ಬೆಂಗಳೂರು: ಮಾರ್ಚ್ 8 ರಂದು ಮಹಿಳೆಯರ ದಿನಾಚರಣೆ ಪ್ರಯುಕ್ತ ಮಯೂರ ಹೊಟೇಲ್ಗಳಲ್ಲಿ ಮಹಿಳೆಯರಿಗೆ ಶೇ 50 ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 8 ರಂದು ಆಚರಿಸಲಾಗುತ್ತಿರುವ 48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್ಗಳಲ್ಲಿ ಈ ರಿಯಾಯಿತಿ ನೀಡಲಾಗಿದೆ. ಕೊಠಡಿ ಬುಕ್ಕಿಂಗ್ ಮೇಲೆ 50 ಶೇ ಹಾಗೂ ಊಟೋಪಹಾರದ ಮೇಲೆ 20 ಶೇ ರಿಯಾಯಿತಿಯ ವಿಶೇಷ ಕೊಡುಗೆ ನೀಡಲಾಗಿದೆ. ಈ ವಿಶೇಷ ಕೊಡುಗೆ ಮಾ. 6 ರಿಂದ ಮಾ. 10 ರವರೆಗೆ ಅನ್ವಯಿಸಲಿದೆ. ನಿಗಮದ ಹೋಟೆಲ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಒಬ್ಬ ಮಹಿಳೆ ಅಥವಾ ಕುಟುಂಬ ಅಥವಾ ಮಹಿಳೆಯರ ಗುಂಪು, ಪ್ರವಾಸ ಕೈಗೊಳ್ಳುವ ಮಹಿಳಾ ಪ್ರವಾಸಿಗರಿಗೆ 50 ಶೇ ರಿಯಾಯಿತಿ ಘೋಷಿಸಿದೆ. ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಿಗಮದ ಎಂಡಿ ಮನವಿ ಮಾಡಿದ್ದಾರೆ.
Author: Prajatv Kannada
ಬೆಂಗಳೂರು: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ್ ಹತ್ಯೆ ಬಳಿಕ ಆರೋಪಿ ತೌಫಿಲ್ ತಲೆಮರೆಸಿಕೊಂಡಿದ್ದ. ಶನಿವಾರ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಆರೋಪಿ ತೌಫಿಲ್ ಬಂಧನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ 36 ವರ್ಷದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತಮ್ಮ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಮೃತಪಟ್ಟಿದ್ದರು.
ಆತನಿಗೆ ಸಂಗೀತ ಕ್ಷೇತ್ರದಲ್ಲಿಎತ್ತರಕ್ಕೆ ಬೆಳೆಯುವ ದೈತ್ಯ ಪ್ರತಿಭೆ ಹೊಂದಿದ್ದ ಮ್ಯುಜಿಷಿಯನ್. ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಅನ್ನೋ ಛಲ ಟ್ಟುಕೊಂಡಿದ್ದ ಯುವಕ.ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಡ್ತಿದ್ದ.ಅವಕಾಶ ಸಿಕ್ಕಾಗಲೆಲ್ಲ ಜನಪರ ,ಪರಿಸರ,ಜಾನಪದ ಗೀತೆಗಳ ಸಂಗೀತ ಕಾರ್ಯಕ್ರಮ ನೀಡ್ತಿದ್ದ.ಜೊತೆಗೆ ಬೆಸ್ಕಾಂ ನಲ್ಲೂ ಕೆಲಸ ಮಾಡ್ತಿದ್ದ.9 ತಿಂಗಳಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ.ಆದರೆ BWSSB ನಿರ್ಲಕ್ಷ್ಯ ಆತನ ಜೀವವನ್ನೇ ತೆಗೆದಿದೆ.ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು,ಮಗು ಭೂಮಿಗೆ ಕಾಲಿಡೊ ಮೊದಲೇ ತಂದೆ ಸಾವಿನ ಮನೆ ಸೇರಿದ್ದಾನೆ. ಈತ ನಗು ಮೊಗದ ವೀರ. ಜನ ಸಾಮಾನ್ಯರ ದುಃಖದ ದ್ವನಿಯ ಹಾಡುಗಳಿಗೆ ಸಂಗೀತಗಾರ.ಧ್ವನಿ ಇಲ್ಲದವರ ಹಕ್ಕುಗಳ ಹೋರಾಟದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ ಕೀ ಬೋರ್ಡ್ ನುಡಿಸುತ್ತಿದ್ದ ವಿವೇಕ್ ಮೌರ್ಯ ಏನನ್ನಾದರು ಸಾಧಿಸಲೇಬೇಕು ಅನ್ನೋ ಛಲ ಹೊಂದಿದ್ದಾತ.ಪತ್ನಿಗೆ ತಕ್ಕ ಪತಿ.ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದ ಹಾಡುಗಾರ.ಇಂಡಿಯನ್ ಫೋಕ್ ಬ್ಯಾಂಡ್ ನಲ್ಲಿ ಮಿಂಚಿದ್ದ ಮ್ಯೂಸಿಷಿಯನ್..ಕರ್ನಾಟಕದ ಮೂಲೆ ಮೂಲೆಯಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದ ವ್ಯಕ್ತಿ .ಬಿಬಿಎಂಪಿ ಮತ್ತು ಬಿಡಬ್ಲ್ಯೂ ಎಸ್ ಎಸ್ ಬಿ…
ಬಿಜೆಪಿ ವಿರುದ್ದ ಪದೇ ಪದೇ 40% ಕಮಿಷನ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸ ಮತ್ತು ಪುತ್ರ ಪ್ರಶಾಂತ್ ಮನೆಯಲ್ಲಿ ಸಿಕ್ಕ ಹಣ ಬ್ರಹ್ಮಾಸ್ತ್ರವಾಗಿದೆ. ಇದನ್ನೇ ಚುನಾವಣಾ ಅಸ್ತ್ರವಾಗಿಸಿಕೊಂಡಿರುವ ಕೈ ಪಡೆ ಸರ್ಕಾರದ ವಿರುದ್ಧ ಬೀದಿಗಿಳಿದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ್ರು ಕೈ ನಾಯಕರು. ಇವತ್ತಿನ ಕೈ ಪ್ರತಿಭಟನೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.. ಕಳೆದ ಹಲವು ತಿಂಗಳುಗಳಿಂದ ಅದರಲ್ಲೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿಗೆ ಪತ್ರ ಬರೆದ ನಂತರ ನಿರಂತರವಾಗಿ 40%. ಕಮಿಷನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಡೀಲ್ ಪ್ರಕಾಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಸ್ಪಷ್ಟ ಸಾಕ್ಷಿ ಸಿಕ್ಕಂತೆ ಆಗಿದೆ. ಇದೇ ವಿಚಾರವನ್ನು ಚುನಾವಣಾ ಬ್ರಹ್ಮಾಸ್ತ್ರ ವಾಗಿಟ್ಟುಕೊಂಡು ಕಾಂಗ್ರೆಸ್ ಇಂದು ಸಿಎಂ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿತು. ರೇಸ್…
ಬಾಲಿವುಡ್‌ನ (Bollywood) ಸ್ಟಾರ್ ಕಪಲ್ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ (Viraat Kohli) ಜೋಡಿ ಇತ್ತೀಚಿಗೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwara Temple) ವಿರುಷ್ಕಾ ಜೋಡಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ನಟಿ ಅನುಷ್ಕಾ (Anushka Sharma) ಅವರು ಪಿಂಕ್ ಬಣ್ಣದ ಸೆಲ್ವಾರ್ ಧರಿಸಿದ್ದರೆ, ವಿರಾಟ್ ಧೋತಿ ಧರಿಸಿದ್ದಾರೆ. ಇತ್ತೀಚಿಗೆ ಭಾರತ -ಆಸ್ಟ್ರೇಲಿಯಾ ತಂಡದ ನಡುವೆ ಮೂರನೇ ಟೆಸ್ಟ್ ಮ್ಯಾಚ್ ಇಂದೋರ್‌ನಲ್ಲಿ ನಡೆಯಿತು. ಅಲ್ಲಿಂದ ಉಜ್ಜಯನಿಗೆ ಹತ್ತಿರವಿರುವ ಕಾರಣ, ಅನುಷ್ಕಾ ಜೋಡಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ನಟಿ ಅನುಷ್ಕಾ ಮುದ್ದು ಮಗಳ ಆರೈಕೆಯ ಜೊತೆಗೆ ಸಿನಿಮಾಗಳತ್ತ ಕೂಡ ಗಮನ ಕೊಡುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿ ಆಕ್ಟೀವ್ ಆಗುತ್ತಿದ್ದಾರೆ.
