ಇತ್ತೀಚೆಗೆ ಖಾಸಗಿ ವಲಯದ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಹಾಗಾಗಿ.. Jio 3 ಅಗ್ಗದ ಯೋಜನೆಗಳನ್ನು ಹೊಂದಿದೆ. ಈ ಮೂಲಕ ಗ್ರಾಹಕರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು https://youtu.be/PfSRcq9dnpc?si=YtnF9rj_ORn25eW8 ರಿಲಯನ್ಸ್ ಜಿಯೋ ತಮ್ಮ ಮೊಬೈಲ್ ಚಾರ್ಜಿಂಗ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವುದರೊಂದಿಗೆ, ಅನೇಕ ಜನರು ಲಭ್ಯವಿರುವ ಅಗ್ಗದ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಅನೇಕ ಜನರು ಯೋಜನೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅವರೊಂದಿಗೆ ಬರುವ ಡೇಟಾವನ್ನು ಬಳಸುವುದಿಲ್ಲ. ಏಕೆಂದರೆ.. ವೈಫೈ ಮತ್ತು ಹಾಟ್ ಸ್ಪಾಟ್ ನಿಂದ ಡೇಟಾ ಪಡೆಯುತ್ತಿದ್ದಾರೆ. ಆದ್ದರಿಂದ ಜಿಯಾ ಯೋಜನೆಗಳಿಂದ ಬರುವ ಡೇಟಾವನ್ನು ಬಳಸದೆಯೇ ಯೋಜನೆಯು ಕೊನೆಗೊಳ್ಳುತ್ತಿದೆ. ಹಾಗಾದರೆ ಡೇಟಾ ಅಗತ್ಯವಿಲ್ಲದವರಿಗೆ 3 ಅಗ್ಗದ ಯೋಜನೆಗಳ ಬಗ್ಗೆ ಈಗ ತಿಳಿಯೋಣ. ಇವುಗಳನ್ನು ಜಿಯೋ ಅಪ್ಲಿಕೇಶನ್‌ನಲ್ಲಿ ವ್ಯಾಲ್ಯೂ ಪ್ಯಾಕ್‌ಗಳು ಎಂದು ಕರೆಯಲಾಗುತ್ತದೆ. ಇವುಗಳ ಮೊದಲ ಪ್ಯಾಕ್ ರೂ.189ಕ್ಕೆ ಲಭ್ಯವಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದೆ. ಇದು ಅನಿಯಮಿತ ಕರೆ ಆಯ್ಕೆಯನ್ನು ಹೊಂದಿದೆ. 300 SMS ಕಳುಹಿಸಬಹುದು. ಇದು 2GB…
Author: Prajatv Kannada
ಸೂರ್ಯೋದಯ: 06:05, ಸೂರ್ಯಾಸ್ತ : 06:29 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ದಸಮಿ ನಕ್ಷತ್ರ: ಮೃಗಶಿರ ರಾಹು ಕಾಲ: 12:00bನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಬೆ.6:59 ನಿಂದ ಬೆ.8:36 ತನಕ ಅಭಿಜಿತ್ ಮುಹುರ್ತ:ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. ಮೇಷ: ಮಂಗಳಕಾರ್ಯ ಸುಗಮ, ಸಂಗಾತಿಯ ಕುಟುಂಬದಿಂದ ಮದುವೆ ಕಾರ್ಯಕ್ಕೆ ಚಾಲನೆ, ಸರಕಾರಿ ಅಧಿಕಾರಿಗಳಿಗೆ ಬಲವಂತದ ವರ್ಗಾವಣೆ ಸಾಧ್ಯತೆ, ಹೆಚ್ಚಿನ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ಸು, ಕೌಟುಂಬಿಕ ಕಲಹಗಳು ಬಗೆಹರಿಯಲಿವೆ ಎಂಬ ಆಲೋಚನೆಯಲ್ಲಿ ಇತರ ದುರ್ಭೂಬುದ್ದಿಯಿಂದ ವ್ಯತ್ಯಾಸ, ನೇತ್ರ ಚಿಕಿತ್ಸೆ ಸಂಭವ, ಮೇಲಿಂದ ಮೇಲೆ ಅನಾರೋಗ್ಯ, ಒಡಹುಟ್ಟಿದವರಿಂದ ಸಹಕಾರ,…
