Author: Prajatv Kannada

ಹೆತ್ತ ತಾಯಿ ಮಲಗಿದ್ದಲ್ಲೆ ಉಸಿರು ನಿಲ್ಲಿಸಿದ್ಲು. ಆ ಮಗನಿಗೆ ಅಮ್ಮನನ್ನ ಬಿಟ್ಟು ಬರೊ ಮನಸ್ಸಿರಲಿಲ್ಲ.ಅಕ್ಕಪಕ್ಕದವ್ರಿಗೂ ವಿಚಾರ ಹೇಳಿಲ್ಲ.ಹೀಗೆ ಅಮ್ಮನ ಮೃತದೇಹದ ಜೊತೆಗೆ ಎರಡು ದಿನ‌ ಕಳೆದಿದ್ದ.ಇಂತಹದೊಂದು ಹೃದಯ ವಿದ್ರಾವಕ ಘಟನೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಈ ಫೋಟೊದಲ್ಲೊ ಕಾಣ್ತಿರೊ  ಈಕೆಯ ಹೆಸರು ಅಣ್ಣಮ್ಮ. ಈಕೆ ಪತಿ ಇಳಂಗೋವನ್  . ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರೊ ಗಂಗಾನಗರ ಐದನೇ ಕ್ರಾಸ್ ನಲ್ಲಿ ವಾಸವಿದ್ರು.ಸಣ್ಣದೊಂದು ಸ್ವಂತ ಸೀಟಿನ ಮನೆ.ದಂಪತಿಗೆ 14 ವರ್ಷದ ಒಂದು ಗಂಡು ಮಗು.ಸುಖ ಸಂಸಾರಕ್ಕೆ ಇದಕ್ಕಿಂತ ಹೆಚ್ಚೇನು ಬೇಕಾಗಿರಲಿಲ್ಲ ಬಿಡಿ.ಆದರೆ ಅನಾರೋಗ್ಯ ಅನ್ನೋದು ಇಡೀ ಕುಟುಂಬವನ್ನೇ ಕಾಡಿತು.ಅಷ್ಟೇ ಅಲ್ಲ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗಿದೆ. ಎಂತಹವರೂ ನೋಡಿ ಅಸೂಹೆ ಪಡುವಂತಿದ್ದ ಈ ಸಂಸಾರಕ್ಕೆ ಅನಾರೋಗ್ಯ ಅನ್ನೋದು ಶಾಪವಾಗಿ ಕಾಡಿದೆ..ಹೌದು ಎಂಟು ತಿಂಗಳ ಹಿಂದಷ್ಟೇ ಪತಿ ಎಳಂಗೋವನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದ.ಅಂದಿನಿಂದ ತಾಯಿ ಮತ್ತು 14 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ರು.ತಾಯಿಗೆ ಸ್ಟ್ರೋಕ್ ಆಗಿ ಮಾತು ಕೂಡ ಬಂದ್ ಆಗಿತ್ತು.ತಂದೆಯ ಸ್ನೇಹಿತರ…

Read More

ಸುಂದರ ಸಂಸಾರಕ್ಕೆ ಪತಿಮಹಾಶಯ ಕೊಳ್ಳಿ ಇಟ್ಟು ತಾನು ಸಾಯುವ ನಾಟಕವಾಡಿ ಯಮನಾಗಿದ್ದಾನೆ.ಹತ್ತಾರು ವರ್ಷ ಸಂಸಾರ ಮಾಡಿದ್ದ ಕುಟುಂಬಕ್ಕೆ ಪತಿ ಕೊಳ್ಳಿ ಇಟ್ಟಿದ್ಯಾಕೆ ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ.. ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ಸಾಯಿಸಿರುವ ಹೃದಯ ವಿದ್ರಾಯಕ  ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡರಪಾಳ್ಯ ಗ್ರಾಮದಲ್ಲಿ ನಡೆದಿದೆ..ಕುಟುಂಬ ಸರ್ವನಾಶಕ್ಕೆ ಕ್ಯಾನ್ಸರ್ ರೋಗಿ ಪತಿಗಿದ್ದ ದುಶ್ಚಟಗಳೇ ಕಾರಣವಾಗಿದೆ  ಎಂದು  ಮೃತ ವಿಜಯ ಕುಟುಂಬಸ್ತರು ನಾಗೇಂದ್ರ ಕಡೆ ಬೆರಳು ಮಾಡುತ್ತಿದ್ದಾರೆ. ಕೈಲಾಗದವನು ಮೈಪರಿಚಿಕೊಂಡ ಅನ್ನೋ ಹಾಗೇ ಸಂಸಾರ ಸಾಕೋದಕ್ಕೆ ಆಗದೇ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ವಿಷಹಾಕಿ ಪತಿ ನಾಗೇಂದ್ರ ಕೊಲೆ ಮಾಡಿ ತಾನು ಕೈ ಕೋಯ್ದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ.ಘಟನೆಯಲ್ಲಿ  ನಾಗೇಂದ್ರ ಪತ್ನಿ ವಿಜಯ ಹಾಗೂ ಇಬ್ಬರು ಹೆಣ್ಣು ಮಕ್ಕಳು ೭ ವರ್ಷದ ನಿಷಾ ೫ ವರ್ಷದ ದೀಕ್ಷಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ನಾಗೇಂದ್ರ ,ವಿಜಯ ದಂಪತಿ ೨೦೧೪ರಲ್ಲಿ ಮದುವೆ ಆಗಿದ್ದಾರೆ. ದಂಪತಿಗೆ ಇಬ್ಬರು…

