ಕಳೆದ ಕೆಲ ದಿನಗಳಿಂದ ಚೀನಾದ ಲಿಯೋನಿಂಗ್ ಪ್ರಾಂತ್ಯದ ಹುಲುಡಾವೊದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು 14 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಹುಲುಡಾವೊ ನಗರದ 1.88 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ₹12,69 ಕೋಟಿ ಮೌಲ್ಯದ ರಸ್ತೆ, ಸೇತುವೆ, ಮನೆಗಳು ಮತ್ತು ಅಪಾರ ಪ್ರಮಾಣದ ಬೆಳೆ ನಾಶವಾಗಿವೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ. ಅಲ್ಲದೇ, ಒಂಭತ್ತು ರಾಷ್ಟ್ರೀಯ ಹಾಗೂ ಪ್ರಮುಖ ಪ್ರಾಂತೀಯ ರಸ್ತೆಗಳು, 210 ಗ್ರಾಮೀಣ ರಸ್ತೆಗಳು ಮತ್ತು 187 ಸೇತುವೆಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Author: Prajatv Kannada
ಧಾರವಾಡ:- ಹದಿನೈದು ತಿಂಗಳಲ್ಲೇ ಅತಿ ಭ್ರಷ್ಟ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಎಂಬ ಕೀರಿಟವನ್ನು ಜನರೇ ಕೊಟ್ಟಿದ್ದಾರೆ ಎಂದ ವಿಧಾನ ಪರಿಷತ್ ವಿಪಕ್ಷ ನಾಯಕ ಅರವಿಂದ ಬೆಲ್ಲದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಸನ್ನಿವೇಶ ಹತ್ತಿರದಲ್ಲಿದೆ. ಆದ್ರೆ ಸಿದ್ದರಾಮಯ್ಯ ಕುರ್ಚಿ ಹೋಗುವ ಮುನ್ನ ಜಿಂದಾಲ್ ಕಂಪನಿಗೆ ಬೆಲೆಬಾಳು ಭೂಮಿಯನ್ನ ಕಡಿಮೆ ಬೆಲೆಗೆ ಕೊಡುವ ಮೂಲಕ ಮತ್ತೊಂದು ಹಗರಣ ಮೈಮೇಲೆ ಎಳೆದುಕೊಂಡಿದ್ದಾರೆ. ಅಂದು ವಿರೋಧ ಮಾಡಿದ್ದ ಹೆಚ್‌ಕೆ ಪಾಟೀಲ್ ಇಂದು ಪ್ರೆಸ್ ಬ್ರೀಫ್ ಮಾಡಿದ್ದಾರೆ. ಜೆಎಸ್‌ಡಬ್ಲ್ಯು ಅಗ್ರಿಮೆಂಟ್ ಮಾಡಿಕೊಂಡಿದೆ. ಪುರಾತನ ಕಾಲದಿಂದ ಬಂದ ಮಿನರಲ್ ಆಸ್ತಿಯನ್ನು ಎಕರೆಗೆ 1ಲಕ್ಷ 20ಸಾವಿರಕ್ಕೆ ಕೊಡ್ತಿದ್ದಾರೆ. ಇಷ್ಟು ಕಡಿಮೆ ಬೆಲೆಗೆ ಕೊಡ್ತಿರಲ್ಲ ಸಿದ್ದರಾಮಯ್ಯನವರೇ ಇದೇನು ನಿಮ್ಮಪ್ಪನ ಮನೆ ಆಸ್ತಿಯೇನು? ಎಂದು ಹರಿಹಾಯ್ದರು. ಭೂಮಿಯನ್ನು ಕಡಿಮೆ ಬೆಲೆ ಮಾರಾಟ ಮಾಡಿ ಒಳ ಒಪ್ಪಂದ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಇಂದಿನ ದರಕ್ಕೆ ಮಾರಾಟ ಮಾಡಿದ್ರೆ ನಮ್ಮ ವಿರೋಧ ಇಲ್ಲ.…
ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ, ಮಹಾರಾಷ್ಟ್ರದ 27 ಮಂದಿಯ ಶವಗಳ ಮರಣೋತ್ತರ ಪರೀಕ್ಷೆಯ ಬಳಿಕ ತವರಿಗೆ ಕಳುಹಿಸಲಾಯಿತು. 10 ದಿನ ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದ ಮಹಾರಾಷ್ಟ್ರದ ಯಾತ್ರಾರ್ಥಿಗಳಿದ್ದ ಬಸ್ ನದಿಗೆ ಉರುಳಿಬಿದ್ದು 27 ಮಂದಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಭಾರತೀಯ ವಾಯುಪಡೆಯ ವಿಮಾನದಲ್ಲಿ ಮಹಾರಾಷ್ಟ್ರದ ನಾಸಿಕ್‌ಗೆ ಶವಗಳನ್ನು ಒಯ್ಯಲಾಯಿತು ಎಂದು ಹೇಳಿಕೆ ತಿಳಿಸಿದೆ. ಭಾರತದ ನೋಂದಣಿ ಸಂಖ್ಯೆಯ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ರಾಜಧಾನಿ ಕಠ್ಮಂಡುವಿನಿಂದ 110 ಕಿಮೀ ದೂರದಲ್ಲಿರುವ ತನಾಹುನ್ ಜಿಲ್ಲೆಯಲ್ಲಿನ ಆಯಿನಾ ಪಹಾರಾದ ಮರ್ಸ್ಯಂಗ್ಡಿ ಎಂಬ ನದಿಗೆ ಬಸ್ ಉರುಳಿತ್ತು. ನದಿಗೆ ಉರುಳಿ ಬಿದ್ದ ಬಸ್ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಯುಪಿ ಎಫ್‌ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್, ನದಿಯೊಳಗೆ ಉರುಳಿ ಬಿದ್ದಿದ್ದು, ನದಿಯ ತೀರದಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ ಎರಡು ತಿಂಗಳುಗಳೇ ಕಳೆದಿದೆ. ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ರನ್ನು ಭೇಟಿ ಮಾಡಲು ವಾರಕ್ಕೊಮ್ಮೆ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಈಗಾಗಲೆ ಎರಡು ಸಲ ದರ್ಶನ್‌ರನ್ನು ಭೇಟಿ ಮಾಡಿರುವ ವಿನೋದ್ ರಾಜ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ದರ್ಶನ್ ಅವರ ಮೇಲೆ ನನಗೆ ಪ್ರೀತಿ ಮತ್ತು ಅನುಕಂಪವಿದೆ. ಈ ಹಿಂದೆ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದೆ, ಅದಾದ ಮೇಲೆ ನನ್ನ ತಾಯಿ ಆರೋಗ್ಯದಲ್ಲಿ ಏರುಪೇರು ಕಂಡಾಗ ಮನೆಗೆ ಬಂದು ನೋಡಿದ್ದರು. ಆಗ ಕಾಲಿಗೆ ಬೀಳುತ್ತಾರೆ…ನೀನು ಹೀರೋ ಕಣ್ಣನ್ನ ನಾನು ವಿಲನ್ ಅಂತಾರೆ. ದರ್ಶನ್ ಕೊಡುವ ಗೌರವ ಮತ್ತು ಬೆಲೆಯನ್ನು ನೋಡಿದಾಗ ಈ ರೀತಿ ಘಟನೆ ಹೇಗೆ ಆಯ್ತು ಅನ್ನೋದು ಅರ್ಥವೇ ಆಗುತ್ತಿಲ್ಲ. ನನ್ನ ತಾಯಿ ಮಲಗಿದ್ದಾಗ ದರ್ಶನ್ ಆಗಮಿಸಿದ್ದರು..ಅಮ್ಮ ಯಾರು ಬಂದಿದ್ದಾರೆ ನೋಡು ಎಂದು ಹೇಳಿದೆ ಅಗ ಕಣ್ಣು ಬಿಟ್ಟು ನೋಡಿದ್ದರು….ಅವರಿಗೆ ಪ್ರತಿಯೊಂದು ಗೊತ್ತಾಗುತ್ತಿತ್ತು. ಅಣ್ಣ ದಯವಿಟ್ಟು ಅಮ್ಮ ಮಲಗಿದ್ದಾರೆ ಎಬ್ಬಿಸಬೇಡಿ ಎಂದು ದರ್ಶನ್…
ಬೆಂಗಳೂರು: ಮುಡಾ ಹಗರಣ ಒಂದೇ ಅಲ್ಲ ಪಕ್ಷ ಸಂಘಟನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಲಾಗಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ದೆಹಲಿಯಿಂದ ಆಗಮಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿಕೊಂಡು ಬಂದಿದ್ದೇನೆ. ಮುಡಾ ಹಗರಣ ಒಂದೇ ಅಲ್ಲ ಪಕ್ಷ ಸಂಘಟನೆ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ದೇವೆ. ಸಿಎಂ ಡಿಸಿಎಂ ಮತ್ತು ಹಲವು ಸಚಿವರು ಸಹ ಬಂದಿದ್ದರು. ಸರ್ಕಾರದ ಆಡಳಿತ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದೇವೆ ಎಂದರು. ನೀವು ನಿರೀಕ್ಷೆ ಮಾಡಿದಂತ ವಿಚಾರಗಳು ಏನು ಚರ್ಚೆಯಾಗಿಲ್ಲ. ಸಂದರ್ಭ ಬಂದಾಗ ಅರ್ಕಾವತಿ ಡಿನೋಟಿಫಿಕೇಷನ್ ವರದಿ ಬಹಿರಂಗ ಮಾಡುತ್ತೇವೆ. ಸರ್ಕಾರದಲ್ಲಿ ಎಲ್ಲವು ಪಾರದರ್ಶಕವಾಗಿರುತ್ತದೆ. ಆ ರೀತಿ ಮುಚ್ಚಿಡುವಂತದ್ದು ಏನು ಇಲ್ಲ. ಸಚಿವರಿಗೆ ಕೊಕ್ ಅಂತಹ ವಿಚಾರ ಏನು ಚರ್ಚೆ ಆಗಿಲ್ಲ. ಬೈರತಿ ಸುರೇಶ್ ಅವರು ಮಗನ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಷ್ಟೇ. ಕಾರ್ಕಳದಲ್ಲಿ…
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಧ್ಯಮ ಮಳೆಯಾಗಲಿದೆ. ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆ ಇವೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಆಗಸ್ಟ್ 27 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45…
ಬೆಂಗಳೂರು:- ರೇಣುಕಾ ಸ್ವಾಮಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ವರೆಗೆ 52 ಸ್ಥಳಗಳಲ್ಲಿ ಮಹಜರು ಮಾಡಿದ್ದಾರೆ. ಮೈಸೂರು, ಬೆಂಗಳೂರು, ಚಿತ್ರದುರ್ಗಗಳಲ್ಲಿ ಈ ಪ್ರಕರಣದ ಕೆಲವು ಪ್ರಮುಖ ಸ್ಥಳ ಮಹಜರು ನಡೆದಿವೆ. ಬೆಂಗಳೂರಿನ ಪಟ್ಟಣಗೆರೆ ಶೆಡ್, ದರ್ಶನ್, ಪವಿತ್ರಾ ಮನೆ, ಸ್ಟೂನಿ ಬ್ರೂಕ್ ಹೋಟೆಲ್, ಮೈಸೂರಿನ ಹೋಟೆಲ್, ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿ ಮನೆ, ಆರೋಪಿಗಳ ಮನೆ ಇನ್ನಿತರೆ ಕಡೆಗಳಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮಾತ್ರವಲ್ಲದೆ ಸುಮಾರು 150ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ಸಹ ದಾಖಲು ಮಾಡಿಕೊಂಡಿದ್ದಾರೆ. ಎಲ್ಲ ಆರೋಪಿಗಳು, ಅವರಿಗೆ ಸಂಬಂಧಿಸಿದವರು, ಅವರೊಟ್ಟಿಗೆ ಸಂಪರ್ಕದಲ್ಲಿದ್ದವರು, ಪ್ರಕರಣದ ಬಗ್ಗೆ ಗೊತ್ತಿದ್ದವರು ಇನ್ನೂ ಹಲವರ ವಿಚಾರಣೆ ಈಗಾಗಲೇ ನಡೆದಿದೆ. ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಅವನ್ನು ಸ್ಥಳ ಮಹಜರು ದಾಖಲೆ, ಸಾಕ್ಷಿಗಳೊಟ್ಟಿಗೆ ಸಮೀಕರಿಸಿದ್ದಾರೆ. ಹಾಗೂ ಪ್ರಕರಣದ ಟೈಮ್ ಲೈನ್ ಮ್ಯಾಚ್ ಮಾಡಲು ಸಹ ಬಳಸಿಕೊಂಡಿದ್ದಾರೆ. ಅಂದಹಾಗೆ ಜೂನ್ 11 ರಂದು ಬೆಳ್ಳಂಬೆಳಿಗ್ಗೆ ನಟ ದರ್ಶನ್ ಬಂಧನವಾಗಿತ್ತು.…
ಬೆಂಗಳೂರು:- ಬೆಂಗಳೂರಿನ ಹಲವೆಡೆ ನಾಳೆಯಿಂದ ಎರಡು ದಿನ ಸಂಚಾರ ಬಂದ್ ಇರಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಆಗಸ್ಟ್ 26 ಮತ್ತು 27 ರಂದು ಬೆಂಗಳೂರು ನಗರದ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹಾಗೆ ಮತ್ತು ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ರಥೋತ್ಸವಿದೆ. ಹೀಗಾಗಿ ಈ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೂಲಿಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂಜಾ ಮತ್ತು ರಥೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸೋಮವಾರ ಬೆಳಗ್ಗೆ 8 ರಿಂದ ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧಿಸಲಾಗಿದೆ. ವಾಹನ…
ಬೆಂಗಳೂರು:- ಬೆಂಗಳೂರಿನಾದ್ಯಂತ ನಾಳೆ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ, ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆ ದಿನ ಯಾರೂ ಯಾವುದೇ ರೀತಿಯ ಮಾಂಸ ಹಾಗೂ ಹಸಿ ಮೀನು ಮಾರಾಟ ಮಾಡಬಾರದು ಎಂದು ತಿಳಿಸಿದೆ. ಪಟ್ಟಣದ ಯಾವುದೇ ಮಾಂಸ ಮಾರಾಟದ ಅಂಗಡಿಗಳು, ಕೋಳಿ ಅಂಗಡಿಗಳು, ಮೀನುಮಾರಾಟ ಮಾಡಬಾರದು ಎಂದು ಖಡಕ್ ಆಗಿ ಸೂಚಿಸಲಾಗಿದೆ. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ. ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಕೃಷ್ಣನ ಜನ್ಮ ದಿನವೆಂದು ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26 ರಂದು ಆಚರಿಸಲಾಗುವುದು. ಈ ಶುಭ ದಿನದಂದು ಜನರು ಶ್ರೀಕೃಷ್ಣನನ್ನು ಪೂಜಿಸಿ, ಮಂತ್ರ, ಭಜನೆಯನ್ನು ಹಾಡಿ, ಉಪವಾಸ ವ್ರತವನ್ನು…
ಬೆಂಗಳೂರು:- ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಗುಂಡಿ ಗಂಡಾಂತರ ಬಟಾ ಬಯಲಾಗಿದೆ. ಪಾಲಿಕೆ ಕಛೇರಿ ಮುಂಭಾಗ ದೇವಾಂಗ ಹಾಸ್ಟೆಲ್ ರೋಡ್ನಲ್ಲಿ ರಸ್ತೆ ಕುಸಿತ ಆಗಿದ್ದು, ನಿನ್ನೆ ರಾತ್ರಿ ಬಿದ್ದಿರೋ ಗುಂಡಿಗೆ ಸವಾರರು ಕಲ್ಲು ,ಗಿಡಗಳನ್ನಿಟ್ಟಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯ ಬಟಾಬಯಲಾಗಿದ್ದು, ರಸ್ತೆ ಕುಸಿತ ಪರಿಣಾಮ, ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಾಗಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.