ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ರಶ್ಮಿಕಾ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ನಿರ್ಮಾಪಕ, ನಿರ್ದೇಶಕ ಹಾಗೂ ನಟರು ಕೂಡ ರಶ್ಮಿಕಾಳೆ ತಮ್ಮ ಸಿನಿಮಾಗೆ ನಾಯಕಿಯಾಗಬೇಕು ಎಂದು ಹಾದು ಕೂತಿದ್ದಾರೆ. ಜೊತೆಗೆ ರಶ್ಮಿಕಾ ನಟನೆಯ ಸಾಕಷ್ಟು ಸಿನಿಮಾಗಳು ಹಿಟ್ ಲೀಸ್ಟ್ ನಲ್ಲಿ ಸೇರಿಕೊಂಡಿವೆ. ಇದೀಗ ರಶ್ಮಿಕಾ ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಯಶಸ್ಸಿನ ಶಿಖರದಲ್ಲಿರುವ ರಶ್ಮಿಕಾ ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ರಶ್ಮಿಕಾ ಮಂದಣ್ಣ ಈವರೆಗೂ 18 ಸಿನಿಮಾಗಳಲ್ಲಿ ನಟಿಸಿದ್ದು, ಆ ಪೈಕಿ ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ. ಮಹಿಳಾ ಪ್ರಧಾನ ಕಥೆ ಇರುವಂಥ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದ ರಶ್ಮಿಕಾ ಇದೀಗ ಆ ಸಾಹಸಕ್ಕೂ ಮುಂದಾಗಿದ್ದಾರೆ. ಈ ಹಿಂದೆ ರಿಲೀಸ್ ಆದ ‘ಡಿಯರ್ ಕಾಮ್ರೇಡ್’, ‘ಗುಡ್…
Author: Prajatv Kannada
ಬೆಂಗಳೂರು: ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ ಮತ್ತು ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ?’ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿ.ಟಿ. ರವಿಗೂ ‘ಓಟಿ’ ಮದ್ಯಕ್ಕೂ ಯಾವ ಜನ್ಮದ ಮೈತ್ರಿ!? ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ ಆರೆಸೆಸ್ಸ್ ಕಚೇರಿಯಿಂದ ಬಂದಿದ್ದೇ ಸಿ.ಟಿ.ರವಿ?, ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ, ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ ‘ಸಿಟಿ’ ರವಿಗೂ, ಕಾರು ಅಪಘಾತಕ್ಕೂ, ‘ಓಟಿ’ ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ! ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ!’ ಎಂದು ಟೀಕಿಸಿದೆ. ಶಾಸಕರಿಗೆ ‘ಬಾಂಬೆ ಮಿಠಾಯಿ’ ಆಮಿಷ ತೋರಿಸಿ…
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ವಿಜಯ್ ದೇವರಕೊಂಡ ಬಳಿಕ ಮತ್ತೋರ್ವ ನಟನ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಕನ್ನಡದ ನಟ ರಕ್ಷಿತ್ ಜೊತೆ ಸುತ್ತಾಡಿದ್ದ ನಟಿ ರಶ್ಮಿಕಾ ಮಂದಣ್ಣ ಅದ್ದೂರಿಯಾಗಿ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದರು. ಆದರೆ ಅಷ್ಟೇ ಬೇಗ ಸಂಬಂಧವನ್ನು ಮುರಿದುಕೊಂಡು ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಶುರುಮಾಡಿದ್ದರು. ಇದೀಗ ವಿಜಯ್ ದೇವರಕೊಂಡರಿಂದ ದೂರವಾಗಿರುವ ನಟಿ ಟಾಲಿವುಡ್ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ರಶ್ಮಿಕಾ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮುಂಬೈ ಏರ್ಪೋರ್ಟ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ…
