Author: Prajatv Kannada

ಸೂರ್ಯೋದಯ: 06.12 AM, ಸೂರ್ಯಾಸ್ತ : 06.32 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ವಸಂತ ಋತು,ಕೃಷ್ಣ ಪಕ್ಷ, ಉತ್ತರಾಯಣ ತಿಥಿ: ಇವತ್ತು ಪಾಡ್ಯ 10:20 AM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಚಿತ್ತ 01:33 PM ತನಕ ನಂತರ ಸ್ವಾತಿ ಯೋಗ: ಇವತ್ತು ವ್ಯಾಘಾತ 02:32 AM ತನಕ ನಂತರ ಹರ್ಷಣ ಕರಣ: ಇವತ್ತು ಕೌಲವ 10:20 AM ತನಕ ನಂತರ ತೈತಲೆ 10:19 PM ತನಕ ನಂತರ ಗರಜ ರಾಹು ಕಾಲ:10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: -ಇಲ್ಲ ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:42 ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಕಿರು ಪ್ರವಾಸ ಸಾಧ್ಯತೆ, ಸಣ್ಣ ಉದ್ಯಮ ಪ್ರಾರಂಭ ಯೋಜನೆ ರೂಪಿಸುವಿರಿ,ರಾಶಿಯವರಿಗೆ ನೂರಾರು ಜನರಿಗೆ ಕೆಲಸದ ಆಶ್ರಯ ನೀಡುವ ಸಾಮರ್ಥ್ಯ ಇದೆ,ಆರೋಗ್ಯದಲ್ಲಿ…

Read More

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ಕರಗ (Bengaluru Karaga) ಶಕ್ತ್ಯೋತ್ಸವ ಅದ್ದೂರಿಯಾಗಿ ನೇರವೇರಿದೆ. ಚೈತ್ರ ಪೌರ್ಣಿಮೆಯ ಬೆಳದಿಂಗಳಿನಲ್ಲಿ ಮಲ್ಲಿಗೆಯ ಕಂಪಿನೊಂದಿಗೆ ಕರಗ ಶಕ್ತ್ಯೋತ್ಸವ ಆರಂಭವಾಯ್ತು. ನಗರದ ಅನೇಕ ಕಡೆ ಕರಗ ಮೆರವಣಿಗೆ ಸಾಗಿದೆ. ಮಧ್ಯರಾತ್ರಿ 2 ಗಂಟೆ 24 ನಿಮಿಷಕ್ಕೆ ಆರಂಭವಾದ ಕರಗ ಮೆರವಣಿಗೆ, ದೇವಾಲಯದ ಹೊರಭಾಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆ (Dr. D Veerendra Heggade) ಯವರು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ರು. ಆ ಬಳಿಕ ಆರಂಭವಾದ ಕರಗ ಮೆರವಣಿಗೆ, ನಗರದ ಕೆಲ ಭಾಗಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಗರದ ಅನೇಕ ಕಡೆ ಸಾಗುವ ಮೂಲಕ ಲಕ್ಷಾಂತರ ಜನರಿಗೆ ದರ್ಶನ ನೀಡಿದೆ. ಪ್ರತಿವರ್ಷದಂತೆ ಈ ವರ್ಷವು ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಇನ್ನೂ ಹಲವು ಕಡೆ ಕರಗ ಮೆರವಣಿಗೆ ಮುಂದುವರಿದಿದ್ದು, ಸುಮಾರು ಬೆಳಗ್ಗೆ 9 ಗಂಟೆ ವೇಳೆಗೆ ಮತ್ತೆ ಹಿಂದಿರುಗಿ ಮೂಲ ಸ್ಥಾನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ದೇವಾಲಯಕ್ಕೆ ತಲುಪಲಿದೆ.…

