ಮಲ್ಲೇಶ್ವರಂ ನ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಕಂಬಿ ರಫ್ತಿಗೆ ಅವಕಾಶ ಕೊಡೋ ಮೂಲಕ ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅಕ್ರಮ ಆರೋಪ ಪ್ರಕರಣ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪಗಳು ಸುಳ್ಳು ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ. ಹೀಗಾಗಿ ಇಂತಹ ಆರೋಪಗಳನ್ನು ಮಾಡ್ತಿದಾರೆ ಎಂದರು. ಅಬಕಾರಿ ಇಲಾಖೆಯಲ್ಲಿ ಈ ಬಾರಿ ದಾಖಲೆಯ ತೆರಿಗೆ ಸಂಗ್ರಹ ಆಗಿದೆ. ಆದಾಯ ತರೋ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕೆ.ಎನ್ ರೀಸೋರ್ಸ್ ಸಂಸ್ಥೆಗೆ ಈ ಮೊದಲೇ ಅನುಮತಿ ಕೊಟ್ಟಿದ್ದೇವೆ ಅನುಮತಿ ಕೊಟ್ಟಿದ್ದರಲ್ಲಿ ಯಾರ ಒತ್ತಡವೂ ಇರಲಿಲ್ಲ ಎಂದರು. ಕಾಂಗ್ರೆಸ್‌ನವರು ಬಿಟ್ಟಿರುವ ಆಡಿಯೋ ಸುಳ್ಳು ಅವರು ಮಾಡಿರುವ ಆರೋಪ ಸುಳ್ಳು ಕಾಂಗ್ರೆಸ್‌ನವರು ಏನೇ ಆರೋಪ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ ಈಥರ ಹತ್ತು ಆಡಿಯೋ ಬಿಟ್ಟರೂ ನಾವು ಎದೆಗುಂದಲ್ಲ ಎಂದು ಹೇಳಿದರು. ಸಿಎಂ ಮೇಲೂ ಖರ್ಗೆ ಆರೋಪ ಮಾಡಿದ್ದಾರೆ. ಇದು ನಿರಾಧಾರ, ಸತ್ಯಕ್ಕೆ ಸುಳ್ಳು ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಕೆ.…
Author: Prajatv Kannada
ಬೆಂಗಳೂರು: 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರ ಸಂಘ ಹೇಳಿದೆ. ಅದರಂತೆ ನಾಳೆ (ಮಾರ್ಚ್ 1) ರಾಜ್ಯಾದ್ಯಂತ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಇಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 9.30ಕ್ಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ಸರ್ಕಾರಿ ನೌಕರರ ಮನವೊಲಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಹಲವು ನೌಕರ ಮುಖಂಡರ ಜತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇಂದು ಮಧ್ಯಾಹ್ನ ನಡೆಸಿದ್ದ ಸಭೆ ವಿಫಲವಾಗಿದೆ. ಇದರ ಬೆನ್ನಲ್ಲೇ ಸಂಜೆ ಮತ್ತೊಂದು ಸುತ್ತಿನ ಸಭೆ…
ಮುಂಬೈ: ಭೀಕರ ಕಾರು ಅಪಘಾತದಿಂದ ಗಾಯಗೊಂಡಿದ್ದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಷಬ್ (Rishabh Pant) ಪಂತ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಸೇರಿದಂತೆ ಹಲವು ಸ್ಟಾರ್ ಆಟಗಾರರು 2023ರ 16ನೇ ಆವೃತ್ತಿ ಐಪಿಎಲ್‌ನಿಂದ (IPL 2023) ಹೊರಗುಳಿದಿದ್ದಾರೆ. ಇದರಿಂದ ನೆಚ್ಚಿನ ತಂಡದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಯಾರೆಲ್ಲಾ ಐಪಿಎಲ್‌ನಿಂದ ಮಿಸ್ಸಿಂಗ್?: ರಿಷಬ್ ಪಂತ್: 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಬ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಗೈರಾಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಗ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ…
ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಸೋದರಳಿಯ ಸಾಯಿ ಧರಮ್ ತೇಜ್ ಜೊತೆಗಿನ ಹೊಸ ಚಿತ್ರಕ್ಕೆ ಪವನ್ ಕಲ್ಯಾಣ್ ಸಾಥ್ ನೀಡಿದ್ದಾರೆ. ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ಕಾಂಬಿನೇಷನ್ ನ ಸಿನಿಮಾದಲ್ಲಿ ಸೊಂಟ ಬಳುಕಿಸಲು ಶ್ರೀಲೀಲಾ ಸಜ್ಜಾಗಿದ್ದಾರೆ. `ಧಮಾಕಾ’ ಸೂಪರ್ ಸಕ್ಸಸ್ ನಂತರ ಶ್ರೀಲೀಲಾಗೆ ಬೇಡಿಕೆ ಜಾಸ್ತಿಯಾಗಿದೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಂತರ ಶ್ರೀಲೀಲಾಗೆ ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ಪವನ್ ಕಲ್ಯಾಣ್ ನಟನೆಯ ಹೊಸ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಲು ಶ್ರೀಲೀಲಾ ಓಕೆ ಎಂದಿದ್ದಾರೆ. ತಮಿಳಿನ `ವಿನೋದಾಯ ಸೀತಮ್’ ಚಿತ್ರದ ರೀಮೇಕ್‌ನಲ್ಲಿ ಪವನ್ ಕಲ್ಯಾಣ್- ಸಾಯಿ ಧರಮ್ ತೇಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಸಮುದ್ರಖನಿ ಡೈರೆಕ್ಷನ್ ಮಾಡ್ತಿದ್ದಾರೆ. ಕಾಲಿವುಡ್‌ನಲ್ಲಿ ಗಮನ ಸೆಳೆದ ಈ ಚಿತ್ರ, ಇದೀಗ ತೆಲುಗಿನಲ್ಲಿ ಕಮಾಲ್ ಮಾಡಲು ರೆಡಿಯಾಗಿದೆ.
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ರವಿಚಂದ್ರನ್ ನಟನೆಯ ಪ್ರೀತ್ಸೋದು ತಪ್ಪಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ನಟಿ. ಇದೀಗ ಸಾಕಷ್ಟು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. 1998ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದರು. ಆನಂತರ ಮತ್ತೆ ರವಿಮಾಮ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದರು. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಅಲ್ಲಿಂದ ಈವರೆಗೂ ಶಿಲ್ಪಾ ಮತ್ತೆ ಕನ್ನಡದತ್ತ ಮುಖ ಮಾಡಿರಲಿಲ್ಲ. ಇದೀಗ ದೃವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಸಿನಿಮಾದ ಮೂಲಕ ಮತ್ತೆ ಗಾಂಧಿನಗಕ್ಕೆ ಎಂಟ್ರಿಕೊಡ್ತಿದ್ದಾರೆ. ಗುಳಿಕೆನ್ನೆ ಚೆಲುವೆ ಶಿಲ್ಪಾ ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನುವ ವರ್ತಮಾನ ‘ಕೆಡಿ’ ಅಡ್ಡಾದಿಂದ ಬಂದಿದೆ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಶಿಲ್ಪಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ ಎಂದು…
ಟಾಲಿವುಡ್ ನಟ ರಾಮ್ ಚರಣ್ ಖ್ಯಾತಿ ‘ಆರ್ಆರ್ಆರ್’ ಸಿನಿಮಾದಿಂದ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಆರ್ಆರ್ಆರ್’ ಹಾಲಿವುಡ್ ಅಂಗಳದಲ್ಲಿ ಅವಾರ್ಡ್ ಗೆಲ್ಲುತ್ತಿರುವುದರಿಂದ ಭಾರತೀಯರು ಹೆಮ್ಮೆ ಪಡುವಂತಾಗಿದೆ. ಈಗ ನಟ ರಾಮ್ ಚರಣ್ ಅವರು ವಿದೇಶದಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಸದ್ಯ ರಾಮ್ ಚರಣ್ ಸಂದರ್ಶನ ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ, ರಾಮ್ ಚರಣ್ಗೆ ಗ್ಲೋಬಲ್ ಸ್ಟಾರ್ ಎನ್ನುವ ಸ್ಟಾರ್ ಪಟ್ಟ ನೀಡಿದ್ದಾರೆ. ಎಬಿಸಿ ನಡೆಸಿದ ಜಿಎಂಎ3 ಕಾರ್ಯಕ್ರಮದಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ‘ನಾಟು ನಾಟು.. ಹಾಡಿನ ಬಗ್ಗೆ ಚರ್ಚೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಮ್ ಚರಣ್ ‘ಇದು ಆರಂಭ ಮಾತ್ರ’ ಎಂದಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. 10 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆ ಕಂಡಿದೆ. ಈ ವಿಡಿಯೋನ ರೀಟ್ವೀಟ್ ಮಾಡಿಕೊಂಡಿರುವ ಆನಂದ್ ಮಹಿಂದ್ರಾ ‘ಈ ವ್ಯಕ್ತಿ ಗ್ಲೋಬಲ್ ಸ್ಟಾರ್’ ಎಂದು ರಾಮ್ ಚರಣ್ ಅವರನ್ನು ಕರೆದಿದ್ದಾರೆ. ಆನಂದ್ ಮಹಿಂದ್ರಾ…
ನಟಿ ಮಲ್ಲಿಕಾ ಸಿಂಗ್ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ‘ರಾಧಾ ಕೃಷ್ಣ’ ಧಾರಾವಾಹಿಯಲ್ಲಿ ರಾಧೆ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮಲ್ಲಿಕಾ ಇದೀಗ ವಿನಯ್ ರಾಜ್ ಕುಮಾರ್ ಗೆ ಜೋಡಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಾಧೆ ಪಾತ್ರದಿಂದಾಗಿ ಮಲ್ಲಿಕಾ ಸಿಂಗ್ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ತಮ್ಮ ಚೊಚ್ಚಲ ಕನ್ನಡ ಸಿನಿಮಾದಲ್ಲಿ ಅವರು ವಿನಯ್ ರಾಜ್ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಮತ್ತು ನಟ ವಿನಯ್ ರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಪಾತ್ರವರ್ಗದ ಬಗ್ಗೆ ಈಗ ಅಪ್ಡೇಟ್ ಸಿಕ್ಕಿದೆ. ಮಲ್ಲಿಕಾ ಸಿಂಗ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಆ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ನಲ್ಲಿಲ ಭರ್ಜರಿ ಕಲೆಕ್ಷನ್ ಮಾಡಿ, ದಾಖಲೆಗಳನ್ನು ನಿರ್ಮಿಸಿದ ವಿಶ್ವಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡ, ಬಾಚಿಕೊಳ್ಳುತ್ತಿರುವ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದ್ದು ಇದಕ್ಕಾಗಿ ಚಿತ್ರತಂಡ ಹೊಸ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಡಿವಿವಿ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ನಲ್ಲಿ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಹಿಂದಿನ ಟ್ರೈಲರ್ನಲ್ಲಿ ಇಲ್ಲದ ಕೆಲವು ದೃಶ್ಯಗಳನ್ನು ಹೊಸ ಟ್ರೈಲರ್ ನಲ್ಲಿ ಸೇರಿಸಲಾಗಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆ ಆಗಿತ್ತು. ಆ ಟ್ರೈಲರ್ 3:15 ನಿಮಿಷಗಳಿತ್ತು. ಈಗ ಬಿಡುಗಡೆ ಆಗಿರುವ ಟ್ರೈಲರ್ 1:47 ನಿಮಿಷ ಮಾತ್ರವೇ ಇದೆ. ಮೂಲ ಟ್ರೈಲರ್ನಲ್ಲಿ ಕೆಲವು ಸಂಭಾಷಣೆಗಳು ಇದ್ದವು, ಆದರೆ ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಕೇವಲ ಆಕ್ಷನ್ ದೃಶ್ಯಗಳು ಹಾಗೂ ನಾಯಕರಿಬ್ಬರ ಗೆಳೆತನ ಸಾರುವ ದೃಶ್ಯದ ತುಣುಕಗಳಷ್ಟೆ ಇವೆ. ಮಾರ್ಚ್ 03 ರಂದು…