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿದ್ದು, ಇದಕ್ಕೆ ಉಕ್ರೇನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. 15 ಸದಸ್ಯರ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ರಶ್ಯ ಶನಿವಾರ ವಹಿಸಿಕೊಂಡಿದೆ. ಭದ್ರತಾ ಮಂಡಳಿಯ ಒಂದು ತಿಂಗಳ ಅಧ್ಯಕ್ಷತೆಗೆ 15 ಸದಸ್ಯ ರಾಷ್ಟ್ರಗಳು ಪರ್ಯಾಯ ಕ್ರಮದಲ್ಲಿ ಆಯ್ಕೆಯಾಗುತ್ತವೆ. ಏಪ್ರಿಲ್ ತಿಂಗಳಾವಧಿಗೆ ರಶ್ಯ ಅಧ್ಯಕ್ಷತೆ ವಹಿಸಲಿದೆ, ಆದರೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿರುವುದರಿಂದ ರಶ್ಯವನ್ನು ಅಧ್ಯಕ್ಷತೆಯಿಂದ ಅನರ್ಹಗೊಳಿಸಬೇಕು ಎಂದು ಉಕ್ರೇನ್ ಪಟ್ಟುಹಿಡಿದಿತ್ತು. ಎಪ್ರಿಲ್ 1ರಿಂದ ಅವರು(ರಶ್ಯ) ಅಸಂಬದ್ಧತೆಯ ಮಟ್ಟವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಉಕ್ರೇನ್ನ ಕಾಯಂ ರಾಯಭಾರಿ ಸೆರ್ಗಿಯ್ ಕಿಸ್ಲಿಟ್ಸ್ಯಾ ಪ್ರತಿಕ್ರಿಯಿಸಿದ್ದಾರೆ. ಸಂಘರ್ಷಗಳನ್ನು ತಡೆಗಟ್ಟುವುದು, ಬಿಕ್ಕಟ್ಟು ನಿವಾರಣೆಗೆ ಕ್ರಮ ಕೈಗೊಳ್ಳುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಶ್ವಸಂಸ್ಥೆ ಅಸಮರ್ಥವಾಗಿದೆ. ಆದ್ದರಿಂದ, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಕಲಾಪವನ್ನು ಹೊರತುಪಡಿಸಿ ಎಪ್ರಿಲ್ ತಿಂಗಳಲ್ಲಿ (ರಶ್ಯದ ಅಧ್ಯಕ್ಷತೆಯಲ್ಲಿ) ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ…
ಇಟಲಿ: ಇಟಲಿ ಸರ್ಕಾರವು ಇಟಾಲಿಯನ್ ಭಾಷೆಯೇ ಸಾರ್ವಭೌಮ ಎಂಬುದನ್ನು ಜಾರಿಗೆ ತರುವ ಮೂಲಕ ಇಂಗ್ಲಿಷ್ ಭಾಷೆ ಬಳಕೆಯ ನಿಷೇಧಕ್ಕೆ ಮುಂದಾಗಿದೆ. ದೇಶದಲ್ಲಿ ವಿದೇಶಿ ಭಾಷೆ ಬಳಕೆ, ಅದರಲ್ಲೂ ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಕರಡು ವಿಧೇಯಕವೊಂದನ್ನು ಮಂಡಿಸಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮುಂದಾಗಿದ್ದಾರೆ. ಇದೀಗ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದರೆ ಅವರಿಗೆ 1.08 ಲಕ್ಷ ಡಾಲರ್ (ಸುಮಾರು 89 ಲಕ್ಷ ರೂಪಾಯಿ) ದಂಡ ವಿಧಿಸುವ ಕ್ರಮವೂ ವಿಧೇಯಕದಲ್ಲಿದೆ. ಆ ಮೂಲಕ ದೇಶದಲ್ಲಿ ಇಟಲಿಯಲ್ಲಿಯೇ ಜನ ವ್ಯವಹರಿಸುವಂತೆ ಮಾಡುವುದು ಮೆಲೋನಿ ಅವರ ಉದ್ದೇಶವಾಗಿದೆ. ಈಗಾಗಲೇ ಇಂಗ್ಲಿಷ್ ಬಳಕೆಯ ನಿಷೇಧದ ಕುರಿತು ವಿಧೇಯಕದ ಕರಡು ಪ್ರತಿ ಸಿದ್ಧವಾಗಿದೆ. ವಿಧೇಯಕದ ಅಂತಿಮ ಪ್ರತಿ ಸಿದ್ಧವಾಗಿ, ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಅಂಗೀಕಾರ ಪಡೆದ ನಂತರ ಕಾನೂನು ಜಾರಿಗೆ ಬರಲಿದೆ. ಎಲ್ಲರೂ ಇಟಾಲಿಯನ್ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು ಎಂಬದು ಮೆಲೋನಿ ಅವರ ಉದ್ದೇಶವಾಗಿದ್ದು,…
ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾವಾಗ ಯಶ್ ನಟನೆಯ ಮುಂದಿನ ಸಿನಿಮಾ ಘೋಷಣೆ ಆಗಲಿದೆ ಎಂದು ಫ್ಯಾನ್ಸ್ ಕಾದು ಕೂತಿದ್ದಾರೆ. ಈ ಮಧ್ಯೆ ಯಶ್ ಅಭಿಮಾನಿಯೊಬ್ಬ ಯಶ್ ಮನೆ ಮುಂದೆ ಧರಣಿ ಕೂರುವುದಾಗಿ ತಿಳಿಸಿದ್ದಾನೆ. ಯಶ್ ಮನೆ ಮುಂದೆ ಧರಣಿ ಕೂರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವ ಬರೆದುಕೊಂಡಿದ್ದು ಇದನ್ನು ರಾಧಿಕಾ ಪಂಡಿತ್ ಗಮನಕ್ಕೂ ತಂದಿದ್ದಾನೆ. ‘ಅತ್ತಿಗೆ, ಆದಷ್ಟು ಬೇಗ ಯಶ್ ಅವರ ಮುಂದಿನ ಚಿತ್ರದ ಅಪ್ ಡೇಟ್ ಕೊಡಿ. ಕೊಡದೇ ಇದ್ದರೆ ಸ್ಟ್ರೈಕ್ ಮಾಡುತ್ತೇನೆ’ ಎಂದು ಬರೆದಿದ್ದಾನೆ. ಕೆಜಿಎಫ್ 2 ಸಿನಿಮಾದ ನಂತರ ಯಶ್ ನಡೆ ನಿಗೂಢವಾಗಿದ್ದು, ಯಾವ ಭಾಷೆಯಲ್ಲಿ, ಯಾರ ನಿರ್ದೇಶನದಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ಯಶ್ ಜೊತೆ ಹಲವು ನಿರ್ದೇಶಕರ ಹೆಸರುಗಳು ಓಡುತ್ತಿದ್ದರೂ, ಈವರೆಗೂ ಯಶ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ ಎಂದು ಹೇಳಿ…
ಕಾಂತಾರ ಸಿನಿಮಾದ ಭರ್ಜರಿ ಸಕ್ಸಸ್ ಬಳಿಕ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮೇಲೆ ರಾಜಕಾರಣಿಗಳ ಕಣ್ಣು ಬಿದ್ದಿದ್ದು, ಬಿಜೆಪಿ ಶೆಟ್ರನ್ನು ಸಂಪರ್ಕಿಸಿ, ಈ ಬಾರಿಯ ಚುನಾವಣೆಗೆ ನಿಲ್ಲುವಂತೆ ಆಹ್ವಾನ ನೀಡಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಿಷಬ್ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆಯೇ ತಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ರಿಷಬ್ ಹೇಳಿದ್ದರು. ಇದೀಗ ಮತ್ತೆ ರಿಷಬ್ ಈ ಕುರಿತು ಮಾತನಾಡಿದ್ದಾರೆ. ‘ಈಗಾಗಲೇ ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇಂತಹ ಗಾಸಿಪ್ ಹಬ್ಬಿಸುವವರಿಗೆ ಏನು ಹೇಳಲಿ? ನನಗೆ ನನ್ನದೇ ಆದ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿದೆ. ಸಿನಿಮಾ ಮಾಡಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರಕ್ಕೆ ಬರಲ್ಲ’ ಎಂದಿದ್ದಾರೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮತ್ತೆ ರಿಷಬ್ ಇಂಥದ್ದೇ ಮಾತುಗಳನ್ನು ಆಡಿದ್ದಾರೆ. ಹಿರಿಯ ಸಿನಿಮಾ ಪತ್ರಕರ್ತೆಯೊಬ್ಬರು ರಿಷಬ್ ಫೋಟೋವೊಂದನ್ನು ಶೇರ್ ಮಾಡಿ, ರಿಷಬ್ ರಾಜಕಾರಣಕ್ಕೆ ಬರಲಿದ್ದಾರೆ ಎಂದು ಏಪ್ರಿಲ್…