Read More

ಮೊದಲ ಪಟ್ಟಿ ಬಿಡುಗಡೆಯ ನಂತರ ಎರಡನೇ ಪಟ್ಟಿಯನ್ನೂ ಕಾಂಗ್ರೆಸ್ ರಿಲೀಸ್ ಮಾಡಿದೆ..ಕಳೆದ ಮೂರು ದಿನಗಳಿಂದ ನಿರಂತರ ಸಭೆ ನಡೆಸಿ ಅಳೆದು ತೂಗಿ ನೋಡಿ ೪೨ ಮಂದಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ..ಜಾತಿವಾರು ಲೆಕ್ಕಾಚಾರ ಮುಂದಿಟ್ಟುಕೊಂಡೇ ಪಟ್ಟಿ ಅನೌನ್ಸ್ ಮಾಡಿದೆ..ಆದ್ರೆ ಈ ಭಾರಿಯ ಪಟ್ಟಿಗೆ ತೀರ್ವ ಅಸಮಾಧಾನ ಎದುರಾಗಿದೆ..ಆಕಾಂಕ್ಷಿಗಳ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದೆ. ಅಳೆದು ತೂಗಿ ನೋಡಿ ಕಾಂಗ್ರೆಸ್ ಎರಡನೇ ಪಟ್ಟಿಯನ್ನ ಬಿಡುಗಡೆಮಾಡಿದೆ..ಮೊದಲ ಪಟ್ಟಿಯಲ್ಲಿ ೧೨೪ ಅಭ್ಯರ್ಥಿಗಳ‌ಘೋಷಣೆ ಮಾಡಿದ್ದ ನಾಯಕರು ಎರಡನೇ ಪಟ್ಟಿಯಲ್ಲಿ ೪೨ ಮಂದಿಗೆ ಮಣೆ ಹಾಕಿದ್ದಾರೆ..೨೨೪ ಕ್ಷೇತ್ರಗಳಲ್ಲಿ ಒಟ್ಟು ೧೬೬ ಕ್ಷೇತ್ರಗಳು ಈಗ ಕ್ಲಿಯರ್ ಆಗಿದೆ..ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ..ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದಾಗ ಅಷ್ಟು ಅಸಮಾಧಾನ ಹೊರಬಿದ್ದಿರಲಿಲ್ಲ..ಆದ್ರೆ ಎರಡನೇ ಪಟ್ಟಿ ರಿಲೀಸ್ ಆಗುತ್ತಲೇ ಆಕಾಂಕ್ಷಿಗಳ ಅಸಮಾಧಾನ ಹೊರಬಿದ್ದಿದೆ.. ಮೊದಲ ಪಟ್ಟಿಯಲ್ಲಿ ಆರು ಹಾಲಿ ಶಾಸಕರ ಹೆಸರು ಘೋಷಣೆಯಾಗ್ಲಿಲ್ಲ..ಎರಡನೇ ಪಟ್ಟಿಯಲ್ಲಾದ್ರೂ ಆಗಬಹುದೆಂಬ ನಿರೀಕ್ಷೆಯಲ್ಲಿದ್ರು..ಆದ್ರೆ ಎರಡನೇ ಪಟ್ಟಿಯಲ್ಲಿ ಅಪ್ಜಲಪುರದ ಎಂ.ವೈ .ಪಾಟೀಲರಿಗೆ ಟಿಕೆಟ್ ನೀಡಲಾಗಿದೆ..ನನಗೆ ವಯಸ್ಸಾಗಿದೆ,ಮಗನಿಗೆ ಕೊಡಿ ಅಂದ್ರೂ ಗೆಲ್ತೀರ…

