ತಾನು ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಕಾನೂನು ಸುವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ದೇಶಾದ್ಯಂತ ಅಪರಾಧ ಪ್ರಕರಣಗಳ ಪ್ರಮಾಣ ಶೇಕಡಾ 30ರಷ್ಟು ಇಳಿಕೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ಒಳಾಡಳಿತ ವ್ಯವಹಾರಗಳ ಸಚಿವಾಲಯ ಹೇಳಿದೆ. ಕಾಬೂಲ್ನಲ್ಲಿ ತಮ್ಮ ಸರ್ಕಾರದ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಮಂಡಿಸಿದ ಒಳಾಡಳಿತ ಉಪ ಸಚಿವ ಮೊಹಮ್ಮದ್ ನಬಿ ಒಮಾರಿ, ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ದೇಶದ ನಾಗರಿಕರು ಸುರಕ್ಷಿತವಾಗಿ ವಾಸಿಸಲು ಮತ್ತು ಪ್ರಾಂತ್ಯಗಳ ನಡುವೆ ಮುಕ್ತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್ ಜಾದಾ ಅವರ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳಿಂದ ಮಾರ್ಗದರ್ಶನ ಪಡೆದ ಕಾರ್ಯತಂತ್ರದ ಯೋಜನೆಯ ಪ್ರಕಾರ ಸಚಿವಾಲಯದ ಚಟುವಟಿಕೆಗಳನ್ನು ಈಗ ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂದು ಒಮಾರಿ ಹೇಳಿದರು. “ರಾಷ್ಟ್ರವ್ಯಾಪಿ ಅಪರಾಧ ಪ್ರಮಾಣವು ಶೇಕಡಾ 30 ರಷ್ಟು ಕಡಿಮೆಯಾಗಿರುವುದು ರಾಷ್ಟ್ರೀಯ ಪಡೆಗಳ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ರಾಷ್ಟ್ರೀಯ ಪೊಲೀಸ್ ತರಬೇತಿ…
Author: Prajatv Kannada
ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಮೃತ ಯುವ ವೈದ್ಯೆಗೆ ನ್ಯಾಯ ಸಿಗಬೇಕು ಎಂದು ಪ್ರತಿಯೊಬ್ಬರು ಆಗ್ರಹಿಸಿದ್ದಾರೆ. ಈ ಹತ್ಯೆ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಹಲವು ವೈದ್ಯರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಹೂಸ್ಟನ್, ಟೆಕ್ಸಾಸ್ ವೈದ್ಯಕೀಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಪ್ರಕರಣ ಖಂಡಿಸಿ ಹತ್ಯೆಗೀಡಾದ ಕಿರಿಯ ವೈದ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಕೋಲ್ಕತ್ತಾದ ಆರ್ಜಿಕಾರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9 ರ ರಾತ್ರಿ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಮೃತದೇಹ ಪತ್ತೆಯಾಗುವ ಮೊದಲು ಇದು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಬಳಿಕ ಅದು ಅತ್ಯಾಚಾರ, ಕೊಲೆ ಎಂದು ತಿಳಿದು ಬಂದಿತ್ತು. ಈ ಹತ್ಯೆಯಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮೃತ ವೈದ್ಯೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಓರ್ವನಿಂದ…
ಬೆಂಗಳೂರು: ಜಿಎಸ್‌ಟಿ , ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮೊದಲಿನಿಂದಲೂ ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ. ಆದರೆ ಜಿಎಸ್‌ಟಿ ಇದ್ದವರೂ ನಮ್ಮ ಪೋರ್ಟಲ್ಗೆ ಅರ್ಜಿ ಹಾಕಿದ್ದರು. ಅವುಗಳನ್ನ ನಾವು ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದರು. https://youtu.be/FcDUSD1g_sg?si=Qdbsrl5iCY7slt7h ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್‌ಟಿ ಇರುವ ಕಾರಣಕ್ಕೆ ತತಕ್ಷಣ ಅರ್ಜಿ ತಿರಸ್ಕಾರ ಮಾಡಿದ್ದೇವೆ. 