ಹೈದರಾಬಾದ್: ಹಿಂದೆ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡುತ್ತಿದ್ದರು ಎಂಬುದನ್ನು ಪುರಾಣಗಳಲ್ಲಿ ಹಾಗೂ ಇತಿಹಾಸಗಳಲ್ಲಿ ಕೇಳಿದ್ದೇವೆ. ಆದರೆ ಈ ರೀತಿಯ ಆಚರಣೆ ತೆಲಂಗಾಣದಲ್ಲಿ (Telangana) ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ (Affair) ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆ (Agnipariksha) ಮಾಡಿಕೊಂಡಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ತೆಲಂಗಾಣದ ಬಂಜಾರಿಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂಬುದಾಗಿ ಆರೋಪಿಸಲಾಗಿತ್ತು. ವ್ಯಕ್ತಿಯ ಸಹೋದರ ಪ್ರಕರಣವನ್ನು ಪಂಚಾಯಿತಿಗೆ ಕೊಂಡೊಯ್ದು, ಅಲ್ಲಿ ಆತನ ಬಗ್ಗೆ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಪಂಚಾಯಿತಿ ಮುಖಂಡರು ಆರೋಪಿ ವ್ಯಕ್ತಿ ಅಗ್ನಿ ಪ್ರವೇಶ ಮಾಡಬೇಕು ಎಂದು ಆದೇಶಿಸಿದ್ದರು. ಇದರ ಪ್ರಕಾರ ವ್ಯಕ್ತಿ ಕೆಂಡದ ಮಧ್ಯೆ ಇಡಲಾಗಿದ್ದ ಬಿಸಿ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಬೇಕಿತ್ತು. ಮುಖಂಡರ ಆದೇಶದಂತೆ ವ್ಯಕ್ತಿ ಕೆಂಡದಿಂದ ಕೆಂಪಾಗಿದ್ದ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಿ ಆಚೆ ಎಸೆದಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದಾಗಿ ಸಾಬೀತು ಪಡಿಸಿದ್ದಾನೆ.…
Author: Prajatv Kannada
ಆಮಲಕೀ ಏಕಾದಶಿ ಸೂರ್ಯೋದಯ: 06.35 AM, ಸೂರ್ಯಾಸ್ತ : 06.29 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ಏಕಾದಶಿ 09:11 AM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ಪುನರ್ವಸು 03:43 PM ತನಕ ನಂತರ ಪುಷ್ಯ ಯೋಗ: ಇವತ್ತು ಸೌಭಾಗ್ಯ 06:45 PM ತನಕ ನಂತರ ಶೋಭಾನ ಕರಣ: ಇವತ್ತು ವಿಷ್ಟಿ 09:11 AM ತನಕ ನಂತರ ಬವ 10:27 PM ತನಕ ನಂತರ ಬಾಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 01.01 PM to 02.49 PM ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob.…