Read More

ಬೆಂಗಳೂರು: ಮಧ್ಯರಾತ್ರಿಯ ಸಮಯ.ಖಾಲಿ‌ಜಾಗದಲ್ಲಿ ಕಾರೊಂದು ಧಗಧಗಿಸಿತ್ತು.ಕಾರಲ್ಲಿ ಮಲಗಿದ ವ್ಯಕ್ತಿಯ ದೇಹ ಸುಟ್ಟು ಕರಕಲಾಗಿತ್ತು. ವ್ಯಕ್ತಿಯ ಗುರುತು ಪತ್ತೆಯಾಗಿದ್ದು..ಮಾತ್ರ ರೋಚಕ ಅರ್ಧ ಸುಟ್ಟಿದ್ದ ಚಡ್ಡಿ ಸುಳಿವು ಕೊಟ್ಟಿದೆ..ಅಲ್ಲದೇ ಇಷ್ಟೆಲ್ಲ ಅವಘಡಕ್ಕೆ ಸೊಳ್ಳೆ ಬತ್ತಿ ಕಾರಣ ಆಯ್ತು ಅನ್ನೋದೆ ವಿಪರ್ಯಾಸ. ಬೆಂಕಿಯ ಕಿಡಿಯೊಂದು .ನೋಡ ನೋಡ್ತಿದ್ದಂತೆ ಜ್ವಾಲೆಯಾಗಿ ಧಗಿಧಗಿಸಿತ್ತು..ರಾತ್ರಿ ಕಳೆದು ಬೆಳಗಾಗೋದರೊಳಗೆ ಹೀಗೆ ಓಡಾಡ್ತಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದ. .ಅರ್ಧ ಚಡ್ಡಿ ನೋಡಿ ಕುಟುಂಬಸ್ಥರಿಗೆ ಮೃತಪಟ್ಟವನು ವಿನೋದ ಎಂಬುದಾಗಿ  ಗೊತ್ತಾಗಿದೆ ಹೌದು ಮಾರ್ಚ್ 29 ರ ಮುಂಜಾನೆ 1 ಗಂಟೆಯ ಸಮಯ.ದೇವಿ‌ನಗರ ಮುಖ್ಯರಸ್ತೆ ಪಕ್ಕದಲ್ಲಿರುವ ಕಸ ಹಾಕುವ ಖಾಲಿ‌ ಜಾಗ.ಕಾರಿಗೆ ಬೆಂಕಿಯ ಕಿಡಿ ಅದೆಲ್ಲಿ ಬಿತ್ತೋ..ನಿಧಾನವಾಗಿ ಹೊತ್ತಿಕೊಂಡ ಬೆಂಕಿ ಒಂದೇ ಸಮನೆ ಕಾರು ಧಗಧಗಿಸುವಂತೆ ಮಾಡಿತ್ತು. ಸ್ಕ್ರಾಪ್ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸುಟ್ಟು ಜೀವಂತ ಶವವಾಗಿದ್ದ.ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರು..ಇಂಚಿಂಚು ಪರಿಶೀಲನೆ ನಡೆಸಿದ್ದ ಕೊಡಿಗೆಹಳ್ಳಿ ಪೊಲೀಸರಿಗೆ ಸತ್ತವನ ಗುರುತು ಕೂಡ ಪತ್ತೆಯಾಗಿರಲಿಲ್ಲ .ಸಿಸಿಟಿವಿ ದೃಶ್ಯ ಆಧರಿಸಿ ತನಿಖೆಗೆ ಇಳಿದ ಖಾಕಿ ತಂಡಕ್ಕೆ…

Read More

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಸ್ಪರ್ಧೆ ಇನ್ನೂ ಕಗ್ಗಂಟಾಗಿದೆ. ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಘೋಷಣೆ ಮಾಡಿಲ್ಲ. ಜೊತೆಗೆ ಕೋಲಾರಕ್ಕೆ ಬೇರೆ ಅಭ್ಯರ್ಥಿ ಹೆಸರೂ ಘೋಷಣೆ ಮಾಡಿಲ್ಲ. ಕೋಲಾರದಲ್ಲಿ ಸ್ಪರ್ಧೆ ಇಂಗಿತವನ್ನು ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆಯಂತೆ ವರುಣಾದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕೋಲಾರ ಕಣ ಸಿದ್ದರಾಮಯ್ಯಗೆ ಅಷ್ಟೊಂದು ಸುಲಭವಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಇದೀಗ ವರುಣಾದ ಜೊತೆಗೆ ಕೋಲಾರದಲ್ಲೂ ಸ್ಪರ್ಧೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಇನ್ನೂ ಹೈಕಮಾಂಡ್ ಗ್ರೀನ್ ಸಿಗ್ನಲ್ ‌ನೀಡಿಲ್ಲ. ಎರಡು ಕ್ಷೇತ್ರ ಆಯ್ಕೆಗೆ ಅಪಸ್ವರ! ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯ ಮಾಡಿದ್ದರು. ಸಿದ್ದರಾಮಯ್ಯ ನಿವಾಸದಲ್ಲಿ ಧರಣಿಯನ್ನು ನಡೆಸಿದ್ದರು. ಸಿದ್ದರಾಮಯ್ಯ ಆಪ್ತರು ಕೂಡಾ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಅವರು…

