ಪುಣೆ:- ವಿದ್ಯಾರ್ಥಿನಿಯೋರ್ವಳು ಗುಡ್ & ಬ್ಯಾಡ್ ಟಚ್ ಸೆಷನ್‌ನಲ್ಲಿ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. https://youtu.be/-Mo1vOTDQSI?si=AIuxiMS8p-bcFiss 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ನಡೆದ ಅತ್ಯಾಚಾರದ ಕಹಿ ಅನುಭವ ಬಿಚ್ಚಿಟ್ಟಿದ್ದು, ಪೊಲೀಸರು ಕೃತ್ಯ ಎಸಗಿದ 67 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ, ಆರೋಪಿ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆಕೆಯನ್ನು ತಡೆದು ಚಾಕೊಲೇಟ್ ನೀಡಿ ಪುಣೆಯ ಗ್ರಾಮೀಣ ಭಾಗದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಕರಾಳ ಅನುಭವವನ್ನು ವಿದ್ಯಾರ್ಥಿನಿ ಶಾಲೆಯಲ್ಲಿ ಗುಡ್ & ಬ್ಯಾಡ್ ಟಚ್ ಮಾಹಿತಿ ನೀಡುವಾಗ ಬಹಿರಂಗ ಪಡೆಸಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
Author: Prajatv Kannada
ಬೆಂಗಳೂರು:- ಆಸ್ತಿ ಸೇಫ್ಟಿಗಾಗಿ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಲಾಗಿದ್ದ, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ-ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡಬೇಕು. ಈ ಬಗ್ಗೆ ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಇನ್ನು ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸ್ತಿದ್ದಾರೆ ಇದು ವ್ಯವಸ್ಥಿತವಾಗಿ ದರೋಡೆ ಮಾಡುವ ಕೆಲಸ. ಈ ಬಗ್ಗೆ ದೂರು ಬಂದಿವೆ. ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ 3 ದಾಖಲೆ ಸಲ್ಲಿಸಬೇಕು. ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡಬೇಕು ಎಂದು ಮಾಹಿತಿ ನೀಡಿದರು. ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಿದ್ದೇವೆ. ಅಪಾಯಿಂಟ್‌ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೆ ಜನಜಂಗುಳಿಯಿತ್ತು. ಇನ್ಮುಂದೆ ಅಪಾಯಿಂಟ್‌ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ರಾಜ್ಯದಲ್ಲಿ 257 ಉಪನೋಂದಣಿ ಕಚೇರಿಗಳಿವೆ, 50…
ಸೂರ್ಯೋದಯ: 06:05, ಸೂರ್ಯಾಸ್ತ : 06:29 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ನವಮಿ ನಕ್ಷತ್ರ: ರೋಹಿಣಿ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಮ.12:28 ನಿಂದ ಮ.2:03 ತನಕ ಅಭಿಜಿತ್ ಮುಹುರ್ತ: ಬೆ.11:52 ನಿಂದ ಮ.12:42 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಮಂಗಳಕರ ವಾತಾವರಣ, ಕಳೆದಿರುವ ಫೈಲ್ ಮರಳಿ ಸಿಗಲಿದೆ, ನಾಪತ್ತೆಯಾದ ಶತ್ರು ಆಕಸ್ಮಿಕ ದರ್ಶನದಿಂದ ಮನಸು ತಲ್ಲಣ, ಹೊಸ ವ್ಯಾಪಾರ ಪ್ರಾರಂಭ,ಟ್ರಾವೆಲ್ ಏಜೆನ್ಸಿ ಅವರಿಗೆ ಆದಾಯ ಹೆಚ್ಚಾಗಲಿದೆ, ಉದ್ಯೋಗದಲ್ಲಿ…
ನಟಿ ತಮನ್ನಾ ಭಾಟಿಯಾ ನಟನೆಯ ಜೊತೆಗೆ ಮಾಡೆಲಿಂಗ್ ನಲ್ಲೂ ಖ್ಯಾತಿ ಘಳಿಸಿದ್ದಾರೆ. ಬಿಡುವು ಸಕ್ಕಾಗೆಲ್ಲಾ ತಮನ್ನಾ ರ್ಯಾಂಪ್ ಮೇಲೆ ಹೆಚ್ಚು ಹಾಕುತ್ತಿರುತ್ತಾರೆ. ಇದೀಗ ಈ ಮಿಲ್ಕಿ ಬ್ಯೂಟಿ ಚಂದದ ಫೋಟೋ ಶೂಟ್ ಮಾಡಿಸಿದ್ದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ನಟಿ ತಮನ್ನಾ ಭಾಟಿಯಾ ರಾಧೆಯಾಗಿದ್ದಾರೆ. ಆದರೆ ಇದು ಯಾವುದೋ ಸಿನಿಮಾ, ವೆಬ್ ಸರಣಿಗಾಗಿ ಅಲ್ಲ ಬದಲಿಗೆ ಜಾಹೀರಾತಿಗಾಗಿ. ತಮನ್ನಾ ಭಾಟಿಯಾರ ಕೆಲ ಸುಂದರ ಚಿತ್ರಗಳು ಇಲ್ಲಿವೆ. ನಟಿ ತಮನ್ನಾ ಭಾಟಿಯಾ ಜನಪ್ರಿಯ ಬಹುಭಾಷಾ ನಟಿ. ಅವರು ನಟಿಯಾಗಿ ಎಷ್ಟು ಜನಪ್ರಿಯರೊ ಮಾಡೆಲ್ ಆಗಿಯೂ ಅಷ್ಟೆ ಜನಪ್ರಿಯರು. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿಯೂ ತಮನ್ನಾ ಗಮನ ಸೆಳೆದಿದ್ದಾರೆ. ಆದರೆ ಇತ್ತೀಚೆಗೆ ತಮನ್ನಾ ಭಿನ್ನ ರೀತಿಯ ವಿಡಿಯೋ, ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಧೆ ಮತ್ತು ಗೋಪಿಕೆಯರ ವೇಷದಲ್ಲಿ ಯುವತಿಯರು ಸ್ನಾನ ಮಾಡುತ್ತಿರುವ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದರು. ಮುಂದುವರೆದು, ಕೃಷ್ಣ-ರಾಧೆ, ಕೃಷ್ಣನ ತುಂಟಾಟ, ಗೋಪಿಕೆಯರೊಟ್ಟಿಗೆ ಕೃಷ್ಣನ ಸರಸ ಇನ್ನಿತರೆ ದೃಶ್ಯಗಳ ವಿಡಿಯೋ ಹಾಗೂ…
ಚಿಕ್ಕಮಗಳೂರು:- ಪ್ರಯಾಣಿಕರಿಗೆ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ ಹಿನ್ನೆಲೆ, DRFO ಅಮಾನತು ಮಾಡಲಾಗಿದೆ. ನಕಲಿ ಟಿಕೆಟ್ ಸೃಷ್ಟಿಸಿ ಸಾವಿರಾರು ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತಿತ್ತು. ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್ ಲೈನ್ ಟಿಕೆಟ್ ನಕಲು ಮಾಡಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಚಂದನ್ ಅವರು ಈಗಾಗಲೇ ಸಾವಿರಾರು ಟ್ರೆಕ್ಕಿಂಗ್ ಟಿಕೆಟ್ ನಕಲು ಮಾಡಿ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಚಾರಣಕ್ಕೆ ಅವಕಾಶ ನೀಡದೆ, ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಅನ್ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿದೆ. ಅನ್ಲೈನ್ ಬುಕ್ಕಿಂಗ್ ಮಾಡಿಕೊಂಡು ಬಂದರೂ ಅವಕಾಶ ನೀಡುತ್ತಿಲ್ಲ ಎಂದು DRFO ಚಂದನ್ ವಿರುದ್ಧ ಪ್ರವಾಸಿಗರು ನಿರಂತರ ದೂರು ನೀಡಿದ್ದು ವಿಡಿಯೋ ಸಮೇತ ದೂರು ನೀಡಿದ್ದರು. ಕಳಸ ತಾಲೂಕಿನ ಅರಣ್ಯ…
ಉಡುಪಿ:- ಕಾರ್ಕಳ ಯುವತಿಯ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ. ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಸಿಕ್ಕಿದ್ದು ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ. ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ. ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಭಯ್ ಫೇಸ್ಬುಕ್ನಲ್ಲಿ MLA ಸುನೀಲ್ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ. ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ.
ಬೆಂಗಳೂರು:- ಇಂದಿನಿಂದ ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಕೆಯಾಗಲಿದ್ದು, ಈ ಮೂಲಕ ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ದುಬಾರಿ ಬೆಲೆಯ ಬ್ರಾಂದಿ, ವಿಸ್ಕಿ, ಜಿನ್, ರಮ್ ಅಗ್ಗವಾಗಲಿದೆ. ಅನ್ಯರಾಜ್ಯಕ್ಕಿಂತ ರಾಜ್ಯದಲ್ಲಿ ಪ್ರೀಮಿಯಂ ಮದ್ಯಗಳ ಬ್ರ್ಯಾಂಡ್ ದರ ಹೆಚ್ಚಳವಿತ್ತು. ಹೀಗಾಗಿ ಗಡಿ ಬಾಗದ ಜನ ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿ ಮಾಡುತ್ತಿದ್ದರು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಆಗುತ್ತಿತ್ತು. ಈ ನಷ್ಟ ಸರಿದೂಗಿಸಲು ಮದ್ಯ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, ಇಂದಿನಿಂದ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಪ್ರೀಮಿಯಂ ಮದ್ಯಗಳ ಬ್ರ್ಯಾಂಡ್ ದರ ಕಡಿಮೆ ಮಾಡುವುದರೊಂದಿಗೆ ಗಡಿಯಾಚೆಗಿನ ಮದ್ಯದ ಖರೀದಿಯನ್ನು ತಡೆಯಲು ಮಾತ್ರವಲ್ಲದೆ ಸ್ಥಳೀಯ ಮಾರಾಟವನ್ನು ಹೆಚ್ಚಿಸುವ ಮೂಲಕ ರಾಜ್ಯದ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ, ಉಪಾಧ್ಯಕ್ಷ ಕರುಣಾಕರ ಹೆಗ್ಡೆ, ಹಲವು ಡಿಸ್ಟಿಲರಿಗಳು ಈಗ ಹೆಚ್ಚಿನ ವೆಚ್ಚದಲ್ಲಿ ಉತ್ಪಾದಿಸುವುದರಿಂದ ನಷ್ಟದ ಭಯದಿಂದ ಉತ್ಪಾದನೆಯನ್ನು ನಿಲ್ಲಿಸಿವೆ ಮತ್ತು ಅಧಿಸೂಚನೆ ಪ್ರಾರಂಭವಾದ…
ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆ, ಇಂದು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜಭವನ ಚಲೋಗೆ ಕರೆ ನೀಡಲಾಗಿದೆ. https://youtu.be/MjDRgsp96UU?si=wKrTZ3EL0vww_6dK ಸಿಎಂ ಪರವಾಗಿ ನಡೆಯುತ್ತಿರುವ ಶೋಷಿತ ವರ್ಗಗಳ ಒಕ್ಕೂಟದ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಲಿದ್ದಾರೆ. ಇಂದು ರೈಲು, ಬಸ್ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇರುವುದರಿಂದ ಇಂದು ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ. ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆ ಇದೆ. ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ಮೊದಲು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಬಳಿಕ ರಾಜಭವನ ಚಲೋ ನಡೆಸಲಾಗುತ್ತೆ. ಇನ್ನ, ಸಿಎಂ ಪರವಾಗಿ ನಡೆಯುತ್ತಿರುವ ಈ ಪ್ರತಿಭಟನೆ ಶೋಷಿತ ಸಮುದಾಯಗಳ ಒಕ್ಕೂಟದ ಬ್ಯಾನರ್ ಅಡಿಯಲ್ಲಿ ನಡೆಯುತ್ತಿದೆ. ರಾಜಭವನ ಚಲೋಗೆ…
ಯುದ್ಧ ಪೀಡಿತ ಸುಡಾನ್‌ನಲ್ಲಿ ಕಳೆದ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟು ಒಡೆದು ಕನಿಷ್ಠ 60 ಜನರು ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಕೊಚ್ಚಿಹೋಗಿದೆ. ಅಣೆಕಟ್ಟು ಒಡೆದ ಪರಿಣಾಮ ಸುಮಾರು 20 ಹಳ್ಳಿಗಳಿಗೆ ನೀರು ನುಗ್ಗಿದ್ದು 50 ಸಾವಿರ ಮನೆಗಳು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ. ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕರಾವಳಿ ನಗರವಾದ ಪೋರ್ಟ್ ಸುಡಾನ್‌ನ ಕುಡಿಯುವ ನೀರಿನ ಮುಖ್ಯ ಮೂಲವಾಗಿತ್ತು. ಕೊಚ್ಚಿಕೊಂಡು ಹೋದ ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೆರೆಗೆ ವಿದ್ಯುತ್ ಕಂಬ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 150 ರಿಂದ 200 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಘರ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅದ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಬೈಡನ್, ‘ಭಾರತ ಪ್ರಧಾನಿಯ ಇತ್ತೀಚಿಗಿನ ಪೋಲೆಂಡ್ ಹಾಗೂ ಉಕ್ರೇನ್ ಭೇಟಿ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಹೇಳಿದ್ದಾರೆ. ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ ಮತ್ತು ಶಾಂತಿಯ ಸಂದೇಶಕ್ಕಾಗಿ ಮೋದಿ ಅವರನ್ನು ಶ್ಲಾಘಿಸಿರುವುದಾಗಿ ಅವರು ತಿಳಿಸಿದ್ದಾರೆ. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಒಟ್ಟಾಗಿ ಕೆಲಸ ಮಾಡಲು ನಮ್ಮ ಬದ್ಧತೆಯನ್ನು ಒತ್ತಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ತಮ್ಮ ಈಚೆಗಿನ ಉಕ್ರೇನ್ ಭೇಟಿ ಕುರಿತು ವಿವರಿಸಿದ್ದಾರೆ. ‘ಉಕ್ರೇನ್‌ನಲ್ಲಿನ ಪರಿಸ್ಥಿತಿ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು…