ಹಿರೋಯಿನ್ ಚಾನ್ಸ್ ಕೊಡಿಸಿದ್ರೆ ಸಾಕಪ್ಪ ಅಂತಾ ಕಾಯ್ತಿದ್ದೀರ.. ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ ಹೇಳಿ ಯಾರಾದ್ರು ನಿಮ್ಮನ್ನ ಕಾಂಟ್ಯಾಕ್ಟ್ ಮಾಡಿದ್ದಾರಾ.. ಹಾಗಾದ್ರೆ ಒಮ್ಮೆ ಹುಷಾರಾಗಿರಿ.. ಸಿನಿಮಾದಲ್ಲಿ ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ 58ಜನಕ್ಕೆ ಮೋಸ ಮಾಡಿ ವಂಚಕನೊಬ್ಬ ಸಿಕ್ಕಾಕೊಂಡಿದ್ದಾನೆ.. ಅಬ್ಹಾ ಸ್ಟಾರ್ ಹೀರೋ ಹೀರೋಯಿನ್ ಗಳ ಜೊತೆ ಫೋಟೋ.. ಓಹೋ.. ಪೂಜಾ ಹೆಗ್ಡೆ ಜೊತೆ.. ಲವ್ಲಿ ಸ್ಟಾರ್ ಪ್ರೇಮ್ ಜೊತೆ.. ಓಹೋ ಸಿಂಗಾರ ಸಿರಿಯೇ ಸಪ್ತಿಮಿ ಗೌಡ ಜೊತೆಯೂ ಕಾಣಿಸ್ತಿದ್ದಾನೆ.. ಇದೆಲ್ಲಾ ನೋಡ್ತೊದ್ರೆ ಈ ಮನುಷ್ಯ ಸಿನಿಮಾ ಇಂಡಷ್ಟ್ರೀಲಿ ಒಳ್ಳೆ ಕಾಂಟ್ಯಾಕ್ಟ್ ಹೊಂದಿರೋ ತರ ಇದ್ದಾನೆ ಅನ್ಸುತ್ತೆ ಅಲ್ವಾ.. ಹಾಗೇನಾದ್ರು ಅಂದ್ಕೊಂಡ್ರೆ ಅದು ತಪ್ಪು.. ಇದೇ ರೀತಿ ಸಿನಿಮಾ ಇಂಡಷ್ಟ್ರಿಗೆ ಕಾಂಟ್ಯಾಕ್ಟ್ ಇದಾನೆ ಅಂತಾ ಈತನನ್ನ ನಂಬಿದ್ದ ಬರೋಬ್ಬರಿ 58ಜನರಿಗೆ ಈ ವ್ಯಕ್ತಿ ವಂಚನೆ ಮಾಡಿದ್ದು ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.. ಅಂದ್ಹಾಗೆ ಈತರ ಸ್ಟೈಲಿಷ್ ಲುಕ್ ನಲ್ಲಿ ಫೋಟೋಗೆ ಪೋಸ್ ಕೊಟ್ಟಿರೋ ಈತನ ಹೆಸ್ರು ಧವನ್ ಸೋಹಾ ಅಂತಾ.. ಇನ್ಸ್ಟಾಗ್ರಾಮ್…
Author: Prajatv Kannada
ಡ್ರೈವರ್, ಎಲೆಕ್ಟ್ರಿಷನ್ ಕೆಲಸ ಮಾಡ್ತಿದ್ದವರು ಒಂದೇ ಏಟಿಗೆ ಶ್ರೀಮಂತರಾಗೋ ಕನಸು ಕಂಡಿದ್ರು.. ಅದಕ್ಕೆ ಅಂತಾ ಕೇರಳದಿಂದಲೇ ದಾರಿಯೊಂದು ಹುಡುಕಿ ಬೆಂಗಳೂರಿಗೆ ಬಂದಿದ್ರು.. ಅಷ್ಟಕ್ಕೂ ದೊಡ್ಡ ಮೊತ್ತದ ಅಮೌಂಟ್ ಹೊಡ್ಯೋಕೆ ಅವ್ರು ಏನ್ ಮಾಡಿದ್ದು ಗೊತ್ತಾ ಹೇಳ್ತೀವಿ ನೋಡಿ.. ಹೊಡದ್ರೆ ಬೆಟ್ಟಾನೇ ಹೊಡೀಬೇಕು ಅನ್ನೋ ಹಂಗೆ ಕೋಟಿ ಕೋಟಿ ಒಟ್ಟಿಗೆ ಹಣ ಮಾಡಿ ಮಜಾ ಉಡಾಯಿಸಿದ್ರು ಅಂತಾ ಪ್ಲಾನ್ ಮಾಡಿ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸಿದ್ದ ಐದು ಜನರ ಗ್ಯಾಂಗ್ ವೊಂದನ ಕೆ.ಎಸ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.. ಸಾಜೀರ್, ಸಲೀಂ, ಚಾಲ್ಸ್, ವಿಜು, ನೌಶದ್ ಬಂಧಿತರ ಆರೋಪಿಗಳು.. ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿತರಿಂದ ಸುಮಾರು 15ಕೋಟಿ ಮೌಲ್ಯದ 49ಕೆ.ಜಿ ಅಂಬರ್ಗೀಸ್ ಅನ್ನ ವಶಪಡೆದಿದ್ದಾರೆ.. ಅಂದ್ಹಾಗೆ ಈ ಐದು ಜನ ಆರೋಪಿಗಳು ಕೇರಳದವ್ರು.. ಡ್ರೈವರ್ ಎಲೆಕ್ಟ್ರಿಷನ್ ಆಗಿ ಕೆಲಸ ಮಾಡ್ತಿದ್ದವರು ಒಂದೇ ಏಟಿಗೆ ಶ್ರೀಮಂತರಾಗೋ ಕನಸು ಕಂಡಿದ್ರು.. ಅದಕ್ಕೆ ಅಂತಾ ಇವ್ರು ಪ್ಲಾನ್ ಮಾಡಿದ್ದೇ ಅಂಬರ್ಗೀಸ್…
ಎರಡನೇ ಪಟ್ಟಿ ಬಿಡುಗಡೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಗೊಂದಲ ಶುರುವಾಗಿದೆ..ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ..ಇದು ಹಿರಿಯ ನಾಯಕರಿಗೆ ತಲೆನೋವು ತಂದಿಟ್ಟಿದೆ..ತೀರ್ವ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳನ್ನ ಕರೆದು ಸಮಾಧಾನ ಮಾಡುವ ಪ್ರಯತ್ನ ನಡೆದಿವೆ..ಕೆಲವನ್ನ ಸಮಾಧಾನ ಪಡಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ.. ಕಾಂಗ್ರೆಸ್ ೧೨೪ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದೆ..ಎರಡನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ..ಎರಡು ಬಾರಿ ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆಯನ್ನ ನಡೆಸಲಾಗಿದೆ..ಆದ್ರೂ ಕೆಲವು ಕ್ಷೇತ್ರಗಳಲ್ಲಿ ಕಠಿಣ ಸ್ಪರ್ಧಿಗಳ ನಡುವೆ ಟಿಕೆಟ್ ಫೈಟ್ ಶುರುವಾಗಿದೆ..ಇಂತ ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ನಾಯಕರಿಗೆ ತಲೆ ನೋವು ತಂದಿಟ್ಟಿದೆ..ಹಾಗಾಗಿ ಪಟ್ಟಿ ಬಿಡುಗಡೆಗೂ ಮುನ್ನವೇ ಪ್ರಬಲರನ್ನ ಕರೆದು ಸಂಧಾನ ಮಾಡುವ ಪ್ರಕ್ರಿಯೆ ನಡೆದಿದೆ.. ಯಸ್..ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ನಡುವೆ ಟಿಕೆಟ್ ಫೈಟ್ ಜೋರಾಗಿತ್ತು..ಕಿಮ್ಮನೆ ಪರ ಸಿದ್ದು ನಿಂತ್ರೆ,ಮಂಜುನಾಥ್ ಪರ ಡಿಕೆಶಿ ಬ್ಯಾಟಿಂಗ್ ನಡೆಸಿದ್ದರು..ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಇಬ್ಬರ ಪರ…
ಬೆಂಗಳೂರು: ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ನಿರಂತರ ರಾಜ್ಯ ಪ್ರವಾಸದ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಕೂಡಾ ರಾಷ್ಟ್ರೀಯ ನಾಯಕರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆತರಲು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ. ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖ್ಬು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಟಾರ್ ಕ್ಯಾಂಪೇನರ್‌ಗಳಾಗಿ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಸೋನಿಯಾ ಗಾಂಧಿ ಪ್ರಚಾರ ಡೌಟ್ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗುವುದು ಅನುಮಾನ. ಆರೋಗ್ಯ ಕಾರಣದಿಂದ ಅವರು ಪ್ರಚಾರ ಕಾರ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ…
ಬೆಂಗಳೂರು: ಇಂಡಿಯನ್ ಪ್ರಿಮೀಯರ್ ಲೀಗ್ನ (Indian Premier League) 16 ನೇ ಅವೃತ್ತಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಪಂದ್ಯದೊಂದಿಗೆ ಆರಂಭವಾಗಿದ್ದು, RCB ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಳಿನ ಪಂದ್ಯಕ್ಕೆ ಟಿಕೆಟ್ ಕೊಳ್ಳಲು ಸ್ಟೇಡಿಯಂ ಹೊರಗಡೆ ಜನ ಜಮಾಯಿಸಿದ್ದು, ಮುನ್ನಾ ದಿನವಾದ ಶನಿವಾರವೇ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ಪಂದ್ಯದ ದಿನ ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಸುಗಮ ಸಂಚಾರಕ್ಕಾಗಿ ಸಲಹೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿ ಪ್ರಕಟಣೆ ಹೊರಡಿಸಿದ್ದಾರೆ. ಏಪ್ರಿಲ್ 2ರಂದು ಸಂಜೆ 4ರಿಂದ ರಾತ್ರಿ 11 ಗಂಟೆವರೆಗೆ ಈ ಕೆಳಗೆ ಉಲ್ಲೇಖಿಸಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್ ರೋಡ್, ಮ್ಯೂಸಿಯಂ ರೋಡ್, ಕಸ್ತೂರ್ಬಾ ರಸ್ತೆ, ಅಂಬೇಡದ್ಕರ್ ವೀದಿ ರಸ್ತೆ, ಟ್ರಿನಿಟಿ ಜಂಕ್ಷನ್, ಲ್ಯಾವೆಲ್ಲೆ…
ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಮಾಜಿ ಸ್ಪರ್ಧಿ, ನಟಿ ಉರ್ಫಿ ಜಾವೇದ್ ನಿನ್ನೆ ಮಾಡಿದ ಟ್ವೀಟ್ ಒಂದು ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸದಾ ಅರ್ಧಂಬರ್ದ ಬಟ್ಟೆ ತೊಡೋ ಊರ್ಫಿ ಇನ್ನು ಮುಂದೆ ಹಾಗಾಗಲ್ಲ ಎಂದು ಕ್ಷಮೆ ಕೇಳಿ ಅಚ್ಚರಿ ಮೂಡಿಸಿದ್ದರು. ‘ನನ್ನ ಬಟ್ಟೆ ಕಾರಣದಿಂದಾಗಿ ನಿಮಗೆಲ್ಲ ನೋವಾಗಿದ್ದರೆ ಕ್ಷಮಿಸಿ. ಇನ್ಮುಂದೆ ಆ ರೀತಿಯ ಬಟ್ಟೆಗಳನ್ನು ಹಾಕುವುದಿಲ್ಲ. ನೀವು ಬದಲಾದ ಉರ್ಫಿ ನೋಡುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಬರೆದುಕೊಂಡಿದ್ದರು. ಉರ್ಪಿಯ ಬಟ್ಟೆಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆಕೆಯ ವಿರುದ್ಧ ಪೊಲೀಸ್ ಇಲಾಖೆಯಲ್ಲೂ ದೂರು ದಾಖಲಾಗಿತ್ತು. ಇದೇ ಕಾರಣಕ್ಕೆ ಉರ್ಫಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗಿತ್ತು. ಆಕೆಯ ಟ್ವೀಟ್ ಗೆ ಈಗಲಾದರೂ ಬುದ್ಧಿ ಬಂತಲ್ಲ, ಒಳ್ಳೆಯದಾಗಲಿ ಎಂದು ಹಲವರು ಕಾಲೆಳೆದಿದ್ದರು. ಆದರೆ, ಇವತ್ತು ಉರ್ಫಿ ಮತ್ತೊಂದು ಶಾಕ್ ನೀಡಿದ್ದಾರೆ. ಮತ್ತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ನಾನು ನಿಮಗೆ ಏಪ್ರಿಲ್ ಫೂಲ್ ಮಾಡಿದೆ. ಉರ್ಫಿ ಬದಲಾಗಲ್ಲ’ ಎಂದು ಟ್ವೀಟ್…
ನ್ಯಾಷುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಬಾಕ್ಸಾಫೀಸ್ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ದಾಖಲೆ ಮೊತ್ತದ ಗಳಿಕೆ ಕಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ತೆರೆಗೆ ಬಂದ ದಸರಾ ವಿಶ್ವಾದ್ಯಂತ ಬರೋಬ್ಬರಿ 38 ಕೋಟಿಗೂ ಅಧಿಕ ಹಣ ದೋಚಿದೆ. ಇದುವರೆಗೂ ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಾನಿ ದಸರಾ ಸಿನಿಮಾದಲ್ಲಿ ಮೊದಲ ಬಾರಿಗೆ ಔಟ್ ಅಂಡ್ ಔಟ್ ಮಾಸ್ ಹಾಗೂ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ನಾನಿಯ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು ಥಿಯೇಟರ್ ಗೆ ಮುಗಿ ಬಿದ್ದು ಸಿನಿಮಾ ನೋಡ್ತಿದ್ದಾರೆ. ನಾನೀಸ್ ದಸರಾ ಸಿನಿಮಾ ವಿದೇಶದಲ್ಲಿಯೂ ಕಮಾಲ್ ಮಾಡಿದೆ. ಅಮೆರಿಕದಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ನಾನಿ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಮೈಲೇಜ್ ಸಿಕ್ಕಂತಾಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದೆ. ವೀಕೆಂಡ್ ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್…
ಇತ್ತೀಚೆಗಷ್ಟೇ ಕಿರುತೆರೆ ನಟಿ ಸ್ವಾತಿ ಎಚ್ ವಿ ಗುರು ಹಿರಿಯರು ನಿಶ್ಚಯಿಸಿದ ಹುಡುಗನೊಂದಿಗೆ ಹಸೆಮಣೆ ಏರಿದ್ದರು. ಆದರೆ ಇದು ಸ್ವಾತಿಗೆ ಎರಡನೆ ಮದುವೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ನಟಿ ಸ್ವಾತಿ ಸ್ವಷ್ಟನೆ ನೀಡಿದ್ದಾರೆ. ಗಟ್ಟಿಮೇಳ, ಗೀತಾ, ಬೆಟ್ಟದ ಹೂ, ಸೇರಿದಂತೆ ಹಲವು ಸೀರಿಯಲ್ ನಟಿಸಿರುವ ನಾಗಾರ್ಜುನ ರವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸ್ವಾತಿಗೆ ಇದು ಮೊದಲ ಮದುವೆಯಲ್ಲ, 2ನೇ ಮದುವೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಸಂದರ್ಶನವೊಂದರಲ್ಲಿ 2ನೇ ಮದುವೆ ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿದ್ದು, ನನ್ನ ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ಸ್ವಾತಿ ಹೇಳಿದ್ದಾರೆ. ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು, ಹುಡುಗಿಗೆ ಇದು ಎರಡನೇ ಮದುವೆ…
ಕರಾಚಿ: ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹ ಮಾಡುತ್ತಿರುವುದನ್ನು ಖಂಡಿಸಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ನಡೆದ ಪ್ರತಿಭಟನೆಯನ್ನು ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ (ಪಿಡಿಐ) ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಪಿಡಿಐ ನಾಯಕ “ಹಾಡಹಗಲೇ 12, 13 ವರ್ಷದ ಹಿಂದೂ ಬಾಲಕಿಯರನ್ನು ಅಪಹರಣ ಮಾಡಲಾಗುತ್ತಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಅನಂತರ ವಯಸ್ಸಾದ ಪುರುಷನೊಂದಿಗೆ ಮದುವೆ ಮಾಡಲಾಗುತ್ತದೆ. ಹಿಂದೂ ಬಾಲಕಿಯರು, ಮಹಿಳೆಯರ ರಕ್ಷಣೆಗೆ ಪಾಕ್ ಸರಕಾರ ಕಠಿನ ಕಾನೂನು ಜಾರಿಗೆ ತರಬೇಕು,’ ಎಂದು ಆಗ್ರಹಿಸಿದ್ದಾರೆ. ಕೆಲವು ತಿಂಗಳಿಂದ ಈಚೆಗೆ ಸಿಂಧ್‌ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಂಡಿವೆ. ಹಿಂದೂ ಯುವತಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹವನ್ನು ತಡೆಯಲು ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಭಿತ್ತಿಪತ್ರಗಳನ್ನು ಪ್ರತಿಭಟನಕಾರರು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನೀಲಿ ಚಿತ್ರದ ನಟಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್ ತಮ್ಮ ಬಂಧನ ಖಚಿತ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಟ್ರಂಪ್ ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದು, ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದಾರೆ. ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್ ಹೇಳಿದ್ದು ತಮ್ಮ ಬಂಧನ ಖಚಿತ ಎಂಬಾರ್ಥದಲ್ಲಿ ಮಾತನಾಡಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವು ದಿನಗಳ ಮೊದಲು ವಯಸ್ಕ ಚಲನಚಿತ್ರ ತಾರೆ ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ಪಾವತಿ ಮಾಡಿದ ಕುರಿತು ಕ್ರಿಮಿನಲ್ ಆರೋಪಗಳನ್ನು ಎದುರಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಧ್ಯಾಹ್ನ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀಲಿ ಚಿತ್ರದ ನಟಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್…