Read More

ಬೆಂಗಳೂರು: ಸ್ಯಾಂಡಲ್ ವುಡ್ ನ ನಟನಿಗೆ ಧಮ್ಕಿ ಪ್ರಕರಣ ಸಂಬಂಧ ಒಳಸಂಚು ನಡೆದಿದೆ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗುತ್ತಲೇ ಇದೆ. ಚಿತ್ರರಂಗದ ಒಬ್ಬ ವ್ಯಕ್ತಿ ಈ ಹಿಂದಿನ ಕಿಂಗ್ ಪಿನ್ ಎಂಬ ಶಂಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಸಿಸಿಬಿಯ ಕಣ್ಣು ಯಾರ ಮೇಲಿದೆ ಗೊತ್ತಾ‌..? ಡೀಟೇಲ್ಸ್ ಇಲ್ಲಿದೆ. ಸ್ವತಃ ನಟ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರು.‌ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭಿರತೆಯನ್ನ ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಮಂಜುನಾಥ್ ಮೂಲಕ ದೂರು ನೀಡಿದ್ರು. ಯಸ್ ಬೆದರಿಕೆ ಪತ್ರ ಬಂದಿದ್ದು ಎರಡನೇ ಬಾರಿ. ಮೊದಲ ಬಾರಿಯೋ ಒಮ್ಮೆ  ಪತ್ರ ಕಳಿಸಿದ್ದ ಆಗಂತುಕ. ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ ,ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದ ಸದ್ಯ ಈ ಪತ್ರ ಗಂಭೀರತೆಯನ್ನ ಪಡೆದುಕೊಂಡಿದೆ. ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿತ್ತು. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌.…

Read More

ತಮ್ಮ ಸಂಬಂಧದ ಗೌಪ್ಯತೆ ಕಾಪಾಡಲು ನೀಲಿ ಚಿತ್ರ ತಾರೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಣ  ನೀಡಿದ ಪ್ರಕರಣದಲ್ಲಿ ಸದ್ಯ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಟ್ರಂಪ್ ವಿರುದ್ಧ ಸ್ಟಾರ್ಮಿ ಡೇನಿಯಲ್ಸ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ ಕ್ಯಾಲಿಫೋರ್ನಿಯಾದ 9 ನೇ ಯುಎಸ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್, ಟ್ರಂಪ್ ಅವರ ವಕೀಲರಿಗೆ ರೂ99,38,286.60 ಹೆಚ್ಚು ಪಾವತಿಸಲು ಆದೇಶ ನೀಡಿದೆ. ನೀಲಿ ಚಲನಚಿತ್ರ ತಾರೆ ಈಗಾಗಲೇ ಟ್ರಂಪ್ ವಕೀಲರಿಗೆ ನ್ಯಾಯಾಲಯದ ಆದೇಶದ ಪಾವತಿಗಳಲ್ಲಿ $ 500,000 ಪಾವತಿಸುತ್ತಿದ್ದಾರೆ. ಇಬ್ಬರ ನಡುವಿನ ಉದ್ದೇಶಪೂರ್ವಕ ಸಂಬಂಧವನ್ನು ಮುಚ್ಚಿಹಾಕಲು ಡೇನಿಯಲ್ಸ್‌ಗೆ ಗೌಪ್ಯವಾಗಿ ಹಣ ಪಾವತಿಗೆ ಸಂಬಂಧಿಸಿದ 34 ಆರೋಪಗಳ ಮೇಲೆ ಮ್ಯಾನ್‌ಹ್ಯಾಟನ್ ನ್ಯಾಯಾಲಯವು ಟ್ರಂಪ್ ಅವರನ್ನು ವಿಚಾರಣೆಗೆ ಒಳಪಡಿಸಿದ ಅದೇ ದಿನ ಈ ಆದೇಶವನ್ನು ನೀಡಲಾಯಿತು ಎಂದು ಸಿಎನ್‌ಎನ್ ವರದಿ ಮಾಡಿದೆ. ಆಪಾದಿತ ಪಾವತಿಗಳಿಗೆ ಸಂಬಂಧಿಸಿದ ವ್ಯವಹಾರ ದಾಖಲೆಗಳಲ್ಲಿ ತಪ್ಪು ಮಾಡಿದ್ದಕ್ಕೆ 34 ಆರೋಪಗಳನ್ನು ಟ್ರಂಪ್ ವಿರುದ್ಧ ಹೊರಿಸಲಾಯಿತು. ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಕ್ರಿಮಿನಲ್…