Read More

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆಯೇ ಸುಶ್ಮಿತಾಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಸ್ವತಃ ಸುಶ್ಮಿತಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸುಶ್ಮೀತಾ ಸೇನ್ ‘ನಿಮ್ಮ ಹೃದಯವನ್ನ ಸದಾ ಸಂತೋಷದಿಂದ ಹಾಗೂ ದೈರ್ಯದಿಂದ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ  ಇದು ನನ್ನ ತಂದೆಯ ಬುದ್ಧಿವಂತ ಮಾತುಗಳು. ಒಂದೆರಡು ದಿನಗಳ ಹಿಂದೆಯಷ್ಟೇ ನನಗೆ ಹೃದಯಾಘಾತ ಸಂಭವಿಸಿತು. ನನಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಲಾಗಿದೆ. ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞ ‘’ನನಗೆ ದೊಡ್ಡ ಹೃದಯವಿದೆ’’ ಎಂದು ದೃಢಪಡಿಸಿದ್ದಾರೆ. ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಮತ್ತೆ ಜೀವನ ಸಾಗಿಸಲು ನಾನು ಸಿದ್ಧಳಾಗಿದ್ದೇನೆ. ನನ್ನ ಪ್ರೀತಿ ಪಾತ್ರರಿಗೆ ಈ ಗುಡ್ ನ್ಯೂಸ್‌ ತಿಳಿಸುವ ಸಲುವಾಗಿ ಈ ಪೋಸ್ಟ್…

Read More

ಚಿತ್ರದುರ್ಗ, ಮಾ.02- ಮಾ. 04 ರಂದು ಫಲಾನುಭವಿಗಳ ಸಮಾವೇಶದ ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ಶಾಸಕ ಜಿ ಹೆಚ್. ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಡಿ ಸುಮಾರು 2 ಸಾವಿರ ಕೋಟಿ ರೂ. ಗಳ ಅಭಿವೃದ್ಧಿ ಯೋಜನೆಗಳಿಗೆ ಅಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಈ ಕುರಿತಂತೆ ಆಯಾ ಇಲಾಖಾವಾರು ಕಾಮಗಾರಿಗಳು ಹಾಗೂ ಅನುದಾನದ ವಿವರವನ್ನು ಪಡೆದುಕೊಳ್ಳಬೇಕು. 500 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು, 47 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನ, 593 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಲೋಕೋಪಯೋಗಿ ಇಲಾಖೆಯಡಿ ಸುಮಾರು 200 ಕೋಟಿ ರೂ. ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆಗಳು, 40 ಕೋಟಿ ರೂ. ವೆಚ್ಚದಲ್ಲಿ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ  ನಾಳೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಿರ್ಭಯಾ ನಿಯಿಂದ ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ದೇಶದಾದ್ಯಂತ ಆಯ್ಕೆಯಾದ ಎಂಟು ನಗರಗಳಲ್ಲಿ ಬೆಂಗಳೂರು ಕೂಡ ಒಂದು, ಇದು ಕೂಡ. ಗೃಹ ವ್ಯವಹಾರಗಳ ಸಚಿವಾಲಯದ ಯೋಜನೆಯಾಗಿದೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ನಿರ್ಣಾಯಕವಾಗಿರುವ ರಾಜ್ಯ ರಾಜಧಾನಿಯ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದತ್ತ ಗಮನ ಹರಿಸಿದ್ದಾರೆ.  ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ ನಗರದ ಟೌನ್ ಹಾಲ್‍ನಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದರು. ಇದೀಗ ನಾಳೆ ಮತ್ತೆ ನಗರಕ್ಕೆ ಭೇಟಿ ನೀಡಲಿದ್ದು, ವಾಹನ ಸವಾರರಿಗೆ ಕೊಂಚ ಟ್ರಾಫಿಕ್ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ.

