ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಗೆಲ್ಲಲಿ ಅಥವಾ ಸೋಲಲಿ ತಂಡದ ಡ್ರೆಸ್ಸಿಂಗ್ ಕೊಠಡಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಗುಜರಾತ್ ಟೈಟನ್ಸ್ ಆಲ್‌ರೌಂಡರ್ ರಾಹುಲ್ ತೆವಾಟಿಯ ತಿಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ವಾತಾವರಣ ಅತ್ಯುತ್ತಮವಾಗಿದೆ. ಹೆಡ್ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಗ್ಯಾರಿ ಕ್ರಿಸ್ಟನ್ ಅವರನ್ನೊಳಗೊಂಡ ಕೋಚಿಂಗ್ ಸಿಬ್ಬಂದಿ ಉತ್ತಮವಾಗಿದೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಫೈನಲ್ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಆವೃತ್ತಿಯಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2022ರ ಯಶಸ್ಸನ್ನು 2023ರ ಟೂರ್ನಿಯಲ್ಲಿಯೂ ಗುಜರಾತ್ ಟೈಟನ್ಸ್ ತಂಡ ಮುಂದುವರಿಸಿದೆ. ತನ್ನ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ 179 ರನ್ ಗುರಿ ಹಿಂಬಾಲಿಸಿದ್ದ ಗುಜರಾತ್ ಪರ ನಿರ್ಣಾಯಕ ಹಂತದಲ್ಲಿ ರಾಹುಲ್ ತೆವಾಟಿಯ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ…
Author: Prajatv Kannada
ಹೊಸದಿಲ್ಲಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಮಂಗಳವಾರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯದ ವೇಳೆ ಪಂತ್ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. 2022ರ ಡಿಸೆಂಬರ್ 30 ರಂದು ಮುಂಜಾನೆ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಂಭೀರ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು 2023ರ ಐಪಿಎಲ್ ಟೂರ್ನಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ. ಅವರು ಕಮ್‌ಬ್ಯಾಕ್ ಮಾಡಲು ಇನ್ನಷ್ಟು ತಿಂಗಳುಗಳ ಕಾಲಾವಕಾಶ ಅಗತ್ಯವಿದೆ. ಅಂದಹಾಗೆ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಂಗಳವಾರ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಪಂತ್, ಕ್ಯಾಪಿಟಲ್ಸ್ ತಂಡದ ಆಟಗಾರರನ್ನು ಹುರಿದುಂಬಿಸಿದರು. ಆದರೆ ಪಂದ್ಯದಲ್ಲಿ…
ನಟ ಕಿಚ್ಚ ಸುದೀಪ್ ಅವರಿಗೆ ಕಿಡಿಗೇಡಿಗಳು ಬೆದರಿಕೆ ಪತ್ರ ಕಳಿಸಿರುವ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿಬಿಐಗೆ ವರ್ಗಾಹಿಸಿದ್ದಾರೆ. ಸುದೀಪ್ ಬಿಜೆಪಿ ಪರ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬೆದರಿಕೆ ಪತ್ರ ಬಂದಿರುವುದರಿಂದ ಇದು ರಾಜಕೀಯದವರ ಕೈವಾಡ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಲ್ಲ, ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಯಾರು ಅಂತ ಗೊತ್ತಿದ್ದರೂ ಕೂಡ ಈಗ ಸೈಲೆಂಟಾಗಿ ಇರುತ್ತೇನೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು’ ಎಂದಿದ್ದಾರೆ. ‘ಯಾರು ಪತ್ರ ಬರೆದಿದ್ದಾರೆ ಎಂಬ ವಿಚಾರ ಹೊರಗಡೆ ಬರುತ್ತದೆ. ಅದನ್ನು ನಾನು ಸುಮ್ಮನೆ ಬಿಡುವುದಿಲ್ಲ. ಕೆಲವು ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಅದಕ್ಕೆ ಬದ್ಧವಾಗಿದ್ದು, ಎಲ್ಲ ಪಕ್ಷದಲ್ಲೂ ನನಗೆ ಆತ್ಮೀಯರು ಇದ್ದಾರೆ. ನನ್ನ ಪರ ಇರುವವರಿಗಾಗಿ ನಾವು ಕೆಲವು ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು…
