ಹಾವೇರಿ: ‘ ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗೋ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡೋದು ನಮ್ಮ ಹಕ್ಕು’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ‘ ಸಂವಿಧಾನದ ಮುಖ್ಯಸ್ಥರಾಗಿ ಬಿಜೆಪಿಯವರ ನಿರ್ದೇಶನದಂತೆ ಅವರು ಕ್ರಮ ಜರುಗಿಸಲು ಆಗಲ್ಲ. https://youtu.be/K47ssD6bH5M?si=jko4ZVd_kE7NMTq0 ಹೀಗಾಗಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯ ವೇಳೆ ನಮ್ಮ ಮುಖಂಡರದ್ದು ಭಾಷೆಗಳಲ್ಲಿ ವ್ಯತ್ಯಾಸ ಆಗಿದೆ’ ಎಂದರು. ಬೇರೆ ರೀತಿಯ ಪ್ರತಿಭಟನೆಗೆ ನನ್ನ ಸಮ್ಮತಿ ಇಲ್ಲ. ರಾಜ್ಯಪಾಲರು ದಲಿತರು ಅವರನ್ನು ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವರು ದಲಿತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಆದಾಗ ಕಣ್ಣು ಮುಚ್ಚಿಕೊಂಡು ಕೂತಿದ್ರು’ ಎಂದು ಆರೋಪಿಸಿದರು.ಐವಾನ್ ಡಿಸೋಜಾ ತಪ್ಪು ಮಾಡಿದರೆ ಕಾನೂನು ಕ್ರಮ ಜರುಗಿಸಲಿ. ಆದರೆ ಅವರ ಮನೆ ಮೇಲೆ ಕಲ್ಲು ಹೊಡೆಯೋದು ಹೇಡಿತನ. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಕಿಡಿಗೇಡಿಗಳು ಮಾಡಿದ ಕೆಲಸ ಇದು. ಮೂಡಾ ಆರೋಪ ಪ್ರತ್ಯಾರೋಪ ಆಗ್ತಾ…
Author: Prajatv Kannada
ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ರೈತ ಅಶೋಕ ಕಬ್ಬೇರಳ್ಳಿ ಜಮೀನಿನಲ್ಲಿ ತೊಗರಿ ಬೆಳೆಯಲ್ಲಿ ಸೋಲಾರ್ ಚಾಲಿತ ಯಂತ್ರದ ಮೂಲಕ ಕುಡಿ ಚಿವಟುವಿಕೆ ಪ್ರಾತ್ಯಕ್ಷತೆ ಹಾಗೂ ಟ್ರ್ಯಾಕ್ಟರ್ ಚಾಲಿತ ಬೂಮ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪರಣೆ ಪ್ರಾತ್ಯಕ್ಷಿಕೆ ಜರುಗಿತು. https://youtu.be/YfxVSVPagZY?si=INiebnWNC0jsXRSA ಗದಗ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ ಎಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ಸರಿಯಾದ ಸಮಯದಲ್ಲಿ ಔಷಧ ಮತ್ತು ರಸಗೊಬ್ಬರ ಸಿಂಪಡಣೆ ತಡವಾಗುತ್ತಿದೆ ಟ್ರ್ಯಾಕ್ಟರ್ ಚಾಲಿತ ಬೂಮ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪರಣೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ತಾಲೂಕಿನ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ವಿವಿಧ ಬೆಳೆಗಳ ಮಾಹಿತಿ ಸಂಗ್ರಹಿಸಲು ಬೆಂಗಳೂರು ಕೇಂದ್ರ ಕಚೇರಿಯ ಉಪ ಕೃಷಿ ನಿರ್ದೇಶಕ ಮಂಜು ಎ ಸಿ ವಿವಿಧ ಬೆಳೆ ಉತ್ಪಾದನಾ ತಾಂತ್ರಿಕತೆಗಳ ಛಾಯಾ ಚಿತ್ರವನ್ನು ಸೇರೆ ಹಿಡಿದು ಮಾಹಿತಿ ನೀಡಿದರು. ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ವಿನಾಯಕ್ ನಿರಂಜನ್…
ಮಂಡ್ಯ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾದ್ರೆ ಸಾಕು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಹೌದು ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ಅಂಗಡಿಗಳ ಬೀಗ ಒಡೆದು ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. https://youtu.be/5CGcFtOgdqo?si=xnmuKiSkL7nFuLyA ಬಸವೇಶ್ವರ ಮೆಡಿಕಲ್ ಸ್ಟೋರ್, ಐಸ್ ಕ್ರೀಮ್ ಪಾರ್ಲರ್ ಹಾಗೂ ನಂದಿನಿ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದು, ಮೆಡಿಕಲ್ ಸ್ಟೋರ್ ಬೀಗ ಮುರಿದು 60 ಸಾವಿರ, ಐಸ್ ಕ್ರೀಂ ಪಾರ್ಲರ್ ನಲ್ಲಿ 4 ಸಾವಿರ, ನಂದಿನಿ ಪಾರ್ಲರ್ ನಲ್ಲಿ 10 ದೋಚಿದ್ದಾರೆ. ಕಬ್ಬಿಣದ ರಾಡ್ ಬಳಸಿ ಅಂಗಡಿಗಳ ಬೀಗವ ಮುರಿದು ಒಳನುಗ್ಗಿರುವ ಕಳ್ಳರು, ಮೊಬೈಲ್ ಟಾರ್ಚ್ ಹಾಕಿಕೊಂಡು ಹಣ ಕಳವು ಮಾಡುತ್ತಿರೊ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಈ ಘಟನೆ ಸಂಬಂಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಥೆಯರಿ ಕಾಂಗ್ರೆಸ್ ನದ್ದಾಗಿದೆ ಎಂದರು. ಕುಮಾರಸ್ವಾಮಿ ವಿರುದ್ಧ ಗಣಿ ಪರವಾನಿಗೆ ಪ್ರಕರಣ 2008 ರದ್ದು. 2013ರಿಂದ 18 ರವರೆಗೆ ಹಾಗೂ ಈಗ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ . ಕುಮಾರಸ್ವಾಮಿ ವಿರುದ್ಧ ಯಾಕೆ ತನಿಖೆ ಮಾಡಲಿಲ್ಲ. 2018-19 ರಲ್ಲಿ ಕುಮಾರಸ್ವಾಮಿ ಜತೆ ಕೈ ಜೋಡಿಸಿ ಮೈತ್ತಿ ಸರ್ಕಾರ ಮಾಡಿದ್ದರು. ಆಗ ಸುಮ್ಮನೆ ಇದ್ದಿದ್ದು ಯಾಕೆ ? ತಮಗೆ ಬೇಕಾದಾಗ ಏನೇ ಆದರೂ ಸರಿ, ಬೇಡವಾದಾಗ ತಪ್ಪು ಎಂಬುದು ಯಾವ ನೀತಿ ಎಂದು ಪ್ರಶ್ನಿಸಿದರು.
ಕಲಘಟಗಿ .ಧಾರವಾಡ ಕಲಘಟಗಿ ಭಾರತೀಯ ಜನತಾ ಪಾರ್ಟಿ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದೊಡ್ಡಮಟ್ಟದ ಹಗರಣದ ರೂವಾರಿ ಭ್ರಷ್ಟ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆಆಂಜನೇಯ ವೃತ್ತದಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಾಗರಾಜ್ ಚಬ್ಬಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತ ಬಂದ ನಂತರ ನಮ್ಮ ರಾಜ್ಯದಲ್ಲಿ ಇಲ್ಲಿವರೆಗೂ ಯಾವುದೇ ಒಂದು ಕೆಲಸ ಕೂಡ ಆಗಿಲ್ಲ ರಾಜ್ಯದಲ್ಲಿ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡಿಲ್ಲ ಮಳೆಗಾಲದಿಂದ ಬೆಳೆದ ಬೆಳೆ ಸಂಪೂರ್ಣ ಅತಿವೃಷ್ಟಿಯಿಂದ ಹಾಳಾಗಿದೆ. ಜಿಲ್ಲೆ ಹಾಗೂ ತಾಲೂಕಿನ ಅಧಿಕಾರಿಗಳು ಇಲ್ಲಿವರೆಗೂ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಯ ಬಗ್ಗೆ ಕ್ರಮ ಕೈಗೊಂಡಿಲ್ಲ ರೈತರ ಪರಿಸ್ಥಿತಿ ಅದೊಗತಿಗೆಸಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಧಾರವಾಡ ಹೆಡ್ ಕ್ವಾಟರ್ ನಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ. ತಾಲೂಕಿನ ಬಗ್ಗೆ ಕಾಳಜಿ ಇಲ್ಲದ ಶಾಸಕರಾಗಿದ್ದಾರೆ. ಮೂಡಾ ಹಗರಣದಲ್ಲಿ 400…
ಸಮಾಜದ ವಿವಿಧ ಗಣ್ಯರು, ಹಿರಿ-ಕಿರಿಯ ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ದಕ್ಷಿಣ ಭಾರತದ ಸುದ್ದಿವಾಹಿನಿಗಳ ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. https://youtu.be/S9p4rX_HArg?si=X7AocbNhE6C_1aoo ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ಆಗಸ್ಟ್ 17 ರಂದು “ದಿ ನ್ಯೂ ಇಂಡಿಯನ್ ಟೈಮ್ಸ್” ಆಯೋಜಿಸಿದ 2024 ರ ದಕ್ಷಿಣ ಭಾರತದ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ವರ್ಷದ ಉತ್ತಮ ವಿಭಾಗ ಎಂಬ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿತು. ಪ್ರಶಸ್ತಿಯನ್ನು ಪತ್ರಕರ್ತ ಅರವಿಂದ್ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜೆ. ಎಂ ಚಂದುನವರು, ಮುಖ್ಯಸ್ಥ ಡಾ.ಸಂಜಯಕುಮಾರ ಮಾಲಗತ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಭರತನಾಟ್ಯ, ಕಥಕ್, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳನ್ನು ವಿವಿಧ ನೃತ್ಯ ಕಲಾ ತಂಡಗಳಿಂದ ಪ್ರದರ್ಶಿಸಲಾಯಿತು.…
ರಾಯಚೂರು: ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿಕೌಟುಂಬಿಕ ಕಲಹ ಉಲ್ಬಣಿಸಿ ತನ್ನ ಅಜ್ಜಿ ಹಾಗೂ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ವ್ಯಕ್ತಿ ಪರಾರಿಯಾದ ಘಟನೆ ನಡೆದಿದೆ. ದ್ಯಾಮಮ್ಮ (66) ಹಾಗೂ ಜ್ಯೋತಿ (23) ಕೊಲೆಯಾದ ದುರ್ದೈವಿಗಳು. ದುರಗಪ್ಪ ಇಬ್ಬರನ್ನೂ ಹತ್ಯೆಗೈದ ಆರೋಪಿ. ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ಅಜ್ಜಿ ಹಾಗೂ ಹೆಂಡತಿಗೆ ಮನಸೋಇಚ್ಛೆ ಥಳಿಸುತ್ತಿದ್ದ ಎಂದು ಗೊತ್ತಾಗಿದೆ. ಕೊಲೆ ಬಳಿಕ ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಪ್ರಧಾನಿ ಮಂತ್ರಿಗಳ ವಿಪತ್ತು ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನ ಸಾವು ಕಂಡಿದ್ದರು. ಇದರ ಬೆನ್ನಲ್ಲೇ 8 ಜನರ ಶವ ಶೋಧ ಮಾಡಲಾಗಿತ್ತು. ಇನ್ನೂ ಮೂರು ಜನರ ಶವ ಶೋಧಕಾರ್ಯ ನಡೆಯಬೇಕಿದೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಕಾಗೇರಿಯವರು ವಿಶೇಷ ಪ್ರಕರಣದಡಿ ಕೇಂದ್ರಸರ್ಕಾರದ ಪರಿಹಾರ ನಿಧಿಯಡಿ ಹಣ ಬಿಡುಗಡೆ ಮಾಡಬೇಕೆಂದು ಜುಲೈ 31 ರಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಶಿರೂರು ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪ್ರಧಾನಿ ಮಂತ್ರಿಗಳ ವಿಪತ್ತು ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದಿಂದ NDRF ರಿಲೀಫ್ ಪಂಡ್ ನಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿತ್ತು. ಇದೀಗ ವಿಶೇಷ ಪ್ರಕರಣ ಎಂದು…
ನಮ್ಮ ಪಕ್ಷದ ವರಿಷ್ಠರು ಕರೆದಿದ್ದಾರೆ..ಹಾಗಾಗಿ ನಾನು ಸಿಎಂ ಡಿಸಿಎಂ ಹೋಗ್ತಾ ಇದ್ದೀವಿ ಏನು ಚರ್ಚೆ ಅನ್ನೋದು ಗೊತ್ತಿಲ್ಲ..ನಾವೆಲ್ಲಾ ಸ್ವಯಂ ಪ್ರೇರಿತವಾಗಿ ಹೋಗ್ತಾ ಇದ್ದೀವಿ ನನಗೆ ಇಲಾಖೆ ಕೆಲಸ ಕೂಡ ಇದೆ..ಮನೆಗಳಿಗೆ ಹಣ ಕೊಡಿ ಅಂತ ಕೇಳಿದ್ವಿಅದರ ಬಗ್ಗೆ ಹೋಗ್ತಾ ಇದ್ದೀವಿ ನಾವ್ಯಾರು ಮೂಡಾ ವಿವರ ಕೊಡಲು ಹೋಗ್ತಾ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಡಿಸಿಎಂ ಅಜೆಂಡಾ ಏನು ಅಂತ ಗೊತ್ತಿಲ್ಲ..ಇಲ್ಲಿ ಬಂದಾಗಲೇ ಎಲ್ಲವನ್ನೂ ಹೇಳಿದ್ದೆವು ನಾವು ಇಂಡಿಯಾ ಅಲಯನ್ಸ್ ನಲ್ಲಿ ಇದ್ದೀವಿ ಬೇರೆ ರಾಜ್ಯದಲ್ಲ ರಾಜ್ಯಪಾಲರಿಂದ ಬಿಲ್ ವಾಪಸ್ ವಿಚಾರ ಸ್ವಾಭಾವಿಕವಾಗಿ ಸರ್ಕಾರ ರಾಜ್ಯ ಪಾಲರಿಗೆ ಹೊಂದಾಣಿಕೆ ಇಲ್ಲದೆ ಇದ್ದರೆ ಇಂಥ ಬೆಳವಣಿಗೆ ನಡೆಯುತ್ತೆ ಒಂದೆರಡು ಬಿಲ್ ಕ್ಲಾರಿಫಿಕೇಷನ್ ಕೇಳಿದ್ದು ಬಿಟ್ರೆ ಹೀಗೆ ಬಲ್ಕ್ ಆಗಿ ಕಳಿಸಿರಲಿಲ್ಲ ಸಾಮಾನ್ಯ ಬಿಲ್ ನೂ ವಾಪಸ್ ಕಳಿಸಿದ್ದಾರೆ..ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ ಎಂದರು. ಜಿಂದಾಲ್ ಗೆ ಜಾಗ ಕೊಡುವ…