Author: Prajatv Kannada

ನವದೆಹಲಿ: ಪಾಕಿಸ್ತಾನದಿಂದ ಭಾರತದೊಳಗೆ ಪ್ರವೇಶಿಸಿದ್ದ ಡ್ರೋನ್‌ನ್ನು ಭಾರತೀಯ ಗಡಿ ಭದ್ರತಾ ಪಡೆಯ ಸಿಬಂದಿ ಪಂಜಾಬ್‌ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ 2.11ರ ವೇಳೆಗೆ ಈ ಡ್ರೋನ್ ಭಾರತದೊಳಗೆ ಪ್ರವೇಶಿಸುತ್ತಿತ್ತು. ಅಮೃತ್​ಸರ ಜಿಲ್ಲೆಯ ಶಹಜಾದಾ ಗ್ರಾಮದ ಬಳಿ ಡ್ರೋನ್ ಶಬ್ದ ಕೇಳಿ ತಕ್ಷಣವೇ ಬಿಎಸ್‌ಎಫ್ ಸಿಬಂದಿ ಕಾರ್ಯಾಚರಣೆಗಿಳಿದು, ಶಬ್ದ ಕೇಳಿದತ್ತ ಕೂಡಲೇ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಮೇಡ್ ಇನ್ ಚೀನಾದ ಕಪ್ಪು ಬಣ್ಣದ ಡ್ರೋನ್ ಇದಾಗಿದ್ದು, ಅವಶೇಷಗಳು ಶಹಜಾದ್ ಗ್ರಾಮದ ದುಸ್ಸಿ ಬಂದ್ ಬಳಿ ಪತ್ತೆಯಾಗಿದೆ. ಇನ್ನು ಪಾಕಿಸ್ತಾನ ಈ ಹಿಂದೆಯೂ ಭಾರತದತ್ತ ಅಕ್ರಮವಾಗಿ ಡ್ರೋನ್ ಕಳುಹಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಪಂಜಾಬ್‌ನ ಅಮೃತಸರ್‌ಗೆ ಪಾಕಿಸ್ತಾನದಿಂದ ಪ್ರವೇಶಿಸಿದ್ದ ಡ್ರೋನ್‌ನ್ನು ಬಿಎಸ್‌ಎಫ್ ಸಿಬಂದಿ ಹೊಡೆದುರುಳಿಸಿದ್ದರು. ಪಾಕಿಸ್ತಾನ ಗುಪ್ತಚರ ಇಲಾಖೆಯು ಐಎಸ್‌ಐ ಡ್ರೋನ್ ಮೂಲಕ ಭಾರತದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಕಳುಹಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ.

Read More

ಹೈದರಾಬಾದ್: ತನ್ನ ಗೆಳತಿಗೆ (Girlfriend) ಸಂದೇಶ ಕಳುಹಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ (Friend) ಭೀಕರವಾಗಿ ಕೊಲೆಗೈದು (Murder), ಶಿರಚ್ಛೇದ ಮಾಡಿ (Beheading), ದೇಹದ ಆಂತರಿಕ ಭಾಗಗಳನ್ನು ಕಿತ್ತು ಹಾಕಿ, ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. ವರದಿಗಳ ಪ್ರಕಾರ ಆರೋಪಿಯ ಗೆಳತಿ ಈ ಹಿಂದೆ ಆತನ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಳು. ಆಕೆಗೆ ಸಂತ್ರಸ್ತ ಯುವಕ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ, ಸ್ನೇಹಿತನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆತನ ಹೃದಯ, ಖಾಸಗಿ ಭಾಗಗಳನ್ನು ಕಿತ್ತಿದ್ದು, ಬೆರಳುಗಳನ್ನೂ ಕತ್ತರಿಸಿದ್ದಾನೆ ಎನ್ನಲಾಗಿದೆ. ಘಟನೆಯೇನು? ಆರೋಪಿ ಹರಿಹರ ಕೃಷ್ಣ ಹಾಗೂ ಕೊಲೆಯಾದ ಯುವಕ ನವೀನ್ ಗೆಳೆಯರಾಗಿದ್ದು, ಈ ಹಿಂದೆ ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ನವೀನ್ ಮೊದಲು ತನ್ನ ಪ್ರೇಮವನ್ನು ಯುವತಿಗೆ ತಿಳಿಸಿದ್ದ. ಈ ಪ್ರಸ್ತಾಪವನ್ನು ಆಕೆ ಒಪ್ಪಿಕೊಂಡಿದ್ದು, 1-2 ವರ್ಷದ ಬಳಿ ಅವರಿಬ್ಬರೂ ಬೇರೆಯಾಗಿದ್ದರು. ಬಳಿಕ ಯುವತಿ ಹರಿಹರ ಕೃಷ್ಣನೊಂದಿಗೆ ಸಂಬಂಧ ಬೆಳೆಸಿದ್ದಳು.…

Read More

ನವದೆಹಲಿ :  ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಪ್ರಕರಣ ಸಂಚಲನ ಮೂಡಿಸಿದೆ. ಬೇರೆ ಜಾತಿಯ ಹುಡುಗನನ್ನು ಪ್ರೀತಿ ಮದುವೆಯಾಗಿದ್ದ ಮಗಳನ್ನು ತಂದೆ ಸಿಟ್ಟಿನಲ್ಲಿ ಕೊಂದಿದ್ದಾನೆ. ಆಕೆಯ ರುಂಡ-ಮುಂಡವನ್ನು ಬೇರ್ಪಡಿಸಿ ಭೀಕರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಈ ಘಟನೆ ನಡೆದಿದೆ. ಆದರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಾಣ್ಯಂ ಪೊಲೀಸರು ಈ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಎಂಬುವವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳ ಹೆಸರು ಪ್ರಸನ್ನ (21). ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ತಂದೆಯ ಇಷ್ಟದಂತೆ ನಡೆದ ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಮದುವೆಯಾಗಿ ಎರಡು ವರ್ಷದ ಬಳಿಕ ಹೈದರಾಬಾದಿನಿಂದ ಹಳ್ಳಿಗೆ ಬಂದು ತನ್ನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆ ಮದುವೆಗೂ ಮುನ್ನ ಪ್ರೇಮ ಸಂಬಂಧ ಹೊಂದಿದ್ದವನ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದಲ್ಲದೆ, ಹೈದರಾಬಾದ್‌ಗೆ ಹೋಗೋಕು ಮನಸ್ಸು…

Read More

ಬೆಳಗಾವಿ: ಪ್ರಧಾನಿ ನರೆಂದ್ರ ಮೋದಿ (Narendra Modi) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಿ ಪದವಿಪೂರ್ವ ಶಿಕ್ಷಣ ಇಲಾಖೆ (Department of Pre-University Education) ಆದೇಶಿಸಿದೆ. ರಾಜ್ಯಾದ್ಯಂತ ಫೆ. 27ರಿಂದ ಪ್ರಥಮ ಪಿಯುಸಿ ಪರೀಕ್ಷೆಗಳು (PUC Exam)ಆರಂಭಗೊಳ್ಳುತ್ತಿದ್ದು, ಈ ಆದೇಶ ಬೆಳಗಾವಿಗೆ (Belagavi) ಮಾತ್ರ ಅನ್ವಯವಾಗಲಿದೆ. ನಾಳೆ ನಡೆಯುವ ಪರೀಕ್ಷೆ ಮಾರ್ಚ್ 6ರಂದು ನಡೆಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರಧಾನಿ ಆಗಮನದಿಂದ ಬಸ್ ಸಂಚಾರ ವ್ಯತ್ಯಯ ಆಗಲಿದೆ. ನಗರದ ವಿವಿಧೆಡೆ ಸಂಚಾರ ಮಾರ್ಗಗಳು ಬದಲಾವಣೆಗೊಳ್ಳಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಇಲಾಖೆಯ ಉಪನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ. ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ರೋಡ್ ಶೋ ಮಾರ್ಗ ಫೈನಲ್ ಆದರೆ ಅದ್ಧೂರಿ ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Read More

