ಸಾಧನೆ ಮಾಡಬೇಕು ಎಂಬ ಛಲ ಇದ್ದವರಿಗೆ ವಯಸ್ಸು ಯಾವತ್ತು ಅಡ್ಡಿಯಲ್ಲ ಎಂಬಕ್ಕೆ ಬ್ರಿಟನ್ನ ಈ ಮೆನೆಟ್ ಬೈಲಿ ಅನ್ನೋ ಈ 102 ವರ್ಷದ ವೃದ್ಧೆಯೇ ಸಾಕ್ಷಿ. ಬ್ರಿಟನ್ನ ಅತ್ಯಂತ ಹಿರಿಯ ಸ್ಕೈ ಡೈವರ್ ಅನ್ನೋ ಪಟ್ಟಿಯಲ್ಲಿ ಮೊದಲ ಸ್ಥಾನ ಮೆನೆಟ್ ಬೈಲಿ ಪಡೆದಿದ್ದಾರೆ. ತಮ್ಮ 102ನೇ ವಯಸ್ಸಿನಲ್ಲಿ 2100 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಈ ವೃದ್ಧೆ ಹೊಸ ಇತಿಹಾಸ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಮೆನೆಟ್ ಬೈಲಿ ತಮ್ಮ 100ನೇ ವರ್ಷದ ಹುಟ್ಟಿದ ಹಬ್ಬದ ಪ್ರಯುಕ್ತವಾಗಿ ಸಿಲ್ವರ್ಸ್ಟೋನ್ ಮೋಟರ್ ರೇಸಿಂಗ್ ಸರ್ಕ್ಯೂಟ್ನ ಸ್ಪರ್ಧೆಯಲ್ಲಿ ಗಂಟೆಗೆ 210 ಕಿಲೋಮೀಟರ್ ವೇಗದಲ್ಲಿ ಫೆರಾರಿ ಕಾರ್ ಓಡಿಸಿ ದಾಖಲೆ ಬರೆದಿದ್ದರು. ಈಗ ಬೆಕ್ಲೆಸ್ ಏರ್ಫೀಲ್ಡ್ ಏರ್ಪಡಿಸಿದ್ದ ಸ್ಕೈ ಡೈವ್ನಲ್ಲಿ ಸುಮಾರು 2100 ಮೀಟರ್ ಎತ್ತರದ ಸ್ಕೈ ಡೈವಿಂಗ್ ಮಾಡುವ ಮೂಲಕ ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಿಲ್ಲ. ಸದಾ ಚಿಲುಮೆಯಂತಿರಲು ಬದುಕನ್ನ ಹೊಸ ಹೊಸ ಸಾಧನೆಗೆ ಒಡ್ಡಿಸಿಕೊಳ್ಳಬೇಕು ಎಂದು ಮೆನೆಟ್…
Author: Prajatv Kannada
ಈಜಿಪ್ಟ್ ನ ಪಶ್ಚಿಮ ಮರುಭೂಮಿಯ ಕಲಾಬ್ಶಾ ಅಭಿವೃದ್ಧಿ ಪ್ರದೇಶದಲ್ಲಿ ಹೊಸ ತೈಲ ನಿಕ್ಷೇಪವನ್ನು ಕಂಡು ಹಿಡಿದಿರುವುದಾಗಿ ಖಲ್ಡಾ ಪೆಟ್ರೋಲಿಯಂ ಕಂಪನಿ ತಿಳಿಸಿದೆ. ಪ್ಯಾಲಿಯೊಜೋಯಿಕ್ ಮರಳಿನಲ್ಲಿ 270 ಅಡಿ ಆಳದಲ್ಲಿ ಭೂಮಿಯನ್ನು ಕೊರೆಯುವ ಮೂಲಕ ತೈಲ ಬಾವಿಯನ್ನು ಪರೀಕ್ಷಿಸಲಾಗಿದೆ ಎಂದು ಖಲ್ಡಾ ಹೇಳಿದೆ. ಖಲ್ಡಾ ಇದು ಈಜಿಪ್ಟ್ ಜನರಲ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಯುಎಸ್ ಅಪಾಚೆ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮವಾಗಿದೆ. 1 ಇಂಚಿನ ಉತ್ಪಾದನಾ ಕೊಳವೆಯು ಪ್ರಾರಂಭದಲ್ಲಿ ದಿನಕ್ಕೆ 7,165 ಬ್ಯಾರೆಲ್ ತೈಲ ಉತ್ಪಾದಿಸಲಿದ್ದು, 44 ಡಿಗ್ರಿ ಗುಣಮಟ್ಟ ಮತ್ತು 23 ಮಿಲಿಯನ್ ಘನ ಅಡಿ ಸಂಬಂಧಿತ ಅನಿಲವನ್ನು ಹೊಂದಿದೆ ಎಂದು ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾವಿಯ ವಿದ್ಯುತ್ ದಿಮ್ಮಿಗಳು ಪ್ಯಾಲಿಯೊಜೋಯಿಕ್ ಘಟಕದಲ್ಲಿ ಪೆಟ್ರೋಲಿಯಂ ಇರುವ ಪುರಾವೆಗಳು ಕಂಡು ಬಂದಿವೆ. ಬಾವಿಯೊಳಗಿನ ಪೆಟ್ರೋಲಿಯಂ ನಿಕ್ಷೇಪದ ಒಟ್ಟು ನಿವ್ವಳ ದಪ್ಪ 462 ಅಡಿ ಎಂದು ಕಂಪನಿ ತಿಳಿಸಿದೆ. ಮೆಡಿಟರೇನಿಯನ್ ಮತ್ತು ನೈಲ್ ಡೆಲ್ಟಾದ 12 ಬ್ಲಾಕ್ಗಳಲ್ಲಿ ನೈಸರ್ಗಿಕ…
ಕೊಲೆಸ್ಟ್ರಾಲ್ ದೇಹದ ಪ್ರತಿಯೊಂದು ಜೀವಕೋಶದಲ್ಲಿ ಕಂಡುಬರುವ ಕೊಬ್ಬಿನ ಪದಾರ್ಥವಾಗಿದೆ. ಇದು ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಪಿತ್ತರಸ ಆಮ್ಲಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಹೆಚ್ಚಿನ ಕೊಲೆಸ್ಟ್ರಾಲ್ ಹಾನಿಕಾರಕವಾಗಿದೆ. ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್, ಇದನ್ನು ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್, ಇದನ್ನು ಒಳ್ಳೆಯ ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಟ್ಟದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹಕ್ಕೆ ಕಾರಣವಾಗಬಹುದು, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಎಚ್‌ಡಿಎಲ್ ಕೊಲೆಸ್ಟ್ರಾಲ್ ರಕ್ತಪ್ರವಾಹದಿಂದ ಎಲ್‌ಡಿಎಲ್ ನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಸರು ನಿರ್ದಿಷ್ಟ ಬ್ಯಾಕ್ಟೀರಿಯಾ ಮೂಲಕ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ, ಲ್ಯಾಕ್ಟಿಸ್ ಆಮ್ಲ ಮೊಸರಿಗೆ ಪರಿಮಳ ಮತ್ತು ದಪ್ಪ ವಿನ್ಯಾಸವನ್ನು ನೀಡುತ್ತದೆ. ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಇವು ಕರುಳಿನ ಆರೋಗ್ಯವನ್ನು ಹೆಚ್ಚಿಸುವ ಬ್ಯಾಕ್ಟೀರಿಯಾವಾಗಿದೆ. ಪೂರ್ಣ-ಕೊಬ್ಬಿನ ಮೊಸರು ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಹೆಚ್ಚಿದ ಎಲ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟಗಳಿಗೆ ಸಂಬಂಧಿಸಿದೆ.…
ಅಪ್ಪು ನಟನೆಯ ಜಾಕಿ ಸಿನಿಮಾದ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ಮಲಯಾಳಂ ನಟಿ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಈ ಬಗ್ಗೆ ಕೊನೆಗೂ ಭಾವನಾ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ಮೆನನ್ ತಮಿಳಿನಲ್ಲಿ ವೇಲ್, ಚಿತ್ರಂ ಬೆಸುತಡಿ, ದೀಪಾವಳಿ, ಜಯಂ ಕೊಂಡನ್, ಆರ್ಯ, ಅಸಲ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಜಾಕಿ, ರೋಮಿಯೋ, ಮೈತ್ರಿ, ಉತ್ತರಕಾಂಡ ಸೇರಿದಂತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಭಾವನ ಮೆನನ್ ಬಣ್ಣ ಹಚ್ಚಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಭಾವನಾ ಮಲಯಾಳಂನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. 2018 ರಿಂದ ಸಿನಿಮಾ ರಂಗದಿಂದ ದೂರವಿದ್ದ ಭಾವನ 2023 ರಲ್ಲಿ ಮತ್ತೆ ಕಂಬ್ಯಾಕ್ ಮಾಡಿದರು. ಅವರ ಅಭಿನಯದ ಪಾತ್ರದಲ್ಲಿ ಮಲಯಾಳಂ ಚಿತ್ರ ಹಂಟ್…
ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಾಕಿಂಗ್ ಅದ್ಭುತ ಮಾರ್ಗವಾಗಿದೆ. ಪ್ರತಿನಿತ್ಯ 75 ನಿಮಿಷ ವಾಕಿಂಗ್ ಮಾಡುವವರು ಒತ್ತಡವನ್ನು ಶೇ.18ರಷ್ಟು ಕಡಿಮೆ ಮಾಡಬಹುದು. ಅಲ್ಲದೇ, 2.5 ಗಂಟೆಗಳ ಕಾಲ ವಾಕಿಂಗ್ ಮಾಡುವವರರು ಒತ್ತಡವನ್ನು 25% ರಷ್ಟು ಕಡಿಮೆ ಮಾಡಬಹುದು. JAMA ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವು 150 ನಿಮಿಷಗಳ ಕಾಲ ನಡೆದಾಡುವ 9 ಜನರಲ್ಲಿ ಒಬ್ಬರು ಖಿನ್ನತೆಯನ್ನು ಸಂಪೂರ್ಣವಾಗಿ ತಡೆಯುತ್ತಾರೆ ಎಂದು ಕಂಡು ಹಿಡಿದಿದೆ. ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದರಿಂದ ಸಿಗುವ ಪ್ರಯೋಜನಗಳು: ಕೆಲವು ಅಧ್ಯಯನಗಳ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನೀವು ಎದ್ದ ತಕ್ಷಣ ಬೆಳಗ್ಗೆ ವಾಕ್ ಮಾಡುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಚಯಾಪಚಯ: ಉತ್ತಮ ರಾತ್ರಿಯ ವಿಶ್ರಾಂತಿಯ ನಂತರ ಬೆಳಗ್ಗೆ ವಾಕಿಂಗ್ ಮಾಡುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವರ್ಧಿತ ಶಕ್ತಿ: ಚಯಾಪಚಯ ಕ್ರಿಯೆಯಲ್ಲಿ ಉತ್ತೇಜನವು ದಿನವಿಡೀ ನಿಮ್ಮ…
ಚಿತ್ರದುರ್ಗ ಮೂಲಕದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿ 3 ತಿಂಗಳೇ ಆಗಿದೆ. ಇಂದಿಗೆ ಅವರ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಳ್ಳುವುದರಲ್ಲಿತ್ತು. ಹೀಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ. ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದ ನ್ಯಾಯಾಧೀಶರು ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದ್ದಾರೆ. ಜೈಲಲ್ಲಿ ಸಿಗರೇಟ್ ಸೇದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಪೊಲೀಸರು ವಿಚಾರಣೆ ಎದುರಿಸಲಿದ್ದಾರೆ. ಆ ಬಳಿಕ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ. ಪ್ರಕರಣದ ಆರೋಪಿ ಪ್ರದೂಶ್ ಅವರನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದನ್ನು ಮಾಡದಂತೆ ಅವರು ಕೊರಿದ್ದಾರೆ. ‘ನನ್ನ ತಂದೆಗೆ ಕ್ಯಾನ್ಸರ್ ಇದೆ. ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಯರ್ ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ’…
ಕಲಘಟಗಿ :-ಪಟ್ಟಣದ ತಡಸ ಕ್ರಾಸ್ ಬಳಿ ಬೆಳಂ ಬೆಳಗ್ಗೆ ಲಾರಿ ಮತ್ತು ಟಾಟಾ ಏಸ್ ವಾಹನಗಳ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೂ ಕೆಲವು ಮಹಿಳೆಯರ ಪರಿಸ್ಥಿತಿ ಭೀಕರವಾಗಿದ್ದು ಕೂಡಲೇ ಕಲಘಟಗಿ ಪೊಲೀಸ್ ಠಾಣೆಯ ಮತ್ತು ಅಗ್ನಿಶಾಮಕದಳ ತಂಡ ಅಪಘಾತ ಸ್ಥಳಕ್ಕೆ ಆಗಮಿಸಿ ಆಂಬುಲೆನ್ಸ್ ಮೂಲಕ ಅಪಾಯದಲ್ಲಿರುವವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರದಿಂದ ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ ಆಗಿದ್ದು ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಭರ್ತಿಯಾದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ಈಗಾಗಲೇ 13 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದ್ದು,ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ನದಿ ತೀರದಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ. ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲೂ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೃಷ್ಣಾ ನದಿಗೆ 1 ಲಕ್ಷ 13 ಸಾವಿರ ಕ್ಯುಸೆಕ್ ಒಳ ಹರಿವು ಇದೆ. ಎರಡನೇ ಬಾರಿ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕುಗಳ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಜೋರಾಗಿದೆ.
ಬೆಂಗಳೂರು:- ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದೆ. ನಟ ದರ್ಶನ್‌ರನ್ನು ಬಳ್ಳಾರಿ ಸೆಂಟ್ರಲ್ ಜೈಲ್‌ಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ https://youtu.be/KgPLaMvgaLo?si=5tYGou9Ly-K4GjM7 ಕೆಲಹೊತ್ತಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಶಿಫ್ಟ್ ಮಾಡಲಾಗುತ್ತೆ. ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಹೀಗಾಗಿ ಮುಂದೆ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಳಪಡಿಸಲಾಗುತ್ತದೆ. ಕೊಲೆ ಕೇಸ್ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗ್ತಿದೆ. ಹದಿನಾರು ಎಕರೆ ವಿಸ್ತೀರ್ಣದಲ್ಲಿರುವ ಬಳ್ಳಾರಿ ಜೈಲಿನಲ್ಲಿ ಬಿಗಿ ಭದ್ರತೆ ಇದೆ. ಇನ್ನು ನಟ ದರ್ಶನ್ರನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡ್ತಿರೋ ಬಗ್ಗೆ ಈಗಾಗಲೇ ಜೈಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ವಿಶೇಷ ಭದ್ರತಾ ವಿಭಾಗದ 15ನೇ ಸೆಲ್ನಲ್ಲಿ ದರ್ಶನ್‌ರನ್ನು ಇರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮೂವರು ಸಿಬ್ಬಂದಿಯನ್ನು ದರ್ಶನ್ ಭಧ್ರತೆಗೆ ಅಂತ ನಿಯೋಜನೆ ಮಾಡಲಾಗಿದೆ. ದರ್ಶನ್ಗೆ 24 ಗಂಟೆಯೂ ಸಿಸಿಟಿವಿ ಹಾಗೂ ಬಾಡಿವೋರ್ನ್ ಕ್ಯಾಮರಾ ಕಣ್ಗಾವಲು…
ನಾವು ಹೇಳುತ್ತಿರುವ ಈ ಸ್ಟೋರಿ ಸುಳ್ಳಲ್ಲ ಸತ್ಯ. ಭಾರತದಲ್ಲಿರುವ ಆ ಒಂದು ಊರಿಗೆ ವಿದೇಶಿ ಮಹಿಳೆಯರು ಗರ್ಭ ಧರಿಸಲು ಅಂತಾನೆ ಬರ್ತಾರೆ. ಹಾಗಿದ್ರೆ ಅದು ಯಾವ ಊರು!?, ಏನಿದರ ವಿಶೇಷತೆ ತಿಳಿಯೋಣ ಬನ್ನಿ. ಭಾರತ ದೇಶ ಹಲವು ವೈವಿಧ್ಯತೆಗಳನ್ನು ಹೊಂದಿದೆ. ಇದೇ ಕಾರಣದಿಂದ ವಿದೇಶಿಯರಿಗೆ ನಮ್ಮ ದೇಶ ಆಕರ್ಷಣೆಯ ಸ್ಥಳವಾಗಿದೆ. ಆದ್ರೆ ಭಾರತದಲ್ಲಿ ವಿಚಿತ್ರವಾದ ಹಳ್ಳಿಯೊಂದಿದೆ. ಈ ಹಳ್ಳಿಗೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲೆಂದೇ ಬರುತ್ತಾರಂತೆ. ಹಾಗಿದ್ರೆ ಆ ಹಳ್ಳಿ ಯಾವುದು ಗೊತ್ತಾ? ಇಲ್ಲಿದೆ ನೋಡಿ. ಕಾರ್ಗಿಲ್‌ನಿಂದ 70 ಕಿಲೋಮೀಟರ್ ದೂರದಲ್ಲಿರುವ ಲಡಾಖ್‌ನಲ್ಲಿ ಒಂದು ಗ್ರಾಮವಿದೆ. ಈ ಗ್ರಾಮವನ್ನು ಆರ್ಯ ಕಣಿವೆ ಎಂದು ಸಹ ಕರೆಯಲಾಗುತ್ತದೆ. ಹೊರ ದೇಶಗಳ ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಯುರೋಪ್ ದೇಶಗಳ ಮಹಿಳೆಯರು ಮಾತ್ರ ಇಲ್ಲಿಗೆ ಬರುವುದು ಇಲ್ಲಿನ ಪುರುಷರಿಂದ ಗರ್ಭ ಧರಿಸಲು ಮಾತ್ರ ಎಂದು ಹೇಳಲಾಗುತ್ತದೆ. ಇದು ಸ್ವಲ್ಪ ವಿಚಿತ್ರವೆನಿಸಿದರೂ, ಹಲವು ಮಾಧ್ಯಮ ವರದಿಗಳ ಪ್ರಕಾರ ಇದು ನಿಜ. ಇದರ ಹಿಂದಿನ ರಹಸ್ಯವೇನು? ಬ್ರೋಕ್ಪಾ…