ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ ಗುರುವಾರ ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಬಗ್ಗೆ NCS ಟ್ವೀಟ್ ಮೂಲಕ ತಿಳಿಸಿದೆ. ಮಧ್ಯಾಹ್ನ 02:35:57 IST ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 267 ಕಿಮೀ ದೂರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ, 36.38 ಅಕ್ಷಾಂಶ ಮತ್ತು 70.94 ರೇಖಾಂಶದಲ್ಲಿ ಸಂಭವಿಸಿದೆ. ಇನ್ನು ಫೆ.27 ಸಹ ಅಫ್ಘಾನಿಸ್ತಾನದಲ್ಲಿ ಭೂಕಂಪ ಆಗಿತ್ತು. ಬಳಿಕ ಮಂಗಳವಾರವೂ ಎರಡನೇ ಬಾರಿ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಇಂದು 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Author: Prajatv Kannada
ಗ್ರೀಸ್: ಉತ್ತರ ಗ್ರೀಸ್ ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 43 ಮಂದಿ ಮೃತಪಟ್ಟಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆದ್ದಾರಿ ಅಂಡರ್ ಪಾಸ್ ನಿಂದ ಪ್ರಯಾಣಿಕ ರೈಲು ಹೊರಬರುತ್ತಿದ್ದಾಗ ಟೆಂಪೆ ಪಟ್ಟಣದ ಬಳಿ ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ರೈಲುಗಳ ಮಧ್ಯೆ ಘರ್ಷಣೆ ನಡೆದಿದ್ದು, ನಂತರ ಬಹು ರೈಲಿನ ಹಳಿಗಳು ಬೇರ್ಪಟ್ಟಿದ್ದವು. ಬಳಿಕ ಅಪಘಾತದ ರಭಸಕ್ಕೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. ಅಥೆನ್ಸ ನಿಂದ ಥೆಸಲೋನಿಕಿ ರೈಲಿನಲ್ಲಿದ್ದ ಅನೇಕ ಪ್ರಯಾಣಿಕರು ದೀರ್ಘ ವಾರಾಂತ್ಯದಲ್ಲಿ ಕಾರ್ನೀವಲ್ ಆಚರಿಸಿದ ನಂತರ ಮನೆಗೆ ಹಿಂದಿರುಗಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ರೈಲಿನಲ್ಲಿದ್ದರು. “ಇದು ಭೀಕರ ದುರಂತವಾಗಿದ್ದು ಅದನ್ನು ಗ್ರಹಿಸಲು ಕಷ್ಟ” ಎಂದು ಉಪ ಆರೋಗ್ಯ ಸಚಿವ ಮಿನಾ ಗಾಗಾ ಹೇಳಿದ್ದಾರೆ. ಡಿಕ್ಕಿಯ ರಭಸಕ್ಕೆ ಹಲವಾರು ಪ್ರಯಾಣಿಕರು ರೈಲು ಬೋಗಿಗಳ ಕಿಟಕಿಗಳ ಮೂಲಕ ಎಸೆಯಲ್ಪಟ್ಟರು ಎಂದು ಬದುಕುಳಿದವರು ಹೇಳಿದ್ದಾರೆ. ಅಥೆನ್ಸ್ ನ ಉತ್ತರಕ್ಕೆ ಸುಮಾರು 380 ಕಿಲೋಮೀಟರ್ ಕಮರಿಯ ಸಮೀಪವಿರುವ ಗದ್ದೆಗೆ…
ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, ‘ಗೃಹಬಳಕೆಯ ಗ್ಯಾಸ್ ಬೆಲೆ 50 ರೂ., ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ. ಏರಿಕೆಯಾಗಿದೆ. ಈಗ ಜನರು ಹೋಳಿಗೆ ಖಾದ್ಯಗಳನ್ನು ಹೇಗೆ ಮಾಡಬೇಕೆಂದು ಕೇಳುತ್ತಿದ್ದಾರೆ. ಈ ಲೂಟಿಯ ಆದೇಶಗಳು ಎಷ್ಟು ದಿನ ಮುಂದುವರಿಯುತ್ತದೆ?’ ಎಂದು ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರದ ಅವಧಿಯಲ್ಲಿ ಅಧಿಕ ಹಣದುಬ್ಬರದಿಂದ ಜನರು ನಲುಗಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ನವದೆಹಲಿ : ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಇವಿಎಂಗಳು ಇಂದು ಬೆಳಿಗ್ಗೆ 8 ರಿಂದ ತೆರೆಯಲಿವೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಚುನಾವಣೆಯನ್ನು ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ, ಇದು ಎಲ್ಲಾ ಪಕ್ಷಗಳಿಗೆ ಸೆಮಿಫೈನಲ್ ಎಂದು ಸಾಬೀತಾಗಲಿದೆ. ಒಂದೆಡೆ, ಬಿಜೆಪಿಗೆ ಅಧಿಕಾರಕ್ಕೆ ಮರಳುವುದು ಸವಾಲಾಗಿದ್ದರೆ, ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ತ್ರಿಪುರ, ನಾಗಲ್ಯಾಂಡ್ ನಲ್ಲಿ ಬಿಜೆಪಿ ಗೆದ್ದು,ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ತ್ರಿಪುರಾದಲ್ಲಿ ಮತ ಎಣಿಕೆಗೆ ಭರದ ಸಿದ್ಧತೆ ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಜಿ ಕಿರಣ್ ಕುಮಾರ್ ದಿನಕರ್ ರಾವ್ ಅವರು ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದರು. 60 ಸದಸ್ಯರ ತ್ರಿಪುರಾ…
ನವದೆಹಲಿ : ಚೀನಾ, ಪಾಕಿಸ್ತಾನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ‘ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ಆತನ ಬಗ್ಗೆ ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಮುಂಬೈ ಪೊಲೀಸರಿಗೆ ರಹಸ್ಯ ಇ ಮೇಲ್ ಸಂದೇಶ ರವಾನಿಸಿದೆ. ಡೇಂಜರಸ್ ಎಂದು ಹೆಸರಿಸಿದ ವ್ಯಕ್ತಿಯನ್ನು ಇಂದೋರ್ ಮೂಲದ ಸರ್ಫರಾಜ್ ಮೆಮನ್ ಎಂದು ಎನ್‌ಐಎ ಗುರುತಿಸಿದ್ದು, ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ ಎಂದು ಎಚ್ಚರಿಸಿದೆ. ಆತನ ಆಧಾರ್ ಕಾರ್ಡ್ ಮಾಹಿತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನೂ ಎನ್‌ಐಎ ಮುಂಬೈ ಪೊಲೀಸರ ಜೊತೆ ಹಂಚಿಕೊಂಡಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಜೊತೆಗೆ ಈ ಕುರಿತು ಅದು ಇಂದೋರ್ ಪೊಲೀಸರಿಗೂ ಮಾಹಿತಿ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.ಮಹಾರಾಷ್ಟ್ರ(Maharashtra) ಮೂಲದ ಖಾಲಿದ್ ಮುಬಾರಕ್ ಮತ್ತು ತಮಿಳುನಾಡು (Tamil Nadu) ಮೂಲದ ಅಬ್ದುಲ್ಲಾ ಎಂಬಿಬ್ಬರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ (Pakistan) ತೆರಳಲು ಯತ್ನಿಸುತ್ತಿದ್ದ ವೇಳೆ ಕಳೆದ ಶನಿವಾರವಷ್ಟೇ ದೆಹಲಿ ಪೊಲೀಸರ (Delhi Police) ವಿಶೇಷ ಪಡೆಯ ಕೈಗೆ…
ಸೂರ್ಯೋದಯ: 06.35 AM, ಸೂರ್ಯಾಸ್ತ : 06.29 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ದಶಮಿ 06:39 AM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಆರ್ದ್ರಾ 12:43 PM ತನಕ ನಂತರ ಪುನರ್ವಸು ಯೋಗ: ಇವತ್ತು ಆಯುಷ್ಮಾನ್ 05:51 PM ತನಕ ನಂತರ ಸೌಭಾಗ್ಯ ಕರಣ: ಇವತ್ತು ಗರಜ 06:39 AM ತನಕ ನಂತರ ವಣಿಜ 07:54 PM ತನಕ ನಂತರ ವಿಷ್ಟಿ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 01.32 AM to 03.19 AM ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ ಮೇಷ ರಾಶಿ ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ…
ಬೆಳಗಾವಿ: ಕಳೆದ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು. ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್ ನಲ್ಲಿ ಬರಬಹುದು. ಕರ್ನಾಟಕದಲ್ಲಿ ನಿಮ್ಮ ಗೆಲುವು ಇತಿಹಾಸ ಮಾಡುತ್ತದೆ. ಈ ಕ್ಷೇತ್ರದ ಹೆಣ್ಣು ಮಕ್ಕಳು ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿದ್ದಾರೆ ಎಂದು ಕೇಳಿದ್ದೇವೆ. ಇಂದು ಅದು ಸಾಬೀತಾಗಿದೆ. ಪ್ರಜಾಧ್ವನಿ ಯಾತ್ರೆ ಎಲ್ಲಿ ಹೋದರೂ ಜನಸಾಗರ ಸೇರುತ್ತಿದೆ ಎಂದರು. ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯ ಯೋಜನೆಗಳ ಮಾಹಿತಿ ನೀಡುವ ವೇಳೆ ಜಮೀರ್ ಅಹ್ಮದ್ ಖಾನ್ ಎಡವಟ್ಟು ಮಾಡಿಕೊಂಡ ಘಟನೆ ಕೂಡ ನಡೆಯಿತು. ಕ್ಷೀರ ಭಾಗ್ಯ ಎನ್ನುವ ಬದಲು…
