ಮಹಾವೀರ ಜಯಂತಿ ಸೂರ್ಯೋದಯ: 06.14 AM, ಸೂರ್ಯಾಸ್ತ : 06.31 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ತ್ರಯೋದಶಿ 08:05 AM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಪುಬ್ಬಾ 09:36 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಗಂಡ 03:41 AM ತನಕ ನಂತರ ವೃದ್ಧಿ ಕರಣ: ಇವತ್ತು ತೈತಲೆ 08:05 AM ತನಕ ನಂತರ ಗರಜ 08:45 PM ತನಕ ನಂತರ ವಣಿಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ:09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 02.37 AM to 04.22 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:43 ವರೆಗೂ ಮೇಷ ರಾಶಿ: ದಂಪತಿಗಳಿಗೆ ಸಂತಾನ ಭಾಗ್ಯ,ಸಿದ್ಧ ಉಡುಪು ಮಾಲಕರಿಗೆ ಹಾಗೂ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ, ಕ್ಲಾಸ್ ವನ್ ಕಾಂಟ್ರಾಕ್ಟರ್ ಗೆ…
Author: Prajatv Kannada
ಬೆಳಗಾವಿ: ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮಹೇಶ ಕುಮಟಳ್ಳಿ (Mahesh Kumathalli) ಬೆಳಗಾವಿಯಲ್ಲಿ (Belagavi) ಹೇಳಿದರು. ಅಥಣಿ (Athani) ಬಿಜೆಪಿ (BJP) ಟಿಕೆಟ್‍ಗಾಗಿ ಲಕ್ಷ್ಮಣ ಸವದಿ (Laxman Savadi) ಹಾಗೂ ಮಹೇಶ ಕುಮಟಳ್ಳಿ ನಡುವೆ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಲಕ್ಷ್ಮಣ ಸವದಿ ಅಥಣಿ ಟಿಕೆಟ್ ಕೇಳಿದ್ದಾರೆ ಎಂಬ ವರದಿಯನ್ನು ನಾನೂ ಗಮನಿಸಿದ್ದೇನೆ. ಆದರೆ ಅಥಣಿ ಟಿಕೆಟ್ ಬೇಕು ಎಂದು ಲಕ್ಷ್ಮಣ ಸವದಿ ಮಾಧ್ಯಮದ ಎದುರು ಹೇಳಿಲ್ಲ. ಲಕ್ಷ್ಮಣ ಸವದಿ ಟಿಕೆಟ್ ಕೇಳಿರುವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ ಎಂದರು. ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಜಾತಿವಾರು ಅಭಿಪ್ರಾಯ ಸಂಗ್ರಹ ವಿಚಾರವಾಗಿ, ಬಿಜೆಪಿ ಚಿಹ್ನೆ ಮೇಲೆಯೇ ಲಕ್ಷ್ಮಣ ಸವದಿ ಸಭೆ ಮಾಡುತ್ತಿದ್ದಾರೆ. ಅಥಣಿಯಲ್ಲಿ ಬಿಜೆಪಿ ಸಂಘಟನೆಗಾಗಿ ಲಕ್ಷ್ಮಣ ಸವದಿ ಶ್ರಮಿಸುತ್ತಿದ್ದಾರೆ. ನಾನೂ…
ಬೆಂಗಳೂರು: ಬಿಜೆಪಿ 40% ಸರ್ಕಾರ ಎನ್ನುವ ಕಾಂಗ್ರೆಸ್ ವಿರುದ್ಧ ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯವನ್ನೇ ಲೂಟಿ ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಹೇಳುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ಆಧಾರವಿಲ್ಲದೆ ಈ ರೀತಿ ಮಾತನಾಡುತ್ತಾರೆ. ಹಾಗಾದರೆ ದೇಶದಲ್ಲಿ ಚುನಾವಣಾ ಆಯೋಗ, ಲೋಕಾಯುಕ್ತ ಹಾಗೂ ಯಾವುದೇ ಕೋರ್ಟ್ನಲ್ಲಿ ದೂರು ಕೊಡಬೇಕಿತ್ತು. ಇವರ ಯೋಗ್ಯತೆಗೆ ಕೊಡೋಕೆ ಆಗಿದೆಯಾ ಎಂದು ಪ್ರಶ್ನಿಸಿದರು. ಆಧಾರವಿಲ್ಲದೆ ಆರೋಪ ಮಾಡುವುದು ತಪ್ಪು. ನಾವು ನಿಮ್ಮ ಮೇಲೆ ಸಾಕಷ್ಟು ಆರೋಪ ಮಾಡಬಹುದು. ಇನ್ಮುಂದೆ ನೀವು ಏನೇ ಮಾತನಾಡಿದರೂ ಆಧಾರ ಕೊಡಬೇಕು. ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸ್ಪಷ್ಟ ಭರವಸೆ ಇಲ್ಲ. ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ. ಜೆಡಿಎಸ್ನವರು ಎಲ್ಲಿ ಬಿಜೆಪಿ ಜೊತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜೊತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ. ಹೀಗಾಗಿ ಪದೇ ಪದೆ ನಮ್ಮನ್ನ ಕೆಣಕುತ್ತಾರೆ. ನಾನು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇವೆ. ಇದು ನಿಮಗೆ ಹಾಸ್ಯವಾಗಿ ಲಘುವಾಗಿ ಕಾಣಬಹದು. ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಮೂಲಕ ತಲುಪಿದ್ದೇನೆ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಇರುವ ಬಗ್ಗೆ ಸಂಶಯ ಇಟ್ಟುಕೊಳ್ಳಬೇಡಿ. ಯಾರು ಮೈತ್ರಿ ಸರ್ಕಾರ ಕೆಡವಲು ಹಣ ಹೂಡಿಕೆ ಮಾಡಿದವರಿಗೆ, ಎರಡು ಪಕ್ಷದವರು ರಕ್ಷಣೆ ಕೊಡುತ್ತಿದ್ದಾರೆ. ಇದಕ್ಕಿಂತಲೂ ಉದಾಹರಣೆ ಬೇಕಾ?. ಮದ್ದೂರಿನಲ್ಲಿ ಕಾಂಗ್ರೆಸ್ ಗೆ…
ಬೆಂಗಳೂರು: ಬೆಂಗಳೂರಿನ ಹೆಚ್ಚಿನ ಜನ ತಮ್ಮ ಮೊಬೈಲ್ ಫೋನ್ ಗಳಿಂದ ಬೇರ್ಪಡಿಸಲಾಗದವರಾಗಿದ್ದಾರೆ, ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿಕ್ರಿಯಿಸಿದವರಲ್ಲಿ 91% ಜನರು ಮಲಗುವ ಮೊದಲು ಹಾಸಿಗೆಯಲ್ಲಿ ಫೋನ್ ಬಳಸುತ್ತಾರೆ ಎಂದು ಗೊತ್ತಾಗಿದೆ. ಶೇ. 38 ಜನ ಮಲಗಿರುವಾಗ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಿದರೆ, ಶೇ.29 ರಷ್ಟು ಜನರು ಕೆಲಸದಿಂದ ವಜಾಗೊಳಿಸಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂದು ಚಿಂತಿತರಾಗಿದ್ದಾರೆ. ಹಾಸಿಗೆ ತಯಾರಕ ವೇಕ್‌ಫಿಟ್‌ನಿಂದ ಫೆಬ್ರವರಿ 2022 ರಿಂದ ಮಾರ್ಚ್ 2023 ರವರೆಗೆ ಬೆಂಗಳೂರು ಮತ್ತು ದೇಶದ ಉಳಿದ ಭಾಗಗಳಲ್ಲಿ ನಡೆಸಿದ ‘ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್’ ಎಂಬ ಶೀರ್ಷಿಕೆಯ ನಿದ್ರೆಯ ಸಮೀಕ್ಷೆಯ ಅಂಕಿಅಂಶಗಳು ಇವಾಗಿವೆ. ಇದು 10,000 ಪ್ರತಿಸ್ಪಂದಕರನ್ನು ಒಳಗೊಂಡಿತ್ತು. ಸಮಗ್ರ ಸಮೀಕ್ಷೆಯ ಆರನೇ ಆವೃತ್ತಿ, ಬೆಂಗಳೂರಿನಲ್ಲಿ 4,000 ಪ್ರತಿಸ್ಪಂದಕರ ನಡುವೆ ವಯಸ್ಸಿನ ಗುಂಪುಗಳು ಮತ್ತು ವಿವಿಧ ಜನರ ಆಧಾರದಲ್ಲಿ ಸಮೀಕ್ಷೆ ನಡೆಸಲಾಯಿತು, ಇದು ಭಾರತದ ಸಿಲಿಕಾನ್ ವ್ಯಾಲಿಯಲ್ಲಿನ ಜನರ ನಿದ್ರೆಯ ಮಾದರಿಯನ್ನು ತೋರಿಸಿದೆ. ಶೇ. 26 ರಷ್ಟು ಜನರಿಗೆ ನಿದ್ರಾಹೀನತೆ 13 ತಿಂಗಳ ಸಮೀಕ್ಷೆಯು 61% ಪ್ರತಿಕ್ರಿಯಿಸಿದವರು ರಾತ್ರಿ…
