ಟಾಲಿವುಡ್ ನಟ ರಾಮ್ ಚರಣ್ ಖ್ಯಾತಿ ‘ಆರ್ಆರ್ಆರ್’ ಸಿನಿಮಾದಿಂದ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಆರ್ಆರ್ಆರ್’ ಹಾಲಿವುಡ್ ಅಂಗಳದಲ್ಲಿ ಅವಾರ್ಡ್ ಗೆಲ್ಲುತ್ತಿರುವುದರಿಂದ ಭಾರತೀಯರು ಹೆಮ್ಮೆ ಪಡುವಂತಾಗಿದೆ. ಈಗ ನಟ ರಾಮ್ ಚರಣ್ ಅವರು ವಿದೇಶದಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಸದ್ಯ ರಾಮ್ ಚರಣ್ ಸಂದರ್ಶನ ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ, ರಾಮ್ ಚರಣ್ಗೆ ಗ್ಲೋಬಲ್ ಸ್ಟಾರ್ ಎನ್ನುವ ಸ್ಟಾರ್ ಪಟ್ಟ ನೀಡಿದ್ದಾರೆ. ಎಬಿಸಿ ನಡೆಸಿದ ಜಿಎಂಎ3 ಕಾರ್ಯಕ್ರಮದಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ‘ನಾಟು ನಾಟು.. ಹಾಡಿನ ಬಗ್ಗೆ ಚರ್ಚೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಮ್ ಚರಣ್ ‘ಇದು ಆರಂಭ ಮಾತ್ರ’ ಎಂದಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. 10 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆ ಕಂಡಿದೆ. ಈ ವಿಡಿಯೋನ ರೀಟ್ವೀಟ್ ಮಾಡಿಕೊಂಡಿರುವ ಆನಂದ್ ಮಹಿಂದ್ರಾ ‘ಈ ವ್ಯಕ್ತಿ ಗ್ಲೋಬಲ್ ಸ್ಟಾರ್’ ಎಂದು ರಾಮ್ ಚರಣ್ ಅವರನ್ನು ಕರೆದಿದ್ದಾರೆ. ಆನಂದ್ ಮಹಿಂದ್ರಾ…
Author: Prajatv Kannada
ನಟಿ ಮಲ್ಲಿಕಾ ಸಿಂಗ್ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ‘ರಾಧಾ ಕೃಷ್ಣ’ ಧಾರಾವಾಹಿಯಲ್ಲಿ ರಾಧೆ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮಲ್ಲಿಕಾ ಇದೀಗ ವಿನಯ್ ರಾಜ್ ಕುಮಾರ್ ಗೆ ಜೋಡಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಾಧೆ ಪಾತ್ರದಿಂದಾಗಿ ಮಲ್ಲಿಕಾ ಸಿಂಗ್ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ತಮ್ಮ ಚೊಚ್ಚಲ ಕನ್ನಡ ಸಿನಿಮಾದಲ್ಲಿ ಅವರು ವಿನಯ್ ರಾಜ್ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಮತ್ತು ನಟ ವಿನಯ್ ರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಪಾತ್ರವರ್ಗದ ಬಗ್ಗೆ ಈಗ ಅಪ್ಡೇಟ್ ಸಿಕ್ಕಿದೆ. ಮಲ್ಲಿಕಾ ಸಿಂಗ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಆ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ನಲ್ಲಿಲ ಭರ್ಜರಿ ಕಲೆಕ್ಷನ್ ಮಾಡಿ, ದಾಖಲೆಗಳನ್ನು ನಿರ್ಮಿಸಿದ ವಿಶ್ವಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡ, ಬಾಚಿಕೊಳ್ಳುತ್ತಿರುವ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದ್ದು