ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ತೆಲುಗು ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು. ಈ ಪಾರ್ಟಿಗೆ ಹಾಜರಾಗಿದ್ದನ್ನು ಇತ್ತಿಚೆಗೆ ಹೇಮಾ ಒಪ್ಪಿಕೊಂಡಿದ್ದರು. ಎಲ್ಲಿಗಾದರೂ ಹೋಗುತ್ತೇನೆ, ನನ್ನ ಜೀವನ ನನ್ನ ಇಷ್ಟ ಎಂದು ಹೇಳಿದ್ದರು. ಹೇಮಾ ಮಾದಕ ವಸ್ತು ಸೇವಿಸಿದ್ದಾರೆ ಎಂದು ಬೆಂಗಳೂರು ಪೊಲೀಸರು ಕೆಲವು ದಿನಗಳ ಕಾಲ ಜೈಲಿನಲ್ಲಿಯೇ ಇಟ್ಟಿದ್ದರು. ಆ ಬಳಿಕ ಹೇಮಾಗೆ ಷರುತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಹುಟ್ಟುಹಬ್ಬದ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ನಟಿ ಹೇಮಾ ಸೇರಿ 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಆದರೆ, ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ತಾನು ಪಾರ್ಟಿಗೆ ಹೋಗಿಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದ ನಟಿ ಹೇಮಾ ಕೊನೆಗೆ ಕೆಲವು ದಿನ ಬೆಂಗಳೂರಿನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಹೊರ ಬಂದಿದ್ದರು. ಮೇ ತಿಂಗಳ 19ರ ಮಧ್ಯರಾತ್ರಿಯಿಂದ 20ರ ಬೆಳಗ್ಗಿನವರೆಗೂ ಸನ್ ಸೆಟ್ ಟು ಸನ್ ರೈಸ್ ಥೀಮ್ ಅಡಿಯಲ್ಲಿ…
Author: Prajatv Kannada
ಸಿನಿಮಾ ಸೆಟ್ಗಳಲ್ಲಿ ಅವಘಡಗಳು ನಡೆಯೋದು ಸಾಮಾನ್ಯವಾಗಿದೆ. ಅದರಲ್ಲೂ ಕೆಲವೊಮ್ಮೆ ಜೀವನಗಳು ಹೋಗುತ್ತವೆ. ಆದರೆ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದ್ದಾಗ ಅದಕ್ಕೆ ಪರಿಹಾರವಾಗಿ ಕೋರ್ಟ್ ಮೆಟ್ಟಿಲೇರೋದು ತೀರಾ ವಿರಳ. ಆದರೆ ಮಲಯಾಳಂ ನಟಿಯೊಬ್ಬರು ಶೂಟಿಂಗ್ ಸೆಟ್ನಲ್ಲಿ ಗಾಯವಾಗಿದ್ದಕ್ಕೆ ಪ್ರತಿಯಾಗಿ ತಮಗೆ ಐದು ಕೋಟಿ ರೂಪಾಯಿ ಹಣವನ್ನು ಪರಿಹಾರವನ್ನಾಗಿ ಕೊಡಬೇಕೆಂದು ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಲಯಾಳಂ ನಟಿ ಶೀಥಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಗಾಯಕ್ಕೆ ಪರಿಹಾರವಾಗಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೀಥಲ್ ತಂಬಿ, ‘ಫುಟೇಜ್’ ಹೆಸರಿನ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಶೀಥಲ್ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲದ ಕಾರಣವೇ ತಮಗೆ ಗಾಯವಾಗಿದೆ ಎಂದಿರುವ ಶೀಥಲ್, ಗಾಯಗೊಂಡ ದಿನ ತಮಗೆ ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಗಾಯಗಿಂದ ತಮ್ಮ…
ಬೆಂಗಳೂರು: ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುಲು ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. https://youtu.be/vTY9sLpsrT4?si=nO6JsRO1eR-QWcA5 ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿರುವುದು ಸಂವಿಧಾನ ಬಾಹಿರ. ರಾಜಭವನ ದರ‍್ಬಳಕೆ ಆಗಿದೆ. ರಾಜ್ಯಪಾಲರ ನಡೆಯನ್ನು ಕ್ಯಾಬಿನೆಟ್‌ನಲ್ಲಿ ಖಂಡಿಸಿದ್ದೇವೆ. ಕೋರ್ಟ್‌ನಲ್ಲೂ ಚಾಲೆಂಜ್ ಮಾಡಿದ್ದೇವೆ ಎಂದರು ಡಿಸಿಎಂ ಹಾಗೂ ಕೆಲವು ಸಚಿವರು ನಿನ್ನೆ ದೆಹಲಿಗೆ ಹೋಗಿದ್ದೆವು. ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋರ್ಟ್‌ನಲ್ಲಿ ರಾಜ್ಯಪಾಲರ ಆದೇಶ ಪ್ರಶ್ನಿಸಿ ಅರ್ಜಿ ಹಾಕಲಾಗಿದೆ. ಆ. 29 ತಾರೀಖಿಗೆ ವಿಚಾರಣೆ ಮುಂದೂಡಲಾಗಿದೆ. ಜೊತೆಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು. ಇದೇ ವೇಳೆ ರಾಜ್ಯಪಾಲರು ಬಿಲ್‌ಗಳನ್ನು ವಾಪಸ್ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಕ್ಯಾಬಿನೆಟ್‌ನಲ್ಲಿ ಮಾಡುತ್ತೇವೆ. ಅವು ಸದನದಲ್ಲಿ ಪಾಸ್ ಆಗಿರುವ ಬಿಲ್‌ಗಳು. ವಿವರಣೆ ಕೇಳಿದರೆ ಕೊಡುತ್ತಿದ್ದೆವು. ಆದರೆ ವಾಪಸ್ ಕಳುಹಿಸಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆಂದು ಹೇಳಿದರು
ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ತಿ ಳಿಸಿದ್ದಾರೆ. https://youtu.be/18Gu-Mo5i-M?si=hGWLYO2zVihxXqPr ಮಾರುಕಟ್ಟೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಧಾರಣೆ ಕುಸಿದ ಕಾರಣ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 22,215 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಬೆಂಬಲ ಬೆಲೆ ಯೋಜನೆಯಲ್ಲಿ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್‍ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಸಮ್ಮತಿಸಿರುವುದರಿಂದ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಧಾರಣೆ ಕುಸಿದಿದೆ ಎಂದು ರೈತರು ಆತಂಕ ಪಡುವ ಅಗತ್ಯವಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದಂತೆ ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯಲ್ಲಿ…
ನೇಪಾಳದಲ್ಲಿ ಶುಕ್ರವಾರ ನದಿಗೆ ಪ್ರಯಾಣಿಕ ಬಸ್ ಉರುಳಿ ಬಿದ್ದ ಪರಿಣಾಮ 14 ಮಂದಿ ಭಾರತೀಯರು ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತದ ನೋಂದಣಿ ಸಂಖ್ಯೆಯ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ರಾಜಧಾನಿ ಕಠ್ಮಂಡುವಿನಿಂದ 110 ಕಿಮೀ ದೂರದಲ್ಲಿರುವ ತನಾಹುನ್ ಜಿಲ್ಲೆಯಲ್ಲಿನ ಆಯಿನಾ ಪಹಾರಾದ ಮರ್ಸ್ಯಂಗ್ಡಿ ಎಂಬ ನದಿಗೆ ಬಸ್ ಉರುಳಿದೆ. ನದಿಗೆ ಉರುಳಿ ಬಿದ್ದ ಬಸ್ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಯುಪಿ ಎಫ್‌ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್, ನದಿಯೊಳಗೆ ಉರುಳಿ ಬಿದ್ದಿದ್ದು, ನದಿಯ ತೀರದಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಸ್‌ನ ಮೇಲಿನ ಭಾಗ ಕಿತ್ತು ಹೋಗಿದ್ದು, ಅದರ ಬಿಡಿ ಭಾಗಗಳು ಮರ್ಸ್ಯಂಗ್ಡಿ ನದಿ ತೀರದಲ್ಲಿ ಬಿದ್ದಿರುವುದು ವಿಡಿಯೋಗಳಲ್ಲಿ ಕಾಣಿಸಿದೆ. ಅಪಘಾತ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾಧವ್ ಪೌಡೆಲ್ ನೇತೃತ್ವದಲ್ಲಿ ಸಶಸ್ತ್ರ ಪೊಲೀಸ್ ಪಡೆ ನೇಪಾಳ ವಿಪತ್ತು ನಿರ್ವಹಣಾ ತರಬೇತಿ…
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಮಾದರಿಯಲ್ಲೇ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆ ನಿರ್ಧಾರಗಳನ್ನು ಕೈಗೊಳ್ಳಲು ಪ್ರತ್ಯೇಕ ನಿಯಂತ್ರಣ ಆಯೋಗ (ಕೆಟಿಆರ್ಸಿ) ರಚನೆಗೆ ಸರ್ಕಾರ ಮುಂದಾಗಿದೆ ̤ ಸಾರಿಗೆ ಬಸ್ ದರ ಹೆಚ್ಚಳ ವಿಚಾರಕ್ಕೆ ಬಸ್ ದರ ಹೆಚ್ಚಳದ ಸರ್ಕಾರದ ಚಿಂತನೆಯನ್ನ ಟೀಕಿಸಿ ಟ್ವೀಟ್ ಮಾಡಿದ್ದ ಆರ್ ಅಶೋಕ್ https://youtu.be/vTY9sLpsrT4?si=9zPncZ7gpvBMliQI ಆರ್ ಅಶೋಕ್ ಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ 2013ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ 10.5% ಬಸ್ ದರ್ ಹೆಚ್ಚಿಸಿದ್ದನ್ನ ಮರೆತರಾ ಎಂದು ಅಶೋಕ್ ಗೆ ರಾಮಲಿಂಗ ರೆಡ್ಡಿ ಪ್ರಶ್ನೆ 2020ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 12%ಹೆಚ್ಚಿಸಿದ್ದನ್ನ ಮರೆತರಾ?ಸಾರಿಗೆ ಸಂಸ್ಥೆಯನ್ನ 5900ಕೋಟಿ ನಷ್ಟದಲ್ಲಿ ಬಿಟ್ಟು ಹೊಗಿದ್ದು ಬಿಜೆಪಿ ಸರ್ಕಾರಸಾರಿಗೆ ಸಂಸ್ಥೆ ಉಳಿದರೇನು ಮುಳಿಗಿದರೇನು ರಾಜಕೀಯವೇ ಮುಖ್ಯ ಎನ್ನುವ ಮನಸ್ಥಿತಿ ಎಂದು ಟೀಕೆ… 2020 ರಲ್ಲಿ ತಮ್ಮದೇ ಪಕ್ಷ…
ಕಲಬುರ್ಗಿ:- ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮದ ಬಳಿ ಕಲ್ಲಿನ ಪರ್ಸಿಗಳನ್ನ(ನೆಲಹಾಸು) ತುಂಬಿದ್ದ ಲಾರಿ ಪಲ್ಟಿಯಾಗಿದ್ದು, 13 ಜನರಿಗೆ ಗಂಭೀರ ಗಾಯವಾದ ಘಟನೆ ಜರುಗಿದೆ. ಇನ್ನೂ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಗಾಯಗೊಂಡವರನ್ನ ಕಲಬುರಗಿಗೆ ರವಾನೆ ಮಾಡಲಾಗಿದೆ. ಕೃಷ್ಣಾಪುರ ಗ್ರಾಮದಿಂದ ತೆಲಂಗಾಣಕ್ಕೆ ಹೊರಟಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭವಿಷ್ಯದಲ್ಲಿ ಕೆ ಜೆ. ಜಾರ್ಜ್ ರಿಗೆ ಕರ್ನಾಟಕದ ಮುಂದಿನ “ಮುಖ್ಯಮಂತ್ರಿಯಾಗುವ ಉತ್ತಮ ಅವಕಾಶ” ದೊರೆಯಬಹುದೇ..? 1.1K votes ಅವಕಾಶವಿದೆ ಅವಕಾಶವಿಲ್ಲ 50-50
ಡ್ಯಾನ್ಸ್ ಮಾಸ್ಟರ್, ನಟ,ನಿರ್ದೇಶಕ ಎ.ಹರ್ಷ ನಿರ್ದೇಶಿಸಿರುವ ಸೂಪರ್ ಡ್ಯೂಪರ್ ಹಿಟ್ ಸಿನೆಮಾ ಯಾವುದು..|Prajaatv Kannada ಭಜರಂಗಿ-1 & 2 ವೇದ ಅಂಜನಿಪುತ್ರ ಸೀತಾರಾಮ ಕಲ್ಯಾಣ