ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದ ‘ಪರಿಶೀಲನೆ’ಯನ್ನು ಸಮರ್ಥಿಸಿಕೊಂಡಿರುವ ಸಚಿವ ಎಸ್.ಜೈಶಂಕರ್, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಈ ನೆಲದ ಕಾನೂನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರಿಗೆ ಹೇಳಿದ್ದಾರೆ. ಜಿ–20 ಗುಂಪಿನ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಕ್ಲೆವರ್ಲಿ ಅವರು, ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ವೇಳೆ ಈ ವಿಷಯ ತಿಳಿಸಿದರು. ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಇತ್ತೀಚೆಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ‘ಪರಿಶೀಲನೆ’ ನಡೆಸಿದ್ದನ್ನು ಕ್ಲೆವರ್ಲಿ ಈ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬೆಳವಣಿಗೆ ಕುರಿತು ಪ್ರಧಾನಿ ರಿಷಿ ಸುನಕ್ ಕಳವಳ ವ್ಯಕ್ತಪಡಿಸಿದ್ದನ್ನು ವಿವರಿಸಿದಾಗ, ಜೈಶಂಕರ್ ಈ ಮಾತುಗಳನ್ನು ಹೇಳಿದರು ಎಂದು ಮೂಲಗಳು ತಿಳಿಸಿವೆ. 2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಈ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ಕ್ರಮ…
Author: Prajatv Kannada
ವಿಶ್ವಸಂಸ್ಥೆ: ಆಫ್ರಿಕಾ ಮತ್ತು ಏಷ್ಯಾದಲ್ಲಿ ನಿರ್ದಿಷ್ಟವಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದನೆ ಹರಡುತ್ತಿರುವ ಬಗ್ಗೆ ಭಾರತವು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ಪರೋಕ್ಷವಾಗಿ ಪಾಕಿಸ್ತಾನ ಹೆಸರು ಉಲ್ಲೇಖಿಸಿ, ಭಯೋತ್ಪಾದಕರಿಗೆ ಆಶ್ರಯ ಕೊಡುವ ದೇಶವು ಅದರ ಕೃತ್ಯಗಳಿಗೆ ತಕ್ಕ ಬೆಲೆ ತೆರಬೇಕು ಎಂದು ಎಚ್ಚರಿಕೆ ನೀಡಿದೆ ಭಯೋತ್ಪಾದನೆ ಪ್ರಾಯೋಜಿಸುವ ದೇಶವನ್ನು ಅದರ ಕೃತ್ಯಗಳಿಗೆ ವಿಶ್ವ ಸಮುದಾಯವು ಹೊಣೆ ಮಾಡಬೇಕು. ಭಾರತವು ಎಲ್ಲ ಬಗೆಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೊಜ್ ಪ್ರತಿಪಾದಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ಸಂಬಂಧ ಸದಸ್ಯ ರಾಷ್ಟ್ರಗಳ ರಾಯಭಾರಿಗಳ ಮಟ್ಟದ ತ್ರೈಮಾಸಿಕ ಸಭೆಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಭಯೋತ್ಪಾದನೆಯ ಬೆದರಿಕೆ ಗಂಭೀರ ವಿಷಯವೆನ್ನುವುದು ನಿಜ. ಅಂತರರಾಷ್ಟ್ರೀಯ ಸಹಕಾರ, ಒಗ್ಗಟ್ಟಿನ ಪ್ರಯತ್ನಗಳ ನಡುವೆಯೂ ಭಯೋತ್ಪಾದನೆ ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಲ್ಲಿ ಹರಡುತ್ತಲೇ ಇದೆ. ಇದು ತೀರಾ ವಿಷಾದನೀಯ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತದ ಪ್ರಜೆಯೊಬ್ಬರು ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಘಟನೆ ಸಿಡ್ನಿಯ ರೈಲು ನಿಲ್ದಾಣದಲ್ಲಿ ನಡೆದಿದೆ. ಆತ ರೈಲ್ವೆ ನಿಲ್ದಾಣದಲ್ಲಿ ಕೆಲಸಗಾರರೊಬ್ಬರಿಗೆ ಚೂರಿಯಿಂದ ಇರಿದಿದ್ದ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ಭಾರತದ ಕಾನ್ಸುಲೇಟ್ ಜನರಲ್ ಈ ಸಂಬಂಧ ಆಸ್ಟ್ರೇಲಿಯಾದಿಂದ ಸಂಪೂರ್ಣ ವರದಿಯನ್ನು ಕೇಳಿದೆ. ಮೃತನನ್ನು ಸೈಯದ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಆತ ತಮಿಳುನಾಡಿನ ನಿವಾಸಿ ಎಂದು ಹೇಳಲಾಗಿದೆ. ಮಂಗಳವಾರ ಸಿಡ್ನಿಯ ಆಬರ್ನ್ ರೈಲು ನಿಲ್ದಾಣದಲ್ಲಿ 28 ವರ್ಷದ ಕ್ಲೀನರ್ ಮೇಲೆ ಅಹ್ಮದ್ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಇದಾದ ಬಳಿಕ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಅದೇ ಸಮಯದಲ್ಲಿ, ಪೊಲೀಸ್ ಅಧಿಕಾರಿ ಮೂರು ಗುಂಡುಗಳನ್ನು ಹಾರಿಸಿದರು, ಅದರಲ್ಲಿ ಎರಡು ಅಹ್ಮದ್ ಎದೆಗೆ ಬಿದ್ದು ಮೃತಪಟ್ಟಿದ್ದಾನೆ. ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇದು ನೋವಿನ ಸಂಗತಿ ಎಂದರು. ನಮ್ಮ ಪೊಲೀಸ್ ಠಾಣೆಯೊಂದರಲ್ಲಿ ಇದೊಂದು ಮಹತ್ವದ…
ಬೆಂಗಳೂರು: ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಶ್ರೀಗಳನ್ನು ಇಂದು ಮಾಜಿ ಸಿಎಂ ಹಾಗೂ ಜೆಡಿಎಸ್ ವರಿಷ್ಟ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಭೇಟಿ ಮಾಡಿದ್ದು, ಶೇಂದಿ ವೃತ್ತಿ ಪುನಾರಾಂಭಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೂ ಈಡಿಗ,ಬಿಲ್ಲವ ಸಮುದಾಯದ ಅಭಿವೃದ್ಧಿ ಗೆ ಸ್ವಾಮೀಜಿಗಳು ಮನವಿ ಮಾಡಿದ್ದು, ಮುಂದೆ ನಾವು ಅಧಿಕಾರಕ್ಕೆ ಬಂದರೇ ಖಂಡಿತ ನ್ಯಾಯ ಕೊಡಿಸುವುದಾಗಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.
ಹೈದರಾಬಾದ್: ಹಠಾತ್ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ. 38 ವರ್ಷದ ಪರಮೇಶ್ ಯಾದವ್ ಅಲಿಯಾಸ್ ಶ್ಯಾಮ್ ಯಾದವ್ ಹೃದಯಾಘಾತದಿಂದ (Heart attack) ಮೃತಪಟ್ಟ ವ್ಯಕ್ತಿ. ಮಂಗಳವಾರ ತಡರಾತ್ರಿ ನಗರದ ಲಾಲಾಪೇಟ್ ಪ್ರದೇಶದ ಪ್ರೊ.ಜಯಶಂಕರ್ ಇಂಡೋರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ (Badminton) ಆಡುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಖಾಸಗಿ ಉದ್ಯೋಗಿಯಾಗಿದ್ದ ಅವರು ಖಾಯಂ ಆಗಿ ಬ್ಯಾಡ್ಮಿಂಟನ್ ಆಡಲು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಕುಸಿದು ಬಿದ್ದ ತಕ್ಷಣವೇ ಅವರನ್ನು ಗಾಂಧಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರ ಉಸಿರು ನಿಂತು ಹೋಗಿತ್ತು. ಘಟನೆಯ ಬಗ್ಗೆ ಲಾಲಾಗುಡ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ಯಾಮ್ ಯಾದವ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಕಳೆದ 8 ದಿನಗಳಲ್ಲಿ ಸಂಭವಿಸಿದ ಹಠಾತ್ ಹೃದಯಾಘಾತ ಪ್ರಕರಣಗಳಲ್ಲಿ ಇದು ನಾಲ್ಕನೇ ಘಟನೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು, 19 ವರ್ಷದ ಯುವಕ ತನ್ನ…
ಹಾಸನ: ಜೆಡಿಎಸ್ ಹಾಗೂ ಬಿಜೆಪಿಯ ಹಲವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಸ್ಪಷ್ಟನೆಯನ್ನು ನೀಡಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಟಿಕ್ಸ್ ನಲ್ಲಿ ಎಲ್ಲಾ ಚರ್ಚೆಗಳು ಬರುತ್ತಿರುತ್ತದೆ. ನಾನು ಹಾಗೂ ಸುರ್ಜೇವಾಲಾ ಅವರು ಎ.ಮಂಜು ಅವರೊಂದಿಗೆ ಮಾತನಾಡಿದ್ದು ನಿಜ. ಅವರೂ ನಮ್ಮ ಹತ್ತಿರ ಮಾತನಾಡಿದ್ದೂ ನಿಜ. ಜೆಡಿಎಸ್ (JDS) ನವರು ಸೀಟ್ ಅನೌನ್ಸ್ ಮಾಡುವ ಮೊದಲು ಎ.ಮಂಜು ಹಾಗೂ ಪ್ರಜ್ವಲ್ ಅವರ ನಡುವೆ ಕೇಸ್ ನಡೆಯುತ್ತಿರುವುದೂ ನಿಜ. ನಾನು ಅನೌನ್ಸ್ ಮಾಡಬೇಕು ಎಂದಾಗ ಅವರವರದ್ದೇ ದೊಡ್ಡಮಟ್ಟದಲ್ಲಿ ನಮ್ಮ ಪಾರ್ಟಿ ಬಿಟ್ಟು ನಾನು ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಬಿಜೆಪಿಗೆ ಹೋಗಿ ಎಂಪಿ ಚುನಾವಣೆಗೆ ನಿಂತು ಎಲೆಕ್ಷನ್ ಕೇಸ್ ಹಾಕಿರುವುದೂ ನಿಜ ಎಂದು ಹೇಳಿದರು. ಮತ್ತೆ ಜೆಡಿಎಸ್ ನಿಂದ ಎ.ಮಂಜು ಅವರ ಹೆಸರನ್ನು ಅನೌನ್ಸ್ ಮಾಡಿರುವುದು ಸತ್ಯ. ಈಗ ರೇವಣ್ಣ ಹಾಗೂ ಅವರ ಕುಟುಂಬದವರು ಮಂಜು ಅವರೊಂದಿಗೆ ಮಾತನಾಡುತ್ತಿರುವುದು ನಿಜ. ರಾಜಕಾರಣದಲ್ಲಿ ಇಟ್ ಇಸ್ ಆ್ಯನ್…
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಲು ಅನುಮತಿ ಕೋರಿದ್ದಾರೆ. ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಪರೀಕ್ಷೆ ಸಮಯದಲ್ಲಿ ಹಿಜಾಬ್ ಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ, ಈ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳುತ್ತಾನೆ ಎಂದು ನಾವು ಭಾವಿಸುವುದಿಲ್ಲ. ಎಂದು ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಎಡವಟ್ಟು ನಡೆದಿದ್ದು, ಮೆಟ್ರೋ ಸುರಂಗ ಮಾರ್ಗ ನಿರ್ಮಾಣದ ವೇಳೆ ರಸ್ತೆ ಕುಸಿದು ಬಿದ್ದ ಘಟನೆ ಬೆಂಗಳೂರಿನ ಚಿನ್ನಯ್ಯನಪಾಳ್ಯದ ಬಳಿ ನಡೆದಿದೆ. ಬೆಂಗಳೂರಿನ ಚಿನ್ನಯ್ಯನಪಾಳ್ಯದ ಸಮೀಪ ಟಿಡಿಎಂ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಕುಸಿದ ಪರಿಣಾಮ ಪಕ್ಕದಲಿದ್ದ ಮಸೀದಿ ಬಿರುಕು ಬಿಟ್ಟಿದೆ. ಮಸೀದಿ ಗೋಡೆಗೆ ತಡೆಯಾಗಿ ಕಬ್ಬಿಣದ ಜಾಕ್ ಗಳನ್ನ ಸಪೋರ್ಟ್ ನೀಡಲಾಗಿದೆ. ಸದ್ಯ ಮಣ್ಣು ಕುಸಿದಿರುವ ಜಾಗಕ್ಕೆ ಕಾಂಕ್ರಿಟ್ ತುಂಬಿಸಲಾಗಿದೆ. ಸಿಮೆಂಟ್ ಮಿಶ್ರಣ ಹಾಕಿ ಬಿದ್ದ ಬಿರುಕು ಸರಿಪಡಿಸಲಾಗುತ್ತಿದೆ. ಸದ್ಯ ಸಿಬ್ಬಂದಿ ರಸ್ತೆಯನ್ನ ಬಂದ್ ಮಾಡಿದ್ದಾರೆ. ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21 ಕಿ.ಮೀ ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಸುರಂಗ ಮಾರ್ಗ ಕೊರೆಯುವಾಗ ನಿನ್ನೆ ಸಂಜೆ 6:30ರ ಸುಮಾರಿಗೆ ಇದ್ದಕ್ಕಿದ್ದಂತೆ ರಸ್ತೆ ಕುಸಿದು ಬಿದ್ದಿದೆ