ಹಾಸನ: ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡವಳು. ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ (Marriage Makeup) ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ. ಹೌದು, ಹೊಸ ಮಾದರಿಯ ಮೇಕಪ್‍ಗೆ ವಧುವಿನ (Bride) ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ಘಟನೆ ಹಾಸನದ (Hassan) ಅರಸೀಕೆರೆಯಲ್ಲಿ (Arsikere) ನಡೆದಿದೆ. ಮದುವೆಗಾಗಿ ನಗರದ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಅಂಡ್ ಸ್ಪಾನಲ್ಲಿ ಮೇಕಪ್ ಮಾಡಿಸಿಕೊಂಡಿದ್ದ ಯುವತಿಗೆ ಈ ದುರ್ಗತಿ ಎದುರಾಗಿದೆ. ಬ್ಯೂಟಿಪಾರ್ಲರ್‌ನ (Beauty Parlour) ಮಾಲೀಕರಾದ ಗಂಗಾ, ಹೊಸ ಬಗೆಯ ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ನೀಡಿದ್ದಾರೆ. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ. ವಿರೂಪಗೊಂಡ ಯುವತಿಯ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬ ನಿರಾಕರಿಸಿದೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅವಘಡದ ಕುರಿತು ಅರಸೀಕೆರೆ ನಗರ ಪೊಲೀಸರು ಬ್ಯೂಟಿಪಾರ್ಲರ್ ಮಾಲಕಿಯನ್ನು…
ಶಿವಮೊಗ್ಗ: ತೀರ್ಥಹಳ್ಳಿ (Thirthahalli) ತಾಲೂಕಿನ ಬೇಗುವಳ್ಳಿ ಸಮೀಪ ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡಿದ್ದ ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾನವೀಯತೆ ಮೆರೆದಿದ್ದಾರೆ. ರಸ್ತೆಯಲ್ಲಿ ಹಸು ಅಡ್ಡ ಬಂದ ಪರಿಣಾಮ, ಹಸುವಿಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸವಾರ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡಿದ್ದ ಯುವಕನನ್ನು ಸಿಂಗನಬಿದರೆ ಹಳಗ ಗ್ರಾಮದ ನಿವಾಸಿ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಗಾಯಾಳು ಯುವಕ ನರಳುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಚಿವ, ಗಾಯಾಳು ಯುವಕನನ್ನು ಗಮನಿಸಿ ತಮ್ಮ ವಾಹನ ನಿಲ್ಲಿಸಿದ್ದಾರೆ. ಗಾಯಾಳು ಯುವಕನನ್ನು ಉಪಚರಿಸಿ, ಧೈರ್ಯ ಹೇಳಿದ್ದಾರೆ. ಅಲ್ಲದೇ ತಮ್ಮ ಬೆಂಗಾವಲು ವಾಹನದಲ್ಲಿ (escort vehicle) ಗಾಯಾಳು ಯುವಕನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.
ಕಳಸ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗೋಡು ಪ್ರದೇಶದ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿ ಬೇಸತ್ತು ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 40ಕ್ಕೂ ಹೆಚ್ಚು ಮನೆಗಳು ಇರುವ ಕಲ್ಲುಗೋಡು ಪ್ರದೇಶದ ನಿವಾಸಿಗಳು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಮಳೆಗಾಲದಲ್ಲಿ ಕೆಸರುಮಯವಾಗುವ ಕಳಸ-ಕಲ್ಲುಗೋಡು ರಸ್ತೆ ಅಭಿವೃದ್ಧಿ ಮಾಡದೆ ಇರುವುದು, ಕಲ್ಲುಗೋಡು ತೂಗುಸೇತುವೆಯನ್ನು ಕಳೆದ 15 ವರ್ಷದಲ್ಲಿನಿರ್ವಹಣೆ ಮಾಡದೆ ಇರುವುದು ಮುಂತಾದ ವಿಚಾರಗಳು ಗ್ರಾಮಸ್ಥರನ್ನು ಆಕ್ರೋಶಭರಿತರನ್ನಾಗಿಸಿವೆ. ಕಲ್ಲುಗೋಡು ರಸ್ತೆಯ ದುಸ್ಥಿತಿಯಿಂದ ಆಟೊಗಳು ಕೂಡ ಗ್ರಾಮಕ್ಕೆ ಬರುತ್ತಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ಬಹಳ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ. ಗ್ರಾಮದಲ್ಲಿಕುಡಿಯುವ ನೀರಿನ ಪೂರೈಕೆ ಕೂಡ ಇಲ್ಲದೆ ಜನರು ಭದ್ರಾ ನದಿಗೆ ಹೋಗಿ ನೀರು ತರಬೇಕಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗುವವರಿಗೆ ಮತ್ತು ಮಹಿಳೆಯರಿಗೆ ಭಾರಿ ಸಂಕಟ ಎದುರಾಗಿದೆ ಎಂದು ಹಳ್ಳಿಗರು ಹೇಳುತ್ತಾರೆ. 15 ವರ್ಷದ ಹಿಂದೆ ನಿರ್ಮಾಣ ಆದ ತೂಗು ಸೇತುವೆಗೆ ಈವರೆಗೂ ಬಣ್ಣ ಬಳಿದಿಲ್ಲ. ಇದರಿಂದ ಸೇತುವೆ…
ಶಿರಸಿ: ಛತ್ರಪತಿ ಶಿವಾಜಿ ಮಹಾರಾಜರ ವಿಚಾರ ಇಂದಿಗೂ ಪ್ರಸ್ತುತವಿದೆ. ಭಾರತದ ಗಡಿ ಸುತ್ತಲೂ ಇಸ್ಲಾಮೀಕರಣದ ವಾತಾವರಣ ಹೆಚ್ಚುತ್ತಿದೆ. ಶಿವಾಜಿ ಮಹಾರಾಜರ ಮಾದರಿಯಲ್ಲಿ ಮತಾಂಧರನ್ನು ಎದುರಿಸಬೇಕಿದೆ. ಇಂದು ಮನೆ ಮನೆಯಲ್ಲಿ ಜೀಜಾಮಾತೆಯ ಅವಶ್ಯಕತೆಯಿದೆ. ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ, ಸಂಸ್ಕೃತಿಗಾಗಿ ಮನೆಯ ಮಕ್ಕಳನ್ನು ಹೋರಾಡಲು ಸಜ್ಜುಗೊಳಿಸುವ ಜೀಜಾಮಾತೆಯರು ಪ್ರತಿ ಮನೆಯಿಂದ ಬರಬೇಕಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು ನಗರದಲ್ಲಿಅಖಿಲ ಭಾರತ ಹಿಂದೂ ಮಹಾಸಭಾದಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿಅವರು ಮಾತನಾಡಿದರು. ಕಾಂಗ್ರೆಸ್‌ನಿಂದ ದೇಶ ಹಾಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಟ್ಟ ಸಂಸ್ಕಾರ ಎಂದಿಗೂ ನನ್ನನ್ನು ಹಿಂದೆ ಸರಿಯುವಂತೆ ಮಾಡುವುದಿಲ್ಲ. ಹಿಂದೂ ಸಮಾಜಕ್ಕಾಗಿ ನಿಸ್ವಾರ್ಥದಿಂದ ಬದುಕುತ್ತಿದ್ದೇನೆ. ದೇಶ ಆಳಿದ ಕಾಂಗ್ರೆಸ್ ಅಪ್ಜಲ್ ಖಾನ್, ಟಿಪ್ಪು ಸುಲ್ತಾನನ ಸಂತತಿಯಾಗಿದೆ. ಕಾಂಗ್ರೆಸ್ ದೇಶವನ್ನು ಬರ್ಬಾದ್ ಮಾಡಿದೆ. ಕಾಶ್ಮೀರದಲ್ಲಿಈಗಲೂ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂಗಳನ್ನು ಸಂರಕ್ಷಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದರು. ಹಿಂದೂಗಳ ಹೆಸರಿನಲ್ಲಿ ಗೆದ್ದು, ಗೋಮಾತೆಯ ಹತ್ಯೆ ಖಂಡಿಸದ, ಭ್ರಷ್ಟಾಚಾರ ವಿರೋಧಿಸದ ಜನಪ್ರತಿನಿಧಿಗಳನ್ನು ಐದಾರು ಬಾರಿ ಶಾಸಕ-ಸಂಸದರನ್ನಾಗಿ ಆರಿಸುತ್ತಿರುವುದು ದೌರ್ಭಾಗ್ಯದ ಸಂಗತಿ…
ಹಾಸನ: ಮಾಜಿ ಶಾಸಕ ಎ.ಮಂಜು (A.Manju) ಜೊತೆ ಅಡ್ಜಸ್ಟ್ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಶಾಸಕ ಎ.ಟಿ ರಾಮಸ್ವಾಮಿ (A.T.Ramaswamy) ಸಾಬೀತು ಪಡೆಸಿದರೆ ನಾನು ಅವರು ಹೇಳುವ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D.Revanna) ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಟಿ ರಾಮಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮಗನ ಮೇಲೆ ಕೇಸ್ ದಾಖಲಿಸಿದವನ ಜೊತೆ ರಾಜಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಅವರು ಸೀನಿಯರ್ ಅಡ್ವಕೇಟ್ ಇಟ್ಟುಕೊಂಡರು ಸಹ ಹೈಕೋರ್ಟ್‍ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದರ ಪ್ರತಿಯನ್ನು ರಾಮಸ್ವಾಮಿ ಓದಿಕೊಳ್ಳಲಿ. ನಮ್ಮ ಸಂಪೂರ್ಣ ಆಸ್ತಿಯನ್ನು ಐಟಿಗೆ ನೀಡಿದ್ದೇನೆ ಇಡಿ ಮೂಲಕ ತನಿಖೆ ನಡೆಸಿಕೊಳ್ಳಲಿ ಎಂದು ಗುಡುಗಿದ್ದಾರೆ. ರಾಮಸ್ವಾಮಿಯವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದರು ಎಂದು ಹೇಳಲಿ. ಹಾಸನ ಮತ್ತು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಅವರಿಗೆ ಸೀಟ್…
ಸಿಎಂ ತವರು ಕ್ಷೇತ್ರದಲ್ಲಿ ಎಲ್ಲಿ ನೋಡಿದರು ಕಟ್ಟು ಮಸ್ತಾದ ಪೈಲ್ವಾನ್ ಗಳದ್ದೆ ಮಾತು ಮಾತು.ಬೇರೆ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದ ನೂರಾರು ಜಗಜಟ್ಟಿಗಳ ಕಾದಾಟ ಜೋರಾಗಿತ್ತು.ನೀನಾ ನಾನಾ ಎಂದು ಹೊಡೆದಾಡುತ್ತಿದ್ದ, ಕುಸ್ತಿ ಕಲಿಗಳ ಕದನ ಕಂಡು ಸಾವಿರಾರು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಏ,,,,ಬಾರೊ ನೀನಾ ನಾನಾ ಒಂದು ಕೈ ನೋಡೆ ಬಿಡ್ತೇನಿ. ಹಾ ಅದು ಹೇಗೆ ಗೇಲ್ತೀಯಾ ಅಂತಾ ನಾನು ನೋಡ್ತೇ ಬಿಡ್ತೇನಿ ಬಾ ಎನ್ನುತ್ತಾ ಹೀಗೆ ಕೈ ಕೈ ಮಿಲಾಯಿಸಿರುವವರು ಅಂತರಾಷ್ಟ್ರೀಯ ಪರಿಣತ ಕುಸ್ತಿ ಕಲಿಗಳು.ಹೌದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದ ಕುಸ್ತಿಯ ಕಲಿಗಳು ಪಂದ್ಯಾಟದ ದೃಶ್ಯಗಳಿವು. ಐದು ದಿನಗಳ ಕಾಲ ನಡೆಯುವ ರಾಜ್ಯ ಹಾಗೂ ಅಂತರಾಷ್ಟ್ರ ಮಟ್ಟದ ಕುಸ್ತಿ ಪಂದ್ಯವನ್ನ ಇದೆ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಈ ಕುಸ್ತಿ ಪಂದ್ಯಕ್ಕೆ ಸಾಂಕೇತಿಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು.ಅಖಾಡಕ್ಕೆ ಹರಿಯಾಣ,ಮಧ್ಯಪ್ರದೇಶ,ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು.1 ಕೋಟಿ 38 ಲಕ್ಷ ಮೊತ್ತದ…
ಬೀದರ್: ಇಂದು ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಕಲ್ಯಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿದ್ದು, ಚುನಾವಣಾ ಚಾಣಕ್ಯನಿಗೆ ನೀಡಲು ವಿಶೇಷವಾದ ಬೆಳ್ಳಿಯ ಗದೆ ಹಾಗೂ ಕಿರೀಟ ಸಿದ್ಧವಾಗಿದೆ. ಇಂದು ಬೀದರ್‌ಗೆ (Bidar) ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ 5 ಕೆಜಿಯ ಆಕರ್ಷಕ ಬೆಳ್ಳಿಯ ಗದೆ ಮತ್ತ ಬೆಳ್ಳಿಯ ಕಿರೀಟಾವನ್ನು ಶಾಗೆ ನೀಡಲು ಬಸವ ಕಲ್ಯಾಣ ಶಾಸಕ ಶರಣು ಸಲಗರ್ ಸಿದ್ಧ ಮಾಡಿಸಿದ್ದಾರೆ. ಇಂದು ವಿಜಯ ಸಂಕಲ್ಪ ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯಾದ ಬೆಳ್ಳಿ ಕಿರೀಟ ತೊಡಿಸಿ ಬೆಳ್ಳಿ ಗದೆ ನೀಡಲಿದ್ದಾರೆ ಇಂದಿನಿಂದ ಬಸವ ಕಲ್ಯಾಣದಿಂದ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ ಕಲ್ಯಾಣದಿಂದ ಲಿಂಗಾಯತ ಜಪ ಮಾಡಲಿದ್ದಾರೆ.
ಬೆಂಗಳೂರು: ರಾಜಧಾನಿ ವಾಹನ ದಟ್ಟಣೆಯಲ್ಲಿ ನರಳುತ್ತಿರುವ ವೈಟ್‌ಫೀಲ್ಡ್ ಭಾಗದ ಐಟಿ ಉದ್ಯೋಗಿಗಳಿಗೆಗೊಂದು ಸಂತೋಷದ ಸುದ್ದಿ. ಮಾರ್ಚ್ ಎರಡನೇ ವಾರದಲ್ಲಿ ಕೆ.ಆರ್.ಪುರಂ – ವೈಟ್‌ಫೀಲ್ಡ್ ಮೆಟ್ರೋ ರೈಲು ಮಾರ್ಗ ಆರಂಭವಾಗಲಿದೆ. ಈಗಾಗಲೇ ಈ ನೂತನ ಮಾರ್ಗದ ಕಾಮಗಾರಿ ಶೇ.99 ರಷ್ಟು ಪೂರ್ಣಗೊಂಡಿದೆ. ಮಾ.11 ರಂದು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಕೆ.ಆರ್ ಪುರಂ ವೈಟ್‌ಫೀಲ್ಡ್ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತಗ್ಗವು ಸಾಧ್ಯತೆಗಳಿವೆ. ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಬಹುನಿರೀಕ್ಷಿತ ಕೆ.ಆರ್.ಪುರ– ವೈಟ್‌ಫೀಲ್ಡ್ ಮೆಟ್ರೋ ರೈಲು ಮಾರ್ಗಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ (ಸಿಆರ್‌ಎಸ್) ಅನುಮತಿ ದೊರೆತಿದೆ. ಕಳೆದ ವಾರ ಸಿಆರ್‌ಎಸ್ ತಂಡ ಮಾರ್ಗದಲ್ಲಿ ಸಂಚಾರ ನಡೆಸಿ ಸುರಕ್ಷತೆ ಪರಿಶೀಲನೆ ನಡೆಸಿತ್ತು. ಬಳಿಕ ಮಾರ್ಗವು ಮೆಟ್ರೋ ಓಡಾಟಕ್ಕೆ ಸುರಕ್ಷಿತವಾಗಿದೆ ಫೆ.28ರಂದು ಪ್ರಮಾಣ ಪತ್ರ ನೀಡಿದೆ. ಲೋಕಾರ್ಪಣೆಗೆ ಸಿದ್ಧತೆ ವಾಣಿಜ್ಯ ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ಬಗ್ಗೆ ಹಸಿರು ನಿಶಾನೆ ದೊರೆತ…