Read More

ನವದೆಹಲಿ: ಭಾರತವನ್ನು ಜಾಗತಿಕ ಆಟೋಮೊಬೈಲ್ ತಯಾರಿಕಾ ಹಬ್ ಮಾಡಲು ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ ಎಂದು ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಲಾಗಿರುವ ಟಾಟಾ ಮೋಟರ್ಸ್‌ನ ವಾಹನಗಳ ಗುಜರಿ ಘಟಕಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿದ ಅವರು, ‘ಸದ್ಯ ಭಾರತದ ಜಿಡಿ‍ಪಿಗೆ ಆಟೋಮೊಬೈಲ್ ಉದ್ಯಮದಿಂದ ಶೇ 7.1 ರಷ್ಟು ಕೊಡುಗೆ ನೀಡಲಾಗುತ್ತಿದೆ. ಈ ಕ್ಷೇತ್ರದ ಗಾತ್ರ 7.8 ಲಕ್ಷ ಕೋಟಿ ರೂನಷ್ಟಿದ್ದು, ಅದನ್ನು ಮುಂಬರುವ ವರ್ಷಗಳಲ್ಲಿ 15 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು. ಪ್ರಸ್ತುತ ಆಟೋಮೊಬೈಲ್ ಕ್ಷೇತ್ರವು ಸುಮಾರು 7.8 ಲಕ್ಷ ಕೋಟಿ ಮೌಲ್ಯದ್ದಾಗಿದೆ ಮತ್ತು GDP ಗೆ 7.1 ರಷ್ಟು ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಕ್ಷೇತ್ರದಿಂದ ದೇಶದಾದ್ಯಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 4 ಕೋಟಿ ಉದ್ಯೋಗಗಳು ಸಿಕ್ಕಿವೆ. ಇದನ್ನು 2025ರ ವೇಳೆಗೆ 5 ಕೋಟಿಗೆ ಹೆಚ್ಚಿಸುವ ಸಂಕಲ್ಪ ಕೈಗೊಳ್ಳಲಾಗಿದೆ. ಈ ಮೂಲಕ ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವನ್ನು ನಂಬರ್ 1…

Read More

ಶಿವಮೊಗ್ಗ : ನನಗೆ ಹಾಗೂ ಕುಮಾರ ಬಂಗಾರಪ್ಪನನ್ನು ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ (Madhu Bangarappa) ಮನವಿ ಮಾಡಿದರು. ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಮತ್ತು ವ್ಯಕ್ತಿಯ ಮೇಲೆ ಚುನಾವಣೆ ನಡೆಸುತ್ತೇನೆ. ಆದರೆ, ಸ್ಪರ್ಧೆ ನನ್ನ ಸಹೋದರನ ಮೇಲೆ ಎಂದು ನಾನು ಹೇಳುವುದಿಲ್ಲ. ದಯಮಾಡಿ ಮಾಧ್ಯಮದವರು, ಅಣ್ಣ-ತಮ್ಮ ಸ್ಪರ್ಧೆ ಎಂದು ಬರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಕೆಟ್ಟ ವ್ಯಕ್ತಿ, ಜನಪ್ರತಿನಿಧಿ, ಸರ್ಕಾರದ ಆಸ್ತಿ ಮಾರಾಟ ಮಾಡಲು ಹೊರಟಿರುವ ಒಬ್ಬ ಬಿಜೆಪಿ ಶಾಸಕನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮುಂದೆ ಯಾವಾಗಲೂ ಮಾಧ್ಯಮಗಳು ನಮ್ಮನ್ನು ಅಣ್ಣ-ತಮ್ಮ ಎಂದು ಕರೆಯಬೇಡಿ ಎಂದರು ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಜನರ ವಿಶ್ವಾಸ ಗಳಿಸುವುದೇ ನನ್ನ ಸ್ಟ್ಯಾಟರ್ಜಿ ಆಗಿದೆ. ಇಡೀ ರಾಜ್ಯದಲ್ಲಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ (Congress), ಜನರ ವಿಶ್ವಾಸ ಗಳಿಸಲು ಹೊರಟಿದೆ. ಬಿಜೆಪಿಯವರು ಬರೀ ಸುಳ್ಳು, ಮೋಸ, ಧರ್ಮದ ಹೆಸರಿನಲ್ಲಿ, ಹಲಾಲ್ ಹೆಸರಿನಲ್ಲಿ ರಾಜಕೀಯ ಮಾಡುತ್ತಾ,…

Read More

ಬೆಂಗಳೂರು: ಮಹಾರಾಷ್ಟ್ರದ‌ ಪೇಶ್ವೆ ಬ್ರಾಹ್ಮಣರು ಶೃಂಗೇರಿಯ ಮಠದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಚರ್ಚೆಯಾಗುತ್ತಿರುವ ಈ ವೇಳೆ ನಡ್ಡಾ ಅವರ ಭೇಟಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ಇದರ ಹಿಂದಿನ‌ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೆ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ ಬಿಜೆಪಿಯನ್ನು ಬಿಡಿಸಿ,‌ ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ‌ ಸಜ್ಜಾಗುತ್ತಿದೆಯೆ? ಎಂದು ಜೆಡಿಎಸ್ ಪ್ರಶ್ನಿಸಿದೆ. ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ! ಇದರ‌ ನಂತರ ರಾಜ್ಯ ಬಿಜೆಪಿ ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸತ್ಯದ ತಲೆ‌ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ…

Read More

ಕಲಬುರಗಿ: ಎಷ್ಟೆ ಪೌಡರ್ ಹಾಕಿದ್ರು ಕೂಡ ನೀನು ವೈಟ್ ಆಗುವುದಿಲ್ಲ ಎಂದು ಪತ್ನಿಯನ್ನೇ (Wife) ಪತಿಯೊಬ್ಬ (Husband) ಕತ್ತು ಹಿಸುಕಿ ಹತ್ಯೆಗೈದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ. ಫರ್ಜಾನ ಬೇಗಂ(28) ಕೊಲೆಯಾದ ಮಹಿಳೆ. ಖಾಜಾ ಪಟೇಲ್ ಹಾಗೂ ಫರ್ಜಾನ ಬೇಗಂ 7 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ (Wedding) ದಿನದಿಂದ ಖಾಜಾ ಪಟೇಲ್ ಹಾಗೂ ಆತನ ಕುಟುಂಬಸ್ಥರು ಫರ್ಜಾನ ಬೇಗಂಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಯ (Dowry) ಜೊತೆಗೆ ಆಕೆಗೆ ಕಪ್ಪಗಿದ್ದೀಯಾ ಎಂದು ಪತಿ ಖಾಜಾ ಪಟೇಲ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಫರ್ಜಾನ ಬೇಗಂ ಗಂಡ ಖಾಜಾ ಪಟೇಲ್ ಕತ್ತು ಹಿಸುಕಿ ಕೊಲೆ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದ ‘ಪರಿಶೀಲನೆ’ಯನ್ನು ಸಮರ್ಥಿಸಿಕೊಂಡಿರುವ ಸಚಿವ ಎಸ್‌.ಜೈಶಂಕರ್‌, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಈ ನೆಲದ ಕಾನೂನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬ್ರಿಟನ್‌ ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲಿ ಅವರಿಗೆ ಹೇಳಿದ್ದಾರೆ. ಜಿ–20 ಗುಂಪಿನ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಕ್ಲೆವರ್ಲಿ ಅವರು, ಜೈಶಂಕರ್‌ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ವೇಳೆ ಈ ವಿಷಯ ತಿಳಿಸಿದರು. ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಇತ್ತೀಚೆಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ‘ಪರಿಶೀಲನೆ’ ನಡೆಸಿದ್ದನ್ನು ಕ್ಲೆವರ್ಲಿ ಈ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬೆಳವಣಿಗೆ ಕುರಿತು ಪ್ರಧಾನಿ ರಿಷಿ ಸುನಕ್‌ ಕಳವಳ ವ್ಯಕ್ತಪಡಿಸಿದ್ದನ್ನು ವಿವರಿಸಿದಾಗ, ಜೈಶಂಕರ್ ಈ ಮಾತುಗಳನ್ನು ಹೇಳಿದರು ಎಂದು ಮೂಲಗಳು ತಿಳಿಸಿವೆ. 2002ರ ಗುಜರಾತ್‌ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಈ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ಕ್ರಮ…

Read More