ಶಿಡ್ಲಘಟ್ಟ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ, ಅಪವಿತ್ರ ಮೈತ್ರಿ ಗೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಸಿಕ್ಯೂಷನ್ ಗೆ ಅನುಮತಿಸಿರುವ ಕ್ರಮವನ್ನು ಖಂಡಿಸಿ, https://youtu.be/lnGfTpxVkCE?si=iqdDTq64-BQE9IYf ರಾಜ್ಯಾದ್ಯಂತ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ( ದಲಿತ ಹಿಂದುಳಿದ ಅಲೆಮಾರಿ ಆದಿವಾಸಿ ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳು ) ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ (ರಿ) ವು, ಸಿಎಂ ಸಿದ್ದರಾಮಯ್ಯ ಅವರ ತೇಜೋವದೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಗೊಳಿಸುತ್ತಿರುವ ಬಿಜೆಪಿ – ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚಲೋ ಎಂಬ ಘೋಷ ವಾಕ್ಯದೊಂದಿಗೆ ರಾಜಭವನ ಮುತ್ತಿಗೆಯ ಸಲುವಾಗಿ ಹೊರಡುವ ಸಮಯದಲ್ಲಿ ಅವರು ಮಾತನಾಡಿದರು
ಮಹಾರಾಸ್ಟ್ರದ ಉಜನಿ ಹಾಗೂ ವೀರ ಭಟ್ಕರ್ ಜಲಾಶಯದಿಂದ ಭೀಮಾ ನದಿಗೆ ನೀರು ಬಿಟ್ಟ ಪರಿಣಾಮ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ಗುಡಿ ಜಲಾವೃತವಾಗಿದೆ..ನದಿ ತೀರದಲ್ಲಿರುವ ಯಲ್ಲಮ್ಮ ಗುಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. https://youtu.be/7TSLipgWy-I?si=2duUiqKYL3jLg2S8 ಹೀಗಾಗಿ ದೇಗುಲ ದರ್ಶನ ಪಡೆಯಲು ಬಯಸಿದ್ದ ದೇವಿ ಭಕ್ತರಿಗೆ ನಿರಾಸೆ ಮೂಡಿದೆ. ನಿನ್ನೆಯಸ್ಟೆ 1.40 ಲಕ್ಷ ಕ್ಯೂಸೆಕ್ ನೀರು ಮಹಾರಾಷ್ಟ್ರ ಜಲಾಶಯದಿಂದ ಬಿಡಲಾಗಿತ್ತು..ಹೀಗಾಗಿ ನದಿಪಾತ್ರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ..
ಮೈಸೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗುವಂತಿದೆ. ಸದ್ಯ ಕೇಸ್ ಹೈಕೋರ್ಟ್ನಲ್ಲಿದ್ದು, ಗುರುವಾರ ಮತ್ತೆ ವಿಚಾರಣೆಗೆ ಬರಲಿದೆ. ಏನಾಗಲಿದೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಆಗಸ್ಟ್ 31ಕ್ಕೆ ರಾಜ್ಯಪಾಲರ ನಡೆ ಖಂಡಿಸಿ, ರಾಜಭವನ ಚಲೋ ರ‍್ಯಾಲಿಗೆ ಕರೆ ನೀಡಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಪರ ಶೋಷಿತ ಸಮುದಾಯಗಳು ಪ್ರತಿಭಟನೆ ನಡೆಸಿವೆ. ಇದರ ನಡುವೆ ಮೈಸೂರಿನಲ್ಲಿ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ. ನಕಲಿ ಸಹಿ ವಿಚಾರವಾಗಿ ಪಾರ್ವತಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ವತಿ ಬರೆದಿದ್ದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಹಚರರ ವಿರುದ್ಧವೂ ಕ್ರಮ ವಹಿಸುವಂತೆ…
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಲ್ಲದ ಚಾಲಕರ ಹುಚ್ಚಾಟವಾಡಿದ್ದು ವಿರುದ್ದ ದಿಕ್ಕಿನಲ್ಲಿ ಬಸ್ ಚಲಾಯಿಸಿದ ಖಾಸಗಿ ಬಸ್ ಚಾಲಕ https://youtu.be/PfSRcq9dnpc?si=CErC3TRcTRvwq6J8 ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಲ್ಲದ ಚಾಲಕರ ಹುಚ್ಚಾಟ ಮೆರೆದಿದ್ದು ವಿರುದ್ಧ ದಿಕ್ಕಿನಲ್ಲಿ ಬಸ್ ಹೋಗ್ತಿದ್ದ ವೇಗ ನೋಡಿ ಭಯಪಟ್ಟ ವಾಹನ ಸವಾರರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬಸ್ ಚಾಲಕನ ಹುಚ್ಚಾದ ವಿಡಿಯೋ ಓನ್ ವೇ ಅಲ್ಲಿ ಹೋಗ್ತಿರೋ ಖಾಸಗಿ ಬಸ್ ವಿಡಿಯೋ ಟ್ವಿಟರ್ ನಲ್ಲಿ ಪೋಸ್ಟ್ VRL ಬಸ್ ಚಾಲಕನ ಹುಚ್ಚಾಡದ ವಿರುದ್ಧ ಕ್ರಮಕ್ಕೆ ಒತ್ತಾಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅದೆಷ್ಟೋ ಅಪಘಾತಗಳಾಗಿವೆ ಆದ್ರೂ ಸಂಚಾರಿ ನಿಯಮ ಉಲ್ಲಂಘಿಸಿ ಒನ್ ವೇ ನಲ್ಲಿ ಬಸ್ ಚಲಾಯಿಸಿದ ಚಾಲಕ VRL ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್ ಇದಾಗಿತ್ತು
ಗೌರಿ ಗಣಪತಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಸೆಪ್ಟೆಂಬರ್ 6-7 ರಂದು ನಿಗದಿ ಆಗಿರುವ ಗೌರಿ ಗಣೇಶೋತ್ಸವ ಹಬ್ಬಕ್ಕಾಗಿ ಕಲರ್ ಕಲರ್ ಗಣಪತಿ ಮೂರ್ತಿಗಳು ಸಿಲಿಕಾನ್ ಸಿಟಿಗೆ ಎಂಟ್ರಿ ನೀಡಿವೆ. https://youtu.be/VMpD-pg7wok?si=P8fYcjDvPjhN-YZN ನಗರದ ಮಾವಳ್ಳಿಗೆ ಲಗ್ಗೆ ಇಟ್ಟ ಗೌರಿ ಮಣ್ಣಿನ ಗಣಪತಿ ಮೂರ್ತಿಗಳು ಬಗೆ ಬಗೆಯ ಕಲರ್ ಗಳಿಂದ ಮಿಂಚುತ್ತಿರುವ ಗಣಪತಿ ಮೂರ್ತಿ ಐನೂರು ರೂಗಳಿಂದ ಎರಡು ಲಕ್ಷದ ಮೂರ್ತಿಗಳನ್ನ ಮಾರಾಟ ಬೆಂಗಳೂರಿನ ಮಾವಳ್ಳಿಯಲ್ಲಿ ಕಲರ್ ಕಲರ್ ಗಣಪತಿ ಇದ್ರೂ- ಕೊಳ್ಳಲು ಜನ ಹಿಂದೆಟು ಈ ಬಾರಿಯೂ ಎಂಟ್ರಿ ಕೊಡ್ತಿವೆ ಪರಿಸರ ಮಾರಕ ಪಿಒಪಿ ಗಣಪ ಸ್ವತಃ ಗಣಪತಿ ಮಾರಾಟಗಾರರಿಂದಲೇ ಶಾಕಿಂಗ್ ಸ್ಟೇಟ್ಮೆಂಟ್ ಲಕ್ಷಾಂತರ ರೂಗೆ ಆದ್ರೂ ಸರಿ ಪಿಓಪಿ ಗಣಪತಿಯತ್ತ ನಗರದ ಯುವಕರು ಮೊರ ಬೆಂಗಳೂರಿನಲ್ಲಿ ಸಿಗದಿದ್ರೂ ಸರಿ ಮುಂಬೈ, ಕೊಲ್ಕತ್ತದತ್ತ ಸಂಚಾರ ವಿಮಾನ, ರೈಲಿನಿಂದ ನಗರಕ್ಕೆ ಎಂಟ್ರಿ ಕೊಡ್ತವಂತೆ ಪರಿಸರ ಮಾರಕ ಪಿಓಪಿ ಗಣಪತಿ ಮೂರ್ತಿ ಮಣ್ಣಿನ ಗಣಪತಿ ರಿಜೆಕ್ಟ್ ಮಾಡಿ ಪಿಓಪಿ ಗಣಪತಿ ಸೆಲೆಕ್ಟ್ ಮಾಡ್ತಿರೋ ಯುವಕರುಹಬ್ಬ…
ಬಳ್ಳಾರಿ:- ಕರ್ನಾಟಕದ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಾಲ್ಮಿಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ಸಲ್ಲಿಕೆಯ ಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ ಬಳ್ಳಾರಿಯಲ್ಲಿ ದಾಳಿ ನಡೆಸಿದ್ದಾರೆ. ನಾಗೇಂದ್ರ ಸಂಬಂಧಿ ಎರ್ರಿಸ್ವಾಮಿ ಮನೆ ಸೇರಿದಂತೆ ಕೆಲ ಆಪ್ತ ಸಹಾಯಕರು ಮತ್ತು ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಇಡಿ ಜಾರ್ಜ್ಶೀಟ್ ಸಲ್ಲಿಕೆಗೆ ಸಮಯ ಹತ್ತಿರ ಬಂದಿರುವುದರಿಂದ ಅಧಿಕಾರಿಗಳು ದಾಳಿ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಕಳೆದ ತಿಂಗಳಷ್ಟೇ ಬೆಂಗಳೂರು, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದರು. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಗಸನಗೌಡ ದದ್ದಲ್ ನಿವಾಸ, ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಮನೆ ಮೇಲೂ ದಾಳಿ ನಡೆಸಿದ್ದರು ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ರನ್ನು ಇನ್ನೂ ಕೆಲವೇ ಗಂಟೆಗಳಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ದರ್ಶನ್ ಅವರು ಬಳ್ಳಾರಿಗೆ ಶಿಫ್ಟ್ ಆಗುತ್ತಿರುವುದರಿಂದ ಪತ್ನಿ ವಿಜಯಲಕ್ಷ್ಮೀಗೆ ಫುಲ್ ಟೆನ್ಷನ್ ಶುರುವಾಗಿದೆ. ಪತಿಯನ್ನು ನೋಡಬೇಕು ಎಂದರೆ ವಿಜಯಲಕ್ಷ್ಮಿ 300 ಕಿ.ಮೀ ಪ್ರಯಾಣ ಮಾಡಬೇಕಾಗಿದ್ದು ಪ್ರತಿವಾರ ಪ್ರಯಾಣ ಮಾಡೋದು ಕಷ್ಟ ಆಗಲಿದೆ. ದರ್ಶನ್ ಅರೆಸ್ಟ್ ಆದಾಗಿನಿಂದ ದರ್ಶನ್ ಅವರನ್ನು ವಿಜಯಲಕ್ಷ್ಮೀ ಈವರೆಗೆ 8ಕ್ಕೂ ಹೆಚ್ಚುಬಾರಿ ಭೇಟಿ ಮಾಡಿ ಬಂದಿದ್ದಾರೆ. ಅವರ ಜೊತೆ ಮಗ ವಿನೀಶ್ ಕೂಡ ಇರುತ್ತಿದ್ದರು. ಇವರ ಜೊತೆ ಇತರ ಸೆಲೆಬ್ರಿಟಿಗಳು ಕೂಡ ಆಗಮಿಸಿದ್ದು ಇದೆ. ಈಗ ವಿಜಯಲಕ್ಷ್ಮೀ ಅವರು ದರ್ಶನ್ನ ಭೇಟಿ ಮಾಡಬೇಕು ಎಂದರೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ತೆರಳಬೇಕು. ದರ್ಶನ್ ಅವರು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಅವರಿಂದ ಸಾಕಷ್ಟು ಸವಲತ್ತುಗಳನ್ನು ದರ್ಶನ್ ಪಡೆದುಕೊಂಡಿದ್ದರು. ಇದು ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ಆರಂಭ ಆಗಿದೆ. ದರ್ಶನ್ ಗ್ಯಾಂಗ್ನ ಒಡೆಯಲಾಗಿದೆ. ಇದು ದರ್ಶನ್…
ಬೆಂಗಳೂರು:- ಕೆಲ ದಿನಗಳಿಂದ ನಗರದಲ್ಲಿ ಸುಮ್ಮನಿದ್ದ ಪಂಕ್ಚರ್ ಮಾಫಿಯಾ ಮತ್ತೆ ತಲೆ ಎತ್ತಿರುವುದು, ಇದರಿಂದ ಕಳೆದ ಆರು ತಿಂಗಳಲ್ಲಿ 482 ಬಿಎಂಟಿಸಿ ಬಸ್ಗಳು ಪಂಕ್ಚರ್ ಆಗಿವೆಯಂತೆ. ಇದರಿಂದ ನಡು ರೋಡಲ್ಲಿ ಬಿಎಂಟಿಸಿ ಬಸ್ಗಳು ಕೈ ಕೊಡುತ್ತಿದ್ದು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪೋಲಿಸ್ ಕಮೀಷನರ್ಗೆ ದೂರು ಕೊಡಲು ಮುಂದಾಗುತ್ತೇವೆ ಎಂದು ಬಿಎಂಟಿಸಿ ಅಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ. ಬಿಎಂಟಿಸಿ ಬಸ್ಗಳ ಪಂಕ್ಚರ್ ಲೆಕ್ಕಾಚಾರ ಜನವರಿ- 92 ಬಸ್ಸುಗಳು ಫೆಬ್ರವರಿ- 86 ಬಸ್ಸುಗಳು ಮಾರ್ಚ್- 74 ಬಸ್ಸುಗಳು ಏಪ್ರಿಲ್- 72 ಬಸ್ಸುಗಳು ಮೇ- 82 ಬಸ್ಸುಗಳು ಜೂನ್- 76 ಬಸ್ಸುಗಳು ಒಟ್ಟು- 482 ಬಸ್ಸುಗಳ ಟೈರ್ಗಳು ಪಂಕ್ಚರ್ ಆಗಿವೆ ನಗರದ ಯಾವುದೇ ರೋಡ್, ಫ್ಲೈ ಓವರ್, ಅಂಡರ್ ಪಾಸ್ಗಳಲ್ಲೂ ಕಬ್ಬಿಣದ ಮೊಳೆಗಳನ್ನು ಸುರಿಯಲಾಗುತ್ತಿದೆ. ಈ ಸಮಸ್ಯೆ ಬಿಎಂಟಿಸಿಗೆ ಮಾತ್ರವಲ್ಲದೆ ಬೈಕ್, ಕಾರುಗಳಿಗೂ ಇವೆ. ಎಲ್ಲೆಂದರಲ್ಲಿ ಕಬ್ಬಿಣದ ಮೊಳೆಗಳನ್ನು ಕಿರಾತಕರು ರಾತ್ರಿ ವೇಳೆಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತವೆ.…