ಬೆಂಗಳೂರು/ದಾವಣಗೆರೆ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ಹಾಗೂ ಪುತ್ರನಿಂದ ಟೆಂಡರ್ ಡೀಲ್ ನಡೆದಿರುವುದು ಬಯಲಾಗಿದೆ. ಅಪ್ಪನ ಟೆಂಡರ್ ಡೀಲ್, ಮಗ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದ್ದಾನೆ. ಶಾಸಕರ ಪುತ್ರ ಪ್ರಶಾಂತ್ (VPrashant Madal) ಮನೆಯಲ್ಲಿ 18 ಗಂಟೆ ಶೋಧ ನಡೆಸಿದ್ದು, ಸದ್ಯ 8.12 ಕೋಟಿ ಹಣ ಸೀಜ್ ಮಾಡಲಾಗಿದೆ. ಅಧಿಕಾರಿಗಳು ಪ್ರಶಾಂತ್ ಮನೆಯ ಮೂಲೆ ಮೂಲೆಯಲ್ಲಿಯೂ ಜಾಲಾಡಿದ್ದಾರೆ. ಲೋಕಾಯುಕ್ತ (Lokayukta) ಕಚೇರಿಗೆ ಸೀಜ್ ಮಾಡಿ 8 ಗುಟ್ಕಾ ಬ್ಯಾಗ್‍ಗಳಲ್ಲಿ 8.12 ಕೋಟಿ ಹಣ ಹಾಗೂ ಚಿನ್ನ ಶಿಫ್ಟ್ ಮಾಡಲಾಗಿದೆ. ಇತ್ತ ಈಗಾಗಲೇ ಪ್ರಕರಣ ಸಂಬಂಧ 14 ದಿನ ನ್ಯಾಯಾಂಗ ಬಂಧನದಲ್ಲಿ ಪ್ರಶಾಂತ್ ಮಾಡಾಳ್, ಟೆಂಡರ್ ಡೀಲ್ ಬಗ್ಗೆ ಲೋಕಾಯುಕ್ತ ಅಧಿಕಾರಿಳಿಂದ ವಿಚಾರಣೆ ನಡೆಯುತ್ತಿದೆ. ವಿರೂಪಾಕ್ಷಪ್ಪ ಅವರ ದಾವಣಗೆರೆಯ ಚನ್ನಗಿರಿ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 4 ವಾಹನಗಳಲ್ಲಿ ಬಂದ 20ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನು ಬಹುಕೋಟಿ ಅಕ್ರಮ ಹಣ ಪತ್ತೆ ಬೆನ್ನಲ್ಲೇ ಮಾಡಾಳ್ ಪರಾರಿಯಾಗಿದ್ದಾರೆ.
Author: Prajatv Kannada
ಬೆಂಗಳೂರಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮತ್ತೊಂದೆಡೆ ಪುತ್ರನ ಬಂಧನವಾಗಿದ್ದರಿಂದ ಆತಂಕಗೊಂಡಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗೌಪ್ಯ ಸ್ಥಳದಲ್ಲಿ ಇದ್ದುಕೊಂಡೇ ಮುಂದಿನ ಕಾನೂನು ಹೋರಾಟ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ಮಾಡಾಳ್ ಬಂಧನ ಸಾಧ್ಯತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಸಾಧ್ಯತೆ ಇದೆ. ತಂದೆ ಮಾಡಾಳ್ ಪರವಾಗಿ ಪ್ರಶಾಂತ್ ಹಣ ಸ್ವೀಕರಿಸುತ್ತಿದ್ದಾರೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಶಾಸಕ ಮಾಡಾಳ್ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಬಂಧನ ಮಾಡಲು ಕಾರಣ ಏನು ಪ್ರಶಾಂತ್ ಹಾಗೂ ವಿರುಪಾಕ್ಷಪ್ಪ ತಂದೆ ಮಗ 2 ಟೆಂಡರ್ ಕರೆದಿದ್ದು ಕೆ ಎಸ್ ಡಿ ಎಲ್ ಕಚ್ಚಾ ವಸ್ತು ಸರಬರಾಜು ಸಂಬಂಧ 3 ಆದರೆ ಪ್ರಶಾಂತ್ BWSSB ಅಧಿಕಾರಿ 4 ಆದರೆ BWSSB ಹಾಗೂKSDL ಗೂ ಯಾವುದೇ ಸಂಬಂಧ ಇಲ್ಲ 5 ಹೀಗಾಗಿ ತಂದೆಯ ಪರವಾಗಿಯೇ ಹಣ ಸ್ವೀಕರಿಸುತ್ತಿರುವುದು ಪ್ರಾಥಮಿಕವಾಗಿ ಧೃಡ 6 ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮಾಡಾಳ್ ವಿರೂಪಾಕ್ಷಪ್ಪ ಬಂಧನ…
ಮುಂಬೈ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿ ವೀಕ್ಷಿಸುವವರಿಗೆ ಬಿಸಿಸಿಐ (BCCI) ಬಂಪರ್ ಆಫರ್ ಕೊಟ್ಟಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಸ್ಟೇಡಿಯಂಗಳಲ್ಲಿ ಹೆಚ್ಚಿನ ಜನ ಸೇರುವಂತೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ. ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು (Womens) ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಚೊಚ್ಚಲ WPL ಆವೃತ್ತಿಯಲ್ಲಿ ಪ್ಲೆ ಆಫ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅದಾನಿ ನೇತೃತ್ವದ ಗುಜರಾತ್ ಜೈಂಟ್ಸ್ (Gujarat Giants) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಸೆಣಸಲಿವೆ. ಈ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ…
ಇಂದೋರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಚೆಂಡಿನೊಂದಿಗೆ ಶತಕ ಪೂರೈಸಿದ್ದಾರೆ. ಉಮೇಶ್ ಕೇವಲ 4652 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು ಭಾರತದ ನೆಲದಲ್ಲಿ ದಾಖಲೆಯಾಗಿದೆ. ಉಮೇಶ್ ಯಾದವ್ ಭಾರತದ ನೆಲದಲ್ಲಿ 100ನೇ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ 5ನೇ ವೇಗಿ ಎನಿಸಿಕೊಂಡಿದ್ದಾರೆ. ಹಾಗೆಯೇ ಒಟ್ಟಾರೆಯಾಗಿ ಈ ಸಾಧನೆ ಮಾಡಿದ 13 ನೇ ಬೌಲರ್ ಕೂಡ ಆಗಿದ್ದಾರೆ. ಇನ್ನೊಂದು ಸಂಗತಿಯೆಂದರೆ ಆ 13 ಬೌಲರ್ಗಳಲ್ಲಿ ಅತಿವೇಗವಾಗಿ 100 ಟೆಸ್ಟ್ ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಉಮೇಶ್ ಯಾದವ್. ಉಮೇಶ್ ಯಾದವ್ ಅವರು ಮಿಚೆಲ್ ಸ್ಟಾರ್ಕ್ ಅವರ ವಿಕೆಟ್ ಕಿತ್ತು ತಮ್ಮ 100ನೇ ಟೆಸ್ಟ್ ವಿಕೆಟ್ ಪೂರೈಸಿದರು. ಬಳಿಕ ಮತ್ತೇರಡು ವಿಕೆಟ್ ಸೇರಿದಂತೆ ಒಟ್ಟು 3 ವಿಕೆಟ್ ಪಡೆಯವುದರೊಂದಿಗೆ ಅವರ ವಿಕೆಟ್ಗಳ ಸಂಖ್ಯೆಯನ್ನು 101 ಕ್ಕೆ ಏರಿಸಿಕೊಂಡರು. ಭಾರತದ ನೆಲದಲ್ಲಿ 100 ವಿಕೆಟ್ ಪಡೆದ 5 ವೇಗದ ಬೌಲರ್ಗಳ ಪೈಕಿ ಉಮೇಶ್ ಯಾದವ್ ಒಬ್ಬರೇ 25…
ಇಂದೋರ್: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇಂದು ಮೂರು ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಪೀಟರ್ ಹ್ಯಾಂಡ್ಸಕೊಂಬ್ (Peter Handscomb), ಅಲೆಕ್ಸ್ ಕಾರೈ (Alex Carey) ಮತ್ತು ನಾಥನ್ ಲಿಯಾನ್ (Nathan Lyon) ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಗೈದಿದ್ದಾರೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಇಂದಿನ ಮೂರು ವಿಕೆಟ್‍ಗಳು ಸೇರಿ 689 ವಿಕೆಟ್ ಅಶ್ವಿನ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ (Anil Kumble) 953 ವಿಕೆಟ್ ಹಾಗೂ ಹರ್ಬಜನ್ ಸಿಂಗ್ 7ಂ7 ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ಈ ಮೊದಲು ಕಪಿಲ್‍ದೇವ್ 687 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ಇಂದು 88 ರನ್ ಮುನ್ನಡೆ ಪಡೆದು 197 ರನ್‍ಗಳಿಗೆ ಆಲೌಟ್ ಆಯ್ತು.
ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ ಎನ್ನುವ ವಿಚಾರ ಆಗಾಗ್ಗೆ ಸುದ್ದಿ ಆಗುತ್ತಲೇ ಇತ್ತು. ಚಂದ್ರು ಸಿನಿಮಾ ಎಂದರೆ ಅಲ್ಲಿ ಶಿವಣ್ಣ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರವಾಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲೂ ಶಿವರಾಜಕುಮಾರ್ ಇರುವುದು ಪಕ್ಕಾ ಎಂದು ಹೇಳಲಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇಂದು ಚಂದ್ರು ಹಂಚಿಕೊಂಡಿರುವ ಪೋಸ್ಟರ್ ನಲ್ಲಿ ಆ ಸುದ್ದಿ ನಿಜವಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ‘ಕಬ್ಜ’ ಸಿನಿಮಾ ಟೀಮ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮಾರ್ಚ್ 4ರಂದು ಚಿತ್ರದ ಟ್ರೈಲರ್ ರಿಲೀಸ್ ಮಾಡುತ್ತಿದ್ದು, ಟ್ರೈಲರ್ ನೋಡುವುದಕ್ಕಾಗಿಯೇ ಹಲವು ತಿಂಗಳುಗಳಿಂದ ಅಭಿಮಾನಿಗಳು ಕಾದಿದ್ದಾರೆ. ಅಭಿಮಾನಿಗಳನ್ನು ಇಷ್ಟು ದಿನ ಕಾಯಿಸಿದ್ದ ಚಂದ್ರು ಇದೀಗ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ. ಮೊನ್ನೆ, ಮೊನ್ನೆಯಷ್ಟೇ ಕಜ್ಬ ಸಿನಿಮಾದ ಹಾಡು ರಿಲೀಸ್ ಆಗಿದ್ದು ಕೋಟ್ಯಾಂತರ ಕೇಳುಗರನ್ನು ತಲುಪಿದೆ. ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ…
ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಗೆ ದಿನಗಣನೆ ಶುರುವಾಗಿದೆ. ಹಲವಾರು ಕಾರಣಗಳಿಂದಾಗಿ ಈ ಬಾರಿ ಆಸ್ಕರ್ ವೇದಿಕೆ ಕಲರ್ ಫುಲ್ ಆಗಿರುತ್ತದೆ. ಭಾರತದ ಹೆಸರಾಂತ ನಟರಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ‘ನಾಟು ನಾಟು’ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರಲಿದ್ದಾರೆ. ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ. 2022ನೇ ಸಾಲಿನ ಕೇನ್ಸ್ ನಲ್ಲಿ ತೀರ್ಪುಗಾರರಾಗಿ ದೀಪಿಕಾ, ಆಸ್ಕರ್ ನಲ್ಲಿ ನಿರೂಪಕಿಯಾಗಿ ಮಿಂಚಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದೀಪಿಕಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ದಿನಕ್ಕಾಗಿ ಕಾಯುತ್ತಿರುವುದಾಗಿಯೂ ಅವರು ಹೇಳಿದ್ದಾರೆ. ಇದೇ ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಹತ್ತು ಜನ ನಿರೂಪಕರು ಕೆಲಸ ಮಾಡಲಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ದೀಪಿಕಾ ಜೊತೆ ಮೆಲಿಸ್ಸಾ…
ಡಾ. ರಾಜ್ ಕುಮಾರ್ ಕುಟುಂಬದ ಕುಡಿ ಯುವರಾಜಕುಮಾರ್ ಹೊಸ ಸಿನಿಮಾದ ಮಹತ್ವದ ವಿಷಯಗಳು ಇಂದು ಅನಾವರಣಗೊಳ್ಳಲಿವೆ. ಕಳೆದ ಒಂದು ವರ್ಷದಿಂದ ಯುವನ ಸಿನಿಮಾದ ಕುರಿತು ನಾನಾ ಸುದ್ದಿಗಳು ಹರಿದಾಡಿತ್ತು. ಇಂದು ಸಂಜೆ ಅದಕ್ಕೆಲ್ಲಾ ತೆರೆ ಬೀಳಲಿದೆ. ಕಳೆದ ಒಂದು ವರ್ಷದಿಂದ ಸಿನಿಮಾದ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಇಂದು ಸಂಜೆ 6.55ಕ್ಕೆ ಹತ್ತು ಇವತ್ತು ಹಲವು ವಿಚಾರಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ. ದೊಡ್ಮನೆ ಕುಟುಂಬದ ಕುಡಿ ಯುವರಾಜಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು ಸಂಜೆ 5.45 ಗಂಟೆಗೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆಯಲಿದೆ. ಆದರೆ, ಟೀಸರ್ ರಿಲೀಸ್ ಮಾತ್ರ ಅದ್ಧೂರಿಯಾಗಿ ಮಾಡುವುದಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ಸದಸ್ಯರು ತಿಳಿಸಿದ್ದಾರೆ. ಹೊಸ ಸಿನಿಮಾದ ಮುಹೂರ್ತದ ನಂತರ ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದು, ಬೆಂಗಳೂರಿನ ಜೆ.ಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಸಂಜೆ 6.55ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಜೊತೆಗೆ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಲಿದ್ದು, ಕುರುಬರಹಳ್ಳಿಯ ಡಾ.ರಾಜ್ ಪ್ರತಿಮೆಯ…
ತೆಲುಗಿನ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಪ್ರೀತಿ, ಪ್ರೇಮದ ಕುರಿತು ಯಾವ ವಿಷಯವೂ ಇದೀಗ ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣಕ್ಕೆ ನರೇಶ್ ಎರಡನೇ ಪತ್ನಿ ರಮ್ಯಾ ಹಾಗೂ ನರೇಶ್ ಗೆ ಸಾಕಷ್ಟು ಗಲಾಟೆಗಳು ನಡೆದಿದೆ. ಇದೀಗ ಈ ಸಂಬಂಧದ ಮೇಲೆಯೇ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಎಂ.ಆರ್.ರಾಜು. ಈ ಸಿನಿಮಾಗೆ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈಗಾಗಲೇ ಸದ್ದಿಲ್ಲದೇ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಜು. ಬಹುತೇಕ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಹೊಸ ವರ್ಷದ ದಿನದಂದು ನರೇಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಗೆ ಮುತ್ತಿಡುವ ಮೂಲಕ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆ ವಿಡಿಯೋ ಇದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ. ಅದಕ್ಕೂ ಮೊದಲಿನ ಮದುವೆ ಹಾಗೂ ಪವಿತ್ರಾ ಲೋಕೇಶ್…
ನಟ, ನಟಿಯರು ಸಾಮಾಜಿಕ ಕೆಲಸಗಳು ಮೂಲಕ ಆಗಾಗ ಮೆಚ್ಚುಗೆ ಘಳಿಸುತ್ತಿರುತ್ತಾರೆ. ಇದೀಗ ನಟಿ ಕಾರುಣ್ಯ ರಾಮ್ ಜನ ಮೆಚ್ಚುವಂತಹ ಕೆಲಸ ಮಾಡಿ, ಸಾರ್ವಜನಿಕರಿಂದ ಶಹಭಾಷ್ ಎನಿಸಿಕೊಂಡಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರ ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಮೂಲಕ ಕಾರುಣ್ಯ ರಾಮ್ ಪ್ರಶಂಸೆಗೆ ಕಾರಣರಾಗಿದ್ದಾರೆ. ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿಗೆ ಇಳಿದ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಟಿ ಕಾರುಣ್ಯ ರಾಮ್. ‘ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಹೊರಟೆ. ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದರು. ಅದರಲ್ಲಿ ಒಬ್ಬರು ಮೃತರಾದರು. ಅಲ್ಲದೇ, ನನ್ನ ಕಣ್ಣಾರೆ ಹುಡುಗಿಯೊಬ್ಬಳು ರಸ್ತೆ ಗುಂಡಿಯಲ್ಲಿ ಬಿದ್ದದ್ದು ನೋಡಿದೆ. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ…