Author: Prajatv Kannada

ತೀರ್ಥಹಳ್ಳಿ : ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನಲೆಯಲ್ಲಿ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಫೋಕ್ಸೋ ಕೇಸ್ ದಾಖಲಾಗಿದೆ. ಸಂಗೀತ ಶಿಕ್ಷಕ ಇಮ್ತಿಯಾಜ್ (45) ನ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ. ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ಹಾಗೂ ಅನುಚಿತ ರೀತಿಯಲ್ಲಿ ಶಾಲೆಯಲ್ಲಿ ಹಾಗೂ ಪ್ರವಾಸದ ವೇಳೆ ವರ್ತಿಸಿದ್ದ ಎಂಬುದಾಗಿ ವಿದ್ಯಾರ್ಥಿಗಳಿಂದ ವಸತಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಲಾಗಿದೆ.ವಸತಿಶಾಲಾ ಪ್ರಾಂಶುಪಾಲರಿಂದ ಪೊಲೀಸರಿಗೆ ದೂರು ನೀಡಿದ್ದು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಇಮ್ತಿಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Read More

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2024 ಮಹೋತ್ಸವದ ಸಿದ್ದತೆ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಇಂದು ಮೈಸೂರು ಅರಮನೆಯಲ್ಲಿ ಗಜಪಡೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದೃಶ್ಯಗಳು ಕಂಡು ಬಂದಿವೆ. ಅರಮನೆಯಲ್ಲಿ ಆನೆಗಳ ಸ್ನಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಅರಮನೆ ಆವರಣದಲ್ಲಿನ ನೀರಿನ ಹೊಂಡದಲ್ಲಿ ದಸರಾ ಗಜಪಡೆಗಳು ಜಳಕ ಮಾಡಿದವು. ಆನೆಗಳನ್ನ ವೀಕ್ಷಣೆಗೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

Read More

ಇತ್ತೀಚಿನ ದಿನಗಳಲ್ಲಿ ಪ್ರೆಷರ್ ಕುಕ್ಕರ್ ಇಲ್ಲದೆ ಇರುವ ಮನೆಯನ್ನು ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದು ಸದ್ದು ಮಾಡೇ ಮಾಡುತ್ತದೆ. ಆದರೆ, ಸರಿಯಾಗಿ ಇದನ್ನು ಬಳಸದಿದ್ದರೆ ತುಂಬಾ ಅಪಾಯಕಾರಿ ಅಡುಗೆ ಸಾಧನ ಎಂದು ನಿಮಗೆ ತಿಳಿದಿದೆಯೇ? ಪ್ರೆಶರ್ ಕುಕ್ಕರ್ , ಪ್ರೆಶರ್ ಯಿಂದ ಮತ್ತು ಒತ್ತಡದಿಂದ ಅಡುಗೆ ಮಾಡುವ ಕಾರ್ಯ ವಿಧಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮನೆಯಲ್ಲಿರುವ ಕುಕ್ಕರ್ ಕೂಡ ನಿಮಗೆ ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದರೆ, ಆ ಸಮಸ್ಯೆ ನೀಗಿಸಲು ಇಲ್ಲಿರುವ ಕೆಲ ಸಲಹೆಗಳು ನಿಮಗೆ ಊರುಗೋಲಾಗಬಹುದು. ಪ್ರೆಶರ್ ಕುಕ್ಕರ್ ಸೋರಿಕೆ ಸಮಸ್ಯೆಗಳನ್ನು ಸರಿಪಡಿಸಲು ಇಲ್ಲಿ ಕೆಲವು ಸಲಹೆಗಳಿವೆ. ನೀವು ಅವುಗಳನ್ನು ಅನುಸರಿಸಿದರೆ, ಕುಕ್ಕರ್‌ನಲ್ಲಿ ಆಲೂಗಡ್ಡೆ ಅಥವಾ ಧಾನ್ಯಗಳನ್ನು ಬೇಯಿಸಿದಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕುಕ್ಕರ್‌ನಿಂದ ನೀರು ಬರದಂತೆ ತಡೆಯಲು ಒಂದು ಹನಿ ಎಣ್ಣೆಯನ್ನು ಸೇರಿಸಿ. ಇದರಿಂದ ಕುಕ್ಕರ್‌ನಿಂದ ನೀರು ಸೋರಿಕೆಯಾಗದು. ಕುಕ್ಕರ್‌ನಲ್ಲಿ ಮಾಡಿರುವ ಆಹಾರವೂ ಸಹ ಅದಕ್ಕೆ ಅಂಟಿಕೊಳ್ಳದು. ಈ ರೀತಿಯಾಗಿ ಕುಕ್ಕರ್‌ನಲ್ಲಿ ಬೇಯಿಸಿದ ಆಹಾರವು…