Read More

ವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆಪ್ ಮಾಜಿ ಸಚಿವ ಸತ್ಯೇಂದರ್ ಜೈನ್‌ಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನಿರಾಕರಿಸಿದ್ದು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ಜಾಮೀನು  ಅರ್ಜಿಯನ್ನು ಹೈಕೋರ್ಟ್  ನ್ಯಾಯಾಧೀಶ ದಿನೇಶ್ ಕುಮಾರ್ ಶರ್ಮ ವಜಾಗೊಳಿಸಿದ್ದಾರೆ. ಇವರೊಂದಿಗೆ ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರಿಗೂ ಜಾಮೀನು ನಿರಾಕರಿಸಿದೆ. ಈ ಮೂವರು ಆರೋಪಿಗಳು ನ್ಯಾಯಾಲಯ ವಿಧಿಸಿದ ಎರಡು ಷರತ್ತುಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ ಜೈನ್ ಪ್ರಭಾವಿ ವ್ಯಕ್ತಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಜಾಮೀನು ನೀಡಿಕೆಗೆ ಅಗತ್ಯವಾದ ಅವಳಿ ಷರತ್ತುಗಳನ್ನು ಪೂರೈಸಿದ್ದಾರೆ ಎಂದು ಹೇಳಲಾಗದು. ವಿಚಾರಣಾ ನ್ಯಾಯಾಲಯವು ನೀಡಿರುವ ಆದೇಶವು ದೋಷರಹಿತವಾಗಿದೆ. ಅವರು ಸಾಕ್ಷ್ಯ  ಹಾಳು ಮಾಡುವ ಸಾಧ್ಯತೆಗಳಿವೆ ಎಂಬುದಾಗಿ ನ್ಯಾ. ದಿನೇಶ್ ಕುಮಾರ್ ಶರ್ಮಾ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 22 ರಂದು ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.                   …

Read More

ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಮಗ ಅನಿಲ್ ಆಂಟನಿ ಅವರು ಗುರುವಾರ ಬಿಜೆಪಿ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ವಿಚಾರವಾಗಿ ಪಕ್ಷದ ನಿಲುವನ್ನು ಟೀಕಿಸಿದ್ದ ಅನಿಲ್ ಆಂಟನಿ ಅವರು, ಜನವರಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ನಿರೀಕ್ಷೆ ವ್ಯಕ್ತವಾಗಿತ್ತು. ಅನಿಲ್ ಆಂಟನಿ ಅವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಕಮಲ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ಅನಿಲ್ ಆಂಟನಿ ಅವರ ಪಕ್ಷ ಸೇರ್ಪಡೆಯಿಂದ ಕೇರಳದಲ್ಲಿ ಕಮಲ ಅರಳಿಸಲು ಪ್ರಯತ್ನಿಸುತ್ತಿರುವ ಕೇಸರಿ ಪಾಳೆಯಕ್ಕೆ ಬಲ ಬಂದಂತಾಗಿದೆ. ಕಮಲ ಕೈ ಹಿಡಿಯುತ್ತಿದ್ದಂತೆಯೇ ಅನಿಲ್ ಅವರು ತಮ್ಮ ಮಾಜಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಾವು ಮಾಡುವ ಕೆಲಸವು ‘ಕುಟುಂಬ’ ಒಂದಕ್ಕಾಗಿ ಮಾಡುವ ಕೆಲಸ ಎಂದು ನಂಬಿದ್ದಾರೆ. ಆದರೆ ನಾನು ದೇಶಕ್ಕಾಗಿ ಕೆಲಸ…

Read More

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ದಂಡ ವಿಧಿಸುವ ನಿಯಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. 2022ರ ಮಾರ್ಚ್ 31ರವರೆಗೆ ಉಚಿತವಾಗಿ ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಬಹುದಿತ್ತು. 2022ರ ಏಪ್ರಿಲ್ 1 ರಿಂದ 500 ರೂ. ವಿಳಂಬ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿತ್ತು. ನಂತರ ಜುಲೈ 1 ರಿಂದ ಈ ವಿಳಂಬ ಶುಲ್ಕವನ್ನು 1 ಸಾವಿರ ರೂ.ಗೆ ಏರಿಕೆ ಮಾಡಲಾಗಿತ್ತು. ಇಷ್ಟೆಲ್ಲಾ ಅವಕಾಶ ಕೊಟ್ಟ ಬಳಿಕವೂ ಆಧಾರ್ ಕಾರ್ಡ್‌ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ 2023ರ ಜೂನ್ 30ರ ಬಳಿಕ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಈ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲೇ ಬೇಕು. ಇದಕ್ಕಾಗಿ ನಾವು ಬಹಳಷ್ಟು ಕಾಲಾವಕಾಶ ನೀಡಿದ್ದೇವೆ. ಈಗಲಾದರೂ ಲಿಂಕ್ ಮಾಡಲೇಬೇಕಿದೆ…

Read More