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. 60 ದಿನಗಳ ಕಾಲ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿದ್ದು ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮಾಫಿಯಾ’ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದ್ದು, ‘ಮಾಫಿಯಾ’ ಚಿತ್ರಕ್ಕಾಗಿ ಪ್ರಜ್ವಲ್ ಸಾಕಷ್ಟು ಶ್ರಮವಹಿಸಿದ್ದಾರೆ ಹಾಗೂ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಳ್ಳುತ್ತಿದ್ದಾರೆ. ಮಾಫಿಯಾ ಪ್ರಜ್ವಲ್ ನಟನೆಯ ಮೂವತ್ತೈದನೇ ಚಿತ್ರವಾಗಿದ್ದು, ಲೋಹಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ಹತ್ತು ದಿನಗಳ ಕಾಲ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ…
ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಶಿವಾಜಿ ಸುರತ್ಕಲ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ 2 ಸಿನಿಮಾ ಆರಂಭಿಸಿದ್ದರು. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಶಿವಾಜಿ ಸುರತ್ಕಲ್ 2 ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಾಗಿದ್ದು, ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲರಲ್ಲೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. “ಒಂದೊಳ್ಳೆ…
ಬಾಗಲಕೋಟೆ- ತೇರದಾಳ: ತೇರದಾಳ ಮತಕ್ಷೇತ್ರದ ಬಿಜೆಪಿ ಟಿಕೆಟ್ ಸ್ಥಳೀಯ ನೇಕಾರರಿಗೆ ಕೊಡದಿದ್ದರೆ ಬಿಜೆಪಿ ಸೋಲು ಶತಸಿದ್ಧ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಬಾಗಲಕೋಟ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜು ಅಂಬಲಿ ವರಿಷ್ಠರಿಗೆ ಮನವಿಮಾಡಿದ್ದಾರೆ. ಬಾಗಲಕೋಟೆಯ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ತೇರದಾಳ ವಿಧಾನಸಭಾ ಕ್ಷೇತ್ರದ ಸ್ಥಳೀಯ ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಂಡರು. ತೇರದಾಳ್ ಮತಕ್ಷೇತ್ರದ ಸ್ಥಳೀಯ ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸುತ್ತೇವೆ. ಒಂದು ವೇಳೇ ನೇಕಾರರಿಗೆ ಟಿಕೆಟ್ ನೀಡದಿದ್ದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ಹೇಳಿದರು. ವರಿಷ್ಠರು ತೇರದಾಳ ಮತಕ್ಷೇತ್ರದ ನೇಕಾರರ ಬಗ್ಗೆ ಕಾಳಜಿ ವಹಿಸಲಿ. ಬಾಗಲಕೋಟೆ ಬಿಜೆಪಿ ಕೋರ ಕಮಿಟಿ ಸಭೆಯಲ್ಲಿ ಸಿದ್ದು ಸವದಿ ಅವರ ಹೆಸರನ್ನು ಹೇಳುವವರು ಜಾಸ್ತಿ ಜನರನ್ನು ಕರೆಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಅಂತ ಸ್ಥಳಿಯ ಅನೇಕ ಬಿಜೆಪಿ ನಾಯಕರು ಹೆಳಿದರು. ತೇರದಾಳ…