್ದಾಗ ಅವರು…
ಹಿಂದಿನ ಕಾಲದಲ್ಲೆಲ್ಲಾ ಮಡಕೆ ನೀರನ್ನು ಬಳಸುತ್ತಿದ್ದ ಬಗ್ಗೆ ನೀವು ಕೇಳಿರುವಿರಿ. ಈಗಿನ ಕಾಲದಲ್ಲೂ ಕೆಲವರು ಮಣ್ಣಿನ ಮಡಕೆಯ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಮಣ್ಣಿನ ಮಡಕೆಯಲ್ಲಿಟ್ಟ ನೀರು ಬಹಳ ತಂಪಾಗಿರುತ್ತದೆ, ಜೊತೆಗೆ ಉತ್ತಮ ರುಚಿಯನ್ನೂ ಹೊಂದಿರುತ್ತದೆ. ಇನ್ನು ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೂ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮಡಕೆಯ ನೀರು ನಿಮಗೆ ಉತ್ತಮ ಆಯ್ಕೆಯಾಗಿದೆ. ದೇಹದಿಂದ ವಿಷವನ್ನು ಹೊರಹಾಕುತ್ತದೆ ಮಾರುಕಟ್ಟೆಯಲ್ಲಿ ಸಿಗುವ ಬಾಟಲಿ ನೀರಿಗಿಂತ ಮಣ್ಣಿನ ಮಡಕೆಯಲ್ಲಿಟ್ಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನಲಾಗುತ್ತದೆ. ಗಂಟಲನ್ನು ಶುದ್ಧಗೊಳಿಸುವುದರ ಜೊತೆಗೆ, ಮಡಕೆ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೈಸರ್ಗಿಕ ತಂಪಾಗುವಿಕೆ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದು ನೀರಿನ ನೈಸರ್ಗಿಕ ತಂಪಾಗುವಿಕೆಗೆ ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಯು ಮೇಲ್ಮೈಯಲ್ಲಿ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ ಮತ್ತು ಈ ರಂಧ್ರಗಳ ಮೂಲಕ ನೀರು ತ್ವರಿತವಾಗಿ ಆವಿಯಾಗುತ್ತದೆ. ಆವಿಯಾಗುವಿಕೆಯ ಪ್ರಕ್ರಿಯೆಯು ಮಡಕೆಯೊಳಗಿನ ನೀರಿನ ಶಾಖವನ್ನು ಕಳೆದುಕೊಳ್ಳುವುದನ್ನು ಖಾತ್ರಿಗೊಳಿಸುತ್ತದೆ, ಇದು ನೀರಿನ ತಾಪಮಾನವನ್ನು ಕಡಿಮೆ ಮಾಡುತ್ತದೆ.…
ನ್ಯೂಯಾರ್ಕ್: ಲೂಯಿಸ್ ವ್ಯುಟನ್ ಸಿಇಒ ಮತ್ತು ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು ಒಂದೇ ದಿನದಲ್ಲಿ 200 ಶತಕೋಟಿ ಡಾಲರ್ ನಷ್ಟು ಹೆಚ್ಚಿದ್ದು ಈ ಮೂಲದ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇದುವರೆಗೆ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೆಸ್ಲಾದ ಸಿಇಒ ಎಲಾನ್ ಮಸ್ಕ್ 2ನೇ ಸ್ಥಾನಕ್ಕೆ ಹಾಗೂ ಅಮಝಾನ್ ನ ಸ್ಥಾಪಕ ಜೆಫ್ ಬೆಝೋಸ್ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಐಷಾರಾಮಿ ಬಳಕೆಯ ವಸ್ತುಗಳನ್ನು ಉತ್ಪಾದಿಸುವ ಎಲ್ವಿಎಂಎಚ್ ನ ಶೇರುಗಳ ಮೌಲ್ಯ 30%ರಷ್ಟು ಹೆಚ್ಚುವ ಮೂಲಕ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತಿನ ಮೌಲ್ಯ 201 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ಬ್ಲೂಮ್ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಾಂಕವನ್ನು ಉಲ್ಲೇಖಿಸಿ `ದಿ ಗಾರ್ಡಿಯನ್’ ವರದಿ ಮಾಡಿದೆ.
ದುಬೈ: 2019 ರಲ್ಲಿ ದುಬೈನಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯ ವ್ಯಕ್ತಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿವೆ. 20 ವರ್ಷದ ಮುಹಮ್ಮದ್ ಬೇಗ್ ಮಿರ್ಜಾ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಒಮಾನ್ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಯಿತು. ಈ ವೇಳೆ ಬಸ್ ನಲ್ಲಿ ಒಟ್ಟು 31 ಪ್ರಯಾಣಿಕರಿದ್ದು ಅವರಲ್ಲಿ 12 ಭಾರತೀಯರು ಸೇರಿ 17 ಮಂದಿ ಮೃತಪಟ್ಟಿದ್ದರು. ದುಬೈನ್ ನ ಮೆಟ್ರೋ ನಿಲ್ದಾಣದ ಪಾರ್ಕಿಂಗ್ನ ಪ್ರವೇಶ ದ್ವಾರದಲ್ಲಿ ಬಸ್ ಚಾಲಕ ಓವರ್ಹೆಡ್ ಹೈಟ್ ಬ್ಯಾರಿಯರ್ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದ್ದು, ಬಸ್ನ ಮೇಲಿನ ಎಡ ಭಾಗವು ನಾಶವಾಗಿದೆ ಎಂದು ವರದಿ ತಿಳಿಸಿದೆ. ಬಸ್ ನ ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ. ಮಿರ್ಜಾ ಪರ ವಕೀಲರು ವಾದಿಸಿದ್ದು, ಆರಂಭದಲ್ಲಿ ನ್ಯಾಯಾಲಯವು ಆರಂಭದಲ್ಲಿ 1 ಮಿಲಿಯನ್ ಪರಿಹಾರ ನೀಡಲು ಒಪ್ಪಿಕೊಂಡಿತ್ತು.…
ಹುಬ್ಬಳ್ಳಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ವಿನಯ್ ಕುಲಕರ್ಣಿ 2013ರಲ್ಲಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆದಿದ್ದಲ್ಲದೇ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ಅದಕ್ಕೂ ಮುನ್ನ ಅವರು ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾಗಿದ್ದ ವಿನಯ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಇದೀಗ 2023ರ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ವಿನಯ್ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಇಮ್ಮಡಿಗೊಂಡಿದೆ. ಸದ್ಯ ವಿನಯ್ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅವರಿಗೆ ಜಿಲ್ಲಾ ಪ್ರವೇಶಕ್ಕೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿದ್ದು, ಒಂದು ವೇಳೆ ವಿನಯ್ ಬರದೇ ಹೋದರೂ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿಯನ್ನು ಕಾಂಗ್ರೆಸ್ ಕಾರ್ಯಕರ್ತರು…
ಕೋಲಾರ: ಕುರುಕ್ಷೇತ್ರದಲ್ಲಿ ಪಾಂಡವರಿಗೆ 14 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಇರುತ್ತದೆ. 15 ವರ್ಷ ಕೊನೆಯಾದ ನಂತರ ಅವರಿಗೆ ಅಧಿಕಾರ ಸಿಗುತ್ತದೆ. ಹಾಗೇಯೆ ಬಹುಶಃ ನನಗೂ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ. 15 ವರ್ಷಗಳಿಂದಲೂ ಅಧಿಕಾರ ಇಲ್ಲ. ಹಾಗಾಗಿ ಪಾಂಡವರು ವನವಾಸವನ್ನು ಅಂತ್ಯಗೊಳಿಸಿದಂತೆ ಮುಳಬಾಗಿಲು ಕ್ಷೇತ್ರದಲ್ಲೂ ಮೇ 10 ರಂದು ವಿಮುಕ್ತಿಗೊಳಿಸುವ ಅವಕಾಶ ಬಂದಿದೆ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವ್ರು ಹೇಳಿದರು. ಬಲಶೆಟ್ಟಹಳ್ಳಿ ಗ್ರಾಮದಲ್ಲಿ ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾವ ನಂಬಿಕೆಯ ಇಟ್ಟುಕೊಂಡು ನನ್ನನ್ನು ಮುಳಬಾಗಿಲು ಕ್ಷೇತ್ರಕ್ಕೆ ಕಳುಹಿಸಿಕೊಟ್ಟರು ನನಗೆ ಗೊತ್ತಿಲ್ಲ . ಆದ್ರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ನಾನು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬ್ಯುಸಿನೆಸ್ ನೋಡಿಕೊಳ್ಳಬೇಕಾ ಅಥವಾ ಮತಕೊಟ್ಟ ನಿಮ್ಮ ಜೊತೆ ಇರಬೇಕಾ ಎಂದು ಗೊಂದಲ ಉಂಟಾಯಿತು. ಬ್ಯುಸಿನೆಸ್ ನನಗೆ ಬೇಕಾಗಿಲ್ಲ, ನನಗೆ ಬೇಕಿರುವುದು ನೀವೆಂದು ನಾನು ಅವತ್ತೇ ತೀರ್ಮಾನ…
ಧಾರವಾಡ:ಧಾರವಾಡಗ್ರಾಮೀಣಕ್ಷೇತ್ರಕ್ಕೆಕಾಂಗ್ರೆಸ್ಅಭ್ಯರ್ಥಿಯಾಗಿವಿನಯ್ಕುಲಕರ್ಣಿಹೆಸರುಅಂತಿಮಗೊಳ್ಳುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ಅವರು ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಬಹಿರಂಗ ಸವಾಲಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಡುತ್ತಿದ್ದಾರೆ. ಬಾರೋ ಅಂತ ಕರೆದವರು ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಶಾಸಕ ಅಮೃತ ದೇಸಾಯಿ, ಈಗಲೂ ಅವರಿಗೆ ಬಾರೋ ಅಂತಲೇ ಕರೆಯುತ್ತೇನೆ. ಅವರು ಬಂದಾದ್ರೂ ಬರಲಿ. ಕಾಂಗ್ರೆಸ್ನವರು ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಗೆಲ್ಲುವ ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರು ಬಂದು ಇಲ್ಲಿ ಚುನಾವಣೆಗೆ ನಿಂತರೂ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಅದಕ್ಕೆ ನಮ್ಮ ತಂಡ ಸಿದ್ಧವಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ನವರೂ ಪೋಸ್ಟ್ ಹಾಕುತ್ತಿರುತ್ತಾರೆ ಅದಕ್ಕೆ ನಮ್ಮವರೂ ಪ್ರತ್ಯುತ್ತರ ಕೊಡುತ್ತಿರುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮತ್ತೊಮ್ಮೆ ಕಮಲವನ್ನು ಅರಳಿಸಿಯೇ ತೀರುತ್ತೇವೆ ಎಂದರು.
ಬೀದರ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಳ್ಳಿ (Silver) ಆಭರಣಗಳನ್ನು ಜಪ್ತಿ (Seize) ಮಾಡಲಾಗಿದೆ. ಮಹಾರಾಷ್ಟ್ರ (Maharastra) ಹಾಗೂ ಬೀದರ್ ಗಡಿ ಚೆಕ್ ಪೊಸ್ಟ್ (Bidar Border Check Post) ನಲ್ಲಿ ತಪಾಸಣೆ ವೇಳೆ 142 ಕೆ.ಜಿ ಬೆಳ್ಳಿಯ ಕಾಲು ಚೈನುಗಳು ಸೇರಿ 1 ಕೋಟಿ 5 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳ ಜೊತೆಗೆ ಕಾರು ಕೂಡ ಜಪ್ತಿ ಮಾಡಲಾಗಿದೆ. ಒಟ್ಟು 8 ಬ್ಯಾಗ್ ಗಳಲ್ಲಿ 142 ಕೆಜಿ ಬೆಳ್ಳಿಯ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗಜಾನನ ಎಂಬವರಿಗೆ ಸೇರಿದ ಕಾರಿನಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ಕಾಲು ಚೈನುಗಳು ಪತ್ತೆಯಾಗಿವೆ. ಕಾರಿನ ಮಾಲೀಕರು ನಿಖರವಾದ ದಾಖಲೆಗಳು ನೀಡದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ (R Dhruvanarayana) ಅವರ ಪತ್ನಿ ವೀಣಾ (Veena) ಶುಕ್ರವಾರ ನಿಧನರಾಗಿದ್ದಾರೆ. ಕ್ಯಾನ್ಸರ್ (Cancer) ಖಾಯಿಲೆಯಿಂದ ಬಳಲುತ್ತಿದ್ದ ಧ್ರುವನಾರಾಯಣ ಅವರ ಪತ್ನಿ ವೀಣಾ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳಷ್ಟೇ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕಳೆದ 2 ವರ್ಷಗಳಿಂದ ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇವರು 2 ಬಾರಿ ಶಾಸಕರಾಗಿ 1 ಬಾರಿ ಸಂಸದರಾಗಿದ್ದರು.