1ಕೋಟಿ 23ಲಕ್ಷ ಗೃಹಲಕ್ಷ್ಮಿ ಹಣ ಅಂತಾ ಹೇಳಿದ್ದು ಕವರ್ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಶ್ರೀಮಂತರು, ಜಿಎಸ್‌ಟಿ ಇದ್ದವರು ಸೇರಿ ಒಟ್ಟು 1ಕೋಟಿ 58ಲಕ್ಷ ಕುಟುಂಬಗಳಿವೆ. ಇಂದಿಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದು. ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಜೂನ್ ತಿಂಗಳದ್ದು ಕೂಡ ಎಂಬತ್ತು ಸಾವಿರ ಜನರಿಗೆ ತಲುಪಿಲ್ಲ. ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಷ್ಟ್…
ಚಿಕ್ಕಬಳ್ಳಾಪುರ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯರನ್ನು ಬಿಜೆಪಿಗರು ಏನೂ ಮಾಡಲು ಸಾಧ್ಯವಿಲ್ಲ. ಆಪರೇಷನ್ ಕಮಲ ಮಾಡಲು ನಮ್ಮಲ್ಲಿ ಕೆ.ಸುಧಾಕರ್ ಥರ ಎಂಎಲ್‌ಎ ಇಲ್ಲ ಎಂದು ವಿರೋಧ ಪಕ್ಷದ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಅವರನ್ನು ಬಿಜೆಪಿಯವರು ಏನೂ ಮಾಡೋಕೆ ಆಗಲ್ಲ. https://youtu.be/L6vD2FNNIsQ?si=CN3UVOXorOGvfxOR ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು ಎಂದು ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ. ಸಿದ್ದರಾಮಯ್ಯರನ್ನು ಸಹಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಮತ್ತು ವಿಜಯೇಂದ್ರಗೆ ಇಲ್ಲ. ಸಿದ್ದರಾಮಯ್ಯರನ್ನು ಸಿಎಂ ಆಗಿ ನಾವು ಉಳಿಸಿಕೊಳ್ಳುತ್ತೇವೆ. ಸಿಎಂಗೆ ಬಿಜೆಪಿಯವರು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ವೇಳೆ, ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನ ವಿಚಾರವಾಗಿ ಕೆಲ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರಕ್ಕೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಲು ನಮ್ಮ ಪಕ್ಷದಲ್ಲಿ ಕೆ.ಸುಧಾಕರ್ ಅಂತಹ ಎಂಎಲ್‌ಎ ಇಲ್ಲ. ಅದು ಹೇಗೆ ಅಪರೇಷನ್ ಕಮಲ ಮಾಡ್ತಾರೆ? ನಮ್ಮ ಶಾಸಕರು ಯಾರೂ ಅಂತವರಲ್ಲ.…
ಕಲಘಟಗಿ: ವಿಷಪೂರಿತ ಆಹಾರ ಸೇವಿಸಿ ಮೂರು ಮುರ್ರಾ ಜಾತಿಗೆ ಸೇರಿದ ಎಮ್ಮೆಗಳು ಮೃತಪಟ್ಟ ಘಟನೆ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ. ಈ ಎಮ್ಮೆಗಳು ಗ್ರಾಮದ ದಯಾನಂದ ಭೂಪಾಲ ಪರವಾಪುರ ಎನ್ನುವವರಿಗೆ ಸೇರಿದವುಗಳಾಗಿವೆ. ಒಟ್ಟು ನಾಲ್ಕು ಎಮ್ಮೆಗಳು ವಿಷಾಹಾರ ಸೇವಿಸಿದ್ದು ಅದರಲ್ಲಿ ಒಂದು ಎಮ್ಮೆಯ ಸ್ಥಿತಿ ಚಿಂತಾಜನಕವಾಗಿದೆ. https://youtu.be/-Mo1vOTDQSI?si=0Qw5fQl7sqKofsBx ಅದಕ್ಕೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಘಟನೆ ಹಿನ್ನೆಲೆ: ಕಲಘಟಗಿ: ವಿಷಪೂರಿತ ಆಹಾರ ಸೇವಿಸಿ ಮೂರು ಮುರ್ರಾ ಜಾತಿಗೆ ಸೇರಿದ ಎಮ್ಮೆಗಳು ಮೃತಪಟ್ಟ ಘಟನೆ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ. ಈ ಎಮ್ಮೆಗಳು ಗ್ರಾಮದ ದಯಾನಂದ ಭೂಪಾಲ ಪರವಾಪುರ ಎನ್ನುವವರಿಗೆ ಸೇರಿದವುಗಳಾಗಿವೆ. ಒಟ್ಟು ನಾಲ್ಕು ಎಮ್ಮೆಗಳು ವಿಷಾಹಾರ ಸೇವಿಸಿದ್ದು ಅದರಲ್ಲಿ ಒಂದು ಎಮ್ಮೆಯ ಸ್ಥಿತಿ ಚಿಂತಾಜನಕವಾಗಿದೆ. ಅದಕ್ಕೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕಲಘಟಗಿ: ವಿಷಪೂರಿತ ಆಹಾರ ಸೇವಿಸಿ ಮೂರು ಮುರ್ರಾ ಜಾತಿಗೆ ಸೇರಿದ ಎಮ್ಮೆಗಳು ಮೃತಪಟ್ಟ ಘಟನೆ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ. ಈ ಎಮ್ಮೆಗಳು ಗ್ರಾಮದ ದಯಾನಂದ ಭೂಪಾಲ ಪರವಾಪುರ…