ಹಾಸನ: ತಡರಾತ್ರಿ ಜವರಾಯನ ಅಟ್ಟಹಾಸ ಮೆರೆದಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕೆರೆಹಳ್ಳಿ ಬಳಿ ನಡೆದ ದುರಂತದಲ್ಲಿ ಲೋಕೇಶ್, ಲಕ್ಷ್ಮಿ ಹಾಗೂ ಲೋಕೇಶ್ ತಂಗಿಯ ಮಕ್ಕಳಾದ ಗಾನವಿ ಮತ್ತು ಲೇಖನ ಮೃತಪಟ್ಟಿದ್ದಾರೆ. ನಡೆದಿದ್ದೇನು..?: ಲೋಕೇಶ್ ಅವರು ಹೊಸೂರಿನಿಂದ ಪತ್ನಿಯನ್ನು ಕರೆದುಕೊಂಡು ನವಿಲೆ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಲೋಕೇಶ್ ಬೈಕ್ ಕಾರೇಹಳ್ಳಿ ಬಳಿ ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ನುಗ್ಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಹಾಸನ: ಮುಂದೆ ನಡೆಯುವ ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಅಭ್ಯರ್ಥಿಗಳ ಘೋಷಣೆ ಮಾಡುವ ಮೊದಲೆ ಒಂದು ಕಡೆ ಭವಾನಿ ರೇವಣ್ಣ ಅವರು ಕ್ಷೇತ್ರ ಸುತ್ತಿ ಪ್ರಚಾರದ ಮೂಲಕ ಬಿಂಭಿಸಿಕೊಳ್ಳುತ್ತಿದ್ದರೇ, ಇನ್ನೊಂದು ಕಡೆ ಸದ್ದಿಲ್ಲದೇ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಪುತ್ರ ಹೆಚ್.ಪಿ. ಸ್ವರೂಪ್ ಅವರು ಕೂಡ ಹಳ್ಳಿ ಹಳ್ಳಿ ಸುತ್ತಿ ಗಮನಸೆಳೆಯುತ್ತಿದ್ದಾರೆ. ಇದೊಂದು ರೀತಿ ಪಕ್ಷದಿಂದ ಟಿಕೆಟ್ ಪೈಟ್ ಎಂಬಂತೆ ಕಂಡು ಬಂದರೂ ಕೂಡ ಇನ್ನೊಂದು ದಿನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗಪಡಿಸುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳಲ್ಲಿ ಅಭ್ಯರ್ಥಿಗಳ ಪ್ರಚಾರಗಳು ಕೂಡ ಹೆಚ್ಚಾಗು ತೊಡಗಿದ್ದು, ಇನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಕ್ಷೇತ್ರಗಳಲ್ಲಿ ಸುತ್ತಾಡಿ ಗಮನಸೆಳೆಯುವ ಕೆಲಸ ಮಾಡಲಾಗುತ್ತಿದೆ. ಹಾಸನದಲ್ಲಿ ಮುಂದುವರಿದ ಭವಾನಿ ರೇವಣ್ಣ ದಂಡಯಾತ್ರೆಯು ಮೂರನೇ ದಿನವು ಕೂಡ ಮುಂದುವರೆದಿದೆ. ಭವಾನಿಗೆ ಟಿಕೆಟ್ ಇಲ್ಲಾ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಸಂದೇಶವನ್ನು ಕೂಡ ಲೆಕ್ಕಿಸದೆ ಹಾಸನ ಕ್ಷೇತ್ರದಲ್ಲಿ…

Read More

ರಾಯಚೂರು: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ಜೈಲಿಗೆ ಹೋಗ್ತಾರೆ ಅಂತಾ ನಾನು ಈ ಮೊದಲು ಹೇಳಿದ್ದೆ, ಈಗಲೂ ಹೇಳುತ್ತೇನೆ. ಜಸ್ಟೀಸ್ ಕೆಂಪಣ್ಣ ಕೊಟ್ಟ ವರದಿ ವಿಧಾನಸಭೆಯಲ್ಲಿ ಸಿಎಂ ಓದಿದ್ದಾರೆ. ಕೊನೆ ಸಾಲಿನ ಆದೇಶ ಓದಿದ್ದಾರೆ. ಲೋಕಾಯುಕ್ತ (Lokayukta) ಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತೆ, ಯಾರ್ಯಾರು ನಾಯಕರು ಪ್ರಕರಣದಲ್ಲಿ ಇದ್ದಾರೆ ಅವರ ವಿರುದ್ಧ ಕ್ರಮ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಬಹುಮತ ಸರ್ಕಾರ ಇದ್ದಾಗ ಹಗರಣ ಆಗಿತ್ತು. ತಾವು ಸಿಕ್ಕಿ ಬೀಳುತ್ತೇವೆ ಅಂತ ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಹಲ್ಲಿಲ್ಲದ ಎಸಿಬಿಯನ್ನ ಹುಟ್ಟುಹಾಕಿದರು. ನ್ಯಾ.ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಈಗ ಆ ವರದಿ ದಾಖಲಾತಿಗಳನ್ನ ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗ್ತಾರೆ ಅಂತ ಕಟೀಲ್ ಹೇಳಿದ್ದಾರೆ. ಅಮಿತ್ ಶಾ, ಜನಾರ್ದನ ರೆಡ್ಡಿಯನ್ನು ನೋಡಿಕೊಳ್ಳುತ್ತೇನೆ ಎಂಬ ಹೇಳಿಕೆಗೆ ಹೆಚ್.ಡಿ.ಕೆ ಪ್ರತಿಕ್ರಿಯೆ ವಿಚಾರವಾಗಿ ಮಾತನಾಡಿದ ಕಟೀಲ್ (Nalin Kumar Kateel),…

Read More

ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ವ್ಯಕ್ತಿಯೊಬ್ಬ ಜನ್ಮ ನೀಡಿದ ತಾಯಿ (Mother), ತಂದೆಗಾಗಿ (Father) ದೇವಸ್ಥಾನ (Temple) ನಿರ್ಮಿಸಿ ಪ್ರತಿನಿತ್ಯ ಪೂಜೆ ಮಾಡಿ ಇತರರಿಗೆ ಆದರ್ಶವಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಸುರೇಶ್‌ ತಳವಾರ ಎಂಬುವರು ತಮ್ಮ ಜಮೀನಿನಲ್ಲಿರುವ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ ದೇವಸ್ಥಾನ ನಿರ್ಮಿಸಿ ತಂದೆ ತಾಯಿಯ ಮೇಲಿನ ಪ್ರೇಮ ಮೆರೆದಿದ್ದಾರೆ‌. ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿರುವ ಸುರೇಶ್‌ ತಳವಾರ ಹಾಗೂ ಅವರ ಸಹೋದರರಿಗೆ ಮೊದಲಿನಿಂದಲೂ ತಾಯಿ ತಂದೆ ಮೇಲೆ ಅಪಾರ ಭಕ್ತಿ ಇತ್ತು. 20 ವರ್ಷಗಳ ಹಿಂದೆ ಅವರ ತಂದೆ ಗುರಪ್ಪ ಸಾವನ್ನಪ್ಪಿದ್ದರು. ಕಳೆದ 2 ವರ್ಷದ ಹಿಂದೆ ಅವರ ತಾಯಿ ಪಾರ್ವತಿ ತೀರಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನಸಂತರ್ಪನೆ ಮಾಡುತ್ತಿದ್ದರು. ಆದರೆ ಈ ವರ್ಷ ತಂದೆ, ತಾಯಿಗಳು…

Read More