ಗಂಡ ಹೆಂಡತಿ ಎನ್ನುವುದು ಒಂದು ಅದ್ಬುತ ಸಂಬಂಧ ಆದರೆ ಈಗ ಆ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಇದೀಗ ಆದೆ ಸಾಲಿನಲ್ಲಿ ಒಂದು ಸ್ಟೋರಿ ಹೇಳ್ತೀವಿ ನೋಡಿ. ಹೌದು, ಕಿಶೋರ್ ಹಾಗೂ ಕಾವ್ಯ ಅವರ ಕಥೆಯನ್ನು ಅವರು ಬಹು ಕಾಲ ಪ್ರೀತಿಸಿ ಮದುವೆಯಾಗಿದ್ದವರು. ಇನ್ನೂ ಈ ಜೋಡಿ ನೋಡಲು ಅಷ್ಟೇ ಮುದ್ದಾಗಿದ್ದರು ಅದರಲ್ಲೂ ಕಾವ್ಯ ತಿದ್ದಿದ್ದ ಒಂದು ಬೊಂಬೆಯಂತೆ ಇದ್ದವರು. ಇನ್ನೂ ಇವರ ಪ್ರೀತಿ ಮದುವೆಯ ನಂತರ ದುಪ್ಪಟ್ಟಾಗಿೆತ್ತು ಅದೆಷ್ಟರ ಮಟ್ಟಿಗೆ ಎಂದ್ರೆ ದೇವರ ಕಣ್ಣಿಗೂ ಹೊಟ್ಟೆ ಕಿಚ್ಚು ಬರುವಷ್ಟು. ಹೀಗೆ ದಾಂಪತ್ಯದ ಜೀವನ ನಡೆಸುತ್ತಿದ್ದ ಜೋಡಿಯ ಬಾಳಿನಲ್ಲಿ ಒಂದು ಬಿರುಗಾಳಿ ಬಂದಿತು. ಅದುವೇ ಕಾವ್ಯ ಅವರು ರಸ್ತೆ ಅಪಘಾತದ ದಲ್ಲಿ ಮರಣ ಹೊಂದುತ್ತಾರೆ. ಇನ್ನೂ ಪತ್ನಿಯಲ್ಲಿ ತನ್ನ ಸುಖ ಸಂತೋಷ ಎಲ್ಲವನ್ನೂ ಕಾಣುತ್ತಿದ್ದ ಕಿಶೋರ್ ಗೆ ಕಾವ್ಯ ಅವರ ಸಾವು ಅರಗಿಸಿಕೊಳ್ಳಲಾಗದಷ್ಟು ನೋವನ್ನು ಉಂಟು ಮಾಡಿತ್ತು. ಹೀಗೆ ಕಾವ್ಯ ಅವರ ಸವಾಗಿ ಒಂದು ತಿಂಗಳು ಆಗಿದ್ದರು ಕೂಡ ದಿನಾಲೂ ಕಿಶೋರ್…
Author: Prajatv Kannada
ಪಲಾಯನಕ್ಕೆ ಯತ್ನಿಸುತ್ತಿದ್ದ ವೇಳೆ ಬಾಂಗ್ಲಾದೇಶದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಈಶಾನ್ಯ ಗಡಿ ಭಾಗದ ಸಿಲೆಟ್ ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್’ ತಿಳಿಸಿದೆ. ಸಿಲೆಟ್‌ನ ಕನಾಯ್‌ಘಾಟ್ ಗಡಿಯಲ್ಲಿ ಭಾರತಕ್ಕೆ ಪಲಾಯನ ಮಾಡಲೆತ್ನಿಸುತ್ತಿದ್ದ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ವಿಭಾಗದ ನಿವೃತ್ತ ನ್ಯಾಯಮೂರ್ತಿ ಸಂಶುದ್ದೀನ್ ಚೌದರಿ ಮಾಣಿಕ್‌ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜಿಬಿ ತಿಳಿಸಿದೆ. ಮಧ್ಯರಾತ್ರಿವರೆಗೂ ಅವರನ್ನು ಬಿಜಿಬಿ ಔಟ್‌ಪೋಸ್ಟ್‌ನಲ್ಲಿ ಇರಿಸಲಾಗಿತ್ತು ಎಂದು ಪ್ರೋತೋಮ್ ಪತ್ರಿಕೆ ವರದಿ ಮಾಡಿದೆ. ಮೀಸಲಾತಿ ಸಂಬಂಧ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಆಗಸ್ಟ್ 5ರ ಬಳಿಕ, ಹಿರಿಯ ಮಂತ್ರಿಗಳು ಸೇರಿದಂತೆ ಪದಚ್ಯುತ ಆಡಳಿತದ ಹಲವಾರು ನಾಯಕರನ್ನು ಬಂಧಿಸಲಾಗಿದೆ. ಅವರಲ್ಲಿ ಬಹುತೇಕರ ಮೇಲೆ ಕೊಲೆ ಆರೋಪ ಇದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರು ದಂಡು ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸೇನೆ ಈ ಹಿಂದೆ ತಿಳಿಸಿತ್ತು.
