Author: Prajatv Kannada

ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆಯುತ್ತಾ ಬಂದಿವೆ. 1975ರ ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಹಲವು ವರ್ಷ ಯಶಸ್ವಿ ಪ್ರದರ್ಶನ ಕಂಡಿದ್ದು ಈ ಸಿನಿಮಾದಲ್ಲಿ ಅಮಿತಾಭ್ ಅವರ ಪಾತ್ರ ಗಮನ ಸೆಳೆಯಿತು. ಈ ಸಿನಿಮಾವನ್ನು ರಿಮೇಕ್ ಮಾಡುವ ಆಸೆಯನ್ನು ಸಲ್ಮಾನ್ ಖಾನ್ ವ್ಯಕ್ತಪಡಿಸಿದ್ದಾರೆ. ಸಲಿಮ್ ಖಾನ್ ಹಾಗೂ ಜಾವೇದ್ ಅಖ್ತರ್ ಅವರ ಜೀವನ ಆಧರಿಸಿ ಡ್ಯಾಕ್ಯುಮೆಂಟರಿ ಸೀರಿಸ್ ರಿಲೀಸ್ ಮಾಡಲಾಗಿದೆ. ಇಬ್ಬರೂ ಸೇರಿ ‘ಶೋಲೆ’ ಸಿನಿಮಾಗೆ ಚಿತ್ರಕಥೆ ಬರೆದಿದ್ದರು. ಈ ಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಜಯಾ ಬಚ್ಚನ್, ಹೇಮಾ ಮಾಲಿನಿ ಮೊದಲಾದವರು ನಟಿಸಿದ್ದರು. ಈ ಚಿತ್ರದ ರಿಮೇಕ್ ಬಗ್ಗೆ ಸಲ್ಲು ಮಾತನಾಡಿದ್ದಾರೆ. ನಿರ್ದೇಶಕ ಫರಾ ಖಾನ್ ಜೊತೆ ಈ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ‘ಸಲಿಮ್-ಜಾವೇದ್ ಅವರ ಯಾವ ಚಿತ್ರವನ್ನು ರಿಮೇಕ್ ಮಾಡಬೇಕು ಎಂದು ನಿಮಗೆ ಅನಿಸುತ್ತಿದೆ’ ಎಂದು ಫರಾ ಕೇಳಿದ್ದಾರೆ.…

Read More

ಬೆಂಗಳೂರು: ನಗರದ ಕಾಟನ್ ​ಪೇಟೆಯ ಅಂಜನಪ್ಪ ಗಾರ್ಡನ್​ನಲ್ಲಿ ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ಕೊಲೆಯಾದ ಘಟನೆ ಜರುಗಿದೆ. https://youtu.be/YfxVSVPagZY?si=vXZHl4qBD4ZO5FRT ಆಟೋ ಚಾಲಕ ಶರತ್ ಎಂಬಾತ ಸ್ನೇಹಿತ ಶರತ್​ಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಅಂಜನಪ್ಪ ಗಾರ್ಡನ್​​ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ‌ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಬಳಿಕ ವಾಪಸ್​ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಚಾಲಕ ಶರತ್, ತನ್ನ ಸ್ನೇಹಿತ ಮತ್ತೋರ್ವ​ ಶರತ್​ಗೆ ಚಾಕುವಿನಿಂದ ಇರಿದಿದ್ದ. ಗಾಯಾಳುವನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಅಂತಿಮ ವಿಧಿವಿಧಾನ ಸಂದರ್ಭದಲ್ಲಿ ಮಹಿಳೆಯೋರ್ವಳನ್ನು ಮೃತ ಶರತ್ ಬೈದಿದ್ದ. ಈ ವೇಳೆ ಆರೋಪಿ ಶರತ್ ಯಾಕೆ ಬೈಯುತ್ತಿಯಾ ಎಂದು ಕೇಳಿದ್ದ. ಅಷ್ಟೇ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಆರೋಪಿ ಶರತ್​ ಪರಾರಿ ಆಗಿದ್ದಾನೆ. ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ‌ ಪ್ರಕರಣ…

Read More

ಸಿಗ್ನಲಿಂಗ್ ಟೆಸ್ಟ್ ಕಾರಣ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಮಾಹಿತಿ ಕೊರತೆಯಿಂದ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಪರದಾಡುವಂತಾಯಿತು. https://youtu.be/5CGcFtOgdqo?si=1atU_u_3KCPMrQgU ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಧ್ಯೆ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಅನೇಕ ಪ್ರಯಾಣಿಕರು ಮೆಟ್ರೋ ಸ್ಟೇಷನ್​ಗೆ ಬಂದು ವಾಪಸ್​ ಹೋಗುತ್ತಿದ್ದಾರೆ. ಯಾವುದೇ ಮಾಹಿತಿ ಇಲ್ಲದ ಕಾರಣ ಅನೇಕ ಪ್ರಯಾಣಿಕರು ಸ್ಟೇಷನ್​ಗೆ ಬಂದು ವಾಪಸ್ ಹೋಗುತ್ತಿದ್ದಾರೆ. ಆಟೋ ಚಾಲಕರು ದುಪ್ಪಟ್ಟು ದರ ವಸೂಲಿಗೆ ಮುಂದಾದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬಿಎಂಆರ್​ಸಿಎಲ್ ಹತ್ತು ಮೆಟ್ರೋ ಫೀಡರ್ ಬಸ್​​ಗಳ ವ್ಯವಸ್ಥೆ ಮಾಡಿದೆ. ಮೆಟ್ರೋ ಸಂಚಾರ ಸ್ಥಗಿತದ ಬಗ್ಗೆ ಬಿಎಂಆರ್​ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 20, 23 ಮತ್ತು 30 ಹಾಗೂ ಸೆಪ್ಟೆಂಬರ್ 6 ಮತ್ತು 11 ರಂದು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್ ತಿಳಿಸಿತ್ತು.

Read More

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕನಸಿನ ಭಾಗವಾಗಿ ಗುರುವಾರ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. 12,690 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ, 500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಲ್ಲಿ 250 ಅಡಿ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೂ ಅನುಮೋದನೆ ನೀಡಿದೆ. ಅಲ್ಲದೇ, ಮೈಸೂರು ಮಿನರಲ್ ಸಂಸ್ಥೆ ಎ.ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನಂತೆ ಬಾಕಿ ವೇತನ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಎಂಎಸ್‌ಎಂಇ ಕೈಗಾರಿಕೆಗಳಿಗೆ ವೇಗ ನೀಡಲು ಕೈಗಾರಿಕಾ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಸಂಡೂರಿನಲ್ಲಿರುವ 3,724 ಎಕರೆ ಭೂಮಿಯನ್ನು ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಕ್ರಯಪತ್ರ ಮಾಡಿಕೊಡಲು ಸಮ್ಮತಿ ಸೂಚಿಸಿದೆ. ಅಲ್ಲದೇ, ಸಹಕಾರಿ ಸಂಸ್ಥೆಗೆ 1,600 ಕೋಟಿ ರೂ. ಸಾಲ ಪಡೆಯಲು ಖಾತರಿಯನ್ನು ನೀಡಲು ಮುಂದಾಗಿದೆ. ಏನಿದುಟನೆಲ್ರೋಡ್ಯೋಜನೆ? * ಹೆಬ್ಬಾಳ – ಸಿಲ್ಕ್‌ಬೋರ್ಡ್ 18 ಕಿ.ಮೀ ಸುರಂಗ * ಬೋಟ್ ಶೈಲಿಯ ಸುರಂಗ ಮಾರ್ಗ ರಸ್ತೆ *…

Read More

ಬೆಂಗಳೂರು: ಒಂದೆಡೆ ಬಾಕಿ ಕೇಸ್‌ಗಳ ಇತ್ಯರ್ಥಕ್ಕೆ ರಾಜ್ಯಪಾಲರಿಗೆ ಸಲಹೆ ಕೊಟ್ಟಿರೋ ಸರ್ಕಾರ ಇನ್ನೊಂದೆಡೆ, ಪೋಕ್ಸೋ ಕೇಸಲ್ಲಿ ಯಡಿಯೂರಪ್ಪ ಬಂಧಿಸಿದಂತೆ ನೀಡಿರೋ ಮಧ್ಯಂತರ ರಕ್ಷಣೆ ತೆರವು ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ. ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಿದ್ದ ಆದೇಶ ತೆರವು ಕೋರಿ ಸಿಐಡಿ ಎಸ್​ಪಿಪಿ ಎಸ್‌ಪಿಪಿ ಅಶೋಕ್ ನಾಯ್ಕ್ ಅವರಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಬಿಎಸ್​ವೈ ಪರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿದೆ. ಇದರಿಂದ ಯಡಿಯೂರಪ್ಪ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಜಡ್ಜ್‌ ಹೇಳಿದ್ದೇನು? ಈ ಅರ್ಜಿ ಲಿಸ್ಟ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಇಂದು ಲಿಸ್ಟ್ ಆಗಿಲ್ಲ. ಮಧ್ಯಾಹ್ನ 2.30ಕ್ಕೆ ವಕೀಲರು ಮನವಿ ಮಾಡಿದ್ರು. ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ಇದೆ. ಅದಕ್ಕೆ ನೀವು ಚಾರ್ಜ್ ಶೀಟ್ ವಜಾಕ್ಕೆ ಕೇಳಲು ಆಗಲ್ಲ. FIR ಅರ್ಜಿ ರದ್ದು ಮಾಡುವ ಅರ್ಜಿ ವಾಪಸ್ ತೆಗೆದುಕೊಂಡು, ಚಾರ್ಜ್ ಶೀಟ್ ವಜಾಗೊಳಿಸಸಲು…

Read More

ಬೆಂಗಳೂರು: ಸಿಎಂ ವಿರುದ್ದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅವಕಾಶ ಹಿನ್ನಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ11 ಗಂಟೆಗೆ ಒಟ್ಟಿಗೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ತೆರಳಲಿರುವ ಸಿಎಂ, ಡಿಸಿಎಂ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ. ರಾಜ್ಯಪಾಲರ ವಿರುದ್ಧ ಸಮರ ಸಾರಿರೋ ಸಿದ್ದರಾಮಯ್ಯಗೆ ತಮ್ಮ ಪಕ್ಷದ ಎಲ್ಲಾ ಶಾಸಕರ ಸಾಥ್ ಸಿಕ್ಕಿದೆ. ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ​ ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಚಲ್ಲಿ ಒಗ್ಗಟ್ಟಿನ ಹೋರಾಟದ ತೀರ್ಮಾನವಾಗಿದೆ. ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ ಬಳಿಕ ಆಗಿರುವ ಬೆಳವಣಿಗೆ, ಕೋರ್ಟ್​​​ನಲ್ಲಿ ರಿಲೀಫ್ ಸಿಕ್ಕಿರುವ ಕುರಿತು ಸಿದ್ದರಾಮಯ್ಯನವರು ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಶಾಸಕಾಂಗ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಕೈಗೊಂಡಿರುವ ನಿರ್ಣಯವ

Read More

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧೀಸಿದಂತೆ ಆರ್ಟಿಕಲ್ 163ರ ಅಡಿ ಮಂತ್ರಿ ಪರಿಷತ್‌ಗೆ ಇರುವ ಅಧಿಕಾರ ಬಳಸಿಕೊಂಡಿರುವ ಸಿದ್ದರಾಮಯ್ಯ ಸಂಪುಟ, ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ, ಬಾಕಿ ಉಳಿದಿರುವ ಪ್ರಕರಣದ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಸಿಎಂಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಕಾನೂನು ಹೋರಾಟ ನಡೆಸಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಸಿಎಂ ಸಹ ಧನ್ಯವಾದ ಹೇಳಿದರು. ನನ್ನ ಪರವಾಗಿ ಹೋರಾಡುತ್ತಿದ್ದೀರಿ, ನಿಮಗೆ ಧನ್ಯವಾದ ಅಂತ ಹೇಳಿದ್ದಾರೆ. ಮಂತ್ರಿ ಪರಿಷತ್ ಸಭೆಯಲ್ಲಿ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಪೆಂಡಿಂಗ್ ಇರುವ ನಾಲ್ಕು ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಲಹೆ ರೂಪದ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಭ್ರಷ್ಟಚಾರ ತಡೆ ಕಾಯ್ದೆ 1988ರ ಅಡಿ ಪ್ರಮುಖ 4 ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಬೇಕೆಂದು…

Read More

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮತ್ತೆ ಮಳೆ ಹೆಚ್ಚಾಗಲಿದೆ. ಅದಲ್ಲದೆ ಮುಂದಿನ 7 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ವರುಣಾರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ. ಹೌದು ಕೊಟ್ಟಿಗೆಹಾರ, ಗುತ್ತಲ್, ತಿಕ್ಕೋಟ, ದೇವರಹಿಪ್ಪರಗಿ, ಭಾಗಮಂಡಲ, ಸಿದ್ದಾಪುರ, ಕೊಲ್ಲೂರು, ಇಳಕಲ್, ರಾಯಚೂರು, ಕುಷ್ಟಗಿ, ಹಾವೇರಿ, ಸೇಡಂ, ಕೂಡಲಸಂಗಮ, ತ್ಯಾಗರ್ತಿ, ದಾವಣಗೆರೆ, ಕುಂದಾಪುರ, ನಾಪೋಕ್ಲು, ಚಿಟಗುಪ್ಪ, ಸೈದಾಪುರ, ಸವಣೂರು, ಮುನಿರಾಬಾದ್, ಯಲಬುರ್ಗಾ, ನಾರಾಯಣಪುರಲದಲ್ಲಿ ಮಳೆಯಾಗಿದೆ. ಹಗರಿಬೊಮ್ಮನಹಳ್ಳಿ, ದಾವಣಗೆರೆ, ಗುಬ್ಬಿ, ರಾಮನಗರ, ಮೂಡಿಗೆರೆ, ಸುಳ್ಯ, ಪಣಂಬೂರು, ಕದ್ರಾ, ಕಾರವಾರ, ಕ್ಯಾಸಲ್​ರಾಕ್, ಮುದ್ದೇಬಿಹಾಳ, ರೋಣ, ಗದಗ, ಶಿಗ್ಗಾಂವ್, ಬೆಳ್ಳಟ್ಟಿ,…

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಶಾಸಕರ ಮತ್ತು ಸಮುದಾಯದ ಮುಖಂಡರ ನಿಯೋಗದ ಬೇಡಿಕೆಗೆ ಸಿಎಂ ಸ್ಪಂದಿಸಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಲ್ಮೀಕಿ ನಿಗಮಕ್ಕೆ ಈ ಹಿಂದೆ ನೀಡಲಾಗಿದ್ದ 84.63 ಕೋಟಿ ರೂ. ಅನುದಾನದಲ್ಲಿ 50 ಕೋಟಿಯನ್ನು ಎಸ್‌ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲೇ ಫ್ರೀಜ್ ಮಾಡಿಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವ ಸುಮಾರು 30 ಕೋಟಿಯಷ್ಟು ಹಣವನ್ನು ವಾಪಸ್ ವಶಕ್ಕೆ ಪಡೆಯುವ ಪ್ರಯತ್ನ ಮುಂದುವರೆದಿದೆ. ಸದ್ಯದಲ್ಲೇ ಪೂರ್ತಿ ಹಣವನ್ನು ವಾಪಾಸ್ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಅಲ್ಲಿಯವರೆಗೂ ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ನಿಗಮಕ್ಕೆ ತಕ್ಷಣವೇ ಹೆಚ್ಚುವರಿ ಅನುದಾನ ಬಿಡುಗಡೆಗೆ ಸೂಚನೆ ನೀಡಿದರು.…

Read More

ಪ್ರಪಂಚದಲ್ಲಿ ಹೆಚ್ಚು ವಜ್ರವನ್ನು ಉತ್ಪಾದಿಸುವ 2ನೇ ದೇಶವಾಗಿರುವ ಬೊಟ್ಸ್‌ವಾನದ ಗಣಿಯೊಂದರಲ್ಲಿ ಬೃಹತ್‌ ವಜ್ರವೊಂದು ಪತ್ತೆಯಾಗಿದೆ. ಇದು ಬೊಟ್ಸ್‌ವಾನದಲ್ಲಿ ಈವರೆಗೆ ದೊರೆತ ಅತಿ ಹೆಚ್ಚು ತೂಕದ ವಜ್ರವಾಗಿದ್ದು, ಪ್ರಪಂಚದಲ್ಲೇ ಈವರೆಗೆ ದೊರೆತಿರುವ 2ನೇ ದೊಡ್ಡ ವಜ್ರ ಎನ್ನಲಾಗಿದೆ. 2,492 ಕ್ಯಾರಟ್‌ ಇರುವ ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್‌ವಾನ ತಿಳಿಸಿದೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಇಷ್ಟು ತೂಕದ ವಜ್ರ ಪತ್ತೆಯಾಗಿರಲಿಲ್ಲ. ಈ ಹಿಂದೆ 1905ರಲ್ಲಿ ದೊರೆತಿದ್ದ, 3,106 ಕ್ಯಾರಟ್ ವಜ್ರವನ್ನು ಹಲವಾರು ರತ್ನಗಳನ್ನಾಗಿ ಕತ್ತರಿಸಲಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ‘ಲುಕಾರಾ ಡೈಮಂಡ್‌ ಕಾರ್ಪೊರೇಷನ್’ ಗಣಿಗಾರಿಕೆ ಸಂಸ್ಥೆಯು, ‘ಪಶ್ಚಿಮ ಬೊಟ್ಸ್‌ವಾನದ ಕರೋವೆ ಗಣಿಯಲ್ಲಿ ಅಸಾಧಾರಣ ವಜ್ರವೊಂದು ಪತ್ತೆಯಾಗಿದೆ. ವಜ್ರವು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ‘ಎಕ್ಸ್‌ ರೇ’ ತಂತ್ರಜ್ಞಾನದ ಮೂಲಕ ಅದನ್ನು ಪತ್ತೆ ಮಾಡಲಾಯಿತು’ ಎಂದು ತಿಳಿಸಿದೆ. ಈ ಹಿಂದೆ 2019ರಲ್ಲಿ ಇದೇ ಕರೋವೆ ಗಣಿಯಲ್ಲಿ ಪತ್ತೆಯಾಗಿದ್ದ 1,758 ಕ್ಯಾರಟ್‌ ‘ಸೆವೆಲೊ’ ವಜ್ರವನ್ನು ಪ್ರಪಂಚದ ಎರಡನೇ ಅತಿ ದೊಡ್ಡ ವಜ್ರ ಎಂದು…

Read More