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಏಪ್ರಿಲ್ 3 ರಿಂದ ಚುನಾವಣಾ ಬಾಂಡ್‌ಗಳ (Electoral Bonds) ಮಾರಾಟ ಮಾಡಲು ಆರಂಭಿಸಿದೆ. ಏಪ್ರಿಲ್ 12ರ ವರೆಗೆ ಎಸ್ಬಿಐನ 29 ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ಖರೀದಿಗೆ ಲಭ್ಯ ಇರಲಿವೆ. ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31ರಂದು ‘ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018’ ರ ಅಡಿಯಲ್ಲಿ ಚುನಾವಣಾ ಬಾಂಡ್‌ಗಳ 26ನೇ ಕಂತಿನ ಘೋಷಣೆ ಮಾಡಿತ್ತು. ಇದರಂತೆ, ಭಾರತೀಯ ನಾಗರಿಕರು, ಉದ್ಯಮಿಗಳು ಬಾಂಡ್ಗಳನ್ನು ಖರೀದಿಸಬಹುದಾಗಿದ್ದು, ರಾಜಕೀಯ ಪಕ್ಷಗಳು ತೆರೆದಿರುವ ಎಲೆಕ್ಟೋರಲ್ ಬಾಂಡ್ ಖಾತೆಗಳ ಮೂಲಕ ದೇಣಿಗೆ ನೀಡಬಹುದಾಗಿದೆ. ಬಾಂಡ್ಗಳು ಇಶ್ಯೂ ಮಾಡಿದ 15 ದಿನಗಳ ಅವಧಿಗೆ ಮಾನ್ಯತೆ ಹೊಂದಿರುತ್ತವೆ. ಈ ಅವಧಿಯ ಒಳಗಾಗಿ ರಾಜಕೀಯ ಪಕ್ಷಗಳು ಅವುಗಳನ್ನು ಪಡೆಯಬೇಕಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು, ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು ಘೋಷಿಸಿತ್ತು. ಈ ಹಿಂದಿನ ಮಾರಾಟದ ಅವಧಿಯಲ್ಲಿ, ಜನವರಿ ತಿಂಗಳಲ್ಲಿ ಎಸ್ಬಿಐ 308.76…
ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಗೊಂದಲದ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಕಾಂಗ್ರೆಸ್ ನಾಯಕತ್ವ ಮುಂದಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡಿದರೆ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಕಾಂಗ್ರೆಸ್ ನೋಟಿಸ್ ನಲ್ಲಿ ಏನಿದೆ? ಕರ್ನಾಟಕ ವಿಧಾನ ಸಭಾ ಚುನಾವಣೆ – 2023 ರ ಸಂಬಂಧಿಸಿದಂತೆ ಜಾಲತಾಣದಲ್ಲಿ (ಫೇಸುಕ್ ವಾಟ್ಸಾಪ್, ಇನ್ಸಾಗ್ರಾಂ, ಟ್ವಿಟರ್ ಮತ್ತು ಇನ್ನಿತರ ಮಾದ್ಯಮಗಳಲ್ಲಿ) ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡುವುದನ್ನು ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಗಂಭೀರವಾಗಿ ಪರಿಗಣಿಸಲಿದೆ. ಹಾಗೆ ಪೋಸ್ಟ್ ಮಾಡಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖ…
ವಿಶ್ವದ ಜನಪ್ರಿಯ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹೊರಹೊಮ್ಮಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಮೋದಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಹಾಗೂ ಅವರ ಜನಪ್ರಿಯತೆಯ ಮೂಲಕ ನಿರ್ಧಾರಿಸುವ ಜಾಗತಿಕ ನಿರ್ಧಾರ ಗುಪ್ತಚರ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅತ್ಯಂತ ಪ್ರೀತಿಸುವ ಮತ್ತು