ಅಹಮದಾಬಾದ್: ಅದಾನಿ ಸಮೂಹದ ಕಂಪನಿಗಳ (Adani Group Companies) 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಅಮೆರಿಕದ GQG ಕಂಪನಿ (GQG Partners) ಖರೀದಿಸಿದೆ. ಅಮೆರಿಕದ ಹಿಂಡೆನ್‌ಬರ್ಗ್ ವರದಿಯಿಂದ (Hindenburg Research) ಅದಾನಿ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಇಳಿಕೆಯಾಗಿತ್ತು. ಈ ಮಧ್ಯೆ GQG ಕಂಪನಿ ಹೂಡಿಕೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿದೆ. ಎಸ್‌ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ ಈ ಷೇರುಗಳನ್ನು ಮಾರಾಟ ಮಾಡಿದೆ. GQG ಅಧ್ಯಕ್ಷ ಮತ್ತು ಸಿಐಒ ರಾಜೀವ್ ಜೈನ್ (Rajiv Jain) ಪ್ರತಿಕ್ರಿಯಿಸಿ, “ನಾನು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಅದಾನಿ ಕಂಪನಿಗಳು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ದೊಡ್ಡ ಮತ್ತು ಪ್ರಮುಖ ಮೂಲಸೌಕರ್ಯ ಸ್ವತ್ತುಗಳನ್ನು ಹೊಂದಿವೆ ಮತ್ತು ನಿರ್ವಹಿಸುತ್ತವೆ. ಗೌತಮ್ ಅದಾನಿ ಈ ಪೀಳಿಗೆಯ ಅತ್ಯುತ್ತಮ ಉದ್ಯಮಿಯಾಗಿದ್ದಾರೆ. ಭಾರತದ ಆರ್ಥಿಕತೆ ಮತ್ತು ಇಂಧನ ಮೂಲಸೌಕರ್ಯವನ್ನು ಮುನ್ನಡೆಸಲು ಸಹಾಯ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದ್ದಾರೆ. GQG ವಿಶ್ವದ ಪ್ರಮುಖ ಜಾಗತಿಕ ಮತ್ತು…
ಬೆಳಗಾವಿ: ರಾಜಹಂಸಗಡ ಕೋಟೆ (Rajahamsagada) ಕದನ ಮುಂದುವರೆದಿದ್ದು ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Chhatrapati Shree Shivaji Maharaj Statue) ನಾಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದಲ್ಲಿ ಮತ್ತೊಮ್ಮೆ ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆ ಸಂದರ್ಭದಲ್ಲಿ ಮಹಾರಾಷ್ಟ್ರದ (Maharashtra) ತುಳಜಾಪುರದಿಂದ ಆಗಮಿಸಿದ ಅರ್ಚಕರಿಂದ ಶಿವಾಜಿ ಪ್ರತಿಮೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗುತ್ತದೆ. ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಛತ್ರಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಭಾನುವಾರ ಬೆಳಗ್ಗೆ 9ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಪಾಲಕಿ ಉತ್ಸವ, ಧ್ವಜಾರೋಹಣ, ಉತ್ಸವಮೂರ್ತಿ ಪೂಜೆಯೊಂದಿಗೆ ಪ್ರತಿಮೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar), ಮಹಾರಾಷ್ಟ್ರದ ಮಾಜಿ ಗೃಹಸಚಿವ ಸತೇಜ್ ಪಾಟೀಲ್, ಮರಾಠಿ ನಟ ಹಾಗೂ ಸಂಸದ ಡಾ.ಅಮೋಲ್ ಕೋಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ್ ದೇಶಮುಖ್ ಸೇರಿ ಹಲವು ಗಣ್ಯರಿಗೆ ಆಹ್ವಾನ…
ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ ನಡೆಯಲಿರುವ ಸಿಸಿಎಲ್ (CCL) ಪಂದ್ಯಾವಳಿಯಲ್ಲಿ 2023ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನಕ್ಕಾಗಿ ತೆಲುಗು ವಾರಿಯರ್ಸ್ (Telugu Warriors) ಮತ್ತು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಜೈಪುರದಿಂದ ಬೆಂಗಳೂರಿಗೆ ಆಗಮಿಸಿರುವ ತಂಡಗಳು ಬೆಂಗಳೂರಿನಲ್ಲಿ ಇಂದು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ ರಾಯಪುರ ಮತ್ತು ಜೈಪುರದಲ್ಲಿ ಎರಡು ದಿನಗಳ ಕಾಲ ಸಿಸಿಎಲ್ ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳನ್ನು ಮತ್ತು ಸಿನಿಮಾ ಪ್ರೇಕ್ಷಕರನ್ನು ಸೆಳೆದ ಈ ಪಂದ್ಯಗಳು ಅದೇ ರೋಚಕತೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯು ಪಂಜಾಬ್ ಮತ್ತು ತೆಲುಗು ವಾರಿಯರ್ಸ್ ನಂತರ ಚೆನ್ನೈ ರೈನೋಸ್ (Chennai Rhinos) ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯಗಳು ಏರ್ಪಡಲಿವೆ. ಇಂದು ಮಧ್ಯಾಹ್ನ 2.30 ರಿಂದ ಸಂಜೆ 6.30ರವರೆಗೆ ಪಂಜಾಬ್ ಡಿ ಶೇರ್ (Punjab D Sher) ಮತ್ತು ತೆಲುಗು ವಾರಿಯರ್ಸ್ ನಡುವೆ ಪಂದ್ಯವಿದ್ದರೆ, ಸಂಜೆ 7 ಗಂಟೆಯಿಂದ ರಾತ್ರಿ…
ವಸಿಷ್ಠ ಸಿಂಹ ನಟನೆಯ ಬಹು ನಿರೀಕ್ಷಿತ ಚಿತ್ರ ‘ಲವ್ ಲಿ’ ಆರಂಭದಿಂದಲು ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚೇತನ್ ಕೇಶವ್ ನಿರ್ದೇಶನದ ಲವ್ ಲಿ ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡಿದ್ದು, ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದೆ. ಲಂಡನ್ ನಲ್ಲಿ ಸೆರೆ ಹಿಡಿಯುವ ಸಾಂಗ್ ವೊಂದನ್ನು ಹೊರತು ಪಡಿಸಿ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಲವ್ ಲಿ ಟೀಂ ಕಳೆದ ಏಳು ದಿನದಿಂದ ಡಬ್ಬಿಂಗ್ ನಲ್ಲಿ ತೊಡಗಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಚಿತ್ರದ ಡಬ್ಬಿಂಗ್ ಪೋಷನ್ ಕಂಪ್ಲೀಟ್ ಮಾಡಿದ್ದಾರೆ. ಐದು ದಿನಗಳ ಡಬ್ಬಿಂಗ್ ಕೆಲಸ ಬಾಕಿ ಇದೆ ಎಂದು ನಿರ್ದೇಶಕ ಚೇತನ್ ಕೇಶವ್ ತಿಳಿಸಿದ್ದಾರೆ. ‘ಲವ್ ಲಿ’ ಚೇತನ್ ಕೇಶವ್ ನಿರ್ದೇಶನದ ಮೊದಲ ಸಿನಿಮಾ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ವಸಿಷ್ಠ…
ನವದೆಹಲಿ: ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿ, ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಂಬೈ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ವಿಷಯದಲ್ಲಿ ಅರ್ಜಿದಾರರಿಂದ ಯಾವುದೇ ಸೂಚನೆಗಳನ್ನು ಪಡೆಯುತ್ತಿಲ್ಲ ಎಂದು ಮಲ್ಯ ಪರ ವಕೀಲರು ತಿಳಿಸಿದ ನಂತರ ಸುಪ್ರೀಂ ಕೋರ್ಟ್, ಮುಂಬೈ ಕೋರ್ಟ್ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವಿಜಯ್ ಮಲ್ಯ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಮುಂಬೈ ಕೋರ್ಟ್ ಘೋಷಣೆ ಮಾಡಿದ್ದು, ಅದರ ಪ್ರಕ್ರಿಯೆಯ ಭಾಗವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಆದರೆ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಮುಂಚೆ ಮಲ್ಯ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ(ಇಡಿ) ನೋಟಿಸ್ ಜಾರಿ ಮಾಡಿತ್ತು. ಆದರೆ ವಿಜಯ್ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಆದೇಶಕ್ಕೆ…