Read More

ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ. ಇದನ್ನು ಬಿಸಿಲಿನಲ್ಲಿ ಒಣಗಿಸಬಹುದು ಅಥವಾ ಮೈಕ್ರೊವೇವ್ ಒಲೆಯಲ್ಲಿ ಬಿಸಿ ಮಾಡಬಹುದು. ಅದು ಚೆನ್ನಾಗಿ ಒಣಗಿದ ನಂತರ, ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇರಿಸಿ, ಜಿರಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವುಗಳಿಂದ ದೂರ ಉಳಿಯುತ್ತವೆ. ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಜಿರಳೆಗಳು ಯಾವಾಗಲೂ ಇರುತ್ತವೆ. ಅದನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿರುತ್ತೇವೆ. ಇನ್ನು ಕಿಚನ್‌ʼನಲ್ಲಿ ರಾಸಾಯನಿಕ ಸ್ಪ್ರೇಗಳನ್ನು ಬಳಕೆ ಮಾಡುವುದು ಸಹ ಅಪಾಯಕಾರಿ ಎನ್ನಲಾಗಿದೆ.

Read More

ಮೈಸೂರು: ಸಿಎಂ ಸಿದ್ದರಾಮಯ್ಯನವರು ಮುಡಾ ಹಗರಣಕ್ಕೆಸಂಬಂಧಿಸಿದಂತೆ ಸುಳ್ಳು ಹೇಳಿದ್ರಾ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ. ಬುಧವಾರ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮುಡಾಕ್ಕೆ ಬರೆದ ಪತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದವು. ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ, ನನ್ನ ಪತ್ನಿ ಯಾವುದೇ ಪತ್ರ ಬರೆದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಪಾರ್ವತಿ ಅವರು ಪತ್ರ ಬರೆದ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಉಲ್ಲೇಖ ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಈ ನೋಟಿಸ್‌ಗೆ ಸಿದ್ದರಾಮಯ್ಯನವರು ಉತ್ತರ ನೀಡಿದ್ದರು. ಈ ಉತ್ತರದಲ್ಲಿ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಪತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 30ನೇ ಖಂಡಿಕೆ 15ನೇ ಅನೆಕ್ಸರ್ ನಲ್ಲಿ ತಮ್ಮ ಪತ್ನಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ನೇಹಮಯಿ ಕೃಷ್ಣ ಅವರು ರಿಟ್‌ ಅರ್ಜಿಯಲ್ಲಿ ಸಿಎಂ ನ್ಯಾಯಾಲಯದ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ…

Read More

ಮಂಗಳೂರು: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ವಿರುದ್ಧ ವಿವಾದಾತ್ಮಕ ಹೇಳಿಕೆ‌ ನೀಡಿದ್ದ ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಬುಧವಾರ ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಂಗಳೂರು ವೆಲೆನ್ಸಿಯಾದಲ್ಲಿರುವ ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮನೆಯ ಕಿಟಕಿಯ ಫ್ರೇಮ್‌ಗೆ ಕಲ್ಲು ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ. ಐವನ್‌ ಡಿಸೋಜ ಹೇಳಿದ್ದೇನು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ವೇಳೆ ಐವನ್‌ ಡಿಸೋಜ, ರಾಜ್ಯಪಾಲರನ್ನು ವಾಪಸ್‌ ಕರೆಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು. ರಾಜ್ಯಪಾಲರನ್ನು ಕಿತ್ತು ಹಾಕಲು ಬಾಂಗ್ಲಾ ಸ್ಥಿತಿ ಬರಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Read More

ಬೆಂಗಳೂರು: ಮಹಾನಗರಿ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಹೊಂದಿಕೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಿದರು. ಗುರುವಾರ ವಿಧಾನಸೌಧ ಮೆಟ್ಟಿಲುಗಳ ಮುಂಭಾಗ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಗಿಡಗಳಿಗೆ ನೀರು ಹಾಕುವ ಮೂಲಕ ಚಾಲಕೆ ನೀಡಿದರು. ಈ ವೇಳೆ ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂ ಎಸ್‌ಎಸ್ ಬಿ) ವ್ಯವಸ್ಥಾಪಕ ನಿರ್ದೇಶಕ ರಾಮಪ್ರಶಾತ್ ಮನೋಹರ್, ಬಿಡಿಎ ಆಯುಕ್ತ ಜಯರಾಮ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಬಿಎಂಆರ್ಡಿಎ ಎಂಡಿ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಉಪಸ್ಥಿತರಿದ್ದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿಗೆ ಬೈಕ್‌ ಟಚ್‌ ಆಯಿತು ಎಂದು ಶುರುವಾದ ಜಗಳದಲ್ಲಿ ಒಬ್ಬನ ಜೀವವನ್ನೇ ತೆಗೆದುಬಿಟ್ಟ ಘಟನೆ ಜರುಗಿದೆ. https://youtu.be/WwntitCN7AI?si=TqbjIDq2Da9WnGet ಡೆಲಿವರಿ ಬಾಯ್ ಮಹೇಶ್ ಎಂಬಾತನೇ ಮೃತಪಟ್ಟ ಯುವಕ ಎನ್ನಲಾಗಿದೆ. ಮಹೇಶ್, ಬುಧವಾರ ಸಂಜೆ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್‌ ಮಾಡಿದರೂ ಸೈಡ್‌ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್‌ ಸ್ವಲ್ಪ ಟಚ್‌ ಆಗಿತ್ತಂತೆ. ಇದೇ ಸಿಟ್ಟಲ್ಲಿ ಕಾರು ಚಾಲಕ ಅರವಿಂದ್, ಬೈಕ್‌ ಚಾಲಕನನ್ನ ಚೇಸ್ ಮಾಡಿಕೊಂಡು ಹೋಗಿದ್ದಾನೆ. ಮುಖ್ಯ ರಸ್ತೆಯಿಂದ ತಿರುಗಿಸುವಾಗ ಬೈಕ್‌ನಲ್ಲಿ ಹಿಂಬದಿ ಕೂತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆದರೆ, ಜಿಕೆವಿಕೆ ಲೇಔಟ್‌ಗೆ ನುಗ್ಗಿದ ಮಹೇಶ್ ಬೈಕ್‌ಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತಿರುವಿನಲ್ಲಿದ್ದ ಮನೆಯ ಕಾಂಪೌಂಡ್‌ಗೆ ಮಹೇಶ್ ತಲೆ ಬಡಿದಿದೆ. ಇನ್ನು, ಅಪಘಾತದ ನಂತರ ಗಾಯಗೊಂಡಿದ್ದ ಮಹೇಶ್‌ನನ್ನ ಹೊತ್ತೊಯ್ಯಲು ಕಾರು ಚಾಲಕ…

Read More

ತಿರುವನಂತಪುರಂ:- ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಮಾನವು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮತ್ತು ಅದನ್ನು ಪ್ರತ್ಯೇಕ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಪ್ರಯಾಣಿಕರನ್ನು ಶೀಘ್ರವಾಗಿ ವಿಮಾನದಿಂದ ಸ್ಥಳಾಂತರಿಸಲಾಯಿತು. ವಿಮಾನವು ತಿರುವನಂತಪುರಂ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಪೈಲಟ್‌ನಿಂದ ಬಾಂಬ್ ಬೆದರಿಕೆ ಕರೆಯ ಬಗ್ಗೆ ಮಾಹಿತಿ ದೊರೆತಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಟ ಬಳಿಕ ಬಾಂಬ್‌ ಬೆದರಿಕೆ ಗೊತ್ತಾಗಿತ್ತು. ಏರ್ ಇಂಡಿಯಾದ ಮುಂಬೈ-ತಿರುವನಂತಪುರಂ ವಿಮಾನ ನಂ. AI657ರಲ್ಲಿ ಈ ಘಟನೆ ನಡೆದಿದೆ.

Read More