ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್(JDS) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್(Congress) ಮತ್ತು ಬಿಜೆಪಿಗೂ(BJP) ಮುನ್ನವೇ 93 ಹುರಿಯಾಳುಗಳನ್ನ ಕಣಕ್ಕಿಳಿಸಿರುವ ಜೆಡಿಎಸ್ ಇಂದು ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ (JDS Candidate List) ಬಿಡುಗಡೆಯಾಗಲಿದೆ. ಆದ್ರೆ, 2ನೇ ಲಿಸ್ಟ್ನಲ್ಲೂ ಹಾಸನ ಟಿಕೆಟ್ ಅಭ್ಯರ್ಥಿ ಘೋಷಣೆಯಾಗುವುದು ಅನುಮಾನ. ಇದನ್ನ ಸ್ವತಃ ಹೆಚ್ಡಿ ಕುಮಾರಸ್ವಾಮಿಯೇ(HD Kumaraswamy) ಸ್ಪಷ್ಟಪಡಿಸಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ಬಗೆಹರಿದಿಲ್ಲ ಎಂದು ಕುಮಾರಸ್ವಾಮಿಯೇ ಸ್ಪಷ್ಟಪಡಿಸಿದ್ದಾರೆ. ಪತ್ನಿ ಭವಾನಿಗೇ ಹಾಸನ ಟಿಕೆಟ್ (Hassan Ticket) ಕೊಡಿಸಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಪರವೇ ಬ್ಯಾಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ಫೈನಲ್ ಮಾಡಲಾಗುತ್ತಿಲ್ಲ. ಅಂತಿಮವಾಗಿ ಅಣ್ತಮಾಸ್ ಮುಸುಕಿನ ಗುದ್ದಾಟದ ಮಧ್ಯೆ ಹೆಚ್ಡಿ ದೇವೇಗೌಡ (HD Devegowda) ಪ್ರವೇಶ ಮಾಡಿದ್ದಾರೆ.
Author: Prajatv Kannada
ಕಾರ್ಮಿಕ ಮಹಿಳೆಯರಿಗೆ ಬಸ್ ಪಾಸ್ ವಿತರಣೆ ಮಾಡದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೊಮ್ಮಾಯಿ ಯಾವಾಗಲೂ ಫೂಲ್ ಮಾಡುವ ಕೆಲಸ ಮಾಡಿದ್ದಾರೆ. ಕೋಲಿ ಸಮುದಾಯಕ್ಕೆ ಎಸ್ಟಿ ಮೀಸಲಾತಿಯ ಭರವಸೆ ಕೊಟ್ಟಿದ್ರು. ಆದ್ರೆ ರಾಜ್ಯ ಸರ್ಕಾರ ಕೋಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದೆವು. ಅಲ್ಪಸಂಖ್ಯಾತರ ಮೀಸಲಾತಿ ತೆಗೆದು 2% ಹೆಚ್ಚಳ ಮಾಡಿದ್ದಾರೆ. ನಮಗೆ ಬೇರೆಯವರ ಮೀಸಲಾತಿ ಬೇಡ. ಬಿಜೆಪಿಗೆ ಬೆಂಬಲ ಕೊಟ್ಟ ಸಮುದಾಯ ದಂಗೆ ಏಳುತ್ತಿದೆ. ಬಿಜೆಪಿ ನಾಯಕರು ಎಲ್ಲರಿಗೂ ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಐಪಿಎಲ್ ಮ್ಯಾಚ್ ವೀಕ್ಷಿಸುತ್ತಾ ಕಾಲ ಕಳೆದಿದ್ದಾರೆ.16ನೇ ಆವೃತ್ತಿಯ ಐಪಿಎಲ್ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸೆಣಸಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ಪಂದ್ಯ ವೀಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡ ಆರಂಭದಲ್ಲಿ ಅಮೋಘ ಯಶಸ್ಸು ಸಾಧಿಸಿದರೂ ಬಳಿಕ ರೋಹಿತ್ ಪಡೆಯಿಂದ ಅದ್ಭುತ ಹೋರಾಟ ವ್ಯಕ್ತವಾಯಿತು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಗೆಲ್ಲಲು ಮುಂಬೈ ಇಂಡಿಯನ್ಸ್ ತಂಡ ಸವಾಲಿನ ಗುರಿ ನೀಡಿತು. ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದರೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ…
ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಸರ್ಕಸ್ ಮಾಡುತ್ತಿರುವ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಷ್ಠೆಯ ಫೈಟ್‍ಗೆ ಮಾಸ್ಟರ್ ಸ್ಟ್ರೋಕ್ ನೀಡಲು ಬಿಜೆಪಿ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಚುನಾವಣೆಯಲ್ಲಿ (Karnataka Election) ತಮ್ಮವರಿಗೆ ಟಿಕೆಟ್ ಕೊಡಿಸಬೇಕು ಎಂದು ಡಿಕೆಶಿ ಹಠಕ್ಕೆ ಬಿದ್ದಿರುವ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಗಳಿಗೆ ಬಿಜೆಪಿ ಹಾಗೂ ಜೆಡಿಎಸ್ (BJP, JDS) ಗಾಳ ಹಾಕಿದೆ ಎನ್ನಲಾಗಿದೆ. ಟಿಕೆಟ್‍ಗಾಗಿ ಕಾಂಗ್ರೆಸ್‌ನಲ್ಲಿ ಪರದಾಡುವ ಬದಲು ನಮ್ಮಲ್ಲಿಗೆ ಬನ್ನಿ ಎಂದು ಎರಡು ಪಕ್ಷಗಳಿಂದ ಆಫರ್ ನೀಡಲಾಗಿದೆ. ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್‍ಗೆ (Santosh Lad) ಬಿಜೆಪಿ ಗಾಳ ಹಾಕಿದೆ. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯನ್ನು (Akhanda Srinivasa Murthy) ಕರೆತರಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಸುಲೋಚನಾ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಟೈರ್ ಸ್ಫೋಟಗೊಂಡು ಬೈಕ್ ಪಲ್ಟಿಯಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೈಕ್‌ನಲ್ಲಿ ತೆರಳುತ್ತಿದ್ದ ಆನಂದ್, ಸುಲೋಚನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳು ಯುವತಿ ಸುಲೋಚನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಾಲ್ಫ್ ಹೆಲ್ಮೆಟ್ ಧರಿಸಿದ್ದರಿಂದ ಸುಲೋಚನ ತಲೆಗೆ ಗಂಭೀರ ಗಾಯವಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಸುಲೋಚನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದ ಸುಲೋಚನ, ಆನಂದ್ ಅವರು, ನಿನ್ನೆ ಕೆಲಸ ಮುಗಿಸಿ ಕೋರಮಂಗಲದಿಂದ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ನಡೆದಿದ್ದ ಅವಘಡದಲ್ಲಿ ಕೊನೆಗೂ ಯುವತಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆ ಪಪುವಾ ನ್ಯೂ ಗಿನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಟಿಬೆಟ್‌ನ ಶಿಜಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಅಳತೆಯ ಭೂಕಂಪ ಸಂಭವಿಸಿದರೆ, ವಾಯುವ್ಯ ಪಪುವಾ ನ್ಯೂಗಿನಿಯಾದಲ್ಲಿ 7.0 ಅಳತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಥಳೀಯ ಕಾಲಮಾನ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭೂಕಂಪವು ಕರಾವಳಿ ಪಟ್ಟಣವಾದ ವೆವಾಕ್‌ನಿಂದ 97 ಕಿಲೋಮೀಟರ್ (60 ಮೈಲುಗಳು) 62 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಪಪುವಾ ನ್ಯೂ ಗಿನಿಯಾದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಅಲ್ಲಿ ವಾಸಿಸುವ ಜನರಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು USGS ಹೇಳುತ್ತದೆ. ದ್ರವೀಕರಣ ಎಂದು ಕರೆಯಲ್ಪಡುವ ನೆಲದ ಈ ಸಡಿಲಗೊಳಿಸುವಿಕೆಯು ಗಣನೀಯವಾಗಿ ನೆಲದ ಕುಸಿತಕ್ಕೆ ಕಾರಣವಾಗಬಹುದು ಎಂದು ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಕರಾವಳಿ ನಗರವಾದ ವೆವಾಕ್‌ನಿಂದ 97 ಕಿಮೀ ದೂರದಲ್ಲಿ 62 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು USGS…
ಫ್ರಾನ್ಸ್ ನ ಇಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಸರ್ಕಾರದ ಮಹಿಳಾ ಸಚಿವೆ ಮರ್ಲಿನ್ ಶಿಯಪ್ಪಾ ಪ್ಲೇಬಾಯ್ ಮ್ಯಾಗಜಿನ್ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಆದರೆ ತಮ್ಮ ನಡೆಯನ್ನು ಮರ್ಲಿನ್ ಸಮರ್ಥಿಸಿಕೊಂಡಿದ್ದಾರೆ. ಬಲಪಂಥೀಯರನ್ನು ಹಲವು ಬಾರಿ ಕೆರಳಿಸಿದ್ದ 40 ವರ್ಷದ ಸ್ತ್ರೀವಾದಿ ಲೇಖಕಿ ಮರ್ಲಿನ್ ಶಿಯಪ್ಪಾ ಈ ಹಿಂದೆಯೂ ಹಲವು ಭಾರಿ ವಿವಾದಕ್ಕೀಡಾಗಿದ್ದರು. ಮರ್ಲಿನ್ ಶಿಯಪ್ಪಾ ನಡೆಗೆ ಪ್ರಧಾನಿ ಮತ್ತು ಎಡಪಂಥೀಯ ವಿಮರ್ಶಕರು ಕೂಡ ಅಸಮಧಾನ ಹೊರ ಹಾಕಿದ್ದಾರೆ. ಫ್ರಾನ್ಸ್‌ನಲ್ಲಿ, ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ, ಅದರ ವಿರುದ್ಧ ಕಳೆದ 3 ತಿಂಗಳುಗಳಿಂದ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವಾಗಲೂ ಪ್ರತಿಪಕ್ಷಗಳಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ತಮ್ಮ ಸಚಿವರೇ ‘ಪ್ಲೇಬಾಯ್’ನಲ್ಲಿ ಚಿತ್ರಗಳನ್ನು ಪ್ರಕಟಿಸಿರುವುದು ಅವರ ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಸರ್ಕಾರದಲ್ಲಿ ಕೆಲವರು ಮಾರ್ಲಿನ್ ಪರವಾಗಿದ್ದರೆ, ಅನೇಕ ಅಸಮಾಧಾನ ಹೊರ ಹಾಕಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಶ್ರೀಲೀಲಾಗೆ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದು ಅವರ ಪಾತ್ರಕ್ಕೆ ಟ್ವಿಸ್ಟ್ ಸಿಕ್ಕಿದೆ. ನಂದಮೂರು ಬಾಲಕೃಷ್ಣ ನಟನೆಯ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ಬಾಲಯ್ಯನ ಮಗಳ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದು ಬಾಲಯ್ಯ ಫ್ಯಾನ್ಸ್‌ಗೆ ಕೊಂಚ ಅಚ್ಚರಿ ಹುಟ್ಟಿಸಿದ್ದಂತೂ ಸುಳ್ಳಲ್ಲ. ಆದರೆ ಈಗ ಆ ಬಗ್ಗೆ ಒಂದಷ್ಟು ವಿವರ ಹೊರ ಬಿದ್ದಿದೆ. ಅದೇನೆಂದರೆ ಶ್ರೀಲೀಲಾ ಚಿತ್ರದಲ್ಲಿ ಬಾಲಯ್ಯನ ಮಗಳ ಪಾತ್ರ ಮಾಡುತ್ತಿಲ್ಲ. ಸದ್ಯ ಚಿತ್ರತಂಡದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ನಂದಮೂರಿ ಬಾಲಕೃಷ್ಣ ಅವರು ಶ್ರೀಲೀಲಾಗೆ ಚಿಕ್ಕಪ್ಪನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನಾಯಕಿಯಾಗಿ ಫೇಮಸ್ ಆಗುತ್ತಿರುವ ಹೊತ್ತಿನಲ್ಲಿ ಶ್ರೀಲೀಲಾ ಯಾಕೆ ಮಗಳ ಪಾತ್ರ ಮಾಡೋಕೆ ರೆಡಿ ಆದ್ರು ಅಂತಲೇ ಎಲ್ಲರೂ ಪ್ರಶ್ನೆ ಮಾಡಿದ್ದರು. ಆದರೆ ಶ್ರೀಲೀಲಾ ಇಲ್ಲಿ ಬಾಲಯ್ಯಗೆ ಮಗಳ ಪಾತ್ರ ಮಾಡುತ್ತಿಲ್ಲ. ತಂದೆ-ತಾಯಿಯನ್ನು ಕಳೆದುಕೊಂಡ ಶ್ರೀಲೀಲಾ,…
ತಮಿಳಿನ ಸೂಪರ್ ಸ್ಟಾರ್ ನಟನ ದಳಪತಿ ವಿಜಯ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು. ಆದರೆ ಸೋಷಿಯಲ್ ಮೀಡಿಯಾದಿಂದ ತುಸು ದೂರವೇ ಉಳಿದಿದ್ದ ವಿಜಯ್ ಇದೀಗ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ವಿಜಯ್ ಅವರ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆ ಇದ್ದರು ಹೆಚ್ಚು ಟ್ವೀಟ್ ಮಾಡುವುದಿಲ್ಲ. ಇನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ವರ್ಷಗಳೇ ಆಗಿಬಿಟ್ಟಿದೆ. ಈ ಮಧ್ಯೆ ಇದ್ದಕ್ಕಿದ್ದ ಹಾಗೆ ವಿಜಯ್ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದು, ಇನ್ಸ್ಟಾಗ್ರಾಂಗೆ ಕಾಲಿಟ್ಟ ಕೇವಲ ನಾಲ್ಕು ಗಂಟೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಕ್ಟರ್ ವಿಜಯ್ ಹೆಸರಿನಲ್ಲಿ ಖಾತೆ ತೆರೆದಿರುವ ವಿಜಯ್ ತಮ್ಮ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಲೋ ಗೆಳೆಯ-ಗೆಳತಿಯರೇ ಎಂದು ಬರೆದುಕೊಂಡಿದ್ದಾರೆ. ಚಿತ್ರ ಹಂಚಿಕೊಂಡ ನಾಲ್ಕು ಗಂಟೆಯಲ್ಲಿಯೇ 25 ಲಕ್ಷ ಲೈಕ್ಗಳು ಬಂದಿದ್ದು, 25 ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್ ಅವರನ್ನು ಫಾಲೋ ಮಾಡಿದ್ದಾರೆ. ಇನ್ನೂ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ವಾರಿಸು ಸಿನಿಮಾ…
ಬಾಲಿವುಡ್ ನಟ ಅಜಯ್ ದೇವಗನ್ ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕೂತಿರುತ್ತಾರೆ. ಒಮ್ಮೆಯಾದರೂ ಅವರನ್ನು ನೇರವಾಗಿ ನೋಡಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಆದರೆ ತಮ್ಮನ್ನು ಭೇಟಿಯಾಗಿ ಕೈ ಮುಟ್ಟಲು ಬಂದ ಅಭಿಮಾನಿಯ ಮೇಲೆ ಅಜಯ್ ದೇವಗನ್ ಸಿಟ್ಟಾದ ಘಟನೆ ನಡೆದಿದೆ. ಭಾನುವಾರ (ಏಪ್ರಿಲ್ 2) ರಂದು ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಅವರು ಮುಂಬೈನ ನಿವಾಸದ ಎದುರು ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಬಂದಿದ್ದದರು. ಆದರೆ ಈ ವೇಳೆ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಅಜಯ್ ದೇವಗನ್ಗೆ ಸರಿ ಎನಿಸಲಿಲ್ಲ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಜಯ್ ದೇವಗನ್ ಮನೆ ಎದುರು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಎಲ್ಲರೂ ಮುಗಿಬಿದ್ದು ಅವರಿಗೆ ಜನ್ಮದಿನದ ಶುಭಾಶಯ ಕೋರಲು ಪ್ರಯತ್ನಿಸಿದರು. ಅಭಿಮಾನಿಗಳ ಗುಂಪಿನಲ್ಲಿ ಇದ್ದ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ಅಜಯ್ ದೇವಗನ್ ಅವರ ಕೈ ಹಿಡಿದುಕೊಂಡ. ಕೂಡಲೇ ಅವರು ತಮ್ಮ ಕೈಯನ್ನು…