ಡ್ಯಾನ್ಸ್ ಮಾಸ್ಟರ್, ನಟ,ನಿರ್ದೇಶಕ ಎ.ಹರ್ಷ ನಿರ್ದೇಶಿಸಿರುವ ಸೂಪರ್ ಡ್ಯೂಪರ್ ಹಿಟ್ ಸಿನೆಮಾ ಯಾವುದು..|Prajaatv Kannada ಭಜರಂಗಿ-1 & 2 ವೇದ ಅಂಜನಿಪುತ್ರ ಸೀತಾರಾಮ ಕಲ್ಯಾಣ
Author: Prajatv Kannada
ಟಾಲಿವುಡ್ ನಟ ನಾಗಾರ್ಜುನ್ ಗೆ ಸೇರಿದ್ದ ಹೈದರಾಬಾದ್ ನಲ್ಲಿನ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನೆಲಸಮ ಮಾಡಲಾಗಿದೆ. ಆದರೆ ಈ ಆರೋಪವನ್ನು ನಾಗಾರ್ಜುನ ಅವರು ಅಲ್ಲಗಳೆದಿದ್ದು, ‘ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ’ ಎಂದಿದ್ದಾರೆ. ‘ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಏಜೆನ್ಸಿ ನಾಗಾರ್ಜುನ ಅವರಿಗೆ ಸೇರಿದ ಕನ್ವೆಂಷನ್ ಹಾಲ್ನ ಒಡೆದು ಹಾಕಿದೆ. ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿ ಮಾಡಿದ್ದರ ವಿರುದ್ಧ HYDRAA ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈ ಕಟ್ಟಡ ಒಡೆಯಲಾಗಿದೆ. ನಾಗಾರ್ಜುನ ಅವರಿಗೆ ಸೇರಿದ ‘ಎನ್ ಕನ್ವೆಂಷನ್ ಹಾಲ್’ 10 ಎಕರೆ ಜಾಗದಲ್ಲಿ ಇತ್ತು. ಈ ಕಟ್ಟಡ ನಿರ್ಮಾಣದ ವೇಳೆ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಮಾದಾಪುರದ ತಮ್ಮಿಡಿಕುಂಟ ಕೆರೆಯ 1.12 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದ…
ಬಾಗಲಕೋಟೆ: ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಸರ್ಕಾರವು ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದು, ಶಾಲಾ ಕಟ್ಟಡ ದುರಸ್ಥಿಯನ್ನು ಮಾಡುವಲ್ಲಿ ಹಿಂದೆ ಬಿದ್ದಿದೆ ಅಂತಲೇ ಹೇಳಬಹುದು. https://youtu.be/eXQFArGHzBs?si=XinhVfmby4Y5LIQ9 ಅದಕ್ಕೊಂದು ಉದಾಹರಣೆ ಎಂಬಂತೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಕ್ರಾಸ್ ಬಳಿಯಿರುವ ಸರಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಬಹುತೇಕ ಶಿಥಿಲಗೊಂಡಿದೆ. ಹಾಗಾಗಿ ಮಳೆಯಿಂದಾಗಿ ಶಾಲಾ ಮೇಲ್ಛಾವಣಿ ಸೋರುತ್ತಿರುವದರಿಂದ ಜೀವಭಯದಲ್ಲಿ ಮಕ್ಕಳು ಕಲಿಯಬೇಕಾಗಿದೆ. ಈ ಕುರಿತಂತೆ ಆಡಳಿತಮಂಡಳಿ ಅಧಿಕಾರಿಗಳ ಗಮನಕ್ಕೂ ತಂದರು ಕೂಡ ಯಾವುದೇ ಪ್ರಯೋಜನವಾಗದೇ ಕೈಚೆಲ್ಲಿ ಕುಳಿತಿದ್ದಾರೆ. ಕಾರಣ ಇನ್ನಾದರೂ ಶಾಲಾ ಕಟ್ಟಡ ದುರಸ್ಥಿ ಅಥವಾ ನೂತನ ಕಟ್ಟಡ ಮಂಜೂರಾತಿಗೆ ಶಿಕ್ಷಣ ಇಲಾಖೆ ಕ್ರಮವಹಿಸಬೇಕಾಗಿದೆ.
ಜರ್ಮನಿಯ ಸೊಲಿಂಜೆನ್ ನಲ್ಲಿ ಹಬ್ಬದ ವೇಳೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 9.30ಕ್ಕೆ ಘಟನೆ ನಡೆದಿದ್ದು, ಫ್ರೋನೋಫ್ ನ ಸೆಂಟ್ರಲ್ ಸ್ಕ್ವೇರ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಜನರ ಮೇಲೆ ಚಾಕುವಿನಿಂದ ಇರಿಯುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಒಬ್ಬನೇ ವ್ಯಕ್ತಿ ಈ ದಾಳಿ ನಡೆಸಿದ್ದು, ತಕ್ಷಣವೇ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಹಾಗೂ ಇದುವರೆಗೆ ಆತನ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂಭ್ರಮವನ್ನು ಆಯೋಜಿಸಿದ್ದ ಸಂಯೋಜಕರಲ್ಲೊಬ್ಬರಾದ ಫಿಲಿಪ್ ಮುಲ್ಲರ್, ಸಭೆಯನ್ನುದ್ದೇಶಿಸಿ ಮಾತನಾಡಿ, “ಸಮಾಧಾನದಿಂದ ಇರಿ; ದಯವಿಟ್ಟು ನಿಮ್ಮ ದೃಷ್ಟಿ ತೆರೆದಿರಲಿ; ಏಕೆಂದರೆ ದಾಳಿಕೋರನನ್ನು ದುರಾದೃಷ್ಟವಶಾತ್ ಇನ್ನೂ ಹಿಡಿದಿಲ್ಲ” ಎಂದು ಹೇಳಿದರು. ಹಲವು ಮಂದಿಗೆ ಒಬ್ಬ ಚಾಕುಧಾರಿ ನಡೆಸಿದ ದಾಳಿಯಲ್ಲಿ ಗಾಯಗಳಾಗಿವೆ ಎಂದು ವಿವರಿಸಿದರು. ಒಂದು ಹೆಲಿಕಾಪ್ಟರ್ ಮತ್ತು ಹಲವು ಪೊಲೀಸ್ ಮತ್ತು ತುರ್ತು…
ಅಮೆರಿಕದ ಸ್ವತಂತ್ರ ಅಧ್ಯಕ್ಷೀಯ ಅಭ್ಯರ್ಥಿ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು ಮುಂದಿನ ಅಧ್ಯಕ್ಷಿಯ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ರಾಜಕೀಯದಲ್ಲಿ ಅತ್ಯಂತ ಪ್ರಸಿದ್ಧ ಅಮೆರಿಕನ್ ಕುಟುಂಬಗಳಲ್ಲಿ ಒಂದಕ್ಕೆ ಸೇರಿದ ಕೆನಡಿ, “ಶ್ವೇತಭವನಕ್ಕೆ ನಿಜವಾದ ಮಾರ್ಗವನ್ನು” ನೋಡದ ಕಾರಣ ತಾನು ಸ್ಪರ್ಧೆಯಲ್ಲಿ ತೊರೆಯುತ್ತಿದ್ದೇನೆ ಎಂದು ಶುಕ್ರವಾರ ಕೆನಡಿ ಹೇಳಿದ್ದಾರೆ. “ನಾನು ಸ್ಪಾಯ್ಲರ್ ಆದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಅಮೆರಿಕದ ಜನರಿಗೆ ಭರವಸೆ ನೀಡಿದ್ದೆ” ಎಂದು ಕೆನಡಿ ರ್ಯಾಲಿಯಲ್ಲಿ ಹೇಳಿದರು. “ನನ್ನ ಹೃದಯದಲ್ಲಿ, ಈ ಪಟ್ಟುಬಿಡದ, ವ್ಯವಸ್ಥಿತ ಸೆನ್ಸಾರ್ಶಿಪ್ ಮತ್ತು ಮಾಧ್ಯಮ ನಿಯಂತ್ರಣದ ಎದುರು ನಾನು ಚುನಾವಣಾ ಗೆಲುವಿಗೆ ವಾಸ್ತವಿಕ ಮಾರ್ಗವನ್ನು ಹೊಂದಿದ್ದೇನೆ ಎಂದು ನಾನು ಇನ್ನು ಮುಂದೆ ನಂಬುವುದಿಲ್ಲ.” ಟ್ರಂಪ್ ಅವರನ್ನು ಬೆಂಬಲಿಸಲು ಕಾರಣಗಳ ಬಗ್ಗೆ ಮಾತನಾಡಿದ ಕೆನಡಿ, ಡೆಮಾಕ್ರಟಿಕ್ ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇದು ಅವರ ಕಾರಣಗಳಂತೆಯೇ ಇದೆ ಎಂದು ಹೇಳಿದರು.…
ಬೆಂಗಳೂರು:- ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿರುವಂತಹ ಘಟನೆ ನಡೆದಿದೆ. ಮದ್ಯಪಾನ ಮಾಡಿ ಚಾಲಕ ಟಿಪ್ಪರ್ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಟಿಪ್ಪರ್ ಟಾಪ್ಗೆ ವಿದ್ಯುತ್ ಕಂಬದ ವೈರ್ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಇದನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿವೆ. ಸದ್ಯ ಜೆಸಿಬಿ ಮುಖಾಂತರ ವಿದ್ಯುತ್ ಕಂಬ ತೆರವು ಕಾರ್ಯ ನಡೆಸಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಟಿಪ್ಪರ್ ಜಪ್ತಿ ಮಾಡಿ ಚಾಲಕ ಮಣಿ ವಶಕ್ಕೆ ಪಡೆದಿದ್ದಾರೆ. ಮುಖ್ಯರಸ್ತೆಯಲ್ಲೇ ಕಂಬಗಳು ಧರೆಗುರುಳಿದ್ದು ರಸ್ತೆಯ ತುಂಬೆಲ್ಲಾ ಲಾರಿಯಲ್ಲಿದ್ದ ಜಲ್ಲಿ ಹುಡಿ ಬಿದ್ದಿದೆ.
ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. https://youtu.be/XvmqtQnAQL0?si=EtqAdJVSQppmr0-3 ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ,ಚಾಮರಾಜನಗರದಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ರಾಯಚೂರಿನಲ್ಲಿ ಸಣ್ಣ ಮಳೆ ಬರಬಹುದು. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣ ನಿಲ್ಲುತ್ತಿಲ್ಲ. ಬೈಕ್‌ಗೆ ಡ್ಯಾಮೇಜ್ ಮಾಡಿದ್ದೀರಿ, ಹಣ ಕೊಡಿ ಎಂದು ಬೈಕ್ ಸವಾರ ಯುವಕನೊಬ್ಬ ಕಾರಿಗೆ ಅಡ್ಡ ನಿಂತು ಮುಂದೆ ಹೋಗಲು ಬಿಡದೆ ಪೀಡಿಸಿದ ಘಟನೆ ದಾಸನಪುರದ ಮಾಕಳಿ ಕ್ರಾಸ್ ಬಳಿ ಜರುಗಿದೆ. https://youtu.be/MFrIsVqPZLc?si=84KPwDsBB9Ex0OPc ಏಕಾಏಕಿ ಕಾರಿಗೆ ಅಡ್ಡ ಬಂದ ಬೈಕ್ ಸವಾರ, ನನ್ನ ಗಾಡಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ತಗಾದೆ ತೆಗೆದಿದ್ದಾನೆ. ನನ್ನ ಗಾಡಿ ಡ್ಯಾಮೇಜ್ ಮಾಡಿದ್ದೀರಿ ಅಂತ ಕಿರಿಕ್ ಶುರು ಮಾಡಿದ್ದಾನೆ. ಕಾರು ಚಲಾಯಿಸುತ್ತಿದ್ದವರು ಇಳಿದು ನೋಡಿದಾಗ, ಅವನು ಹೇಳುವ ರೀತಿ ಏನೂ ಆಗಿಲ್ಲ ಎಂದು ವಾಪಸ್ ಕಾರ್ ಹತ್ತಿದ್ದಾರೆ. ಆದರೆ ಯುವಕ ಹಣ ಕೊಡಿ ಎಂದು ಕಾರಿಗೆ ಅಡ್ಡ ಬಂದು ನಿಂತು ಗಲಾಟೆ ಮಾಡಿದ್ದಾನೆ. ಕೈಯಿಂದ ಕಾರಿನ ಗ್ಲಾಸ್‌ಗೆ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾನೆ. ಈ ಕುರಿತು ವಿಡಿಯೋ ಸಮೇತ ಘಟನೆ ಬಗ್ಗೆ ಎಕ್ಸ್‌ನಲ್ಲಿ ಕಾರು ಚಾಲಕ ಪೋಸ್ಟ್ ಮಾಡಿದ್ದಾನೆ. ಸುಮಾರು 15 ನಿಮಿಷ ನಮ್ಮ ಜೊತೆ…
ಮಹಿಳೆಯ ವಿಚಿತ್ರ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯ ಹೇಳಿಕೆ ಕೇಳಿದ ಪ್ರತಿಯೊಬ್ಬರು ನಕ್ಕಿದ್ದಾರೆ. ಮಹಿಳೆ ಕೆಲವು ದಿನಗಳ ಹಿಂದೆ ತನ್ನ ಮಗಳಿಗಾಗಿ ಆನ್ ಲೈನ್ ನಲ್ಲಿ ಒಳ ಉಡುಪುಗಳನ್ನು ತರಿಸಿದ್ದರು. ಈ ಒಳ ಉಡುಪುಗಳನ್ನು ಧರಿಸಿದ ಮೇಲೆ ನನ್ನ ಮಗಳು ಗರ್ಭಿಣಿಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾಳೆ. ಆನ್ಲೈನ್ ಅತಿದೊಡ್ಡ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ಟಾವೊಬಾವೊದಿಂದ ಮಹಿಳೆಯೊಬ್ಬರು ಒಂದು ಜೊತೆ ಒಳ ಉಡುಪುಗಳನ್ನು ಖರೀದಿಸಿದ್ದಾರೆ. ತನ್ನ ಮಗಳು ಅದನ್ನು ಧರಿಸಿದ್ದರಿಂದ ಆಕೆ ಗರ್ಭಿಣಿಯಾಗಿದ್ದೇನೆ ಎಂದು ಮಹಿಳೆ ಹೇಳಿದರು. ಆಡಿಟಿ ಸೆಂಟ್ರಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಹಿಳೆ ಗ್ರಾಹಕ ಸೇವಾ ಕೇಂದ್ರಕ್ಕೂ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಬಗ್ಗೆ ಕಂಪನಿ ಪ್ರತಿಕ್ರಿಯಿಸಿದ್ದು, ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಇತರ ಉದ್ಯೋಗಿಗಳನ್ನು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬಾಲಕಿಯ ಗರ್ಭಧಾರಣೆಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ಹೇಳಿದೆ. “ಇದು ವದಂತಿ ಮತ್ತು ಹರಡಬಾರದು” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ವದಂತಿಗಳನ್ನು…