ಇಟಲಿ: ಇಟಲಿ ಸರ್ಕಾರವು ಇಟಾಲಿಯನ್ ಭಾಷೆಯೇ ಸಾರ್ವಭೌಮ ಎಂಬುದನ್ನು ಜಾರಿಗೆ ತರುವ ಮೂಲಕ ಇಂಗ್ಲಿಷ್ ಭಾಷೆ ಬಳಕೆಯ ನಿಷೇಧಕ್ಕೆ ಮುಂದಾಗಿದೆ. ದೇಶದಲ್ಲಿ ವಿದೇಶಿ ಭಾಷೆ ಬಳಕೆ, ಅದರಲ್ಲೂ ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಕರಡು ವಿಧೇಯಕವೊಂದನ್ನು ಮಂಡಿಸಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮುಂದಾಗಿದ್ದಾರೆ. ಇದೀಗ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದರೆ ಅವರಿಗೆ 1.08 ಲಕ್ಷ ಡಾಲರ್ (ಸುಮಾರು 89 ಲಕ್ಷ ರೂಪಾಯಿ) ದಂಡ ವಿಧಿಸುವ ಕ್ರಮವೂ ವಿಧೇಯಕದಲ್ಲಿದೆ. ಆ ಮೂಲಕ ದೇಶದಲ್ಲಿ ಇಟಲಿಯಲ್ಲಿಯೇ ಜನ ವ್ಯವಹರಿಸುವಂತೆ ಮಾಡುವುದು ಮೆಲೋನಿ ಅವರ ಉದ್ದೇಶವಾಗಿದೆ. ಈಗಾಗಲೇ ಇಂಗ್ಲಿಷ್ ಬಳಕೆಯ ನಿಷೇಧದ ಕುರಿತು ವಿಧೇಯಕದ ಕರಡು ಪ್ರತಿ ಸಿದ್ಧವಾಗಿದೆ. ವಿಧೇಯಕದ ಅಂತಿಮ ಪ್ರತಿ ಸಿದ್ಧವಾಗಿ, ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಅಂಗೀಕಾರ ಪಡೆದ ನಂತರ ಕಾನೂನು ಜಾರಿಗೆ ಬರಲಿದೆ. ಎಲ್ಲರೂ ಇಟಾಲಿಯನ್ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು ಎಂಬದು ಮೆಲೋನಿ ಅವರ ಉದ್ದೇಶವಾಗಿದ್ದು,…
Author: Prajatv Kannada
ಚಂಡೀಗಢ: 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಂಜಾಬ್ ಕಾಂಗ್ರೆಸ್ (Punjab Congress) ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) 10 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶನಿವಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಧು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ʻʻಪ್ರಜಾಪ್ರಭುತ್ವವು ಸರಪಣಿಯಲ್ಲಿ ಬಂಧಿತವಾಗಿದೆʼʼ ಎಂದು ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಿಡಿಕಾರಿದ್ದಾರೆ. ಮುಂದುವರಿದು ಈ ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಒಂದು ಕ್ರಾಂತಿಯೂ ಬಂದಿದೆ. ಈ ಬಾರಿ ರಾಹುಲ್ ಗಾಂಧಿ (Rahul Gandhi) ಅವರ ರೂಪದಲ್ಲಿ ಕ್ರಾಂತಿ ಬಂದಿದೆ, ಅವರು ಸರ್ಕಾರವನ್ನ ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದು ಹೊಗಳಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಬಿಜೆಪಿಯವರು ಪಂಜಾಬ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಎಲ್ಲ ಕಾಂಗ್ರೆಸ್…
ರಾಯಪುರ: ನಕ್ಸಲರ ಗುಂಪೊಂದು ಪ್ರಯಾಣಿಕರ ಬಸ್‌ಗೆ ಬೆಂಕಿ ಹಚ್ಚಿ 15 ಜನ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಮಾಲೆವಾಹಿ ಪ್ರದೇಶದಲ್ಲಿ ನಡೆದಿದೆ. ಮಾರ್ಚ್ 31ರಂದು ಮಧ್ಯಾಹ್ನ ಬಸ್ ದಾಂತೇವಾಡದಿಂದ ಸುಕ್ಮಾಗೆ ತೆರಳುತ್ತಿದ್ದ ಸಂದರ್ಭ, ಮಾಲೆವಾಹಿ ಬಳಿ ನಕ್ಸಲರು ಬಸ್ ತಡೆದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ 15 ಜನ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟನೆಯನ್ನು ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂತ್ರಸ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಕ್ಸಲರ ದಾಳಿಯನ್ನು ಖಂಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿದ್ದಾರೆ. ನಾಗರಿಕರ ಮೇಲೆ ದಾಳಿ ನಡೆಯುತ್ತಿರುವುದು ಛತ್ತೀಸ್‌ಗಢದಲ್ಲಿ ಇದೇ ಮೊದಲಲ್ಲ. ಈ ಪ್ರದೇಶವು ಹಲವು ವರ್ಷಗಳಿಂದ ನಕ್ಸಲ್ ಹಿಂಸಾಚಾರವನ್ನು ಎದುರಿಸುತ್ತಿದೆ. ಅಮಾಯಕ ನಾಗರಿಕರು ಆಗಾಗ ಅವರ ದಾಳಿಗೆ ಒಳಗಾಗುತ್ತಾರೆ. ಈ ಪ್ರದೇಶದಲ್ಲಿ ನಕ್ಸಲ್ ಬಂಡಾಯವನ್ನು ಎದುರಿಸಲು ಸರ್ಕಾರ…
ಪಾಟ್ನಾ: ರಾಮನವಮಿಯ (Ram Navami) ಹಿಂಸಾಚಾರದ (Violence) ಬಳಿಕ ಬಿಹಾರದಲ್ಲಿ (Bihar) ಶನಿವಾರ ಮತ್ತೆ ಘರ್ಷಣೆ ವರದಿಯಾಗಿದೆ. ಬಿಹಾರದ ಸಸಾರಾಮ್ (Sasaram) ಪಟ್ಟಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು (Bomb Blast), ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿದೆ. ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.ಸಸಾರಾಮ್ ಡಿಎಂ ಈ ಬಗ್ಗೆ ಮಾಹಿತಿ ನೀಡಿದ್ದು, ಸಸಾರಾಮ್‌ನಲ್ಲಿ ಬಾಂಬ್ ಸ್ಫೋಟವಾಗಿದೆ. ಗಾಯಾಳುಗಳನ್ನು ಬಿಹೆಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಘಟನೆ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 31 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಬೇಕಿದ್ದ ನಳಂದದ ಬಿಹಾರಶರೀಫ್, ರೋಹ್ಯಾಸ್‌ನ ಸಸಾರಾಮ್‌ನಲ್ಲಿ ಘರ್ಷಣೆ ನಡೆದಿತ್ತು. ಜಿಲ್ಲೆಯಲ್ಲಿ ಘರ್ಷಣೆ ನಡೆದಿದ್ದ ಹಿನ್ನೆಲೆ ಸೆಕ್ಷನ್ 144 ಹೇರಲಾಗಿತ್ತು. ಮಾತ್ರವಲ್ಲದೇ ಅಮಿತ್ ಶಾ ಅವರ ಸಸಾರಾಮ್ ಭೇಟಿಯನ್ನೂ ರದ್ದುಗೊಳಿಸಲಾಗಿತ್ತು. ಪೊಲೀಸರ ಪ್ರಕಾರ ರಾಮನವಮಿ ಆಚರಣೆ ವೇಳೆ ಹಿಂಸಾಚಾರ ನಡೆದಿರುವ ಹಿನ್ನೆಲೆ ರಾಜ್ಯಾದ್ಯಂತ ಕೆಲ…
ಮುಂಬೈ: ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರಿಗೆ ಚಾಕಲೇಟ್ ಆಸೆ ತೋರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ವಿಲೆ ಪಾರ್ಲೆಯಲ್ಲಿ ಪೋಷಕರೊಂದಿಗೆ ವಾಸವಾಗಿರುವ 10 ಹಾಗೂ 12 ವರ್ಷದ ಸಹೋದರರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ವಾಹನಗಳ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ತನ್ನ ನೆರೆಯ ಮನೆಯಲ್ಲಿ ವಾಸವಿದ್ದ ಈ ಬಾಲಕರ ಮನೆಗೆ ತೆರಳಿ, ಚಾಕಲೇಟ್ ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದ್ದು, ನಗರದ ಪಶ್ಚಿಮ ಸಂತಾಕ್ರೂಜ್ ನ ಶಾಲೆಯೊಂದರಲ್ಲಿ ಓದುತ್ತಿರುವ ಬಾಲಕರು ಶಾಲೆಯ ಶಿಕ್ಷಕರ ಬಳಿ ಈ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದ ಶಿಕ್ಷಕರು ಸಂತಾಕ್ರೂಜ್‍ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಕೇಸನ್ನು ವಿಲೆ ಪಾರ್ಲೆ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಣ್ ಚವಾಣ್ ತಿಳಿಸಿದ್ದಾರೆ. ಆರೋಪಿಯು ಮಕ್ಕಳಿಗೆ ಚಾಕಲೇಟ್ ಆಸೆ…
ರಾಮನಗರ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಸಾತನೂರು ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಸಾತನೂರು ಸಮೀಪ ಜಾನುವಾರುಗಳನ್ನು ರಕ್ಷಣೆ ಮಾಡುವ ವೇಳೆ ಇರ್ದಿಷ್ ಪಾಷಾ ಎಂಬಾತ ಸಾವನ್ನಪ್ಪಿದ್ದನು. ಇರ್ಗಿಷ್ ಮೇಲೆ ಹಲ್ಲೆಗೈದು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಇರ್ದಿಷ್ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ರಹಸ್ಯ ಸ್ಥಳದಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಆರೋಪ ಹಿನ್ನೆಲೆ ಮೃತನ ಸಂಬಂಧಿಕರು ಸಾತನೂರು ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಸಾತನೂರು ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 16 ಜಾನುವಾರುಗಳನ್ನ ರಕ್ಷಿಸಲಾಗಿದೆ. ಈ ವೇಳೆ ಕ್ಯಾಂಟರ್ ವಾಹನದಲ್ಲಿದ್ದ ಇರ್ದಿಷ್ ಪಾಷ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಜಾನುವಾರುಗಳನ್ನು ರಕ್ಷಿಸಿದ ಅನತಿ ದೂರದಲ್ಲಿಯೇ ಇರ್ದಿಷ್ ಶವ ಪತ್ತೆಯಾಗಿತ್ತು.ಈ ಸಂಬಂಧ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡದಿಂದ…
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ (BJP) ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ (A.B.Malaka Reddy) ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಇಂದು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿರುವ ಅವರು, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K.Shivakumar) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಮಾಲಕರೆಡ್ಡಿ ಐದು ಬಾರಿ ಶಾಸಕರಾಗಿ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದರು. ಬಾಬುರಾವ್ ಚಿಂಚನಸೂರ್ ಜೊತೆ ಬಿಜೆಪಿ ಸೇರಿದ್ದ ಮಾಲಕರೆಡ್ಡಿ ಜಿದ್ದಿಗೆ ಬಿದ್ದು ಖರ್ಗೆಯವರನ್ನು ಸೋಲಿಸಿದರು. ಆದರೆ ಕಳೆದ ವಾರ ಬಾಬುರಾವ್ ಚಿಂಚನಸೂರ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಮಾಲಕರೆಡ್ಡಿ ಕೂಡಾ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮಾಲಕರೆಡ್ಡಿ ಬಿಜೆಪಿಯಲ್ಲಿದ್ದರೂ ತಮ್ಮ ಪುತ್ರಿ ಅನುರಾಗಾ ಮಾಲಕರೆಡ್ಡಿ (Anuraga Malaka Reddy) ಕಾಂಗ್ರೆಸ್‌ನಲ್ಲಿಯೇ ಉಳಿದಿದ್ದರು.…
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ,ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆಯ ವೇಳೆಗೆ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಲಬುರಗಿಯಲ್ಲಿ 38.0 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಚಾಮರಾಜನಗರದಲ್ಲಿ 1 ಸೆಂ. ಮೀ ಮಳೆ ಆಗಿರುವುದು ವರದಿ ಆಗಿದೆ. ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು: ಹಾಸನ ವಿಧಾನಸಭೆ ಸೇರಿ ಅಭ್ಯರ್ಥಿಗಳ 2ನೇ ಪಟ್ಟಿ ಸೋಮವಾರ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಕಾಂಗ್ರೆಸ್ ಮುಖಂಡ ಚಂದ್ರಪ್ಪ ಹಾಗೂ ಅವರ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಮತದಾರರ ಆಶೀರ್ವಾದದಿಂದ ಸರ್ಕಾರ ರಚನೆಗೆ ಅಗತ್ಯವಿರುವ 113 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಚುನಾವಣಾ ಪೂರ್ವ ಸಮೀಕ್ಷಾ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಜೆಡಿಎಸ್ ರಾಜ್ಯದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸಿರುವ ಸಮೀಕ್ಷೆಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ ಎಂದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಹೆಚ್ಚಿನ ಸ್ಥಾನಗಳಿಸಿ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯದಲ್ಲಿ ಪ್ರವಾಸ ಮಾಡುವಾಗ ಜೆಡಿಎಸ್ ಪರ ಅಪಾರ ಜನ ಬೆಂಬಲ ವ್ಯಕ್ತವಾಗಿರುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ನಡೆಯುತ್ತಿರುವ ದರ್ಪ-ದೌರ್ಜನ್ಯಕ್ಕೆ ಮುಕ್ತಿ ಕೊಡಲು ಮುನೇಗೌಡರನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿ (BJP) ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಕರೆಸಲು ಸಿದ್ಧತೆ ನಡೆಸಿದೆ. ಹೌದು. ಚುನಾವಣೆ (Karnataka Election) ಘೋಷಣೆಗೂ ಮೊದಲೇ 7 ಬಾರಿ ರಾಜ್ಯಕ್ಕೆ ಮೋದಿ ಆಗಮಿಸಿದ್ದಾರೆ. ಈಗ ಚುನಾವಣಾ ಪ್ರಚಾರದ ಕಡೇ ದಿನದವರೆಗೂ ಮೋದಿ ಅವರನ್ನು ಕರೆಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ಪ್ಲ್ಯಾನ್ ಏನು? ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿರುವುದರಿಂದ ಪ್ರತಿ 12-14 ಕ್ಷೇತ್ರಗಳಿಗೆ ಒಂದರಂತೆ ಬೃಹತ್ ಸಮಾವೇಶ (Modi Rally) ನಡೆಸಲು ಸಿದ್ಧತೆ ನಡೆದಿದೆ.ರಾಜ್ಯವನ್ನು 6 ಭಾಗವನ್ನಾಗಿ ವಿಂಗಡಿಸಿರುವ ಬಿಜೆಪಿ ಪ್ರದೇಶವಾರು, ಕಾಂಗ್ರೆಸ್ (Congress), ಜೆಡಿಎಸ್ (JDS) ಭದ್ರಕೋಟೆಯಲ್ಲಿ ಹೆಚ್ಚು ಸಮಾವೇಶ ಆಯೋಜಿಸಲಿದೆ. ಪ್ರತಿ ಭಾಗದಲ್ಲಿ ಕನಿಷ್ಠ 3 ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟಾರ್ಗೆಟ್ ಮಾಡಿ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಸಮಾವೇಶ ನಡೆಯಲಿದೆ. ಉಳಿದಂತೆ ಹಳೇ ಮೈಸೂರು, ಕರಾವಳಿ, ಕಿತ್ತೂರು, ಮಧ್ಯ ಕರ್ನಾಟಕ, ಬೆಂಗಳೂರು ಕೇಂದ್ರೀಕರಿಸಿ…