ಯಾರು ಬೇಕಾದರೂ ದೆಹಲಿಗೆ ಬರಬಹುದು ಬರೋರರನ್ನು ನಾವು ಬೇಡ ಅನ್ನೋಕೆ ಹೋಗೋದಿಲ್ಲ ಇಲಾಖೆ, ಪಾರ್ಟಿ ಕೆಲಸ ಇರುತ್ತದೆ ನಮಗೆ ಪಾರ್ಟಿ,ಇಲಾಖೆ ಸೇರಿ ಎಲ್ಲಾ ಕೆಲಸವೂ ಇದೆ ಅದಕ್ಕಾಗಿ ನಾನು ಸಿಎಂ ದೆಹಲಿಗೆ ಹೋಗ್ತಾ ಇದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. https://youtu.be/E4dHSj4_nkE?si=UH7g9oNaWElXwPgP ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್ ಆದ ಮೇಲೆ ಎಲ್ಲವನ್ನೂ ಹೈಕಮಾಂಡ್ ಗೆ ತಿಳಿಸಬೇಕು.ಯಾವ ರೀತಿ ನಮ್ಮ ಗವರ್ನರ್ ಕಚೇರಿ ದುರುಪಯೋಗ ಆಗಿದೆ ಅಂತಾ ಹದಿನೈದು ಬಿಲ್ ಗಳನ್ನು ಗವರ್ನರ್ ವಾಪಸ್ಸು ಕಳುಹಿಸಿದ್ದಾರೆ ಸ್ಪಷ್ಟನೆ ಕೇಳಲಿ,ನಾನು ತಪ್ಪು ಅಂತಾ ಹೇಳೋದಿಲ್ಲ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾಕೆ ಇರಬೇಕು ಬಿಜೆಪಿ ನಾಯಕರು ಹೇಳಿದ ಕೂಡಲೇ ವಾಪಸ್ಸು ಕಳುಹಿಸಿಬಿಟ್ಟರೆ ಸರೀನಾ….? ಗವರ್ನರ್ ನಡೆ ವಿರುದ್ಧ ಕಿಡಿ ಕಾರಿದ ಡಿಸಿಎಂ ಡಿಕೆಶಿ. ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ದೇವರಲ್ಲಿ ಪ್ರಾರ್ಥನೆ ಮಾಡ್ತೇನೆಂದ ಡಿಕೆಶಿ ಸರ್ಕಾರ ಬೀಳಿಸೋಕೆ ಯಾರ ಕೈಯಲ್ಲೂ ಆಗಲ್ಲ ನಾವು ಸುಮ್ಮನೆ ಕೂರುವವರಲ್ಲ ನಾವು ನಮ್ಮ ಕೆಲಸವನ್ನು ಮಾಡ್ತೇವೆಂದ…
Author: Prajatv Kannada
ರಾಜಕೀಯ ಪ್ರವೇಶದ ಬಳಿಕವೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಮಂಜುನಾಥ್ ಅವರು ವೈದ್ಯಕೀಯ ವೃತ್ತಿ ಮುಂದುವರೆಸಿದ್ದಾರೆ. https://youtu.be/ayoNv9RWgxs?si=2dOhmdXIqieaThhq ಮೂತ್ರಪಿಂಡ ವೈಫಲ್ಯ ಜೊತೆಗೆ ಹೃದಯ ಸಮಸ್ಯೆ ಹೊಂದಿದ್ದ 54 ವರ್ಷದ ರೋಗಿಗೆ ಹೃದಯದ ರಕ್ತನಾಳಗಳಲ್ಲಿ ಶೇ.90ರಷ್ಟು ರಕ್ತ ಪರಿಚಲನೆ ಸ್ಥಗಿತವಾಗಿತ್ತು. ಪರೀಕ್ಷೆ ನಡೆಸಿ ಹೊಸ ಆರ್ಬಿಟಲ್ ಅಥೆರೆಕ್ಟಮಿ ಸಾಧನ ಬಳಸಿ ಸಂಸದರು ಮತ್ತು ಹಿರಿಯ ವೈದ್ಯರಾದ ಡಾ.ಮಂಜುನಾಥ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ಮಾಡಲಾಯಿತು. ರೋಗಿಯು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅರ್ಬಿಟಲ್ ಅಥೆರೆಕ್ಟಮಿ ಸಾಧನಕ್ಕೆ 3 ಲಕ್ಷ ರೂ. ಬೇಕಾಗಿತ್ತು. ಆದರೆ ಸಂಸದರ ವಿನಂತಿ ಮೇರೆಗೆ ಈ ಸಾಧನವನ್ನು ಉಚಿತವಾಗಿ ಒದಗಿಸಲಾಗಿದೆ. ರಾಜಕೀಯ ಪ್ರವೇಶಿಸಿದ ಬಳಿಕವೂ ವೈದ್ಯಕೀಯ ಸೇವೆ ಮುಂದುವರೆಸಿರುವುದಕ್ಕೆ ಡಾ.ಮಂಜುನಾಥ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೋಯ್ಡಾ: ನೋಯ್ಡಾದ ಆಸ್ಪತ್ರೆಯೊಂದರ ಶವಾಗಾರದಲ್ಲಿ ಶವಗಳ ಮುಂದೇಯೇ ಕ್ಲೀನರ್ ಹಾಗೂ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ಮುಳುಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಇರಿಸಿದ್ದ ಶವದ ಮುಂದೆಯೇ ಆಸ್ಪತ್ರೆಯ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತ 6.17 ನಿಮಿಷದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಶವ ಇರುವ ಸ್ಟ್ರೆಚರ್ ಕೆಳಗೆ ಕ್ಲೀನರ್ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಇದಕ್ಕೆ ಮಹಿಳೆ ಸಹ ಅಡ್ಡಿಪಡಿಸುವುದು ಕಂಡುಬಂದಿಲ್ಲ. ಇದರಿಂದ ಇದು ಬಲತ್ಕಾರವಾಗಿ ನಡೆಯುತ್ತಿದ್ದ ಕ್ರಿಯೆಯಲ್ಲ ಎಂಬುದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮಹಿಳೆ ಜೊತೆ ಅಸಹಜ ಸ್ಥಿತಿಯಲ್ಲಿದ್ದ ಕ್ಲೀನರ್ ಅನ್ನು ಈ ವರ್ಷದ ಜೂನ್‌ನಲ್ಲಿ ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಇನ್ನು ಆ ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವೀಡಿಯೋದಲ್ಲಿರುವ ಮಹಿಳೆ ಹೊರಗಿನವಳು ಎಂಬುದು ಸ್ಪಷ್ಟವಾಗಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ. ವೈದ್ಯರನ್ನು 36 ಗಂಟೆಗಳ ಕಾಲ ನಿರಂತರವಾಗಿ ದುಡಿಸಿಕೊಳ್ಳುವುದು ಅಮಾನವೀಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋಲ್ಕತ್ತಾ ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣದ ವಿಚಾರನೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ಕಳವಳ ವ್ಯಕ್ತಪಡಿಸಿತು. ಅಲ್ಲದೇ ಈ ಬಗ್ಗೆ ಕ್ರಮ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು. ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಕೆಲ ವೈದ್ಯರು 36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ನೇಮಕಗೊಂಡ 10 ಮಂದಿ ಸದಸ್ಯರ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸಿ ಎಲ್ಲಾ…
ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ:ಚೌವತಿ ನಕ್ಷತ್ರ: ರೇವತಿ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ:03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಸಂ.5:43 ನಿಂದ ರಾ .7:10 ತನಕ ಅಭಿಜಿತ್ ಮುಹುರ್ತ: ಬೆ.11:53 ನಿಂದ ಮ.12:43 ತನಕ ಮೇಷ : ಕಾರ್ಯಗಳ ಅಡಚಣೆ ನಿವಾರಣೆ, ಗುತ್ತಿಗೆ ಆಧಾರಿತ ಉದ್ಯೋಗಗಳಿಗೆ ಖಾಯಂ, ಕೃಷಿ ಭೂಮಿ ಖರೀದಿಗಾಗಿ ಓಡಾಟ, ದಾಯಾದಿಗಳಿಂದ ಭೂಮಿ ವಿಚಾರಕ್ಕಾಗಿ ವಾಗ್ವಾದ, ರಾಜೀ ಮಾಡಿಕೊಳ್ಳುವುದು ಉತ್ತಮ,ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ ಸರ್ಕಾರದಿಂದ ಸಹಾಯ,ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ,ಬೆಲೆಬಾಳುವ ವಸ್ತು ಹುಡುಕಾಟ, ಮಕ್ಕಳ ಮದುವೆ ಮರು ಮಾತುಕತೆ ಸಂಭವ. ಹೊಸ ಉದ್ಯಮ ಪ್ರಾರಂಭದ ಚಿಂತನೆ. ಶಿಕ್ಷಕವೃಂದದವರ ಮಕ್ಕಳ ಮದುವೆ ಚಿಂತನೆ ಮಾಡುವಿರಿ. ಹೊಸ ಮನೆ…
ಚಿಕ್ಕಮಗಳೂರು: ಎಲ್ಲ ದರ ಏರಿಸಿಯಾಗಿದೆ. ಗಾಳಿಯೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಇವರು ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ ಎಂದು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.`ಯಾರು ಏನೇ ಹೇಳಿದರೂ ನೀರಿನ ಕಂದಾಯ ಜಾಸ್ತಿ ಮಾಡೇ ಮಾಡ್ತೀವಿ’ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ದರ ಏರಿಸಿ ಆಗಿದೆ. ಗಾಳಿ ಏಕೆ ಬಿಟ್ಟಿದ್ದೀರಾ ಅದನ್ನೂ ಏರಿಸಿಬಿಡಿ. ಗಾಳಿಗೊಂದಕ್ಕೆ ಟ್ಯಾಕ್ಸ್ ಹಾಕಿದ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ. ಔರಂಗಜೇಬ್ ಜೇಜಿಯಾ ತಲೆದಂಡ ಹಾಕಿದ್ನಂತೆ, ಇವ್ರು ಅವ್ರಪ್ಪ ಅಂತ ತೋರ್ಸಕ್ಕೆ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.ಡಿಕೆಶಿಯವರೇ ಜನವಿರೋಧಿ ಆಡಳಿತಕ್ಕೆ ಆಯಸ್ಸು ಕಮ್ಮಿ. ಲಿಕ್ಕರ್, ಸ್ಟಾಂಪ್ ಡ್ಯೂಟಿ, ಕರೆಂಟ್, ನೀರು ಹೀಗೆ ಎಲ್ಲಾ ಜಾಸ್ತಿ ಮಾಡಿದ್ದಾರೆ. ಮುಂದಿನ ಬಾರಿ ಜನ ಬುದ್ಧಿ ಕಲಿಸುವುದಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಒಂದೆಡೆ ಗ್ಯಾರಂಟಿ ಕೊಟ್ಟು ಮತ್ತೊಂದೆಡೆ ಎಲ್ಲರ ಜೇಬಿಗೂ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಕಳ್ಳರು ಅಟೆನ್ಷನ್ ಡ್ರಾ ಮಾಡುತ್ತಾ 5 ರೂ. ಬೀಳಿಸಿ 500…
ನಟಿ ಜ್ಯೋತಿ ರೈ ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಾಪಾಗೋದು ಜೋಗುಳ ಧಾರವಾಹಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಈ ಸೀರಿಯಲ್ ನಲ್ಲಿ ದೇವಕಿ ಪಾತ್ರ ಮಾಡ್ತಿದ್ದ ಜ್ಯೋತಿ ರೈ ಅವರನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಪಕ್ಕಾ ಸಂಪ್ರದಾಯಸ್ಥ ಗೃಹಿಣಿಯಾಗಿ ಕಾಣಿಸಿಕೊಂಡಿದ್ದ ಜ್ಯೋತಿ ರೈ ಸಾಕಷ್ಟು ಬದಲಾಗಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಕೊಡಗಿನ ಬ್ಯೂಟಿ, ಕಿರುತೆರೆ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಆಕ್ಟೀವ್ ಆಗಿದ್ದಾರೆ. ತಮ್ಮ ಹಾಟ್ ಹಾಟ್ ಫೋಟೋಗಳನ್ನು ನಟಿ ಶೇರ್ ಮಾಡುತ್ತಲೆ ಇರುತ್ತಾರೆ. ಇತ್ತೀಚೆಗೆ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ. ಸ್ಯಾಂಡಲ್ ವುಡ್ ಬಳಿಕ ಟಾಲಿವುಡ್ ಗೆ ಎಂಟ್ರಿಕೊಟ್ಟಿರುವ ಜ್ಯೋತಿ ರೈ ಅಲ್ಲೂ ಹೆಚ್ಚು ಸಂಚಲನ ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಇದೀಗ ನಟ ಸಖತ್ ಹಾಟ್ ಫೋಟೋಗೆ ಫೋಸ್ ನೀಡಿದ್ದ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜ್ಯೋತಿ…
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಸ್ಯಾಂಡಲ್ ವುಡ್ ಸಿನಿಮಾ ರಂಗವನ್ನು ತಿರುಗಿ ನೋಡುವಂತೆ ಮಾಡಿದ್ದ ಕಾಂತಾರ ಸಿನಿಮಾವನ್ನು ಪರಭಾಷೆಯ ಸ್ಟಾರ್ ನಟರು ನೋಡಿ ಹ್ಯಾಟ್ಸ್ ಆಫ್ ಎಂದಿದ್ದರು. ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕರೆ, ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ. ಇದೀಗ ಇಡೀ ತಂಡಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅಭಿನಂದನೆ ತಿಳಿಸಿದ್ದಾರೆ ಇತ್ತೀಚೆಗೆ ಹೈದರಾಬಾದ್ನಲ್ಲಿ ‘ಮಾರುತಿ ನಗರ ಸುಬ್ರಹ್ಮಣ್ಯ’ ಚಿತ್ರದ ಪ್ರೀ ರೀಲೀಸ್ ಇವೆಂಟ್ ನಡೆದಿದೆ. ರಾವ್ ರಮೇಶ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಮಾತನಾಡುವಾಗ ಅವರು ‘ಕಾಂತಾರ’ ತಂಡಕ್ಕೆ ಶುಭ ಕೋರಿದ್ದಾರೆ. ‘ನ್ಯಾಷನಲ್ ಅವಾರ್ಡ್ ಗೆದ್ದ ಎಲ್ಲರಿಗೂ ಅಭಿನಂದನೆಗಳು. ನನಗೆ ಹಿಂದಿನ ವರ್ಷ ರಾಷ್ಟ್ರ ಪ್ರಶಸ್ತಿ ಬಂದಾಗ ಮುಂದಿನ ವರ್ಷ ಕಾಂತಾರ ಚಿತ್ರಕ್ಕೆ ಅವಾರ್ಡ್…
2017ರಲ್ಲಿ ಮಲಯಾಳಂನ ಖ್ಯಾತಿ ನಟಿಯ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದ ಬಳಿಕ ಹೇಮಾ ಸಮಿತಿಯನ್ನು ಸ್ಥಾಪಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿತ್ತು. ಇದರಲ್ಲಿ ಸಾಕಷ್ಟು ಆಘಾತಕಾರಿ ವಿಚಾರಗಳನ್ನು ಹೇಳಲಾಗಿದೆ ಎಂಬ ವಿಚಾರ ಈಗ ರಿವೀಲ್ ಆಗಿದೆ. ಮಲಯಾಳಂ ಕಲಾವಿದರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಲೇ ಇದೆ ಎಂದು ಸಮಿತಿಯಲ್ಲಿ ಹೇಳಲಾಗಿತ್ತು. ಆದರೆ ಇದನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಪಾರ್ವತಿ ಮೆನನ್ ತಳ್ಳಿ ಹಾಕಿದ್ದಾರೆ. ‘ಜನರು ಹೇಳುವುದಕ್ಕೆ ನನ್ನ ಸಮ್ಮತಿ ಇಲ್ಲ. ಮಲಯಾಳಂ ಇಂಡಸ್ಟ್ರಿ ಒಳಗೆ ತುಂಬಾ ಕೊಳೆತು ಹೋಗಿದೆ ಎಂದು ವರದಿಯಲ್ಲಿ ಇದೆ. ನಾವು ಒಳಗಿನಿಂದ ಚೆನ್ನಾಗಿಯೇ ಇದ್ದೇವೆ. ಹೀಗಾಗಿಯೇ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ. ಯಾವುದಾದರೂ ಜಾಗದಿಂದ ಯಾವುದೇ ವಿಚಾರವೂ ಕೇಳುತ್ತಿಲ್ಲ ಎಂದರೆ ಆಗ ನೀವು ಚಿಂತಿಸಬೇಕು’ ಎಂದಿದ್ದಾರೆ. ‘2019ರಲ್ಲಿ ವರದಿ ಸಲ್ಲಿಕೆ…
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ 65 ವರ್ಷದ ವೃದ್ದೆ ರೋಗಿಯ ಮೇಲೆ 24 ವರ್ಷದ ಯುವಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇರ್ಫಾನ್ (24) ಎಂಬಾತ ವೃದ್ಧೆಯನ್ನೂ ಬಿಡದ ಕಾಮುಕ. ಇರ್ಫಾನ್ ಚಿಂತಾಮಣಿ ನಗರದ ಹೈದರಾಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಈತನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.