Author: Prajatv Kannada
ಭಾರತದಲ್ಲಿ ಕರ್ತವ್ಯ ನಿರತರಾಗಿದ್ದ ಬಾಂಗ್ಲಾದೇಶದ ಇಬ್ಬರು ರಾಜತಾಂತ್ರಿಕರನ್ನು ಕರ್ತವ್ಯದಿಂದ ವಜಾಗೊಳಿಸಿ ಬಾಂಗ್ಲಾದೇಶದ ಮಧ್ಯಾಂತರ ಸರ್ಕಾರ ಆದೇಶ ಹೊರಡಿಸಿದೆ. ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈ ಕಮಿಷನ್ ನಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಷಾಬಾನ್ ಮಹ್ಮುದ್ ಹಾಗೂ ಕೋಲ್ಕತಾದಲ್ಲಿರುವ ಬಾಂಗ್ಲಾದೇಶ ಕಾನ್ಸುಲೇಟ್ ನಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದ ರಂಜನ್ ಸೇನ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿರುವುದಾಗಿ ಬಾಂಗ್ಲಾದೇಶ ಮಧ್ಯಾಂತರ ಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲಿ ನಡೆದ ಭಾರೀ ಪ್ರತಿಭಟನೆ ನಂತರ ಪ್ರಧಾನಮಂತ್ರಿ ಶೇಕ್ ಹಸೀನಾ ಪದಚ್ಯುತಗೊಂಡ ಬಳಿಕ ಹಿಂಸಾಚಾರ ನಡೆದಿತ್ತು. ರಾಜಕೀಯದ ಬೆಳವಣಿಗೆಯಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನೂಸ್ ನೇತೃತ್ವದಲ್ಲಿ ಮಧ್ಯಾಂತರ ಸರ್ಕಾರ ರಚನೆಯಾಗಿದೆ. ರಾಜಧಾನಿ ಢಾಕಾದಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ ಪರಿಣಾಮ ಆಗಸ್ಟ್ 5ರಂದು ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪರಾರಿಯಾಗಿದ್ದರು. ಮಾನವ ಹಕ್ಕು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಶೇಖ್ ಹಸೀನಾ ಅವರ 15 ವರ್ಷದ ಆಡಳಿತ ಕೊನೆಗೊಂಡಂತಾಗಿದೆ. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 450ಕ್ಕೂ…
ಬಸ್ಸು, ಟ್ರಕ್ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಕನಿಷ್ಠ 23 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ದಲ್ಲಿ ನಡೆದಿದೆ. ʼʼಬಲೂಚಿಸ್ತಾನ ಪ್ರಾಂತ್ಯದ ಮುಸಖೈಲ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹಲವು ಬಸ್ಸುಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳನ್ನು ನಿಲ್ಲಿಸಿ ಅದರಲ್ಲಿನ ಪ್ರಯಾಣಿಕರ ಜನಾಂಗೀಯತೆಯನ್ನು ಪರಿಶೀಲಿಸಿದ ನಂತರ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ “ಪಂಜಾಬ್ ಮತ್ತು ಬಲೂಚಿಸ್ತಾನವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭಯೋತ್ಪಾದಕರು ಹಲವು ಬಸ್ಸುಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ” ಎಂದು ಮುಸಖೈಲ್‌ನ ಹಿರಿಯ ಅಧಿಕಾರಿ ನಜೀಬುಲ್ಲಾ ಕಾಕರ್ ಹೇಳಿದ್ದಾರೆ. ಮುಸಖೈಲ್‌ನ ರಾರಾಶಮ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಹೆದ್ದಾರಿಯನ್ನು ತಡೆದು ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದು, ಈ ವೇಳೆ 10 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ…
ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಗೆ ಭಾರತೀಯ ಮೂಲದ ವೈದ್ಯರೊಬ್ಬರು ಕೊನೆಯುಸಿರೆಳೆದಿದ್ದಾರೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ವೈದ್ಯ ಡಾ.ರಮೇಶ ಪೆರಮಶೆಟ್ಟಿ ಅವರನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿದೆ. ಮೃತ ಡಾ.ರಮೇಶ ಪೆರಮಶೆಟ್ಟಿ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಡಾ.ರಮೇಶ ಪೆರಮಶೆಟ್ಟಿ ಸ್ಥಳೀಯ ವೈದ್ಯಕೀಯ ವೃತ್ತಿಪರರ ಗುಂಪು ಕ್ರಿಮ್‌ಸನ್ ಕೇರ್ ನೆಟ್‌ವರ್ಕ್ ನ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕರಾಗಿದ್ದರು. ಆರೋಗ್ಯ ರಕ್ಷಣೆಗೆ ನೀಡಿದ ಕೊಡುಗೆಗಳಿಂದ ಹೆಚ್ಚು ಖ್ಯಾತಿ ಗಳಿಸಿದ್ದ ಅವರು, ಟಸ್ಕಲೂಸಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ.ರಮೇಶ ಪೆರಮಶೆಟ್ಟಿ ಅವರ ನಿಧನದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಕ್ರಿಮ್‌ಸನ್ ಕೇರ್ ನೆಟ್‌ವರ್ಕ್ ಸಂತಾಪ ಸೂಚಿಸಿದೆ. ʼʼಈ ಕ್ಷಣದಲ್ಲಿ ಅನೇಕರಿಗೆ ತಿಳಿದಿರುವಂತೆ ಡಾ.ರಮೇಶ್ ಪೆರಂಸೆಟ್ಟಿ ಅವರ ನಿಧನದ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಪೆರಮಶೆಟ್ಟಿ ಅವರ ಕುಟುಂಬವು ತೀವ್ರ ದುಃಖದಲ್ಲಿದ್ದು, ಖಾಸಗಿತನಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದೆ. ಪೆರಮಶೆಟ್ಟಿ ಅವರು ಜನರಿಂದ ಹೇರಳವಾದ ಪ್ರೀತಿ ಮತ್ತು ನಂಬಿಕೆಯನ್ನು ಪಡೆದಿದ್ದಾರೆ. ಅವರು ಬಯಸಿದಂತೆ ನಾವು ಅವರನ್ನು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಸಂಕಷ್ಟಗಳ ಮೇಲೆ ಸಂಕಷ್ಟು ಎದುರಾಗುತ್ತಿದೆ. ಜೈಲಿನಲ್ಲಿ ಹಾಯಾಗಿರುವ ದರ್ಶನ್ ಫೋಟೋವೊಂದು ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ದರ್ಶನ್ ವಿಚಾರದಲ್ಲಿ ಪರಪ್ಪನ ಅಗ್ರಹಾರ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಮಾತು ಕೇಳಿ ಬರ್ತಿದ್ದು ಪ್ರಕರಣ ಸಂಬಂಧ ಈಗಾಗಲೇ 7 ಮಂದಿ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆ ಮೂಲಕ ಕಾನೂನಿನ ಉಲ್ಲಂಘನೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಈ ಮೂರೂ ಎಫ್ಐಆರ್ಗಳಲ್ಲಿ ನಟ ದರ್ಶನ್ ಹೆಸರು ಪ್ರಸ್ತಾಪ ಆಗಿದ್ದು, ಇದರಿಂದ ದರ್ಶನ್ ಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಜೈಲಿನಲ್ಲಿ ದುಡ್ಡು ಇರುವ ವ್ಯಕ್ತಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದನ್ನು ಸಾಕ್ಷಿ ಎಂಬಂತೆ ದರ್ಶನ್ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್…
ನಾವು ಆಹಾರವನ್ನು ಸೇವಿಸಿದ ತಕ್ಷಣ ನೀರು ಕುಡಿದಾಗ, ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ತುಂಬಾ ಶ್ರಮಿಸಬೇಕಾಗುತ್ತದೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಈ ಕಾರಣದಿಂದಾಗಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ತಿಂದ ನಂತರ ತಣ್ಣೀರನ್ನು ಕುಡಿಯಬಾರದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಅಡ್ಡಿಪಡಿಸುತ್ತದೆ ಮತ್ತು ಆಹಾರವು ಜೀರ್ಣವಾಗದೆ ಉಳಿಯುತ್ತದೆ. ನೀರು ಕುಡಿಯಬೇಕಾದರೂ ಒಂದು ಅಥವಾ ಎರಡು ಗುಟುಕು ಮಾತ್ರ ಕುಡಿಯಬೇಕು ಎನ್ನುತ್ತಾರೆ ತಜ್ಞರು. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ ಏಕೆಂದರೆ ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸಿದ ಅರ್ಧ ಘಂಟೆಯ ನಂತರ ಮಾತ್ರ ನೀರನ್ನು ಕುಡಿಯಿರಿ. ಇದರೊಂದಿಗೆ, ತಿಂದ ತಕ್ಷಣ ಮಲಗಬೇಡಿ, ಇದು ಜೀರ್ಣಕ್ರಿಯೆಯ ವೇಗವನ್ನು ಸಹ ನಿಧಾನಗೊಳಿಸುತ್ತದೆ. ಆಹಾರ ಸೇವಿಸಿದ ನಂತರ ಎರಡು-ಮೂರು ಗುಟುಕು ನೀರು ಕುಡಿದು ಸ್ವಲ್ಪ ಹೊತ್ತು ನಡೆದು ಅರ್ಧ ಗಂಟೆಯ ನಂತರ ಒಂದು ಲೋಟ ನೀರು ಕುಡಿಯಿರಿ, ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುವುದಿಲ್ಲ. ತಿನ್ನುವ ಅರ್ಧ ಗಂಟೆ…
ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ವೈರಲ್ ಆಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ದುಡ್ಡಿದ್ದರೆ ಜೈಲಿನಲ್ಲಿ ಏನು ಬೇಕಾದ್ರು ಸಿಗುತ್ತದೆ ಎನ್ನುವಂತೆ ಮಾಡಿದೆ ಇದೋಂದು ಫೋಟೋ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಜಿ&ಐಜಿಪಿ ಅಲೋಕ್ ಮೋಹನ್ ಅವರಿಂದ ಮಾಹಿತಿ ಪಡೆದು ಖಡಕ್ ಸೂಚನೆ ನೀಡಿದರು. ಕೂಡಲೆ ದರ್ಶನ ಮತ್ತು ಇತರರನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, “ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದೇನೆ. “ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಹಾಗೂ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ…
ಗರ್ಭಧರಿಸಲು ನಿರ್ಧರಿಸುವವರಿಗೆ ಪಾಸಿಟಿವ್ ವರದಿ ಬರಬೇಕೆಂದರೆ ಒಟ್ಟು 185 ದಿನಗಳು ಬೇಕಾಗುತ್ತದೆ. ಇದು ಆರು ತಿಂಗಳು, ಮೂರು ದಿನಗಳಿಗೆ ಸಮಾನವಾಗಿರುತ್ತದೆ. ಮತ್ತೊಂದು ಅಧ್ಯಯನವು 1,194 ಪೋಷಕರನ್ನು ಸಮೀಕ್ಷೆ ಮಾಡಿತು. ಹೆಚ್ಚಿನ ಮಹಿಳೆಯರು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ತಿಂಗಳಿಗೆ 13 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುಗರ್ಭಧರಿಸಲು ನಿರ್ಧರಿಸುವವರಿಗೆ ಪಾಸಿಟಿವ್ ವರದಿ ಬರಬೇಕೆಂದರೆ ಒಟ್ಟು 185 ದಿನಗಳು ಬೇಕಾಗುತ್ತದೆ. ಇದು ಆರು ತಿಂಗಳು, ಮೂರು ದಿನಗಳಿಗೆ ಸಮಾನವಾಗಿರುತ್ತದೆ. ಮತ್ತೊಂದು ಅಧ್ಯಯನವು 1,194 ಪೋಷಕರನ್ನು ಸಮೀಕ್ಷೆ ಮಾಡಿತು. ಹೆಚ್ಚಿನ ಮಹಿಳೆಯರು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ತಿಂಗಳಿಗೆ 13 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುದು ಕಂಡುಬಂದಿದೆ.ಲೈಂಗಿಕ ಕ್ರಿಯೆ ಮೋಜಿನಂತೆ ತೋರುತ್ತದೆಯಾದರೂ, ಗರ್ಭಧರಿಸಲು ಪ್ರಯತ್ನಿಸುವವರಿಗೆ ಕೆಲವು ಆತಂಕಗಳು ಎದುರಾಗುತ್ತವೆ. ಗರ್ಭಧರಿಸಲು ಪ್ರಯತ್ನಿಸುವಾಗ ಲೈಂಗಿಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತೆ ಭಾಸವಾಗುತ್ತದೆ ಎಂದು ಅನೇಕ ಜನರು ಒಪ್ಪಿಕೊಂಡಿದ್ದಾರೆ. 43 ಪ್ರತಿಶತದಷ್ಟು ಜನರು ಗರ್ಭಧರಿಸಲು ಒತ್ತಡವನ್ನು ಅನುಭವಿಸಿದ್ದಾರೆ. ಹಾಗೆಯೇ ಇದನ್ನೆಲ್ಲಾ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿದ್ದಾರೆ. ಗರ್ಭ ಧರಿಸುವುದೆಂದರೆ ಅದೊಂದು ಕಠಿಣ…
ಮಂಡ್ಯ: ಹುಬ್ಬಳ್ಳಿ, ಮಂಡ್ಯದಲ್ಲಿ ತಮ್ಮ ವಿರುದ್ಧ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನ ಬಿಜೆಪಿ ಅವರು ಹಾಳು ಮಾಡುತ್ತಿದ್ದಾರೆ. ಯತ್ನಾಳ್ ಅವರೇ ಗಂಭೀರ ಆರೋಪ ಮಾಡಿದ್ರು ಅವರ ಮೇಲೆ ದೂರು ಕೊಡಲಿ. ಶ್ರೀನಿವಾಸ್ ಹೇಳಿದ್ರು ಅವರ ಮೇಲೂ ದೂರು ಕೊಡಲಿ ಎಂದು ಕಿರಿಕಾರಿದರು. ಇನ್ನೂ ಕೈ ಶಾಸಕರ ಖರೀದಿಗೆ ತಲಾ 100 ಕೋಟಿ ಆಫರ್ ಬಗ್ಗೆ ನನ್ನ ಬಳಿ ದಾಖಲಿ ಇದೆ. ಬಿಜೆಪಿ ಅವರಿಗೆ ನೈತಿಕತೆ ಇದ್ದರೆ ಸಿಎಂ, ಗೃಹಸಚಿವರಿಗೆ ದೂರು ಕೊಡಲಿ. ನಮ್ಮ ಬಳಿ ಇರುವ ದಾಖಲೆ ಕೊಡುತ್ತೇನೆ. ಯಾವ ಹೋಟೆಲ್ ನಲ್ಲಿ ಕುಳಿತು ಮಾತನಾಡಿದ್ದಾರೆ ಎಂಬ ಬಗ್ಗೆ ದಾಖಲೆ ಕೊಡುತ್ತೇನೆ ಎಂದು ಹೇಳಿದರು.
ಹುಬ್ಬಳ್ಳಿ: 24 ವರ್ಷದ ಯುವಕನಿಂದ 15 ವರ್ಷದ ಬಾಲಕನ ಮೇಲೆಯೇ ಅತ್ಯಾಚಾರ ನಡೆದಿರುವ ಘಟನೆ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಸುಮ್ ಹುಲಮನಿ ಎಂಬಾತನಿಂದ ಕೃತ್ಯ ನಡೆದಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಸುಮ್ ಹುಲಮನಿ, ಮೊಬೈಲ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಮಾಸುಮ್ ಹಲುಮನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.