Author: Prajatv Kannada

ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಆರಂಭದಲ್ಲಿ ಎರಡು ವರ್ಷಗಳವರೆಗೆ ವಿಳಂಬಗೊಳಿಸಲಾಯಿತು. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ ಇತರ ಅಂಶಗಳು ಸಹ ವಿಳಂಬಕ್ಕೆ ಕಾರಣವಾಗಿದೆ. https://youtu.be/47uiYb6EJy0?si=-OcNracLWbycvuDc ಕೊರೊನಾ ಸಾಂಕ್ರಾಮಿಕ ಅವಧಿಯ ನಂತರ ಹಲವಾರು ದೇಶಗಳು ಜನಗಣತಿಗಳನ್ನು ನಡೆಸಿದ್ದರೂ, ಆದರೆ ಹಳ್ಳಿಗಳು ಮತ್ತು ಪಟ್ಟಣಗಳಂತಹ ತಳ ಮಟ್ಟದ ಜನಸಂಖ್ಯಾ ದತ್ತಾಂಶದ ಏಕೈಕ ಮೂಲವೆಂದರೆ ಜನಗಣತಿ ಇದನ್ನೇ ಕೇಂದ್ರ ಸರ್ಕಾರ ಮಾಡದೇ ವಿಳಂಬ ದೋರಣೆ ತೋರುತ್ತಾ ಬಂದಿತ್ತು ಆದರೆ ಈಗ ಇದಕ್ಕೆ ತಾತ್ವಿಕ ಅಂತ್ಯ ಸಿಕ್ಕಿದ್ದು ಮುಂದಿನ ತಿಂಗಳಿನಿಂದಲೇ ಜನಗಣತಿ ಶುರುವಾಗಲಿದೆ ಎಂದು ತಿಳಿದು ಬಂದಿದೆ. ರಾಯಿಟರ್ಸ್ ಪ್ರಕಾರ, ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಇಬ್ಬರು ಸರ್ಕಾರಿ ಅಧಿಕಾರಿಗಳು ಸಮಗ್ರ ಸಮೀಕ್ಷೆಯು ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ದೃಢಪಡಿಸಿದರು, ಮಾರ್ಚ್ 2026 ರ ವೇಳೆಗೆ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಜನಗಣತಿಯ ವಿಳಂಬವು ಮುಂದುವರೆದಿರುವ ವಿಚಾರ ಅನೇಕ ಟೀಕೆಗೆ ಗುರಿಯಾಗಿದೆ. ಈ ವಿಳಂಬವು ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗದ…

Read More

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ಬಂದೂಕುಧಾರಿಗಳು ಶಾಲಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆ. ಲಾಹೋರ್’ನಿಂದ 400 ಕಿ.ಮೀ ದೂರದಲ್ಲಿರುವ ಅಟಾಕ್ ಜಿಲ್ಲೆಯ ಧೇರಿ ಕೋಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಶಾಲಾ ವ್ಯಾನ್ ಮಕ್ಕಳನ್ನ ತಮ್ಮ ಶಾಲೆಗೆ ಬಿಡಲು ಹೋಗುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ 5 ರಿಂದ 10 ವರ್ಷದೊಳಗಿನ ಏಳು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಪಾಕಿಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಇದೀಗ ವಾಯುವ್ಯ ಪಾಕಿಸ್ತಾನದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಡೇರಾ, ಇಸ್ಮಾಯಿಲ್ ಖಾನ್, ಬನ್ನು, ಮನ್ಸೆಹ್ರಾ ಮತ್ತು ಮೊಹ್‌ಮಂಡ್ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ (ಪಿಡಿಎಂಎ) ಅಧಿಕಾರಿಗಳು ಹೇಳಿದ್ದಾರೆ. ಬನ್ನುವಿನಲ್ಲಿ ಮನೆ ಮೇಲ್ಛಾವಣಿ ಕುಸಿದು ಸಹೋದರಿಯರಿಬ್ಬರು ಮೃತಪಟ್ಟಿದ್ದಾರೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಯಿ ಹಾಗೂ ಬಾಲಕ ಮೃತಪಟ್ಟರೆ, ಮತ್ತೊಂದೆಡೆ ಹರಿಯುವ ನೀರಿನಲ್ಲಿ ಹೆಣ್ಣು ಮಗುವೊಂದು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೊಹಮಂಡ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಹಾಗೂ ಮನ್ಸೆಹ್ರಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಾದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಾಜ್  ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆ ಜೊತೆಗೆ ಪರಭಾಷೆಯಲ್ಲೂ ರಾಜ್ ಬಿ ಶೆಟ್ಟಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟಿ ಅವರೊಟ್ಟಿಗೆ ನಟಿಸಿ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ. ರಾಜ್ ಬಿ ಶೆಟ್ಟಿ, ಹಿಂದಿ ಸಿನಿಮಾ ಒಂದರಲ್ಲಿ ನಟಿಸಿವುದು ಪಕ್ಕ ಆಗಿದೆ. ಸಿನಿಮಾವನ್ನು ಬಾಲಿವುಡ್​ನ ಖ್ಯಾತ ಹಾಗೂ ಭಿನ್ನ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡುತ್ತಿದ್ದಾರೆ. ಕೇವಲ ಅನುರಾಗ್ ಕಶ್ಯಪ್ ಅವರಿಗಾಗಿ ಮಾತ್ರವೇ ತಾವು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ‘ನಾನು ಅನುರಾಗ್ ಕಶ್ಯಪ್ ಅವರ ದೊಡ್ಡ ಅಭಿಮಾನಿ. ನಾನು ಸಿನಿಮಾ ನಿರ್ದೇಶಕ ಆಗಬೇಕು ಎಂದುಕೊಳ್ಳಲು ಅವರ ಸಿನಿಮಾಗಳು ಬೀರಿದ ಪ್ರಭಾವವೂ ಸಾಕಷ್ಟಿದೆ. ಅವರು ಕೆಲಸ ನನ್ನಲ್ಲಿ ಸ್ಪೂರ್ತಿ ತುಂಬಿದೆ. ನಾನು ನನ್ನ ತಂತ್ರಜ್ಞರೊಟ್ಟಿಗೆ ಹಲವು ಬಾರಿ ಕಶ್ಯಪ್​ರ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದಿದೆ’ ಎಂದಿದ್ದಾರೆ…

Read More

ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಅಧಿಕಾರಿ ಹಿಡಿದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರು ಬೀಳಿಸಬೇಕು ಎಂದು ಹುನ್ನಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. https://youtu.be/lke8yuKQWew?si=MF7F9HMjsNp5gp6n ಆದರೆ ವಿರೋಧ ಪಕ್ಷದಲ್ಲಿರುವ ಈ ಮೈತ್ರಿ ಪಕ್ಷಗಳು ಜನರ ಸಂಕಷ್ಟದ ವಿಷಯವಾಗಿ ಒಂದು ದಿನವೂ ವಿಧಾನಸಭೆಯಲ್ಲಿ ಮಾತನಾಡಿಲ್ಲ. ಇವರು ಜನ ವಿರೋಧಿ ಕೆಲಸದಲ್ಲಿ ತೊಡಗಿದರೆ, ಇತ್ತ ನೋಡಿದರೆ ರಾಜ್ಯಪಾಲರು ಸಂವಿಧಾನ ವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎದ್ದೇಳು ಕರ್ನಾಟಕ ಕಿಡಕಾರಿದೆ. ಈ ಕುರಿತು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಎದ್ದೇಳು ಕರ್ನಾಟದ ತಂಡ, ರಾಜ್ಯ ಸರ್ಕಾರ ಜನಪರ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಜವಬ್ದಾರಿ. ಜನರ ಪರವಾದ ಆಡಳಿತ ನೀಡುವಂತೆ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಳುವ ಪಕ್ಷದ ಮೇಲೆ ವಿರೋಧ ಪಕ್ಷ ಒತ್ತಡ ಹಾಕಿದರೆ ಅದು ರಚನಾತ್ಮಕ ಕೆಲಸವಾಗುತ್ತದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರ ಬದುಕಿನ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಪಡೆಯಲು ಮುಂದಾಗಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಬೇಲ್​ ಪಡೆಯಲು ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಎರಡನೇ ಬಾರಿಗೆ ಮುಂದೂಡಲಾಗಿದೆ. ಆಗಸ್ಟ್​ 27ಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಪವಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನ್ಯಾಯಾಧೀಶ ಜೈಶಂಕರ್ ಅವರು ಆದೇಶ ನೀಡಿದ್ದಾರೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಪವಿತ್ರಾ ಗೌಡ ಜೈಲಿನಲ್ಲಿ ಕಾಲ ಕಳೆಯಲೇ ಬೇಕಾಗಿದೆ. ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಎಸ್​ಪಿಪಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿಸಿದ ಆರೋಪ ಪವಿತ್ರಾ ಗೌಡ ಅವರ ಮೇಲಿದೆ. ಈ ಕೇಸ್​ನಲ್ಲಿ ನಟ ದರ್ಶನ್​ ಕೂಡ ಪ್ರಮುಖ ಆರೋಪಿ. ಇವರೆಲ್ಲರೂ ಪ್ರಭಾವಿ ವ್ಯಕ್ತಿಗಳಾದ ಕಾರಣ ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ…

Read More

ಧಾರವಾಡ : “ಪಶ್ಚಿಮ ಘಟ್ಟ ಪರಿಸರ ಪರಿಣಿತರ ಸಮಿತಿಯ ವರದಿ” ಯನ್ನು ಜಾರಿಗೊಳಿಸಲು ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ನೇತೃತ್ವದಲ್ಲಿ ಧಾರವಾಡ ಕಡಪಾ ಮೈದಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಧಾರವಾಡ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಯಿತುಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ನಾವೆಲ್ಲರೂ ಜಾಗೃತಿ ವಹಿಸಬೇಕು. ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಭಟನಾ ನಿರತ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಆಗ್ರಹಿಸಿದರು.

Read More