ಬೆಂಗಳೂರು: 2023-24ನೇ ಸಾಲಿನ ಬಿಬಿಎಂಪಿ ಆಯವ್ಯಯ (BBMP Budget 2023) ಇಂದು(ಮಾರ್ಚ್ 02) ಮಂಡನೆಯಾಗುತ್ತಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಯಾವುದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ: ಕಟ್ಟಡ ನಕ್ಷೆಗಳ ಡಿಜಟಲೀಕರಣ ರೂ.2 ಕೋಟಿಗಳು ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ರೂ.8 ಕೋಟಿಗಳು ಅನಧಿಕೃತ ಕಟ್ಟಡ ತೆರವುಗೊಳಿಸಲು ಒಟ್ಟು ರೂ.10 ಕೋಟಿಗಳು ಕಸಾಯಿಖಾನೆಗಳ ನಿರ್ವಹಣೆಗಾಗಿ ರೂ.1 ಕೋಟಿಗಳು ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗಾಗಿ ರೂ.7.74 ಕೋಟಿಗಳು ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿಗಳು ಹೊಸ ವಲಯಗಳಿಗೆ ರೂ.2 ಕೋಟಿ ಬೀದಿ ದೀಪಗಳ ನಿರ್ವಹಣೆಗಾಗಿ ರೂ.38 ಕೋಟಿಗಳು ವಿವಿದ್ಯುದ್ದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ರೂ.25 ಕೋಟಿ ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ 60.10 ಕೋಟಿ ರೂ. ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ ರೂ.23.11 ಕೋಟಿ…
ನವದೆಹಲಿ: ಭಾರತೀಯ ವಾಯುಪಡೆಯ (IAF) ಮಾಜಿ ಅಧಿಕಾರಿ ಹಾಗೂ ಅವರ ಪತ್ನಿ ಇಬ್ಬರೂ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯಲ್ಲಿರುವ (South Delhi) ತಮ್ಮ ನಿವಾಸದಲ್ಲಿ ಅಜಯ್ ಪಾಲ್ (37), ಪತ್ನಿ ಮೋನಿಕಾ (32) ಪ್ರತ್ಯೇಕ ಸಂದರ್ಭಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋನಿಕಾ ಪಾಲ್ ತನ್ನ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ಬಾಯಿಯಿಂದ ನೊರೆ ಹೊರಬರುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಅಜಯ್ ಪಾಲ್ ಮೃತಪಟ್ಟಿದ್ದರು. ನಂತರ ಮನೆಗೆ ಮರಳಿದ ಮೋನಿಕಾ ಪಾಲ್ ಮಧ್ಯಾಹ್ನದ ವೇಳೆಗೆ ತಾನೂ ವಿಷ ಸೇವಿಸಿದ್ದಾರೆ. ಅಜಯ್ ಪಾಲ್ ಆತ್ಮಹತ್ಯೆ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಮನೆಗೆ ಬಂದಾಗ ಯಾರೂ ಇಲ್ಲದನ್ನ ಕಂಡು ಸಂಶಯಗೊಂಡಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಆಕೆಯೂ ಮೃತಪಟ್ಟಿರುವುದು ತಿಳಿದುಬಂದಿದೆ. ಅಜಯ್ ಪಾಲ್ ಇತ್ತೀಚೆಗಷ್ಟೇ ವಾಯುಸೇನೆ ತೊರೆದಿದ್ದರು. ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಆತ್ಮಹತ್ಯೆಗೆ…