ಹೇಮಾ ವರದಿಯ ಬಳಿಕ ಮಲಯಾಳಂ ಚಿತ್ರರಂಗದ ಸಾಕಷ್ಟು ಕರಾಳ ಮುಖಗಳು ಆಚೆ ಬರುತ್ತಿವೆ. ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ.ಇದೀಗ ಮಲಯಾಳ ಚಿತ್ರರಂಗದ ಖ್ಯಾತ ನಟ ಮತ್ತು ಸಿಪಿಎಂ ಶಾಸಕ ಎಂ. ಮುಖೇಶ್ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಕೇಶ್ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ನಟಿಯೊಬ್ಬರ ದೂರಿನ ಆಧಾರದ ಮೇಲೆ ನಟ ಸಿದ್ದೀಕ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ನಂತರ, ಎಡ ಪಕ್ಷದ ಸರ್ಕಾರವು ಶಾಸಕ ಮುಖೇಶ್ ಅವರ ಪ್ರಕರಣದಲ್ಲಿ ಎಚ್ಚರಿಕೆಯ ನಡೆ ಅನುಸರಿಸಿದಂತೆ ಕಾಣುತ್ತಿದೆ. ವಿಶೇಷ ಪೊಲೀಸ್ ತಂಡ ನಡೆಸುತ್ತಿರುವ ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಮುಕೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಪಿಎಂನ ಹಿರಿಯ ನಾಯಕ ಮತ್ತು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ‘ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು, ನಟಿಯರ…
Author: Prajatv Kannada
ಮಲಯಾಳಂ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಇತ್ತೀಚೆಗೆ ಹೇಮಾ ಕಮಿಟಿ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದೆ. ವರದಿಯ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎದಿದ್ದು ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಇದೀಗ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮ X ಖಾತೆಯಲ್ಲಿ ದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ. ‘ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯವನ್ನು ನಿಗ್ರಹಿಸಲು ಹೇಮಾ ಸಮಿತಿ ಅಗತ್ಯವಿತ್ತು. ಆದರೆ ಚಿತ್ರರಂಗ ಮಾತ್ರವಲ್ಲ, ಪ್ರತಿಯೊಂದೂ ಕ್ಷೇತ್ರದಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಕೆಲವು ಪುರುಷರೂ ಇದನ್ನು ಎದುರಿಸುತ್ತಿದ್ದಾರೆ. ನನ್ನ 24 ಮತ್ತು 21 ವರ್ಷದ ಹೆಣ್ಣುಮಕ್ಕಳೊಂದಿಗೆ ನಾನು ಮನಬಿಚ್ಚಿ ಮಾತನಾಡಿದಾಗ, ಸಂತ್ರಸ್ಥರ ಬಗ್ಗೆ ಅವರ ಕಾಳಜಿ ನೋಡಿ ಆಶ್ಚರ್ಯವಾಯಿತು. ನನ್ನ ಹೆಣ್ಣುಮಕ್ಕಳು ಇಂದು ಅಂಥ ಸಂತ್ರಸ್ತೆಯರೊಂದಿಗಿದ್ದಾರೆ. ಬಾಧಿತ ಮಹಿಳೆಯರು ಇಂದು ಅಥವಾ ನಾಳೆ ಮಾತನಾಡಿದರೂ ಪರವಾಗಿಲ್ಲ, ಆದರೆ ತಕ್ಷಣ ಮಾತನಾಡಿದರೆ, ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಹಾಯವಾಗುತ್ತದೆ,’ ಎಂದಿದ್ದಾರೆ. ‘ಹೊರಗೆ ಹೇಳಿದರೆ…
ನಾದಬ್ರಹ್ಮ ಹಂಸಲೇಖ ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಇದೀಗದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂವಿಧಾನವಾಗಿರುವ ಚಿಂತನಗಂಗಾ ಎಂಬ ಪುಸ್ತಕವನ್ನು ಓದುವ ಬ್ರಾಹ್ಮಣರು ರಾಷ್ಟ್ರದಲ್ಲಿ ಏನು ನಡೆಯುತ್ತದೆಯೋ ಅದರ ವಿರುದ್ಧ ಪ್ರತಿದಾಳಿ ಮಾಡಲು ಸಿದ್ಧಗೊಳ್ಳುತ್ತಾರೆ ಎಂದು ಹೇಳುವ ಮೂಲಕ ವಿವಾದಾ ಹುಟ್ಟುಹಾಕಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬ್ರಾಹ್ಮಣರ ವಿರುದ್ಧ ಮಾತನಾಡುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಕಳೆದ 40 ವರ್ಷಗಳ ಹಿಂದೆ ಚಿಂತನ ಗಂಗಾ ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂವಿಧಾನವಾಗಿದೆ. ಇದನ್ನು ಚಿಂತನ ಗಂಗಾ ಎಂಬ ಪುಸ್ತಕವಾಗಿ ಮುದ್ರಣ ಮಾಡಿ ಜನರಿಗೆ ಹಂಚಿಕೆ ಮಾಡುತ್ತಾರೆ. ಅವರು ನೀಡಿದ ಪುಸ್ತಕ ಎಷ್ಟು ಕೆಲಸ ಮಾಡುತ್ತದೆಂದರೆ ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲಿಯೂ ಭಗವದ್ಗೀತೆ ಪುಸ್ತಕದ ಪಕ್ಕದಲ್ಲಿಯೇ ಅದನ್ನು ಇಟ್ಟುಕೊಂಡಿರುತ್ತಾರೆ ಎಂದರು. ಮುಂದುವರೆದು, ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುವುದರ ಜೊತೆಗೆ ಆರ್‌ಎಸ್‌ಎಸ್‌ನವರು ಕೊಟ್ಟ ಚಿಂತನಗಂಗಾ ಪುಸ್ತಕವನ್ನು ಕೂಡ ಓದುತ್ತಾರೆ.…
ನಟ ದರ್ಶನ್ ರನ್ನು ಅಭಿಮಾನಿಗಳು ಡಿ ಬಾಸ್ ಎಂದು ಕರೆಯುತ್ತಾರೆ. ಆದರೆ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ಹೆಸರಿನ ಮುಂದೆ ಅಲಿಯಾಸ್ ಸೇರ್ಪಡೆಯಾಗಿದೆ. ಸದ್ಯ ದಾಖಲಾಗಿರುವ ಎರಡು ಎಫ್ಐಆರ್ ನಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ಉಲ್ಲೇಖ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊದಲನೇ ಕೇಸ್ ಬೇಗೂರು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಜೈಲಿನ ಲಾನ್‌ನಲ್ಲಿ ಕುಳಿತು ಟೀ, ಸಿಗರೇಟ್ ಸೇವನೆ ಬಗ್ಗೆ ತನಿಖೆ ನಡೆಸಲಿದ್ದಾರೆ. ಈ ಕೇಸ್‌ನಲ್ಲಿ ದರ್ಶನ್ A1 ಆರೋಪಿಯಾಗಿದ್ದಾರೆ. ದರ್ಶನ್ ಮ್ಯಾನೇಜರ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳಸೀನಾ A4 ಆರೋಪಿಗಳಾಗಿದ್ದಾರೆ. ಇನ್ನೂ 2ನೇ ಎಫ್ ಐ ಆರ್ ಜೈಲಿನಲ್ಲಿ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಬಗ್ಗೆಯಾಗಿದೆ. ಈ ಪ್ರಕರಣದ ತನಿಖೆಯನ್ನ ಹುಳಿಮಾವು…
ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿಧ್ಯಾರ್ಥಿಗಳು ಮದ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿಊಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ಸೋಮವಾರ ನಡೆದಿದೆ. ತಾಲ್ಲೂಕಿನ ಜಂಬಗಿ ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಊಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ. ಈ ಸಮಯದಲ್ಲಿ ವಿಧ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ. ವರ್ಗಾಕೋಣೆಯ ಹತ್ತಿರವು ಬಂದ ನಾಟ್ಯ ಮಯೂರಿ ಧಾನ್ಯಗಳನ್ನು ಸವಿದು ತನ್ನಹಸಿವನ್ನು ನಿಗಿಸಿಕೊಂಡಿದೆ.ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು ,ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸೇಸುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿಧ್ಯಾರ್ಥಿಗಳು ಖುಷ್ ಆಗಿದ್ದಾರೆ. ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ.ಪಿ.ನಾಯಿಕ, ಸಹಶಿಕ್ಷಕಿ…
ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಹಾಗೂ ಧಾರವಾಡ ಆಯೋಜಿಸಿದ ‘ಡಿಸ್ಟಿಕ್ ಇಂಟರ್ಯಾಕ್ಟ್ ಲೀಡರ್‌ಶಿಪ್ ಪೋರಮ್ ಮಿಟ್’ ಡ್ಯಾನ್ಸ್ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ಇಂಟರ್ಯಾಕ್ಟ್ ಕ್ಲಬ್ ಆಫ್ ಸರಸ್ವತಿ ಸ್ಕೂಲ್ ಹುಬ್ಬಳ್ಳಿ ಇವರು ಪ್ರಥಮ ಬಹುಮಾನ ಪಡೆದಿದೆ.ಈ ಸ್ಪರ್ಧೆಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಸುಮಾರು 20 ಮಕ್ಕಳ ತಂಡಗಳು ಭಾಗವಹಿಸಿದ್ದವು. ರೋಟರಿ ಮಿಡ್‌ಟೌನ್ ಅಧ್ಯಕ್ಷರಾದ ದಿನೇಶ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರವೀಣ ಭನ್ಸಾಲಿ, ಶಾಲೆಯ ಅಧ್ಯಕ್ಷರಾದ ಲಿಂಗರಾಜ ಪಾಟೀಲ, ಪ್ರಾಂಶುಪಾಲರಾದ ಶ್ರೀಮತಿ ಕೀರ್ತಿ ದೇಶಪಾಂಡೆ, ಅಧ್ಯಾಪಕಿಯರಾದ ಶ್ರೀಮತಿ ರೂಪಾ ಕುಲಕರ್ಣಿ, ಶ್ರೀಮತಿ ಶೈಲಜಾ, ಕು. ರಶ್ಮಿ ಶ್ರೀಮತಿ ಕವಿತಾ ಪಲ್ಲೇದ ಮತ್ತು ಅಧ್ಯಾಪಕ ವಿನಯಕುಮಾರ ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದನೆ ಸಲ್ಲಿಸಿ, ಹರ್ಷವನ್ನು ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯೊಬ್ಬ ವಂಚಿಸಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೌದು ಚಿಕ್ಕಬಳ್ಳಾಪುರದಲ್ಲಿ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇವರಿಬ್ಬರು ಚಿಕ್ಕಬಳ್ಳಾಪುರ ಮುನಿಸಿಪಾಲ್ ಕಾಲೇಜಿನಲ್ಲಿ ಕರೆಸ್ಪಾಂಡೆನ್ಸ್‌ನಲ್ಲಿ ಪದವಿ ಮಾಡುತ್ತಿದ್ದರು. ಕಾಲೇಜಿನಲ್ಲಿ ಇಬ್ಬರಿಗೂ ಪರಿಚಯವಾದ ಬಳಿಕ ಪ್ರೇಮಕ್ಕೆ ತಿರುಗಿತ್ತು. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ದೈಹಿಕ ಸಂರ್ಪಕ ಬೆಳೆಸಿದ್ದ. ಆದರೆ ಮದುವೆ ಆಗು ಅಂದರೆ ಅಂತರ್ಜಾತಿ ಎಂಬ ನೆಪವೊಡ್ಡಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ಮನನೊಂದ ಯುವತಿ ಶಿರಿಷಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸುದ್ದಿ ಕೇಳಿ ಪೊಲೀಸ್ ಪೇದೆ ತಿಮ್ಮಣ್ಣ ರಾಮಪ್ಪಭೂಸರೆಡ್ಡಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸ್ ಪೇದೆ ಹಾಗೂ ಯುವತಿ ಶಿರಿಷಾ ಇಬ್ಬರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸಿ, ಎಎಸ್ಪಿ ಆರ್.ಐ. ಖಾಸೀಂ, ಡಿ.ವೈ.ಎಸ್ಪಿ ಮುರಳಿಧರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಇಬ್ಬರಿಗೂ…
ಬೆಂಗಳೂರು: ಬಿಗ್ ಬ್ರದರ್ ಕುಮಾರಸ್ವಾಮಿಯವರು ನಕಲಿ ಕೆಲಸ ಮಾಡಲ್ಲ, ಅವರು ಸಚ್ಚಾ ಕೆಲಸ ಮಾಡೋರು. ಆದರೆ ಅವರ ಸಹಿ ಫೋರ್ಜರಿ ಎಂದಿದ್ದಾರೆ. ಆದರೂ ಏಕೆ ದೂರು ಕೊಟ್ಟಿಲ್ಲ? ಈಗಲಾದ್ರೂ ದೂರು ಕೊಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. https://youtu.be/d0JP1BWyLXc?si=DRowTV6IGqc1R8O6 ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನದು ಸಹಿ ಅಲ್ಲದೆ ಹೋಗಿದ್ರೆ ನೀನು ಏಕೆ ಕೋರ್ಟ್‍ಗೆ ಹೋಗಿದ್ದೀಯಾ? ಅಲ್ಲಿ ಸಹಿ ಮಾಡಿದ್ದೀನಿ ಎಂದು ಹೇಳಿದ್ದೀಯಾ? ಮಾಧ್ಯಮದ ಮುಂದೆ ಏಕೆ ಸುಳ್ಳು ಹೇಳ್ತಾ ಇದ್ದೀಯಾ? ನೀನು ಕೇಂದ್ರ ಸಚಿವ, ಸಂವಿಧಾನದ ಬದ್ಧವಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಸತ್ಯ ಹೇಳಬೇಕು ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ. ಒಬ್ಬ ಸಿಎಂ ಆಗಿದ್ದವನು ಬೇಲ್ ಅಪ್ಲಿಕೇಶನ್‍ನಲ್ಲಿ ಏಕೆ ನನ್ನದೇ ಸಹಿ ಅಂತಾ ಒಪ್ಪಿಕೊಂಡ್ರು? ಯಾಕೆ ದೂರು ದಾಖಲಿಸಿಲ್ಲ. ನಿನಗೆ ಪೊಲೀಸ್ ಇದ್ದಾರೆ, ದೊಡ್ಡ ಸರ್ಕಾರದಲ್ಲಿದ್ದೀಯಾ. ಮಂಡ್ಯ, ಮಾಗಡಿ, ರಾಮನಗರ ಎಲ್ಲಿಯಾದ್ರೂ ದೂರು ಕೊಡಿ, ಗೌರವಾನ್ವಿತ ಹೆವಿ ಇಂಡಸ್ಟ್ರೀಸ್ ಅಂಡ್ ಸ್ಟೀಲ್ ಮಿನಿಸ್ಟರ್ ಕುಮಾರಸ್ವಾಮಿ…
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಜೂನ್ 11 ರಂದು ಅವರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೆ ಪವಿತ್ರಾ ಗೌಡ ಪರ ವಕೀಲರು ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ವಿಚಾರಣೆ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದ್ದಾರೆ. https://youtu.be/KgPLaMvgaLo?si=PQgDkXER4MI2OjFD ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲವು ವಿಷಯಗಳನ್ನು ಬಿಚ್ಚಿಟ್ಟರು. ಅಲ್ಲದೆ ಪ್ರಕರಣದಲ್ಲಿ ಪವಿತ್ರಾ ಗೌಡರ ಪಾತ್ರವನ್ನು ವಿವರಿಸಿದರು. ಆರೋಪಿ 3, ಪವನ್ ಮೊಬೈಲ್ ಮೂಲಕ ರೇಣುಕಾ ಸ್ವಾಮಿ ಜೊತೆಗೆ ಪವಿತ್ರಾ ಮಾತನಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮುಂದುವರೆದು, ಮಹಳೆ ಎಂಬ ಕಾರಣಕ್ಕೆ ಪವಿತ್ರಾ ಗೌಡಗೆ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ನ ಕೆಲವು ಆದೇಶಗಳನ್ನು ಉದಾಹರಣೆಯಾಗಿ ನೀಡಿದರು. ಬಳಿಕ ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸೆಬಾಸ್ಟಿಯನ್, ಪವಿತ್ರಾಗೌಡ ಗೂ ದರ್ಶನ್‌ಗೆ ಒಂದು ರೀತಿಯ ಸಂಬಂಧ…
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 32 ವರ್ಷದ ಪತ್ರಕರ್ತೆಯೊಬ್ಬರ ಶವ ಕೆರೆಯೊಂದರಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತ ಪತ್ರಕರ್ತೆಯನ್ನು ಗಾಝಿ ಟಿವಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕಿ ಸಾರಾ ರೆಹನುಮಾ ಎಂದು ಗುರುತಿಸಲಾಗಿದೆ. ಗಾಝಿ ಟಿವಿಯು ಗಾಝಿ ಗ್ರೂಪ್‌ನ ಬೆಂಗಾಳಿ ಭಾಷೆಯ ಸಾಟಲೈಟ್ ಮತ್ತು ಕೇಬಲ್ ಟಿವಿ ಚಾನೆಲ್ ಆಗಿದೆ. ಢಾಕಾದಲ್ಲಿರುವ ಹತ್ರಿಜ್‌ಹೀಲ್ ಹೆಸರಿನ ಕರೆಯಲ್ಲಿ ಸಾರಾ ಅವರ ಮೃತದೇಹ ತೇಲುತ್ತಿತ್ತು ಎಂದು ಟ್ರಿಬ್ಯೂನ್ ಪತ್ರಿಕೆಯಲ್ಲಿ ವರದಿಯಾಗಿದೆ. ಸಾರಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾರಾ ಸಾಯುವ ಮುನ್ನಾದಿನ ಫೇಸ್ಬುಕ್‌ನಲ್ಲಿ ಫಾಹಿಮ್ ಫೈಸಲ್ ಎನ್ನುವವರ ಬಗ್ಗೆ ‘ನಿಮ್ಮಂತಹ ಗೆಳೆಯನನ್ನು ಹೊಂದಿರುವುದು ಖುಷಿಯ ಸಂಗತಿ. ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ನಿಮ್ಮ ಕನಸುಗಳು ನನಸಾಗಲಿ. ನಾವಿಬ್ಬರು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೆವು. ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಸತ್ತಂತೆ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ. ಸಾರಾ ಅವರ ಸಾವಿಗೆ…