ನಟ ಕಿಚ್ಚ ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಈ ಭಾರಿ ಸುದೀಪ್ ರಾಜಕೀಯಕ್ಕೆ ಬರ್ತಾರೆ ಎಂದೇ ಹೇಳಲಾಗಿತ್ತು. ಆದರೆ ಇದೀಗ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡುವುದಾಗಿ ಸುದೀಪ್ ಬಹಿರಂಗವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಯಾವುದೇ ಪಕ್ಷದ ಟಿಕೆಟ್ ಕೇಳಿಯೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ. ಆದರೆ, ನನಗೆ ಬೆಂಬಲ ನೀಡಿದವರ, ನನ್ನ ಏಳಿಗೆಗೆ ಕಾರಣರಾವದರ ಪರವಾಗಿ ಪ್ರಚಾರ ಮಾಡುತ್ತೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಅಂಥವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಕೂಡ ಒಬ್ಬರು. ಅವರನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನಾನು ಅವರ ಪರವಾಗಿ ನಿಲ್ಲಲಿದ್ದೇನೆ ಎಂದು ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು. ನಾನು…
ಅಮೆರಿಕಾ ಮೂಲದ ಕಂಪನಿ ಜಾನ್ಸನ್ ಎಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಕ್ಯಾನ್ಸರ್ಗೆ ಕಾರಣವೆಂದು ಆರೋಪಿಸಿರುವ ಸಾವಿರಾರು ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪರಿಹಾರ ಪಾವತಿಸಲು ಕಂಪನಿ ಒಪ್ಪಿಕೊಂಡಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸುವುದರಿಂದ ತಾವು ಅಂಡಾಶಯದ ಕ್ಯಾನ್ಸರ್ ಪೀಡಿತರಾಗಿದ್ದೇವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಮಹಿಳೆಯ ಪರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಬೇಕು ಅಥವಾ ರದ್ದು ಪಡಿಸಬೇಕು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಅಮೆರಿಕ ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಪ್ರಕರಣದಲ್ಲಿ ಉನ್ನತ ಮಟ್ಟದ ವಕೀಲರು ವಾದ-ಪ್ರತಿವಾದ ಮಂಡಿಸಿದ್ದು, ಅಸಾಮಾನ್ಯ ಮೈತ್ರಿಗಳಲ್ಲಿ, ಮಾಜಿ ಸ್ವತಂತ್ರ ಸಲಹೆಗಾರ ಕೆನ್ನೆತ್ ಸ್ಟಾರ್ ಸೇರಿದಂತೆ ಹಲವಾರು, ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆಯ ಪರ ನಿಂತಿದ್ದರು. ಪೌಡರ್ ಬಳಕೆಯಿಂದ ಆಗುವ ಹಾನಿಯ ಕುರಿತು ಕಂಪನಿಗೆ ಗೊತ್ತಿದ್ದರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳಿಂದ ತಪ್ಪಾಗಿ ನಿರೂಪಿಸಲಾಗಿದೆ ಎಂದು…
ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ನೀಡಿದ ಕ್ರಿಮಿನಲ್ ಪ್ರಕರಣದ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಮ್ಯಾನ್‌ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಶರಣಾದರು. ಬಳಿಕ ಅವರನ್ನು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಲಾಯಿತು ಎಂದು ಬಿಬಿಸಿ ವರದಿ ಮಾಡಿದೆ. ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿದ, ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿದ್ದಾರೆ. ‘ನಮ್ಮ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು’ ಎಂಬ ಕಾರಣಕ್ಕೆ ನೀಲಿಚಿತ್ರ ತಾರೆಯೊಬ್ಬರಿಗೆ ಹಣ ಸಂದಾಯ ಮಾಡಿದ್ದ ಕುರಿತಂತೆ ಟ್ರಂಪ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ‘ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್ ಅವರು, ಕ್ರಿಮಿನಲ್ ಆರೋಪ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನಾನು ನಿರ್ದೋಷಿ’ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರಿಗೆ ಮನವಿ ಸಲ್ಲಿಸಿದರು. ವಿಚಾರಣೆಗೆ ಮ್ಯಾನ್ ಹಾಟನ್‌ಗೆ ಬಂದ ಟ್ರಂಪ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ…
ಮುಂಬೈ: ಕೇರಳದಲ್ಲಿ ಭಾನುವಾರ ರಾತ್ರಿ , ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ (Central Intelligence) ಮತ್ತು ಭಯೋತ್ಪಾದನಾ ನಿಗ್ರಹ (Anti Terrorism) ಅಧಿಕಾರಿಗಳ ಜಂಟಿ ತಂಡ ಬುಧವಾರ ಶಂಕಿತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾರುಖ್ ರೈಲಿಗೆ ಬೆಂಕಿ ಹಚ್ಚಿದ ಶಂಕಿತ ಆರೋಪಿಯಾಗಿದ್ದು, ಮಹಾರಾಷ್ಟ್ರದ (Maharashtra) ರತ್ನಗಿರಿ (Ratnagiri) ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕೇರಳ ಪೊಲೀಸರ ತಂಡವೂ ರತ್ನಗಿರಿ ತಲುಪಿದ್ದು, ಶಂಕಿತ ಆರೋಪಿಯನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ (Kozhikode) ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲಿನ ಕೋಚ್‌ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷಿಗಳನ್ನು ಸಂಗ್ರಹಿಸಿದೆ. ಘಟನೆಯ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು…
ಚೆನ್ನೈ: ಚೆನ್ನೈನ ಗ್ರೌಂಡ್ ಏರ್ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ (wife) ಕೊಲೆ ಮಾಡಿದ ಘಟನೆ ತಮಿಳುನಾಡಿನ ( Tamil Nadu) ಪುದುಕೊಟ್ಟೈನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ವಿಲ್ಲುಪುರಂ ನಿವಾಸಿ ಜಯನಂದನ್ ಮೃತ ವ್ಯಕ್ತಿ. ಜಯನಂದನ್ ತನ್ನ ಸಹೋದರಿಯೊಂದಿಗೆ ನಂಗನಲ್ಲೂರಿನಲ್ಲಿ ವಾಸವಾಗಿದ್ದ. ಆದರೆ ಮಾ. 18ರಂದು ಆತ ತನ್ನ ಮನೆಗೆ ಹೋಗುವುದಾಗಿ ಸಹೋದರಿಗೆ ಹೇಳಿ ಮನೆಯಿಂದ ಹೋಗಿದ್ದಾನೆ. ಅದಾದ ಬಳಿಕ ಜಯನಂದನ್ನ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಸಂಪರ್ಕಿಸಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಯನಂದನ್ ಸಹೋದರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಯನಂದನ್ ಸೆಮ್ಮಲಂಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿಗೆ ಕೊನೆಯ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತನಿಖೆ ನಡೆಸಿದ್ದಾರೆ. ಈ ವೇಳೆ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ…
ಚೆನ್ನೈ: ಪಂಗುಣಿ (Panguni) ಆಚರಣೆಯ ಅಂಗವಾಗಿ ಕಲ್ಯಾಣಿಯಲ್ಲಿ ಸ್ನಾನಕ್ಕೆಂದು ತೆರಳಿದ ಐವರು ಪುರೋಹಿತರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತಮಿಳುನಾಡಿನ (Tamil Nadu) ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಮೃತಪಟ್ಟವರನ್ನು ಸೂರ್ಯ (24), ರಾಘವನ್ (22), ಯೋಗೇಶ್ವರನ್ (23), ರಾಘವನ್ (18) ಹಾಗೂ ವನೇಶ್ (20) ಎಂದು ಗುರುತಿಸಲಾಗಿದೆ. ಪಂಗುಣಿ ಆಚರಣೆಯ ಅಂಗವಾಗಿ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಾಸ್ಥಾನದ ಪುರೋಹಿತರು 10:30ರ ವೇಳೆಗೆ ಸ್ನಾನಕ್ಕೆಂದು ಮೂವರಸಂಪೇಟ್ ದೇವಸ್ಥಾನದ ಬಳಿಯಿದ್ದ ಕಲ್ಯಾಣಿಗೆ ತೆರಳಿದ್ದರು. ಈ ವೇಳೆ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಇನ್ನುಳಿದವರು ಸಾವನ್ನಪ್ಪಿದ್ದಾರೆ. ಎಲ್ಲಾ ಶವಗಳನ್ನು ನೀರಿನಿಂದ ಹೊರತೆಗೆದಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಚೆನ್ನೈ (Chennai) ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿಕೆ ನೀಡಿದ್ದಾರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಐವರೂ ಚೆನ್ನೈನ ಮೂರು ಬೇರೆ ಬೇರೆ ಸ್ಥಳಗಳಿಗೆ ಸೇರಿದವರಾಗಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಅಗ್ನಿಶಾಮಕ ಹಾಗೂ ರಕ್ಷಣಾ…
ಹೊಸದಿಲ್ಲಿ: ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ 14 ವಿರೋಧ ಪಕ್ಷಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳದಂತಹ (ಸಿಬಿಐ) ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲು ಆಯುಧವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಸಕ್ತಿ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ವಾಸ್ತವಿಕ ಸಂದರ್ಭಗಳು ಇಲ್ಲದೆಯೇ ಸಾಮಾನ್ಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹಾಗೆಯೇ ಒಂದು ವೈಯಕ್ತಿಕ ಪ್ರಕರಣದಲ್ಲಿ ಮಾತ್ರವೇ ತಾನು ಮಧ್ಯಪ್ರವೇಶ ಮಾಡಬಹುದು ಎಂದು ತಿಳಿಸಿದೆ. ಜತೆಗೆ, ರಾಜಕೀಯ ನಾಯಕರು ಸಾಮಾನ್ಯ ನಾಗರಿಕರಿಗಿಂತ ಅಧಿಕ ರಕ್ಷಣೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.