ಮನೆಯ ಗೋಡೆಗಳ ಮೇಲೆ ಅತ್ತಿಂದ ಇತ್ತ ಓಡಾಡುವ ಹಲ್ಲಿಗಳು ಕಂಡರೆ ಹೆಚ್ಚಿನವರಿಗೆ ಭಯ. ಒಂದು ವೇಳೆ ಸುಮ್ಮನೆ ಕುಳಿತುಕೊಂಡಾಗ ಹಲ್ಲಿಗಳು ಮೈ ಮೇಲೆ ಬಿದ್ದು ಬಿಟ್ಟರೆ ಕಿರುಚಾಡಲು ಶುರು ಮಾಡುತ್ತಾರೆ. ಬೆಚ್ಚಗಿನ ಕೊಠಡಿಗಳಲ್ಲಿ ಕಂಡು ಬರುವ ಈ ಜೀವಿಗಳು ಗೋಡೆಗಳ ಸಂಧಿಯಲ್ಲಿ ಹೆಚ್ಚಾಗಿ ಇರುತ್ತವೆ. ಮನೆಯಲ್ಲಿ ಹಲ್ಲಿಕಾಟ ಹೆಚ್ಚಾಗಿದ್ದರೆ ಸುಲಭವಾಗಿ ಈ ಹಲ್ಲಿಗಳನ್ನು ಓಡಿಸಿ ಟೆನ್ಶನ್ ಫ್ರೀ ಆಗಬಹುದು. ಮನೆಯಲ್ಲಿ ನಮಗಿಂತ ಮೊದಲೇ ಬಂದು ಟಿಕಾಣಿ ಹೂಡುವ ನೆಂಟರು ಎಂದರೆ ಅದು ಜಿರಳೆಗಳು ಮತ್ತು ಪಲ್ಲಿಗಳು. ಇವುಗಳ ಸಂತತಿ ಒಮ್ಮೆ ಹೆಚ್ಚಾಗಲು ಬಿಟ್ಟರೆ ಸಾಕು, ಇಡೀ ಮನೆ ತುಂಬಾ ಇವೇ ಇರುತ್ತವೆ. ಯಾವ ಮನೆಯಲ್ಲಿ ಹೆಚ್ಚಾಗಿ ಇಂತಹ ಕೀಟಗಳು ಇರುತ್ತವೆ, ಅಲ್ಲಿ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಕೂಡ ಹಲ್ಲಿಗಳಿಂದ ತೊಂದರೆಗೊಳಗಾಗಿದ್ದರೆ ಚಿಂತಿಸಬೇಕಾಗಿಲ್ಲ. ಸಸ್ಯಗಳ ಸಹಾಯದಿಂದ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಹೇಳುತ್ತಿದ್ದೇವೆ. ರೋಸ್ಮರಿ ಸಸ್ಯ:- ರೋಸ್ಮರಿ ಸಸ್ಯದ ವಿಚಿತ್ರವಾದ ವಾಸನೆಯಿಂದ ಹಲ್ಲಿಗಳು ಮನೆಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ. ನಿಮ್ಮ…
ನವದೆಹಲಿ:- ಪಶ್ಚಿಮ ದೆಹಲಿಯ ಸಾಗರ್‌ಪುರ ಪ್ರದೇಶದಲ್ಲಿ ಅಪಾರ್ಟ್‍ಮೆಂಟ್ ಒಂದರ ಮೂರನೇ ಮಹಡಿಯಿಂದ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಇಡೀ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಗು ಇದ್ದಕ್ಕಿದ್ದಂತೆ ಕೆಳಗಿನ ಬೀದಿಗೆ ಬಿದ್ದಿದೆ. ಸ್ವಲ್ಪ ಹೊತ್ತಿನ ನಂತರ, ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ಕಂಡು ಭಯಭೀತಳಾಗಿ ಮಗುವಿನ ಬಳಿ ಓಡಿಬರುತ್ತಾಳೆ. ಸ್ವಲ್ಪ ಸಮಯದ ನಂತರ ಬಾಲಕಿಯ ಕುಟುಂಬದವರು ಘಟನಾ ಸ್ಥಳಕ್ಕೆ ಬರುತ್ತಾರೆ. ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಗು ಸ್ಥಳದಲ್ಲೇ ಸಾವನಪ್ಪಿದೆ ಎಂದು ವೈದ್ಯರು ಕೈ ಚೆಲ್ಲಿದರು. ಬಾಲಕಿ ಮೂರನೇ ಮಹಡಿಯಿಂದ ಬಿದ್ದಿದ್ದು ಹೇಗೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲ್ಕನಿಯಲ್ಲಿ ಒಬ್ಬಂಟಿಯಾಗಿ ಆಡುತ್ತಿದ್ದಾಗ ಬಾಲಕಿ ಆಕಸ್ಮಿಕವಾಗಿ ಬಿದ್ದಿರಬಹುದು. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪೊಲೀಸರು ಆ ಪ್ರದೇಶದ ಇತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ದಿಸ್ ಪುರ್:- 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಆರೋಪಿಗಳ ಪೈಕಿ ಓರ್ವ ಇಂದು ಬೆಳಿಗ್ಗೆ ಕೆರೆಗೆ ಹಾರಿ ಸಾವನ್ನಪ್ಪಿದ್ದಾನೆ. ಅಸ್ಸಾಂನ ಧಿಂಗ್ ನಲ್ಲಿ ಘಟನೆ ಜರುಗಿದೆ. ʼʼಶುಕ್ರವಾರ ಬಂಧಿಸಲ್ಪಟ್ಟ ಪ್ರಮುಖ ಆರೋಪಿ ತಫಾಜುಲ್ ಇಸ್ಲಾಂ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಕೊಳಕ್ಕೆ ಹಾರಿ ಸಾವನ್ನಪ್ಪಿದ್ದಾನೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಸ್ಸಾಂನ ನಾಗಾಂವ್ ಜಿಲ್ಲೆಯ ಧಿಂಗ್‌ನಲ್ಲಿ ಗುರುವಾರ 14 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಕೊಳದ ಬಳಿಯ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಈ ಘೋರ ಕೃತ್ಯ ಬೆಳಕಿಗೆ ಬಂದಿತ್ತು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದರು ಎಂದು ಬಳಿಕ ಪೊಲೀಸರು ಮಾಹಿತಿ ನೀಡಿದ್ದರು. ಇಂದು ಮುಂಜಾನೆ 3.30ರ ಸುಮಾರಿಗೆ ಅಪರಾಧದ ದೃಶ್ಯವನ್ನು…
ಸೂರ್ಯೋದಯ: 06:04, ಸೂರ್ಯಾಸ್ತ : 06:32 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ಪಂಚಮಿ, ನಕ್ಷತ್ರ: ಅಶ್ವಿನಿ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಬೆ.11:26 ನಿಂದ ಮ.12:55 ತನಕ ಅಭಿಜಿತ್ ಮುಹುರ್ತ: ಬೆ.11:53 ನಿಂದ ಮ.12:43 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಗ್ಲಾಸ್ ಪ್ರೇಮ ವರ್ಕರ್ ಉದ್ದಿಮೆದಾರರಿಗೆ ಆರ್ಥಿಕ ಚೇತರಿಕೆ,ಆಸ್ತಿ ದಾಖಲಾತಿಗಳ ಬಗ್ಗೆ ಗೊಂದಲ. ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ ವಹಿವಾಟದಲ್ಲಿ ಕ್ರಿಯಾಶೀಲರಾಗಿರುವಿರಿ. ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ. ಸೃಜನಶೀಲ ರಾಜಕಾರಣಿಯಾಗಿ ಹೊರಹೊಮ್ಮುವಿರಿ. ಮತಕ್ಷೇತ್ರ ಕಾರ್ಯಗಳಲ್ಲಿ ಹೆಚ್ಚು ಮಗ್ನರಾಗಿ ಯಶಸ್ಸು ಗಳಿಸುವಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಮಾನಸಿಕ ಒತ್ತಡ ದೂರ ಮಾಡಿಕೊಳ್ಳುವಿರಿ. ಜನಬೆಂಬಲ ಮತ್ತು ಆಶೀರ್ವಾದ…
ಹಾಸನ:- ಸಿನಿಮೀಯ ಮಾದರಿಯಲ್ಲಿ ಅಮಾಯಕನನ್ನು ನಟೋರಿಯಸ್ ದಂಪತಿ ಕೊಲೆ ಮಾಡಿರುವ ಘಟನೆ ಜರುಗಿದೆ. ಆಗಸ್ಟ್ 12ರಂದು ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಸ್ಥಳದಲ್ಲಿ ಇದ್ದ ಕಾರಿನ ಆಧಾರದಲ್ಲಿ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿದ್ದರು. ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬುವವರು ಆ.13ರಂದು ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿದ್ದರು. ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರು ಹಾಕಿದ್ದರು. ಆ.13 ರಂದು ಹೊಸಕೋಟೆ ತಾಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು. ಇಷ್ಟೆಲ್ಲ ಆದ ನಂತರ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕಂಡು ಅನುಮಾನಗೊಂಡ ಪೊಲೀಸರು ತೀವ್ರ ತನಿಖೆಗೆ ಇಳಿದ್ರು. ಮೃತ ವ್ಯಕ್ತಿಯ ಕುತ್ತಿಗೆ ಭಾಗದಲ್ಲಿ ಕಂಡು ಬಂದಿದ್ದ ಗುರುತಿನಿಂದ ಅನುಮಾನಗೊಂಡ ಗಂಡಸಿ ಠಾಣೆಯ ಪಿಎಸ್ಐ ಹಾಗೂ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷರರು ತನಿಖೆ ನಡೆಸಿದ್ದು ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೊಸಕೋಟೆಯಲ್ಲಿ ಎಮ್ಆರ್ಎಫ್ ಟೈರ್…
ಹುಬ್ಬಳ್ಳಿ: ಓಮ್ಮಿ ಕಾರು, ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಹೆಬಸೂರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಕೊಪ್ಪಳ ತಾಲ್ಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾದ ಜಾಫರ್‌ಸಾಬ್ (60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ಶವಾಯುಗೆ ಔಷಧಿ ತರಲೆಂದು ಜಾಫರ್‌ಸಾಬ್ ಕುಟುಂಬದವರ ಜೊತೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಹಳಗಾ ಗ್ರಾಮದಲ್ಲಿರುವ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು. ಔಷಧಿ ಪಡೆದು ಊರಿಗೆ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ 10 ಗಂಟೆ ಸುಮಾರಿಗೆ ಹೆಬಸೂರ ಗ್ರಾಮದ ಬಳಿಕ ಕಾರು ಹಾಗೂ ಲಾರಿ ನಡುವೆ ಅಪಘಾತದ ಸಂಭವಿಸಿದೆ. ಅಪಘಾತ ಸಂಭವಿಸಿದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಡಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು…
ಬೆಂಗಳೂರು:- ಸರ್ಕಾರಿ ಇಲಾಖೆಗಳ ನಾಮಫಲಕ ಕನ್ನಡ ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. https://youtu.be/qGMqN1cq1CI?si=F-95_40MJFYOe4yQ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿದ್ದಾರೆ. ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯ ಶೇಕಡ 60 ರಷ್ಟು ನಾಮಫಲಕದ ಮೇಲ್ಬಾಗದಲ್ಲಿರುವಂತೆ ಹಾಗೂ ಶೇಕಡ 40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2024 ಜಾರಿಗೆ ಬಂದಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರನ್ವಯ ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಿದೆ. ಆದುದರಿಂದ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ, ಆಯುಕ್ತಾಲಯ, ನಿರ್ದೇಶನಾಲಯ, ನಿಗಮ, ಮಂಡಳಿ, ಪ್ರಾಧಿಕಾರಗಳ ಆವರಣಗಳಲ್ಲಿನ ಹೆಸರು, ಪದನಾಮ, ಸೇವಾ ಅವಧಿಯ…
ಬೆಂಗಳೂರು:- ಪ್ರಜ್ವಲ್ ಅತ್ಯಾಚಾರ ಎಸಗಿರುವುದು ನಿಜ, ವಿಡಿಯೋಗಳೆಲ್ಲವೂ ಅಸಲಿ ಎಂದು ಎಸ್ಐಟಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದೆ. https://youtu.be/wE5TECK80Fc?si=jpEOj6cb9DPscFF9 ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಾಜಿ ಸಚಿವ ಹೆಚ್ಡಿ ರೇವಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ ಎಂದು ವಿಶೇಷ ತನಿಖಾ ಸಂಸ್ಥೆ ನ್ಯಾಯಲಯಕ್ಕೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ಹೆಚ್ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ಸಂಸ್ಥೆ ಶುಕ್ರವಾರ 2144 ಪುಟಗಳ ದೋಷಾರೋಪಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. 2019 ರಿಂದ 2022ರವರೆಗೆ ಸಂತ್ರಸ್ತೆ ಮನೆ ಕೆಲಸಕ್ಕೆ ನಿಯೋಜನೆಯಾಗಿದ್ದರು. ಈ ವೇಳೆ ಹೆಚ್ಡಿ ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಣ್ಣು ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು…