ವಿಜಯನಗರ: ಪಟ್ಟಿರುವ ಘಟನೆ ಹೊಸಪೇಟೆ ನಗರದ ಅನಂತಶಯನ ಗುಡಿ ಬಡಾವಣೆಯಲ್ಲಿ ನಡೆದಿದೆ. ಇನ್ನೂ ಘಟನೆ ಸಂಬಂಧ ಸಿಡಿದೆದ್ದ ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳುಹೊಸಪೇಟೆ ನಗರಸಭೆ ಕಚೇರಿ ಎದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಧರಣಿಯಲ್ಲಿ ಸಾವನ್ನಪ್ಪಿದ ಮಗು ವಿರಾಟ್ ತಂದೆ ಮರ್ಚಿತ್ ತಾಯಿ ಹರ್ಷಿತಾ ಸೇರಿ ಕುಟುಂಬಸ್ಥರು ಜೊತೆಗೆ ಹೊಸಪೇಟೆ ನಗರಸಭೆ 35 ಸದಸ್ಯರು ಭಾಗಿಯಾಗಿದ್ದು ವಿರಾಟ್ ಸಾವನ್ನಪ್ಪುವುದಕ್ಕೂ ಮುಂಚೆ 15 ದಿನಗಳ ಹಿಂದೆ ವಾರ್ಡ್ ಸದಸ್ಯೆ ಪೌರಾಯುಕ್ತ ಚಂದ್ರಪ್ಪ ಗಮನಕ್ಕೆ ತಂದ್ರೂ ಚರಂಡಿ ಗುಂಡಿಮುಚ್ಚದೇ ನಿರ್ಲಕ್ಷ ವಹಿಸಿದ್ದಾರೆ. ಕೂಡಲೇ ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪರನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ದು, ಪ್ರತಿಭಟನಾನಿರತ ನಗರಸಭೆ ಸದಸ್ಯರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದ್ದಾರೆ.
Author: Prajatv Kannada
ಚಿತ್ರದುರ್ಗ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಗೆ ರಾಜಾಥಿತ್ಯ ಸಿಗರೇಟ್ ಸೇದುವುದು ಕಂಡು ಶಾಕ್ ಆಗಿದ್ದು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರ ಮೇಲೆ & ಸರ್ಕಾರದ ಮೇಲೆ ನಂಬಿಕೆ ಇದೆ. ಇದನ್ನ ನೋಡಿ ನಮಗೆ ಶಾಕ್ ಆಯ್ತು ಎಂದು ಮೃತ ರೇಣುಕಾ ಸ್ವಾಮಿ ತಂದೆ ಶಿವನಗೌಡರ್ ಕಣ್ಣಿಟ್ಟಿದ್ದಾರೆ. ಇದು ಸಮಗ್ರವಾಗಿ ಇದು ಕೂಡಾ ತನಿಖೆ ಆಗಲಿ.ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡಲಿ.ಯಾರಾದ್ರೂ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು. ಮಾಧ್ಯಮಗಳು ಎಲ್ಲವನ್ನು ಯಲಿಗೆಳೆಯುತ್ತವೆ : ನಟ ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಒಂದೇ ವಿಚಾರಗಳನ್ನು ಬೈಲಿಗೆಳೆಯುತ್ತಿವೆ. ಈ ಮೂಲಕ ಎಲ್ಲರಿಗೂ, ಸರ್ಕಾರಕ್ಕೂ ಎಚ್ಚರಿಕೆ ಕೊಡ್ತದ್ದಿರಾ, ತಮಗೂ ಕೂಡಾ ತುಂಭಾ ಧನ್ಯವಾದ, ಸರ್ಕಾರ ಕೂಡ ಗಮನ ಹರಿಸಬೇಕು ಎಂದರು. ನ್ಯಾಯಾಂಗ ಇದೆ, ಚಾರ್ಜ್ ಶೀಟ್ ಹಾಕಿದ ಬಳಿಕ ಗೊತ್ತಾಗುತ್ತದೆ. ಜಡ್ಜ್ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪೂರ್ಣ ನಂಬಿಕೆ ಇದೆ ಎಂದು ಶಿವನಗೌಡ…
ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಅತ್ಯಂತ ಪ್ರಸಿದ್ದ ಹಬ್ಬಗಳಲ್ಲಿ ಒಂದು. https://youtu.be/H4OAcGIHnNI?si=k4QAZiaUIpqNZU-G ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ ಒಂಭತ್ತನೇ ಅವತಾರವಾದ ಶ್ರೀಕೃಷ್ಣನು ಈ ದಿನ ಜನಿಸಿದನು. ಆದ್ದರಿಂದ ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. 2024 ರ ಶ್ರೀಕೃಷ್ಣ ಜನ್ಮಾಷ್ಟಮಿಯ ಕುರಿತು ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.. ಕೃಷ್ಣ ಜನ್ಮಾಷ್ಟಮಿ 2024 ಶುಭ ಮುಹೂರ್ತ – ಅಷ್ಟಮಿ ತಿಥಿ ಆರಂಭ: 2024 ರ ಆಗಸ್ಟ್ 26 ರಂದು ಮುಂಜಾನೆ 3:39 ರಿಂದ – ಅಷ್ಟಮಿ ತಿಥಿ ಮುಕ್ತಾಯ: 2024ರ ಆಗಸ್ಟ್ 27 ರಂದು ಮುಂಜಾನೆ 2:19 – ರೋಹಿಣಿ ನಕ್ಷತ್ರ ಆರಂಭ: 2024 ರ ಆಗಸ್ಟ್ 26 ರಂದು ಮಧ್ಯಾಹ್ನ 3:55 – ರೋಹಿಣಿ…
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಮೂರು ತಿಂಗಳಾಗುತ್ತಾ ಬಂದಿದೆ. ಜೂನ್ 11 ರಂದು ಮೈಸೂರಿನಲ್ಲಿ ನಟ ದರ್ಶನ್ ಬಂಧನವಾಗಿತ್ತು. ದರ್ಶನ್, ಕೊಲೆ ಪ್ರಕರಣ ಒಂದರಲ್ಲಿ ಬಂಧನಕ್ಕೆ ಒಳಗಾಗುತ್ತಾರೆ ಎಂದು ಯಾರೂ ಸಹ ನಿರೀಕ್ಷಿಸಿರಲಿಲ್ಲ. https://youtu.be/poC1P8XtCvo?si=wXzuRYRoHECxzkXo ದರ್ಶನ್ ಅನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದಾಗ ಹಲವರಿಗೆ ಆಶ್ಚರ್ಯವಾಗಿತ್ತು. ಇದೀಗ ತನಿಖೆ ಬಲು ಚುರುಕಾಗಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವ ಈ ಸಮಯದಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. 65 ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಪರಪ್ಪನ ಅಗ್ರಹಾರದಲ್ಲಿ ಕುಳಿತು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಪ್ಲಾಸ್ಟಿಕ್ ಚಯರ್ ನಲ್ಲಿ ಕುಳಿತುಕೊಂಡಿರುವ ದರ್ಶನ್, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ…
ಹಿಂದೂಗಳ ಹಬ್ಬವಾದ ಜನ್ಮಾಷ್ಟಮಿಯನ್ನು ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಕೃಷ್ಣನ ಜನ್ಮ ದಿನವೆಂದು ಆಚರಿಸಲಾಗುವುದು. 2024 ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26 ರಂದು ಆಚರಿಸಲಾಗುವುದು. ಈ ಶುಭ ದಿನದಂದು ಜನರು ಶ್ರೀಕೃಷ್ಣನನ್ನು ಪೂಜಿಸಿ, ಮಂತ್ರ, ಭಜನೆಯನ್ನು ಹಾಡಿ, ಉಪವಾಸ ವ್ರತವನ್ನು ತೆಗೆದುಕೊಳ್ಳುತ್ತಾರೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವ ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಪ್ರಯೋಜನ ಪಡೆಯುತ್ತಾರೆ. ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವವರು ಯಾವಾಗಲೂ ಸಮೃದ್ಧಿ ಮತ್ತು ಸಂಪತ್ತನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಕೃಷ್ಣ ಜನ್ಮಾಷ್ಟಮಿ ಉಪವಾಸವು ಮೋಕ್ಷವನ್ನು ಸಾಧಿಸಲು ಸಂಬಂಧಿಸಿದೆ, ಇದನ್ನು ನಿರ್ವಾಣ ಎಂದೂ ಕರೆಯುತ್ತಾರೆ. ಅಂದರೆ ಕರ್ಮದ ಚಕ್ರಗಳಿಂದ ತಪ್ಪಿಸಿಕೊಳ್ಳುವುದು. ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳಿವೆ. ಬೇಗ ಎದ್ದೇಳಿ ನಮ್ಮ ಮಾನಸಿಕ…
ಗಾಜಿಯಾಬಾದ್:- ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಕಾಮುಕನೊಬ್ಬ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಜರುಗಿದ್ದು, ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಆರೋಪಿಯನ್ನು ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಗಾಜಿಯಾಬಾದ್‌ನ ಮೋದಿನಗರದಲ್ಲಿ ನಿವಾಸಿ ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸುರೇಂದ್ರ ಸಿಂಗ್ ಮುಗ್ಧ ಪ್ರಾಣಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಸುರಭಿ ರಾವತ್ ಎಂಬುವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ದುಷ್ಕೃತ್ಯಗಳನ್ನು ಕೇವಲ ಪ್ರಾಣಿಗಳ ಕ್ರೌರ್ಯ ಎಂದು ವರ್ಗೀಕರಿಸಬಾರದು. ಕಠಿಣ ಕಾನೂನು ಕ್ರಮದ ಅಗತ್ಯವಿದೆಯೇ ಎಂದು ಹೇಳಿದ್ದಾರೆ. ಘೋರ ವರ್ತನೆಗಾಗಿ ಆ ವ್ಯಕ್ತಿಯನ್ನು ಜೈಲಿಗೆ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಪೋಸ್ಟ್ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಜೊತೆಗೆ ಗ್ರಾಮೀಣ ಡಿಸಿಪಿ, ಗಾಜಿಯಾಬಾದ್ ಪೊಲೀಸ್ ಮತ್ತು ಯುಪಿ ಪೊಲೀಸರು ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಲಾಗಿದೆ. ಪ್ರಾಣಿಗಳ ಮೇಲಿನ ಇಂತಹ ದೌರ್ಜನ್ಯಗಳ ವಿರುದ್ಧ ಸಮಾಜವು ಧ್ವನಿ ಎತ್ತದಿದ್ದರೆ ಈ ರಾಕ್ಷಸರು ಮುಂದೆ ದುರ್ಬಲ ಮಕ್ಕಳು ಮತ್ತು…
ಕೃಷ್ಣ ಜನ್ಮಾಷ್ಟಮಿ ಸೂರ್ಯೋದಯ: 06:05, ಸೂರ್ಯಾಸ್ತ : 06:30 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ಅಷ್ಟಮಿ ನಕ್ಷತ್ರ: ಕೃತಿಕಾ ರಾಹು ಕಾಲ:07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ: ಮ.1:36 ನಿಂದ ಮ.3:09 ತನಕ ಅಭಿಜಿತ್ ಮುಹುರ್ತ: ಬೆ.11:52 ನಿಂದ ಮ.12:42 ತನಕ ಮೇಷ ರಾಶಿ: ಹೋಟೆಲ್ ಉದ್ಯಮದಾರರಿಗೆ ಧನ ಲಾಭ ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು. ಹೊಸ ಉದ್ಯಮ ಪ್ರಾರಂಭ…
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಇತ್ತೀಚೆಗೆ ಕರೆದ ಸಮಾಜದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಅಶೋಕ ನಾಯ್ಕ, ಸದಾನಂದ ಗಾಂವಕರ, ಸಹಕಾರ್ಯದರ್ಶಿಯಾಗಿ ಮಾರುತಿ ಪವಾರ, ಮಲ್ಲಿನಾಥ ರಾಣಿ, ಕೋಶಾಧ್ಯಕ್ಷರಾಗಿ ಸುನೀಲ ನಾಯ್ಕ ಆಯ್ಕೆಯಾದರು. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂಜೀವ ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಗಾಂವಕಾರ, ವಿನೋದ ಸೈಲ್, ಜಗದೀಶ ರಾಣಿ, ರಾಜಶೇಖರ ನಾಯ್ಕ, ಕೃಷ್ಣಾ ದೇಸಾಯಿ, ರಾಜೀವ ನಾಯ್ಕ, ಅರುಣಕುಮಾರ ಸಾಳುಂಕೆ, ಬೀಜೇಶ ಸಾವಂತ, ಸಂಜೀವ ನಾಯ್ಕ, ಪ್ರಕಾಶ ಪವಾರ ಆಯ್ಕೆಯಾಗಿದ್ದಾರೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಜೈಲು ಸೇರಿರುವ ಆರೋಪಿಗಳು ಹಾಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಗಳು ಸಿಗುತ್ತಿವೆ. ದರ್ಶನ್ ಸಿಗರೇಟು ಸೇದುತ್ತ ರೌಡಿಗಳ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ. ಜೊತೆಗೆ ವಿಡಿಯೋ ಕಾಲ್ ಮಾಡಿರುವುದು ಗೊತ್ತಾಗಿದೆ. ದರ್ಶನ್ ಮಾತ್ರವಲ್ಲ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ A4 ಆರೋಪಿ ರಘು ಜೈಲಿನಿಂದ ವಿಡಿಯೋ ಕರೆ ಮಾಡಿರುವ ಸಂಗತಿ ಇದೀಗ ಬಯಲಾಗಿದೆ. ಆತನ ಸಹೋದರ ಮುರಳಿಯೇ ಈ ಸಂಗತಿಯನ್ನು ಬಾಯಿ ತಪ್ಪಿ ಹೇಳಿ ಬಿಟ್ಟಿದ್ದಾರೆ. ನನ್ನ ಇನ್ನೊಬ್ಬ ತಮ್ಮನಿಗೆ ರಘು ವಿಡಿಯೋ ಕಾಲ್ ಮಾಡಿದ್ದ. ಆದಷ್ಟು ಬೇಗ ಬರ್ತೀನಿ ಅಂತಾ ಹೇಳಿದ್ದಾನೆ ಎಂದು ರಘು ಸಹೋದರು ಮುರುಳಿ ಹೇಳಿದ್ದಾರೆ. ಬಳಿಕ ಮಾತನಾಡಿದ ಮುರಳಿ, ದರ್ಶನ್ಗೆ ಆದ್ಯತೆ ಕೊಡುವಂತೆ ಉಳಿದವರಿಗೂ ಕೊಡಬೇಕು. ದರ್ಶನ್ ಹೆಗಿದ್ದಾರೋ ಅವರ ಜೊತೆಗಿರೋರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದರ್ಶನ್ ಇತರ ಆರೋಪಿಗಳನ್ನೂ ಕೂಡ ಹೊರತರಲು ನೋಡಬೇಕು ಎಂದಿದ್ದಾರೆ. ನನ್ನ ತಾಯಿ ತೀರಿದಾಗ ದರ್ಶನ್ ಕಡೆಯವರು 25 ಸಾವಿರ ಹಣ ಕಳುಹಿಸಿದ್ರು. ಅವರ ಕಡೆಯವರೇ…
ಮಂಡ್ಯ: ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಿಶಾ ಸಭೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ದಿಶಾ ಸಭೆ ಆರಂಭಗೊಳ್ಳಲಿದೆ. https://youtu.be/Pm4Fkk28Mqw?si=GW1FfqBWuTs9eThH ಒಂದು ಕಡೆ ಕುಮಾರಸ್ವಾಮಿ ಅವರು ಕೇಂದ್ರದ ಯಾವೆಲ್ಲಾ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂಬ ಕುತೂಹಲ ಇದ್ದರೆ, ಇನ್ನೊಂದೆಡೆ ದಿಶಾ ಸಭೆಯ ಮೂಲಕ ಸಚಿವ ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಹೇಗೆ ತಿರುಗೇಟು ನೀಡುತ್ತಾರೆ ಎಂಬ ಕುತೂಹಲವು ಸಹ ಇದೆ. ಇತ್ತೀಚಿಗಷ್ಟೇ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದರು. ರಾಜಕೀಯ ಸಭೆಗೆ ಬನ್ನಿ ಅಂದ್ರೆ ಕುಮಾರಸ್ವಾಮಿ ಮಧ್ಯರಾತ್ರಿಯಾದ್ರೂ ಬರುತ್ತಾರೆ. ಆದರೆ ಅಭಿವೃದ್ಧಿ ಕುರಿತ ಸಭೆಗಳಿಗೆ ಬರಲ್ಲ ಎಂದು ಕೆಡಿಪಿ ಸಭೆಗೆ ಗೈರಾಗಿದ್ದಕ್ಕೆ ಚಲುವರಾಯಸ್ವಾಮಿ ಕಿಡಿಕಾರಿದ್ದರು. ಇಂದು ದಿಶಾ ಸಭೆ ಕರೆಯುವ ಮೂಲಕ ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಕ್ಕರ್ ನೀಡಿದ್ದಾರೆ. ಇಂದಿನ ದಿಶಾ ಸಭೆಗೆ ಸಚಿವ ಚಲುವರಾಯಸ್ವಾಮಿ ಗೈರು ಖಚಿತವಾಗಿದೆ.ಸದ್ಯ ವಿದೇಶ…