ಇದಕ್ಕಾಗಿ ಚಿತ್ರತಂಡ ಹೊಸ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಡಿವಿವಿ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ನಲ್ಲಿ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಹಿಂದಿನ ಟ್ರೈಲರ್ನಲ್ಲಿ ಇಲ್ಲದ ಕೆಲವು ದೃಶ್ಯಗಳನ್ನು ಹೊಸ ಟ್ರೈಲರ್ ನಲ್ಲಿ ಸೇರಿಸಲಾಗಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆ ಆಗಿತ್ತು. ಆ ಟ್ರೈಲರ್ 3:15 ನಿಮಿಷಗಳಿತ್ತು. ಈಗ ಬಿಡುಗಡೆ ಆಗಿರುವ ಟ್ರೈಲರ್ 1:47 ನಿಮಿಷ ಮಾತ್ರವೇ ಇದೆ. ಮೂಲ ಟ್ರೈಲರ್ನಲ್ಲಿ ಕೆಲವು ಸಂಭಾಷಣೆಗಳು ಇದ್ದವು, ಆದರೆ ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಕೇವಲ ಆಕ್ಷನ್ ದೃಶ್ಯಗಳು ಹಾಗೂ ನಾಯಕರಿಬ್ಬರ ಗೆಳೆತನ ಸಾರುವ ದೃಶ್ಯದ ತುಣುಕಗಳಷ್ಟೆ ಇವೆ. ಮಾರ್ಚ್ 03 ರಂದು…
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿರುವ ಚಿನ್ನದ ದರ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರ ಜೇಬು ಸುಡುವಂತೆ ಮಾಡಿದೆ. ದೃಢವಾದ ಜಾಗತಿಕ ದರಗಳ ಬೆಂಬಲದೊಂದಿಗೆ ಭಾರತೀಯ ಫ್ಯೂಚರ್ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನದ ಬೆಲೆಗಳು ಮತ್ತೊನ್ನೆ ದಾಖಲೆಯ ಮಟ್ಟಕ್ಕೆ ತಲುಪಿವೆ. ಎಂಸಿಎಕ್ಸ್‌ನಲ್ಲಿ ಗೋಲ್ಡ್ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟದಲ್ಲಿ ಶೇ. 0.3ರಷ್ಟು ಏರಿಕೆ ಕಂಡು 10 ಗ್ರಾಂಗೆ 56,850 ರೂ.ಗೆ ಏರಿಕೆಯಾಗಿವೆ. ಮತ್ತು ಬೆಳ್ಳಿಯು ಕೆಜಿಗೆ 68,743 ರೂ.ಗೆ ಏರಿಕೆ ಕಂಡಿತ್ತು. ಡಾಲರ್ ಮತ್ತು ಅಮೆರಿಕದ ಟ್ರೆಷರಿ ಇಳುವರಿಯಲ್ಲಿನ ಕುಸಿತದಿಂದ ನವೆಂಬರ್ ಆರಂಭದಿಂದಲೂ ಚಿನ್ನದ ಬೆಲೆ ಏರುತ್ತಲೇ ಇದೆ. ನವೆಂಬರ್ ಆರಂಭದಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 6,000 ರೂ.ನಷ್ಟು ಏರಿಕೆ ಕಂಡಿದೆ. “ಪ್ರಸಕ್ತ ವರ್ಷ ಚಿನ್ನದ ದರ ಏರುಗತಿಯಲ್ಲಿಯೇ ಮುಂದುವರಿಯಲಿದೆ. ಬಡ್ಡಿ ದರವು ಅಮೆರಿಕದಲ್ಲಿ ಇಳಿಕೆಯಾಗುವ ಅವಕಾಶಗಳಿವೆ. ಹೀಗಾಗಿ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಚಿನ್ನದ ದರ…
ನಾವು ಭಾರತೀಯರು ತುಂಬಾ ಅದೃಷ್ಟವಂತರು. ಏಕೆಂದರೆ, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ, ಅನೇಕ ಆಯುರ್ವೇದ ಗಿಡಮೂಲಿಕೆಗಳು ಮತ್ತು ಆರೋಗ್ಯಕರ ಪದಾರ್ಥಗಳು ನೈಸರ್ಗಿಕವಾಗಿ ಲಭ್ಯವಿವೆ. ಆದರೆ ದುರದೃಷ್ಟವಶಾತ್, ನಾವು ಅವರನ್ನು ಗುರುತಿಸುವುದಿಲ್ಲ. ಏಕೆಂದರೆ, ಅವುಗಳ ಉಪಯೋಗ ಮತ್ತು ಪ್ರಯೋಜನಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿಲ್ಲ. ಅಂತಹ ಆರೋಗ್ಯಕರ ವಸ್ತಗಳಲ್ಲಿ ಒಂದಾದ ಶುಂಠಿಯ ಪ್ರಯೋಜನಗಳನ್ನು ತಿಳಿದುಕೊಳ್ಳೊಣ ಬನ್ನಿ. ತಾಜಾ ಶುಂಠಿಯನ್ನು ಮಾತ್ರ ಅಡುಗೆ ಮತ್ತು ಚಹಾದಲ್ಲಿ ಬಳಸಲಾಗುತ್ತದೆ. ಆದರೆ, ಅರಿವಿನ ಕೊರತೆಯಿಂದ ನಾವು ಒಣಗಿದ ಶುಂಠಿಯನ್ನು ಎಸೆಯುತ್ತೇವೆ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ, ಸಂಪೂರ್ಣವಾಗಿ ಒಣಗಿದ ಶುಂಠಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಪುಡಿಯನ್ನು ಕಡ, ಚೂರಣ ರೂಪದಲ್ಲಿ ತೆಗೆದುಕೊಳ್ಳಬಹುದು. ಇದರಿಂದ ಆಗುವ ಆರೋಗ್ಯ ಪ್ರಯೋಜನಗಳಿವೆ. ಒಣ ಶುಂಠಿ ಪುಡಿ ಗರ್ಭಿಣಿ ಮಹಿಳೆಯರಿಗೆ ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿದೆ. ಏಕೆಂದರೆ, ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ…
ಸೂರ್ಯೋದಯ: 06.36 AM, ಸೂರ್ಯಾಸ್ತ : 06.28 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಶ್ರೀ ಶುಭಕೃತ ನಾಮ ಸಂವತ್ಸರ ಶಕ ಸಂವತ ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ಅಷ್ಟಮಿ 02:21 AM ತನಕ ನಂತರ ನವಮಿ ನಕ್ಷತ್ರ: ಇವತ್ತು ರೋಹಿಣಿ 07:20 AM ತನಕ ನಂತರ ಮೃಗಶಿರ ಯೋಗ: ಇವತ್ತು ವಿಷ್ಕುಂಭ 04:26 PM ತನಕ ನಂತರ ಪ್ರೀತಿ ಕರಣ: ಇವತ್ತು ಬವ 02:21 AM ತನಕ ನಂತರ ಬಾಲವ 03:16 PM ತನಕ ನಂತರ ಕೌಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 03.51 AM to 05.36 AM ಅಭಿಜಿತ್ ಮುಹುರ್ತ: ಮ.12:05 ನಿಂದ ಮ.12:52 ವರೆಗೂ ಮೇಷ : ಶಿಕ್ಷಕರ ಮಕ್ಕಳಿಗೆ ಮದುವೆ ಯೋಗ ಕೂಡಿ ಬರಲಿದೆ, ವಿಚ್ಛೇದನ…
ಲಂಡನ್: ಬಲವಂತದ ವಿವಾಹವನ್ನು ತಡೆಯಲು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಿ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ. ಈವರೆಗೆ 16 ಅಥವಾ 17 ವರ್ಷದ ಯುವಕ- ಯುವತಿಯರು ಮದುವೆಗೆ ಅರ್ಹರಲ್ಲ ಎನ್ನುವ ಯಾವುದೇ ಕಾನೂನು ಇಲ್ಲದ ಕಾರಣ ಪೋಷಕರ ಒಪ್ಪಿಗೆಯ ಮೇರೆಗೆ ಮದುವೆಯಾಗಬಹುದಿತ್ತು. ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ಜನಾಂಗಗಳು ಈ ರೀತಿಯ ಬಲವಂತದ ಮದುವೆಗೆ ಒಳಗಾಗುತ್ತಿದ್ದರು. ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ಮಣಿಸಲು ಅಲ್ಲಿನ ಸರಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಅಲ್ಲಿನ ಕಟ್ಟಾ ಮುಸ್ಲಿಂ ಮೂಲಭೂತವಾದಿಗಳು ಹೆಣ್ಣು ಮಕ್ಕಳನ್ನು ಭಯಭೀತರನ್ನಾಗಿಸುವ ಮೂಲಕ ಅವರನ್ನು ಶಾಲೆಗಳಿಂದ ದೂರವುಳಿಯುವಂತೆ ಮಾಡಲು ವಿಷ ಉಣಿಸುವಂತಹ ಅಮಾನವೀಯ ಕೃತ್ಯಕ್ಕೆ ಕೈಹಾಕಿದ್ದಾರೆ. ಶಾಲೆಗಳಿಗೆ ತೆರಳುತ್ತಿರುವ ಬಾಲಕಿಯರಿಗೆ ಅವರ ಅರಿವಿಗೆ ಬಾರದಂತೆ ಅಲ್ಪಪ್ರಮಾಣದಲ್ಲಿ ವಿಷಪ್ರಾಶನ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದ್ದು ಇದರಿಂದ ನೂರಾರು ಸಂಖ್ಯೆಯಲ್ಲಿ ಬಾಲಕಿಯರು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವಂತಾಗಿದೆ. ಮೂಲಭೂತವಾದಿಗಳ ಈ ಅಮಾನವೀಯ ನಡೆಗೆ ಇರಾನ್ ಮಾತ್ರವಲ್ಲದೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಾಲಕಿಯರಿಗೆ ವಿಷಪ್ರಾಶನ ಮಾಡಲಾಗುತ್ತಿರುವ ಮಾಹಿತಿಯನ್ನು ಇರಾನ್‌ನ ಆರೋಗ್ಯ ಖಾತೆಯ ಉಪ ಸಚಿವರೇ ದೃಢಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದ್ದು ಶಾಲಾ-ಕಾಲೇಜುಗಳಿಗೆ ತೆರಳುವ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಕಳೆದ ವರ್ಷದ ನವೆಂಬರ್‌ನಿಂದೀಚೆಗೆ ದೇಶಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರ ಸಹಿತ ಹೆಣ್ಣುಮಕ್ಕಳು…
ನವದೆಹಲಿ: ಒಂದೇ ದಿನ ತಜಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಭಾರತದ ಮಣಿಪುರದಲ್ಲೂ ಭೂಮಿ ಕಂಪಿಸಿರುವ ಕುರಿತು ವರದಿಯಾಗಿದೆ. ಇಂದು(ಮಂಗಳವಾರ ಮುಂಜಾನೆ ತಜಕಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದರೆ, ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಈ ನಡುವೆ ಭಾರತದ ಮಣಿಪುರದ ನೋನಿಯಲ್ಲಿ ನಸುಕಿನ ಜಾವ 2.46ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಮಂಗಳವಾರ ಮುಂಜಾನೆ ಟಿಎಂಸಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಬದಲಾಯಿಸಲಾಗಿದೆ ಹ್ಯಾಕರ್‌ಗಳು ಟಿಎಂಸಿಯ ಪ್ರೊಫೈಲ್ ಚಿತ್ರ ಮತ್ತು ಹೆಸರನ್ನು ಬದಲಾಯಿಸಿದ್ದಾರೆ. ಪ್ರೊಫೈಲ್‌ನಲ್ಲಿ ಟಿಎಂಸಿ ಬದಲಿಗೆ ಯುಗಾ ಲ್ಯಾಬ್ಸ್ ಎಂದು ಬರೆಯಲಾಗಿದೆ. ಈ ಬಗ್ಗೆ ಟಿಎಂಸಿ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹ್ಯಾಕ್ ಆದ ಬಳಿಕ ಯಾವುದೇ ಹೊಸ ಟ್ವೀಟ್ನ್ನು ಪೋಸ್ಟ್ ಮಾಡಿಲ್ಲ, ಈ ಬಗ್ಗೆ ಟ್ವಿಟ್ಟರ್ಗೆ ಮಾಹಿತಿ ನೀಡಲಾಗಿದ್ದು, ಸರಿಪಡಿಸುವಂತೆ ಕೇಳಿಕೊಳ್ಳಲಾಗಿದೆ. ಇದು 2020 ರ ಪ್ರಕರಣಕ್ಕೆ ಹೋಲುತ್ತದೆ, ಇದರಲ್ಲಿ ಯುಎಸ್‌ನ ಹಲವಾರು ಪ್ರಮುಖ ವ್ಯಕ್ತಿಗಳ ಟ್ವಿಟರ್ ಹ್ಯಾಂಡಲ್‌ಗಳು ಹ್ಯಾಕ್ ಆಗಿದ್ದವು.