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿರುವ ಚಿನ್ನದ ದರ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರ ಜೇಬು ಸುಡುವಂತೆ ಮಾಡಿದೆ. ದೃಢವಾದ ಜಾಗತಿಕ ದರಗಳ ಬೆಂಬಲದೊಂದಿಗೆ ಭಾರತೀಯ ಫ್ಯೂಚರ್ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನದ ಬೆಲೆಗಳು ಮತ್ತೊನ್ನೆ ದಾಖಲೆಯ ಮಟ್ಟಕ್ಕೆ ತಲುಪಿವೆ. ಎಂಸಿಎಕ್ಸ್‌ನಲ್ಲಿ ಗೋಲ್ಡ್ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟದಲ್ಲಿ ಶೇ. 0.3ರಷ್ಟು ಏರಿಕೆ ಕಂಡು 10 ಗ್ರಾಂಗೆ 56,850 ರೂ.ಗೆ ಏರಿಕೆಯಾಗಿವೆ. ಮತ್ತು ಬೆಳ್ಳಿಯು ಕೆಜಿಗೆ 68,743 ರೂ.ಗೆ ಏರಿಕೆ ಕಂಡಿತ್ತು. ಡಾಲರ್ ಮತ್ತು ಅಮೆರಿಕದ ಟ್ರೆಷರಿ ಇಳುವರಿಯಲ್ಲಿನ ಕುಸಿತದಿಂದ ನವೆಂಬರ್ ಆರಂಭದಿಂದಲೂ ಚಿನ್ನದ ಬೆಲೆ ಏರುತ್ತಲೇ ಇದೆ. ನವೆಂಬರ್ ಆರಂಭದಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 6,000 ರೂ.ನಷ್ಟು ಏರಿಕೆ ಕಂಡಿದೆ. “ಪ್ರಸಕ್ತ ವರ್ಷ ಚಿನ್ನದ ದರ ಏರುಗತಿಯಲ್ಲಿಯೇ ಮುಂದುವರಿಯಲಿದೆ. ಬಡ್ಡಿ ದರವು ಅಮೆರಿಕದಲ್ಲಿ ಇಳಿಕೆಯಾಗುವ ಅವಕಾಶಗಳಿವೆ. ಹೀಗಾಗಿ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಚಿನ್ನದ ದರ…
ನಾವು ಭಾರತೀಯರು ತುಂಬಾ ಅದೃಷ್ಟವಂತರು. ಏಕೆಂದರೆ, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ, ಅನೇಕ ಆಯುರ್ವೇದ ಗಿಡಮೂಲಿಕೆಗಳು ಮತ್ತು ಆರೋಗ್ಯಕರ ಪದಾರ್ಥಗಳು ನೈಸರ್ಗಿಕವಾಗಿ ಲಭ್ಯವಿವೆ. ಆದರೆ ದುರದೃಷ್ಟವಶಾತ್, ನಾವು ಅವರನ್ನು ಗುರುತಿಸುವುದಿಲ್ಲ. ಏಕೆಂದರೆ, ಅವುಗಳ ಉಪಯೋಗ ಮತ್ತು ಪ್ರಯೋಜನಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿಲ್ಲ. ಅಂತಹ ಆರೋಗ್ಯಕರ ವಸ್ತಗಳಲ್ಲಿ ಒಂದಾದ ಶುಂಠಿಯ ಪ್ರಯೋಜನಗಳನ್ನು ತಿಳಿದುಕೊಳ್ಳೊಣ ಬನ್ನಿ. ತಾಜಾ ಶುಂಠಿಯನ್ನು ಮಾತ್ರ ಅಡುಗೆ ಮತ್ತು ಚಹಾದಲ್ಲಿ ಬಳಸಲಾಗುತ್ತದೆ. ಆದರೆ, ಅರಿವಿನ ಕೊರತೆಯಿಂದ ನಾವು ಒಣಗಿದ ಶುಂಠಿಯನ್ನು ಎಸೆಯುತ್ತೇವೆ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ, ಸಂಪೂರ್ಣವಾಗಿ ಒಣಗಿದ ಶುಂಠಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಪುಡಿಯನ್ನು ಕಡ, ಚೂರಣ ರೂಪದಲ್ಲಿ ತೆಗೆದುಕೊಳ್ಳಬಹುದು. ಇದರಿಂದ ಆಗುವ ಆರೋಗ್ಯ ಪ್ರಯೋಜನಗಳಿವೆ. ಒಣ ಶುಂಠಿ ಪುಡಿ ಗರ್ಭಿಣಿ ಮಹಿಳೆಯರಿಗೆ ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿದೆ. ಏಕೆಂದರೆ, ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ…