ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಸಾವಯವ ಕೃಷಿಗಾಗಿ ರಾಜ್ಯದಲ್ಲಿ 228.80 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಆಹಾರ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಅಭಿವೃದ್ಧಿ ಪ್ರಾಕಾರ ಮಾಹಿತಿ ಅನುಸಾರ ರಾಜ್ಯದಲ್ಲಿ 1,10,703 ಹೆಕ್ಟೇರ್‍ನಲ್ಲಿ ಸಾವಯವ ಕೃಷಿ ನಡೆಸಲಾಗುತ್ತಿದೆ. ಸಾವಯವದ ಅಭಿವೃದ್ಧಿಗೆ ಮಾರುಕಟ್ಟೆ ಆಧಾರಿತ ರ್ನಿಷ್ಟ ಬೆಳೆಯ ಕ್ಲಸ್ಟರ್ ಅಭಿವೃದ್ಧಿ, ದೃಢೀಕರಣ ಯೋಜನೆ, ಸಿರಿಧಾನ್ಯಗಳ ಮಾರುಕಟ್ಟೆ ಅಭಿವೃದ್ದಿ, ನೈಸರ್ಗಿಕ ಕೃಷಿ, ರೈತ ಸಿರಿ, ಸಿರಿಧಾನ್ಯ ನೈಸರ್ಗಿಕ ಉತ್ಪನ್ನಗಳ ಸಂಸ್ಕರಣೆ ಸಾವಯವ ಸಿರಿ ಯೋಜನೆ, ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಸೇರಿದಂತೆ 8ಕ್ಕೂ ಹೆಚ್ಚು ಯೋಜನೆಗಳು ಜಾರಿಗೆ ತರಲಾಗಿದೆ. 2004ರಲ್ಲಿ ಕೃಷಿ ನೀತಿ ಜಾರಿಗೊಳಿಸಲಾಗಿತ್ತು. ರೈತರಿಗೆ 5326 ತರಬೇತಿ ಶಿಬಿರಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ 2015-16ನೇ ಸಾಲಿನಿಂದ ಪರಂಪಾರಗತ ಕೃಷಿ ವಿಕಾಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಕೇಂದ್ರ ಸರ್ಕಾರ 40 ಕೋಟಿ, ರಾಜ್ಯ ಸರ್ಕಾರ 27 ಕೋಟಿ ಸೇರಿ ಒಟ್ಟು…
Author: Prajatv Kannada
ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ ಎಸಗಿದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ. ಬಂಧಿತನನ್ನು ನೋಕೋಚಾ ಕಾಸ್ಮೀರ್ ಇಕೆಂಬಾ ಎಂದು ಗುರುತಿಸಲಾಗಿದೆ. ಆರೋಪಿಯು, ಯುಕೆ ದೇಶದ ಶೆಲ್ ಆಯಿಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈತ ವಂಚಿಸುತ್ತಿದ್ದ. ಇದೀಗ ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಫೆ. 11 ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಮಲರ್ ಕೋಡಿ ಅವರಿಗೆ ಈಮೇಲ್ ಐಡಿಯಿಂದ ಯುಕೆ ದೇಶದಲ್ಲಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಹೇಳಿ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಮಲರ್ ಕೋಡಿ, ಆರೋಪಿಯನ್ನು ಸಂಪರ್ಕಿಸಿದಾಗ ವಿವಿಧ ಶುಲ್ಕ ಹಾಗೂ ಕ್ಲಿಯರನ್ಸ್ ಫೀಜ್‌ಗಳೆಂದು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಒಟ್ಟು 3 ಲಕ್ಷ ರೂ. ಅಧಿಕ ಹಣವನ್ನು ಹಾಕಿಸಿಕೊಂಡು ಯಾವುದೇ ಕೆಲಸ ಕೊಡಿಸದೆ ವಂಚಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಮಲಾರ್ ಕೋಡಿ ಅವರು ಈಶಾನ್ಯ ವಿಭಾಗದ…
ಬೆಂಗಳೂರು: ಬೃಹತ್ ಬೆಂಗಳೂರು ನಗರ ಪಾಲಿಕೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ಯಾರಾ ಮೆಡಿಕಲ್, ವರ್ಕರ್ ಮತ್ತು ಸೈಕಿಯಾಟ್ರಿಕ್ ನಸರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಸಲಾಗುತ್ತಿದ್ದು, ಸೂಕ್ತ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸದೇ ವಾಕ್ ಇನ್ ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಟ್ಟು 46 ಹುದ್ದೆಗಳು ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ನರ್ಸ್ ಹೊರತಾಗಿ ಆಶಾ ಕಾರ್ಯಕರ್ತರು, ಅಕೌಂಟ್ ಮ್ಯಾನೇಜರ್, ಜಿಲ್ಲಾ ಸಮಾಲೋಚಕರು, ಜೋನಲ್ ಅಕೌಂಟ್ ಮ್ಯಾನೇಜರ್, ಡೆಂಟಿಸ್ಟ್ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎಸ್ಸಿ, ಪದವಿ, ಎಂಎಸ್ಡಬ್ಯೂ, ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳಿಗೆ ತಕ್ಕಂತೆ ನಿರ್ದಿಷ್ಟ ವೇತನವನ್ನು ನಿಗದಿ ಮಾಡಲಾಗಿದ್ದು, ಕನಿಷ್ಟ 14 ಸಾವಿರದಿಂದ ಗರಿಷ್ಟ 50 ಸಾವಿರದವರೆಗೆ ವೇತನ ನಿಗದಿ ಮಾಡಲಾಗಿದೆ.…
ಬೆಂಗಳೂರು: ಮೊಣಕಾಲು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಕೆಲವು ದಿನಗಳ ಹಿಂದೆ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.ಇನ್ನು, ಮುಂದಿನ ದಿನಗಳಲ್ಲಿ ನಡೆಯುವ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿಂದು ಮಹತ್ವದ ಸಭೆ ನಡೆಯಲಿದೆ. ಅಲ್ಲದೆ H3N2 ಸೋಂಕು ಕೂಡಾ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಸಾರ್ವಜನಿಕರು ಕೆಮ್ಮು, ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ಈ ನಿಟ್ಟಿನಲ್ಲಿ ಸೂಚನೆಯೊಂದನ್ನು ಹೊರಡಿಸಿದೆ. ವೈದ್ಯರುಗಳು ಆಂಟಿಬಯೋಟಿಕ್ ಗಳನ್ನು ಶಿಫಾರಸ್ಸು ಮಾಡುವುದನ್ನು ಆದಷ್ಟು ತಪ್ಪಿಸಲು ಭಾರತೀಯ ವೈದ್ಯಕೀಯ ಸಂಘ ತಿಳಿಸಿದ್ದು, ಜೊತೆಗೆ ಸಾರ್ವಜನಿಕರು ಸಹ ಸ್ವಯಂ ಆಗಿ ಆಂಟಿ ಬಯೋಟಿಕ್ ಗಳನ್ನು ಸೇವಿಸಬಾರದು ಎಂದು ತಿಳಿಸಿದೆ.ಈ ಎಲ್ಲದರ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಾಗುತ್ತದೆ. ನಂತರ ಸಾರ್ವಜನಿಕರಿಗೆ ಈ ಕುರಿತಂತೆ ಮಾಹಿತಿ ನೀಡಲಾಗುತ್ತದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಭಂದ ಎನ್ ಐ ಎ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಆರು ತಿಂಗಳಿಂದ ಬೆಂಗಳೂರಿನಲ್ಲೇ ಆರಾಮಾಗಿದ್ದ ಕೊಲೆಗಡುಕ ತೌಸಿಫ್ ಎಂಬ ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ. ಎನ್ ಐಎ ಅಧಿಕಾರಿಗಳು ನಡೆಸಿದ ಇಂಟ್ರೆಸ್ಟಿಂಗ್ ಕಾರ್ಯಚರಣೆ ಹೇಗಿತ್ತು ಗೊತ್ತ? ಈ ಸ್ಟೋರಿ ನೋಡಿ.. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ತೌಫಿಲ್ ನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿರೋ ಮನೆಯೊಂದರಲ್ಲಿ ಎನ್ ಐ ಎ ಅಧಿಕಾರಿಗಳು ತೌಫಿಲ್ ಬಂಧನ ಮಾಡಿದ್ದಾರೆ.ನಿನ್ನೆ ತಡರಾತ್ರಿ ಎನ್ ಐ ತಂಡ ಆರೋಪಿ ತೌಫಿಲ್ ನನ್ನ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಹಂತಕ ತೌಫಿಲ್ ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿ ಇರುವ ಬಗ್ಗೆ ಎನ್ ಐ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕದೆ.ಬಳಿಕ ಎನ್ ಐಎ ಅಧಿಕಾರಿಗಳು ಪ್ಲಂಬರ್ ಹಾಗೂ ಆಟೋ ಚಾಲಕನ ಮಾರುವೇಷದಲ್ಲಿ ಬಂದು ಹಂತಕ ತೌಫಿಲ್ ನನ್ನ ಬಂಧಿಸಿದ್ದಾರೆ. ತೌಫಿಲ್ ವಾಸವಿದ್ದ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ BPL ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ನಾವು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ತಿಂಗಳಿಗೆ 30 ಕೆಜಿ ಅಕ್ಕಿ ನೀಡುವ ತೀರ್ಮಾನ ಕೈಗೊಂಡಿದ್ದೆವು. ನಂತರ ತಲಾ 7 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದೆವು. ಮೊದಲು ಜನರಿಂದ 2 ರೂ. ಹಾಗೂ ಸರ್ಕಾರದಿಂದ ಮೂರು ರೂ. ಹಾಕಿ 5 ರೂ ಗೆ ಒಂದು ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದೆವು. ನಂತರ ಇದನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ ರೂಪದಲ್ಲಿ ಉಚಿತವಾಗಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿದೆವು. ಇದೀಗ ಸರ್ಕಾರದ ಐದು ಕೆಜಿಗೆ ಇಳಿಸಿದೆ. ನಾವು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜನ ನೀವು ಅಧಿಕಾರಕ್ಕೆ ಬಂದಾಗ ಇದನ್ನ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾವು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದೇವೆ. ಹಸಿದವರಿಗೆ…
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಮಗನ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಒಂದು ಕಡೆ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಲು ತಯಾರಿ ನಡೆಸಿದ್ರೆ, ಇನ್ನೊಂದೆಡೆ ವಿರೂಪಾಕ್ಷಪ್ಪ ವಿಚಾರಣೆಗೆ ಪ್ರಶ್ನಾವಳಿಗಳ ಪಟ್ಟಿಯನ್ನೆ ಲೋಕಾಯುಕ್ತ ಅಧಿಕಾರಿಗಳು ಸಿದ್ದಪಡಿಸಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಗ ಪ್ರಶಾಂತ್ ಮಾಡಾಳ್ ಕೋಟಿ ಕೋಟಿ ಹಣದ ತನಿಖೆಯನ್ನ ಲೋಕಾಯುಕ್ತ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಶಾಂತ್ ಮನೆಯಲ್ಲಿ ಸಿಕ್ಕ ಎಂಟು ಕೋಟಿ ಹಣ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇದೀಗ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಿಸಲು ಮುಂದಾಗಿದ್ದಾರೆ. ಪ್ರಶಾಂತ್ ಮಾಡಾಳ್, ಶಾಸಕ ವಿರೂಪಾಕ್ಷಪ್ಪ ಹಾಗೂ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ಯಾವುದೇ ವಹಿವಾಟು ವ್ಯವಹಾರ ನಡೆಯದಂತೆ ಅಧಿಕಾರಿಗಳು ನಿಗಾ ಇಟ್ಟಿದ್ದು,ಈಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಬ್ಯಾಂಕ್ ಗಳಿಗೆ ಪತ್ರ…
“ಧೀ ಮಸಾಲಾ” ಇದು ನಿಮ್ಮ ಮನೆಯ ರುಚಿ: ಒಮ್ಮೆ ರುಚಿ ನೋಡಿ, ನೀವೆ ಹೇಳುತ್ತಿರಿ ವಾವ್.! ಕರೆ ಮಾಡಿ – 9880299098 / Dheemasala.in ಭಾರತವು ಮಸಾಲೆ ಪದಾರ್ಥಗಳ ಮೂಲವಾಗಿದೆ. ಜಗತ್ತಿಗೆ ಮಸಾಲೆ ಪದಾರ್ಥಗಳನ್ನು ಪರಿಚಯ ಮಾಡಿದ್ದೆ ಭಾರತ ಅನ್ನೊ ವಿಚಾರ ಎಲ್ಲರಿಗೂ ತಿಳಿದೆ ಇದೆ. ಹೀಗಾಗಿ ಭಾರತದಲ್ಲಿ ತಯಾರಾಗುವ ಮಾಸಾಲೆ ಪದಾರ್ಥಗಳಿಗೆ ಜಗತ್ತಿನ್ಯಾದ್ಯಂತ ಬೇಡಿಕೆ ಇದೆ. ಈ ಬೇಡಿಕೆಯನ್ನ ಬಂಡವಾಳ ಮಾಡಿಕೊಂಡ ಅನೇಕರು ಕಳಪೆ ಗುಣಮಟ್ಟದ ಮಸಾಲೆ ಪದಾರ್ಥಗಳನ್ನ ತಯಾರಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದಾರೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ, ಮನೆಯಲ್ಲಿ ತಯಾರಿಸುವ ರೀತಿಯ ಪದ್ದತಿಗಳನ್ನು ಅನುಸರಿಸಿ ಮಸಾಲೆ ಪದಾರ್ಥಗಳನ್ನು ತಯಾರಿಸುವ ಸಂಸ್ಥೆ ಆರಂಭವಾಗಿದೆ. ಅದುವೆ “ಧೀ ಮಸಾಲಾ” . ಚಟ್ನಿ ಪುಡಿ, ಮಸಾಲೆ ಪುಡಿ ಪುಳಿಯೋಗರೆ ಪೇಸ್ಟ್ / ಪೌಡರ್, (ಶುದ್ಧ ಸಸ್ಯಾಹಾರಿ) ಕಾರದ ಪುಡಿ ಹೀಗೆ ಅನೇಕ ಮಸಾಲಾ ಪದಾರ್ಥಗಳನ್ನ ಪುರಾತನ ಪಾಕ ವಿಧಾನಗಳ ರೀತಿಯಲ್ಲೆ ತಯಾರಿಸಲಾಗುತ್ತಿದೆ. “ಧೀ ಮಸಾಲಾ” ದಲ್ಲಿ ಯಾವುದೇ…
ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಎಸೆದ ನೋ ಬಾಲ್ ಕಾರಣ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿನ ಭಾರತ ತಂಡದ ಗೆಲುವಿಗೆ ನೆರವಾಗಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ, ಮೂರನೇ ಟೆಸ್ಟ್ ಪಂದ್ಯದಲ್ಲಿ ಅದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲರಾಗಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಲ್ಲಿ ಅವರು ವಿಫಲರಾದರು. ಭಾರತ ತಂಡದ 109ಕ್ಕೆ ಆಲ್‌ಔಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಬಹುಬೇಗ ಟ್ರಾವಿಸ್ ಹೆಡ್ ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ಆದರೆ, ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಮಾರ್ನಸ್ ಲಾಬುಶೇನ್ ಖಾತೆ ತೆರೆಯುವುದಕ್ಕೂ ಮುನ್ನ ಜಡೇಜಾ ಬೌಲಿಂಗ್‌ನಲ್ಲಿ ಔಟ್ ಆಗಿದ್ದರು. ಆದರೆ, ಆ ಎಸೆತ ನೋ ಬಾಲ್ ಆಗಿದ್ದರಿಂದ ಅವರು ಜೀವದಾನ ಪಡೆದಿದ್ದರು. ಇದಾದ…