ಚಾಮರಾಜನಗರ: ಕೋಲಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಗೆದ್ದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಸಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಒಮ್ಮೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎನ್ನುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವರಿಗೆ ಏನು ರೋಗ? ಕೋಲಾರ ಕ್ಷೇತ್ರದ ದಲಿತರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕಪಾಳಕ್ಕೆ ಹೊಡೆದು ಸೋಲಿಸಲು ಕಾಯುತ್ತಿದ್ದಾರೆ. ಜಿ ಪರಮೇಶ್ವರ್, ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ದಲಿತರು ಮರೆತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಬೇಡ, ಕಾಂಗ್ರೆಸ್ಸಿಗರೇ ಸಾಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ನರಹಂತಕ ಎಂದು ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್…
ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election) ಗೆ ದಿನಗಣನೇ ಆರಂಭವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಅಕ್ಷರಶಃ ರಣಾಂಗಣವಾಗಿದೆ. ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ರಮೇಶ್, ಮತ್ತೊಂದು ಸಮಾವೇಶ ನಡೆಸಿದರು. ಇದೇ ವೇಳೆ ಲಕ್ಷ್ಮಿ ವಿರುದ್ಧ ಗುಡುಗಿದ ರಮೇಶ್, ಸಮಾವೇಶ ನೆಪದಲ್ಲಿ ಬಾಡೂಟ ಹಾಕಿಸಿದರು. ಹೌದು. ಒಂದು ಕಾಲದಲ್ಲಿ ಆಪ್ತರಾಗಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಇಂದು ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಗೆಲುವಿಗೆ ಶ್ರಮಿಸಿದ್ದ ರಮೇಶ್, ಇಂದು ಅದೇ ಲಕ್ಷ್ಮಿ ಸೋಲಿಸಲು ಶಪಥ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಲಕ್ಷ್ಮಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿರುವ ರಮೇಶ್ ಕೂಡ ಮತ್ತೊಂದು ಸಮಾವೇಶ ನಡೆಸಿ ಉಚಗಾಂವ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾರೆ. ಸಾವಿರಾರು ಜನರು ಬಾಡೂಟ ಸವಿಯಲು ಮುಗಿಬಿದ್ದಿದ್ರು. ರಮೇಶ್ ಜಾರಕಿಹೊಳಿ ಹಾಗೂ ಆಪ್ತ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.…
ಬೆಂಗಳೂರು: ಎಲ್.ಪಿ.ಜಿ ಸಿಲಿಂಡರ್ (LPG Cylinder) ಬೆಲೆ ಪದೇ ಪದೇ ಏರಿಕೆ ಆಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುವುದರೊಂದಿಗೆ ಸದ್ಯಕ್ಕೆ ಹೋಟೆಲ್ ಫುಡ್ಗಳ ಬೆಲೆ ಜಾಸ್ತಿಯಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಪ್ರತಿಕ್ರಿಯೆ ನೀಡಿದ್ದು, ಜನ ಸಾಮಾನ್ಯರಿಗೆ ಹಾಗೂ ಹೋಟೆಲ್ ಮಾಲೀಕರಿಗೂ ಈಗೀನದರ ಸಿಕ್ಕಾಪಟ್ಟೆ ಹೊರೆಯಾಗಲಿದೆ. ಈ ಕುರಿತಾಗಿ ಇದೇ 16ಕ್ಕೆ ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇವೆ. ಜಿಎಸ್ಟಿ ರೇಟ್ ನಮಗೆ ತುಂಬ ಜಾಸ್ತಿ ಇದೆ. ಡೊಮೆಸ್ಟಿಕ್ ರೇಟ್ನಲ್ಲಿ 5% ಜಿಎಸ್ಟಿ ಇದೆ. ಆದರೆ ನಮಗೆ ಕಮರ್ಷಿಯಲ್ ರೇಟ್ನಲ್ಲಿ ಜಿಎಸ್ಟಿ 18% ಇದೆ. ಈ ವಿಚಾರವಾಗಿ ನಾವು ಈ ಹಿಂದೆ ಮನವಿ ಮಾಡಿದ್ದೇವು. ಈಗ ಮತ್ತೆ ಒತ್ತಾಯ ಮಾಡುತ್ತೇವೆ. ಜೊತೆಗೆ ನಮಗೆ ರಿಯಾಯಿತಿ ದರವು ಜಾಸ್ತಿ ಮಾಡಿದ್ದಾರೆ. ಕೇಂದ್ರ ಸಚಿವರ ಜೊತೆ ಮಾತಾನಾಡಿದ ಬಳಿಕ ಬೆಲೆ ಏರಿಕೆಯ ಕುರಿತು ನಿರ್ಧಾರ ಮಾಡುತ್ತೇವೆ ಗೃಹ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ 50…