ಮೊಳಕಾಲ್ಮೂರು, ಆ. 27- ಮಾದಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ಮೊಳಕಾಲ್ಮೂರು ಪಟ್ಟಣದ ಖಾಸಗಿ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ತಮಟೆ ಭಾರಿಸುವ ಮೂಲಕ, ಪ್ರತಿಭಟನೆ ನಡೆಸಲಾಯಿತು. https://youtu.be/q1QT6tIBNCo?si=TTc7UOg3avMcXDzE ಇದೆ ವೇಳೆ ದಲಿತ ಮುಖಂಡರು ಹಾಗೂ ನಿಕಟಪೂರ್ವ ಜಿಲ್ಲಾ ಸಂಚಾಲಕರಾದ, ಜಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಮಾದಿಗ ಸಮುದಾಯ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸುಪ್ರೀಂ ಕೋರ್ಟ್ ನ 7 ಜನ ನ್ಯಾಯಾಧೀಶರ ತೀರ್ಮಾನಿಸಿರುವ ಒಳ ಮೀಸಲಾತಿ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು.ಒಳ ಮೀಸಲಾತಿ ಜಾರಿಯಾಗುವ ವರೆಗೂ, ಎಲ್ಲಾ ನೇಮಕಾತಿಗಳನ್ನು ತಡೆಹಿಡಿಯಬೇಕು. ಸರ್ಕಾರ ಗ್ಯಾರಂಟಿಗಳಿಗೆ ಬಳಸುತ್ತಿರುವ ಎಸ್ಸಿ ಎಸ್ಟಿ ವಿಶೇಷ ಹಣವನ್ನು ತಡೆ ಹಿಡಿಯಬೇಕು.ಮೊಳಕಾಲ್ಮೂರು ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಾರ್ವಜನಿಕ ರುದ್ರ ಭೂಮಿ ಕಲ್ಪಿಸಿಕೊಡಬೇಕು. ತಾಲೂಕಿನಲ್ಲಿ 2 ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು…
ಬೆಂಗಳೂರು: ಸಾಮಾನ್ಯವಾಗಿ ವಯಸ್ಸಾದಂತೆ ಕೆಲವರಿಗೆ ಮೆದುಳಿನ ನರಮಂಡಲದಲ್ಲಾಗುವ ಬದಲಾವಣೆಯಿಂದಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಚಲನೆಯನ್ನು ನಿಯಂತ್ರಿಸುವ ಮೆದುಳಿನ ಪ್ರದೇಶವು ದುರ್ಬಲಗೊಂಡಾಗ ಪಾರ್ಕಿನ್ಸನ್ ಕಾಯಿಲೆಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತಿದ್ದಂತೆ ರೋಗಿಗೆ ನಡೆಯಲು ಮತ್ತು ಮಾತನಾಡಲು ಕಷ್ಟವಾಗಬಹುದು. ಅವರು ಮಾನಸಿಕ ಮತ್ತು ನಡವಳಿಕೆಯ ಬದಲಾವಣೆಗಳು, ನಿದ್ರೆಯ ಸಮಸ್ಯೆಗಳು, ಖಿನ್ನತೆ, ನೆನಪಿನ ಶಕ್ತಿಯ ತೊಂದರೆಗಳು ಮತ್ತು ಆಯಾಸ ಕಂಡುಬರುತ್ತದೆ. ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು: ಕೈ ಕಾಲು, ತಲೆಯಲ್ಲಿ ನಡುಕ ಸ್ನಾಯುಗಳ ಬಿಗಿತ ಚಲನೆಯ ನಿಧಾನತೆ ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ನುಂಗಲು, ಅಗಿಯಲು ಮತ್ತು ಮಾತನಾಡಲು ತೊಂದರೆ ಮೂತ್ರದ ತೊಂದರೆಗಳು ಅಥವಾ ಮಲಬದ್ಧತೆ ಚರ್ಮದಲ್ಲಿ ಸಮಸ್ಯೆ ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ: ಪಾರ್ಕಿನ್ಸನ್ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಔಷಧಿಗಳು, ಶಸ್ತ್ರಚಿಕಿತ್ಸಾ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳು ಸಾಮಾನ್ಯವಾಗಿ ಕೆಲವು ರೋಗಲಕ್ಷಣಗಳನ್ನು ನಿವಾರಿಸಬಹುದು. ಕಾರ್ಬಿಡೋಪಾ ಮತ್ತು ಲೆವೊಡೋಪಾ ಟ್ಯಾಬ್ಲೆಟ್ಗಳನ್ನು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿರುವ ರೋಗಿಗಳಿಗೆ ನೀಡಲಾಗುತ್ತದೆ. ಈ ಚಿಕಿತ್ಸೆಯು ಕೆಲವು ಅಡ್ಡಪರಿಣಾಮಗಳನ್ನು ತಡೆಯುತ್ತದೆ ಅಥವಾ ಕಡಿಮೆ ಮಾಡುತ್ತದೆ. ವಾಕರಿಕೆ,…
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ವೈರಲ್ ಆಗಿದ್ದು ಇದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಪ್ರಕರಣ ಸಂಬಂಧ ಈಗಾಗಲೇ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿಲಾಗಿದೆ. ಇದೀಗ ಘಟನೆಯ ಕುರಿತು ನಟ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ‘ದರ್ಶನ್ ನಮಗೆ ಆಪ್ತರು. ನಾನು ಮಾತನಾಡಿದರೆ ವಿವಾದ ಆಗುತ್ತೆ, ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ?’ ಎಂದು ಮಾಧ್ಯಮಗಳನ್ನು ಸುಮಲತಾ ಪ್ರಶ್ನೆ ಮಾಡಿದರು. ‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ…
ಬಿಗ್ ಸ್ಕ್ರೀನ್ ಹಾಗೂ ಸ್ಮಾಲ್ ಸ್ಕ್ರೀನ್ ಎರಡಲ್ಲೂ ತಮ್ಮದೇ ಚಾಪು ಮೂಡಿಸಿರುವ ಹಿರಿಯ ನಟಿ ಪದ್ಮಜಾ ರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಸದ್ಯ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ನಟಿಗೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಕಾರಾಗೃಹ ಶಿಕ್ಷೆ ಜೊತೆಗೆ 40.20 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ. ‘ವೀರೂ ಟಾಕೀಸ್’ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಅವರ ಬಳಿ ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಇದು ನಡೆದಿದ್ದು 2020ರ ಜೂನ್ 17ರಂದು. ಆದರೆ, ಪದ್ಮಜಾ ಅವರು ಹಣ ಪಾವತಿ ಮಾಡಿಲ್ಲ. ಹೀಗಾಗಿ, ವಿರೇಂದ್ರ ಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೊಗಿದ್ದರು. ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್ ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ…
ಜೀವನದಲ್ಲಿ ಎಷ್ಟು ಎಚ್ಚರವಿದ್ದರೂ ಸಾಕಾಗುವುದಿಲ್ಲ. ಹಲವು ಬಾರಿ ಎಷ್ಟು ಜಾಗರೂಕರಾಗಿ ಇದ್ದರೂ ಎಡವಿ ಬೀಳುತ್ತೇವೆ. ಮೋಸ ಹೋಗುತ್ತೇವೆ. ಎಷ್ಟೇ ಅಚ್ಚುಕಟ್ಟಿನ ಜೀವನ ನಮ್ಮದಾಗಿದ್ದರೂ ಸಣ್ಣ ತಪ್ಪು ಹೆಜ್ಜೆಯೂ ಭಾರೀ ದೊಡ್ಡ ಸಮಸ್ಯೆಗೆ ಕಾರಣ ಆಗಬಹುದು. ನಮಗೆ ತಿಳಿದವರು, ತಿಳಿಯದವರು ಯಾರೂ ಕೂಡ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಷ್ಟದ ಸಮಯದಲ್ಲಿ ಚಾಣಕ್ಯ ನೀತಿಯು ನಮಗೆ ಸಹಕಾರಿ ಆಗಬಹುದು. ಚಾಣಕ್ಯ ನೀತಿ ಹಲವು ಬಾರಿ ನಮ್ಮ ಜೀವನಕ್ಕೆ ನೀತಿಪಾಠ ಹೇಳಿ, ದಾರಿ ತೋರಬಹುದು. ನೀತಿ ತಿಳಿದಿರುವುದರಿಂದ ಕೆಲವು ಸಮಸ್ಯೆಗಳನ್ನಾದರೂ ತಪ್ಪಿಸಿಕೊಳ್ಳಬಹುದು. ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ಆಗಬಹುದಾದ ದೊಡ್ಡ ಅನಾಹುತದಿಂದ ಆದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಚಾಣಕ್ಯ ನೀತಿಯ ಪ್ರಕಾರ, ದುಷ್ಟ ಹೆಂಡತಿ, ಸುಳ್ಳು ಸ್ನೇಹಿತ, ರಾಕ್ಷಸ ಸೇವಕ ಮತ್ತು ಹಾವಿನೊಂದಿಗೆ ವಾಸಿಸುವ ವ್ಯಕ್ತಿಯು ತನಗಾಗಿ ತೊಂದರೆಗಳ ಕೂಪವನ್ನು ಅಗೆಯುತ್ತಾನೆ. ಈ ಎಲ್ಲಾ ಜನರು ತನಗೆ ತಾನೇ ಮಾರಕ ಸನ್ನಿವೇಶ…