ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾದ ಸಿನಿಮಾ ಕನ್ನಡದಲ್ಲೂ ತಯಾರಾಗುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ಇದರ ಮಾತುಕತೆ ಹಿನ್ನೆಲೆಯಲ್ಲಿ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈಗೆ ತೆರಳಿದ್ದಾರೆ. ಅಂದುಕೊಂಡಂತೆ ಆದರೆ ಇನ್ನೆರಡು ದಿನದಲ್ಲಿ ಅನುಪಮ್ ಕನ್ನಡಕ್ಕೆ ಬರುವ ವಿಚಾರ ಗೊತ್ತಾಗಲಿದೆ. ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವೀರ ಸಾವರ್ಕರ್ ಪಾತ್ರವನ್ನು ಸುನೀಲ್ ರಾವ್ ನಿರ್ವಹಿಸುತ್ತಿದ್ದು, ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿರುವ ಸುನೀಲ್ ರಾವ್ ಅವರ ಫೋಟೋ ಶೂಟ್ ಕೂಡ ಮುಗಿದಿದೆ. ಮಾರ್ಚ್…
Author: Prajatv Kannada
ಸಾಕಷ್ಟು ಸಂದರ್ಭದಲ್ಲಿ ನಾವು ಮನೆಯ ಹೊರಗೆ ಇಟ್ಟ ಶೂ ಅಥವಾ ಹೆಲ್ಮೆಟ್ ಅನ್ನು ಪರೀಕ್ಷಿಸಿ ಧರಿಸುವುದಿಲ್ಲ. ಬಹುತೇಕ ಸಲ ಅವಸರದಲ್ಲಿ ಇವುಗಳ ಒಳಭಾಗಕ್ಕೆ ಒಂದು ಕ್ಷಣವೂ ಕಣ್ಣಾಯಿಸುವುದಿಲ್ಲ. ಆದರೆ, ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ…? ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡುವಾಗಲೇ ಎದೆಯೊಮ್ಮೆ ಧಗ್ ಎಂದಂತಾಗುತ್ತದೆ Video Player 00:00 00:46 ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ನಾವು ಸಾಕಷ್ಟು ವಿಷಯಗಳ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ, ಈ ನಿರ್ಲಕ್ಷತನ ನಮಗೇ ಮುಳುವಾಗಬಹುದು. ಅದಕ್ಕೆ ಸಾಕ್ಷಿ ಈ ದೃಶ್ಯ. ಇದು ಹೆಲ್ಮೆಟ್‌ನೊಳಗೆ ಹಾವೊಂದು ಅಡಗಿ ಕುಳಿತಿರುವ ಭಯಾನಕ ದೃಶ್ಯ…!
ಸಿಹಿ ಆಲೂಗಡ್ಡೆ (Sweet Potatoes) ಎಂದು ಕರೆಯಲಾಗುವ ಗೆಣಸು ಹಲವಾರು ಪೋಷಕಾಂಶಗಳನ್ನು ಹೊಂದಿದ್ದು, ಹೆಚ್ಚು ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿದೆ. ಅವು ವಿವಿಧ ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ – ಕಿತ್ತಳೆ, ಬಿಳಿ ಮತ್ತು ನೇರಳೆ ಹೀಗೆ. ಇದರಲ್ಲಿ ವಿಟಮಿನ್ಗಳು, ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ಗಳು (Antioxidants) ಮತ್ತು ಫೈಬರ್ನಲ್ಲಿ (Fiber) ಸಮೃದ್ಧವಾಗಿವೆ. ಇವುಗಳು ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗೆಣಸಿನ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಗೆಣಸು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಒಂದು ಕಪ್ (200 ಗ್ರಾಂ) ಬೇಯಿಸಿದ ಸಿಹಿ ಗೆಣಸು ಈ ಕೆಳಗಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಕ್ಯಾಲೋರಿಗಳು: 180 ಕಾರ್ಬೋಹೈಡ್ರೇಟ್ಗಳು: 41.4 ಗ್ರಾಂ ಪ್ರೋಟೀನ್: 4 ಗ್ರಾಂ ಕೊಬ್ಬು: 0.3 ಗ್ರಾಂ ಫೈಬರ್: 6.6 ಗ್ರಾಂ ವಿಟಮಿನ್ ಎ: 769% ವಿಟಮಿನ್ ಸಿ: 65% ಡಿವಿ ಮ್ಯಾಂಗನೀಸ್: 50% ವಿಟಮಿನ್ B6: 29% ಪೊಟ್ಯಾಸಿಯಮ್: 27% ಪ್ಯಾಂಟೊಥೆನಿಕ್ ಆಮ್ಲ: 18% ತಾಮ್ರ: 16% ನಿಯಾಸಿನ್:…
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ ಗುರುವಾರ ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಬಗ್ಗೆ NCS ಟ್ವೀಟ್ ಮೂಲಕ ತಿಳಿಸಿದೆ. ಮಧ್ಯಾಹ್ನ 02:35:57 IST ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 267 ಕಿಮೀ ದೂರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ, 36.38 ಅಕ್ಷಾಂಶ ಮತ್ತು 70.94 ರೇಖಾಂಶದಲ್ಲಿ ಸಂಭವಿಸಿದೆ. ಇನ್ನು ಫೆ.27 ಸಹ ಅಫ್ಘಾನಿಸ್ತಾನದಲ್ಲಿ ಭೂಕಂಪ ಆಗಿತ್ತು. ಬಳಿಕ ಮಂಗಳವಾರವೂ ಎರಡನೇ ಬಾರಿ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಇಂದು 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಗ್ರೀಸ್: ಉತ್ತರ ಗ್ರೀಸ್ ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 43 ಮಂದಿ ಮೃತಪಟ್ಟಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆದ್ದಾರಿ ಅಂಡರ್ ಪಾಸ್ ನಿಂದ ಪ್ರಯಾಣಿಕ ರೈಲು ಹೊರಬರುತ್ತಿದ್ದಾಗ ಟೆಂಪೆ ಪಟ್ಟಣದ ಬಳಿ ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ರೈಲುಗಳ ಮಧ್ಯೆ ಘರ್ಷಣೆ ನಡೆದಿದ್ದು, ನಂತರ ಬಹು ರೈಲಿನ ಹಳಿಗಳು ಬೇರ್ಪಟ್ಟಿದ್ದವು. ಬಳಿಕ ಅಪಘಾತದ ರಭಸಕ್ಕೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. ಅಥೆನ್ಸ ನಿಂದ ಥೆಸಲೋನಿಕಿ ರೈಲಿನಲ್ಲಿದ್ದ ಅನೇಕ ಪ್ರಯಾಣಿಕರು ದೀರ್ಘ ವಾರಾಂತ್ಯದಲ್ಲಿ ಕಾರ್ನೀವಲ್ ಆಚರಿಸಿದ ನಂತರ ಮನೆಗೆ ಹಿಂದಿರುಗಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ರೈಲಿನಲ್ಲಿದ್ದರು. “ಇದು ಭೀಕರ ದುರಂತವಾಗಿದ್ದು ಅದನ್ನು ಗ್ರಹಿಸಲು ಕಷ್ಟ” ಎಂದು ಉಪ ಆರೋಗ್ಯ ಸಚಿವ ಮಿನಾ ಗಾಗಾ ಹೇಳಿದ್ದಾರೆ. ಡಿಕ್ಕಿಯ ರಭಸಕ್ಕೆ ಹಲವಾರು ಪ್ರಯಾಣಿಕರು ರೈಲು ಬೋಗಿಗಳ ಕಿಟಕಿಗಳ ಮೂಲಕ ಎಸೆಯಲ್ಪಟ್ಟರು ಎಂದು ಬದುಕುಳಿದವರು ಹೇಳಿದ್ದಾರೆ. ಅಥೆನ್ಸ್ ನ ಉತ್ತರಕ್ಕೆ ಸುಮಾರು 380 ಕಿಲೋಮೀಟರ್ ಕಮರಿಯ ಸಮೀಪವಿರುವ ಗದ್ದೆಗೆ…
ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, ‘ಗೃಹಬಳಕೆಯ ಗ್ಯಾಸ್ ಬೆಲೆ 50 ರೂ., ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ. ಏರಿಕೆಯಾಗಿದೆ. ಈಗ ಜನರು ಹೋಳಿಗೆ ಖಾದ್ಯಗಳನ್ನು ಹೇಗೆ ಮಾಡಬೇಕೆಂದು ಕೇಳುತ್ತಿದ್ದಾರೆ. ಈ ಲೂಟಿಯ ಆದೇಶಗಳು ಎಷ್ಟು ದಿನ ಮುಂದುವರಿಯುತ್ತದೆ?’ ಎಂದು ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರದ ಅವಧಿಯಲ್ಲಿ ಅಧಿಕ ಹಣದುಬ್ಬರದಿಂದ ಜನರು ನಲುಗಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ನವದೆಹಲಿ : ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಇವಿಎಂಗಳು ಇಂದು ಬೆಳಿಗ್ಗೆ 8 ರಿಂದ ತೆರೆಯಲಿವೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಚುನಾವಣೆಯನ್ನು ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ, ಇದು ಎಲ್ಲಾ ಪಕ್ಷಗಳಿಗೆ ಸೆಮಿಫೈನಲ್ ಎಂದು ಸಾಬೀತಾಗಲಿದೆ. ಒಂದೆಡೆ, ಬಿಜೆಪಿಗೆ ಅಧಿಕಾರಕ್ಕೆ ಮರಳುವುದು ಸವಾಲಾಗಿದ್ದರೆ, ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ತ್ರಿಪುರ, ನಾಗಲ್ಯಾಂಡ್ ನಲ್ಲಿ ಬಿಜೆಪಿ ಗೆದ್ದು,ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ತ್ರಿಪುರಾದಲ್ಲಿ ಮತ ಎಣಿಕೆಗೆ ಭರದ ಸಿದ್ಧತೆ ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಜಿ ಕಿರಣ್ ಕುಮಾರ್ ದಿನಕರ್ ರಾವ್ ಅವರು ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದರು. 60 ಸದಸ್ಯರ ತ್ರಿಪುರಾ…
ನವದೆಹಲಿ : ಚೀನಾ, ಪಾಕಿಸ್ತಾನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ‘ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ಆತನ ಬಗ್ಗೆ ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಮುಂಬೈ ಪೊಲೀಸರಿಗೆ ರಹಸ್ಯ ಇ ಮೇಲ್ ಸಂದೇಶ ರವಾನಿಸಿದೆ. ಡೇಂಜರಸ್ ಎಂದು ಹೆಸರಿಸಿದ ವ್ಯಕ್ತಿಯನ್ನು ಇಂದೋರ್ ಮೂಲದ ಸರ್ಫರಾಜ್ ಮೆಮನ್ ಎಂದು ಎನ್‌ಐಎ ಗುರುತಿಸಿದ್ದು, ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ ಎಂದು ಎಚ್ಚರಿಸಿದೆ. ಆತನ ಆಧಾರ್ ಕಾರ್ಡ್ ಮಾಹಿತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನೂ ಎನ್‌ಐಎ ಮುಂಬೈ ಪೊಲೀಸರ ಜೊತೆ ಹಂಚಿಕೊಂಡಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಜೊತೆಗೆ ಈ ಕುರಿತು ಅದು ಇಂದೋರ್ ಪೊಲೀಸರಿಗೂ ಮಾಹಿತಿ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.ಮಹಾರಾಷ್ಟ್ರ(Maharashtra) ಮೂಲದ ಖಾಲಿದ್ ಮುಬಾರಕ್ ಮತ್ತು ತಮಿಳುನಾಡು (Tamil Nadu) ಮೂಲದ ಅಬ್ದುಲ್ಲಾ ಎಂಬಿಬ್ಬರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ (Pakistan) ತೆರಳಲು ಯತ್ನಿಸುತ್ತಿದ್ದ ವೇಳೆ ಕಳೆದ ಶನಿವಾರವಷ್ಟೇ ದೆಹಲಿ ಪೊಲೀಸರ (Delhi Police) ವಿಶೇಷ ಪಡೆಯ ಕೈಗೆ…
ಸೂರ್ಯೋದಯ: 06.35 AM, ಸೂರ್ಯಾಸ್ತ : 06.29 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ದಶಮಿ 06:39 AM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಆರ್ದ್ರಾ 12:43 PM ತನಕ ನಂತರ ಪುನರ್ವಸು ಯೋಗ: ಇವತ್ತು ಆಯುಷ್ಮಾನ್ 05:51 PM ತನಕ ನಂತರ ಸೌಭಾಗ್ಯ ಕರಣ: ಇವತ್ತು ಗರಜ 06:39 AM ತನಕ ನಂತರ ವಣಿಜ 07:54 PM ತನಕ ನಂತರ ವಿಷ್ಟಿ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 01.32 AM to 03.19 AM ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ ಮೇಷ ರಾಶಿ ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ…
ಬೆಳಗಾವಿ: ಕಳೆದ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು. ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್ ನಲ್ಲಿ ಬರಬಹುದು. ಕರ್ನಾಟಕದಲ್ಲಿ ನಿಮ್ಮ ಗೆಲುವು ಇತಿಹಾಸ ಮಾಡುತ್ತದೆ. ಈ ಕ್ಷೇತ್ರದ ಹೆಣ್ಣು ಮಕ್ಕಳು ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿದ್ದಾರೆ ಎಂದು ಕೇಳಿದ್ದೇವೆ. ಇಂದು ಅದು ಸಾಬೀತಾಗಿದೆ. ಪ್ರಜಾಧ್ವನಿ ಯಾತ್ರೆ ಎಲ್ಲಿ ಹೋದರೂ ಜನಸಾಗರ ಸೇರುತ್ತಿದೆ ಎಂದರು. ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯ ಯೋಜನೆಗಳ ಮಾಹಿತಿ ನೀಡುವ ವೇಳೆ ಜಮೀರ್ ಅಹ್ಮದ್ ಖಾನ್ ಎಡವಟ್ಟು ಮಾಡಿಕೊಂಡ ಘಟನೆ ಕೂಡ ನಡೆಯಿತು. ಕ್ಷೀರ ಭಾಗ್ಯ ಎನ್ನುವ ಬದಲು…