ಮೆಚ್ಚಿದ ನಾಯಕ ಎಂದು ಬರೆದುಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರಕಾರ, ಪ್ರಧಾನಿ ಮೋದಿ ಅವರು ಶೇಕಡಾ 76ರ ಅನುಮೋದನೆ ರೇಟಿಂ ಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನವನ್ನು ಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರೀತಿಪಾತ್ರ, ಮೆಚ್ಚುಗೆ ಮತ್ತು ವಿಶ್ವಾಸಾರ್ಹ ಜಾಗತಿಕ ನಾಯಕರಾಗಿ ಉಳಿದಿದ್ದಾರೆ ಎಂದು ಗೋಯಲ್ ತಮ್ಮ ಟ್ವೀಟ್‌ನಲ್ಲಿ ಸಮೀಕ್ಷೆಯನ್ನು ಹಂಚಿಕೊಂಡಿದ್ದಾರೆ.
ಕಾಲಿವುಡ್ ಸೂಪರ್ ಸ್ಟಾರ್ ನಯನತಾರ ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳನ್ನು ಪಡೆದಿದ್ದು ಇದೀಗ ಮಕ್ಕಳ ಸಂಪೂರ್ಣ ಹೆಸರನ್ನು ದಂಪತಿಗಳು ರಿವೀಲ್ ಮಾಡಿದ್ದಾರೆ. ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ದಂಪತಿಗಳು ನಾಮಕರಣ ಮಾಡಿದ್ದಾರೆ. ಆದರೆ ಮುದ್ದು ಮಕ್ಕಳ ಪೂರ್ತಿ ಹೆಸರು ಏನು ಎಂಬುದನ್ನು ಅವರು ಇಷ್ಟು ದಿನಗಳ ಕಾಲ ಬಹಿರಂಗಪಡಿಸಿರಲಿಲ್ಲ. ಈಗ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಕ್ಕಳ ಪೂರ್ಣ ಹೆಸರು ಏನು ಎಂಬುದನ್ನು ತಿಳಿಸಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಈ ವೇಳೆ ನಯನತಾರಾ ತಮ್ಮ ಮಕ್ಕಳ ಸಂಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದಾರೆ, ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್’ ಎಂದಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಜೋರಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ರಾಜಕೀಯಕ್ಕೆ ಕಲಾವಿದರ ಎಂಟ್ರಿಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಸುದೀಪ್ ರಾಜಕೀಯ ಎಂಟ್ರಿಯ ಕುರಿತು ಮಾಹಿತಿ ಹೊರ ಬಿದ್ದಿದೆ. ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಹಲವು ಪ್ರಮುಖ ಮುಖಂಡರ ಜೊತೆ ಒಡನಾಟ ಇದೆ. ಅವರನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ಕೂಡ ನಡೆದಿವೆ. ಮೂಲಗಳ ಪ್ರಕಾರ ಸುದೀಪ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ. ಸುದೀಪ್ ಅವರು ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರೋ ಅಥವಾ ಕೇವಲ ಬಿಜೆಪಿ ಪರವಾಗಿ ಪ್ರಚಾರ ರಾಯಭಾರಿ ಆಗುತ್ತಾರೋ ಎಂಬುದು ಏಪ್ರಿಲ್ 5ರಂದು ಬಹಿರಂಗ ಆಗಲಿದೆ. ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸುದೀಪ್ ಅವರಿಂದ ಬೆಂಬಲ ಪಡೆಯಬೇಕು ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿಯ ಉದ್ದೇಶ ಆಗಿತ್ತು. ಪಕ್ಷಕ್ಕೆ…